Plastic  

(Search results - 112)
 • Masjid

  Karnataka Districts11, Mar 2020, 12:31 PM IST

  ಸಂಭ್ರಮದ ಹೋಳಿ ಹಬ್ಬ: ಬಣ್ಣ ಬೀಳದಂತೆ ಮಸೀದಿಗಳಿಗೆ ಪ್ಲಾಸ್ಟಿಕ್ ಹೊದಿಕೆ

  ರಂಗಿನಾಟ ಧಾರ್ಮಿಕ ಆಚರಣೆಗಳ ಮೇಲೆ ದುಷ್ಪರಿಣಾಮ ಬೀಳದಿರಲಿ ಎಂದು ಯಾದಗಿರಿ ಜಿಲ್ಲೆಯ ಹುಮನಾಬಾದ್ ಪಟ್ಟಣದ ಜನನಿಬಿಡ ಪ್ರದೇಶದಲ್ಲಿನ ಮಸೀದಿಗಳಿಗೆ ಪ್ಲಾಸ್ಟಿಕ್ ಹೊದಿಕೆಗಳನ್ನ ಅಳವಡಿಸಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. 
   

 • roofing -home care

  My Home Care13, Feb 2020, 3:04 PM IST

  ನಿಮ್ಮ ಅಂದದ ಮನೆಗೆ ರೂಫಿಂಗ್ ಶೀಟ್ ಆಯ್ಕೆ ಹೇಗೆ? ಇಲ್ಲಿದೆ ಟಿಪ್ಸ್

  ಮನೆಗೆ ರೂಫಿಂಗ್ ಶೀಟ್ ಅಥವಾ ಚಾವಣಿ ಹಾಳೆ ಹಾಕಿಸಿಕೊಳ್ಳುವ ಮುನ್ನ ಎಚ್ಚರ ವಹಿಸಿವುದು ಅಗತ್ಯ. ಮಾರುಕಟ್ಟೆಯಲ್ಲಿ ಕಡಿಮೆ ಬೆಲೆ, ಡಿಸ್ಕೌಂಟ್ ಸೇರಿದಂತೆ ಹಲವು ಆಫರ್‌ಗಳಲ್ಲಿ ರೂಫಿಂಗ್ ಶೀಟ್ ಖರೀದಿಸಿ ತಲೆ ಮೇಲೆ ಕೈಹೊತ್ತುಕೊಳ್ಳುವ ಬದಲು ಖರೀದಿಗೆ ಮುನ್ನ ಜಾಗರೂಕರಾಗಿದ್ದರೆ ಒಳಿತು. ನಿಮ್ಮ ಆಯ್ಕೆ ಹಾಗೂ ಅಗತ್ಯಕ್ಕೆ ತಕ್ಕೆ ರೂಫಿಂಗ್ ಶೀಟ್ ಕುರಿತ ಸಂಪೂರ್ಣ ವಿವರ ಇಲ್ಲಿದೆ. 

 • plastic waste 3

  Karnataka Districts27, Jan 2020, 10:44 AM IST

  ನಿಷೇಧಿತ ಪ್ಲಾಸ್ಟಿಕ್‌ ಬಳಕೆ, ಅವೈಜ್ಞಾನಿಕ ತ್ಯಾಜ್ಯ ವಿಲೇವಾರಿ: 2 ಕೋಟಿ ದಂಡ

  ನಗರದಲ್ಲಿ ನಿಷೇಧಿತ ಪ್ಲಾಸ್ಟಿಕ್‌ ಬಳಕೆ ಹಾಗೂ ಅವೈಜ್ಞಾನಿಕ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದ ವಾಣಿಜ್ಯ ಉದ್ದಿಮೆಗಳಿಂದ ಕಳೆದ ಏಪ್ರಿಲ್‌ನಿಂದ ಡಿಸೆಂಬರ್‌ ಅಂತ್ಯದವರೆಗೆ 2.13 ಕೋಟಿ ದಂಡ ವಸೂಲಿ ಮಾಡಲಾಗಿದೆ ಎಂದು ಬಿಬಿಎಂಪಿ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
   

 • Youth

  Karnataka Districts23, Jan 2020, 11:20 AM IST

  23 ವರ್ಷದ ಯುವಕನಿಂದ 3300 ಕಿ.ಮೀ ಪಾದಯಾತ್ರೆ : ಕಾರಣ ?

