Karnataka Cricket

(Search results - 121)

Mayank Agarwal

CricketMay 3, 2021, 8:48 AM IST

ಐಪಿಎಲ್‌ನಲ್ಲಿ ನಾಯಕನಾದ 5ನೇ ಕನ್ನಡಿಗ ಮಯಾಂಕ್‌!

ಈ ಮೊದಲು ರಾಹುಲ್‌ ದ್ರಾವಿಡ್‌ (ಆರ್‌ಸಿಬಿ, ರಾಜಸ್ಥಾನ), ಅನಿಲ್‌ ಕುಂಬ್ಳೆ (ಆರ್‌ಸಿಬಿ), ಕರುಣ್‌ ನಾಯರ್‌ (ಡೆಲ್ಲಿ) ಹಾಗೂ ಕೆ.ಎಲ್‌.ರಾಹುಲ್‌ (ಪಂಜಾಬ್‌) ಐಪಿಎಲ್‌ ತಂಡಗಳಿಗೆ ನಾಯಕರಾಗಿದ್ದರು. ನಾಯಕನಾಗಿ ಮೊದಲ ಪಂದ್ಯದಲ್ಲೇ ಆಕರ್ಷಕ ಬ್ಯಾಟಿಂಗ್‌ ನಡೆಸಿದ ಮಯಾಂಕ್‌, ಅಜೇಯ 99 ಸಿಡಿಸಿದರು.

Prithvi Shaw

CricketMar 11, 2021, 6:09 PM IST

ವಿಜಯ್‌ ಹಜಾರೆ ಟೂರ್ನಿ: ಕರ್ನಾಟಕದ ಫೈನಲ್‌ ಕನಸು ಭಗ್ನ..!

ಮುಂಬೈ ನೀಡಿದ್ದ 323 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಕರ್ನಾಟಕ ಆರಂಭದಲ್ಲೇ ನಾಯಕ ರವಿಕುಮಾರ್ ಸಮರ್ಥ್‌ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಇದರ ಬೆನ್ನಲ್ಲೇ ಕೆ. ಸಿದ್ದಾರ್ಥ್‌ ಸಹಾ 8 ರನ್‌ ಬಾರಿಸಿ ವಿಕೆಟ್‌ ಒಪ್ಪಿಸಿದರು. ಇನ್ನು ಅನುಭವಿ ಬ್ಯಾಟ್ಸ್‌ಮನ್‌ ಮನೀಶ್‌ ಪಾಂಡೆ ಕೇವಲ ಒಂದು ರನ್‌ ಬಾರಿಸಿ ವಿಕೆಟ್‌ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದರು.

Prithvi Shaw

CricketMar 11, 2021, 1:25 PM IST

ವಿಜಯ್‌ ಹಜಾರೆ ಟ್ರೋಫಿ: ಪೃಥ್ವಿ ಶಾ ಸ್ಫೋಟಕ ಶತಕ, ಕರ್ನಾಟಕಕ್ಕೆ ಕಠಿಣ ಗುರಿ

ಇಲ್ಲಿನ ಪಾಲಂ ಎ ಸ್ಟೇಡಿಯಂನಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಮುಂಬೈ ಆರಂಭದಲ್ಲೇ ಯಶಸ್ವಿ ಜೈಸ್ವಾಲ್‌(6) ವಿಕೆಟ್‌ ಕಳೆದುಕೊಂಡಿತು. ಆದರೆ ಎರಡನೇ ವಿಕೆಟ್‌ಗೆ ಜತೆಯಾದ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಆದಿತ್ಯ ತಾರೆ ಜತೆ ನಾಯಕ ಪೃಥ್ವಿ ಶಾ ಅರ್ಧಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು.

