Rishabh Pant

(Search results - 132)

Rohit Sharma

CricketJun 4, 2021, 9:21 AM IST

ನಾವೀಗ ಸೌಥಾಂಪ್ಟನ್‌ನಲ್ಲಿದ್ದೇವೆಂದು ಪೋಸ್ ಕೊಟ್ಟ ರೋಹಿತ್-ಪಂತ್

ಹಿಟ್‌ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮ ಸ್ಟೇಡಿಯಂನ ಬಾಲ್ಕನಿಯಲ್ಲಿ ನಿಂತು, ನಾವು ಸೌಥಾಂಪ್ಟನ್‌ನಲ್ಲಿದ್ದೇವೆ ಎಂದು ಪಂತ್ ಜತೆ ಕ್ಯಾಮರಾಗೆ ಪೋಸ್‌ ಕೊಟ್ಟಿದ್ದಾರೆ. ಈ ಫೋಟೋವನ್ನು ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

Rishabh Pant

CricketMay 31, 2021, 4:05 PM IST

ಬಾಲಿವುಡ್‌ನ ಈ ನಟಿ ಜೊತೆ ಡೇಟಿಂಗ್ ಮಾಡ್ತಾ ಇದ್ರಾ ಕ್ರಿಕೆಟಿಗ ರಿಷಬ್‌ ಪಂತ್‌?

ಕ್ರಿಕೆಟಿಗೂ ಬಾಲಿವುಡ್‌ಗೂ ಬಹಳ ಹಳೆಯ ಸಂಬಂಧ. ಕ್ರಿಕೆಟ್ ತಾರೆಯರ ಜೊತೆ ಬಾಲಿವುಡ್ ನಟಿಯರು ಡೇಟಿಂಗ್ ನಡೆಸುವುದು ಹೊಸದೇನಲ್ಲ. ಟೀಮ್‌ ಇಂಡಿಯಾದ ಯಂಗ್‌ ಪ್ರಾಮಿಸ್ಸಿಂಗ್‌ ಆಟಗಾರ ರಿಷಭ್ ಪಂತ್, ಐಪಿಎಲ್ 2018ರ ಸಮಯದಲ್ಲಿ ತಮ್ಮ ಆಟದ ಮೂಲಕ ಸಖತ್‌ ಫೇಮಸ್‌ ಆಗಿದ್ದರು. ಹಾಗೇ ಅವರ ಪರ್ಸನಲ್‌ ಲೈಪ್‌ ಕೂಡ ನ್ಯೂಸ್‌ ಹೆಡ್‌ಲೈನ್‌ನಲ್ಲಿ ಕಾಣಿಸಿಕೊಂಡಿತ್ತು. ಆ ಸಮಯದಲ್ಲಿ  ಪಂತ್‌ ಬಾಲಿವುಡ್‌ನ ನಟಿಯೊಂದಿಗೆ ಡೇಟ್‌ ಮಾಡುತ್ತಿರುವುದಾಗಿ ವರದಿಗಳು ಹೇಳಿದ್ದವು. ಯಾರಾದು ಆ ನಟಿ?

Rishabh Pant

CricketMay 14, 2021, 11:13 AM IST

ಮೊದಲ ಡೋಸ್‌ ಕೋವಿಡ್‌ ಲಸಿಕೆ ಪಡೆದ ರಿಷಭ್‌ ಪಂತ್‌

ನಾನಿಂದು ಮೊದಲ ಡೋಸ್ ಲಸಿಕೆ ಪಡೆದುಕೊಂಡೆ. ಯಾರೆಲ್ಲಾ ಲಸಿಕೆ ಪಡೆಯಲು ಅರ್ಹರಿದ್ದೀರೋ ಅವರೆಲ್ಲಾ ಆದಷ್ಟು ಬೇಗ ಲಸಿಕೆ ಪಡೆಯಿರಿ ಎಂದು ರಿಷಭ್‌ ಪಂತ್ ಟ್ವೀಟ್ ಮೂಲಕ ಮನವಿ ಮಾಡಿಕೊಂಡಿದ್ದಾರೆ.

