Malleshwaram
(Search results - 27)Cine WorldSep 12, 2020, 2:36 PM IST
ಬೆಂಗಳೂರಿನ ಇಡ್ಲಿ-ವಡೆ ಮಿಸ್ ಮಾಡಿಕೊಂಡ ಡಿಪ್ಪಿ; ಮೆಗಾ ಸ್ಟಾರ್ ಚಿತ್ರದಲ್ಲಿ ರಶ್ಮಿಕಾ!
ರಣ್ವೀರ್ ಸಿಂಗ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ದೀಪಿಕಾ ಪಡುಕೋಣೆ ಮುಂಬೈನಲ್ಲಿ ನೆಲೆಸಿದ್ದಾರೆ. ಕೊರೋನಾ ಕಾಟದಿಂದ ತಮ್ಮ ತವರೂರಾದ ಬೆಂಗಳೂರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದರು. ಇತ್ತೀಚಿಗೆ ಬೆಂಗಳೂರಿಗೆ ಬಂದರೆ ಇವರು ಮಲೇಶ್ವರಂನ ವೀಣಾ ಸ್ಟೋರ್ನಲ್ಲಿ ಮಿಸ್ ಮಾಡದೆ ಇಡ್ಲಿ-ವಡೆ ಸೇವಿಸುತ್ತಾರೆ.
Cine WorldAug 6, 2020, 3:53 PM IST
ಕನ್ನಡ ಸ್ವಲ್ಪ ಬರುತ್ತೆ, ಮಲ್ಲೇಶ್ವರಂ ಮಸಾಲ ದೋಸೆ ಬೇಕು; ನಟಿ ಅನುಷ್ಕಾ ಶರ್ಮಾ ಬಯಕೆ!
ಗ್ಲಾಮರಸ್ ಹಾಗೂ ಡಿ-ಗ್ಲಾಮರಸ್ ಎರಡೂ ತರಹದ ಪಾತ್ರದಲ್ಲಿ ಅಭಿನಯಿಸಿ, ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಂಡಿರುವ ಅನುಷ್ಕಾ ಶರ್ಮಾ ಕೆಲವು ದಿನಗಳ ಹಿಂದೆ ಇನ್ಸ್ಟಾಗ್ರಾಂನಲ್ಲಿ Q&A ಮಾಡಿದ್ದಾರೆ. ಅಭಿಮಾನಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಅಷ್ಟೆಲ್ಲದೇ ಕನ್ನಡ ಬರುತ್ತಾ, ಬೆಂಗಳೂರಿನಲ್ಲಿ ಯಾವ ಜಾಗ ಇಷ್ಟ ಎಂದು ಕೇಳಿದ ಪ್ರಶ್ನೆಗೆ ಏನೆಂದು ಉತ್ತರಿಸಿದ್ದಾರೆ ನೋಡಿ...
PoliticsAug 5, 2020, 3:18 PM IST
ಅತ್ತ ಆಯೋಧ್ಯೆಯಲ್ಲಿ ಶಿಲಾನ್ಯಾಸ, ಇತ್ತ ಬೆಂಗ್ಳೂರಿನ ಶ್ರೀರಾಮನಿಗೆ ವಿಶೇಷ ಪೂಜೆ
ಅತ್ತ ಆಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣಕ್ಕೆ ಬುಧವಾರ ಭೂಮಿ ಪೂಜೆ ನಡೆಯುತ್ತಿದ್ದರೆ ಇತ್ತ ಬೆಂಗಳೂರಿನ ಮಲ್ಲೇಶ್ವರದ ಪ್ರಸಿದ್ಧ ರಾಮಮಂದಿರದಲ್ಲಿ ವಿಶೇಷ ಪೂಜಾ ಸಂಭ್ರಮ. ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ನೇತೃತ್ವದಲ್ಲಿ ನಡೆದ ಪೂಜಾ ಕೈಂಕಾರ್ಯದಲ್ಲಿ ಬಿಬಿಎಂಪಿ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ ರಾಜು ಸೇರಿದಂತೆ ಹಲವು ಬಿಜೆಪಿ ಕಾರ್ಯಕರ್ತರು ಭಾಗವಹಿಸಿ, ಖುಷಿಪಟ್ಟರು.
