Karnataka By Election Result 2019  

(Search results - 21)
 • BSY

  Politics22, Dec 2019, 12:26 PM

  ಪ್ರಮಾಣವಚನ ಸ್ವೀಕರಿಸಿದ ನೂತನ ಶಾಸಕರು: ಸಚಿವರಾಗಿ ಪ್ರಮಾಣ ಯಾವಾಗ..?

  ಇತ್ತೀಚೆಗ ನಡೆದ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಆಯ್ಕೆಯಾಗಿರುವ ನೂತನ ವಿಧಾನಸಭಾ ಸದಸ್ಯರ ಪೈಕಿ 13 ಜನರು ಇಂದು (ಭಾನುವಾರ) ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದರು.ವಿಧಾನಸೌಧದ ಬಾಂಕ್ವೇಟ್ ಹಾಲ್ ನಲ್ಲಿ ನಡೆದ ಸಮಾರಂಭದಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನೂತನ ಶಾಸಕರಿಗೆ ಪ್ರಮಾಣ ವಚನ ಬೋಧಿಸಿದರು.

  ಬಿಜೆಪಿಯ 12 ಹಾಗೂ ಓರ್ವ ಪಕ್ಷೇತರ ಶಾಸಕ ಪ್ರಮಾಣ ವಚನ ಸ್ವೀಕರಿಸಿದರು. ಆದ್ರೆ, ಇಬ್ಬರು ಕಾಂಗ್ರೆಸ್ ಶಾಸಕರು ಮಾತ್ರ ಪ್ರಮಾಣ ವಚನ ಸ್ವೀಕರಿಸಿಲ್ಲ. ಕಾರಣ ಏನು ಎನ್ನುವುದು ತಿಳಿದುಬಂದಿಲ್ಲ. ಡಿಸೆಂಬರ್ 5 ರಂದು ನಡೆದಿದ್ದ ಚುನಾವಣೆಯಲ್ಲಿ 12 ಬಿಜೆಪಿ, 2 ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದರು. ಹೊಸಕೋಟೆಯಲ್ಲಿ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಆಯ್ಕೆಯಾಗಿದ್ದಾರೆ. ಜೆಡಿಎಸ್ ಯಾವುದೇ ಕ್ಷೇತ್ರದಲ್ಲೂ ಗೆಲುವು ಸಾಧಿಸಿಲ್ಲ. ಇನ್ನು ಸಚಿವರಾಗಿ ಜನವರಿಯಲ್ಲಿ ಪ್ರಮಾಣವಚನ ಸ್ವೀಕರಿಸುವ ಎಲ್ಲಾ ಸಾಧ್ಯತೆಗಳಿವೆ. 

 • BSY

  Politics16, Dec 2019, 9:40 PM

  ಬೈ ಎಲೆಕ್ಷನ್‌ನಲ್ಲಿ ಗೆದ್ದ ನೂತನ ಶಾಸಕರ ಪ್ರಮಾಣವಚನಕ್ಕೆ ಡೇಟ್ ಫಿಕ್ಸ್

  ರಾಜ್ಯದ 15 ಕ್ಷೇತ್ರಗಳ ವಿಧಾನಸಭಾ ಉಪಚುನಾವಣೆಯಲ್ಲಿ 12 ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ಸಾಧಿಸಿರುವ ನೂತನ ಶಾಸಕರ ಪ್ರಮಾಣವಚನಕ್ಕೆ ಮುಹೂರ್ತ ನಿಗದಿಪಡಿಸಲಾಗಿದೆ. ಯಾವಾಗ..? ಈ ಕೆಳಗಿನಂತಿದೆ ನೋಡಿ ಡೇಟ್.

