Para Badminton  

(Search results - 5)
 • undefined

  Sports17, Jul 2020, 1:03 PM

  ಅರ್ಜುನ್‌ ವಿಜೇತ ಪ್ಯಾರಾ ಬ್ಯಾಡ್ಮಿಂಟನ್‌ ಪಟು ರಮೇಶ್‌ ಕೋವಿಡ್‌ಗೆ ಬಲಿ

  2001ರ ಅಂತಾರಾಷ್ಟ್ರೀಯ ಪ್ಯಾರಾ ಬ್ಯಾಡ್ಮಿಂಟನ್‌ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸುವಲ್ಲಿ ರಮೇಶ್ ಟಿಕಾರಾಮ್‌ ಮುಖ್ಯ ಭೂಮಿಕೆ ನಿಭಾಯಿಸಿದ್ದರು. ರಮೇಶ್ ಟಿಕಾರಾಮ್‌ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. 

 • Manasi Joshi

  SPORTS7, Sep 2019, 9:32 PM

  ಪ್ರೊ ಕಬಡ್ಡಿ ಟೂರ್ನಿ ಮೆರುಗು ಹೆಚ್ಚಿಸಿದ ಪ್ಯಾರ ಬ್ಯಾಡ್ಮಿಂಟನ್ ತಾರೆ ಮಾನಸಿ!

  ಕೋಲ್ಕತಾ(ಸೆ.07): ಬೆಂಗಳೂರು ಚರಣ ಅಂತ್ಯಗೊಳಿಸಿದ ಪ್ರೊ ಕಬಡ್ಡಿ ಲೀಗ್ ಟೂರ್ನಿ ಇದೀಗ ಕೋಲ್ಕತಾಗೆ ಕಾಲಿಟ್ಟಿದೆ. ಕೋಲ್ಕತಾ ಚರಣಕ್ಕೆ ವಿಶ್ವ ಪ್ಯಾರಾ ಬ್ಯಾಡಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ಭಾರತದ ಮಾನಸಿ ಜೋಶಿ ರಾಷ್ಟ್ರಗೀತೆ ಹಾಡೋ ಮೂಲಕ ಮೆರುಗು ಹೆಚ್ಚಿಸಿದರು. ಬಳಿಕ ನಡೆದ ಮೊದಲ ಪಂದ್ಯದಲ್ಲಿ ಆತಿಥೇಯ ಬೆಂಗಾಲ್ ವಾರಿಯರ್ಸ್ ಹಾಗೂ ಗುಜರಾತ್ ಫಾರ್ಚೂನ್‌ಜೈಂಟ್ಸ್ ಹೋರಾಟ ನಡೆಸಿತು. ರೋಚಕ ಹೋರಾಟ ಟೈನಲ್ಲಿ ಅಂತ್ಯವಾಯಿತು.

 • Manasi Joshi

  Sports31, Aug 2019, 6:18 PM

  ಅಪಘಾತದಲ್ಲಿ ಕಾಲು ಕಳೆದುಕೊಂಡ ಪ್ಯಾರಾ ಬ್ಯಾಡ್ಮಿಂಟನ್ ಮಾನಸಿಯ 'ಚಾಂಪಿಯನ್' ಪಯಣ!

