New Zeal

(Search results - 536)

Ind vs NZ

CricketJun 17, 2021, 10:18 AM IST

ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ಗೆ ಭಾರತ, ಕಿವೀಸ್ ಸಿದ್ದತೆ ಹೇಗಿದೆ?

ಐಪಿಎಲ್‌ 14ನೇ ಆವೃತ್ತಿ ಕೋವಿಡ್‌ನಿಂದಾಗಿ ಅರ್ಧಕ್ಕೆ ಸ್ಥಗಿತಗೊಂಡ ಬಳಿಕ, ನ್ಯೂಜಿಲೆಂಡ್‌ ತಂಡದ ಬಹುತೇಕ ಆಟಗಾರರು ಭಾರತದಿಂದ ನೇರವಾಗಿ ಇಂಗ್ಲೆಂಡ್‌ ತೆರಳಿದ್ದರು. ಇಂಗ್ಲೆಂಡ್‌ ವಿರುದ್ಧದ 2 ಪಂದ್ಯಗಳ ಟೆಸ್ಟ್‌ ಸರಣಿಯನ್ನು ಆಡಿದ ಕಿವೀಸ್‌ ಪಡೆ, 1-0 ಅಂತರದಲ್ಲಿ ಸರಣಿ ಗೆದ್ದು ಮಹತ್ವದ ಪಂದ್ಯಕ್ಕೂ ಮುನ್ನ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ಇದಷ್ಟೇ ಅಲ್ಲ, ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಭಾರತವನ್ನು ಹಿಂದಿಕ್ಕಿ, ನಂ.1 ಸ್ಥಾನಕ್ಕೇರಿದೆ.

Team India

CricketJun 15, 2021, 7:26 PM IST

ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್: ನ್ಯೂಜಿಲೆಂಡ್ ವಿರುದ್ಧ ಪಂದ್ಯಕ್ಕೆ 15 ಸದಸ್ಯರ ತಂಡ ಪ್ರಕಟಿಸಿದ ಬಿಸಿಸಿಐ!

• ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೆ ಭಾರತ ತಂಡ ಪ್ರಕಟ
• ಕೊಹ್ಲಿ ನಾಯಕತ್ವದ 15 ಸದಸ್ಯರ ಬಲಿಷ್ಠ ತಂಡ ಪ್ರಕಟಿಸಿದ ಬಿಸಿಸಿಐ
• ಜೂನ್ 18 ರಿಂದ ಇಂಗ್ಲೆಂಡ್‌ನ ಸೌಥಾಂಪ್ಟನ್‌ನಲ್ಲಿ ಪಂದ್ಯ ಆರಂಭ

Team India Sanjay Manjrekar

CricketJun 15, 2021, 5:56 PM IST

ಟೆಸ್ಟ್‌ ಚಾಂಪಿಯನ್‌ಶಿಪ್ ಫೈನಲ್‌: ಜಡೇಜಾ, ಇಶಾಂತ್‌ರನ್ನು ಕೈಬಿಟ್ಟ ಸಂಜಯ್ ಮಂಜ್ರೇಕರ್..!