 • Modi BSY
  Video Icon

  Politics14, Dec 2019, 4:23 PM

  ಬೆಳ್ಳಂಬೆಳಗ್ಗೆ BSYಗೆ ಮೋದಿ ಫೋನ್: ರಾಜ್ಯದ ಬಗ್ಗೆ ಮಹತ್ವದ ಮಾತುಕತೆ

  ಇಂದು (ಶನಿವಾರ) ಬೆಳ್ಳಂಬೆಳಗ್ಗೆ ನರೇಂದ್ರ ಮೋದಿ ಅವರು ಬಿ.ಎಸ್.ಯಡಿಯೂರಪ್ಪಗೆ ದೂರವಾವಣಿ ಕರೆ ಮಾಡಿ ಮತ್ತೆ ಅಭಿನಂದನೆ ಸಲ್ಲಿಸಿದ್ದಾರೆ. ಇದೇ ವೇಳೆ ರಾಜ್ಯದ ಅಭಿವೃದ್ಧಿ ಬಗ್ಗೆ ಮಹತ್ವದ ಮಾತುಗಳನ್ನಾಡಿದ್ದಾರೆ ಎಂದು ತಿಳಿದುಬಂದಿದೆ. ಹಾಗಾದ್ರೆ ಬಿಎಸ್‌ವೈಗೆ ಮೋದಿ ಏನೆಲ್ಲಾ ಹೇಳಿದ್ದಾರೆ ಎನ್ನುವುದನ್ನ ವಿಡಿಯೋನಲ್ಲಿ ನೋಡಿ.

 • Kateel

  Politics12, Dec 2019, 4:03 PM

  ಬೈ ಎಲೆಕ್ಷನ್‌ನಲ್ಲಿ ಗೆದ್ದು ಬೀಗಿದ BJP: ಸಿಹಿ ತಿಂದು ವಿಜಯೋತ್ಸವ ಆಚರಿಸಿದ ಶಾ

  15 ಕ್ಷೇತ್ರಗಳಲ್ಲಿ 12 ಸ್ಥಾನಗಳಲ್ಲಿ ಗೆದ್ದು ಬೀಗಿದ ರಾಜ್ಯ ಬಿಜೆಪಿಗೆ ಹೈಕಮಾಂಡ್ ಫುಲ್ ಫಿದಾ ಆಗ್ಬಿಟ್ಟಿದೆ. ಹಗಲಿರುಳು ಸುತ್ತಾಡಿ ಸರ್ಕಾರ ಸೇಫ್ ಮಾಡಿಕೊಂಡಿರುವ ಯಡಿಯೂಪ್ಪಗೆ ಹೈಕಮಾಂಡ್ ಇದೇ ಮೊದಲ ಬಾರಿಗೆ ಅಭಿನಂದಿಸಿದೆ. ಅದರಲ್ಲೂ ಇಂದು ಅಮಿತ್ ಶಾ ಸಿಹಿ ತಿಂದು ವಿಜಯೋತ್ಸವ ಆಚರಿಸಿದ್ದಾರೆ.

