Mundaragi  

(Search results - 18)
 • <p>Gadag </p>

  Karnataka Districts1, Jul 2020, 8:44 AM

  ಮುಂಡರಗಿ: ಹಣ ಕೊಡುವ ವಿಚಾರ, ಟೋಲ್‌ನಾಕಾ ಸಿಬ್ಬಂದಿ ಜೊತೆ ವಾಹನ ಸವಾರರ ಮಾರಾಮಾರಿ

  ಭಾನುವಾರ ಸಂಜೆ ತಾಲೂಕಿನ ಕೊರ್ಲಹಳ್ಳಿ ಬಳಿ ಇರುವ ಟೋಲ್‌ನಾಕಾ ಹತ್ತಿರ ಟೋಲ್‌ಗೆ ಹಣ ಕೊಡುವ ವಿಚಾರವಾಗಿ ಟೋಲ್‌ನಾಕಾ ಸಿಬ್ಬಂದಿ ಹಾಗೂ ವಾಹನ ಸವಾರರ ನಡುವೆ ಎರಡು ಪ್ರತ್ಯೇಕ ಮಾರಾಮಾರಿ ನಡೆದಿದ್ದು, ಈ ಕುರಿತು ಪ್ರಕರಣಗಳು ದಾಖಲಾಗಿವೆ.
   

 • Karnataka Districts27, Jun 2020, 9:12 AM

  ಮಳೆಗಾಲದಲ್ಲೂ ಸುಡು ಸುಡು ಬಿಸಿಲು: ಕೈ ಕೊಟ್ಟ ಮುಂಗಾರು, ಕಂಗಾಲಾದ ರೈತರು!

  ನಿಮ್ಮೂರಾಗ ಮಳಿಯಾಗೈತೇನ್ರಿ, ಇಲ್‌ಬಿಡ್ರಿ. ನಿಮ್‌ ಊರಾಗರ ಆಗೈತೇನ್ರಿ? ನಮ್ಮೂರಾಗೂ ಆಗಿಲ್ಲ ಬಿಡ್ರಿ. ಕೆಟ್‌ ಗಾಳಿ ಹಚ್ಚಿ ಹೊಡಿಯಾಕತೈತಿ. ನೆತ್ತಿ ಸುಡುವಾಂಗ ಉರಿ ಬಿಸಲ್‌ ಐತಿ, ಆದ್ರ ಮಳೆ ಮಾತ್ರ ಇಲ್ಲ. ನಾವ್‌ ನೋಡಿದ್ರ ಕೈಯಾಗಿದ್ದ ರೊಕ್ಕಾ ಖರ್ಚು ಮಾಡಿ ಮಣ್ಣಾಗ ಹಾಕಿ ಕುಂತೀವಿ. ಕಲ್ಲೂ ಹೋತು ಕಲ್ಲಿಗೆ ಹತ್ತಿದ ಬೆಲ್ಲಾನೂ ಹೋತು ಅನ್ನುವಂಗಾಗೈತಿ ನಮ್‌ ಬಾಳ್ವೆ..... ತಾಲೂಕಿನ ಬಹುತೇಕ ಗ್ರಾಮಗಳಲ್ಲಿನ ರೈತರು ಮಾತನಾಡಿಕೊಳ್ಳುತ್ತಿರುವ ರೀತಿ ಇದು.
   

 • <p>Coronavirus</p>

  Karnataka Districts24, Jun 2020, 7:59 AM

  ಕೊರೋನಾ ಕಾಟ: ಮುಂಡರಗಿ ಪೊಲೀಸರಿಗೆ ತಲೆನೋವಾದ ಕೊಡಗಿನ ವ್ಯಕ್ತಿ..!