  23 ವರ್ಷದ ಯುವಕನೋರ್ವ ಬರೋಬ್ಬರಿ 3300 ಕಿಲೋ ಮೀಟರ್ ಕ್ರಮಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ಹಾಗಾದ್ರೆ ಈ ಪಾದಯಾತ್ರೆ ವೇಳೆ ಆತ ಮಾಡಿರೋದೇನು ?

 • KSCA Bottle

  Cricket17, Jan 2020, 2:55 PM IST

  ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪ್ಲಾಸ್ಟಿಕ್‌ ತುಂಡಾಗಿಸುವ ಯಂತ್ರ ಅನಾವರಣ

  ಈ ಯಂತ್ರವನ್ನು ಗುರುವಾರ, ಕೆಎಸ್‌ಸಿಎ ಅಧ್ಯಕ್ಷ ರೋಜರ್‌ ಬಿನ್ನಿ ಅನಾವರಣ ಮಾಡಿದರು. ನಂತರ ಪ್ಲಾಸ್ಟಿಕ್‌ ಬಾಟಲಿಗಳನ್ನು ಶ್ರೆಡ್ಡರ್‌ನಲ್ಲಿ ಹಾಕುವ ಮೂಲಕ ಪುಡಿಯಾಗುವ ಮಾದರಿಯನ್ನು ತೋರಿಸಿದರು.

 • Chitradurga - Plastic Tablet
  Video Icon

  Chitradurga13, Jan 2020, 4:34 PM IST

  ಇದು ಬರೀ ಮಾತ್ರೆಯಲ್ಲಣ್ಣೋ ಪ್ಲಾಸ್ಟಿಕ್ ಮಾತ್ರೆ! ನಂಬದಿರಿ, ನಂಬಿ ತಿನ್ನದಿರಿ!

  ಪ್ಲಾಸ್ಟಿಕ್ ಅಕ್ಕಿ ಆಯ್ತು, ಪ್ಲಾಸ್ಟಿಕ್ ಮೊಟ್ಟೆ ಆಯ್ತು, ಈಗ ಪ್ಲಾಸ್ಟಿಕ್ ಮಾತ್ರೆ ಸರದಿ! ಚಿತ್ರದುರ್ಗದಲ್ಲಿ ಪ್ಲಾಸ್ಟಿಕ್ ಮಾತ್ರೆ ಬಂದಿದೆ ಎಂಬ ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಾಯಿದೆ. ಇದು ಜನರಲ್ಲಿ ಆತಂಕ ಮೂಡಿಸಿದೆ. ಸಾಮಾನ್ಯವಾಗಿ ಮಾತ್ರೆಯನ್ನು ನೀರಿಗೆ ಹಾಕಿದ್ರೆ ಮೂರ್ನಾಲ್ಕು ಗಂಟೆಯೊಳಗೆ ಕರಗುತ್ತದೆ. ಆದರೆ ಈ ಮಾತ್ರೆಯನ್ನು ಟೆಸ್ಟ್‌ಗಾಗಿ ಒಂದು ದಿನ ನೀರಿಗೆ ಹಾಕಿಟ್ಟರೂ ಕರಗದೇ ಹಾಗೆಯೇ ಇದೆ. ಹಾಗಾಗಿ ಇದನ್ನು ಸಾರ್ವಜನಿಕರಾರೂ ನಂಬಿ ಬಳಸಬಾರದು ಎಂದು ವಕೀಲರೊಬ್ಬರು ವಿನಂತಿಸಿಕೊಂಡಿದ್ದಾರೆ. ಜೊತೆಗೆ ಈ ಬಗ್ಗೆ ದೂರು ನೀಡುವುದಾಗಿಯೂ ಹೇಳಿದ್ದಾರೆ. 

