Narayan Gowda  

(Search results - 38)
 • kc narayan gowda

  Karnataka Districts10, Dec 2019, 9:33 AM IST

  ಕೆಸಿಎನ್‌ ಹ್ಯಾಟ್ರಿಕ್‌ ಗೆಲವು; ಕೆಬಿಸಿ ಹ್ಯಾಟ್ರಿಕ್‌ ಸೋಲು

  ಅನರ್ಹ ಹಣೆಪಟ್ಟಿ ಇಟ್ಟುಕೊಂಡಿದ್ದ ಕೆ.ಸಿ. ನಾರಾಯಣ ಗೌಡ ಸತತ ಮೂರನೇ ಬಾರಿಗೆ ಗೆದ್ದು, ಹ್ಯಾಟ್ರಿಕ್‌ ಸಾಧಿಸಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಕೆ.ಬಿ. ಚಂದ್ರಶೇಖರ್‌ ಕಳೆದೆರೆಡು ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು. ಅವರು ಉಪಚುನಾವಣೆಯಲ್ಲೂ ಸೋಲನುಭವಿಸಿ ಹ್ಯಾಟ್ರಿಕ್ ಸೋಲನುಭವಿಸಿದ್ದಾರೆ.

 • sumalatha bjp

  Karnataka Districts10, Dec 2019, 8:35 AM IST

  ಸುಮಲತಾ ಬೆಂಬಲ ಇಲ್ಲದೇ ಬಿಜೆಪಿ ಗೆಲುವು..!

  ಮಂಡ್ಯ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳೂ ಸುಮಲತಾ ಅವರ ಬೆಂಬಲಕ್ಕಾಗಿ ಗೋಗರೆದಿದ್ದವು. ಆದರೆ ಸಂಸದೆ ಸುಮಲತಾ ತಟಸ್ಥವಾಗಿ ಉಳಿದಿದ್ದರು. ಇದೀಗ ಸುಮಲತಾ ಬೆಂಬಲ ಇಲ್ಲದೆ ಗೆಲುವು ಸಾಧಿಸಿದ ಹೆಗ್ಗಳಿಕೆಯೂ ಬಿಜೆಪಿ ಪಾಲಾಗಿದೆ.

 • Ashwathnarayan

  Karnataka Districts9, Dec 2019, 2:18 PM IST

  ಮಂಡ್ಯದಲ್ಲಿ BJP ಖಾತೆ ತೆರೆದದ್ದೇ ನಮ್ಮ ಗೆಲುವು: ಡಿಸಿಎಂ

  ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಖಾತೆ ತೆರೆದಿರುವುದೇ ದೊಡ್ಡ ಗೆಲುವು ಎಂದು ಡಿಸಿಎಂ ಡಾ. ಸಿಎನ್‌ ಅಶ್ವತ್ಥನಾರಾಯಣ ತಿಳಿಸಿದ್ದಾರೆ. ಮಂಡ್ಯದಲ್ಲಿ ಮಾತನಾಡಿದ ಅವರು ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿಗೆ ಖಾತೆ ತೆರೆಯಲಾಗದು ಎಂಬ ಮಾತನ್ನು ಬಿಜೆಪಿ ಸರ್ಕಾರ ಅಳಿಸಿ ಹಾಕಿದ್ದಾರೆ ಎಂದಿದ್ದಾರೆ.

 • Narayan Gowda

  Karnataka Districts5, Dec 2019, 2:40 PM IST

  100ಕ್ಕೆ 1000 ಪಟ್ಟು ಗೆಲ್ತೀನಿ: ಬಿಜೆಪಿ ಅಭ್ಯರ್ಥಿ ವಿಶ್ವಾಸ

  ರಾಜ್ಯದಲ್ಲಿ 15 ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತಿದ್ದು, ಮಂಡ್ಯದ ಕೆ. ಆರ್. ಪೇಟೆಯಲ್ಲಿ ಬಿಜೆಪಿ ಅಭ್ಯರ್ಥಿ ಕೆ. ಸಿ. ನಾರಾಯಣ ಗೌಡ ಅವರು ಮತ ಚಲಾಯಿಸಿ ಮಾತನಾಡಿದ್ದಾರೆ. ಏನು ಹೇಳಿದ್ದಾರೆ..? ಇಲ್ಲಿದೆ ಓದಿ.

