Search results - 180 Results
 • 2 JDS MLAs Absent During Meeting

  NEWS23, Sep 2018, 9:19 AM IST

  ಸಭೆಗೆ ಗೈರಾದ ಇಬ್ಬರು ಜೆಡಿಎಸ್ ಶಾಸಕರು ಹೋಗಿದ್ದೆಲ್ಲಿಗೆ..?

  ಸಮ್ಮಿಶ್ರ ಸರ್ಕಾರದ ಶಾಸಕರಿಗೆ ಬಿಜೆಪಿ ಗಾಳ ಹಾಕುತ್ತಿದೆ, ಈ ಮೂಲಕ ಸರ್ಕಾರ ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿರುವ ಆರೋಪಗಳ ನಡುವೆಯೇ ಇದೇ ಮೊದಲ ಬಾರಿಗೆ ಹಾಸನದಲ್ಲಿ ಶನಿವಾರ ರಾತ್ರಿ ಜೆಡಿಎಸ್‌ ಶಾಸಕಾಂಗ ಪಕ್ಷದ ಸಭೆ ನಡೆಸಲಾಯಿತು. ಈ ಮೂಲಕ ಜೆಡಿಎಸ್‌ನ ಎಲ್ಲ ಶಾಸಕರು ಒಗ್ಗಟ್ಟಾಗಿದ್ದಾರೆ, ಬಿಜೆಪಿ ಆಮಿಷಗಳಿಗೆ ಬಲಿಯಾಗಲ್ಲ ಎನ್ನುವ ಸಂದೇಶವನ್ನು ರವಾನಿಸುವ ಪ್ರಯತ್ನ ನಡೆಸಲಾಯಿತು.
   

 • Another Tension For Congress And JDS

  NEWS23, Sep 2018, 7:13 AM IST

  ಕಾಂಗ್ರೆಸ್‌, ಜೆಡಿಎಸ್‌ಗೆ ಎದುರಾಗಿದೆ ಮತ್ತೊಂದು ಆತಂಕ!

  ಆಪರೇಷನ್‌ ಕಮಲ ಭೀತಿಯಿಂದಾಗಿ ರಾಜ್ಯ ರಾಜಕೀಯದಲ್ಲಿ ನಿರ್ಮಾಣವಾಗಿರುವ ಗೊಂದಲಮಯ ವಾತಾವರಣಕ್ಕೆ ಮತ್ತೊಂದು ಕ್ಲೈಮ್ಯಾಕ್ಸ್ ಎದುರಾಗಲಿದೆ. ಅ.3ರಂದು ನಡೆಯಲಿರುವ ವಿಧಾನಪರಿಷತ್‌ ಚುನಾವಣೆಯೇ ಅಂತಿಮವಾಗುವ ಸಾಧ್ಯತೆ ಇದೆ.

 • CM Kumaraswamy Lashes Out At BJP Over Operation Kamala

  NEWS22, Sep 2018, 8:58 PM IST

  'ಗಾಳ ಹಾಕುತ್ತಿರುವ ಬಗ್ಗೆ ತಿಳಿಯಲು ನಮ್ಮ ಒಬ್ಬ ಶಾಸಕನನ್ನು ನಾನೇ ಕಳಿಸಿದ್ದೇನೆ’

  ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಕುಮಾರಸ್ವಾಮಿ, ಬಿಜೆಪಿ ಗಾಳ ಹಾಕುತ್ತಿರುವ ಬಗ್ಗೆ ಸಾಕ್ಷಿ ಇದ್ದು, ಬಿಎಸ್ ವೈ ಏನೇನು ಮಾತನಾಡುತ್ತಾರೆ ಎಂದು ತಿಳಿದುಕೊಳ್ಳುವುದಕ್ಕೆ  ನಾಗಮಂಗಲ ಶಾಸಕ ಸುರೇಶ್ ಗೌಡರನ್ನು ತಾವೇ ಕಳುಹಿಸಿದ್ದು, ಅವರು ಮಾತನಾಡಿರುವುದು ಮೊಬೈಲ್ ನಲ್ಲಿ ದಾಖಲಾಗಿದೆ ಎಂದು ಕಮಲ ಪಕ್ಷದ ವಿರುದ್ಧ ಹರಿಹಾಯ್ದರು.

 • Video Is Siddaramaiah Behind the Rebellion Of Congress MLAs

  NEWS22, Sep 2018, 8:14 PM IST

  ಶಾಸಕರ ‘ಆಪರೇಷನ್ ಮುಂಬೈ‘ ಹಿಂದೆ ಈ ‘ಕೈ‘ ನಾಯಕನ ಕೈವಾಡ?