Rishabh Pant

CricketMay 13, 2021, 5:16 PM IST

ರಿಷಭ್ ಪಂತ್ ಯಶಸ್ವಿ ನಾಯಕನಾಗಲಿದ್ದಾರೆ: ಗವಾಸ್ಕರ್ ಭವಿಷ್ಯ

ರಿಷಭ್ ಪಂತ್‌ ನಾಯಕತ್ವದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಅತ್ಯದ್ಭುತ ಪ್ರದರ್ಶನ ತೋರುವಲ್ಲಿ ಯಶಸ್ವಿಯಾಗಿದೆ. ಪಂತ್‌ ಬಳಿ ನಾಯಕತ್ವದ ಕಿಚ್ಚು ಇದೆ. ಅದನ್ನು ಬೆಳೆಯಲು ಬಿಟ್ಟರೆ ಮುಂದೆ ಸಹಜವಾಗಿಯೇ ಪ್ರಜ್ವಲಿಸಲಿದೆ. ಹೌದು, ಪಂತ್ ಕೂಡಾ ತಪ್ಪು ಮಾಡಬಹುದು. ಹಾಗಂತ ಯಾವ ನಾಯಕ ತಪ್ಪು ಮಾಡೊಲ್ಲ ಹೇಳಿ? ಎಂದು ಸ್ಪೋರ್ಟ್ಸ್‌ ಸ್ಟಾರ್‌ಗೆ ಬರೆದ ಲೇಖನದಲ್ಲಿ ರಿಷಭ್ ಪಂತ್‌ ನಾಯಕತ್ವದ ಗುಣಗಾನ ಮಾಡಿದ್ದಾರೆ.

Rishabh Pant

CricketMay 6, 2021, 9:14 AM IST

ಟೆಸ್ಟ್ ರ‍್ಯಾಂಕಿಂಗ್‌: ಮೊದಲ ಬಾರಿಗೆ ಟಾಪ್‌ 10ನಲ್ಲಿ ಪಂತ್‌ಗೆ ಸ್ಥಾನ

ಇಂಗ್ಲೆಂಡ್ ವಿರುದ್ದ ತವರಿನಲ್ಲಿ ಮಾರ್ಚ್‌ನಲ್ಲಿ ನಡೆದ ಟೆಸ್ಟ್‌ನಲ್ಲಿ ಶತಕ ಬಾರಿಸುವ ಮೂಲಕ ಟೀಂ ಇಂಡಿಯಾ ಸರಣಿ ಗೆಲುವಿನಲ್ಲಿ ರಿಷಭ್ ಪಂತ್ ಪ್ರಮುಖ ಪಾತ್ರವಹಿಸಿದ್ದರು. ಇದರೊಂದಿಗೆ ಪಂತ್ ಇದೀಗ ತಮ್ಮ ವೃತ್ತಿಜೀವನದ ಶ್ರೇಷ್ಠ 6ನೇ ಸ್ಥಾನ ಪಡೆದಿದ್ದಾರೆ.

cricket

CricketApr 27, 2021, 11:40 PM IST

IPL 2021 ಹೆಟ್ಮೇಯರ್ ಹೋರಾಟ ವ್ಯರ್ಥ: ಆರ್​ಸಿಬಿಗೆ 1ರನ್​ಗಳ ರೋಚಕ ಜಯ

ಆರ್‌ಸಿಬಿ ನೀಡಿದ್ದ 172 ರನ್‌ಗಳ ಗುರಿ ಬೆನ್ನತ್ತಿದ ರಿಷಭ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ 170 ರನ್‌ ಗಳಿಸಲಷ್ಟೇ ಶಕ್ತವಾಯಿತು. ಪಂತ್ ಹಾಗೂ ಹೆಟ್ಮೇಯರ್ ಅಜೇಯ ಅರ್ಥಶತಕ ವ್ಯರ್ಥವಾಯಿತು.

