Navarathri  

(Search results - 18)
 • Ayudha Pooje
  Video Icon

  Entertainment8, Oct 2019, 5:36 PM

  ಸ್ಯಾಂಡಲ್ ವುಡ್ ಸ್ಟಾರ್ ಗಳ ಮನೆಯಲ್ಲಿ ದಸರಾ ದರ್ಬಾರ್!

  ಸ್ಯಾಂಡಲ್ ವುಡ್ ಸ್ಟಾರ್ ಗಳು ಅದೆಷ್ಟೇ ಬ್ಯುಸಿ ಆಗಿದ್ದರೂ ತಮ್ಮ ತಮ್ಮ ಮನೆಯಲ್ಲಿ ಆಯುಧ ಪೂಜೆ ಮಾಡಿ ಸಂಭ್ರಮಿಸಿದ್ದಾರೆ. ನಟ ಶಿವರಾಜ್ ಕುಮಾರ್ ತಮ್ಮ ಕಾರ್ ಗಳಿಗೆ ಪೂಜೆ ಮಾಡಿದ್ರೆ ಸದ್ಯ ನಟನೆ ಜೊತೆ ನಿರ್ಮಾಣ ಆರಂಭಿಸಿರೋ ಪವರ್ ಸ್ಟಾರ್ ತಂದೆ ತಾಯಿ ಪೋಟೋ ಮುಂದೆ ಕ್ಯಾಮೆರಾ ಇಟ್ಟು ಪೂಜೆ ಮಾಡಿದ್ದಾರೆ. ಇನ್ನು ವಿಜಯ್ ರಾಜ್ ಕುಮಾರ್ ಧೀರೇನ್ ರಾಜ್ ಕುಮಾರ್ ಕೂಡ ತಮ್ಮ ಕಾರ್ ಗಳಿಗೆ ಪೂಜೆ ಮಾಡಿ ಸಂಭ್ರಮಿಸಿದ್ರು. ಇನ್ನು ರಾಕಿಂಗ್ ಸ್ಟಾರ್ ಯಶ್ ಮನೆಯಲ್ಲಿಯೂ ಆಯುಧ ಪೂಜೆ ಜೋರಾಗಿದೆ. ಅದಷ್ಟೇ ಅಲ್ಲದೆ ಯಶ್ ಮನೆಗೆ ಹೊಸ ಆಯುಧ ಪೂಜೆ ಸಂದರ್ಭದಲ್ಲೇ ಹೊಸ ಕಾರ್ ಕೂಡ ಬಂದಿದೆ. ಇನ್ನು ರಿಯಲ್ ಸ್ಟಾರ್ ಉಪೇಂದ್ರ ಮನೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಎಲ್ಲಾ ವಾಹನಗಳಿಗೆ ಉಪ್ಪಿ ಕುಟುಂಬದ ಜೊತೆ ಸೇರಿ ಪೂಜೆ ಸಲ್ಲಿಸಿದ್ದಾರೆ.

 • Dasara- Shivanna

  Sandalwood8, Oct 2019, 12:35 PM

  ಅಮಿತಾಬ್ ಅಣ್ಣನ ಜೊತೆ ನವರಾತ್ರಿ ಆಚರಿಸಿದ ಶಿವಣ್ಣ!

  ದೇಶದಾದ್ಯಂತ ನವರಾತ್ರಿ ಸಂಭ್ರಮ ಮನೆ ಮಾಡಿದೆ. ಎಲ್ಲರ ಮನೆಯಲ್ಲಿ ದೇವಿಯ ಆರಾಧನೆ, ಪೂಜೆ ಜೋರಾಗಿ ನಡೆಯುತ್ತಿದೆ. ಮೈಸೂರಿನಲ್ಲಿ ದಸರಾ ಸಂಭ್ರಮ ಕಳೆಗಟ್ಟಿದೆ. ಸ್ಯಾಂಡಲ್ ವುಡ್ ನಲ್ಲೂ ಸಂಭ್ರಮ ಭರ್ಜರಿಯಾಗಿಯೇ ಇದೆ.