  ಗದಗ ಜಿಲ್ಲೆಯಲ್ಲಿ 79 ಕೊರೋನಾ ಕೇಸ್‌ಗಳಾಗಿದ್ದರೂ ಮುಂಡರಗಿ ತಾಲೂಕಿನಲ್ಲಿ ಒಂದೇ ಒಂದು ಪ್ರಕರಣಗಳು ಪತ್ತೆಯಾಗಿರಲಿಲ್ಲ. ಆದರೆ ಇದೇ ತಿಂಗಳು 17ರಂದು ಕೊಡಗು ಜಿಲ್ಲೆಯ ಶನಿವಾರ ಸಂತೆಯಿಂದ ವ್ಯಕ್ತಿಯೋರ್ವನು ಖಾಸಗಿ ಕಾರ್ಯನಿಮಿತ್ಯ ಮುಂಡರಗಿ ಪೊಲೀಸ್‌ ಠಾಣೆಗೆ ಬಂದು ಹೋಗಿದ್ದರು. ಆ ವ್ಯಕ್ತಿ ಮುಂಡರಗಿಯಿಂದ ಮರಳಿ ಶನಿವಾರಸಂತೆಗೆ ತೆರಳಿದ ಸಂದರ್ಭದಲ್ಲಿ ಅಲ್ಲಿನ ಆಶಾ ಕಾರ್ಯಕರ್ತೆಯರು ವ್ಯಕ್ತಿಯನ್ನು ತಪಾಸಣೆಗೆ ಒಳಪಡಿಸಿದಾಗ ಅವನಿಗೆ ಕೊರೋನಾ ಧೃಢ ಪಟ್ಟಿರುವುದು ಬೆಳಕಿಗೆ ಬಂದಿದ್ದರಿಂದಾಗಿ ಮುಂಡರಗಿ ಪೊಲೀಸರಿಗೆ ಕೊಡಗಿನ ವ್ಯಕ್ತಿ ತಲೆನೋವಾಗಿ ಪರಿಣಮಿಸಿ, ಆತಂಕ ಹೆಚ್ಚಿಸಿದ್ದಾನೆ.
   

 • <p>Gadag </p>

  Karnataka Districts6, Jun 2020, 9:14 AM

  ನಿಜಗುಣಪ್ರಭು ಸ್ವಾಮೀಜಿಗೆ ಕೊಲೆ ಬೆದರಿಕೆ: ಶ್ರೀಗಳಿಗೆ ಗನ್‌ಮ್ಯಾನ್‌ ಭದ್ರತೆ

  ಇತ್ತೀಚಿನ ದಿನಗಳಲ್ಲಿ ತಮಗೆ ಕೊಲೆ ಬೆದರಿಕೆ, ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ನಿಂದನೆಗಳು ಯಥೇಚ್ಚವಾಗಿ ಬರುತ್ತಿವೆ. ಅದರ ಬಗ್ಗೆ ಬೆಳಗಾವಿ, ಮುಂಡರಗಿ ಸೇರಿದಂತೆ  ರಾಜ್ಯಾಧ್ಯಂತ ವಿವಿಧ ಜಿಲ್ಲೆಗಳಲ್ಲ ಭಕ್ತರ ಸರ್ಕಾರಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ. ಸರ್ಕಾರವೂ ಸಹ ಜವಾಬ್ದಾರಿ ತೆಗೆದುಕೊಂಡಿದೆ. ನನ್ನ ಪರವಾಗಿ ಭಕ್ತರು ಮನವಿ ಮಾಡಿಕೊಂಡಿದ್ದಕ್ಕೆ ಸರ್ಕಾರ ಸ್ಪಂದಿಸಿದೆ ಎಂದು ಮುಂಡರಗಿ ತೋಂಟದಾರ್ಯ ಮಠದ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಹೇಳಿದ್ದಾರೆ. 
   

 • <p>construction</p>

  Karnataka Districts11, May 2020, 8:43 AM

  ಲಾಕ್‌ಡೌನ್‌ ಪರಿಣಾಮ: ಗಗನಕ್ಕೇರಿದ ಸಿಮೆಂಟ್‌ ದರ, ಕಂಗಾಲಾದ ಕಟ್ಟಡ ಕಾರ್ಮಿಕರು

  ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸಿಮೆಂಟ್‌ ಉತ್ಪಾದನೆ ಮತ್ತು ಸಾಗಾಣಿಕೆಯಲ್ಲಿ ತೀವ್ರ ವ್ಯತ್ಯಯವಾಗಿರುವ ಹಿನ್ನೆಲೆಯಲ್ಲಿ ಬೆಲೆಯಲ್ಲಿ ತೀವ್ರ ಏರಿಕೆ ಕಂಡು ಬಂದಿದೆ.
   

 • Karnataka Districts9, May 2020, 8:54 AM

  ಮಹಾಮಾರಿ ಕೊರೋನಾ ಸಂಕಷ್ಟದಲ್ಲೂ ಸಾಲ ವಸೂಲಿಗಿಳಿದ ಬ್ಯಾಂಕುಗಳು!