 • Tablet

  Karnataka Districts12, Jan 2020, 1:14 PM IST

  ಮಧುಮೇಹ ಮಾತ್ರೆಯಲ್ಲಿ ಪ್ಲಾಸ್ಟಿಕ್ ಆರೋಪ : ನೀರಲ್ಲೂ ಕರಗುತ್ತಿಲ್ಲ..?

  ಮಧುಮೇಹಕ್ಕೆ ಬಳಸುವ ಮಾತ್ರೆಯಲ್ಲಿ ಪ್ಲಾಸ್ಟಿಕ್ ಅಂಶ ಇದೆ ಎಂದು ಮಹಿಳೆಯೋರ್ವರು ಆರೋಪಿಸಿದ್ದಾರೆ. ಪೂರ್ತಿ ದಿನ ನೀರಲ್ಲಿ ಹಾಕಿದರೂ ಕರಗುತ್ತಿಲ್ಲ ಎಂದಿದ್ದಾರೆ.

 • undefined

  Karnataka Districts4, Dec 2019, 8:08 AM IST

  ಪ್ರತ್ಯೇಕ ಬಸ್‌ ಪಥಕ್ಕೆ ಪ್ಲಾಸ್ಟಿಕ್‌ ಡಿವೈಡರ್‌! ಪೊಲೀಸರಿಗೆ ತಲೆನೋವು

  ಬೆಂಗಳೂರು ಪ್ರತ್ಯೇಕ ಬಸ್ ಪಥವೀಗ ಪೊಲೀಸರಿಗೆ ತಲೆ ನೋವು ತಂದಿದ್ದು ಇದೀಗ ಇಲ್ಲಿಗೆ ಪ್ಲಾಸ್ಟಿಕ್ ಡಿವೈಡರ್ ಅಳವಡಿಸಲಾಗುತ್ತಿದೆ.

 • undefined

  Karnataka Districts22, Nov 2019, 8:22 AM IST

  ಮೆಜೆಸ್ಟಿಕ್‌ನಲ್ಲಿ ಪ್ಲಾಸ್ಟಿಕ್‌ ಬಾಟಲಿ ಕ್ರಷಿಂಗ್‌ ಮಷಿನ್! ಏನಿದರ ವಿಶೇಷತೆ?

  ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್ಸಾರ್ಟಿಸಿ)ವು ನಗರದ ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್‌ ನಿಲ್ದಾಣದಲ್ಲಿ ಪ್ರಥಮ ಬಾರಿಗೆ ಅತ್ಯಾಧುನಿಕ ತಂತ್ರಜ್ಞಾನದ ‘ಪ್ಲಾಸ್ಟಿಕ್‌ ಬಾಟಲಿ ಪುಡಿ ಮಾಡುವ ಯಂತ್ರ’ ಅಳವಡಿಸಲು ಮುಂದಾಗಿದೆ.
   