ನವದೆಹಲಿ: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹಾಗೂ ವೀಕ್ಷಕ ವಿವರಣೆಗಾರ ಸಂಜಯ್ ಮಂಜ್ರೇಕರ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ ಭಾರತದ ಸಂಭಾವ್ಯ ತಂಡವನ್ನು ಪ್ರಕಟಿಸುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಭಾರತ ಹಾಗೂ ನ್ಯೂಜಿಲೆಂಡ್‌ ನಡುವೆ ಸೌಥಾಂಪ್ಟನ್‌ನಲ್ಲಿ ಜೂನ್ 18ರಿಂದ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್ ಆರಂಭವಾಗಲಿದೆ. ಟೀಂ ಇಂಡಿಯಾ ಅನುಭವಿ ಆಲ್ರೌಂಡರ್ ರವೀಂದ್ರ ಜಡೇಜಾ ಹಾಗೂ ಅನುಭವಿ ವೇಗಿ ಇಶಾಂತ್ ಶರ್ಮಾ ಅವರನ್ನು ತಂಡದಿಂದ ಕೈಬಿಟ್ಟಿದ್ದಾರೆ. ಟೆಸ್ಟ್‌ ಚಾಂಪಿಯನ್‌ಶಿಪ್ ಫೈನಲ್‌ಗೆ ಸಂಜಯ್ ಮಂಜ್ರೇಕರ್ ಆಯ್ಕೆ ಮಾಡಿದ ತಂಡದಲ್ಲಿ ಯಾರೆಲ್ಲಾ ಸ್ಥಾನ ಪಡೆದಿದ್ದಾರೆ ಎನ್ನುವ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ..

Test Mace

CricketJun 15, 2021, 4:00 PM IST

ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌: ಬಹುಮಾನ ಮೊತ್ತ ಪ್ರಕಟಿಸಿದ ಐಸಿಸಿ

ಬಹುನಿರೀಕ್ಷಿತ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಜೂನ್ 18ರಿಂದ ಸೌಥಾಂಪ್ಟನ್‌ನಲ್ಲಿ ನಡೆಯಲಿರುವ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಹಾಗೂ ಕೇನ್ ವಿಲಿಯಮ್ಸನ್‌ ನೇತೃತ್ವದ ನ್ಯೂಜಿಲೆಂಡ್ ತಂಡಗಳು ಚಾಂಪಿಯನ್ ಪಟ್ಟಕ್ಕಾಗಿ ಕಾದಾಟ ನಡೆಸಲಿವೆ.

New Zealand Cricket

CricketJun 15, 2021, 12:41 PM IST

ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ಗೆ ಬಲಿಷ್ಠ ನ್ಯೂಜಿಲೆಂಡ್ ತಂಡ ಪ್ರಕಟ

ಮೊಣಕೈ ಗಾಯದಿಂದಾಗಿ ಇಂಗ್ಲೆಂಡ್ ವಿರುದ್ದದ ಎರಡನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದ ನಾಯಕ ಕೇನ್ ವಿಲಿಯಮ್ಸನ್‌ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ಗೆ ತಂಡ ಕೂಡಿಕೊಂಡಿದ್ದಾರೆ. ವಿಲಿಯಮ್ಸನ್ ಅನುಪಸ್ಥಿತಿಯಲ್ಲಿ ಟಾಮ್ ಲಾಥಮ್ ತಂಡವನ್ನು ಮುನ್ನೆಡೆಸಿ ಇಂಗ್ಲೆಂಡ್ ಎದುರು ಕಿವೀಸ್ ತಂಡ 8 ವಿಕೆಟ್‌ಗಳ ಜಯ ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

Cheteshwar Pujara

CricketJun 14, 2021, 6:33 PM IST

ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌: ನ್ಯೂಜಿಲೆಂಡ್‌ಗೆ ಹೆಚ್ಚು ಅನುಕೂಲವೆಂದ ಪೂಜಾರ

ಇಂಗ್ಲೆಂಡ್ ವಿರುದ್ದದ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ನ್ಯೂಜಿಲೆಂಡ್ ತಂಡ 1-0 ಅಂತರದಲ್ಲಿ ಸರಣಿ ಕೈವಶ ಮಾಡಿಕೊಂಡಿದೆ. ಲಾರ್ಡ್ಸ್‌ನಲ್ಲಿ ನಡೆದ ಮೊದಲ ಪಂದ್ಯ ಡ್ರಾನಲ್ಲಿ ಅಂತ್ಯವಾಗಿತ್ತು. ಇನ್ನು ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯವನ್ನು ಕಿವೀಸ್ ತಂಡ 8 ವಿಕೆಟ್‌ ಅಂತರದಲ್ಲಿ ಜಯಿಸುವ ಮೂಲಕ ಆತಿಥೇಯರಿಗೆ ತವರಿನಲ್ಲೇ ತಿರುಗೇಟು ನೀಡುವಲ್ಲಿ ಯಶಸ್ವಿಯಾಗಿದೆ.

