Karnataka By Election 2018  

(Search results - 29)
 • NEWS8, Nov 2018, 3:48 PM IST

  ಕೊನೆಯಾಯ್ತಾ ಬಿಎಸ್‌ವೈ  ನಾಯಕತ್ವ,  ರಾಜ್ಯ ಬಿಜೆಪಿಗೆ ಹೊಸ ಸಾರಥಿ?

  ಉಪ ಚುನಾವಣೆ ಫಲಿತಾಂಶ ಹೊರಬಂದಿದೆ. ಬಿಜೆಪಿಗೆ ತೀವ್ರ ಹಿನ್ನಡೆ ಆಗಿರುವುದನ್ನು ಅದೇ ಪಕ್ಷದ ನಾಯಕರೆ ಒಪ್ಪಿಕೊಂಡಿದ್ದಾರೆ. ನಾಯಕತ್ವ ಬದಲಾವಣೆ ವಿಚಾರಕ್ಕೆ ಈ ಸೋಲು ನಾಂದಿ ಹಾಡುವುದೆ? ಕೆಲ ನಾಯಕರು ನೀಡುತ್ತಿರುವ ಹೇಳಿಕೆ  ಮತ್ತು ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತ ಮಾಡುತ್ತಿರುವ ಅಭಿಪ್ರಾಯ ಹೌದು ಎನ್ನುತ್ತಿದೆ.

 • Karnataka

  NEWS7, Nov 2018, 2:48 PM IST

  ಉಪಚುನಾವಣೆ ಫಲಿತಾಂಶದ ಪರಿಣಾಮಗಳೇನು? ಡಿಕೆಶಿ ಮುಂದೇನಾಗ್ತಾರೆ?

  ಉಪಚುನಾವಣೆ ಮುಗಿದಿದೆ. ದೋಸ್ತಿಗಳಿಗೆ ನಾಲ್ಕು ಬಿಜೆಪಿಗೆ ಒಂದು ಸ್ಥಾನ ಸಿಕ್ಕಿದೆ. ಶಿವಮೊಗ್ಗದಲ್ಲಿ ಬಿಜೆಪಿ ಪ್ರಯಾಸದ ಗೆಲುವು ದಾಖಲಿಸಿದೆ. ಹಾಗಾದರೆ ಈ ಉಪಚುನಾವಣೆ ಫಲಿತಾಂಶ ಮುಂದಿನ ಲೋಕಸಭಾ ಚುನಾವಣೆ ದಿಕ್ಸೂಚಿಯೇ? ರಾಜ್ಯ ರಾಜಕಾರಣಲ್ಲಿ ಮೇಲೆ ಯಾವ ಪರಿಣಾಮ ಬೀರುತ್ತದೆ? ನೇತೃತ್ವ ವಹಿಸಿಕೊಂಡಿದ್ದ ಡಿಕೆಶಿ ಮುಂದೆ ಯಾವ ಸ್ಥಾನ ಪಡೆದುಕೊಳ್ಳಬಹುದು? ದೋಸ್ತಿ ಸರಕಾರ ಮತ್ತಷ್ಟು ಭದ್ರವಾಗುತ್ತದೆಯೇ? ಬಿಜೆಪಿ ತನ್ನ ಆಪರೇಶನ್ ಚಟುವಟಿಕೆ ಬಂದ್ ಮಾಡುತ್ತದೆಯೇ? ಈ ರೀತಿ ಹತ್ತು ಹಲವು ವಿಚಾರಗಳನ್ನು  ತಜ್ಞರು ಪರಾಮರ್ಶೆ ಮಾಡಿದ್ದಾರೆ. ಸಂಪೂರ್ಣ ವಿವರ ಇಲ್ಲಿದೆ. 

