Search results - 31 Results
 • Vidhana Soudha

  NEWS28, Sep 2018, 7:36 AM IST

  ಮೇಲ್ಮನೆ ಚುನಾವಣೆ : 3 ಸ್ಥಾನಕ್ಕೆ ಅವಿರೋಧ ಆಯ್ಕೆ

  ವಿಧಾನ ಪರಿಷತ್ ಚುನಾವಣೆಯ ಕಣದಲ್ಲಿದ್ದ ಮೂವರು ಅಭ್ಯರ್ಥಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಕಾಂಗ್ರೆಸ್‌ನ ಎಂ.ಸಿ.ವೇಣುಗೋಪಾಲ್‌, ನಜೀರ್‌ ಅಹ್ಮದ್‌ ಮತ್ತು ಜೆಡಿಎಸ್‌ನ ಎಚ್‌.ಎಂ.ರಮೇಶ್‌ ಗೌಡ ಆಯ್ಕೆಯಾಗಿದ್ದಾರೆ. 

 • JDS New

  NEWS26, Sep 2018, 10:48 AM IST

  ಜೆಡಿಎಸ್ ನಲ್ಲೂ ಅಸಮಾಧಾನದ ಹೊಗೆ

  ಜೆಡಿಎಸ್ ನಲ್ಲೂ ಇದೀಗ ಅಸಮಾಧಾನದ ಹೊಗೆಯೊಂದು ಭುಗಿಲೆದ್ದಿದೆ. ವಿಧಾನ ಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ  ಜೆಡಿಎಸ್ ಅಭ್ಯರ್ಥಿಯಾಗಿ ಎಚ್.ಎಂ. ರಮೇಶ್‌ಗೌಡ ನಾಮಪತ್ರ ಸಲ್ಲಿಸಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಲಾಗಿದೆ 

 • NEWS25, Sep 2018, 11:28 PM IST

  ಪರಿಷತ್ತಿಗೆ ದಿನಗಣನೆ : ಮೂವರು ಅವಿರೋಧ ಆಯ್ಕೆ ಖಚಿತ

  • ಅಕ್ಟೋಬರ್ 3ಕ್ಕೆ ಪರಿಷತ್  ಚುನಾವಣೆ
  • ಕಾಂಗ್ರೆಸ್ನಿಂದ 2, ಜೆಡಿಎಸ್ನಿಂದ ಒಬ್ಬ ಅಭ್ಯರ್ಥಿ ಸ್ಪರ್ಧೆ
  • ಮೂವರೂ ಅಭ್ಯರ್ಥಿಗಳ ಅವಿರೋಧ ಆಯ್ಕೆ ಸಾಧ್ಯತೆ
 • JDS Congress

  NEWS25, Sep 2018, 6:15 PM IST

  ಕಾಂಗ್ರೆಸ್-ಜೆಡಿಎಸ್ ವಿಧಾನ ಪರಿಷತ್ ಅಭ್ಯರ್ಥಿಗಳ ಆಸ್ತಿ ಎಷ್ಟು ಗೊತ್ತಾ?

  ಒಟ್ಟು ಮೂರು ಸ್ಥಾನಗಳ ಪೈಕಿ ಕಾಂಗ್ರೆಸ್ 2 ಹಾಗೂ ಜೆಡಿಎಸ್ 1 ಸ್ಥಾನವನ್ನು ಹಂಚಿಕೊಂಡಿದೆ.  ಕಾಂಗ್ರೆಸ್ ನಿಂದ ವೇಣುಗೋಪಾಲ್ ಮತ್ತು ನಜೀರ್ ಅಹ್ಮದ್ ನಾಮಪತ್ರ ಸಲ್ಲಿಸಿದ್ದರೆ, ಜೆಡಿಎಸ್ ನಿಂದ ರಮೇಶ್ ಗೌಡ ನಾಮಪತ್ರ ಸಲ್ಲಿಸಿದ್ದಾರೆ.  ಈ ಮೂವರು ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಇನ್ನು ಇವರು ನಾಮಪತ್ರದಲ್ಲಿ ಘೋಷಿಸಿಕೊಂಡಿರುವ ಆಸ್ತಿ ಮೌಲ್ಯ ಎಷ್ಟಿದೆ ಎನ್ನುವುದನ್ನು ಮುಂದೆ ಓದಿ.