 • Toilet

  Kodagu13, Nov 2019, 12:48 PM IST

  ಪ್ಲಾಸ್ಟಿಕ್ ಕ್ಯಾನ್ ತ್ಯಾಜ್ಯದಿಂದ 'ಸುಲಭ್' ಶೌಚಾಲಯ

  ಶನಿವಾರಸಂತೆ ಸಮೀಪದ ಮುಳ್ಳೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹತ್ತು ಹಲವು ವಿನೂತನ ಮತ್ತು ಪ್ರಾಯೋಗಿಕ ಹಾಗೂ ಕ್ರಿಯಾಶೀಲತೆಗೆ ಹೆಸರುವಾಸಿಯಾಗಿದೆ. ಇದೀಗ ಸ್ವಚ್ಛ ಭಾರತ ಕಾರ್ಯಕ್ರಮದಲ್ಲಿ ಒಂದಾದ ಶೌಚಾಲಯ ವ್ಯವಸ್ಥೆಗೆ ಪೂರಕವಾಗಿ ಎಸೆದ ಪ್ಲಾಸ್ಟಿಕ್ ಕ್ಯಾನ್ ತ್ಯಾಜ್ಯವನ್ನು ಬಳಸಿಕೊಂಡು ಶಾಲೆಯಲ್ಲಿ ಬಾಲಕರಿಗಾಗಿ ಸರಿಯಾದ ಶೌಚಾಲಯ ವ್ಯವಸ್ಥೆ ಮಾಡಿಕೊಡುವ ಸಲುವಾಗಿ ‘ಸುಲಭ್ ಶೌಚಾಲಯ’ ನಿರ್ಮಾಣ ಕಾರ್ಯಕ್ಕೆ ಶಾಲೆ ಚಾಲನೆ ನೀಡಿದೆ.

 • undefined

  Yadgir8, Nov 2019, 12:04 PM IST

  ಯಾದಗಿರಿ: ಅನಿರೀಕ್ಷಿತ ದಾಳಿ, ನಿಷೇಧಿತ ಪ್ಲಾಷ್ಟಿಕ್, ತಂಬಾಕು ಉತ್ಪನ್ನ ವಶ

  ಯಾದಗಿರಿ ನಗರದ ಗಾಂಧಿ ಚೌಕ್, ಚಕ್ರ ಕಟ್ಟಾ, ಮೈಲಾಪೂರ ಅಗಸಿ, ಗಂಜ್ ಏರಿಯಾ, ಹತ್ತಿಕುಣಿ ರೋಡ್, ಮಾರ್ಕೆಟ್ ಏರಿಯಾ ಹಾಗೂ ಇನ್ನಿತರ ಸುತ್ತಮುತ್ತಲಿನ ಸ್ಟಾಲ್, ಮಳಿಗೆ, ಅಂಗಡಿಗಳ ಮೇಲೆ ಬುಧವಾರ ಅನಿರೀಕ್ಷಿತ ದಾಳಿ ನಡೆಸಿ, ನಿಷೇಧಿತ ಪ್ಲಾಷ್ಟಿಕ್, ನಿಷೇಧಿತ ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಯಿತು. ಜೊತೆಗೆ ಬಾಲಕಾರ್ಮಿಕ ಮಕ್ಕಳ ಬಗ್ಗೆ ತಪಾಸಣೆ ಮಾಡಲಾಗಿದೆ.  

 • Kamath

  Dakshina Kannada4, Nov 2019, 4:04 PM IST

  ಅಡಿಕೆ ಹಾಳೆ ಬಳಸಿ ಎಂದ ಶಾಸಕ ಕಾಮತ್ ಐಡಿಯಾಗೆ ಸ್ವಿಗ್ಗಿ ಫಿದಾ

  ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅವರ ವಿನೂತನ ಐಡಿಯಾಗೆ ಆನ್ ಲೈನ್ ಆಹಾರ ಪೂರೈಕೆ ಸಂಸ್ಥೆ ಸ್ವಿಗ್ಗಿ ಫಿದಾ ಆಗಿದೆ. ಇನ್ಮುಂದೆ ನೀವ್ ಕೊಟ್ಟ ಸಲಹೆಯನ್ನೇ ಪಾಲಿಸ್ತೀವಿ ಎಂದು ಹೇಳಿದೆ. 

