Jayanthi  

(Search results - 90)
 • Writer BL Venu pens down Kannada nadina veera ramaniya song vcs

  SandalwoodAug 1, 2021, 10:37 AM IST

  ಕನ್ನಡ ನಾಡಿನ ವೀರ ರಮಣಿಯ ಹಾಡು ಹುಟ್ಟಿದ ಪರಿ!

  ಚಿತ್ರದುರ್ಗದ ಒನಕೆ ಓಬವ್ವಳ ಶೌರ್ಯ ಪರಾಕ್ರಮಗಳನ್ನು ನಾಡಿನ ಜನರ ಕಣ್ಮುಂದೆ ತಂದು ನಿಲ್ಲಿಸಿದ ನಟಿ ಜಯಂತಿ. ಎಷ್ಟೇ ಗ್ಲಾಮರಸ್‌ ಪಾತ್ರದಲ್ಲಿ ಮಿಂಚಿದರೂ ಜನಮನದಲ್ಲಿ ಅಚ್ಚಳಿಯದೆ ಉಳಿದದ್ದು, ವೀರ ವನಿತೆ ಓಬವ್ವಳಾಗಿ ಎಂದರೆ ಅತಿಶಯೋಕ್ತಿಯಾಗದು. 

 • Film Fraternity Bids Adieu To Jayanthi With an Emotional Note vcs
  Video Icon

  SandalwoodJul 27, 2021, 4:31 PM IST

  ಜಯಂತಿ ಇನ್ನಿಲ್ಲ ಎಂಬ ನೋವು ಕಾಡುತ್ತದೆ; ಚಿತ್ರರಂಗದ ಗಣ್ಯರ ಮಾತು

  ನಟಿ ಜಯಂತಿ ಅವರ ಅಗಲಿಕೆಯಿಂದ ಕನ್ನಡ ಚಿತ್ರರಂಗದ ಕಲಾವಿದರಿಗೆ ತುಂಬಾ ನೋವಾಗಿದೆ. ಕೊನೆಯ ಬಾರಿ ಜಯಂತಿ ಅವರ ದರ್ಶನ ಪಡೆಯಲು ಬಂದ ದಿಗ್ಗಜರು ಭಾವುಕರಾಗಿ ಮಾತನಾಡಿದ್ದಾರೆ.
   

 • Interesting Facts About Veteran Kannada Actress Jayanthi vcs
  Video Icon

  SandalwoodJul 27, 2021, 4:28 PM IST

  ಗ್ಲಾಮರಸ್‌ ಗೊಂಬೆ, ಒನಕೆ ಹೊತ್ತ ಓಬವ್ವ: ಜಯಂತಿ ಜೀವನದ ಇಂಟ್ರೆಸ್ಟಿಂಗ್ ವಿಚಾರ

  ಈಗಿನ ನಟಿಮಣಿಯರು ಪಡೆಯುತ್ತಿರುವ ಬಿರುದುಗಳನ್ನು 60-80ರ ದಶಕದಲ್ಲೇ ಪಡೆದ ನಟಿ ಜಯಂತಿ. ಯಾರಿಗೂ ಅಂಜದೇ, ಎಲ್ಲರನ್ನೂ ಸಮಾನರಾಗಿ ನೋಡುತ್ತಿದ್ದ ನಟಿ ಜಯಂತಿ, ರಿಯಲ್ ಲೈಫ್ ಹೇಗಿತ್ತು? ಅವರು ಸಿನಿಮಾ ಆಯ್ಕೆ ಮಾಡಿಕೊಳ್ಳುತ್ತಿದ್ದ ರೀತಿ ಹೇಗಿತ್ತು ಎಂದು ಈ ವಿಡಿಯೋದಲ್ಲಿದೆ.  
   

 • A Tribute To Veteran kannada Actress Jayanthi vcs
  Video Icon

  SandalwoodJul 27, 2021, 4:20 PM IST

  ಬಹುಭಾಷಾ ನಟಿ, ನಿರ್ದೇಶಕಿ ಹಾಗೂ ನಿರ್ಮಾಪಕಿ; ಜಯಂತಿ ಸಾಧನೆಗಳು ಒಂದೆರಡಲ್ಲ!

  ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕರ ನೆಚ್ಚಿನ ನಟಿ ಅಂದ್ರೆ ಜಯಂತಿ. ಎಂಥದ್ದೇ ಪಾತ್ರ ಕೊಟ್ಟರೂ ಆಗೋಲ್ಲ ಎನ್ನದೇ ಪರಕಾಯ ಪ್ರವೇಶ ಮಾಡಿ, ಭೇಷ್ ಎನ್ನಿಸಿಕೊಳ್ಳುತ್ತಿದ್ದರು. ಅದರಲ್ಲೂ ಡಾ.ರಾಜ್‌ ಕುಮಾರ್‌ರನ್ನು ರಾಜ್‌ ಎಂದು ಆತ್ಮೀಯವಾಗಿ ಕರೆಯುತ್ತಿದ್ದ ಏಕೈಕ ನಟಿ. 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅವರ ಸಾಧನೆಗೆ ಈ ವಿಡಿಯೋ ಸಮರ್ಪಣೆ...
   