 • Narayan Gowda

  Karnataka Districts4, Dec 2019, 2:32 PM IST

  ಕಾಲ್ನಡಿಗೆ ಮೂಲಕ ಪ್ರಚಾರಕ್ಕಿಳಿದ ಬಿಜೆಪಿ ಅಭ್ಯರ್ಥಿ

  ಮಂಗಳವಾರ ಬಹಿರಂಗ ಚುನಾವಣಾ ಪ್ರಚಾರಕ್ಕೆ ತೆರೆ ಬಿದ್ದಿರುವ ಹಿನ್ನೆಲೆಯಲ್ಲಿ ಮಂಡ್ಯದ ಕೆ. ಆರ್. ಪೇಟೆಯಲ್ಲಿ ಬಿಜೆಪಿ ಅಭ್ಯರ್ಥಿ ನಾರಾಯಣ ಗೌಡ ಕಾಲ್ನಡಿಗೆ ಮೂಲಕ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದ್ದಾರೆ.

 • DK SHIVAKUMAR

  Karnataka Districts3, Dec 2019, 11:38 AM IST

  ಡಿಕೆ ಸಹೋ​ದ​ರ​ರ ವಿರುದ್ಧ ಗಂಭೀರ ಆರೋಪ

  ಡಿಕೆ ಶಿವಕುಮಾರ್ ಹಾಗೂ ಡಿಕೆ ಸುರೇಶ್ ವಿರುದ್ಧ ಗಂಭೀರ ಆರೋಪ ಮಾಡಲಾಗಿದೆ. ಪ್ರಾಮಾಣಿಕರ ಮೇಲೆ ಗೂಂಡಾ ವರ್ತನೆ ಮಾಡುತ್ತಿದ್ದಾರೆ ಎನ್ನಲಾಗಿದೆ. 

 • Karnataka Districts1, Dec 2019, 2:39 PM IST

  ನಾರಾಯಣಗೌಡ ಪರ ತುಪ್ಪದ ಬೆಡಗಿ ರಾಗಿಣಿ ಮತ ಬೇಟೆ

  ಕೆ.ಆರ್.ಪೇಟೆಯಲ್ಲಿ ಸ್ಟಾರ್ ಕ್ಯಾಂಪೇನ್ ಮುಂದುವರಿದಿದೆ. ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಪರ ತುಪ್ಪದ ಬೆಡಗಿ ರಾಗಿಣಿ ಮತ ಬೇಟೆ ನಡೆಸಿದ್ದು, ರಾಗಿಣಿ ನಿನ್ನೆಯಿಂದ ಕೆ.ಆರ್.ಪೇಟೆ ತಾಲೂಕಿನಲ್ಲಿ ಪ್ರಚಾರ ನಡೆಸುತ್ತಿದ್ದಾರೆ.

 • former pm Hd Devegowda alleged to siddaramaiah to unstable Kumaraswamy

  Karnataka Districts30, Nov 2019, 8:09 AM IST

  ಕಾಡಿಬೇಡಿ ಟಿಕೆಟ್‌ ಪಡೆದು ಗೆದ್ದು ಕೈಕೊಟ್ಟ ಅನರ್ಹ ಶಾಸಕ..!

  ರಾಜ್ಯದ 15 ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ 6 ಸ್ಥಾನಗಳಲ್ಲಿ ಗೆಲ್ಲುತ್ತಾರೆ ಎಂದು ಗುಪ್ತಚರ ವರದಿ ಹೇಳಿದೆಯಂತೆ. ಅದಕ್ಕೆ ಸಿಎಂ ಯಡಿಯೂರಪ್ಪ ಗಾಬರಿಯಿಂದ ಹೆಚ್ಚು ಸ್ಥಾನ ಗೆಲ್ಲಲು ನಾಗಾಲೋಟದಲ್ಲಿ ಹೋಗುತ್ತಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್‌ .ಡಿ.ದೇವೇಗೌಡ ಶುಕ್ರವಾರ ವ್ಯಂಗ್ಯವಾಡಿದ್ದಾರೆ.