  ಕಾಂಗ್ರೆಸ್ ಶಾಸಕರು ಮುಂಬೈಗೆ ತೆರಳಿದ್ದಾರೆ. ಯಾವುದೇ ಪ್ರಬಲ ನಾಯಕನ ಕೈವಾಡ ಇಲ್ಲದೇ ಯಾವ ಶಾಸಕನೂ ಈ ತರಹ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಹಾಗಾದರೆ ಈ ‘ಆಪರೇಷನ್ ಮುಂಬೈ’ಯ ಹಿಂದೆ ಯಾರಿದ್ದಾರೆ? ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿರುವ ಹೆಸರು ಯಾರದ್ದು? 

 • Video HD Kumaraswamy Collects Intelligence Report About MLAs Whereabouts

  NEWS22, Sep 2018, 7:54 PM IST

  ಒಂದು ಕಡೆ ಟೆನ್ಷನ್ ಇಲ್ಲ ಅಂತಾ ಹೇಳೋ ಸಿಎಂ ಇನ್ನೊಂದು ಕಡೆ ಮಾಡಿದ್ದೇನು?

  ಒಂದು ಕಡೆ ಆಪರೇಷನ್ ಕಮಲದ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಕುಮಾರಸ್ವಾಮಿ, ಮೈತ್ರಿ ಸರ್ಕಾರ ಸುಭದ್ರವಾಗಿದೆ, ಯಾವುದೇ ಒತ್ತಡವಿಲ್ಲ ಎಂದು ಹೇಳುತ್ತಾರೆ. ಆದರೆ ಇನ್ನೊಂದು ಕಡೆ ಅದಕ್ಕೆ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಾರೆ. ಸಿಎಂ ಅಂತಹದ್ದೇನು ಮಾಡಿದ್ದಾರೆ? ಇಲ್ಲಿದೆ ವಿವರ...  

 • Video Mallikamrjun Kharge Slams BJP Over Operation Kamala

  NEWS22, Sep 2018, 7:40 PM IST

  ಬಿಜೆಪಿಯಿಂದ ‘ಹುಲಿ ಬಂತು ಹುಲಿ’ ಎಂಬ ಗುಲ್ಲು ಅಷ್ಟೇ...

  ಬಿಜೆಪಿ ಮೊದಲಿನಿಂದಲೂ ಆಪರೇಷನ್ ಕಮಲ ಮಾಡುತ್ತಲೇ ಬಂದಿದೆ. ಮೈತ್ರಿ ಸರ್ಕಾರ ಇರಬಾರದು ಎಂಬ ಸರ್ವಾಧಿಕಾರ ಧೋರಣೆ ಬಿಜೆಪಿಯದ್ದು, ಎಂದು ಬಿಜೆಪಿಯ ವಿರುದ್ಧ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.  

 • Do Not Go Out of State Says Yeddyurappa To Party MLAs

  NEWS22, Sep 2018, 6:53 PM IST

  ಕ್ಷೇತ್ರ ಬಿಡಬೇಡಿ, ಕರೆದಾಗ ತಕ್ಷಣ ಬೆಂಗ್ಳೂರ್ ಗೆ ಬನ್ನಿ:BSY

  ಸಮ್ಮಿಶ್ರ ಸರ್ಕಾರದ ಅಳಿವು-ಉಳಿವಿನ ಚರ್ಚೆ ಮೇಲ್ನೋಟಕ್ಕೆ ಪರಿಸ್ಥಿತಿ ತಿಳಿಯಾಗಿದೆ. ಆದರೆ, ಒಳ ಒಳಗೆ ಸದ್ದಿಯಲ್ಲದೇ ಅತೃಪ್ತ ಶಾಸಕರು ಒಂದೆಡೆ ಸೇರುತ್ತಿರುತ್ತಿರುವುದು ಸಮ್ಮಿಶ್ರ ಸರ್ಕಾರದ ಅಳಿವು-ಉಳಿವಿನ ಚರ್ಚೆ ಕಾವೇರ ತೊಡಗಿದೆ. ಇದರಿಂದ ಬಿಜೆಪಿಯ ಎಲ್ಲಾ ಶಾಸಕರಿಗೆ ಗೂ  ಬಿ.ಎಸ್. ಯಡಿಯೂರಪ್ಪ ಒಂದು ಖಡಕ್ ಸೂಚನೆ ರವಾನಿಸಿದ್ದಾರೆ.

 • Video Karnataka BJP Chief BS Yeddyurappa Updates High command

  NEWS22, Sep 2018, 6:41 PM IST

  ಹೈಕಮಾಂಡ್‌ಗೆ ಯಡಿಯೂರಪ್ಪ ರಿಪೋರ್ಟ್! ಏನಿದೆ ವರದಿಯಲ್ಲಿ?