 • Sandalwood senior actress Jayanthi contested in election as Lokajana Shakti and BJP candidate in Chikkaballapura vcs

  SandalwoodJul 27, 2021, 2:11 PM IST

  ಆರ್‌.ಎಲ್‌.ಜಾಲಪ್ಪನಿಗೆ ನಡುಕು ಹುಟ್ಟಿಸಿದ್ದ ಜಯಂತಿ!

  ಬಹುಭಾಷಾ ನಟಿ, ಅಭಿನಯ ಶಾರದೆ ಜಯಂತಿ ವಯೋಸಹಜ ಕಾಯಿಲೆಯಿಂದ ಸೋಮವಾರ ಅಸ್ತಂಗತರಾಗಿದ್ದಾರೆ. ಅವರಿಗೂ ಚಿಕ್ಕಬಳ್ಳಾಪುರ ಜಿಲ್ಲೆಗೂ ವಿಶೇಷ ನಂಟು ಇತ್ತು.
   

 • Sandalwood actor jayanathi eye donated to Dr Rajkumar Eye Bank in Bengaluru dpl

  SandalwoodJul 26, 2021, 9:56 PM IST

  ಡಾ. ರಾಜ್‌ರಂತೆ ನೇತ್ರದಾನ ಮಾಡಿದ ನಟಿ ಜಯಂತಿ

  • ನೇತ್ರದಾನ ಮಾಡಿದ ನಟಿ ಜಯಂತಿ
  • ಡಾ.ರಾಜ್‌ ಅವರಂತೆಯೇ ನೇತ್ರದಾನ
 • Director Rajendra Singh Babu says Jayanthi Chemistry With Directors Was Exceptional vcs
  Video Icon

  SandalwoodJul 26, 2021, 3:54 PM IST

  ನೂರು ವರ್ಷವಾದರೂ ಜಯಂತಿ ಪಾತ್ರಗಳು ಮಾಡಲಾಗುವುದಿಲ್ಲ: ರಾಜೇಂದ್ರ ಸಿಂಗ್ ಬಾಬು

  ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು ನಟಿ ಜಯಂತಿ ಜೊತೆ ಮೂರ್ನಾಲ್ಕು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಅದರಲ್ಲೂ ನಿರ್ದೇಶಕರು ಎಂದರೆ ಜಯಂತಿ ಅವರಿಗೆ ಭಯ ಹಾಗೂ ಭಕ್ತಿ ಹೆಚ್ಚಿತ್ತು. ತಡವಾಗಿ ಬರುವುದು, ಡೇಟ್ ತೊಂದರೆ ಎಂದು ಸಿನಿಮಾ ಮುಂದೂಡುವುದು ಮಾಡುತ್ತಿರಲಿಲ್ಲ. ಈಗಿನ ಕಲಾವಿದರೂ ಅವರ ಮಾರ್ಗದರ್ಶನದಲ್ಲಿ ನಡೆಯಬೇಕು ಎಂದಿದ್ದಾರೆ.
   

 • We will Miss Jayanthi Says Actress Tara Anuradha vcs
  Video Icon

  SandalwoodJul 26, 2021, 3:52 PM IST

  ಜಯಂತಿ ಅಂತಿಮ ದರ್ಶನದ ಹೊಣೆ ಹೊತ್ತ ತಾರಾ

  'ಹಿರಿಯ ನಟಿ ಜಯಂತಿ ಅವರನ್ನು ಕಳೆದುಕೊಂಡು ನಾವು ಬಡವರಾಗಿದ್ದೀವಿ. ಬಹಳಷ್ಟು ಅಭಿಮಾನಿಗಳು ಜಯಂತಿ ಅವರ ಅಂತಿಮ ದರ್ಶನ ಮಾಡಬೇಕು ಎಂದು ಕೇಳಿದ ಕಾರಣ ಸರ್ಕಾರಕ್ಕೆ ಮನವಿ ಮಾಡಿಕೊಂಡು, ರವೀಂದ್ರ ಕಲಾಕ್ಷೇತ್ರದಲ್ಲಿ ಅದಕ್ಕೆ ವ್ಯವಸ್ಥೆ ಮಾಡಲಾಗಿದೆ. ಜಯಂತಿ ಅವರಿಗೆ ದೇವರು ಇನ್ನೂ ಆರೋಗ್ಯ ಮತ್ತು ಆಯಸ್ಸು ನೀಡಬೇಕಿತ್ತು,' ಎಂದು ನಟಿ ತಾರಾ ಹೇಳಿದ್ದಾರೆ.
   