Karnataka DistrictsJun 18, 2020, 2:51 PM IST
ಕೊರೋನಾ ಭೀತಿ ನಡುವೆಯೇ ಪಿಯು ಇಂಗ್ಲಿಷ್ ಎಕ್ಸಾಮ್: ಇಲ್ಲಿವೆ ಫೋಟೋಸ್
ಮಲ್ಲೇಶ್ವರಂ ಪಿಯು ಬಾಲಕಿಯ ಪಿಯು ಕಾಲೇಜಿನಲ್ಲಿ ಹಾಗೂ MES ಕಾಲೇಜಿನಲ್ಲಿ ನಡೆದ ಇಂಗ್ಲಿಷ್ ಪಿಯುಸಿ ಪರೀಕ್ಷೆ ಹೀಗಿತ್ತು. ಇಲ್ಲಿವೆ ಎಂ. ವೀರಮಣಿ ಅವರು ಕ್ಲಿಕ್ಕಿಸಿದ ಫೋಟೋಸ್
stateJun 9, 2020, 1:01 PM IST
ಭಕ್ತರಿಗೆ ದರ್ಶನ ಕೊಟ್ಟ ಮಲ್ಲೇಶ್ವರಂನ ಗಂಗಮ್ಮ ತಾಯಿ
ರಾಜ್ಯದಲ್ಲಿ ನಿನ್ನೆಯಿಂದ ಧಾರ್ಮಿಕ ಕೇಂದ್ರಗಳು ಓಪನ್ ಆಗಿವೆ. ಎರಡೂವರೆ ತಿಂಗಳ ಬಳಿಕ ದೇಗುಲಗಳಲ್ಲಿ ಗಂಟೆ ಶಬ್ಧ ಕೇಳಿಸತೊಡಗಿದೆ. 35 ಸಾವಿರ ಮುಜರಾಯಿ ದೇಗುಲಗಳು ಮತ್ತೆ ಓಪನ್ ಆಗಿವೆ. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಅನ್ನದಾಸೋಹ ಆರಂಭವಾಗಿದೆ. ದೇಗುಲ ಅಷ್ಟೇ ಅಲ್ಲ, ಚರ್ಚ್, ಮಸೀದಿಗಳಲ್ಲೂ ಪ್ರಾರ್ಥನೆ ಶುರುವಾಗಿದೆ. ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಮಲ್ಲೇಶ್ವರಂನ ಗಂಗಮ್ಮ ದೇವಾಲಯದಿಂದ ನಮ್ಮ ಪ್ರತಿನಿಧಿ ವರದಿ ನೀಡಿದ್ದಾರೆ. ಇಲ್ಲಿದೆ ನೋಡಿ..!
stateJun 4, 2020, 3:27 PM IST
ಬೆಂಗ್ಳೂರು ಬ್ಯಾಂಕ್ ಸಿಬ್ಬಂದಿಗೆ ಕೊರೋನಾ, ಬ್ಯಾಂಕ್ ಸೀಲ್ಡೌನ್
ಬ್ಯಾಂಕ್ ಹೌಸ್ ಕೀಪಿಂಗ್ ಮಹಿಳೆಗೆ ಕೊರೊನಾ ಪಾಸಿಟೀವ್ ಬಂದಿದ್ದು ಮಲ್ಲೇಶ್ವರಂನಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕನ್ನು ಸೀಲ್ ಡೌನ್ ಮಾಡಲಾಗಿದೆ. ಬನಶಂಕರಿ ಕಾವೇರಿ ನಗರದ 46 ವರ್ಷದ ಮಹಿಳೆಗೆ ಸೋಂಕು ದೃಢವಾಗಿದೆ. ಗರ್ಭಕೋಶದ ಆಪರೇಶನ್ಗೆಂದು ಆಸ್ಪತ್ರೆಗೆ ದಾಖಲಾಗಿದ್ದ ವೇಳೆ ಸೋಂಕಿರುವುದು ತಿಳಿದು ಬಂದಿದೆ. ಮಲ್ಲೇಶ್ವರದ 6 ನೇ ಕ್ರಾಸ್ನಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕನ್ನು ಸೀಲ್ ಡೌನ್ ಮಾಡಲಾಗಿದೆ. ಬ್ಯಾಂಕ್ ನೌಕರರಿಗೆ ಕೊರೊನಾ ಟೆನ್ಷನ್ ಶುರುವಾಗಿದೆ.
stateJun 3, 2020, 7:27 PM IST
ಮಲ್ಲೇಶ್ವರಂನ ಬ್ಯಾಂಕ್ ಸಿಬ್ಬಂದಿಗೆ ಅಂಟಿದ ಕೊರೋನಾ ಸೋಂಕು
ಕೊರೋನಾ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚತ್ತಲೇ ಇದೆ. ಇದೀಗ ನಗರದ ಮಲ್ಲೇಶ್ವರಂ ಬ್ಯಾಂಕ್ ಸಿಬ್ಬಂದಿಗೆ ಕೊರೋನಾ ಸೋಂಕು ತಗುಲಿರುವುದು ಖಚಿತವಾಗಿದೆ.