  ಕೊರೋನಾ ವೈರಸ್‌ ತಡೆಗಟ್ಟಲು ಲಾಕ್‌ಡೌನ್‌ ಜಾರಿಯಾಗಿರುವ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳು 3 ತಿಂಗಳ ಕಾಲ ಯಾವುದೇ ರೀತಿಯ ಸಾಲ ವಸೂಲಾತಿ ಮಾಡಬಾರದು ಎಂದು ಸರ್ಕಾರ ಆದೇಶಿಸಿದ್ದರೂ ಎಕ್ಸಿಸ್‌, ಇಂಡಸ್‌ ಬ್ಯಾಂಕ್‌ ಮತ್ತು ಮುತ್ತೂಟ್‌ ಫೈನ್ಸಾನ್‌ ಪ್ರತಿನಿಧಿಗಳು ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮದಲ್ಲಿ ಸಾಲ ವಸೂಲಿಗಿಳಿದ ಘಟನೆ ಶುಕ್ರವಾರ ನಡೆದಿದೆ.
   

 • petrol

  Karnataka Districts4, May 2020, 9:28 AM

  ಕೊರೋನಾ ಫೈಟರ್‌: ಕೋವಿಡ್‌ ತಡೆಯಲು ವಾಹನಗಳಿಗೆ ಪೆಟ್ರೋಲ್‌ ಹಾಕದ ಬಂಕ್‌ ಮಾಲೀಕ..!

  ಲಾಕ್‌ಡೌನ್‌ ಸಂದರ್ಭದಲ್ಲಿ ಇಲ್ಲಿನ ಇಂಡಿಯನ್‌ ಆಯಿಲ್‌ ಡೀಲರ್‌ ಹೇಮಂತಗೌಡ ಪಾಟೀಲ ಖಾಸಗಿ ವಾಹನಗಳಿಗೆ ಪೆಟ್ರೋಲ್‌ ಹಾಕದಂತೆ ನೋಡಿಕೊಳ್ಳುವ ಮೂಲಕ ಕೊರೋನಾ ಹರಡದಂತೆ ಜಾಗ್ರತಿ ಮೂಡಿಸಿದ್ದಾರೆ. 
   

 • Karnataka Districts22, Apr 2020, 9:10 AM

  ಲಾಕ್‌ಡೌನ್‌: ಇನ್ಮುಂದೆ ವಾರದಲ್ಲಿ 2 ದಿನ ಕಿರಾಣಿ, ಮೂರು ದಿನ ತರಕಾರಿ

  ಗದಗ ಜಿಲ್ಲೆಯಲ್ಲಿ ಕಳೆದ 14 ದಿನಗಳಲ್ಲಿ 4 ಕೊರೋನಾ ಪ್ರಕರಣಗಳು ದೃಢ ಪಟ್ಟಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಮುಂಡರಗಿ ತಾಲೂಕಿನಲ್ಲಿಯೂ ಸಹ ಬುಧವಾರದಿಂದ ದಿನಸಿ ಹಾಗೂ ಕಿರಾಣಿ ಅಂಗಡಿಗಳನ್ನು ವಾರದಲ್ಲಿ 2 ದಿನ, ತರಕಾರಿ ವ್ಯಾಪಾರವನ್ನು ವಾರದಲ್ಲಿ ಮೂರು ದಿನ ಮಾಡಲು ತಾಲೂಕು ಆಡಳಿತ ನಿರ್ಧರಿಸಿದೆ.
   

 • সাবধান, শুধু মশার কামড়ে নয় যৌন সংসর্গেও ছড়ায় ডেঙ্গি
  Video Icon

  Karnataka Districts29, Jan 2020, 3:39 PM

  Big 3 Impact: ಗದಗದ ಡೋಣಿ ಗ್ರಾಮದಲ್ಲಿ ರೋಗಿಗಳ ತಪಾಸಣೆ

  ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡೋಣಿ ಗ್ರಾಮದಲ್ಲಿ ಚಿಕೂನ್‌ ಗುನ್ಯಾ ರೋಗ ಕಾಣಿಸಿಕೊಂಡು ಗ್ರಾಮಸ್ಥರ ತಲೆನೋವಿಗೆ ಕಾರಣವಾಗಿತ್ತು. ಗ್ರಾಮದ ಬಹುತೇಕ ಎಲ್ಲ ಮನೆಗಳಲ್ಲೂ ಒಬ್ಬರಿಂದ ಇಬ್ಬರಿಗೆ ಚಿಕೂನ್‌ ಗುನ್ಯಾ ಕಾಣಿಸಿಕೊಂಡಿತ್ತು. ಆದರೆ, ಇಷ್ಟಲ್ಲಾ ಆದರೂ ಯಾವೊಬ್ಬ ಆರೋಗ್ಯಾಧಿಕಾರಿಗಳು ಬಂದು ಚಿಕಿತ್ಸೆ ನೀಡಿರಲಿಲ್ಲ.
   