Karnataka Cricket

CricketMar 11, 2021, 9:22 AM IST

ವಿಜಯ್‌ ಹಜಾರೆ ಟ್ರೋಫಿ: ಟಾಸ್ ಗೆದ್ದ ಕರ್ನಾಟಕ ಬೌಲಿಂಗ್‌ ಆಯ್ಕೆ

ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಕರ್ನಾಟಕ ತಂಡವು ಕೇರಳ ವಿರುದ್ದ 80 ರನ್‌ಗಳ ಗೆಲುವು ದಾಖಲಿಸಿ ಸೆಮೀಸ್‌ ಪ್ರವೇಶಿಸಿದ್ದರೆ, ಬಲಿಷ್ಠ ಮುಂಬೈ ತಂಡ ಸೌರಾಷ್ಟ್ರ ವಿರುದ್ಧ ಗೆದ್ದು ಅಂತಿಮ ನಾಲ್ಕರ ಘಟ್ಟ ಪ್ರವೇಶಿಸಿತ್ತು. ಇದೀಗ ಫೈನಲ್‌ ಪ್ರವೇಶಕ್ಕಾಗಿ ಉಭಯ ತಂಡಗಳು ಪೈಪೋಟಿ ನಡೆಸಲಿವೆ.

Devdutt Padikkal R Samarth

CricketMar 11, 2021, 7:38 AM IST

ವಿಜಯ್‌ ಹಜಾರೆ ಟ್ರೋಫಿ: ಫೈನಲ್‌ಗಾಗಿಂದು ಕರ್ನಾಟಕ-ಮುಂಬೈ ಕಾದಾಟ

ಕರ್ನಾಟಕ ಸೆಮೀಸ್‌ಗೇರುವಲ್ಲಿ ಆರಂಭಿಕರ ಪಾತ್ರವೇ ಮಹತ್ವದಾಗಿದೆ. ಬಹುತೇಕ ರನ್‌ಗಳನ್ನು ಪಡಿಕ್ಕಲ್‌ ಹಾಗೂ ಸಮರ್ಥ್ ಇಬ್ಬರೇ ಗಳಿಸಿದ್ದಾರೆ. ಮಧ್ಯಮ ಕ್ರಮಾಂಕ ಹೆಚ್ಚು ಪರೀಕ್ಷೆಗೆ ಒಳಪಟ್ಟಿಲ್ಲ. ಆದರೆ ಮನೀಶ್‌ ಪಾಂಡೆ ಸೇರ್ಪಡೆ ತಂಡದ ಬಲ ಹೆಚ್ಚಿಸಿರೋದು ಸುಳ್ಳಲ್ಲ. ಕೆ.ಗೌತಮ್‌ ಅಲ್ರೌಂಡ್‌ ಆಟ ತಂಡಕ್ಕೆ ನೆರವಾಗಲಿದೆ.

Karnataka Cricket

CricketMar 10, 2021, 8:01 AM IST

ವಿಜಯ್ ಹಜಾರೆ ಟ್ರೋಫಿ: ಫೈನಲ್‌ಗಾಗಿ ಕರ್ನಾಟಕ-ಮುಂಬೈ ಫೈಟ್‌

ಅಂತಿಮ ಸುತ್ತಿಗೇರಲು ಮಾ.11ರಂದು ನಡೆಯಲಿರುವ 2ನೇ ಸೆಮಿಫೈನಲ್‌ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಕರ್ನಾಟಕ ತಂಡ ಮುಂಬೈ ವಿರುದ್ಧ ಸೆಣಸಾಟ ನಡೆಸಲಿದೆ. ಅಂದೇ ನಡೆಯಲಿರುವ ಮತ್ತೊಂದು ಸೆಮೀಸ್‌ನಲ್ಲಿ ಗುಜರಾತ್‌ ಹಾಗೂ ಉತ್ತರ ಪ್ರದೇಶ ಮುಖಾಮುಖಿ ಆಗಲಿವೆ.

Devdutt Padikkal R Samarth

CricketMar 8, 2021, 6:28 PM IST

ವಿಜಯ್‌ ಹಜಾರೆ ಟ್ರೋಫಿ; ಕೇರಳ ಬಗ್ಗುಬಡಿದು ಸೆಮೀಸ್‌ಗೇರಿದ ಕರ್ನಾಟಕ

ಕರ್ನಾಟಕ ನೀಡಿದ್ದ 339 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಕೇರಳ ತಂಡ 258 ರನ್‌ಗಳಿಗೆ ಸರ್ವಪತನ ಕಾಣುವ ಮೂಲಕ ಟೂರ್ನಿಯಲ್ಲಿ ತಮ್ಮ ಹೋರಾಟ ಅಂತ್ಯಗೊಳಿಸಿಕೊಂಡಿತು. ರಾಬಿನ್ ಉತ್ತಪ್ಪ(2), ರೋಹನ್‌ ಕುನ್ನಮಲ್‌(0) ರೋನಿತ್ ಮೋರೆ ದಾಳಿಗೆ ಬಹುಬೇಗನೇ ವಿಕೆಟ್‌ ಒಪ್ಪಿಸಿ ಪೆವಿಲಿಯನ್ ಸೇರಿದರು.