Rishabh Pant

CricketApr 16, 2021, 12:26 PM IST

IPL 2021 ಡೆಲ್ಲಿ ಕ್ಯಾಪಿಟಲ್ಸ್‌ ಸೋಲಿಗೆ ನೆಪ ಹೇಳಿದ ರಿಷಭ್‌ ಪಂತ್

ವಾಂಖೇಡೆ ಮೈದಾನದಲ್ಲಿ 148 ರನ್‌ಗಳ ಗುರಿ ಬೆನ್ನತ್ತಿದ ರಾಜಸ್ಥಾನ ರಾಯಲ್ಸ್‌ ಒಂದು ಹಂತದಲ್ಲಿ 52 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಹೀನಾಯ ಸೋಲಿನತ್ತ ಮುಖಮಾಡಿತ್ತು. ಆದರೆ ಮಧ್ಯಮ ಕ್ರಮಾಂಕದಲ್ಲಿ ಡೇವಿಡ್‌ ಮಿಲ್ಲರ್‌ 43 ಎಸೆತಗಳಲ್ಲಿ 62 ರನ್‌ ಹಾಗೂ ಕೊನೆಯಲ್ಲಿ ಕ್ರಿಸ್‌ ಮೋರಿಸ್‌ ಕೇವಲ 18 ಎಸೆತಗಳಲ್ಲಿ 36 ರನ್ ಚಚ್ಚುವ ಮೂಲಕ ರಾಯಲ್ಸ್‌ಗೆ ವಿರೋಚಿತ ಗೆಲುವು ತಂದುಕೊಟ್ಟರು.

Ricky Ponting Rishabh Pant

CricketApr 10, 2021, 4:30 PM IST

ಧೋನಿ ಜತೆ ಟಾಸ್‌ಗೆ ತೆರಳುವ ಬಗ್ಗೆ ತುಟಿಬಿಚ್ಚಿದ ಪಂತ್

ಇಂಗ್ಲೆಂಡ್ ವಿರುದ್ದದ ಮೊದಲ ಏಕದಿನ ಪಂದ್ಯದಲ್ಲಿ ಡೆಲ್ಲಿ ತಂಡದ ನಾಯಕ ಶ್ರೇಯಸ್‌ ಅಯ್ಯರ್‌ ಭುಜದ ಗಾಯಕ್ಕೆ ತುತ್ತಾಗಿ 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಅಯ್ಯರ್ ಅನುಪಸ್ಥಿತಿಯಲ್ಲಿ ಯುವ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌ಗೆ ಪಟ್ಟ ಕಟ್ಟಲಾಗಿದೆ.

Chennai Super Kings vs Delhi Capitals

CricketApr 10, 2021, 8:56 AM IST

IPL 2021: ಇಂದು ಧೋನಿ vs ಪಂತ್‌ ಫೈಟ್‌!

ಗುರು ಎಂ.ಎಸ್‌.ಧೋನಿ, ಶಿಷ್ಯ ರಿಷಭ್‌ ಪಂತ್‌. ಧೋನಿಯ ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಕಳೆದ ವರ್ಷದ ಕಳಪೆ ಪ್ರದರ್ಶನದ ಕಹಿ ನೆನಪನ್ನು ಮರೆಯುವ ತವಕ. ಪಂತ್‌ರ ಡೆಲ್ಲಿ ಕ್ಯಾಪಿಟಲ್ಸ್‌ಗೆ ಕಳೆದೆರಡು ಬಾರಿ ಕೈತಪ್ಪಿದ್ದ ಪ್ರಶಸ್ತಿಯನ್ನು ಈ ಬಾರಿ ಕಸಿದುಕೊಳ್ಳುವ ಉತ್ಸಾಹ. ಎರಡೂ ತಂಡಗಳಿಗೆ ಟೂರ್ನಿಯಲ್ಲಿ ಶುಭಾರಂಭ ಮಾಡುವ ಹೆಗ್ಗುರಿ

Delhi Capitals

CricketApr 5, 2021, 10:26 AM IST

IPL 2021 ಡೆಲ್ಲಿಗೆ ಕಪ್‌ ಗೆಲ್ಲಿಸಿಕೊಡ್ತಾರಾ ಪಂತ್‌?

