Kalasa Banduri  

(Search results - 55)
 • mahadayi

  Karnataka Districts29, Feb 2020, 8:36 AM IST

  'ಮಹದಾಯಿ ನೀರು ಹಂಚಿಕೆ ಸಂಪೂರ್ಣ ತೃಪ್ತಿ ತಂದಿಲ್ಲ'

  ರೈತ ಸಮುದಾಯದ ಬಹು ದಿನಗಳ ಬೇಡಿಕೆಯಾದ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಹಳ್ಳಗಳಲ್ಲಿ ಹರಿಯುವ ನೀರಿನಲ್ಲಿ ನಮಗೆ ಸಂಪೂರ್ಣ ನೀರು ಸಿಗದಿರುವುದು ತೃಪ್ತಿ ತಂದಿಲ್ಲವೆಂದು ಮಾಜಿ ಸಚಿವ ಬಿ.ಆರ್‌. ಯಾವಗಲ್‌ ಹೇಳಿದ್ದಾರೆ.
   

 • Pralhad joshi

  Karnataka Districts29, Feb 2020, 7:36 AM IST

  BSY ಮಹದಾಯಿಗಾಗಿ ಬಜೆಟ್‌ನಲ್ಲಿ 500 ಕೋಟಿ ಮೀಸಲಿಡಲಿ: ಪ್ರಹ್ಲಾದ ಜೋಶಿ

  ಮಹದಾಯಿ ವಿಷಯಕ್ಕೆ ಸಂಬಂಧಪಟ್ಟಂತೆ ಸುಪ್ರೀಂಕೋರ್ಟ್‌ ಆದೇಶ ನೀಡಿ ಒಂದು ವಾರದೊಳಗೆ ನೋಟಿಫಿಕೇಶನ್‌ ಹೊರಡಿಸಿದ್ದೇವೆ. ಇದೀಗ ರಾಜ್ಯ ಸರ್ಕಾರ ಈ ಬಜೆಟ್‌ನಲ್ಲಿ ಇದಕ್ಕೆ  500 ಕೋಟಿ ಮೀಸಲಿಟ್ಟು, ಕಾಮಗಾರಿ ಪ್ರಾರಂಭಿಸಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.
   

 • Modi bsy

  Karnataka Districts28, Feb 2020, 9:02 AM IST

  'ಯಡಿಯೂರಪ್ಪ ಬರ್ತ್‌ಡೇಗೆ ಪ್ರಧಾನಿ ಮೋದಿ ಭರ್ಜರಿ ಗಿಫ್ಟ್'

  ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ಮಹದಾಯಿ ನೀರು ಬಳಕೆಗೆ ಕೇಂದ್ರ ಸರ್ಕಾರ ಗೆಜೆಟ್‌ ನೋಟಿಫೀಕೇಶನ್‌ ಹೊರಡಿಸಿರುವುದು ಉತ್ತರ ಕರ್ನಾಟಕದ ಬಹು ದಿನಗಳ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಹೇಳಿದ್ದಾರೆ.
   

 • Veeresh Sobaradamath

  Karnataka Districts22, Feb 2020, 1:02 PM IST

  ಸುಪ್ರೀಂ ಸೂಚನೆ: ದಯಾಮರಣ ಅರ್ಜಿ ವಾಪಸ್‌ಗೆ ಮಹದಾಯಿ ಹೋರಾಟಗಾರರ ನಿರ್ಧಾರ

  ಮಹದಾಯಿ ಹೋರಾಟಗಾರರು ನಿರಂತರ ಹೋರಾಟ ಮಾಡಿದರೂ ಸರ್ಕಾರಗಳು ಯೋಜನೆ ಜಾರಿ ಮಾಡದ್ದಕ್ಕೆ ನಾವು ದಯಾಮರಣ ಅರ್ಜಿಯನ್ನು ರಾಷ್ಟ್ರಪತಿಗಳಿಗೆ ಸಲ್ಲಿಸಿದ್ದು, ಆದರೆ ಸದ್ಯ, ಸುಪ್ರೀಂ ಕೋರ್ಟ್ ನೀರು ಬಳಕೆಗೆ ಅಧಿಸೂಚನೆ ಹೊರಡಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದ್ದರಿಂದ ನಾವು ದಯಾಮರಣದ ಅರ್ಜಿಯನ್ನು ಹಿಂದಕ್ಕೆ ಪಡೆಯುತ್ತೇವೆ ಎಂದು ರೈತ ಸೇನಾ ಸಂಘಟನೆ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಶ್ರೀಗಳು ಹೇಳಿದ್ದಾರೆ. 
   

