News Top 10  

(Search results - 4)
 • <p>18 top10 stories</p>

  News28, Sep 2020, 6:28 PM

  ನಟಿಮಣಿಯರಿಗೆ ಬಿಗ್ ಶಾಕ್, ಸಿಎಂ ವಿರುದ್ಧ ಸಿದ್ದು ಗರಂ: ಇಲ್ಲಿದೆ ಸೆ. 28ರ ಟಾಪ್ 10 ಸುದ್ದಿ!

  ಒಂದೆಡೆ ಕೊರೋನಾ ಮಹಾಮಾರಿ ಜನರ ನೆಮ್ಮದಿ ಕಸಿದಿದ್ದರೆ, ಇತ್ತ ಡ್ರಗ್ಸ್ ಮಾಫಿಯಾ ಕಬಲೆಗೆ ಬಿದ್ದಿರುವ ನಟಿ ಮಣಿಯರು ಹೊರ ಬರಲು ಪರದಾಡುತ್ತಿದ್ದಾರೆ. ಇನ್ನು ರಾಜಕೀಯ ವಲಯದಲ್ಲಿ ಬಿಎಸ್‌ವೈ ಸಂಪುಟ ವಿಸ್ತರಣೆಗೆ ಕಸರತ್ತು ನಡೆಸುತ್ತಿದ್ದರೆ, ಮಾಜಿ ಸಿಎಂ ಸಿದ್ದರಾಮಯ್ಯ ಹಾಲಿ ಸಿಎಂ ವಿರುದ್ಧ ಗುಡುಗಿದ್ದಾರೆ. ಇವೆಲ್ಲದರ ನಡುವೆ ಐಪಿಎಲ್ ಯುವಜನರಿಗೆ ಭಾರೀ ಮನರಂಜನೆ ನೀಡುತ್ತಿದ್ದು, ಕನ್ನಡಿಗರ ಮನ ಇಂದು ನಡೆಯಲಿರುವ ಪಂದ್ಯದ ಮೇಲೆ ಕೇಂದ್ರೀಕರಿತವಾಗಿದೆ. ಇಷ್ಟೇ ಅಲ್ಲದೇ ಇಂದು ಸೆ. 28ರ ಟಾಪ್ ಹತ್ತು ಸುದ್ದಿಗಳು ಇಲ್ಲಿವೆ ನೋಡಿ
   

 • 06 top10 stories1

  NEWS6, Sep 2019, 5:08 PM

  ದಂಡ ನೋಡಿ ಬೈಕ್ ಸುಟ್ಟ, ನಟಿಗೆ ಪ್ರಶ್ನೆ ಕೇಳಿ ಅಭಿಮಾನಿ ಕೆಟ್ಟ; ಇಲ್ಲಿವೆ ಸೆ.06ರ ಟಾಪ್ 10 ಸುದ್ದಿ ಇಲ್ಲಿವೆ!

  ರಾಜ್ಯ ಹಾಗೂ ರಾಷ್ಟ್ರ ರಾಜಕೀಯಕ್ಕಿಂತ ಇದೀಗ ಟ್ರಾಫಿಕ್ ನಿಯಮ ಹಾಗೂ ದಂಡವೇ ಹೆಚ್ಚು ಸದ್ದು ಮಾಡುತ್ತಿದೆ. ದಂಡ ಮೊತ್ತ ಕೇಳಿ ಬೈಕ್‌ಗೆ ಬೆಂಕಿ ಹಚ್ಚಿದ ಘಟನೆ ವರದಿಯಾಗಿದ್ದರೆ, ದಂಡ ತಪ್ಪಿಸಿಕೊಳ್ಳಲು ಸವಾರರ ನಾನಾ ಉಪಾಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ಹೊರತು ಪಡಿಸಿದರೆ, ರಷ್ಯಾಗೆ ತೆರಳಿದ ಪ್ರಧಾನಿ ಮೋದಿ ಸೋಫಾದಿಂದ ದಿಢೀರ್ ಎದ್ದು ವಿಶ್ವದ ಗಮನಸೆಳೆದಿದ್ದಾರೆ. ಇತ್ತ ಅಭಿಮಾನಿಯೊರ್ವ ಕಿಚ್ಚ ಸುದೀಪ್‌ಗೆ ವಿಶೇಷ ಗಿಫ್ಟ್ ನೀಡಿದ್ದರೆ, ನಟಿ ಇಲಿಯಾನ ಅಭಿಮಾನಿಗೆ ಹಿಗ್ಗಾ ಮುಗ್ಗಾ ಜಾಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. 2011ರ ವಿಶ್ವಕಪ್ ವಿಜೇತ ತಂಡದ ಸದಸ್ಯನ ಮೇಲೆ ಕೊಲೆ ಬೆದರಿಕೆ ಆರೋಪ ಕ್ರಿಕೆಟ್ ವಲಯವನ್ನೇ ಬೆಚ್ಚಿ ಬೀಳಿಸಿದೆ. ಸೆ.06 ರಲ್ಲಿ ರಾಜ್ಯ ಹಾಗೂ ದೇಶದಲ್ಲಿ ಸಂಚಲನ ಮೂಡಿಸಿದ ಟಾಪ್ 10 ಸುದ್ದಿಗಳು ಇಲ್ಲಿವೆ.