 • ship india

  INDIA4, Nov 2019, 12:18 PM IST

  ಜ.1 ರಿಂದ ಹಡಗಿನಲ್ಲೂ ಏಕಬಳಕೆ ಪ್ಲಾಸ್ಟಿಕ್‌ ನಿಷೇಧ

  ಮಾಲಿನ್ಯಕಾರಕ ಏಕಬಳಕೆ (ಸಿಂಗಲ್‌ ಯೂಸ್‌) ಪ್ಲಾಸ್ಟಿಕ್‌ ವಿರುದ್ಧ ಸಮರ ಸಾರಿರುವ ಕೇಂದ್ರ ಸರ್ಕಾರ ಈಗ ಈ ನಿಟ್ಟಿನಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇರಿಸಿದೆ. ಅ.2 ರಿಂದ ರೈಲುಗಳಲ್ಲಿ ಏಕ ಬಳಕೆ ಪ್ಲಾಸ್ಟಿಕ್‌ ನಿಷೇಧಿಸಿರುವ ಸರ್ಕಾರ, ಜನವರಿ 1 ರಿಂದ ಹಡಗುಗಳಲ್ಲಿ ಈ ಕ್ರಮ ಜಾರಿಗೆ ತರಲು ತೀರ್ಮಾನಿಸಿದೆ.

 • undefined

  LIFESTYLE27, Oct 2019, 3:11 PM IST

  ನಿತ್ಯ ಬಳಸುವ ಟೀ ಬ್ಯಾಗ್‌ನಲ್ಲಿ ಪ್ಲಾಸ್ಟಿಕ್‌ ಇರುತ್ತಂತೆ ಹುಷಾರ್‌!

  ಕೆಲವರಿಗೆ ದಿನಾ ಬೆಳಿಗ್ಗೆ ಎದ್ದು ಒಂದು ಕಪ್‌ ಟೀ ಕುಡಿದಿಲ್ಲ ಅಂದರೆ ಆ ದಿನ ಆರಂಭವಾಗೋದೇ ಇಲ್ಲ. ಆದರೆ ನಿತ್ಯ ನಾವು ಬಳಸೋ ಟೀ ಬ್ಯಾಗ್‌ನಿಂದ ಅಪಾಯಕಾರಿ ಪ್ಲಾಸ್ಟಿಕ್‌ ನಮ್ಮ ಹೊಟ್ಟೆಸೇರುತ್ತಿದೆಯಂತೆ. ಜರ್ನಲ್‌ ಎನ್ವಿರಾನ್ಮೆಂಟ್‌ ಸೈನ್ಸ್‌ ಆ್ಯಂಡ್‌ ಟೆಕ್ನಾಲಜಿಯಲ್ಲಿ ಈ ಸಮೀಕ್ಷೆ ಪ್ರಕಟವಾಗಿದೆ. 

 • undefined

  International24, Oct 2019, 5:00 PM IST

  ಬೇಡದ ಪ್ಲಾಸ್ಟಿಕ್ ದಾಖಲೆಗೆ ಪಾತ್ರವಾದ ದೊಡ್ಡ ಕಂಪನಿ, ನೀವು ಕಾಯಂ ಗ್ರಾಹಕರಾ?

  ಕೋಕಾ ಕೋಲಾ ಕಂಪನಿ ಬೇಡದ ದಾಖಲೆಯೊಂದಕ್ಕೆ ಪಾತ್ರವಾಗಿದೆ. ಸ್ವಯಂಸೇವಕರು ಸಂಗ್ರಹಿಸಿದ ಕಸದಲ್ಲಿ ಈ ಕಂಪನಿಯ ಪ್ಲಾಸ್ಟಿಕ್  ಕಸವೇ ಅತಿ ಹೆಚ್ಚು! ಕೋಕಾ ಕೋಲಾ ಕಂಪನಿ ನಿರಂತರವಾಗಿ ಎರಡನೇ ಸಾರಿ ಅತಿಹೆಚ್ಚು ಮಾಲಿನ್ಯಕಾರಕ ಬ್ಯ್ರಾಂಡ್ ಎಂಬ ಬೇಡದ ಹಣೆಪಟ್ಟಿಯನ್ನು ಪಡೆದುಕೊಂಡಿದೆ.