 • sweet

  Food7, Oct 2019, 4:46 PM

  ನವರಾತ್ರಿ ಹಬ್ಬದಲ್ಲಿ ರುಚಿ ನೋಡಲೇಬೇಕಾದ ತಿಂಡಿಗಳ ರೆಸಿಪಿ

  ನವರಾತ್ರಿ ಹಬ್ಬದಲ್ಲಿ ಏನೇನು ತಿಂಡಿ ಮಾಡಬೇಕು ಎಂದು ಯೋಚಿಸುತ್ತಿದ್ದರೆ ಇಲ್ಲಿ ಒಂದು ಪಟ್ಟಿ ಮತ್ತು ರೆಸಿಪಿ ಇದೆ. ಹಬ್ಬ ರುಚಿಕರವಾಗಿರಲಿ. ಹಬ್ಬದ ರಜೆಯಲ್ಲಿ ಯಾರು ಅಡುಗೆ ಮಾಡ್ತಾರೆ ಅಂತ ಗೊಣಗಬೇಡಿ. ಮನೆಯವರೆಲ್ಲ ಕೂಡಿ ಅಡುಗೆ ಮಾಡಿ ಉಣ್ಣೋ ಮಜಾನೇ ಬೇರೆ ಹಬ್ಬವನ್ನು ಸಂಭ್ರಮಿಸೋಣ. 

 • Cooking

  Karnataka Districts5, Oct 2019, 8:27 AM

  ಮೈಸೂರು: ಬೆಂಕಿ ಇಲ್ಲದೆ ರುಚಿಕರ ಅಡುಗೆ ಮಾಡಿದ ಅತ್ತೆ, ಸೊಸೆ..!

  ಮೈಸೂರು ದಸರಾ ಪ್ರಯುಕ್ತ ಏರ್ಪಡಿಸಾಗಿದ್ದ ಕುಕ್ಕಿಂಗ್ ವಿತೌಟ್ ಫೈರ್ ಸ್ಪರ್ಧೆ ಮೋಜಿನಿಂದ ನಡೆಯಿತು. ಬೆಂಕಿ ಇಲ್ಲದೆ, ಅತ್ಯಂತ ರುಚಿಕರ ಮತ್ತು ಸ್ವಾದಿಷ್ಟ ಅಡುಗೆ ತಯಾರಿಸಬಹುದು ಎಂದು ಅತ್ತೆ, ಸೊಸೆಯಂದಿರು ತೋರಿಸಿಕೊಟ್ಟರು

 • cooking on gas

  Karnataka Districts2, Oct 2019, 8:54 AM

  ಮೈಸೂರು ದಸರಾದಲ್ಲಿ ದಂಪತಿಗಳಿಂದ ಪಾಕೋತ್ಸವ

  ಮೈಸೂರು ದಸರಾ ಪ್ರಯುಕ್ತ ಆಯೋಜಿಸಲಾದ ದಂಪತಿಗಳ ಅಡುಗೆ ಸ್ಪರ್ಧೆಯಲ್ಲಿ ಬಹಳಷ್ಟು ಜೋಡಿಗಳು ಅಡುಗೆ ಮಾಡಿ ತಮ್ಮ ಪಾಕ ಪ್ರಾವೀಣ್ಯತೆಯನ್ನು ತೋರಿಸಿದ್ರು. ಪತಿ ಹದವಾಗಿ ಹಿಟ್ಟು ಕಲೆಸಿಕೊಟ್ಟರೆ ಪತ್ನಿ ನಯವಾಗಿ ತಟ್ಟಿ, ಗರಿಗರಿಯಾಗಿ ಬೇಯಿಸಿದರು.