 • Video Icon

  NEWS6, Nov 2018, 7:30 PM IST

  Exclusive: ಕೊನೆಗೂ ‘ರಾಮನಗರ’ ಸೀಕ್ರೆಟ್’ ಬಿಚ್ಚಿಟ್ಟ ಡಿಕೆಶಿ

  ಪಂಚ ಕ್ಷೇತ್ರಗಳ ಉಪಚುನಾವಣಾ ಫಲಿತಾಂಶ ಹೊರಬಿದ್ದಿದೆ. ಬಳ್ಳಾರಿಯಲ್ಲಿ ಬಿಜೆಪಿ ಕೋಟೆಯನ್ನು ಭೇದಿಸುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ಸುವರ್ಣನ್ಯೂಸ್ ಜೊತೆ ಮಾತನಾಡಿದ ಬಳ್ಳಾರಿ ಉಸ್ತುವಾರಿ, ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಈ ಗೆಲುವಿನ ರಣತಂತ್ರವನ್ನು ಬಿಚ್ಚಿಟ್ಟಿದ್ದಾರೆ. ಬಳ್ಳಾರಿಯಲ್ಲಿ ಕಡಿ-ಬಡಿ-ಹೊಡಿ-ತಡಿ ಸಂಸ್ಕೃತಿಗೆ ಸೋಲಾಗಿದೆ ಎಂದು ಬಣ್ಣಿಸಿರುವ ಅವರು, ರಾಮನಗರದ ಅನೀರಿಕ್ಷೀತ ರಾಜಕೀಯ ಬೆಳವಣಿಗೆಗಳ ಬಗ್ಗೆಯೂ ಮಾತನಾಡಿದ್ದಾರೆ.

 • Madhu - Raghavendra

  NEWS6, Nov 2018, 7:23 PM IST

  ಶಿವಮೊಗ್ಗ ಬಿಜೆಪಿ ಗೆಲುವಿಗೆ 6 ಕಾರಣ, ಕಾಂಗ್ರೆಸ್ ಕೊಡುಗೆಯೂ ಉಂಟು!

  ಕುತೂಹಲ ಕೆರಳಿಸಿದ್ದ ಕರ್ನಾಟಕದ 3 ಲೋಕಸಭೆ ಮತ್ತು 2 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿ ಒಂದು ಕ್ಷೇತ್ರದಲ್ಲಿ ಜಯಗಳಿಸಿದರೆ, ಉಳಿದ 4 ಕ್ಷೇತ್ರಗಳಲ್ಲಿ ಕಾಂಗ್ರೆಸ್‌-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಗಳು ಗೆದ್ದಿದ್ದಾರೆ. ಮಾಜಿಸಿಎಂ ಮಕ್ಕಳ ಸ್ಪರ್ಧೆಯಿಂದ ರಾಜ್ಯದ ಗಮನ ಸೆಳೆದಿದ್ದ ಕ್ಷೇತ್ರ ಶಿವಮೊಗ್ಗದಲ್ಲಿ ಬಿಜೆಪಿ ಗೆದ್ದಿದೆ.

 • NEWS6, Nov 2018, 3:53 PM IST

  ರಿಸಲ್ಟ್ ನಂತ್ರ ಮಂತ್ರಿಗಿರಿ ಲಾಬಿ, ಗೌಡರೇ ಸುಪ್ರೀಂ! ರೇಸ್‌ನಲ್ಲಿ ಯಾರ್ಯಾರು?

  ಒಂದು ಕಡೆ ಉಪಚುನಾವಣೆ ಫಲಿತಾಂಶ ಹೊರಬೀಳುತ್ತಲೇ ಇತ್ತ ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಕೂಗು ಎದ್ದಿದೆ. ಸಚಿವ ಸ್ಥಾನಕ್ಕೆ ಲಾಬಿಯೂ ಶುರುವಾಗಿದ್ದು ಪದ್ಮನಾಭ ನಗರದ ದೇವೇಗೌಡರ ನಿವಾಸ ಶಕ್ತಿ ಕೇಂದ್ರವಾಗಿ ಮಾರ್ಪಟ್ಟಿದೆ.