Devdutt Padikkal

CricketMar 8, 2021, 3:26 PM IST

ಸತತ 4 ಶತಕ, ಪಡಿಕ್ಕಲ್‌ಗೆ ಟೀಂ ಇಂಡಿಯಾದಲ್ಲಿ ಸ್ಥಾನ ಕೊಡಿ: ನೆಟ್ಟಿಗರ ಆಗ್ರಹ

ಪ್ರಸಕ್ತ ಆವೃತ್ತಿಯ ವಿಜಯ್ ಹಜಾರೆ ಟೂರ್ನಿಯಲ್ಲಿ ದೇವದತ್ ಪಡಿಕ್ಕಲ್ ಆಡಿದ ಎಲ್ಲಾ ಪಂದ್ಯಗಳಲ್ಲೂ 50+ ರನ್‌ ಬಾರಿಸಿದ ಸಾಧನೆ ಮಾಡಿದ್ದಾರೆ. ಉತ್ತರ ಪ್ರದೇಶ ವಿರುದ್ದ ಮೊದಲ ಪಂದ್ಯದಲ್ಲಿ 52 ರನ್ ಬಾರಿಸಿದ್ದ ಎಡಗೈ ಬ್ಯಾಟ್ಸ್‌ಮನ್‌ ಪಡಿಕ್ಕಲ್‌, ಎರಡನೇ ಪಂದ್ಯದಲ್ಲಿ ಕೇವಲ 3 ರನ್‌ ಅಂತರದಲ್ಲಿ ಶತಕವಂಚಿತರಾಗಿದ್ದರು.

R Samarth

CricketMar 8, 2021, 1:19 PM IST

ವಿಜಯ್‌ ಹಜಾರೆ ಟ್ರೋಫಿ: ಪಡಿಕ್ಕಲ್‌-ಸಮರ್ಥ್‌ ಕೆಚ್ಚೆದೆಯ ಶತಕ, ಕೇರಳಕ್ಕೆ ಕಠಿಣ ಗುರಿ

ಟಾಸ್ ಸೋತರೂ ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಕರ್ನಾಟಕ ತಂಡ ದಿಟ್ಟ ಆರಂಭವನ್ನೇ ಪಡೆಯಿತು. ಬ್ಯಾಟಿಂಗ್‌ನಲ್ಲಿ ಉತ್ತಮ ಫಾರ್ಮ್‌ನಲ್ಲಿರುವ ಕರ್ನಾಟಕ ಆರಂಭಿಕ ಜೋಡಿ ಪಡಿಕ್ಕಲ್‌ ಹಾಗೂ ಸಮರ್ಥ್‌ ಮತ್ತೊಂದು ಅದ್ಭುತ ಜತೆಯಾಟ ನಿಭಾಯಿಸಿದರು. ಲಿಸ್ಟ್‌ 'ಎ' ಕ್ರಿಕೆಟ್‌ನಲ್ಲಿ ಸತತ 4 ಶತಕ ಬಾರಿಸಿದ ಭಾರತದ ಮೊದಲ ಹಾಗೂ ಒಟ್ಟಾರೆ ನಾಲ್ಕನೇ ಬ್ಯಾಟ್ಸ್‌ಮನ್ ಎನ್ನುವ ಕೀರ್ತಿಗೆ ಪಡಿಕ್ಕಲ್‌ ಭಾಜನರಾಗಿದ್ದಾರೆ.