 • HD Devegowda Family
  Video Icon

  Politics11, Dec 2019, 9:22 PM

  KR ಪೇಟೆಯಲ್ಲಿ ಹಣದಿಂದ BJP ಗೆದ್ದಿದೆ ಎಂದು ರೇವಣ್ಣಗೆ ದೇವೇಗೌಡ, ಕುಮಾರಣ್ಣ ಫುಲ್ ಕ್ಲಾಸ್

  ಬೈ ಎಲೆಕ್ಷನ್ ಸೋಲಿನಿಂದ ದಳಪತಿಗಳು ಕಂಗಾಲಾಗಿದ್ದಾರೆ. ಅದರಲ್ಲೂ ಮಂಡ್ಯದ ಕೆ.ಆರ್.ಪೇಟೆಯಲ್ಲಿ ಸೋಲಾಗಿದ್ದರಿಂದ ಫುಲ್ ಶಾಕ್ ಆಗಿದ್ದಾರೆ. ಮಂಡ್ಯದಲ್ಲಿ ಬಿಜೆಪಿ ಗೆದ್ದಿದೆ ಮುಂದೆ ನಮ್ಮ ಪಕ್ಷದ ಕಥೆ ಏನು ಎನ್ನುವ ಚಿಂತೆಯಲ್ಲಿ ದೇವೇಗೌಡ್ರು, ಕುಮಾರಸ್ವಾಮಿ ಇದ್ದಾರೆ. ಇದರ ನಡುವೆ ಹಣದಿಂದ ಬಿಜೆಪಿ ಗೆದ್ದಿದೆ ಎಂದು ಹೇಳಿದ್ದ ಎಚ್.ಡಿ.ರೇವಣ್ಣನವರನ್ನು ಮನೆಗೆ ಕರೆಯಿಸಿಕೊಂಡು ದೇವೇಗೌಡ ಮತ್ತು ಕುಮಾರಸ್ವಾಮಿ ಸೇರಿಕೊಂಡು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಫುಲ್ ಕ್ಲಾಸ್ ತೆಗೆದುಕೊಂಡಿದ್ಯಾಕೆ ಎನ್ನುವುದನ್ನು ವಿಡಿಯೋನಲ್ಲಿ ನೋಡಿ.

 • bsy

  Politics11, Dec 2019, 4:52 PM

  ಇಬ್ಬರ ತಲೆದಂಡ: ಸೋತ್ರೂ ಎಂಟಿಬಿ-ವಿಶ್ವನಾಥ್‌ಗೆ ಮಂತ್ರಿ ಭಾಗ್ಯ?

  ಉಪಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದ್ದು, ಯಡಿಯೂರಪ್ಪ ಸರ್ಕಾರ ಸೇಫ್‌ ಆಗಿದೆ. ಆದ್ರೆ, ಅನರ್ಹರ ಪೈಕಿ ಎಚ್.ವಿಶ್ವನಾಥ್ ಹಾಗೂ ಎಂಟಿಬಿ ನಾಗರಾಜ್ ಸೋಲುಕಂಡಿರುವುದು ಬಿಎಸ್‌ವೈಗೆ ಕೊಂಚ ಬೇಸರತರಿಸಿದೆ. ಆದರೂ ವಿಶ್ವನಾಥ್ ಮತ್ತು ಎಂಟಿಬಿಗೆ ಮಂತ್ರಿಗಿರಿ ಸಿಗುವುದು ಪಕ್ಕಾ ಎಂದು ತಿಳಿದುಬಂದಿದೆ. ಅದು ಹೇಗೆ ಅಂತೀರಾ..? ಬಿಎಸ್‌ವೈ ಆಪ್ತ ಮೂಲಗಳಿಂದ ಬಂದ ಸುದ್ದಿ ಈ ಕೆಳಗಿನಂತಿದೆ ನೋಡಿ...

 • KPCC

  Politics10, Dec 2019, 9:17 PM

  KPCC ಕುರ್ಚಿ ಮೇಲೆ ಕಾಂಗ್ರೆಸ್ ಹಿರಿಯ ನಾಯಕನಿಂದ ಬಿತ್ತು ಮೊದಲ ಟವೆಲ್

  ಶಾಸಕಾಂಗ ನಾಯಕ  ಸ್ಥಾನಕ್ಕೆ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ರಾಜೀನಾಮೆ ಬಳಿಕ ರಾಜ್ಯ ಕಾಂಗ್ರೆಸ್ ಖಾಲಿಯಾಗಿದಂತಿದೆ. ಈ ನಡುವೆ ಕೆಪಿಸಿಸಿ ಸಾರಥ್ಯ ಯಾರಿಗೆ ಒಲಿಯಲಿದೆ ಎಂಬ ಕುತೂಹಲ ಕೈ ಕಾರ್ಯಕರ್ತರಲ್ಲಿ ಜೋರಾಗಿದ್ದು, ಕಪಿಸಿಸಿ ಕುರ್ಚಿ ಮೇಲೆ ಹಿರಿಯ ನಾಯಕ ಟವೆಲ್ ಹಾಕಿದ್ದಾರೆ.
   