 • Karnataka Districts29, Nov 2019, 2:37 PM IST

  ನಾರಾಯಣ ಗೌಡ ಮಾತು ಕೇಳಿದ್ರೆ ಹೇಸಿಗೆಯಾಗುತ್ತೆ: ದೇವೇಗೌಡ

  ಕೆ. ಆರ್. ಪೇಟೆ ಚುನಾವಣಾ ಕಣದಲ್ಲಿ ಮಾಜಿ ಪ್ರಧಾನಿ, ಜಡಿಎಸ್ ವರಿಷ್ಠ ದೇವೇಗೌಡ ಪ್ರಚಾರ ನಡೆಸಿದ್ದಾರೆ. ಬಿಜೆಪಿ ಅಭ್ಯರ್ಥಿ ನಾರಾಯಣ ಗೌಡ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ದೇವೇಗೌಡರು ಏನು ಹೇಳಿದ್ದಾರೆ..? ತಿಳಿಯಲು ಈ ಸುದ್ದಿ ಓದಿ.

  i dont want to utter narayan gowda name says deve gowda

 • Narayan Gowda

  Karnataka Districts28, Nov 2019, 12:58 PM IST

  ಸುಳ್ಳು ಹೇಳಿ ಕುತ್ತಿಗೆ ಹಿಸುಕುತ್ತೀರಾ..? ಎಚ್‌ಡಿಕೆಗೆ ನಾರಾಯಣ ಗೌಡ ಟಾಂಗ್

  ಎಚ್‌. ಡಿ. ಕುಮಾರಸ್ವಾಮಿ ನನ್ನ ಕುತ್ತಿಗೆ ಹಿಸುಕಲು ಹೊರಟಿದ್ದಾರೆ. ಅದಕ್ಕಾಗಿ ಅತ್ತಿದ್ದಾರೆ ಎಂದು ಕೆ. ಆರ್. ಪೇಟೆ ಬಿಜೆಪಿ ಅಭ್ಯರ್ಥಿ ಕೆ. ಸಿ. ನಾರಾಯಣ ಗೌಡ ಹೇಳಿದ್ದಾರೆ. ಮಂಡ್ಯದಲ್ಲಿ ಮಾತನಾಡಿದ ಅವರು ಕುಮಾರಸ್ವಾಮಿ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

 • DCTHAMMANNA kc narayan gowda

  Karnataka Districts28, Nov 2019, 12:35 PM IST

  ತಮ್ಮಣ್ಣಗೆ ಕಾಮಾಟಿಪುರ ಗೊತ್ತಿದೆ ಅಂದ್ರೆ ಅವರಿಗೆ ಅನುಭವವಿರಬೇಕು: ನಾರಾಯಣ ಗೌಡ

  ಕೆ. ಸಿ. ನಾರಾಯಣ ಗೌಡ ಚುನಾವಣೆಯಲ್ಲಿ ಗೆದ್ದರೆ ಕೆ. ಆರ್. ಪೇಟೆಯನ್ನು ಕಾಮಾಟಿಪುರ ಮಾಡ್ತಾರೆ ಎಂಬ ಮಾಜಿ ಸಚಿವ ಡಿ. ಸಿ. ತಮ್ಮಣ್ಣ ಹೇಳಿಕೆಗೆ ನಾರಾಯಣ ಗೌಡ ಉತ್ತರಿಸಿದ್ದಾರೆ. ಮಂಡ್ಯದಲ್ಲಿ ಮಾತನಾಡಿದ ಅವರು ಮಾಜಿ ಸಚಿವರಿಗೆ ಟಾಂಗ್ ಕೊಟ್ಟಿದ್ದಾರೆ. ಕೆಸಿಎನ್ ಏನ್ ಹೇಳಿದ್ರು ಎಂದು ತಿಳಿಯಲು ಈ ಸುದ್ದಿ ಓದಿ.