New Zealand Cricket

CricketJun 14, 2021, 12:38 PM IST

ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್‌‌: ಮತ್ತೆ ಅಗ್ರಸ್ಥಾನಕ್ಕೇರಿದ ನ್ಯೂಜಿಲೆಂಡ್‌

ಟೆಸ್ಟ್‌ ಹಾಗೂ ಏಕದಿನ ರ‍್ಯಾಂಕಿಂಗ್‌ನಲ್ಲಿ ನ್ಯೂಜಿಲೆಂಡ್‌ ಮೊದಲ ಸ್ಥಾನದಲ್ಲಿರುವುದು ವಿಶೇಷ. ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೂ ಮುನ್ನ ಈ ಬೆಳವಣಿಗೆ ಕಿವೀಸ್‌ಗೆ ಮಾನಸಿಕ ಮುನ್ನಡೆ ನೀಡಿದೆ.

Boult v Rohit

CricketJun 12, 2021, 4:47 PM IST

ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್: ರೋಹಿತ್-ಬೌಲ್ಟ್ ಫೈಟ್ ನೋಡಲು ಕಾಯುತ್ತಿದ್ದೇನೆಂದ ಸೆಹ್ವಾಗ್

ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯವು ಜೂನ್‌ 18ರಿಂದ ಆರಂಭವಾಗಲಿದ್ದು, ಈ ಹೈವೋಲ್ಟೇಜ್ ಪಂದ್ಯಕ್ಕೆ ಸೌಥಾಂಪ್ಟನ್‌ ಆತಿಥ್ಯವನ್ನು ವಹಿಸಿದೆ. ಟೆಸ್ಟ್ ವಿಶ್ವಕಪ್ ಎಂದೇ ಬಿಂಬಿತವಾಗಿರುವ ಪಂದ್ಯವನ್ನು ಕಣ್ತುಂಬಿಕೊಳ್ಳಲು ಇಡೀ ಜಗತ್ತೇ ಚಾತಕ ಪಕ್ಷಿಯಂತೆ ಕಾದುಕುಳಿತಿದೆ.

Mohammed Siraj-Ishant Sharma

CricketJun 11, 2021, 5:14 PM IST

ಇಶಾಂತ್ ಬದಲಿಗೆ ಸಿರಾಜ್ ಟೆಸ್ಟ್‌ ಚಾಂಪಿಯನ್‌ಶಿಪ್ ಫೈನಲ್ ಆಡಲಿ ಎಂದ ಭಜ್ಜಿ..!

ಇಶಾಂತ್ ಶರ್ಮಾ ಅವರೊಬ್ಬ ಅದ್ಭುತ ಬೌಲರ್, ಆದರೆ ಈ ಫೈನಲ್‌ ಪಂದ್ಯಕ್ಕೆ ನನ್ನ ಆಯ್ಕೆ ಮೊಹಮ್ಮದ್ ಸಿರಾಜ್. ಯಾಕೆಂದರೆ ಮೊಹಮ್ಮದ್ ಸಿರಾಜ್‌ ಕಳೆದೆರಡು ವರ್ಷಗಳಲ್ಲಿ ಸಾಕಷ್ಟು ಸುಧಾರಣೆಯನ್ನು ಕಂಡಿದ್ದಾರೆ ಎಂದು ಭಜ್ಜಿ ಹೇಳಿದ್ದಾರೆ.

New Zealand Cricket

CricketJun 9, 2021, 4:35 PM IST

ಇಂಗ್ಲೆಂಡ್ ಎದುರಿನ ಎರಡನೇ ಟೆಸ್ಟ್‌ಗೆ ಕಿವೀಸ್‌ ಪ್ರಮುಖ ಬೌಲರ್‌ಗಳಿಗೆ ವಿಶ್ರಾಂತಿ..!