 • JDS Congress MLAs

  NEWS23, Sep 2018, 7:13 AM IST

  ಕಾಂಗ್ರೆಸ್‌, ಜೆಡಿಎಸ್‌ಗೆ ಎದುರಾಗಿದೆ ಮತ್ತೊಂದು ಆತಂಕ!

  ಆಪರೇಷನ್‌ ಕಮಲ ಭೀತಿಯಿಂದಾಗಿ ರಾಜ್ಯ ರಾಜಕೀಯದಲ್ಲಿ ನಿರ್ಮಾಣವಾಗಿರುವ ಗೊಂದಲಮಯ ವಾತಾವರಣಕ್ಕೆ ಮತ್ತೊಂದು ಕ್ಲೈಮ್ಯಾಕ್ಸ್ ಎದುರಾಗಲಿದೆ. ಅ.3ರಂದು ನಡೆಯಲಿರುವ ವಿಧಾನಪರಿಷತ್‌ ಚುನಾವಣೆಯೇ ಅಂತಿಮವಾಗುವ ಸಾಧ್ಯತೆ ಇದೆ.

 • NEWS22, Sep 2018, 10:42 AM IST

  ಗೆಲ್ಲದಿದ್ದರೂ ಪರಿಷತ್ 3 ಸ್ಥಾನಕ್ಕೆ ಬಿಜೆಪಿ ಸ್ಪರ್ಧೆ, ಏನಿದರ ಮರ್ಮ?

  3 ಸ್ಥಾನಗಳಿಗೆ ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆಯುವ ಚುನಾವಣೆ ಭಾರೀ  ಕುತೂಹಲ ಮೂಡಿಸಿದೆ. ಬಿಜೆಪಿಗೆ ಗೆಲುವಿನ ಸಾಧ್ಯತೆ ಇಲ್ಲದಿದ್ದರೂ ಮೂರು ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ತೀರ್ಮಾನಿಸಿದ್ದು, ಭಾನುವಾರ ಅಂತಿಮಗೊಳಿಸುವ ಸಾಧ್ಯತೆಯಿದೆ. ಇದು ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲವನ್ನು ಮೂಡಿಸಿದೆ.

 • NEWS22, Sep 2018, 7:37 AM IST

  ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿ ಅಂತಿಮ

  ಚುನಾವಣೆಗೆ ಕಾಂಗ್ರೆಸ್‌ ಪಕ್ಷ ನಾಲ್ಕು ಅಭ್ಯರ್ಥಿಗಳ ಹೆಸರನ್ನು ಆಖೈರುಗೊಳಿಸಿದೆ ಎಂದು ಮೂಲಗಳು ತಿಳಿಸಿವೆ. ಕುತೂಹಲಕಾರಿ ಸಂಗತಿಯೆಂದರೆ, ಈ ಬಾರಿ ಪರಿಷತ್‌ ನೇಮಕದಲ್ಲಿ ಕಾಂಗ್ರೆಸ್‌ ಅಹಿಂದ ಸಮುದಾಯಗಳಿಗೆ ಸಂಪೂರ್ಣವಾಗಿ ಮಣೆಹಾಕಿದೆ.

 • NEWS21, Sep 2018, 8:24 AM IST

  ವಿಧಾನಪರಿಷತ್‌ ಚುನಾವಣೆಗೆ ಕಾಂಗ್ರೆಸ್ ಪಟ್ಟಿ ಫೈನಲ್

  ಮೂಲಗಳ ಪ್ರಕಾರ ವಿಧಾನಪರಿಷತ್‌ ಚುನಾವಣೆಗೆ ಕೋಲಾರದ ನಜೀರ್‌ ಅಹಮದ್‌ ಅಥವಾ ಎಂ.ಎಂ. ಹಿಂಡಸಗೇರಿ (ಈ ಪೈಕಿ ನಜೀರ್‌ ಅವರಿಗೆ ಹೆಚ್ಚಿನ ಅವಕಾಶವಿದೆ) ಹಾಗೂ ಜಯನಗರದ ಎಂ.ಸಿ. ವೇಣುಗೋಪಾಲ್‌ ಅಥವಾ ಯು.ಬಿ ವೆಂಕಟೇಶ್‌ ಅವರ ಹೆಸರನ್ನು ರಾಜ್ಯ ನಾಯಕರು ಹೈಕಮಾಂಡ್‌ಗೆ ನೀಡಿದ್ದಾರೆ. 