 • NEWS6, Nov 2018, 2:08 PM IST

  ಅಭ್ಯರ್ಥಿಗಿಂತ ಹೆಚ್ಚು ನೋಟಾ, ರಾಜಕೀಯ ಪಕ್ಷಗಳಿಗೆ ಖಡಕ್ ಸೂಚನೆ

  ಶಿವಮೊಗ್ಗದಲ್ಲಿ ಕಮಲ ಅರಳಿದೆ. ಆದರೆ ಕಮಲ ಪ್ರಯಾಸದಿಂದ ಗೆಲುವು ಸಾಧಿಸಿದೆ. ರಾಘವೇಂದ್ರ ಮತ್ತೊಮ್ಮೆ ಲೋಕಸಭೆ ಪ್ರವೇಶ ಮಾಡಿದ್ದಾರೆ. ಆದರೆ ಇದೆಲ್ಲದಕ್ಕಿಂತ ಮುಖ್ಯವಾಗಿ ಶಿವಮೊಗ್ಗದಲ್ಲಿ ನೋಟಾ ಮತಗಳು ಪ್ರಾಮುಖ್ಯ ಗಳಿಸಿವೆ.

 • NEWS6, Nov 2018, 1:27 PM IST

  ಗೌಡರ ಮನೆಯಲ್ಲಿ ಇರೋರಿಗಿಂತ ವಿಧಾನಸಭೆಯಲ್ಲಿ ಇರೋರೆ ಹೆಚ್ಚು!

  ಉಪಚುನಾವಣೆ ಫಲಿತಾಂಶ ಹೊರಬಿದ್ದಿದೆ. ದೋಸ್ತಿ ಸರಕಾರ ಗೆಲುವಿನ ನಗೆ ಬೀರಿದ್ದು ಬಿಜೆಪಿಗೆ ಮುಖಭಂಗವಾಗಿದೆ. ರಾಮನಗರದಿಂದ ಅನಿತಾ ಕುಮಾರಸ್ವಾಮಿ ಗೆಲುವು ಸಾಧಿಸಿದ್ದು ದೇವೇಗೌಡರ ಕುಟುಂಬದ ಮತ್ತೊಬ್ಬರು ವಿಧಾನಸಭೆ ಪ್ರವೇಶ ಮಾಡಿದ್ದಾರೆ.

 • Ugrappa -Shantha
  Video Icon

  NEWS6, Nov 2018, 1:24 PM IST

  ಗಣಿ ನೆಲದಲ್ಲಿ ಬಾಡಿದ ಕಮಲ; ’ಕೈ’ ಹಿಡಿದ ಮತದಾರ

  ಬಳ್ಳಾರಿಯಲ್ಲಿ ಬಿಜೆಪಿ ಅಭ್ಯರ್ಥಿ ಶಾಂತಾ ಎದುರು ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ಭಾರೀ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಶ್ರೀರಾಮುಲು ಭದ್ರಕೋಟೆಯಾಗಿರುವ ಬಳ್ಳಾರಿಯಲ್ಲಿ ಡಿಕೆಶಿ ರಾಜಕೀಯ ತಂತ್ರದಿಂದಾಗಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಕಾಂಗ್ರೆಸ್ ಗೆಲುವಿನ ಬಗ್ಗೆ ಡಿ ಕೆ ಶಿವಕುಮಾರ್ ಪ್ರೆಸ್ ಮೀಟ್ ನಡೆಸಿ ಮತದಾರರಿಗೆ, ಕಾರ್ಯಕರ್ತರಿಗೆ ಧನ್ಯವಾದಗಳನ್ನು ಹೇಳಿದ್ದಾರೆ. 

 • Congress

  Ballari6, Nov 2018, 11:48 AM IST

  ಶ್ರೀರಾಮುಲುಗೆ ಅವರ ಕೋಟೆಯಲ್ಲೇ ಡಿಕೆಶಿ ಡಿಚ್ಚಿ ಕೊಟ್ಟಿದ್ದು ಹೇಗೆ?