 • Mysore Dasara

  Karnataka Districts1, Oct 2019, 3:20 PM

  ದಸರಾ ಗೋಲ್ಡ್ ಕಾರ್ಡ್ ಬಿಡುಗಡೆ, ಬುಕ್ ಮೈ ಶೋನಲ್ಲೂ ಬುಕ್ಕಿಂಗ್

  ಮೈಸೂರು ದಸರಾ ಪ್ರಯುಕ್ತ ಪ್ರವಾಸಿಗರಿಗಾಗಿ ಗೋಲ್ಡನ್ ಕಾಡ್‌ ಬಿಡುಗಡೆ ಮಾಡಲಾಗಿದೆ. 2000 ಗೋಲ್ಡನ್ ಕಾರ್ಡ್ ಬಿಡುಗಡೆ ಮಾಡಲಾಗಿದ್ದು, ಒಂದು ಕಾರ್ಡಿನ ಬೆಲೆ 4000 ರುಪಾಯಿ ಇರಲಿದೆ.

 • Mysuru dasara

  News1, Oct 2019, 1:26 PM

  ಸದಾ ಸ್ಮರಣೀಯ ದಸರಾ ಸಿರಿ ಪರಂಪರೆಯನ್ನು ನೆನೆದ ಸಿಎಂ ಯಡಿಯೂರಪ್ಪ

  ‘ನವರಾತ್ರಿ’ ಎಂದರೆ ಸಂಸ್ಕೃತದಲ್ಲಿ ಒಂಭತ್ತು ರಾತ್ರಿಗಳು ಎಂದರ್ಥ. ಈ ಒಂಭತ್ತು ರಾತ್ರಿ ಮತ್ತು ಹತ್ತು ದಿನಗಳಲ್ಲಿ ದೇವಿಯ ಒಂಭತ್ತು ರೂಪಗಳನ್ನು ಪೂಜಿಸಲಾಗುತ್ತದೆ. 10ನೇ ದಿನವನ್ನು ಸಾಮಾನ್ಯವಾಗಿ ವಿಜಯದಶಮಿ ಎಂದು ಕರೆಯಲಾಗುತ್ತದೆ. ದಂತಕಥೆಯ ಪ್ರಕಾರ, ವಿಜಯದಶಮಿ ದಿನದಂದು ದುರ್ಗೆಯು ಮಹಿಷಾಸುರ ಎಂಬ ರಾಕ್ಷಸನ ಸಂಹಾರ ಮಾಡಿ ಮಹಿಷಾಸುರಮರ್ದಿನಿ ಎಂದು ನಾಮಾಂಕಿತಳಾದಳು. ಮಹಿಷಾಸುರನ ಹೆಸರಿನಿಂದ ಮೈಸೂರು ನಗರ ತನ್ನ ಹೆಸರನ್ನು ಪಡೆದಿದೆ.

 • Kori Rotti

  Karnataka Districts30, Sep 2019, 12:17 PM

  ದಸರಾ ಆಹಾರ ಮೇಳದಲ್ಲಿ 90ಕ್ಕೂ ಹೆಚ್ಚು ಮಳಿಗೆ..! ಬಾಯಲ್ಲಿ ನೀರೂರಿಸುವಂತಿದೆ ಮೆನು..!

  ಮೈಸೂರು ಹೆಸರನ್ನು ಖ್ಯಾತಿಗೊಳಿಸಿರುವ ಮೈಸೂರು ವಿಳ್ಯದೆಲೆ, ಮಲ್ನಾಡ್‌ ಅಡಿಕೆ, ಮೈಸೂರು ಪಾಕ್‌ ಹಾಗೂ ನಂಜನಗೂಡು ರಸಬಾಳೆ ಒಳಗೊಂಡ ವಿಶೇಷ ಮಳಿಗೆಯು ಜನರನ್ನು ತನ್ನತ್ತ ಸೆಳೆಯುತ್ತಿದೆ. ಹಸುಗೂಸಿಗೆ ಹಾಲುಣಿಸಲು ಈ ಬಾರಿ ಪ್ರತ್ಯೇಕ ಟೆಂಟ್‌ ಹಾಕಲಾಗಿದೆ. ಮಗುವಿಗೆ ಹಾಲುಣಿಸುವಿಕೆ ಕೇಂದ್ರ ತೆರೆಯಲಾಗಿದೆ. ಇದು ಈ ಬಾರಿಯ ಹೊಸ ವ್ಯವಸ್ಥೆಯಾಗಿದೆ.