ಈಗಾಗಲೇ ನ್ಯೂಜಿಲೆಂಡ್ ತಂಡವು ಫಿಟ್ನೆಸ್ ಸಮಸ್ಯೆಯನ್ನು ಎದುರಿಸುತ್ತಿದೆ. ನಾಯಕ ಕೇನ್ ವಿಲಿಯಮ್ಸನ್‌ ಗಾಯದ ಭೀತಿ ಎದುರಿಸುತ್ತಿದ್ದಾರೆ. ಇನ್ನು ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ ಎರಡನೇ ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದಾರೆ. ಸ್ಯಾಂಟ್ನರ್ ಕೈಬೆರಳಿನ ಗಾಯಕ್ಕೆ ಒಳಗಾಗಿದ್ದಾರೆ. ಇನ್ನು ನಾಯಕ ವಿಲಿಯಮ್ಸನ್‌ ಮೊಣಕೈ ನೋವು ಅನುಭವಿಸುತ್ತಿದ್ದಾರೆ.

Dom Bess

CricketJun 8, 2021, 4:16 PM IST

ಕಿವೀಸ್ ಎದುರಿನ 2ನೇ ಟೆಸ್ಟ್‌ಗೆ ಇಂಗ್ಲೆಂಡ್ ತಂಡ ಕೂಡಿಕೊಂಡ ಡಾಮ್ ಬೆಸ್

ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್‌ ನಡುವೆ ಲಾರ್ಡ್ಸ್‌ನಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯ ನೀರಸ ಡ್ರಾನಲ್ಲಿ ಅಂತ್ಯವಾಗಿತ್ತು. ಹೀಗಾಗಿ ಎರಡು ಟೆಸ್ಟ್ ಪಂದ್ಯಗಳ ಸರಣಿಯ ಎರಡನೆ ಟೆಸ್ಟ್‌ ಪಂದ್ಯದಲ್ಲಿ ಯಾವ ತಂಡದ ಕೈ ಮೇಲಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

Trent Boult

CricketJun 7, 2021, 4:11 PM IST

ಟ್ರೆಂಟ್ ಬೌಲ್ಟ್ 2ನೇ ಟೆಸ್ಟ್‌ಗೆ ತಂಡಕೂಡಿಕೊಳ್ಳಲಿದ್ದಾರೆ: ಕಿವೀಸ್ ಕೋಚ್ ಸ್ಟೆಡ್

ಎರಡನೇ ಟೆಸ್ಟ್‌ ಪಂದ್ಯಕ್ಕೆ ತಂಡದಲ್ಲಿ ಕೆಲವೊಂದು ಬದಲಾವಣೆಗಳಾಗುವ ಸಾಧ್ಯತೆಯಿದೆ ಎಂದು ಸ್ಟೆಡ್ ಸುಳಿವು ನೀಡಿದ್ದಾರೆ. ಬ್ರಿಟೀಷ್ ಸರ್ಕಾರವು ತನ್ನ ಕ್ವಾರಂಟೈನ್‌ ನಿಯಮಾವಳಿಗಳನ್ನು ಕೊಂಚ ಸಡಿಲಗೊಳಿಸಿದೆ. ಹೀಗಾಗಿ ಟ್ರೆಂಟ್ ಬೌಲ್ಟ್ ನಾವು ಅಂದುಕೊಂಡಿದ್ದಕ್ಕಿಂತ ಮೂರ್ನಾಲ್ಕು ದಿನ ಮುಂಚಿತವಾಗಿಯೇ ಐಸೋಲೇಷನ್‌ನಿಂದ ಹೊರಬರುವ ಸಾಧ್ಯತೆಯಿದೆ ಎಂದು ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಕೋಚ್ ತಿಳಿಸಿದ್ದಾರೆ.

