Karnataka By Poll  

(Search results - 57)
 • BSY

  Politics22, Dec 2019, 12:26 PM

  ಪ್ರಮಾಣವಚನ ಸ್ವೀಕರಿಸಿದ ನೂತನ ಶಾಸಕರು: ಸಚಿವರಾಗಿ ಪ್ರಮಾಣ ಯಾವಾಗ..?

  ಇತ್ತೀಚೆಗ ನಡೆದ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಆಯ್ಕೆಯಾಗಿರುವ ನೂತನ ವಿಧಾನಸಭಾ ಸದಸ್ಯರ ಪೈಕಿ 13 ಜನರು ಇಂದು (ಭಾನುವಾರ) ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದರು.ವಿಧಾನಸೌಧದ ಬಾಂಕ್ವೇಟ್ ಹಾಲ್ ನಲ್ಲಿ ನಡೆದ ಸಮಾರಂಭದಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನೂತನ ಶಾಸಕರಿಗೆ ಪ್ರಮಾಣ ವಚನ ಬೋಧಿಸಿದರು.

  ಬಿಜೆಪಿಯ 12 ಹಾಗೂ ಓರ್ವ ಪಕ್ಷೇತರ ಶಾಸಕ ಪ್ರಮಾಣ ವಚನ ಸ್ವೀಕರಿಸಿದರು. ಆದ್ರೆ, ಇಬ್ಬರು ಕಾಂಗ್ರೆಸ್ ಶಾಸಕರು ಮಾತ್ರ ಪ್ರಮಾಣ ವಚನ ಸ್ವೀಕರಿಸಿಲ್ಲ. ಕಾರಣ ಏನು ಎನ್ನುವುದು ತಿಳಿದುಬಂದಿಲ್ಲ. ಡಿಸೆಂಬರ್ 5 ರಂದು ನಡೆದಿದ್ದ ಚುನಾವಣೆಯಲ್ಲಿ 12 ಬಿಜೆಪಿ, 2 ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದರು. ಹೊಸಕೋಟೆಯಲ್ಲಿ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಆಯ್ಕೆಯಾಗಿದ್ದಾರೆ. ಜೆಡಿಎಸ್ ಯಾವುದೇ ಕ್ಷೇತ್ರದಲ್ಲೂ ಗೆಲುವು ಸಾಧಿಸಿಲ್ಲ. ಇನ್ನು ಸಚಿವರಾಗಿ ಜನವರಿಯಲ್ಲಿ ಪ್ರಮಾಣವಚನ ಸ್ವೀಕರಿಸುವ ಎಲ್ಲಾ ಸಾಧ್ಯತೆಗಳಿವೆ. 

 • BSY

  Politics16, Dec 2019, 9:40 PM

  ಬೈ ಎಲೆಕ್ಷನ್‌ನಲ್ಲಿ ಗೆದ್ದ ನೂತನ ಶಾಸಕರ ಪ್ರಮಾಣವಚನಕ್ಕೆ ಡೇಟ್ ಫಿಕ್ಸ್

  ರಾಜ್ಯದ 15 ಕ್ಷೇತ್ರಗಳ ವಿಧಾನಸಭಾ ಉಪಚುನಾವಣೆಯಲ್ಲಿ 12 ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ಸಾಧಿಸಿರುವ ನೂತನ ಶಾಸಕರ ಪ್ರಮಾಣವಚನಕ್ಕೆ ಮುಹೂರ್ತ ನಿಗದಿಪಡಿಸಲಾಗಿದೆ. ಯಾವಾಗ..? ಈ ಕೆಳಗಿನಂತಿದೆ ನೋಡಿ ಡೇಟ್.

 • Nota JDS

  Politics10, Dec 2019, 7:35 PM

  ಉಪಚುನಾವಣೆ: 3 ಕ್ಷೇತ್ರಗಳಲ್ಲಿ JDSಗಿಂತಲೂ ನೋಟಾಗೆ ಹೆಚ್ಚು ಮತಗಳು: ಹೌದ್ದೋ ಹುಲಿಯಾ..!