 • Kalasa Banduri and bsy

  Karnataka Districts21, Feb 2020, 12:29 PM IST

  ಬಜೆಟ್‌ನಲ್ಲಿ ಕಳಸಾ ಬಂಡೂರಿ ನೀರಾವರಿ ಯೋಜನೆಗೆ ಆದ್ಯತೆ: ಸಿಎಂ

  ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಕಳಸಾ ಬಂಡೂರಿ ಯೋಜನೆ ಸಮಸ್ಯೆ ಬಗೆ ಹರಿದಿರುವುದು ಸಂತಸ ತಂದಿದೆ. ಈ ಬಜೆಟ್‌ನಲ್ಲಿ ಅದಕ್ಕೆ ಹಣ ತೆಗೆದಿಟ್ಟು ಆದಷ್ಟು ಬೇಗ ನೀರಾವರಿ ಯೋಜನೆ ಚಾಲನೆ ಮಾಡುವುದು ನನ್ನ ಮೊದಲ ಆದ್ಯತೆ ಎಂದು ಸಿಎಂ ಬಿ.ಎಸ್‌. ಯಡಿಯೂರಪ್ಪ ಹೇಳಿದ್ದಾರೆ. 

 • Veeresh Sobaradamath

  Karnataka Districts19, Feb 2020, 7:23 AM IST

  'ಮಹದಾಯಿ ಗೆಜೆಟ್‌ ಹೊರಡಿಸಲು ಕೊಟ್ಟ ದುಡ್ಡು ಸಂಸದರು ಸ್ವಂತಕ್ಕೆ ಬಳಸಿಕೊಂಡಿದ್ದಾರೆ'

  ಮಹದಾಯಿ ಗೆಜೆಟ್‌ ನೋಟಿಫಿಕೇಶನ್‌ ಹೊರಡಿಸಲು ಉತ್ತರ ಕರ್ನಾಟಕ ಭಾಗದ ಸಂಸದರಿಗೆ ಹಣ ಕೊಟ್ಟಿದ್ದೇವೆ. ಆದರೆ ಹಣ ಪಡೆದುಕೊಂಡಿರುವ ಸಂಸದರು ಕೆಲಸ ಮಾಡಿ ಕೊಡದೇ ಸ್ವಂತಕ್ಕೆ ಬಳಸಿಕೊಂಡಿದ್ದಾರೆ ಎಂದು ‘ಕರ್ನಾಟಕ ರೈತ ಸೇನೆ’ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಆರೋಪಿಸಿದ್ದಾರೆ.
   

 • mahadayi modi

  Karnataka Districts16, Feb 2020, 7:35 AM IST

  'ಕೊಟ್ಟ ಮಾತಿನಂತೆ ನಡೆದುಕೊಳ್ಳಿ ಮೋದಿ ಅವರೇ, ಮಹದಾಯಿ ವಿವಾದ ಬಗೆಹರಿಸಿ'

  ಮಹದಾಯಿ ವಿಚಾರದಲ್ಲಿ ರಾಜ್ಯ ಸರ್ಕಾರ ಕೂಡಲೇ ಕೇಂದ್ರದ ಮಧ್ಯಸ್ಥಿಕೆಯಲ್ಲಿ ಮುಂದಿನ ಹದಿನೈದು ದಿನಗಳಲ್ಲಿ ಸಮಸ್ಯೆ ಬಗೆಹರಿಸಬೇಕು. ಇಲ್ಲವಾದರೆ ಮತ್ತೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಕರ್ನಾಟಕ ಕಳಸಾ ಬಂಡೂರಿ ರೈತ ಹೋರಾಟ ಸಮಿತಿಯ ಸಿದ್ದು ತೇಜಿ ಆಗ್ರಹಿಸಿದ್ದಾರೆ.
   