 • NEWS20, Sep 2018, 10:11 AM IST

  ಜೆಡಿಎಸ್ ನ ಒಂದು ಟಿಕೆಟ್ ಯಾರಿಗೆ..?

  ವಿಧಾನಪರಿಷತ್ತಿಗೆ ನಡೆಯುವ ಚುನಾವಣೆಗೆ ಸಂಬಂಧಿಸಿದಂತೆ ಮೈತ್ರಿ ಸರ್ಕಾರದಲ್ಲಿ ತನಗೆ ಲಭಿಸುವ ಒಂದು ಸ್ಥಾನಕ್ಕಾಗಿ ಜೆಡಿಎಸ್ ಪಕ್ಷದಲ್ಲಿ ಐದಕ್ಕೂ ಹೆಚ್ಚು ಅಭ್ಯರ್ಥಿಗಳು ಆಕಾಂಕ್ಷಿಗಳಾಗಿದ್ದಾರೆ. ಆದರೆ ಯಾರಿಗೆ ಟಿಕೆಟ್ ಸಿಗಲಿದೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ. 

 • NEWS19, Sep 2018, 1:45 PM IST

  ಅ.3ರ ನಂತರ ಸಂಪುಟ ವಿಸ್ತರಣೆ : ಸರ್ಕಾರ ಪತನ ಕೇವಲ ಊಹಾಪೋಹ

  • ವಿಧಾನ ಪರಿಷತ್ ಚುನಾವಣೆ ನಂತರ ಅಂದರೆ ಅ. 3ರ ನಂತರ ಸಂಪುಟ ವಿಸ್ತರಣೆ - ಸಿದ್ದರಾಮಯ್ಯ
  • ಮಾಧ್ಯಮ ಗಳಲ್ಲಿ ಬರುತ್ತಿರುವ ಭಿನ್ನಮತದ ವರದಿಗಳಲ್ಲಿ ಶೇ. 1ರಷ್ಟು ಸತ್ಯವಿಲ್ಲ - ಮಾಜಿ ಸಿಎಂ
 • NEWS19, Sep 2018, 10:47 AM IST

  ಸಮ್ಮಿಶ್ರ ಸರ್ಕಾರಕ್ಕೆ ಅ.3ಕ್ಕೆ ಬಿಜೆಪಿ ಅಗ್ನಿ ಪರೀಕ್ಷೆ !

  • ಒಬ್ಬ ಅಭ್ಯರ್ಥಿ ನಾಮಪತ್ರಕ್ಕೆ ಹತ್ತು ಶಾಸಕರು ಸೂಚಕರಾಗಿ ಸಹಿ ಹಾಕುವುದು ಕಡ್ಡಾಯ
  • ಕಾಂಗ್ರೆಸ್-ಜೆಡಿಎಸ್‌ನಿಂದ ಅಡ್ಡಮತದಾನ ನಿರೀಕ್ಷೆಯಲ್ಲಿ ಬಿಜೆಪಿ ಇದೆ
 • JDS Congress MLAs

  NEWS16, Sep 2018, 8:36 AM IST

  6 ಸ್ಥಾನಗಳಿಗಾಗಿ ಮಿತ್ರಪಕ್ಷಗಳ ನಡುವೆ ಹಗ್ಗಜಗ್ಗಾಟ

  ಈ ಆರು ಸ್ಥಾನಗಳಿಗಾಗಿ ಮೈತ್ರಿ ಪಕ್ಷಗಳ ನಡುವೆಯೇ ಹಗ್ಗಜಗ್ಗಾಟ ಶುರುವಾಗಿದೆ. ದೀರ್ಘಾವಧಿಯ ಸ್ಥಾನದ ಮೇಲೆ ಜೆಡಿಎಸ್ ಕಣ್ಣಿಟ್ಟು, ಕಡಿಮೆ ಅವಧಿಯ 2 ಸ್ಥಾನಗಳನ್ನು ಕಾಂಗ್ರೆಸ್ ಗೆ ಬಿಟ್ಟು ಕೊಡಲು ಮುಂದಾಗಿದೆ. 