ಕಳೆದ 2 ಆವೃತ್ತಿಗಳಲ್ಲಿ ಶ್ರೇಯಸ್‌ ಅಯ್ಯರ್‌ ನಾಯಕತ್ವದಲ್ಲಿ ಪ್ಲೇ-ಆಫ್ಸ್‌ಗೇರಿದ್ದ ಡೆಲ್ಲಿ ಕ್ಯಾಪಿಟಲ್ಸ್‌ಗೆ ಈ ಬಾರಿ ಅವರ ಸೇವೆ ಲಭ್ಯವಾಗುವುದಿಲ್ಲ. ಆಕ್ರಮಣಕಾರಿ ಸ್ವಭಾವದ ರಿಷಭ್‌ ಪಂತ್‌ ಈ ಬಾರಿ ತಂಡ ಮುನ್ನಡೆಸಲಿದ್ದು, ತಂಡದ ಆಟದ ಶೈಲಿಯಲ್ಲೂ ಮತ್ತಷ್ಟು ಆಕ್ರಮಣಕಾರಿ ನಡೆಗಳನ್ನು ಕಾಣಬಹುದು. ಕಳೆದೆರೆಡು ಬಾರಿ ಪ್ರಶಸ್ತಿ ಹತ್ತಿರಕ್ಕೆ ಹೋಗಿ ಬರಿಗೈಯಲ್ಲಿ ವಾಪಸಾಗಿದ್ದ ಡೆಲ್ಲಿಗೆ ಈ ಬಾರಿಗೆ ಚಾಂಪಿಯನ್‌ ಆಗಲು ಕಠಿಣ ತಯಾರಿ ನಡೆಸಿದೆ.

Rishabh Pant

CricketApr 1, 2021, 11:32 AM IST

ಭವಿಷ್ಯದಲ್ಲಿ ರಿಷಭ್‌ ಪಂತ್‌ ಟೀಂ ಇಂಡಿಯಾ ನಾಯಕನಾಗ್ತಾರೆ!

ಶ್ರೇಯಸ್ ಅಯ್ಯರ್ ಅನುಪಸ್ಥಿತಿಯಲ್ಲಿ 23 ವರ್ಷದ ರಿಷಭ್‌ ಪಂತ್ ಇದೇ ಮೊದಲ ಬಾರಿಗೆ ಐಪಿಎಲ್‌ ಟೂರ್ನಿಯಲ್ಲಿ ನಾಯಕನಾಗಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಮುನ್ನಡೆಸಲಿದ್ದಾರೆ. ಇಂಗ್ಲೆಂಡ್‌ ವಿರುದ್ದದ ಮೊದಲ ಏಕದಿನ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಭುಜದ ಗಾಯಕ್ಕೆ ತುತ್ತಾಗಿದ್ದು, 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಿಂದ ಹೊರಬಿದ್ದಿದ್ದಾರೆ.

Ricky Ponting Rishabh Pant

CricketApr 1, 2021, 7:57 AM IST

ಡೆಲ್ಲಿ ಕ್ಯಾಪಿಟಲ್ಸ್‌ಗೆ ಥ್ಯಾಂಕ್ಯೂ ಎಂದ ನೂತನ ನಾಯಕ ರಿಷಭ್‌ ಪಂತ್‌

ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಮುನ್ನಡೆಸುತ್ತಿರುವುದು ನನ್ನ ಸೌಭಾಗ್ಯ. ನಾನು ಕಳೆದ ಕೆಲವು ವರ್ಷಗಳಿಂದ ಡೆಲ್ಲಿ ತಂಡದ ಭಾಗವಾಗಿದ್ದೇನೆ. ನನ್ನ ಮೇಲೆ ವಿಶ್ವಾಸವಿಟ್ಟ ಕೋಚ್‌ ರಿಕಿ ಪಾಂಟಿಂಗ್, ಸಹಾಯಕ ಸಿಬ್ಬಂದಿಗಳು, ಸಹ ಆಟಗಾರರು ಹಾಗೂ ಅಭಿಮಾನಿಗಳಿಗೆ ಧನ್ಯವಾದಗಳು.- ಪಂತ್