 • undefined

  Karnataka Districts15, Feb 2020, 2:24 PM IST

  ರಮೇಶ ಜಾರಕಿಹೊಳಿ ಮುಂದಿದೆ ದೊಡ್ಡ ಸವಾಲು: ಪರಿಹರಿಸ್ತಾರಾ ಈ ಬಿಕ್ಕಟ್ಟು?

  ಜಲಸಂಪನ್ಮೂಲ ಖಾತೆಯನ್ನು ಪಟ್ಟು ಹಿಡಿದು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿರುವ ರಮೇಶ ಜಾರಕಿಹೊಳಿ ಅವರು ತಮ್ಮ ತವರು ಜಿಲ್ಲೆ ಮತ್ತು ಉತ್ತರ ಕರ್ನಾಟಕದ ಭಾಗದ ನೀರಾವರಿ ಯೋಜನೆಗಳ ಅನುಷ್ಠಾನದಲ್ಲಿನ ತಾಂತ್ರಿಕ ಅಡಚಣೆಗಳನ್ನು ಸಮರ್ಥವಾಗಿ ನಿಭಾಯಿಸುತ್ತಾರಾ ಎಂದು ಈ ಭಾಗದ ಜನರು ಎದುರು ನೋಡುತ್ತಿದ್ದಾರೆ. 

 • DWD_MAHADAYI_AV
  Video Icon

  Karnataka Districts27, Jan 2020, 1:18 PM IST

  ಮತ್ತೆ ಹೋರಾಟಕ್ಕಿಳಿದ ಮಹದಾಯಿ ಹೋರಾಟಗಾರರು:ಡಿಸಿ ಕಚೇರಿ ಎದುರು ಅಹೋರಾತ್ರಿ ಧರಣಿ

  ಮಹದಾಯಿ, ಕಳಸಾ ಬಂಡೂರಿ ಹೋರಾಟಗಾರರು ಮತ್ತೆ ಹೋರಾಟಕ್ಕಿಳಿದಿದ್ದಾರೆ. ರೈತ ಬೆಳೆದ ಬೆಳೆಗೆ ಬೆಂಬಲ ಬೆಲೆ ಹಾಗೂ ಮಾಹಾದಾಯಿ ಯೋಜನೆ ಅನುಷ್ಟಾನಕ್ಕೆ ಆಗ್ರಹಿಸಿ ಹೋರಾಟಗಾರರು ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ.
   

 • mahadayi

  Karnataka Districts27, Jan 2020, 7:37 AM IST

  ನರಗುಂದ: ಮಹದಾಯಿ ಯೋಜನೆ ಜಾರಿಯಲ್ಲಿ ಸರ್ಕಾರದಿಂದ ರೈತರಿಗೆ ಅನ್ಯಾಯ

  ಮಹದಾಯಿ ನೀರಿಗಾಗಿ 4 ವರ್ಷಗಳಿಂದ ಬಿಸಿಲು, ಮಳೆ ಲೆಕ್ಕಿಸದೇ ರೈತರಿಂದ ನಿರಂತರ ಹೋರಾಟ| ಮಹದಾಯಿ ಹೋರಾಟ ವೇದಿಕೆಯಲ್ಲಿ ರೈತ ಸೇನಾ ಸಂಘಟನೆ ತಾಲೂಕು ಉಪಾಧ್ಯಕ್ಷ ನಾಯ್ಕರ ಹೇಳಿಕೆ| ಹೋರಾಟಗಾರರಿಗೆ ಎಷ್ಟೇ ತೊಂದರೆ ನೀಡಿದರೂ ಸಹ ನಮ್ಮ ಹೋರಾಟ ನಿಲ್ಲುವುದಿಲ್ಲ|

 • undefined

  Karnataka Districts25, Jan 2020, 7:36 AM IST

  ‘ಮಹದಾಯಿ ಯೋಜನೆ ಜಾರಿ ಮಾಡದೆ ಸರ್ಕಾರ ರೈತರಿಗೆ ಅನ್ಯಾಯ ಮಾಡಿದೆ’

  ತಾಲೂಕಿನ ರೈತರು 2018ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆ ಹಾನಿ ಮಾಡಿಕೊಂಡ ರೈತ ಸಮುದಾಯಕ್ಕೆ ಸರ್ಕಾರ ಸರಿಯಾಗಿ ಬೆಳೆ ಹಾನಿ ಪರಿಹಾರ ವಿತರಣೆ ಮಾಡಬೇಕು ಎಂದು ರೈತ ಸೇನೆ ಸದಸ್ಯ ಶಿವಪ್ಪ ಹುರಳಿ ಆಗ್ರಹಿಸಿದ್ದಾರೆ.