  ಸಂಚಲನ ಮೂಡಿಸಿದ್ದ ರಾಜ್ಯ ವಿಧಾನಸಭೆಯ 15 ವಿಧಾನಸಭೆಯ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಗಳಿಸಿದ ಮತಗಳ ಲೆಕ್ಕಾಚಾರ ಗಮನಿಸಿದರೆ ಮೂರು ಕ್ಷೇತ್ರಗಳಲ್ಲಿ ಜೆಡಿಎಸ್​ಗಿಂತಲೂ ನೋಟಾ ಗಳಿಸಿದ ಮತಗಳೇ ಹೆಚ್ಚು. ಹಾಗಾದ್ರೆ, ಯಾವ ಕ್ಷೇತ್ರದಲ್ಲಿ ನೋಟಾಗೆ ಎಷ್ಟು ಮತ ಬಿದ್ದಿವೆ ಎನ್ನುವ ಮಾಹಿತಿ ಈ ಕೆಳಗಿನಂತಿದೆ.

 • Siddu

  Politics10, Dec 2019, 6:18 PM

  'ಚುನಾವಣೆಯಲ್ಲಿ ನನಗೆ 1 ಕಣ್ಣು, ಸಿದ್ದರಾಮಯ್ಯಗೆ 2 ಕಣ್ಣು ಹೋಗಿವೆ'

  ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಎಂಟಿಬಿ ನಾಗರಾಜ್ ಅವರನ್ನು ಉಪಚುನಾವಣೆಯಲ್ಲಿ ಸೋಲಿಸಲು ಸಿದ್ದರಾಮಯ್ಯ ಪಣತೊಟ್ಟು, ಇದಕ್ಕಾಗಿ ತನ್ನ ಶಿಷ್ಯ ಶಾಸಕ ಬೈರತಿ ಸುರೇಶ್ ಪತ್ನಿ ಪದ್ಮಾವತಿ ಅವರನ್ನು ಕಣಕ್ಕಿಳಿಸಿ ಎಂಟಿಬಿಯನ್ನ ಸೋಲಿಸುವಲ್ಲಿ  ಸಿದ್ದು ಯಶಸ್ವಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಎಂಟಿಬಿ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ.

 • DK Shivakumar

  Karnataka Districts9, Dec 2019, 4:58 PM

  ಕೈ ಟ್ರಬಲ್ ಶೂಟರ್ ಕಾಣೆಯಾಗಿದ್ದಾರೆಂದು ಡಿಕೆಶಿ ಕೋಟೆಯಲ್ಲಿ ಬಿಜೆಪಿಗರ ಸಂಭ್ರಮ

  ರಾಜ್ಯದಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ 12 ಸ್ಥಾನಗಳಲ್ಲಿ ಜಯಗಳಿಸಿದೆ. ಬಿಜೆಪಿಗರ ಸಂಭ್ರಮ ಮುಗಿಲು ಮುಟ್ಟಿದೆ. ಕಾಂಗ್ರೆಸ್ ಕೇವಲ 2 ಸ್ಥಾನ ಪಡೆದಿದ್ದು, ಜೆಡಿಎಸ್ ಶೂನ್ಯವಾಗಿದೆ.

 • undefined

  Karnataka Districts9, Dec 2019, 3:31 PM

  ‘ಹಾಸನ ಆಕಸ್ಮಿಕ ಗೆಲುವಿನ ಹೇಳಿಕೆಗೆ ಕೆ.ಆರ್ ಪೇಟೆ ಗೆಲುವು ಉತ್ತರವಾಯ್ತು’

  ರಾಜ್ಯದಲ್ಲಿ ನಡೆದ ಉಪ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. 15 ಕ್ಷೇತ್ರಗಳಲ್ಲಿ ನಡೆದ ಉಪ ಚುನಾವಣೆಯಲ್ಲಿ 12 ಕ್ಷೇತ್ರಗಳು ಬಿಜೆಪಿ ಪಾಲಾಗಿವೆ. ಆದರೆ ಜೆಡಿಎಸ್ ಒಂದು ಸ್ಥಾನ ಪಡೆಯಲೂ ವಿಫಲವಾಗಿದೆ.