New Zealand Cricket

CricketJun 7, 2021, 1:40 PM IST

ಇಂಗ್ಲೆಂಡ್-ಕಿವೀಸ್ ಮೊದಲ ಟೆಸ್ಟ್‌ ಡ್ರಾನಲ್ಲಿ ಅಂತ್ಯ

ಒಟ್ಟು 273 ರನ್‌ಗಳ ಗುರಿ ಬೆನ್ನತ್ತಿದ ಆತಿಥೇಯ ಇಂಗ್ಲೆಂಡ್ ಕ್ರಿಕೆಟ್‌ ತಂಡವು ಐದನೇ ದಿನದಾಟದಂತ್ಯದ ವೇಳೆಗೆ 3 ವಿಕೆಟ್ ಕಳೆದುಕೊಂಡು 170 ಗಳಿಸಲಷ್ಟೇ ಶಕ್ತವಾಯಿತು. ಮಳೆಯಿಂದಾಗಿ ಸಂಪೂರ್ಣ ಒಂದು ದಿನದಾಟ ರದ್ದಾಗಿದ್ದರಿಂದ ಪಂದ್ಯದಲ್ಲಿ ಸ್ಪಷ್ಟ ಫಲಿತಾಂಶ ಹೊರಬೀಳಲು ಸಾಧ್ಯವಾಗಲಿಲ್ಲ.

Brett Lee

CricketJun 4, 2021, 8:17 PM IST

ಟೆಸ್ಟ್‌ ಚಾಂಪಿಯನ್‌ಶಿಪ್ ಫೈನಲ್‌: ಕಿವೀಸ್‌ಗೆ ಅನುಕೂಲ ಹೆಚ್ಚಿದೆ ಎಂದ ಬ್ರೆಟ್ ಲೀ

ಒಂದು ಕಡೆ ನ್ಯೂಜಿಲೆಂಡ್ ತಂಡವು ಇಂಗ್ಲೆಂಡ್‌ ವಿರುದ್ದ ಎರಡು ಪಂದ್ಯಗಳ ಟೆಸ್ಟ್‌ ಸರಣಿಯ ಪೈಕಿ ಮೊದಲ ಪಂದ್ಯವನ್ನು ಆಡುತ್ತಿದೆ. ಮತ್ತೊಂದೆಡೆ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಸದ್ಯ ಇಂಗ್ಲೆಂಡ್‌ಗೆ ಬಂದಿಳಿದಿದ್ದು, ಕಠಿಣ ಕ್ವಾರಂಟೈನ್‌ಗೆ ಒಳಗಾಗಿದೆ.

Devon Conway

CricketJun 4, 2021, 9:57 AM IST

ಲಾರ್ಡ್ಸ್‌ನಲ್ಲಿ ಗಂಗೂಲಿ ದಾಖಲೆ ಮುರಿದ ಡೆವೊನ್ ಕಾನ್‌ವೇ..!

ಈ ಮೊದಲು 1996ರಲ್ಲಿ ಭಾರತದ ಮಾಜಿ ನಾಯಕ ಸೌರವ್‌ ಗಂಗೂಲಿ ತಮ್ಮ ಪಾದಾರ್ಪಣಾ ಪಂದ್ಯವನ್ನು ಲಾರ್ಡ್ಸ್‌ನಲ್ಲಿ ಆಡಿ 131 ರನ್‌ ಗಳಿಸಿದ್ದರು. ಇದು ಲಾರ್ಡ್ಸ್‌ ಮೈದಾನದಲ್ಲಿ ಪಾದಾರ್ಪಣೆ ಮಾಡಿದ ಆಟಗಾರ ಬಾರಿಸಿದ ವೈಯುಕ್ತಿಕ ಗರಿಷ್ಠ ಸ್ಕೋರ್ ಎನಿಸಿತ್ತು.