 • DH Shankaramurthy

  Shivamogga12, Sep 2018, 3:45 PM IST

  ಚುನಾವಣಾ ಆಯೋಗದ ವಿರುದ್ಧ ಮಾಜಿ ಸಭಾಪತಿ ಕೆಂಡಾಮಂಡಲ

  ಪ್ರತ್ಯೇಕವಾಗಿ ಚುನಾವಣೆ ನಡೆಸುವುದರಿಂದ ಪರಿಷತ್ ನ 3 ಸ್ಥಾನಗಳು ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಪಾಲಾಗುತ್ತವೆ. ಬಿಜೆಪಿಗೆ ಒಂದು ಸ್ಥಾನ ಸಿಕ್ಕೊಲ್ಲ. ವಿಧಾನಸಭೆಯ ಸದಸ್ಯರಿಂದ ಪರಿಷತ್ತಿಗೆ ಆಯ್ಕೆಯಾಗುವ  ಈ ಸ್ಥಾನಗಳು ನ್ಯಾಯ ಸಮ್ಮತವಾಗಿ ಚುನಾವಣೆ ನಡೆಯಬೇಕು. ಹಾಗಾಗಿ ತಕ್ಷಣವೇ ತಪ್ಪನ್ನ ಸರಿ ಪಡಿಸುವಂತೆ ಚುನಾವಣಾ ಆಯೋಗಕ್ಕೆ ಶಂಕರ ಮೂರ್ತಿ ಆಗ್ರಹಿಸಿದರು. 

 • BJP

  NEWS12, Sep 2018, 10:13 AM IST

  ರಾಜ್ಯ ಬಿಜೆಪಿಗೆ ಮತ್ತೊಂದು ಶಾಕ್?

  ಗೆಲ್ಲುವ ನಿರೀಕ್ಷೆಯಲ್ಲಿದ್ದ ಬಿಜೆಪಿಗೆ ಇದೀಗ ನಿರಾಸೆ ಮೂಡಿದೆ. ವಿಧಾನಪರಿಷತ್‌ನ ಖಾಲಿ ಸ್ಥಾನಗಳಿಗೆ ಉಪಚುನಾವಣೆ ನಿಗದಿಯಾಗಿದ್ದು, 3 ಸ್ಥಾನಗಳು ಆಡಳಿತಾರೂಢ ಮೈತ್ರಿಗಳ ಪಕ್ಷದ ಪಾಲಾಗುವ ಸಾಧ್ಯತೆ ಗೋಚರಿಸಿದೆ. ಈ ನಿಟ್ಟಿನಲ್ಲಿ ಹಾಲಿ ಇರುವ ನಿಯಮದ ಬಗ್ಗೆ ಚುನಾವಣಾಧಿಕಾರಿಗಳಿಗೆ ವಿಪಕ್ಷ ಬಿಜೆಪಿ ದೂರು ನೀಡಲು ಮುಂದಾಗಿದೆ.

 • 14, Jun 2018, 3:15 PM IST

  ಮಾಧ್ಯಮದ ಮುಂದೆಯೇ ಗಳಗಳನೇ ಅತ್ತ ಕಾಂಗ್ರೆಸ್ ಅಭ್ಯರ್ಥಿ

  ಕಳೆದ ವಿಧಾನಪರಿಷತ್ತು ಚುನಾವಣೆಯಲ್ಲಿ ಪರಾಭವಗೊಂಡ ಕಾಂಗ್ರೆಸ್‌ ಅಭ್ಯರ್ಥಿ ಮಾಧ್ಯಮದವರ ಮುಂದೆಯೇ ಗಳಗಳನೇ ಅತ್ತ ಘಟನೆ ಮೈಸೂರಿನಲ್ಲಿ ನಡೆದಿದೆ. ಚುನಾವಣೆಗಾಗಿ, ಮನೆ, ಮಡದಿಯ ಚಿನ್ನ ಎಲ್ಲವನ್ನೂ ಕಳಕೊಂಡೆ ಎಂದು ನೋವು ತೋಡಿಕೊಂಡಿದ್ದಾರೆ.