 • Siddu
  Video Icon

  state28, Jan 2020, 1:30 PM

  ಭರ್ಜರಿ ಬಾಡೂಟ ಮಾಡಿ ದೇಗುಲ ಉದ್ಘಾಟಿಸಿದ ಸಿದ್ದು; ವ್ಯಕ್ತವಾಯ್ತು ಸಾರ್ವಜನಿಕ ಗುದ್ದು!

  ಮಾಂಸ ತಿಂದು ಮತ್ತೆ ವಿವಾದಕ್ಕೆ ಗುರಿಯಾಗಿದ್ದಾರೆ ಸಿದ್ದರಾಮಯ್ಯ.  ನಿನ್ನೆ ಮುಂಡರಗಿಯ ಸಿಂಗಟಾಲೂರಿಗೆ ತೆರಳಿದ್ದರು ಸಿದ್ದರಾಮಯ್ಯ. ಅಲ್ಲಿನ ಸ್ಥಳೀಯ ಮುಖಂಡ ಮಂಜುನಾಥ್ ಅವರ ಮನೆಯಲ್ಲಿ ಭರ್ಜರಿ ಬಾಡೂಟ ಮಾಡಿದ್ದರು. ನಂತರ  ಬೀರಲಿಂಗೇಶ್ವರ ದೇಗುಲವ ಉದ್ಘಾಟನೆ ಮಾಡಿದ್ದಾರೆ. ಈ ನಡೆ ವಿವಾದಕ್ಕೆ ಕಾರಣವಾಗಿದೆ. ಬೀರಲಿಂಗೇಶ್ವರನಿಗೆ ಅಪಚಾರವಾಗಿದೆ ಎಂಬ ಮಾತು ಕೇಳಿ ಬಂದಿದೆ. 

 • Karnataka Districts4, Jan 2020, 8:20 AM

  ಬೆಳಗಾವಿ ಗಡಿ ವಿವಾದ: ಉದ್ಧವ್‌ ಠಾಕ್ರೆ ಸಿಎಂ ಆದ ಮೇಲೆ ಗಡಿ ಕ್ಯಾತೆ ಶುರು

  ವಿನಾಕಾರಣ ಗಡಿ ಸಮಸ್ಯೆ ಮುಂದಿಟ್ಟುಕೊಂಡು ಕ್ಯಾತೆ ತೆಗೆಯದಂತೆ ಮಹಾರಾಷ್ಟ್ರ ಸರ್ಕಾರಕ್ಕೆ ರಾಷ್ಟ್ರಪತಿಗಳು ತಾಕೀತು ಮಾಡಬೇಕು ಎಂದು ತಾಲೂಕು ಅಭಿವೃದ್ಧಿ ಹೋರಾಟ ವೇದಿಕೆ ಅಧ್ಯಕ್ಷ ವೈ.ಎನ್‌. ಗೌಡರ ಒತ್ತಾಯಿಸಿದ್ದಾರೆ.
   

 • Gadag

  Karnataka Districts29, Dec 2019, 12:30 PM

  'ಪೇಜಾವರ ಶ್ರೀಗಳು ರಾಷ್ಟ್ರೀಯ ಸಂತರಾಗಿ ದೇಶಕ್ಕೆ ಸಂದೇಶ ನೀಡುತ್ತಿದ್ದರು'

  ಪೇಜಾವರ ಶ್ರೀಗಳು ಅಗಲಿರುವುದು ಅತ್ಯಂತ ವಿಷಾದಕರ ಸಂಗತಿಯಾಗಿದೆ. ಶ್ರೀಗಳು ರಾಷ್ಟ್ರೀಯ ಸಂತರಾಗಿ ದೇಶಕ್ಕೆ ಸಂದೇಶ ನೀಡುತ್ತಿದ್ದರು, ಬಹುಕಾಲ ಪರ್ಯಾಯ ಪೀಠವನ್ನು ಶ್ರೀಗಳು ಅಲಂಕರಿಸುವ ಮೂಲಕ ಉಡುಪಿ ಕೃಷ್ಣ ಮಠಕ್ಕೆ ಒಳ್ಳೆ ಹೆಸರು‌ ತಂದು ಕೊಟ್ಟಿದ್ದರು ಎಂದು ಜಿಲ್ಲೆಯ ಮುಂಡರಗಿಯ ಡಾ.ಅನ್ನದಾನೀಶ್ವರ ಮಹಾಸ್ವಾಮೀಜಿ ಹೇಳಿದ್ದಾರೆ. 

 • train fare will hike

  Karnataka Districts28, Dec 2019, 8:34 AM

  ಮುಂಡರಗಿ: ಗದಗ-ಹರಪನಹಳ್ಳಿ ರೈಲು ಮಾರ್ಗಕ್ಕೆ ಸಂಸದರು ಒತ್ತಾಯಿಸಲಿ

  ಗದಗ-ಹರಪನಹಳ್ಳಿ ರೈಲು ಮಾರ್ಗಕ್ಕೆ ಒತ್ತಾಯಿಸಿ ಮುಂಡರಗಿ ತಾಲೂಕು ಸಾರ್ವಜನಿಕ ಹೋರಾಟ ವೇದಿಕೆ ಅನೇಕ ಬಾರಿ ದೆಹಲಿ ಚಲೋ, ಬೆಂಗಳೂರು ಚಲೋ, ಹುಬ್ಬಳ್ಳಿ ಚಲೋ, ಗದಗ ಚಲೋ ಪ್ರತಿಭಟನೆ ಮಾಡಿ ಸಂಬಂಧಪಟ್ಟ ರೈಲ್ವೆ ಇಲಾಖೆ ಸಚಿವರಿಗೆ, ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸುತ್ತಾ ಬಂದರೂ ರಾಜ್ಯದ ಸಂಸದರು ಈ ಕುರಿತು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಲು ಮನಸ್ಸು ಮಾಡುತ್ತಿಲ್ಲ ಎಂದು ಮುಂಡರಗಿ ತಾಲೂಕು ಸಾರ್ವಜನಿಕ ಹೋರಾಟ ವೇದಿಕೆ ಸಂಚಾಲಕ ಬಸವರಾಜ ನವಲಗುಂದ ಆರೋಪಿಸಿದರು.
   

 • Karnataka Districts25, Dec 2019, 9:57 AM

  ‘ನರೇಂದ್ರ ಮೋದಿ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲ’

  ಕೇಂದ್ರ ಸರ್ಕಾರ 370 ಕಾಯ್ಕೆ ಜಾರಿಗೆ ತಂದಾಗ ಇದು ಲೋಕಸಭೆ ಚುನಾವಣೆ ಪೂರ್ವದಲ್ಲಿ ನೀಡಿದ ಭರವಸೆ, ಪೌರತ್ವ ಕಾಯ್ದೆ ಇದೂ ಸಹ ಚುನಾವಣೆ ಪೂರ್ವದಲ್ಲಿ ನೀಡಿದ ಭರವಸೆ ಎಂದು ಹೇಳುವ ಕೇಂದ್ರ ಸರ್ಕಾರ, ಚುನಾವಣೆ ಪೂರ್ವದಲ್ಲಿಯೇ ರೈತರೆಲ್ಲರಿಗೂ ಭರವಸೆ ನೀಡಿದ ಡಾ. ಸ್ವಾಮಿನಾಥನ್‌ ವರದಿ ಜಾರಿಗೆ ಮಾತ್ರ ಇದುವರೆಗೂ ಆಗಲಿಲ್ಲ. ಕೇಂದ್ರ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಆರೋಪಿಸಿದ್ದಾರೆ.

 • train fare will hike

  Karnataka Districts28, Nov 2019, 8:23 AM

  ಗದಗ-ಹರಪನಹಳ್ಳಿ ರೈಲ್ವೆ ಮಾರ್ಗಕ್ಕೆ ಒತ್ತಾಯಿಸಿ ಅಂಚೆ ಪತ್ರದ ಪ್ರತಿಭಟನೆ

  ತಾಲೂಕು ಸಾರ್ವಜನಿಕ ಹೋರಾಟ ವೇದಿಕೆ, ಗದಗ-ಹರಪನಹಳ್ಳಿ ರೈಲ್ವೆ ಮಾರ್ಗ ರಚನೆಯ ಜಂಟಿಕ್ರಿಯಾ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಬುಧವಾರ ಬೆಳಗ್ಗೆ ಮುಂಡರಗಿ ಅಂಚೆ ಕಚೇರಿ ಎದುರು ಗದಗ-ಹರಪನಹಳ್ಳಿ ರೈಲ್ವೆ ಮಾರ್ಗಕ್ಕೆ ಒತ್ತಾಯಿಸಿ ಅಂಚೆ ಪತ್ರದ ಪ್ರತಿಭಟನೆ ನಡೆಸಲಾಯಿತು.