 • undefined

  Politics9, Dec 2019, 2:39 PM

  ಕರ್ನಾಟಕ ಉಪ ಚುನಾವಣೆ : ಗೆದ್ದ ಅಭ್ಯರ್ಥಿಗಳ ರಿಯಾಕ್ಷನ್ ಏನು?

  ರಾಜ್ಯದಲ್ಲಿ ಉಪ ಸಮರ ಮುಕ್ತಾಯವಾಗಿದೆ. 15 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ 12 ಕ್ಷೇತ್ರಗಳಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಎರಡು ಸ್ಥಾನಗಳಲ್ಲಿ ಗೆದ್ದಿದೆ. ಇನ್ನೊಂದು ಸ್ಥಾನ ಪಕ್ಷೇತರ ಅಭ್ಯರ್ಥಿ ಪಾಲಾಗಿದೆ. ಸದ್ಯ ಗೆದ್ದ ಅಭ್ಯರ್ಥಿಗಳ ರಿಯಾಕ್ಷನ್ ಹೀಗಿದೆ. 

 • undefined

  Karnataka Districts9, Dec 2019, 12:04 PM

  ‘ಬಿಜೆಪಿ ಸರ್ಕಾರಕ್ಕೆ ಜನಾದೇಶ : ಸೋತ ವಿಶ್ವನಾಥ್‌ಗೂ ಪಕ್ಷದಿಂದ ಸಿಗುತ್ತೆ ಸ್ಥಾನ’

  ರಾಜ್ಯದಲ್ಲಿ ಬಿಜೆಪಿ ಸ್ಥಿರ ಸರ್ಕಾರಕ್ಕೆ ಜನರು ಮತ ನೀಡಿದ್ದಾರೆ. ಸೋತವರಿಗೂ ಇಲ್ಲಿ ಸೂಕ್ತ ಸ್ಥಾನ ಮಾನ ಸಿಗಲಿದೆ ಎಂದು ಸಚಿವ ಸಿ.ಟಿ ರವಿ ಹೇಳಿದ್ದಾರೆ. 

 • sharath bachegowda mtb nagaraj
  Video Icon

  Politics27, Nov 2019, 2:02 PM

  ಹೊಸಕೋಟೆಯಲ್ಲಿ ರಕ್ತ ರಾಜಕೀಯ! MTB ಬೆಂಬಲಿಗನ ಮೇಲೆ ಹಲ್ಲೆ

  ಮತದಾನ ದಿನಾಂಕ ಸಮೀಪಿಸುತ್ತಿದ್ದಂತೆ ಹೊಸಕೋಟೆ ಚುನವಣಾ ಕಣ ಹೊಡೆದಾಟ ಬಡಿದಾಟಗಳು ಶುರುವಾಗಿದೆ.  ಬಿಜೆಪಿ ಅಭ್ಯರ್ಥಿ ಎಂ.ಟಿ.ಬಿ. ನಾಗರಾಜ್ ಬೆಂಬಲಿಗನ ಮೇಲೆ ರಾಡ್‌ನಿಂದ ಹಲ್ಲೆ ನಡೆದಿದೆ.  ಶರತ್ ಬಚ್ಚೇಗೌಡ ಬೆಂಬಲಿಗರಿಂದ ಹಲ್ಲೆ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.

 • Sumalatha
  Video Icon

  Politics26, Nov 2019, 3:56 PM

  ಕೆ.ಆರ್.ಪೇಟೆ ಜೆಡಿಎಸ್ ಭದ್ರಕೋಟೆ ; ಸುಮಲತಾ ಯಾರ ಪರ ಮತಬೇಟೆ?

  ಜನತಾದಳದ ಭದ್ರಕೋಟೆಗಳ ಪೈಕಿ ಕೆ.ಆರ್. ಪೇಟೆ ವಿಧಾನಸಬಾ ಕ್ಷೇತ್ರವೂ ಒಂದು. ಜನತಾದಳದ ಹೆಸರಿನಲ್ಲಿ ಗೆದ್ದು, ಬಿಜೆಪಿಯಿಂದ ಕಣಕ್ಕಿಳಿದಿರುವ ಕೆ.ಸಿ. ನಾರಾಯಣ ಗೌಡ ವಿರುದ್ಧ ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರಬಲ ಎದುರಾಳಿಗಳನ್ನು ಅಖಾಡಕ್ಕಿಳಿಸಿದೆ. 

  ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಮಂಡ್ಯ ಸಂಸದೆ ಸುಮಲತಾ ಬೆಂಬಲವನ್ನು ಎದುರುನೋಡುತ್ತಿವೆ. ಪಕ್ಷೇತರ ಜನಪ್ರತಿನಿಧಿಯಾಗಿರುವ ಸುಮಲತಾ ನಿಲುವು ಏನಾಗಿರಲಿದೆ?

 • dks kumarswamy
  Video Icon

  Politics26, Nov 2019, 3:00 PM

  ಬಿಜೆಪಿಗೆ ಶಾಸ್ತಿ; ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮತ್ತೆ ದೋಸ್ತಿ?

  ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮತ್ತೆ ಮೈತ್ರಿ ಮಾಡಿಕೊಳ್ಳುವ ಎಲ್ಲಾ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. 2018 ವಿಧಾನಸಭಾ ಚುನಾವಣೆ ಫಲಿತಾಂಶ ಬಳಿಕ ಮೈತ್ರಿ ಮಾಡಿಕೊಂಡಿದ್ದ ಕಾಂಗ್ರೆಸ್-ಜೆಡಿಎಸ್, ಸರ್ಕಾರ ಉರುಳಿದ ನಂತರ ಮತ್ತೆ ಹಾವು-ಮುಂಗುಸಿಯಂತೆ ಕಚ್ಚಾಡಲು ಆರಂಭಿಸಿದ್ದುವು. ಬಿಜೆಪಿ ಸರ್ಕಾರ ಉಳಿಯಬೇಕಾದ್ರೆ ಉಪಚುನಾವಣೆಯಲ್ಲಿ ಕನಿಷ್ಠ 8 ಸೀಟುಗಳನ್ನು ಗೆಲ್ಲಲೇಬೇಕಾಗಿದೆ. ಒಂದು ವೇಳೆ ಮತ್ತೆ ಅತಂತ್ರ ಸ್ಥಿತಿ ನಿರ್ಮಾಣವಾದರೆ, ಕಾಂಗ್ರೆಸ್-ಜೆಡಿಎಸ್ ಸೇರಿ ಸರ್ಕಾರ ರಚನೆ ಮಾಡುವ ಆಲೋಚನೆ ಇದೆಯಾ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.

 • Deva Gowda
  Video Icon

  Politics24, Nov 2019, 7:45 PM

  ಬೈ ಎಲೆಕ್ಷನ್ ಬಳಿಕ ಗೌಡರ ಮನೆ ಬಾಗಿಲಿಗೇ ಬರಲೇಬೇಕು: ಯಾರು ಯಾರಿಗೆ ಹೇಳಿದ್ರು..?

  ಜೆಡಿಎಸ್ ಸೈಲೆಂಟ್ ಆಗಿ ಮುಂದಿನ ರಾಜಕೀಯ ಭವಿಷ್ಯದ ಬಗ್ಗೆ ಯೋಚನೆ ಮಾಡುತ್ತಿದೆ. ಅದರಲ್ಲೂ ಕುಮಾರಸ್ವಾಮಿ ಡಿ.9ರ ಬಳಿಕ ಯಾರಿಗೆ ಬೆಂಬಲಿಸಬೇಕೆಂದು ಹೇಳುತ್ತೇನೆಂದು ಸ್ಪಷ್ಟಪಡಿಸಿದ್ದಾರೆ. ಇದರ ಉಪಚುನಾವಣೆ ಬಳಿಕ ಬಿಜೆಪಿ ದೇವೇಗೌಡ್ರ ಮನೆ ಬಾಗಿಲಿಗೆ ಬರಲೇಬೇಕೆಂದು ಎಂದು ಅಚ್ಚರಿ ಹೇಳಿಕೆ ನೀಡಿದ್ದಾರೆ. ಯಾರು ಆ ಜೆಡಿಎಸ್ ನಾಯಕ ವಿಡಿಯೋನಲ್ಲಿ ನೋಡಿ...