Devdutt Padikkal

CricketMar 8, 2021, 9:33 AM IST

ವಿಜಯ್‌ ಹಜಾರೆ ಟ್ರೋಫಿ: ಕರ್ನಾಟಕ ಎದುರು ಟಾಸ್ ಗೆದ್ದ ಕೇರಳ ಬೌಲಿಂಗ್‌ ಆಯ್ಕೆ

ಇಲ್ಲಿನ ಪಾಲಮ್‌ ಎ ಸ್ಟೇಡಿಯಂನಲ್ಲಿ ಆರಂಭಗೊಂಡ ಎರಡನೇ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ದಕ್ಷಿಣ ಭಾರತದ ಎರಡು ಬಲಿಷ್ಠ ತಂಡಗಳು ಅಂತಿಮ ನಾಲ್ಕರ ಘಟ್ಟಕ್ಕಾಗಿ ಸೆಣಸಾಡಲಿವೆ. ಕರ್ನಾಟಕ ತಂಡಕ್ಕೆ ಸ್ಟಾರ್ ಆಟಗಾರ ಮನೀಶ್‌ ಪಾಂಡೆ ಹಾಗೂ ಕೃಷ್ಣಪ್ಪ ಗೌತಮ್‌ ತಂಡ ಕೂಡಿಕೊಂಡಿರುವುದು ಆತ್ಮವಿಶ್ವಾಸ ಹೆಚ್ಚುವಂತೆ ಮಾಡಿದೆ.

vijay hazare

CricketMar 8, 2021, 8:27 AM IST

ವಿಜಯ್‌ ಹಜಾರೆ ಏಕದಿನ ಟೂರ್ನಿ ಕರ್ನಾಟಕ-ಕೇರಳ ಕ್ವಾರ್ಟರ್‌ ಫೈಟ್‌

ದೇವದತ್‌ ಪಡಿಕ್ಕಲ್‌ (572 ರನ್‌), ನಾಯಕ ಆರ್‌.ಸಮರ್ಥ್ (413) ಹಾಗೂ ಕೆ.ವಿ.ಸಿದ್ಧಾಥ್‌ (241) ಅಬ್ಬರಿಸಿದ್ದು, ಮಧ್ಯಮ ಕ್ರಮಾಂಕಕ್ಕೆ ಹೆಚ್ಚು ಅವಕಾಶವೇ ಸಿಕ್ಕಿಲ್ಲ. ಗುಂಪು ಹಂತದ 5 ಪಂದ್ಯಗಳಲ್ಲಿ ರಾಜ್ಯ ಗಳಿಸಿದ ಒಟ್ಟು 1453 ರನ್‌ ಪೈಕಿ ಈ ಮೂವರೇ 1226 ರನ್‌ ಕಲೆಹಾಕಿದ್ದಾರೆ.

Vijay Hazare Trophy Karnataka

CricketMar 4, 2021, 4:35 PM IST

ವಿಜಯ್‌ ಹಜಾರೆ ಟೂರ್ನಿ: ಕ್ವಾರ್ಟರ್‌ನಲ್ಲಿ ಕರ್ನಾಟಕ-ಕೇರಳ ಕಾದಾಟ

ಬಿಸಿಸಿಐ ಅಧಿಕೃತ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಮಾ.8ರಂದು ನಡೆಯುವ 2ನೇ ಕ್ವಾರ್ಟರ್‌ನಲ್ಲಿ ಎದುರಾಗಲಿರುವ ತಂಡಗಳು ಇಲ್ಲಿನ ಪಾಲಂ ಮೈದಾನದಲ್ಲಿ ಪಂದ್ಯವನ್ನು ಆಡಲಿವೆ. ಕರ್ನಾಟಕ ಹಾಗೂ ಕೇರಳ ತಂಡಗಳು ಲೀಗ್‌ ಹಂತದಲ್ಲಿ ಒಂದೇ ಗುಂಪಿನಲ್ಲಿ ಸ್ಥಾನ ಪಡೆದಿದ್ದವು.

R Vinay Kumar

CricketFeb 26, 2021, 6:18 PM IST

ಎಲ್ಲಾ ಮಾದರಿಯ ಕ್ರಿಕೆಟ್‌ಗೆ ದಿಢೀರ್ ಗುಡ್‌ಬೈ ಹೇಳಿದ ವಿನಯ್‌ ಕುಮಾರ್‌..!