 • 30 top 10 stories

  NEWS30, Aug 2019, 5:08 PM

  ಬ್ಯಾಂಕ್‌ಗಳ ವಿಲೀನ, ಡಿಕೆಶಿಗೆ ED ಕುಣಿಕೆ: ಇಲ್ಲಿವೆ ಆ. 30ರ ಟಾಪ್ ಸುದ್ದಿಗಳು

  ಕರ್ನಾಟಕ ಜಿಲ್ಲಾ ಸುದ್ದಿ, ರಾಜ್ಯ, ರಾಷ್ಟ್ರೀಯ, ಅಂತರಾಷ್ಟ್ರೀಯ ಸೇರಿದಂತೆ ಕ್ರೀಡಾ, ಸಿನಿಮಾ, ಉದ್ಯಮ, ಉದ್ಯೋಗ ಹಾಗೂ ಆಟೋಮೊಬೈಲ್, ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದ ಆಗಸ್ಟ್ 30ರ ಟಾಪ್ 10 ಸುದ್ದಿಗಳು| ಇತ್ತ ಡಿಕೆಶಿಗೆ ಇಡಿ ಸಂಕಷ್ಟವಾದರೆ, ಅತ್ತ ಕೇಂದ್ರ ಸರ್ಕಾರ ಬ್ಯಾಂಕುಗಳನ್ನು ವಿಲೀನಗೊಳಿಸಿದೆ. ಮತ್ತೊಂದೆಡೆ ಅಂಬಾಟಿ ರಾಯುಡು ಯೂ ಟರ್ನ್ ಹೊಡೆದರೆ, 'ಕನ್ನಡ ಕೋಗಿಲೆ' ಖ್ಯಾತಿಯ ಖಾಸಿಂ ಅಲಿ ಸಣ್ಣ ತಪ್ಪಿಗೆ 25 ಸಾವಿರ ದಂಡ ವಿಧಿಸಬೇಕಾಗಿದೆ. ಇಲ್ಲಿದೆ ನೋಡಿ ಇಂದಿನ ಟಾಪ್ 10 ಸುದ್ದಿಗಳು

 • 29 top 10 stories

  NEWS29, Aug 2019, 4:24 PM

  ಡಿಕೆಶಿಗೆ ಹಿನ್ನಡೆ, ಏಕಾಂಗಿಯಾದ ಎಚ್‌ಡಿಕೆ: ಇಲ್ಲಿವೆ ಆ. 29ರ ಟಾಪ್ ಸುದ್ದಿಗಳು

  ಜಿಲ್ಲಾ ಮಟ್ಟದಿಂದ ಅಂತರಾಷ್ಟ್ರೀಯ ಮಟ್ಟದವರೆಗೆ ಹಲವರು ಸುದ್ದಿಗಳು ಗಮನಸೆಳೆದಿವೆ. ಒಂದೆಡೆ ಕಾಂಗ್ರೆಸ್ ಟ್ರಬಲ್ ಶೂಟರ್‌ ಡಿ. ಕೆ ಶಿವಕುಮಾರ್‌ಗೆ ಹೈಕೋರ್ಟ್‌ನಲ್ಲಿಹ್ನಿನಡೆಯಾಗಿದ್ದರೆ, ಅತ್ತ ಕುಮಾರಸ್ವಾಮಿ ಏಕಾಂಗಿಯಾಗಿದ್ದಾರೆ. ಇನ್ನು ಉಗ್ರ ದಾಳಿಯಾಗುವ ಮಾಹಿತಿ ಹಿನ್ನೆಲೆ ಗುಜರಾತ್ನಲ್ಲಿ ಹೈ ಅಲರ್ಟ್ ಘೋಷಿಸಿದ್ದರೆ, ಅತ್ತ ಪಾಕಿಸ್ತಾನ ತೀವ್ರ ಆರ್ಥಿಕ ಮುಗ್ಗಟ್ಟು ಅನುಭವಿಸುತ್ತಿದೆ. ಕ್ರೀಡಾ, ಸಿನಿಮಾ, ಉದ್ಯಮ, ತಂತ್ರಜ್ಞಾನ, ಉದ್ಯೋಗ, ಆಟೋಮೊಬೈಲ್ ವಲಯದಲ್ಲೂ ಹಲವಾರು ಬೆಳವಣಿಗೆಗಳಾಗಿವೆ. ಹೀಗಿರುವಾಗ ಆಗಸ್ಟ್ 29ರಂದು ಅತಿ ಹೆಚ್ಚು ಗಮನಸೆಳೆದ 10 ಸುದ್ದಿಗಳು ಇಲ್ಲಿವೆ