 • BSY

  Karnataka Districts30, Sep 2019, 11:46 AM

  ಮೈಸೂರು ದಸರಾ ವಸ್ತುಪ್ರದರ್ಶನ ಖಾಲಿ ಮಳಿಗೆ ಉದ್ಘಾಟಿಸಿದ ಸಿಎಂ

  ಮೈಸೂರಿನಲ್ಲಿ ದಸರಾ ವಸ್ತುಪ್ರದರ್ಶನ ಮಳಿಗೆಗಳನ್ನು ಸಿಎಂ ಬಿ. ಎಸ್. ಯಡಿಯೂರಪ್ಪ ಅವರು ಉದ್ಘಾಟಿಸಿದರು. ಆದರೆ ಮಳಿಗೆಗಳೆಲ್ಲವೂ ಖಾಲಿ ಇತ್ತು. ವಸ್ತುಪ್ರದರ್ಶನ ನಡೆಯಬೇಕಾಗಿರುವ ಸ್ಥಳದಲ್ಲಿ ಸಿಎಂ ಅವರು ಖಾಲಿ ಮಳಿಗೆಗಳನ್ನೇ ಉದ್ಘಾಟಿಸಿದರು.

 • Mysore Dasara
  Video Icon

  NEWS30, Sep 2019, 10:57 AM

  ಮೈಸೂರಿನಲ್ಲಿ ದಸರಾ ಕಳೆ; ನಾರಿಯರಿಗಾಗಿ ರಂಗೋಲಿ ಸ್ಪರ್ಧೆ

  ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಸಂಭ್ರಮ ಕಳೆ ಕಟ್ಟಿದೆ. ರಂಗೋಲಿ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು ರಾಜ್ಯದ ವಿವಿಧೆಡೆಯಿಂದ 74 ಸ್ಪರ್ಧಿಗಳು ಮಾತ್ರ ಭಾಗವಹಿಸಿದ್ದರು. ಅಂದ- ಚಂದದ ರಂಗೋಲಿಗಳು ನೋಡುಗರ ಗಮನ ಸೆಳೆದವು. ರಂಗೋಲಿ ಸ್ಪರ್ಧೆ ಸಂಭ್ರಮ ಹೀಗಿತ್ತು ನೋಡಿ. 

 • Kung Fu

  Karnataka Districts30, Sep 2019, 9:30 AM

  ಮಡಿಕೇರಿ ದಸರೆಯಲ್ಲಿ ‘ಕುಂಗ್‌ ಫು’ ಸಮರಾಂಗಣ

  ಮಡಿಕೇರಿ ಜನೋತ್ಸವ ದಸರಾದಲ್ಲಿ ಈ ಬಾರಿ ಕುಂಗ್ ಫೈಟಿಂಗ್ ಜನರನ್ನು ರಂಜಿಸಿತು. ಮಡಿಕೇರಿ ದಸರಾಕ್ಕೆ ಭರ್ಜರಿ ಸಿದ್ಧತೆಗಳು ನಡೆಯುತ್ತಿರುವಂತೆಯೇ, ನವರಾತ್ರಿ ಉತ್ಸವ ಅಂಗವಾಗಿ ನಗರದಲ್ಲಿ ಕುಂಗ್‌ ಫು (ವುಶು) ಸಮರ ಕಲೆ ಪ್ರದರ್ಶನ, ನೆರೆದವರ ಮೈರೋಮಾಂಚನಗೊಳಿಸಿತು.