ಕರ್ನಾಟಕ ಮಾಜಿ ನಾಯಕ ವಿನಯ್‌ ಕುಮಾರ್‌ ಟ್ವೀಟ್‌ ಮೂಲಕ ತಮ್ಮ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದ್ದು, ತಮ್ಮ ವೃತ್ತಿಜೀವನದುದ್ದಕ್ಕೂ ಪ್ರೀತಿಸಿ, ಬೆಂಬಲಿಸಿ, ಹಾರೈಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಟ್ವೀಟ್‌ನಲ್ಲೇ ಪತ್ರವೊಂದನ್ನು ಲಗತ್ತಿಸಿದ್ದು, ತಮ್ಮ ವೃತ್ತಿಜೀವನವನ್ನು ಎಕ್ಸ್‌ಪ್ರೆಸ್‌ ಪಯಣಕ್ಕೆ ಹೋಲಿಸಿದ್ದು, ನಿವೃತ್ತಿ ಎನ್ನುವ ತಂಗುದಾಣಕ್ಕೆ ಬಂದು ತಲುಪಿರುವುದಾಗಿ ಬಣ್ಣಿಸಿದ್ದಾರೆ.

Devdutt Padikkal

CricketFeb 26, 2021, 5:05 PM IST

ಮತ್ತೆ ಶತಕ ಚಚ್ಚಿದ ಪಡಿಕ್ಕಲ್‌, ಕರ್ನಾಟಕಕ್ಕೆ ಸುಲಭ ಜಯ

ಕೇರಳ ನೀಡಿದ್ದ 278 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಕರ್ನಾಟಕ ತಂಡ ಮತ್ತೊಮ್ಮೆ ಭರ್ಜರಿ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್‌ಗೆ ನಾಯಕ ರವಿಕುಮಾರ್‌ ಸಮರ್ಥ್‌ ಹಾಗೂ ದೇವದತ್‌ ಪಡಿಕ್ಕಲ್‌ ಜೋಡಿ 18.2 ಓವರ್‌ಗಳಲ್ಲಿ 99 ರನ್‌ಗಳ ಜತೆಯಾಟ ನಿಭಾಯಿಸಿತು. ಸಮರ್ಥ್‌ 51 ಎಸೆತಗಳಲ್ಲಿ 10 ಬೌಂಡರಿ ಸಹಿತ 62 ರನ್‌ ಬಾರಿಸಿ ಜಲಜಾ ಸಕ್ಸೆನಾಗೆ ವಿಕೆಟ್‌ ಒಪ್ಪಿಸಿದರು.

సూరత్, ఇండోర్, బెంగళూరు, కోల్‌కత్తా, జైపూర్‌తో తమిళనాడులో విజయ్ హాజారే ట్రోఫీ నిర్వహించనున్నారు. ఎలైట్ గ్రూప్ ఏలో గుజరాత్, ఛత్తీస్‌ఘడ్, హైదరాబాద్, త్రిపుర, బరోడా, గోవా జట్లు ఉంటాయి. ఈ గ్రూప్‌కి సంబంధించిన మ్యాచులు సూరత్ నగరంలో జరుగుతాయి.

CricketFeb 26, 2021, 9:23 AM IST

ವಿಜಯ್ ಹಜಾರೆ ಟ್ರೋಫಿ: ಟಾಸ್ ಗೆದ್ದ ಕರ್ನಾಟಕ ಫೀಲ್ಡಿಂಗ್ ಆಯ್ಕೆ

ಬಿಹಾರ, ಒಡಿಶಾ ವಿರುದ್ಧ ದೊಡ್ಡ ಗೆಲುವು ದಾಖಲಿಸಿದ್ದ ಕರ್ನಾಟಕಕ್ಕೆ, ಕೇರಳ ತಂಡದಿಂದ ಭರ್ಜರಿ ಪೈಪೋಟಿ ಎದುರಾಗಲಿದೆ. ಕೇರಳ ಆಡಿರುವ 3 ಪಂದ್ಯಗಳಲ್ಲಿ ಮೂರರಲ್ಲೂ ಜಯ ಸಾಧಿಸಿದ್ದು, ‘ಸಿ’ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ.