Loksabha Results 2019  

(Search results - 106)
 • Video Icon

  NEWS2, Jun 2019, 7:56 PM

  ಮಂಡ್ಯ ಚುನಾವಣೆ : EVM ತನಿಖೆಗೆ ಆಗ್ರಹ

  EVM ಸಂಶೋಧಿಸಿದ ಜಪಾನ್‌ಗೇ ಅವುಗಳ ಮೇಲೆ ನಂಬಿಕೆಯಿಲ್ಲ, ಮತ್ತೆ ನಾವೇಕೆ ಅದನ್ನು ಬಳಸಬೇಕು? ಮಂಡ್ಯದಲ್ಲಿ ಸ್ಥಳೀಯ ಚುನಾವಣೆಯಲ್ಲಿ ಜೆಡಿಎಸ್‌ನ್ನು ಜನ ಗೆಲ್ಲಿಸ್ತಾರೆ, ಆದ್ರೆ ಲೋಕಸಭೆಯಲ್ಲಿ ಬೇರೆ ಫಲಿತಾಂಶ ಬರುತ್ತೆ. ಅದು ಹೇಗೆ ಸಾಧ್ಯ? ಎಂದು ಪ್ರಶ್ನಿಸಿರುವ ಶಾಸಕ ಸುರೇಶ್ ಗೌಡ, EVM ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ. 

 • Video Icon

  NEWS2, Jun 2019, 4:13 PM

  ನಿಖಿಲ್ ಸೋಲಿಗೆ ಕಾರಣ ಬಿಚ್ಚಿಟ್ಟ ಮಂಡ್ಯ ಕಾಂಗ್ರೆಸ್ ನಾಯಕರು!

  ಕಳೆದ ಲೋಕಸಭಾ ಚುನಾವಣೆಯಲ್ಲಿ ಭಾರೀ ಕುತೂಹಲ ಕೆರಳಿಸಿದ್ದ ಹೈ ವೋಲ್ಟೇಜ್ ಕ್ಷೇತ್ರ ಮಂಡ್ಯದಲ್ಲಿ ಗೆಲುವಿನ ಕ್ರೆಡಿಟ್ ಮತ್ತು ಸೋಲಿನ ಕಾರಣಗಳ ಬಗ್ಗೆ ಚರ್ಚೆ ಮತ್ತು ಆರೋಪ-ಪ್ರತ್ಯಾರೋಪಗಳು ಮುಂದುವರಿದಿವೆ. ನಿಖಿಲ್ ಕುಮಾರಸ್ವಾಮಿ ಸೋಲಿಗೆ ಕಾರಣ ಏನೆಂಬುವುದನ್ನು ಈಗ ಮಂಡ್ಯದ ಕಾಂಗ್ರೆಸ್ ನಾಯಕರೇ ಬಿಚ್ಚಿಟ್ಟಿದ್ದಾರೆ. 

 • Video Icon

  NEWS1, Jun 2019, 2:03 PM

  EVM ಮತ ಎಣಿಕೆಯಲ್ಲಿ ವ್ಯತ್ಯಾಸ; ಅನುಮಾನ ಹುಟ್ಟಿಸಿದ EC ನಡೆ!

  ದಿ ಕ್ವಿಂಟ್ ಎಂಬ ಸುದ್ದಿ ಸಂಸ್ಥೆ ಪ್ರಕಟಿಸಿರುವ ತನಿಖಾ ವರದಿಯು EVMಗಳ ಮೇಲೆ ಮತ್ತೆ ಅನುಮಾನವನ್ನು ಹುಟ್ಟುಹಾಕಿದೆ. 370ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಚಲಾವಣೆಯಾದ ಮತ ಮತ್ತು EVM ಮತ ಎಣಿಕೆ ಪರಸ್ಪರ ತಾಳೆಯಾಗುತ್ತಿಲ್ಲ ಎಂದು ವರದಿಯು ಹೇಳಿದೆ.  ಸುದ್ದಿ ಪ್ರಕಟವಾದ ಬೆನ್ನಲ್ಲೇ ಚುನಾವಣಾ ಆಯೋಗವು, ಲೋಕಸಭಾ ಫಲಿತಾಂಶವನ್ನು ತನ್ನ ವೆಬ್‌ಸೈಟ್‌ನಿಂದ ತೆಗೆದು ಹಾಕಿದೆ.

 • kn rajanna devegowda
  Video Icon

  NEWS29, May 2019, 2:03 PM

  ಸೋಲಿಗೆ ಕಾರಣ : ಕಾಂಗ್ರೆಸ್‌ನಿಂದ ರಾಜಣ್ಣ ಉಚ್ಛಾಟನೆಗೆ ಒತ್ತಾಯ!

  ಲೋಕಸಭೆ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಸೋಲಿಗೆ ಕೆ.ಎನ್. ರಾಜಣ್ಣರನ್ನು ಉಚ್ಛಾಟನೆ ಮಾಡಬೇಕೆಂದು  ಹೈಕಮಾಂಡ್‌ಗೆ ದೂರು ಸಲ್ಲಿಸಲಾಗಿದೆ. 

 • Video Icon

  NEWS29, May 2019, 12:49 PM

  ಮೋದಿ ಕ್ಯಾಬಿನೆಟ್‌ಗೆ ಶೋಭಾ: ಯಡಿಯೂರಪ್ಪ ಬ್ಯಾಟಿಂಗ್

  ನರೇಂದ್ರ ಮೋದಿ ಪ್ರಮಾಣವಚನಕ್ಕೆ ಕ್ಷಣಗಣನೆ ಆರಂಭವಾಗಿದೆ. ಇನ್ನೊಂದೆಡೆ ಕೇಂದ್ರ ಸಚಿವ ಸಂಪುಟ ಸ್ಥಾನಕ್ಕೆ ತೆರೆಮರೆಯ ಕಸರತ್ತು ಆರಂಭವಾಗಿದೆ. ಕರ್ನಾಟಕದಿಂದ ಶೋಭಾ ಕರಾಂದ್ಲಾಜೆಗೆ ಮೋದಿ ಸಂಪುಟದಲ್ಲಿ ಸ್ಥಾನ ಗಿಟ್ಟಿಸಲು ಬಿ.ಎಸ್. ಯಡಿಯೂರಪ್ಪ ಪ್ರಯತ್ನ ನಡೆಸಿದ್ದಾರೆ.

 • Video Icon

  News28, May 2019, 6:37 PM

  ಬಿ.ಎಲ್. ಸಂತೋಷ್ ವಿರುದ್ಧ BJP ಹೈಕಮಾಂಡ್ ಅಸಮಾಧಾನ!

  ಲೋಕಸಭೆ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಪಕ್ಷಗಳು ಹಿನ್ನಡೆಯಾಗಿರುವ ಕ್ಷೇತ್ರ/ ರಾಜ್ಯಗಳಲ್ಲಿ ಆತ್ಮಾವಲೋಕನ ನಡೆಸುತ್ತಿವೆ. ಈಗ ಬಿಜೆಪಿ ಹೈಕಮಾಂಡ್ ಪಕ್ಷದ ಪ್ರಭಾವಿ ನಾಯಕ, ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ವಿರುದ್ಧ ಅಸಮಾಧಾನ ಹೊರಹಾಕಿದೆ ಎಂದು ತಿಳಿದುಬಂದಿದೆ. ಯಾಕಂತೀರಾ? ಈ ಸ್ಟೋರಿ ನೋಡಿ...

 • Video Icon

  NEWS28, May 2019, 6:19 PM

  ಸುಮಲತಾ ಬೆಂಬಲಿಸಿದ ಮಂಡ್ಯ ಕೈ ನಾಯಕರಿಗೆ ಶಿಕ್ಷೆ!

  ಲೋಕಸಭೆ ಚುನಾವಣೆಯಲ್ಲಿ ಭಾರೀ ಕುತೂಹಲ ಕೆರಳಿಸಿದ್ದ ಮಂಡ್ಯ ಕ್ಷೇತ್ರ, ಫಲಿತಾಂಶದ ಬಳಿಕವೂ ತೀವ್ರ ಕುತೂಹಲವನ್ನು ಹುಟ್ಟುಹಾಕಿದೆ. ಹೊಸ ಬೆಳವಣಿಗೆಯಲ್ಲಿ, ಸುಮಲತಾ ಪರ ಪ್ರಚಾರ ನಡೆಸಿದ್ದ 10 ಕಾಂಗ್ರೆಸ್ ನಾಯಕರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ. 

 • Video Icon

  NEWS28, May 2019, 5:17 PM

  ‘ಸಹೋದರ ಗೆದ್ದಿದ್ದಾನೆ ಎಂಬ ಸಂತೋಷ ನನಗಿಲ್ಲ!’

  ಆಸ್ಟ್ರೇಲಿಯಾ ಪ್ರವಾಸದಿಂದ ಹಿಂತಿರುಗಿರುವ ಕಾಂಗ್ರೆಸ್ ಟ್ರಬಲ್ ಶೂಟರ್ ಡಿ.ಕೆ. ಶಿವಕುಮಾರ್, ಲೋಕಸಭಾ ಫಲಿತಾಂಶದ ಬಗ್ಗೆ ಮೊದಲ ರಿಯಾಕ್ಷನ್ ಕೊಟ್ಟಿದ್ದಾರೆ.  ಕಾಂಗ್ರೆಸ್ ಸೋಲಿನ ಬಗ್ಗೆ, ಅವರ ತಮ್ಮನ ಗೆಲುವಿನ ಬಗ್ಗೆ ಡಿಕೆಶಿ ಏನಂದಿದ್ದಾರೆ? ನೋಡೋಣ ಬನ್ನಿ... 

 • Video Icon

  NEWS25, May 2019, 8:51 PM

  ವಿಶ್ವಾಸ ಇಲ್ಲದವರ ವಿಶ್ವಾಸ ಗೆಲ್ಲಿ: ನೂತನ ಸಂಸದರಿಗೆ ಮೋದಿ ಮೇಷ್ಟ್ರು ಪಾಠ!

  NDA ಮೈತ್ರಿ ಕೂಟದ ಮೊದಲ ಸಂಸದೀಯ ಸಭೆಯಲ್ಲಿ 17ನೇ ಲೋಕಸಭೆಯ ನೂತನ ಸಂಸದರನ್ನುದ್ದೇಶಿ ನರೇಂದ್ರ ಮೋದಿ ಮಾತನಾಡಿದ್ದಾರೆ. ತನ್ನ ಸುದೀರ್ಘವಾದ ಭಾಷಣದಲ್ಲಿ ಮೋದಿ, ಹೊಸ ಸಂಸದರಿಗೆ ಕಿವಿಮಾತನ್ನು ಹೇಳಿದ್ದಾರೆ. ಸಂಸದರ ಉದ್ದೇಶ ಏನಾಗಿರಬೇಕು, ಯಾವ ತರಹ ಕೆಲಸ ಮಾಡಬೇಕು, ಹೇಗೆ ವರ್ತಿಸಬೇಕು ಎಂಬಿತ್ಯಾದಿ ವಿಚಾರಗಳ ಕುರಿತು ತನ್ನ ಆನುಭವವನ್ನು ಹಂಚಿಕೊಂಡಿದ್ದಾರೆ. 

 • Video Icon

  NEWS25, May 2019, 8:28 PM

  ಲಿಂಗಾಯತರ ಕಡೆಗಣನೆ ಕಾಂಗ್ರೆಸ್ ಸೋಲಿಗೆ ಕಾರಣ! ಕೈ ಶಾಸಕ ಆಕ್ರೋಶ

  ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲಿಗೆ ಕಾಂಗ್ರೆಸ್ ಶಾಸಕರು ನಾಯಕರ ಕಡೆ ಬೊಟ್ಟು ಮಾಡುತ್ತಿದ್ದಾರೆ. ಚಿಕ್ಕಬಳ್ಳಾಪುರ ಶಾಸಕ ಡಾ. ಸುಧಾಕರ್ ಬೆನ್ನಲ್ಲೇ, ಹೀರೆಕೆರೂರು ಶಾಸಕ ಬಿ.ಸಿ. ಪಾಟೀಲ್ ಪಕ್ಷದ ಮುಖಂಡರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಲಿಂಗಾಯತ ಸಮುದಾಯವನ್ನು ಕಡೆಗಣಿಸಿದ್ದೇ ಕಾಂಗ್ರೆಸ್ ಹೀನಾಯ ಸೋಲಿಗೆ ಕಾರಣ ಎಂದು ಬಿ.ಸಿ. ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 • Sumalatha Ambareesh

  Lok Sabha Election News25, May 2019, 6:49 PM

  ಮಂಡ್ಯದಲ್ಲಿ ಸುಮಲತಾ ಕೈಹಿಡಿದ ಕ್ಷೇತ್ರಗಳಾವುವು? ಇಲ್ಲಿದೆ ಕ್ಲಿಯರ್ ಪಿಕ್ಚರ್..!

  ಜೆಡಿಎಸ್ ಭದ್ರಕೋಟೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರಿಶ್ ಭರ್ಜರಿ ಜಯಗಳಿಸಿದ್ದು, ಸಿಎಂ ಪುತ್ರನಿಗೆ ಆಘಾಯ ನೀಡಿದ್ದಾರೆ.  ಹಾಗಾದ್ರೆ ಸುಮಲತಾ ಕೈಹಿಡಿದ ಕ್ಷೇತ್ರಗಳಾವುವು..?

 • Video Icon

  NEWS25, May 2019, 6:18 PM

  ಸಿದ್ದರಾಮಯ್ಯ ಚಾಪ್ಟರ್ ಕ್ಲೋಸ್: ಕಾಂಗ್ರೆಸ್ ಸಚಿವರೇ ಹೀಗೆನ್ಬೇಕಾ!

  ಮೋದಿ ಹೊಡೆತದಿಂದ ನಾವು ಪಾಠ ಕಲಿತಿದ್ದೇವೆ, ಮೋದಿ ಔಷಧ ಫಲ ಕೊಟ್ಟಿದೆ ಎಂದಿರುವ ಕಾಂಗ್ರೆಸ್ ಸಚಿವ ಸತೀಶ್ ಜಾರಕಿಹೊಳಿ, ಮೋದಿ ಹೊಡೆತಕ್ಕೆ ಸಿದ್ದರಾಮಯ್ಯ ಸಿಎಂ ಎಂಬೆಲ್ಲಾ ಕೂಗು ಕ್ಲೋಸ್ ಆಗಿದೆ ಎಂದಿದ್ದಾರೆ. ರಮೇಶ್ ಜಾರಕಿಹೊಳಿಯದ್ದು ಡಬ್ಬದಲ್ಲಿರುವ ಹಳೇ ಪಿಕ್ಚರ್, ಅದು ರಿಲೀಸ್ ಆಗಲ್ಲ ಎಂದು ಸತೀಶ್ ಇದೇ ಸಂದರ್ಭದಲ್ಲಿ ವ್ಯಂಗ್ಯವಾಡಿದ್ದಾರೆ. 

 • siddaramaiah
  Video Icon

  NEWS25, May 2019, 5:37 PM

  ‘ಸಿಎಂ ಬದಲಾವಣೆ ಇಲ್ಲ, ಮೈತ್ರಿ ಸರ್ಕಾರಕ್ಕೆ ಏನೂ ಟೆನ್ಶನ್ ಇಲ್ಲ’

  ಲೋಕಸಭೆ ಚುನಾವಣೆಯಲ್ಲಿ ನೆಲಕಚ್ಚಿದ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸಿಎಂ ಬದಲಾವಣೆ ಬಗ್ಗೆ ಚಿಂತನೆ ನಡೆಸಿದೆಯಾ? ಮೈತ್ರಿ ಸರ್ಕಾರ ಪತನ ಸನ್ನಿಹಿತವಾಗಿದೆಯಾ? ಈ ಬಗ್ಗೆ ಸಮನ್ವಯ ಸಮಿತಿ ಅಧ್ಯಕ್ಷ, ಮಾಜಿ ಸಿಎಂ ಸಿದ್ದರಾಮಯ್ಯ ದೆಹಲಿಯಲ್ಲಿ ವರದಿಗಾರರ ಜೊತೆ ಮಾತನಾಡಿದ್ದಾರೆ. ಅವರೇನು ಹೇಳಿದ್ದಾರೆ ನೋಡೋಣ ಬನ್ನಿ..  

 • Video Icon

  NEWS25, May 2019, 4:59 PM

  ನನ್ನ ಗೆಲುವಿಗೆ ದೇವೇಗೌಡ್ರೇ ಕಾರಣ: ಬಿಜೆಪಿ ಸಂಸದ

  ತುಮಕೂರು ಲೋಕಸಭೆ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ಸೋಲನ್ನುಂಡಿದ್ದಾರೆ. ಆದರೆ ದೇವೇಗೌಡರೇ ತನ್ನ ಗೆಲುವಿಗೆ ಕಾರಣವೆಂದು ಬಿಜೆಪಿ ಸಂಸದರು ಹೇಳಿಕೊಂಡಿದ್ದಾರೆ. ಏನಿದು? ವಿರೋಧ ಪಕ್ಷದ ನಾಯಕನಿಗೆ ಗೆಲುವಿನ ಕ್ರೆಡಿಟ್? ಈ ವಿಡಿಯೋ ನೋಡಿ...

 • Video Icon

  NEWS25, May 2019, 4:27 PM

  KPCC ಅಧ್ಯಕ್ಷ ಪಟ್ಟಕ್ಕೆ ದಿನೇಶ್ ಗುಂಡೂರಾವ್ ರಾಜೀನಾಮೆ?

  ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿಕೂಟವು ನೆಲಕಚ್ಚಿದೆ. ಈ ಹಿನ್ನೆಲೆಯಲ್ಲಿ,ಕಾಂಗ್ರೆಸ್ ಪ್ರಚಾರ ಸಮಿತಿ ಮುಖ್ಯಸ್ಥ ಎಚ್.ಕೆ. ಪಾಟೀಲ್ ಈಗಾಗಲೇ ರಾಜೀನಾಮೆ ಕೊಟ್ಟಿದ್ದಾರೆ. ಇದರ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂ ರಾವ್ ಕೂಡಾ ಅಧ್ಯಕ್ಷ ಪಟ್ಟದಿಂದ ಕೆಳಗಿಳಿಯುತ್ತಾರೆ ಎಂಬ ಮಾತು ಕೇಳಲಾರಂಭಿಸಿದೆ.