Netravathi River  

(Search results - 6)
 • netravati Bridge

  Karnataka Districts16, Feb 2020, 11:05 AM IST

  ನೇತ್ರಾವತಿಗೆ ಮತ್ತೆರಡು ಬಲಿ: ಮಗುವಿನೊಂದಿಗೆ ನದಿಗೆ ಹಾರಿದ ತಂದೆ

  ಮಂಗಳೂರಿನ ನೇತ್ರಾವತಿ ಸೇತುವೆಯಲ್ಲಿ ಆತ್ಮಹತ್ಯಾ ಪ್ರಕರಣಗಳು ನಡೆಯುತ್ತಲೇ ಇವೆ. ಕೆಫೆ ಕಾಫೀ ಡೇ ಮಾಲೀಕ ಸಿದ್ಧಾರ್ಥ್ ಹೆಗ್ಡೆ ಆತ್ಮಹತ್ಯೆ ಮಾಡಿದ ಸೇತುವೆಯಲ್ಲೇ ವ್ಯಕ್ತಿಯೊಬ್ಬರು ಆರು ವರ್ಷದ ಮಗುವಿನ ಜೊತೆಗೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

 • Netravathi River

  Karnataka Districts8, Jan 2020, 2:25 PM IST

  ನೇತ್ರಾವತಿಗೆ ಹಾರಿ ಆತ್ಮಹತ್ಯೆಗೆ ಯತ್ನ: ಒಂದೇ ದಿನ 2 ಬಾರಿ ರಕ್ಷಣೆ

  ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಘಟನೆ ನಡೆಯುತ್ತಲೇ ಇದೆ. ಸೇತುವೆಗೆ ತಡೆಗೋಡೆ ನಿರ್ಮಿಸುವ ಬಗ್ಗೆ ಚಿಂತಿಸಿದ್ದರೂ ಈವರೆಗೂ ಕೆಲಸ ನಡೆದಿಲ್ಲ. ಇದೀಗ ವ್ಯಕ್ತಿಯೊಬ್ಬ ಒಂದೇ ದಿನದಲ್ಲಿ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

 • Netravati

  Karnataka Districts10, Aug 2019, 3:04 PM IST

  ಸಂಗಮವಾಯ್ತು ನೇತ್ರಾವತಿ-ಕುಮಾರಧಾರ, ಕಣ್ತುಂಬಿಕೊಳ್ಳಲು ಸೇರಿದ ಜನ ಸಾಗರ

  ನೇತ್ರಾವತಿ ಹಾಗೂ ಕುಮಾರಧಾರಾ ನದಿ ಸಂಗಮವಾಗಿದ್ದು, ಸಮಾನಾಂತರವಾಗಿ ಉಕ್ಕಿ ಹರಿದಿದೆ. ಶುಕ್ರವಾರ ಸಂಜೆ 7 ಗಂಟೆ ಸುಮಾರಿಗೆ ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳೆರಡೂ ಸಮಾನಾಂತರವಾಗಿ ಉಕ್ಕಿ ಹರಿದು ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ದೇವಳದ ಎದುರುಗಡೆ ಸಮಾಗಮಗೊಂಡಿತು. ನಂತರ ಗಂಗಾ ಪೂಜೆ ನಡೆಯಿತು.

 • Nethravathi

  Karnataka Districts8, Aug 2019, 11:05 AM IST

  ಉಕ್ಕಿ ಹರಿಯುತ್ತಿದೆ ನೇತ್ರಾವತಿ, ಕುಮಾರಧಾರ: ಪ್ರವಾಹದ ಆತಂಕ

  ಕರಾವಳಿಯಾದ್ಯಂತ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಕುಮಾರಧಾರಾ ಮತ್ತು ನೇತ್ರಾವತಿ ನದಿ ಉಕ್ಕಿ ಹರಿಯುತ್ತಿದೆ. ಸುಬ್ರಹ್ಮಣ್ಯ ಕುಲ್ಕುಂದದ ಪರಿಶಿಷ್ಟ ಕಾಲನಿಗೆ ಕುಮಾರಧಾರಾ ನದಿ ನೀರು ನುಗ್ಗಿದ್ದು ನಾಲ್ಕು ಮನೆಗಳಿಗೆ ತೊಂದರೆಯಾಗಿದೆ. ಒಂದು ಮನೆ ಜಲಾವೃತವಾಗಿದ್ದು, ಇನ್ನುಳಿದ ಮನೆಗಳೂ ಜಲಾವೃತವಾಗುವ ಲಕ್ಷಣಗಳು ಗೋಚರಿಸಲಾರಂಭಿಸಿದೆ.

 • Netravathi River

  Karnataka Districts7, Aug 2019, 2:29 PM IST

  ನೇತ್ರಾವತಿಯಲ್ಲಿ ನೀರಿನ ಮಟ್ಟ ಏರಿಕೆ, ದ.ಕದಲ್ಲಿ ಹೈ ಅಲರ್ಟ್‌

  ಕರಾವಳಿಯಲ್ಲಿ ಮಳೆ ಮುಂದುವರಿದಿದ್ದು ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಏರುತ್ತಲೇ ಇದೆ. ನೆರೆ ಭೀತಿಯಿರುವುರಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಹಾಗೂ ಬಂಟ್ವಾಳ ತಾಲೂಕಿನ ಎಲ್ಲ ಅಧಿಕಾರಿಗಳು ಹೈ ಅಲರ್ಟ್‌ ಅಗಿರುವಂತೆ ಬಂಟ್ವಾಳ ಶಾಸಕ ರಾಜೇಶ್‌ ನಾಯ್ಕ್ ಉಳಿಪ್ಪಾಡಿಗುತ್ತು ತಿಳಿಸಿದ್ದಾರೆ.

 • undefined

  Karnataka Districts18, May 2019, 11:42 AM IST

  ಧರ್ಮಸ್ಥಳದ ಅನ್ನದಾಸೋಹಕ್ಕೂ ತಟ್ಟಿದೆ ಬರದ ಬಿಸಿ

  ಧರ್ಮಸ್ಥಳದಲ್ಲಿ ನೀರಿನ ಕೊರತೆ ಹೆಚ್ಚಿನ ಪ್ರಮಾಣದಲ್ಲಿ ಕಾಡುತ್ತಿದೆ. ನೇತ್ರಾವತಿ ಬತ್ತಿದ ಪರಿಣಾಮ ಅನ್ನದಾಸೋಹಕ್ಕೂ ಸಮಸ್ಯೆ ಎದುರಾಗಿದೆ.