 • BSY
  Video Icon

  Politics10, Dec 2019, 8:47 PM

  ಉಪಮುಖ್ಯಮಂತ್ರಿ ಹುದ್ದೆ ಕೊಡಲ್ಲ: ಖಡಕ್ ಆಗಿ ಹೇಳಿದ ಬಿಜೆಪಿ ನಾಯಕ

  ಯಾರಿಗೆ ಯಾವ ಖಾತೆ ಅನ್ನೋದು ಮಾತ್ರ ಬಿಎಸ್ ವೈ ಅವರನ್ನು ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ.  ಹಲವು ಘಟಾನುಘಟಿಗಳು ಪ್ರಬಲ ಖಾತೆಯನ್ನೇ ಬಯಸುತ್ತಿದ್ದಾರೆ. ಅದರಲ್ಲೂ ಅನರ್ಹ ಶಾಸಕ ಗುಂಪಿನ ಕ್ಯಾಪ್ಟನ್ ಉಪಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣಿಟ್ಟಿದ್ದರು.  ಆದ್ರೆ, ಉಪಮುಖ್ಯ ಮಂತ್ರಿ ಹುದ್ದೆ ಯಾರಿಗೂ ಇಲ್ಲ ಎಂದು ಬಿಜೆಪಿ ನಾಯಕ ಖಡಕ್ ಆಗಿ ಹೇಳಿದ್ದಾರೆ. 
   

 • Nikhil Kumaraswamy
  Video Icon

  Politics10, Dec 2019, 8:26 PM

  ನಮ್ಮ ತಂದೆ ಏನು ಅನ್ಯಾಯ ಮಾಡಿದ್ರು: ಕಣ್ಣೀರಿಟ್ಟ ನಿಖಿಲ್

  ರಾಜ್ಯದಲ್ಲಿ ನಡೆದ 15 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಒಂದೂ ಸ್ಥಾನ ಗೆಲ್ಲದ ಜೆಡಿಎಸ್ ಪಕ್ಷದ ಸ್ಥಿತಿ ಈಗ ಹೇಳತೀರದಾಗಿದೆ. ಅದರಲ್ಲೂ ಜೆಡಿಎಸ್ ಪ್ರಾಬಲ್ಯವಿರುವ ಮಂಡ್ಯದ ಕೆ.ಆರ್.ಪೇಟೆಯ ಸೋಲಿಗೆ ನಿಖಿಲ್ ಕುಮಾರಸ್ವಾಮಿ ಕಣ್ಣೀರು ಹಾಕಿದ್ದಾರೆ. 
   

 • Nota JDS

  Politics10, Dec 2019, 7:35 PM

  ಉಪಚುನಾವಣೆ: 3 ಕ್ಷೇತ್ರಗಳಲ್ಲಿ JDSಗಿಂತಲೂ ನೋಟಾಗೆ ಹೆಚ್ಚು ಮತಗಳು: ಹೌದ್ದೋ ಹುಲಿಯಾ..!

  ಸಂಚಲನ ಮೂಡಿಸಿದ್ದ ರಾಜ್ಯ ವಿಧಾನಸಭೆಯ 15 ವಿಧಾನಸಭೆಯ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಗಳಿಸಿದ ಮತಗಳ ಲೆಕ್ಕಾಚಾರ ಗಮನಿಸಿದರೆ ಮೂರು ಕ್ಷೇತ್ರಗಳಲ್ಲಿ ಜೆಡಿಎಸ್​ಗಿಂತಲೂ ನೋಟಾ ಗಳಿಸಿದ ಮತಗಳೇ ಹೆಚ್ಚು. ಹಾಗಾದ್ರೆ, ಯಾವ ಕ್ಷೇತ್ರದಲ್ಲಿ ನೋಟಾಗೆ ಎಷ್ಟು ಮತ ಬಿದ್ದಿವೆ ಎನ್ನುವ ಮಾಹಿತಿ ಈ ಕೆಳಗಿನಂತಿದೆ.