  ರಾಜ್ಯದ ಪ್ರಸಕ್ತ ಸನ್ನಿವೇಶದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಪಕ್ಷದ ಹೈಕಮಾಂಡ್‌ಗೆ ವರದಿಯನ್ನು ಸಲ್ಲಿಸಿದ್ದಾರೆ. ಆಪರೇಷನ್ ಕಮಲ ಪ್ರಕರಣ ಬೆಳಕಿಗೆ ಬಂದ ನಂತರ ರಾಜ್ಯದಲ್ಲಿ ಘಟಿಸುತ್ತಿರುವ ಬೆಳವಣಿಗೆಗಳನ್ನು ನಾಯಕರಿಗೆ ಬಿಎಸ್‌ವೈ ತಿಳಿಸಿದ್ದಾರೆ. 

 • HD Kumaraswamy Reacts after pooja at Sringeri

  NEWS22, Sep 2018, 5:24 PM IST

  ಶೃಂಗೇರಿ ಶಾರದಾಂಬೆಗೆ ಯಾಗ ಮಾಡಿಸಿದ್ದೇಕೆ? ಸಿಎಂ ಏನಂದ್ರು?

  ಶೃಂಗೇರಿ ಶಾರದಾಂಬೆ ದರ್ಶನ ಬಳಿಕ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.

 • Video 4 Ways Before HDK To Stop Operation Kamala

  NEWS22, Sep 2018, 4:03 PM IST

  ಸಮ್ಮಿಶ್ರ ಸರ್ಕಾರ ಬಚಾವ್ ಆಗೋಕೆ ಇರೋ 4 ಮಾರ್ಗಗಳು

  ಸಮ್ಮಿಶ್ರ ಸರ್ಕಾರ  ಅಳಿವು ಉಳಿವಿನ ತುಗ್ಯೂಯ್ಯಲೆ ಸ್ಥಿತಿಯಲ್ಲಿದ್ದು, ಇದನ್ನು ಹೇಗೆ ತಡೆಯಬಹುದು? ಕುಮಾರಣ್ಣನ ಮುಂದಿರೋ ಆ  4 ಮಾರ್ಗಗಳಾವುವು? ಎನ್ನುವುದನ್ನು ಈ ವಿಡಿಯೋಗದಲ್ಲಿ ನೋಡಿ.

 • Siddaramaiah Says He Is Not Trying To Topple Coalition Govt

  NEWS22, Sep 2018, 3:51 PM IST

  ಸರ್ಕಾರ ಅಸ್ಥಿರಕ್ಕೆ ನನ್ನ ಪಾತ್ರವಿಲ್ಲ : 78 ಶಾಸಕರು ನನ್ನವರು

  ಶಾಸಕರು ಮುಂಬೈನತ್ತ ಪ್ರಯಾಣ ಹೊರಟಿರುವುದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಸರ್ಕಾರ ಅಸ್ಥಿರಗೊಳಿಸುವಲ್ಲಿ ನನ್ನ ಪಾತ್ರವಿಲ್ಲ. ಕಾಂಗ್ರೆಸ್ ನಿಂದ ಗೆದ್ದಿರುವ ಎಲ್ಲಾ ಶಾಸಕರು ನನ್ನ ಆಪ್ತರು, ಅದರಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ. ಕೇಂದ್ರವಾಗಲಿ ರಾಜ್ಯ ಸರ್ಕಾರವಾಗಲಿ ಯಾವುದೆ ಸರ್ಕಾರವಿದ್ದರೂ ಜನರಿಂದ ಆಯ್ಕೆಯಾಗಿದ್ದು, ಕಾನೂನು ಬಿಟ್ಟು ಏನು‌ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.  

 • Operation Kamala Gains Momentum, 2 Cong MLAs Preparing To Head For Mumbai Resort Led By Dr.K.Sudhakar