Karnataka DistrictsMar 6, 2020, 7:52 AM IST
ಮಾ.8ಕ್ಕೆ ಬೆಂಗಳೂರಲ್ಲಿ ಈ ಮಾರ್ಗದ ಮೆಟ್ರೋ ಸೇವೆ ಇರಲ್ಲ
ಮಾರ್ಚ್ 8 ರಂದು ಬೆಂಗಳೂರಿನ ಈ ಮಾರ್ಗದಲ್ಲಿ ಮೆಟ್ರೋ ಸೇವೆ ಇರುವುದಿಲ್ಲ. ಸಿವಿಲ್ ನಿರ್ವಹಣೆ ಹಿನ್ನೆಲೆಯಲ್ಲಿ ಸೇವೆಯಲ್ಲಿ ವ್ಯತ್ಯಯವಾಗಲಿದೆ.
stateFeb 22, 2020, 1:29 PM IST
ಪಾಕ್ ಪರ ಘೋಷಣೆ; ಆರ್ದ್ರಾ ಮನೆಗೆ ಪೊಲೀಸ್ ಭದ್ರತೆ
ಟೌನ್ಹಾಲ್ ಮುಂದೆ ಪಾಕ್ ಪರ ಘೋಷಣೆ ಕೂಗಿ ಪೊಲೀಸ್ ಬಂಧನದಲ್ಲಿರುವ ಆರ್ದ್ರಾ ಮನೆ ಮೇಲೆ ದಾಳಿ ನಡೆಯುವ ಸಾಧ್ಯತೆ ಇದ್ದು ಮಲ್ಲೇಶ್ವರಂ ನಿವಾಸಕ್ಕೆ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಈ ಬಗ್ಗೆ ಹೆಚ್ಚಿನ ಅಪ್ಡೇಟ್ಸ್ ಇಲ್ಲಿದೆ ನೋಡಿ!
sportsFeb 5, 2020, 7:07 PM IST
ಕೋಟಿ ಕೋಟಿ ಖರ್ಚು ಮಾಡಿದ ಕ್ರೀಡಾಂಗಣಕ್ಕೆ ಬೀಗ; ಬಿಸಿ ಮುಟ್ಟಿಸಿದ BIG 3
ಕೋಟಿ ಕೋಟಿ ಖರ್ಚು ಮಾಡಿದ ವಾಲಿಬಾಲ್ ಒಳಾಂಗಣ ಕ್ರೀಡಾಂಗಣ ಇದೀಗ ಪಾಳು ಬಿದ್ದಿದೆ. ರಾಷ್ಟ್ರ, ಅಂತಾರಾಷ್ಟ್ರ ಮಟ್ಟದಲ್ಲಿ ಮಿಂಚಬೇಕಾದ ಕರ್ನಾಟಕ ಪ್ರತಿಭೆಗಳು ಕ್ರೀಡಾಂಗಣ ಇಲ್ಲದೆ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಸುವರ್ಣನ್ಯೂಸ್ ಬಿಗ್ ತ್ರಿ ತಂಡ, ಕಾರ್ಪೋರೇಟ್ ಸೇರಿದಂತೆ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದೆ.