 • BSY

  Politics23, Nov 2019, 6:23 PM

  ಉಪ ಕದನ: ಮತದಾರರನ್ನು ಸೆಳೆಯಲು ಜಾತಿ ಅಸ್ತ್ರ ಬಿಟ್ಟ ಯಡಿಯೂರಪ್ಪ

  ಬೆಳಗಾವಿಯಲ್ಲಿ ಉಪಚುನಾವಣೆ ಅಖಾಡಕ್ಕಿಳಿದಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕಾರ್ಯಕರ್ತರ ಸಮಾವೇಶದಲ್ಲಿ ಜಾತಿ ಹೆಸರಿನ‌ ಮೂಲಕ ಲಿಂಗಾಯತ ಮತಬ್ಯಾಂಕ್ ಕ್ರೋಢೀಕರಣ ಯತ್ನ ಮಾಡಿದರು. ಹಾಗಾದ್ರೆ ಸಮಾವೇಶದಲ್ಲಿ ಬಿಎಸ್ ವೈ ಏನೆಲ್ಲ ಹೇಳಿದ್ರು ಎನ್ನವು ಸಂಕ್ಷಿಪ್ತ ಮಾಹಿತಿ ಈ ಕೆಳಗಿನಂತಿದೆ.

 • BC Patil

  Politics17, Nov 2019, 6:55 PM

  ಬೈ ಎಲೆಕ್ಷನ್ ಹೊತ್ತಲ್ಲಿ ಕಾಂಗ್ರೆಸ್‌ಗೆ ಶಾಕ್: ಆಪರೇಷನ್ ಕಮಲ ಸಕ್ಸಸ್

  ಉಪ ಚುನಾವಣೆ ಹೊಸ್ತಿಲಲ್ಲಿ  ಹಿರೇಕರೂರು ಕಾಂಗ್ರೆಸ್ ಗೆ ಬಹುದೊಡ್ಡ ಶಾಕ್| 8 ಕೈ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆ| ಬಿಜೆಪಿ ಅಭ್ಯರ್ಥಿ ಬಿ ಸಿ ಪಾಟೀಲ , ಬಿಜೆಪಿ ತಾಲೂಕು ಅಧ್ಯಕ್ಷ ಎಸ್ ಆರ್ ಅಂಗಡಿ , ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ  ಯು ಬಿ ಬಣಕಾರ ನೇತೃತ್ವದಲ್ಲಿ ಸೇರ್ಪಡೆ.

 • undefined

  Politics17, Nov 2019, 10:00 AM

  ಯಶವಂತಪುರ ಬಿಟ್ಟು ಎಲ್ಲಾ ಕ್ಷೇತ್ರಕ್ಕೆ ಕೈ ಅಭ್ಯರ್ಥಿ ಘೋಷಣೆ, ಇಲ್ಲಿದೆ ಪಟ್ಟಿ

  ಯಶವಂತಪುರ ಬಿಟ್ಟು ಎಲ್ಲಾ ಕ್ಷೇತ್ರಕ್ಕೆ ಕೈ ಅಭ್ಯರ್ಥಿ ಘೋಷಣೆ| ಕಗ್ಗಂಟಾಗಿದ್ದ ಶಿವಾಜಿನಗರ ಕ್ಷೇತ್ರಕ್ಕೆ ರಿಜ್ವಾನ್‌ ಅರ್ಷದ್‌| ಯಶವಂತಪುರಕ್ಕೆ ರಾಜಕುಮಾರ್‌ ನಾಯ್ಡು ಹೆಸರಿಗೆ ತಡೆ| ನಿನ್ನೆ ರಾತ್ರಿ 6 ಕ್ಷೇತ್ರಕ್ಕೆ ಅಭ್ಯರ್ಥಿಗಳ ಹೆಸರು ಪ್ರಕಟ