 • undefined

  Karnataka Districts23, Jan 2020, 7:36 AM IST

  ಸರ್ಕಾರ ಪತನಗೊಳಿಸಲು ಸಿದ್ಧ: ಕಳಸಾ ಬಂಡೂರಿ ಹೋರಾಟಗಾರರು

  ರಾಜ್ಯದಲ್ಲಿ ನಾಲ್ಕೈದು ವರ್ಷದಿಂದ ಸರಿಯಾಗಿ ಬೆಳೆ ಬಂದಿಲ್ಲ. ಹೀಗಾಗಿ ಸರ್ಕಾರ ರೈತರ ಕೃಷಿಗೆ ಪಡೆದ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಕಳಸಾ ಬಂಡೂರಿ ಕೇಂದ್ರ ಹೋರಾಟ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ ಆಗ್ರಹಿಸಿದ್ದಾರೆ.
   

 • mahadayi

  Karnataka Districts22, Jan 2020, 7:23 AM IST

  ಮಹ​ದಾಯಿ ನೀರು ಸಿಗದೇ ಇದ್ದಲ್ಲಿ ದಯಾ​ಮರ​ಣಕ್ಕೆ ಮನ​ವಿ: ಸೊಬರದಮಠ

  ಮಹದಾಯಿ ನೀರು ಪಡೆದುಕೊಳ್ಳಲು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ನಡೆಸಿರುವ ಕಾನೂನು ಹೋರಾಟ ನಿಧಾ​ನ​ಗ​ತಿ​ಯಲ್ಲಿ ಸಾಗಿದ್ದು, ಈ ಕುರಿತು ಸುಪ್ರೀಂ ಕೋರ್ಟ್‌ಗೆ ಈಗಾಗಲೇ ಪಿಐಎಲ್‌ ಸಲ್ಲಿಸಿದ್ದು, ಇಲ್ಲಿ ನಮಗೆ ನ್ಯಾಯ ಸಿಗದಿದ್ದರೆ ಮತ್ತೊಮ್ಮೆ ರಾಷ್ಟ್ರಪತಿಗಳಿಗೆ ದಯಾ​ಮ​ರಣ ನೀಡು​ವಂತೆ ಮನವಿ ಸಲ್ಲಿ​ಸ​ಲಾ​ಗು​ವುದು ಎಂದು ರೈತ ಸೇನಾ ಸಂಘಟನೆ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಶ್ರೀಗಳು ತಿಳಿಸಿದ್ದಾರೆ.
   

 • Shah Sidu
  Video Icon

  Politics18, Jan 2020, 4:20 PM IST

  ರಾಜ್ಯ ಪ್ರವಾಸದಲ್ಲಿರುವ ಅಮಿತ್ ಶಾಗೆ ಸರಣಿ ಪ್ರಶ್ನೆಗಳ ಬಾಣ ಬಿಟ್ಟ ಸಿದ್ದು

  ರಾಜ್ಯ ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಮುಗಿಬಿದ್ದಿದ್ದಾರೆ.

 • undefined

  Karnataka Districts18, Jan 2020, 7:50 AM IST

  ಮಹದಾಯಿ ಯೋಜನೆ ಜಾರಿಗಾಗಿ ಉಗ್ರ ಹೋರಾಟ: ಜಗನ್ನಾಥ ಮುಧೋಳೆ

  ರೈತರು ನಮ್ಮ ನೆಲದಲ್ಲಿ ಹರಿಯುವ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆಯನ್ನು ಜಾರಿ ಮಾಡಬೇಕೆಂದು ಮನವಿ ಮಾಡಿಕೊಂಡರೂ ಸಹ ಸರ್ಕಾರ ಈ ಯೋಜನೆ ಜಾರಿಗೆ ವಿಳಂಬ ಮಾಡುತ್ತಿರುವುದು ಖಂಡನೀಯ ಎಂದು ರೈತ ಸೇನಾ ಸದಸ್ಯ ಜಗನ್ನಾಥ ಮುಧೋಳೆ ಹೇಳಿದ್ದಾರೆ.