FoodFeb 5, 2020, 6:46 PM IST
ಪೂರ್ವಜರಂತೆ ಗೆಡ್ಡೆ ಗೆಣಸು ತಿನ್ನೋ ಬಯಕೆನಾ? ಈ ರೆಸ್ಟೋರೆಂಟ್ಗೊಮ್ಮೆ ಭೇಟಿ ನೀಡಿ
ಪಿಝಾ ಬರ್ಗರ್ ಅಂತ ಓಡಾಡೋ ಸಿಲಿಕಾನ್ ಸಿಟಿ ಮಂದಿಗೆ ಗೆಡ್ಡೆ ಗೆಣಸಿನ ಖಾದ್ಯಗಳನ್ನು ಸವಿಯೋದಿರ್ಲಿ ಅವುಗಳ ಪರಿಚಯವೂ ಅವರಿಗೆ ಇರೋದಿಲ್ಲ .. ಅಂದ್ಮೇಲೆ ನಮ್ಮ ಪೂರ್ವಜರು ಇದನ್ನು ಯಾಕೆ ಬಳಸ್ತಿದ್ರು ಅಂತಾ ಎಲ್ಲಿ ಗೊತ್ತಿರುತ್ತೆ. ಹೀಗಾಗಿ ಸಿಲಿಕಾನ್ ಮಂದಿ ಮರೆತಿರುವ ಗೆಡ್ಡೆ ಗೆಣಸುಗಳನ್ನು ಅವರಿಗೆ ಪುನಃ ಪರಿಚಯಿಸುವ ಕೆಲಸಕ್ಕೆ ರೆಸ್ಟೋರೆಂಟ್ ಒಂದು ಮುಂದಾಗಿದೆ.... ಇದೆನಾಪ್ಪ ಅಂತಿರಾ ...ಅದರ ಒಂದು ಝಲಕ್ ಇಲ್ಲಿದೆ ನೋಡಿ..
PoliticsDec 14, 2019, 9:33 PM IST
ಇವತ್ತು ಆಸ್ಪತ್ರೆಗೆ ಬಂದವರೆಲ್ಲ ರಾಜಕೀಯ ವೈರಿಗಳೇ ಹೆಚ್ಚು: ರಾಜಕಾರಣದಾಚೆಗೆ ಸಿದ್ದು ಅಚ್ಚುಮೆಚ್ಚು
ರಾಜಕೀಯವಾಗಿ ಅದೆಷ್ಟು ವೈರುಧ್ಯಗಳಿದ್ರೂ ಕೂಡ, ಮಾನವೀಯತೆ ವಿಚಾರ ಬಂದಾಗ ನಾವೆಲ್ಲಾ ಒಂದೇ ಅನ್ನೋದು ರಾಜ್ಯ ರಾಜಕೀಯದಲ್ಲಿ ಮತ್ತೆ ಸಾಬೀತಾಗಿದೆ. ಹೃದಯ ಸಂಬಂಧಿ ಕಾಯಿಲೆಯಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರೋ ಸಿದ್ದರಾಮಯ್ಯರನ್ನ ನೋಡಲು ಇಂದು [ಶನಿವಾರ] ಬಂದವರೆಲ್ಲರನ್ನ ನೋಡಿದ್ರೆ ಈ ಮಾತು ಸತ್ಯ ಅನಿಸುತ್ತೆ. ದರಲ್ಲೂ ಪ್ರಮುಖವಾಗಿ 3ನೇ ದಿನವಾದ ಶನಿವಾರ ಸಿದ್ದು ನೋಡಲು ಬಂದವರೆಲ್ಲ ಅವರ ರಾಜಕೀಯ ವಿರೋಧಿಗಳೇ ಹೆಚ್ಚು. ಆದ್ರೆ, ರಾಜಕಾರಣದ ಆಚೆಗೆ ಬಂದ್ರೆ ಮಾನವೀಯತೆಯಲ್ಲಿ ಸಿದ್ದರಾಮಯ್ಯ ಅಂದ್ರೆ ಅವರಿಗೆ ಅಷ್ಟು ಅಚ್ಚುಮೆಚ್ಚು. ಹಾಗಾದ್ರೆ, ಇವತ್ತು ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಯೋಗ ಕ್ಷೇಮ ವಿಚಾರಿಸಿದ್ಯಾರು..? ಚಿತ್ರಗಳಲ್ಲಿ ನೋಡಿ.....