 • Siddu

  Politics10, Dec 2019, 6:18 PM

  'ಚುನಾವಣೆಯಲ್ಲಿ ನನಗೆ 1 ಕಣ್ಣು, ಸಿದ್ದರಾಮಯ್ಯಗೆ 2 ಕಣ್ಣು ಹೋಗಿವೆ'

  ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಎಂಟಿಬಿ ನಾಗರಾಜ್ ಅವರನ್ನು ಉಪಚುನಾವಣೆಯಲ್ಲಿ ಸೋಲಿಸಲು ಸಿದ್ದರಾಮಯ್ಯ ಪಣತೊಟ್ಟು, ಇದಕ್ಕಾಗಿ ತನ್ನ ಶಿಷ್ಯ ಶಾಸಕ ಬೈರತಿ ಸುರೇಶ್ ಪತ್ನಿ ಪದ್ಮಾವತಿ ಅವರನ್ನು ಕಣಕ್ಕಿಳಿಸಿ ಎಂಟಿಬಿಯನ್ನ ಸೋಲಿಸುವಲ್ಲಿ  ಸಿದ್ದು ಯಶಸ್ವಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಎಂಟಿಬಿ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ.

 • BSY HDK

  Politics9, Dec 2019, 7:15 PM

  ಲೋಕಸಭೆ ಎಲೆಕ್ಷನ್‌ನಲ್ಲಿನ ಚಾಳಿ ಮುಂದುವರಿಸಿದ JDS:ಕೆ.ಆರ್.ಪೇಟೆಯಲ್ಲಿ ಕಮಲ ಅರಳಲು 5 ಕಾರಣ..!

  ರಾಜ್ಯ ಸರ್ಕಾರಕ್ಕೆ ದಿಕ್ಸೂಚಿಯಾಗಿದ್ದ 15 ಕ್ಷೇತ್ರಗಳ ಉಪಚುನಾವಣೆ ಪ್ರಕಟವಾಗಿದ್ದು, ಬಿಜೆಪಿ ನಿರೀಕ್ಷೆಗೂ ಮೀರಿ ಗೆದ್ದು ಬೀಗಿದೆ. ಅದರಲ್ಲೂ ಈ ಬಾರಿಯ ಉಪಚುನಾವಣೆಯಲ್ಲಿ ಜೆಡಿಎಸ್‌ ಭದ್ರಕೋಟೆಯಲ್ಲಿ ಕಮಲ ಅರಳಿದ್ದು, ಇತಿಹಾಸ ಸೃಷ್ಟಿಯಾಗಿದೆ. ಇನ್ನು ಧಳಪತಿಗಳ ಭದ್ರಕೋಟೆ ಅಲುಗಾಡಲು ಪ್ರಮುಖ ಕಾರಣಗಳೇನು..? ಈ ಕೆಳಗಿನಂತಿವೆ ನೋಡಿ...

 • BSY

  Politics9, Dec 2019, 6:18 PM

  ಬಪ್ಪರೇ..! ಅಪ್ಪನ ಸರ್ಕಾರ ಉಳಿವಿಗೆ ಹೆಗಲು ಕೊಟ್ಟ ಮಕ್ಕಳು, ತಂದೆಗೆ ಗೆಲುವಿನ ಉಡುಗೊರೆ

  ಯಡಿಯೂರಪ್ಪ ಸರ್ಕಾರದ ಅಳಿವು-ಉಳಿವಿನ ನಿರ್ಣಾಯ ಉಪ ಕದನದಲ್ಲಿ ಕಮಲ ಕಲಿಗಳು ವಿಜಯಪತಾಕೆ ಹಾರಿಸಿದ್ದಾರೆ. ಬೈ ಎಲೆಕ್ಷನ್ ಬ್ಯಾಟೆಲ್​ನಲ್ಲಿ ಬಿಜೆಪಿ ಸರ್ಕಾರ ಸೇಫಾಗಲು ಬಿಎಸ್​ವೈ ಪುತ್ರ ರತ್ನರು ಸಹ ನಿರ್ಣಾಯಕ ಪಾತ್ರ ವಹಿಸಿದ್ದು, ತಂದೆಗೆ ಗೆಲುವಿನ ಉಡುಗೊರೆ ನೀಡಿದ್ದಾರೆ. ಅಷ್ಟೇ ಅಲ್ಲ ಯಡಿಯೂರಪ್ಪನವರ ಬಹುಕಾಲದ  ಕನವರಿಕೆಗೆ ಮುಕ್ತಿ ನೀಡಿ ಸಹಿ ಹಂಚಿ ಸಂಭ್ರಮಿಸಿದ್ದಾರೆ.