  ಉಪಚುನಾವಣೆ ಫಲಿತಾಂಶ ಹೊರಬಂದಿದ್ದು ಶಿವಮೊಗ್ಗ ಹೊರತುಪಡಿಸಿ ಉಳಿದ ಎಲ್ಲ ಕ್ಷೇತ್ರಗಳ ಫಲಿತಾಂಶ ಹೊರಬಿದ್ದಿದೆ. ಬಿಜೆಪಿಗೆ ಬಹುದೊಡ್ಡ ನಷ್ಟ ಆಗಿದ್ದು ದೋಸ್ತಿಗಳೂ ನಿರೀಕ್ಷೆಗೂ ಮೀರಿ ಲಾಭ ಮಾಡಿಕೊಂಡಿದ್ದಾರೆ.

 • Election headquarter
  Video Icon

  NEWS6, Nov 2018, 9:51 AM IST

  ಪಂಚ ತೀರ್ಪು : ಯಾವ ಕ್ಷೇತ್ರದಲ್ಲಿ ಯಾರು ಮುನ್ನಡೆ?

  ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣಾ ಫಲಿತಾಂಶ ಇಂದು ಪ್ರಕಟವಾಗುತ್ತಿದ್ದು ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಮತ ಎಣಿಕೆ ಕಾರ್ಯ ಚುರುಕಾಗಿ ನಡೆಯುತ್ತಿದೆ. ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಗೆ ಅಗ್ನಿಪರೀಕ್ಷೆಯಾದರೆ ದೋಸ್ತಿ ಸರ್ಕಾರಕ್ಕೆ ಅಸ್ತಿತ್ವದ ಪ್ರಶ್ನೆಯಾಗಿದೆ.  ಯಾರ್ಯಾರು ಎಲ್ಲೆಲ್ಲಿ ಮುನ್ನಡೆ ಸಾಧಿಸಿದ್ದಾರೆ? ಅಭ್ಯರ್ಥಿಗಳ ಭವಿಷ್ಯ ಏನಾಗಬಹುದು ಇಲ್ಲಿದೆ ಮಾಹಿತಿ. 

 • Byelection
  Video Icon

  NEWS6, Nov 2018, 9:27 AM IST

  ಪಂಚ ತೀರ್ಪು : ವಿಜಯ ಮಾಲೆ ಯಾರ ಕೊರಳಿಗೆ?

  ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣಾ ಫಲಿತಾಂಶ ಇಂದು ಪ್ರಕಟವಾಗುತ್ತಿದ್ದು ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಯಾರ್ಯಾರು ಎಲ್ಲೆಲ್ಲಿ ಮುನ್ನಡೆ ಸಾಧಿಸಿದ್ದಾರೆ? ಅಭ್ಯರ್ಥಿಗಳ ಬವಿಷ್ಯ ಏನಾಗಬಹುದು ಇಲ್ಲಿದೆ ಮಾಹಿತಿ. 

 • Sri Ramulu and DK Shivakumar

  POLITICS6, Nov 2018, 7:05 AM IST

  ಕೈ-ತೆನೆ ದೋಸ್ತಿ ಎದುರು ಮಂಡಿಯೂರಿದ ಬಿಜೆಪಿ- Live Updates

  ಬಿಜೆಪಿ ಭದ್ರ ಕೋಟೆ ಬಳ್ಳಾರಿಯಲ್ಲಿಯೇ ಶ್ರೀರಾಮುಲುಗೆ ಡಿಕೆಶಿ ಡಿಚ್ಚಿ ಹೊಡೆದಿದ್ದು ಹೇಗೆ?
  ಮಂಡ್ಯದಲ್ಲಿ ಸೋತರೂ ಬಿಜೆಪಿ ಅಭ್ಯರ್ಥಿಯ ದಾಖಲೆ ಏನು?
  ನಿರೀಕ್ಷೆಯಂತೆ ನಿರಾಯಾಸವಾಗಿ ಗೆದ್ದ ಅನಿತಾ ಕುಮಾರಸ್ವಾಮಿ
  ಶಿವಮೊಗ್ಗದಲ್ಲಿ ಕಷ್ಟ ಪಟ್ಟು ಗೆಲುವಿನ ಹಾದಿಯಲ್ಲಿ ಬಿಜೆಪಿ ಅಭ್ಯರ್ಥಿ ರಾಘವೇಂದ್ರ
  ಜಮಖಂಡಿಯಲ್ಲಿ ವರ್ಕ್ ಔಟ್ ಆದ ಅನುಕಂಪದ ಅಲೆ...ಇಲ್ಲಿದೆ ಸಂಪೂರ್ಣ ಮಾಹಿತಿ

 • NEWS2, Nov 2018, 9:15 PM IST

  ಬಿಜೆಪಿ ದೂರು ಆಧರಿಸಿ ರಾಮನಗರ ಉಪಚುನಾವಣೆ ರದ್ದು?