PoliticsDec 14, 2019, 5:46 PM IST
ಕಾಂಗ್ರೆಸ್ ಬಿಟ್ಟ ಬಳಿಕ ಇದೇ ಸಿಕ್ಕಿದ್ದೇ ಚಾನ್ಸ್ ಎಂದು ಸಿದ್ದು ಭೇಟಿಯಾದ ಹಳೇ ಶಿಷ್ಯಂದಿರು
ಕಾಂಗ್ರೆಸ್ ಬಿಟ್ಟು ಬೈ ಎಲೆಕ್ಷನ್ ಹೋಗಿ ಬಿಜೆಪಿಯಿಂದ ಗೆದ್ದು ಶಾಸಕರಾಗಿರುವ ಮಾಜಿ ಶಿಷ್ಯಂದಿರು ಇದೇ ಸಿಕ್ಕಿದ್ದೇ ಚಾನ್ಸ್ ಅಂತ ಆಸ್ಪತ್ರೆಗೆ ಹೋಗಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಇದೇ ಸಿಕ್ಕದೇ ಇದೇ ವೇಳೆ ಮಾಜಿ ಶಿಷ್ಯಂದಿರಿಗೆ ಸಿದ್ದು ನಗೆ ಚಟಾಕಿ ಹಾರಿಸಿದ್ದಾರೆ.
PoliticsDec 13, 2019, 8:24 PM IST
ಸಿದ್ದು ಆರೋಗ್ಯ ವಿಚಾರಿಸಿದ ವಿವಿಧ ಮಠಾಧೀಶರು: ಮತ್ತೊಂದೆಡೆ ವಿಶೇಷ ಪೂಜೆ
ಹೃದಯ ಸಂಬಂಧಿ ಕಾಯಿಲೆಯಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದತೆ ರಾಜಕೀಯ ಮುಖಂಡರು ಚೇತರಿಸಿಕೊಳ್ಳುತ್ತಿರುವ ಸಿದ್ದರಾಮಯ್ಯ ಆರೋಗ್ಯ ವಿಚಾರಿಸಿದ್ದಾರೆ. ಇನ್ನೊಂದು ಕಡೆ ಸ್ವಕ್ಷೇತ್ರದಲ್ಲಿ ಸಿದ್ದರಾಮಯ್ಯನವರು ಬೇಗ ಗುಣಮುಖರಾಗಲಿ ಅಂತಾ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇನ್ನು ಇಂದು [ಶುಕ್ರವಾರ] 2ನೇ ದಿನ ಟೀಂ ಇಂಡಿಯಾ ಮಾಜಿ ನಾಯಕ ಅನಿಲ್ ಕುಂಬ್ಳೆ ಆಸ್ಪತ್ರೆಗೆ ಭೇಟಿ ನೀಡಿ ಸಿದ್ದರಾಮಯ್ಯ ಆರೋಗ್ಯ ವಿಚಾರಿಸಿದರು. ಹಾಗೂ ವಿವಿಧ ಸಮುದಾಯದ ಮಠಾಧೀಶರು ಆಸ್ಪತ್ರೆಗೆ ಭೇಟಿ ನೀಡಿ ಸಿದ್ದರಾಮಯ್ಯನವರ ಯೋಗಕ್ಷೆಮ ವಿಚಾರಿಸಿ ಬೇಗ ಗುಣಮುಖರಾಗಲೆಂದು ಆಶೀರ್ವಾದಿಸಿದರು. ಅಷ್ಟೇ ಅಲ್ಲದೇ ತಾತನನ್ನು ಮಾತನಾಡಿಸಲು ದಿವಂಗತ ರಾಕೇಶ್ ಸಿದ್ದರಾಮಯ್ಯ ಪುತ್ರ ಸಹ ಓಡೋಡಿ ಆಸ್ಪತ್ರೆಗೆ ಬಂದಿದ್ದಾನೆ. ಯಾರೆಲ್ಲ ಬಂದಿದ್ದರು ಎನ್ನುವುದನ್ನು ಚಿತ್ರಗಳಲ್ಲಿ ನೋಡಿ..
stateNov 20, 2019, 8:36 AM IST
ಟ್ರಾಫಿಕ್ ಪೊಲೀಸರಿಗೆ ಠಾಣೆಯಲ್ಲೇ ಮಸಾಜ್!
ಟ್ರಾಫಿಕ್ ಪೊಲೀಸರಿಗೆ ಠಾಣೆಯಲ್ಲೇ ಮಸಾಜ್!| ಸಂಚಾರಿ ಪೊಲೀಸರ ಆಯಾಸ ಹೋಗಿಸಲು ಚಿಂತನೆ| ಈಗಾಗಲೇ ಚಿಕಿತ್ಸಾ ಕೇಂದ್ರಗಳೊಂದಿಗೆ ಮಾತುಕತೆ| ಶೀಘ್ರವೇ ಲಿಖಿತ ಪ್ರಸ್ತಾವನೆ