  ಪ್ಯಾರಾ ಬ್ಯಾಡ್ಮಿಂಟನ್ ವಿಶ್ವಚಾಂಪಿಯನ್‌ಶಿಪ್‌ನಲ್ಲಿ ಭಾರತದ ಪ್ಯಾರಾ ಬ್ಯಾಡ್ಮಿಂಟನ್ ತಾರೆ ಮಾನಸಿ ಜೋಶಿ ಚಿನ್ನದ ಪದಕ ಗೆದ್ದು ಇತಿಹಾಸ ಬರೆದಿದ್ದಾರೆ. ಈ ಸಾಧನೆ ಮಾಡಿದ ಮೊದಲ ಭಾರತೀಯ ಪ್ಯಾರ ಬ್ಯಾಡ್ಮಿಂಟನ್ ಪಟು ಅನ್ನೋ ದಾಖಲೆಯೂ ಬರೆದಿದ್ದಾಳೆ. ರೋಚಕ ಫೈನಲ್ ಪಂದ್ಯದಲ್ಲಿ ಪಾರೂಲ್ ಪಾರ್ಮಾರ್ ವಿರುದ್ದ ಹೋರಾಡಿ ಗೆದ್ದ ಮಾನಸಿ ಇತಿಹಾಸ ಬರೆದಿದ್ದಾಳೆ. ಮಾನಸಿ ಸಾಧನೆಯನ್ನು ಇಡೀ ದೇಶವೇ ಕೊಂಡಾಡುತ್ತಿದೆ. ಅಪಘಾತದ ಮೂಲಕ ಕಾಲು ಕಳೆದುಕೊಂಡು 8 ತಿಂಗಳಿಗೆ ಮತ್ತೆ ಬ್ಯಾಡ್ಮಿಂಟನ್ ಕೋರ್ಟ್‌ಗೆ ಇಳಿದ ಈ ಛಲಗಾರ್ತಿ ಎಲ್ಲರಿಗೂ ಸ್ಪೂರ್ತಿ. ಹೋರಾಟಗಾರ್ತಿಯ ರೋಚಕ ಜರ್ನಿ ಚಿತ್ರಗಳು ಇಲ್ಲಿವೆ.

 • Manasi Joshi
  Video Icon

  SPORTS29, Aug 2019, 5:18 PM

  ಅಪಘಾತದಲ್ಲಿ ಕಾಲು ಕಳೆದುಕೊಂಡ ಮಾನಸಿ; ಇದೀಗ BWF ಚಾಂಪಿಯನ್!

  ರಸ್ತೆ ಅಪಘಾತದಲ್ಲಿ ಒಂದು ಕಾಲು ಕಳೆದುಕೊಂಡ ಮಾನಸಿ ಜೋಶಿ ಒಂದೇ ವರ್ಷಕ್ಕೆ ಕೃತಕ ಕಾಲಿನ ಮೂಲಕ ಬ್ಯಾಡ್ಮಿಂಟನ್ ಅಂಗಳಕ್ಕೆ ಕಾಲಿಟ್ಟ ಹೋರಾಟಗಾರ್ತಿ.  ಪಿವಿ ಸಿಂಧು ವಿಶ್ವಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಕಿರೀಟ ತೊಡುವುದಕ್ಕಿಂತ ಮೊದಲು ಮಾನಸಿ ಜೋಶಿ BWF ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಗೆದ್ದ ದಾಖಲೆ ಬರೆದಿದ್ದರು. ಆದರೆ ಮಾನಸಿ ಯಾರಿಗೂ ಕಾಣಿಸಲೇ ಇಲ್ಲ. ಈ ಸಾಧನೆ ಮಾಡಿದ ಏಕೈಕ ಭಾರತೀಯ ಶಟ್ಲರ್ ಅನ್ನೋ ಹೆಗ್ಗಳಿಕೆಗೂ ಮಾನಸಿ ಪಾತ್ರರಾಗಿದ್ದಾರೆ. ಮಾನಸಿ ಜೋಶಿ ರೋಚಕ ಜರ್ನಿ ಇಲ್ಲಿದೆ.
   

 • undefined

  Sports28, Aug 2019, 7:06 PM

  ಸಿಂಧುಗಿಂತಲೂ ಮಿಗಿಲು, ಭಾರತಾಂಬೆಗೆ ಚಿನ್ನ ತೊಡಿಸಿದ ಮಾನಸಿ ಜೋಶಿ ಸಾಧನೆ!

  ವಿಶ್ವಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಪಿವಿ ಸಿಂಧು ಚಿನ್ನ ಗೆದ್ದು ಇತಿಹಾಸ ಬರೆದಿದ್ದಾರೆ. ಇದರ ಬೆನ್ನಲ್ಲೇ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಮಾನಸಿ ಜೋಶಿ ಚಿನ್ನದ ಪದಕ ಮುಡಿಗೇರಿಸಿಕೊಂಡಳು. ಅಪಘಾತದಲ್ಲಿ ಕಾಲು ಕಳೆದುಕೊಂಡ ಮಾನಸಿ ಜೋಶಿಯ ಸಾಧನೆ ಸಿಂಧುಗಿಂತಲೂ ಮಿಗಿಲು. ಮಾನಸಿ ಸಾಧನೆಯ ಹಾದಿ ಇಲ್ಲಿದೆ.