 • Siddu

  Politics9, Dec 2019, 4:51 PM

  ಬೈ ಎಲೆಕ್ಷನ್ ಸೋಲಿಗೆ ಕಾರಣ ಕೇಳಿದ ಕಾಂಗ್ರೆಸ್‌ ಹೈಕಮಾಂಡ್‌ಗೆ ಸಿದ್ದು ಗುದ್ದು..!

  ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲಿಗೆ ಕಾರಣ ಕೇಳಿದ ಹೈಕಮಾಂಡ್‌ಗೆ ಖಡಕ್ ಉತ್ತರದೊಂದಿಗೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದಾರೆ. ದೂರವಾಣಿ ಕರೆಯಲ್ಲಿ ಸಿದ್ದರಾಮಯ್ಯ ಹೈಕಮಾಂಡ್ ವಿರುದ್ಧವೇ ಗುಡುಗಿದ್ದಾರೆ. ಹಾಗಾದ್ರೆ, ಹೈಕಮಾಂಡ್ ವಿರುದ್ಧ ಸಿದ್ದು ಗುಡುಗಿದ್ದೇನು..? ಕಾರಣ ಕೇಳಿದ ಹೈಕಮಾಂಡ್‌ಗೆ ಸಿದ್ದು ಕೊಟ್ಟ ಖಡಕ್ ಉತ್ತರವೇನು..? ಸಿದ್ದರಾಮಯ್ಯ ಆಪ್ತವಲಯದಿಂದ ತಿಳಿದುಬಂದ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.

 • Vijayendra

  Politics9, Dec 2019, 4:06 PM

  ಸೊಲ್ಲೇ ಇಲ್ಲದ ಕೆಆರ್ ಪೇಟೆಯಲ್ಲಿ ಕಮಲ ಅರಳಿದ್ದೇಗೆ? ಹೊಸ ರಾಜಕೀಯ ಚಾಣಕ್ಯ ಮಾಡಿದ ಆ ಒಂದು ಕೆಲಸ!

  ಕೆಆರ್ ಪೇಟೆಯಲ್ಲಿ ನಾರಾಯಣ ಗೌಡರು ಗೆಲುವಿನ ನಗೆ ಬೀರಿದ್ದಾರೆ. ಹಾಗಾದರೆ ನಿಜಕ್ಕೂ ಕೆಆರ್ ಪೇಟೆಯ ಗೆಲುವಿನ ಶ್ರೇಯ ಯಾರಿಗೆ ಸಲ್ಲುತ್ತದೆ? ಹಾಗಾದರೆ ಬಿಜೆಪಿಗೆ ನೆಲೆಯೇ ಇಲ್ಲದ ಕೆಆರ್ ಪೇಟೆಯಲ್ಲಿ 9  ಸಾವಿರ ಮತಗಳ ಅಂತರದಲ್ಲಿ ನಾರಾಯಣ ಗೌಡ ಗೆದ್ದು ಬೀಗಿದ್ದಾರೆ. ಹಾಗಾದರೆ ಈ ಗೆಲುವಿಗೆ ನಾರಾಯಣ ಗೌಡರ ವರ್ಚಸ್ಸು ಮಾತ್ರ ಕಾರಣವಾ? ಖಂಡಿತ ಇಲ್ಲ.