  NEWS22, Sep 2018, 3:10 PM IST

  ಲಗ್ಗೇಜ್ ಸಿದ್ಧತೆ ಮಾಡಿಕೊಂಡ ಮೂವರು ಶಾಸಕರು : ಹೈ ಅಲರ್ಟ್ ಆದ ಸಿಎಂ

  ಆಪರೇಷನ್ ಕಮಲಕ್ಕೆ ಅಲರ್ಟ್ ಆಗಿರುವ ಸಿಎಂ ಕುಮಾರಸ್ವಾಮಿ ಗುಪ್ತಚರ ಇಲಾಖೆ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿ ಕಾಂಗ್ರೆಸ್-ಜೆಡಿಎಸ್ ಶಾಸಕರ ಚಲನವಲನಗಳ ಗಮನಿಸುತ್ತಿದ್ದಾರೆ. ಇನ್ನೊಂದು ಬೆಳವಣಿಗೆಯಲ್ಲಿ  ಕಾಂಗ್ರೆಸ್ ಶಾಸಕರಾದ ಡಾ.ಕೆ.ಸುಧಾಕರ್, ಎಂ.ಟಿ.ಬಿ.ನಾಗರಾಜ್ ಹಾಗೂ ಪಕ್ಷೇತರ ಶಾಸಕ ನಾಗೇಶ್ ಲಗ್ಗೇಜ್ ಪ್ಯಾಕ್ ಮಾಡಿಕೊಂಡಿದ್ದು ಎಲ್ಲಿ ಹೋಗುತ್ತಿದ್ದಾರೆ ಎಂಬುದರ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ. ಒಂದು ಕಡೆ ಹೈಕಮಾಂಡ್ ನಾಯಕರು ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನ ಮಾಡಿದರೆ ಮತ್ತೊಂದೆಡೆ ಹಲವು ಜನಪ್ರತಿನಿಧಿಗಳು ಅವರ ಸಂಪರ್ಕಕ್ಕೆ ಸಿಗುತ್ತಿಲ್ಲ.

 • Congress and JDS Leaders worried about Operation Kamala

  NEWS22, Sep 2018, 2:26 PM IST

  ಆಪರೇಷನ್​​ಗೆ ಗಲಿಬಿಲಿಗೊಂಡ ಕಾಂಗ್ರೆಸ್-ಜೆಡಿಎಸ್: ಸಭೆ ಮೇಲೆ ಸಭೆ

  ಸಮ್ಮಿಶ್ರ ಸರ್ಕಾರದ ಅಳಿವು-ಉಳಿವಿನ ಚರ್ಚೆ ಮೇಲ್ನೋಟಕ್ಕೆ ಪರಿಸ್ಥಿತಿ ತಿಳಿಯಾಗಿದೆ. ಆದರೂ ಒಳಗೊಳಗೇ ದೋಸ್ತಿ ಸರ್ಕಾರದ ನಾಯಕರು ಆಪರೇಷನ್ ಕಮಲಕ್ಕೆ ಹೌಹಾರಿದ್ದಾರೆ.ಈ ಹಿನ್ನೆಲೆಯಲ್ಲಿ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಕಾಂಗ್ರೆಸ್​ ಮತ್ತು ಜೆಡಿಎಸ್ ಏನೆಲ್ಲ ಕಸರತ್ತು ನಡೆಸಿದ್ದಾರೆ ನೋಡಿ.

 • Video Suvarna FIR History of Kingpin Behind Operation Kamala

  NEWS22, Sep 2018, 1:52 PM IST

  ಮೈತ್ರಿ ಸರ್ಕಾರದ ನಿದ್ದೆಗೆಡಿಸಿದ ಉದಯ್ ಗೌಡ ಕಿಂಗ್‌ಪಿನ್‌ ಆದ ರೋಚಕ ಕಹಾನಿ !

  ಆಪರೇಷನ್ ಕಮಲದ ಮೂಲಕ ಸಮ್ಮಿಶ್ರ ಸರ್ಕಾರ ಬೀಳಿಸಲು ಉದಯ್ ಗೌಡ ಕಿಂಗ್‌ಪಿನ್. ಇತ್ತೀಚಿಗಿನವರೆಗೂ ಯಾರಿಗೂ ಗೊತ್ತಿರದ ಉದಯ್ ಗೌಡ, ಹಠಾತ್ ಫೇಮಸ್ ಆಗಿದ್ದು ಹೇಗೆ? ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದ ಈತ ರಾಜಕೀಯ ಆಪರೇಷನ್‌ನ ಕಿಂಗ್‌ಪಿನ್ ಆಗಿರುವ ಹಿಂದಿನ ರೋಚಕ ಕಹಾನಿ ಇಲ್ಲಿದೆ...   

 • Siddaramaiah calls Congress MLAS meeting on Sept 25

  NEWS22, Sep 2018, 12:33 PM IST

  ಆಪರೇಷನ್ ಕಮಲಕ್ಕೆ ಗುದ್ದು ನೀಡಲು ಸಿದ್ದು ಎಂಟ್ರಿ!

  ಸಮ್ಮಿಶ್ರ ಸರ್ಕಾರದ ಅಳಿವು-ಉಳಿವಿನ ಚರ್ಚೆ ಕಾವೇರುತ್ತಿರುವ ಬೆನ್ನಲ್ಲೇ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಕಾಂಗ್ರೆಸ್​ ಮುಂದಾಗಿದೆ. ಆಪರೇಷನ್ ಕಮಲಕ್ಕೆ ಬ್ರೇಕ್ ಹಾಕಲು ಖುದ್ದು ಸಿಎಂ ಹೆಚ್. ಡಿ. ಕುಮಾರಸ್ವಾಮಿ ಅವರು ಮಾಜಿ ಸಿಎಂ ಹಾಗೂ ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ ಅವರ ಹೆಗಲಿಗೆ ಹಾಕಿದ್ದಾರೆ.