• undefined

CricketMar 28, 2021, 5:29 PM IST

ಧವನ್‌, ಪಂತ್‌, ಪಾಂಡ್ಯ ಫಿಫ್ಟಿ: ಇಂಗ್ಲೆಂಡ್‌ಗೆ ಕಠಿಣ ಗುರಿ

ಇಲ್ಲಿನ ಎಂಸಿಎ ಮೈದಾನದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಭಾರತ ತಂಡಕ್ಕೆ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್‌ ಜೋಡಿ ಶತಕದ ಜತೆಯಾಟವಾಡುವ ಮೂಲಕ ಉತ್ತಮ ಅಡಿಪಾಯ ಹಾಕಿಕೊಟ್ಟರು. ಸ್ಪೋಟಕ ಆರಂಭ ಒದಗಿಸಿಕೊಟ್ಟ ಈ ಜೋಡಿ ಕೇವಲ 14.4 ಓವರ್‌ಗಳಲ್ಲಿ 103 ರನ್‌ಗಳ ಜತೆಯಾಟ ನಿಭಾಯಿಸಿತು.

Rishabh Pant

CricketMar 28, 2021, 4:39 PM IST

ರಿಷಭ್‌ ಪಂತ್‌ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಪಾಕ್‌ ದಿಗ್ಗಜ ಇಂಜಮಾಮ್‌ ಉಲ್‌ ಹಕ್

ಡೆಲ್ಲಿ ಮೂಲದ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಪಂತ್‌, ಈ ಇಬ್ಬರು ದಿಗ್ಗಜರ ಸಾಲಿಗೆ ಸೇರಬೇಕೆಂದಿದ್ದರೆ ಸಾಕಷ್ಟು ಹಾದಿ ಸವೆಸಬೇಕಿದೆ. ಹೀಗಿರುವಾಗಲೇ ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್‌ ಉಲ್‌ ಹಕ್‌ 23 ವರ್ಷದ ಪಂತ್‌ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

Rishabh Pant

CricketMar 27, 2021, 11:32 AM IST

ಅಂಪೈರ್‌ ಎಡವಟ್ಟು: ವಿಶ್ವಕಪ್‌ ಫೈನಲ್‌ನಲ್ಲಿ ಹೀಗಾಗಿದ್ದರೆ ಏನ್ಮಾಡ್ತೀರಾ ಎಂದ ಚೋಪ್ರಾ..!

ಪುಣೆಯ ಎಂಸಿಎ ಮೈದಾನದಲ್ಲಿ ಶುಕ್ರವಾರ(ಮಾ.26) ನಡೆದ ಎರಡನೇ ಏಕದಿನ ಪಂದ್ಯದ 40ನೇ ಓವರ್‌ನಲ್ಲಿ ಟಾಮ್‌ ಕರ್ರನ್‌ ಎಸೆತದಲ್ಲಿ ರಿಷಭ್‌ ಪಂತ್‌ ರಿವರ್ಸ್‌ ಸ್ಕೂಪ್‌ ಯತ್ನ ನಡೆಸಿದಾಗ ಚೆಂಡು ಪ್ಯಾಡ್ಸ್‌ಗೆ ಬಡಿಯಿದು ಎಂದು ಭಾವಿಸಿ ಅಂಪೈರ್‌ ಔಟ್‌ ಎಂದು ಘೋಷಿಸಿದರು. ಆದರೆ ಪಂತ್‌ ತಕ್ಷಣ ಮೇಲ್ಮನವಿ ಸಲ್ಲಿಸಿದರು. ಚೆಂಡು ಬೌಂಡರಿ ತಲುಪಿತ್ತು.