 • Karnataka Districts28, Nov 2019, 8:57 AM IST

  ನಾರಾಯಣ ಗೌಡ್ರ ಪತ್ರ ಓದಿದ ಎಚ್‌ಡಿಕೆ: ಲೆಟರ್‌ನಲ್ಲೇನಿತ್ತು..?

  ಕೆ. ಆರ್. ಪೇಟೆ ಬಿಜೆಪಿ ಅಭ್ಯರ್ಥಿ ಬರೆದಿರುವ ಪತ್ರವನ್ನು ಮಾಜಿ ಸಿಎಂ ಎಚ್‌. ಡಿ. ಕುಮಾರಸ್ವಾಮಿ ಅವರು ಓದಿದ್ದಾರೆ. ಪತ್ರದಲ್ಲೇನಿದೆ..? ಯಾಕೆ ಬರೆದರು..? ಇಲ್ಲಿ ಓದಿ.

 • Narayan Gowda

  Karnataka Districts26, Nov 2019, 2:18 PM IST

  'ಕಣ್ಣೀರ್ ಹಾಕೋ ಸಿಎಂ ಬೇಕಾ, ಕಷ್ಟ ಸುಖ ಕೇಳೋ ಸಿಎಂ ಬೇಕಾ..'?

  ನಿಮ್ಮ ಕಷ್ಟ ಸುಖ ಕೇಳೋ ಸಿಎಂ ಬೇಕಾ,ಕಣ್ಣೀರು ‌ಹಾಕೊ ಸಿಎಂ ಬೇಕಾ ನೀವೇ ನಿರ್ಧಿರಿಸಿ ಎಂದು ಕೆ. ಆರ್. ಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ. ಸಿ. ನಾರಾಯಣ ಗೌಡ ಹೇಳಿದ್ದಾರೆ. ಮಂಡ್ಯದ ಮುರುಕನ‌ಹಳ್ಳಿಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ್ದಾರೆ.

 • BSY

  Karnataka Districts25, Nov 2019, 7:46 AM IST

  ಕೆ. ಆರ್‌. ಪೇಟೆಯಲ್ಲಿ ಸಿಎಂ ಮತಬೇಟೆ, JDS ಪರ ನಿಖಿಲ್ ಪ್ರಚಾರ

  ಕೆ. ಆರ್. ಪೇಟೆ ಉಪಚುನಾವಣೆ ಸಮೀಪಿಸುತ್ತಿದ್ದು, ಸೋಮವಾರ ಮಂಡ್ಯದ ಕೆ. ಆರ್. ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಸಿಎಂ ಬಿ. ಎಸ್. ಯಡಿಯೂರಪ್ಪ ಅವರು ಪ್ರಚಾರ ನಡೆಸಲಿದ್ದಾರೆ. ಜೆಡಿಎಸ್ ಅಭ್ಯರ್ಥಿ ಬಿ. ಎಲ್. ದೇವರಾಜು ಪರ ನಿಖಿಲ್ ಕುಮಾರಸ್ವಾಮಿ ಪ್ರಚಾರ ನಡೆಸಲಿದ್ದಾರೆ.

 • HK kumaraswamy

  Karnataka Districts24, Nov 2019, 12:59 PM IST

  ನಾರಾಯಣ ಗೌಡ, ವಿಜಯೇಂದ್ರ ಕುಂಟೆತ್ತುಗಳು ಎಂದ ಎಚ್‌ಕೆ ಕುಮಾರಸ್ವಾಮಿ

  ವಿಜಯೇಂದ್ರ ಹಾಗೂ ಕೆ. ಸಿ. ನಾರಾಯಣ ಗೌಡ ಜೋಡೆತ್ತುಗಳಲ್ಲ, ಕುಂಟೆತ್ತುಗಳು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ. ಕುಮಾರಸ್ವಾಮಿ ಹೇಳಿದ್ದಾರೆ. ಮಂಡ್ಯದ ಕೆ. ಆರ್. ಪೇಟೆಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಅಭ್ಯರ್ಥಿ ಬಿ.ಎಲ್. ದೇವರಾಜು ಪರ ಮತಬೇಟೆ ನಡೆಸಿದ್ದಾರೆ.