 • Mangalore Dasara

  Karnataka Districts30, Sep 2019, 8:46 AM

  ಮಂಗಳೂರು ದಸರಾಕ್ಕೆ ವೈಭವದ ಚಾಲನೆ

  ಸಂಭ್ರಮದ ಮಂಗಳೂರು ದಸರಾ ಆಚರಣೆಗೆ ಭಾನುವಾರ ಚಾಲನೆ ಸಿಕ್ಕಿದೆ. ದೇಶ- ವಿದೇಶಗಳ ಲಕ್ಷಾಂತರ ಮಂದಿ ಪ್ರವಾಸಿಗರನ್ನು ಆಕರ್ಷಿಸುವ ಮಂಗಳೂರು ದಸರಾಕ್ಕೆ ಮುನ್ನುಡಿಯಾಗಿ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಾಲಯದಲ್ಲಿ ಶ್ರೀ ಮಹಾಗಣಪತಿ, ನವದುರ್ಗೆಯರ ಸಹಿತ ಶ್ರೀ ಶಾರದಾ ಮಾತೆಯ ವಿಗ್ರಹ ಪ್ರತಿಷ್ಠೆ ಭಾನುವಾರ ವೈಭವದಿಂದ ನಡೆಯಿತು. ಬೆಳಗ್ಗಿನಿಂದ ದೇವಾಲಯಕ್ಕೆ ಭಕ್ತರ ದಂಡೇ ಆಗಮಿಸಿದ್ದು, ಸಹಸ್ರಾರು ಮಂದಿ ಈ ಸಂಭ್ರಮದ ಗಳಿಗೆಯಲ್ಲಿ ಭಕ್ತಿಯಿಂದ ಪಾಲ್ಗೊಂಡಿದ್ದರು.

 • Video Icon

  Sandalwood18, Oct 2018, 1:47 PM

  ತುಪ್ಪದ ಹುಡುಗಿ ಮನೆಯಲ್ಲಿ ದುರ್ಗಾ ಪೂಜೆ ಸಂಭ್ರಮ

  ನಟಿ ರಾಗಿಣಿ ಮನೆಯಲ್ಲಿ ದುರ್ಗಾ ಪೂಜೆಯನ್ನು ಆಚರಿಸಲಾಗುತ್ತದೆ. ರಾಗಿಣಿ ಕೂಡಾ 9 ದಿನ ಉಪವಾಸ ಮಾಡಿದ್ದಾರೆ. ಹೇಗಿತ್ತು ಆಚರಣೆ ನೋಡಿ 

 • Sanjana
  Video Icon

  Sandalwood18, Oct 2018, 11:35 AM

  ನವರಾತ್ರಿ ಶುಭ ಕೋರಿದ ನಟಿ ಸಂಜನಾ

  ನಾಡಿದಾದ್ಯಂತ ನವರಾತ್ರಿ ಸಡಗರ, ಸಂಭ್ರಮ ಮನೆ ಮಾಡಿದೆ. ನಟಿ ಸಂಜನಾ ಅಭಿಮಾನಿಗಳಿಗೆ ಹಬ್ಬದ ಶುಭ ಕೋರಿದ್ದಾರೆ.   

 • Video Icon

  Sandalwood18, Oct 2018, 11:10 AM

  ದಸರಾ ಹಬ್ಬಕ್ಕೆ ಶುಭ ಕೋರಿದ ಉಪೇಂದ್ರ

  ನಾಡಿನದ್ಯಂತ ನವರಾತ್ರಿ ಸಂಭ್ರಮ ಮನೆ ಮಾಡಿದೆ. ಸಡಗರ, ಸಂಭ್ರಮದಿಂದ ಜನರು ದೇವಿಯನ್ನು ಆರಾಧಿಸುತ್ತಿದ್ದಾರೆ. ನಟ ಉಪೇಂದ್ರ ದಸರಾ ಹಬ್ಬಕ್ಕೆ ಶುಭ ಕೋರಿದ್ದಾರೆ.