  ನಿಗದಿಯಂತೆ ರಾಮನಗರ ಉಪಚುನಾವಣೆ ಶನಿವಾರ ನವೆಂನಬರ್ 3 ರಂದು ನಡೆಯಲೇಬೇಕು. ಆದರೆ ಬಿಜೆಪಿ ಅಭ್ಯರ್ಥಿ ಕಣದಿಂದ ಹಿಂದೆ ಸರಿದಿರುವುದರಿಂದ ಚುನಾವಣೆಯೇ ರದ್ದಾಗುತ್ತದೆಯೇ? ಹೀಗೊಂದು ಪ್ರಶ್ನೆ ಮೂಡಿದೆ.

 • Pratap Simha

  NEWS30, Oct 2018, 4:05 PM IST

  ಉಪಚುನಾವಣೆ ಫಲಿತಾಂಶವನ್ನೇ ಬದಲಿಸಿದ್ದ ಆ ಒಂದು ಹೇಳಿಕೆ!

  ರಾಜ್ಯದಲ್ಲಿ ಉಪಚುನಾವಣೆ ಬಿಸಿ ರಂಗೇರುತ್ತಿದೆ. ಈ ಸಂದರ್ಭದಲ್ಲಿ ಪ್ರತಿಯೊಬ್ಬ ಪ್ರಚಾರಕನ, ರಾಜಕೀಯ ನಾಯಕನ ಮಾತು ಮತ್ತು ನಡೆ ಬಹಳ ನಿರ್ಣಾಯಕವಾಗಿರುತ್ತದೆ. ಅವರಾಡುವ ಮಾತು ಚುನಾವಣೆ ಫಲಿತಾಂಶವನ್ನೇ ಬದಲಾಯಿಸಬಹುದು.. ಮಾತು ಆಡಿದರೆ ಹೋಯ್ತು..ಮುತ್ತು ಒಡೆದರೆ ಹೋಯ್ತು..!

 • Kumarasamy waiving sc students educational loan

  NEWS26, Oct 2018, 7:29 PM IST

  ಕುಮಾರಸ್ವಾಮಿ ಬಾಯಲ್ಲಿ ಸಾವಿನ ಮಾತು, ಇಲ್ಲಿದೆ ಅಸಲಿಯತ್ತು!

  ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತೆ-ಮತ್ತೆ ಭಾವನಾತ್ಮಕ ಭಾಷಣ ಮಾಡುತ್ತಲೇ ಇದ್ದಾರೆ. ವಿಧಾನಸಭೆ ಚುನಾವಣಾ ಪ್ರಚಾರದ ವೇಳೆಯೂ ನಾನು ಎಷ್ಟು ದಿನ ಬದುಕಿರುತ್ತೇನೋ ಗೊತ್ತಿಲ್ಲ.. ಜನ ಸೇವೆಯ ಅವಕಾಶ ಮಾಡಿಕೊಡಿ ಎಂಬ ರೀತಿಯಲ್ಲಿ ಮಾತನಾಡಿದ್ದರು. ಇದೀಗ ಮಂಡ್ಯ ಲೋಕಸಭಾ ಚುನಾವಣಾ ಪ್ರಚಾರದ ವೇಳೆಯೂ ಅಂಥದ್ದೇ ಮಾತುಗಳನ್ನಾಡಿದ್ದಾರೆ. ಹಾಗಾದರೆ ಇದಕ್ಕೆ ಮೂಲ ಕಾರಣ ಏನು?