 • Jayanthi Was Best Friend Heroine in Real Life says actor Doddanna vcs
  Video Icon

  SandalwoodJul 26, 2021, 3:50 PM IST

  ಸ್ನೇಹಮಹಿ, ಕರುಣಾಮಹಿ ಹಾಗೂ ಪ್ರಬುದ್ಧ ಕಲಾವಿದೆ ಜಯಂತಿ: ದೊಡ್ಡಣ್ಣ

  'ಜಯಂತಿ ಅವರ ಜೊತೆ ನಾನು 14-15 ಸಿನಿಮಾಗಳಲ್ಲಿ ಅಭಿನಯಿಸಿರುವೆ. ಅದರಲ್ಲೂ ನನ್ನ ಎರಡನೇ ಚಿತ್ರ ಶ್ರೀ ಯಡಿಯೂರು ಸಿದ್ಧಲಿಂಗೇಶ್ವರ ಚಿತ್ರದಲ್ಲಿ ಅವರ ಜೊತೆ ನಟಿಸಲು ಅವಕಾಶ ಪಡೆದೆ. ಸಿನಿಮಾನೇ ಗ್ಲಾಮರ್ ಲೋಕ. ಅಂಥದ್ರಲ್ಲಿ ಅತ್ಯಂತ ಸರಳ ವ್ಯಕ್ತಿಯಾಗಿ ಜಯಂತಿ ಇರುತ್ತಿದ್ದರು. ತಾರತಮ್ಯವಿಲ್ಲದೇ ಪ್ರತಿಯೊಬ್ಬ ಕಲಾವಿದ, ತಂತ್ರಜ್ಞರ ಜೊತೆ ಕುಳಿತು ಊಟ ಮಾಡುತ್ತಿದ್ದರು. ಅವರ ಜೊತೆ ಕಳೆದ ಸಮಯ ಎಂದೂ ಮರೆಯಲಾಗುವುದಿಲ್ಲ,' ಎಂದು ಹಿರಿಯ ನಟ ದೊಡ್ಡಣ್ಣ ಮಾತನಾಡಿದ್ದಾರೆ.

 • Veteran actress Umashree talks about friendship with Jayanthi vcs
  Video Icon

  SandalwoodJul 26, 2021, 3:42 PM IST

  ಚಿತ್ರರಂಗಕ್ಕೆ ಜಯಂತಿ ಬಂಗಾರದ ಹೂವು: ನಟಿ ಉಮಾಶ್ರೀ

  'ಮಹಿಳೆಯರು ಸಿನಿಮಾ ರಂಗಕ್ಕೆ ಬರಬಾರದು ಎನ್ನುವ ಕಾಲದಲ್ಲಿ ಜಯಂತಿ ಬೋಲ್ಡ್ ಪಾತ್ರಗಳನ್ನು ಆಯ್ಕೆ ಮಾಡಿಕೊಂಡ ಕಲಾವಿದೆ. ಅವರಿಗಿದ್ದ ಧೈರ್ಯ, ಇನ್‌ವಾಲ್ಮೆಂಟ್ ಮತ್ತು ಕಮಿಟ್‌ಮೆಂಟ್ ಯಾರಿಗೂ ಸಾಧ್ಯವಿಲ್ಲ. ಮಕ್ಕಳ ಜೊತೆ ಮಕ್ಕಳಾಗಿ, ದೊಡ್ಡವರ ಜೊತೆ ದೊಡ್ಡವರಾಗಿ ಮಾತನಾಡುತ್ತಿದ್ದರು. ಅವರ ಕಣ್ಣು, ಮೂಗು, ಬಾಯಿ ಎಲ್ಲವೂ ಗೊಂಬೆ ತರ,'ಎಂದು ಹಿರಿಯ ನಟಿ ಉಮಾಶ್ರೀ ಮಾತನಾಡಿದ್ದಾರೆ.

 • Kannada actor Srinath says Jayanthi Will Remain Alive in People's Heart Forever vcs
  Video Icon

  SandalwoodJul 26, 2021, 2:28 PM IST

  ಜಯಂತಿ ಅಂತ ಶ್ರೇಷ್ಠ ವ್ಯಕ್ತಿ ಸಿಗುವುದು ವಿರಳ: ನಟ ಶ್ರೀನಾಥ್

  'ಚಿತ್ರೀಕರಣದ ಸಮಯದಲ್ಲಿ ಜಯಂತಿ ಎನ್ನುವ ವ್ಯಕ್ತಿತ್ವ ಮರೆತು ಪಾತ್ರಕ್ಕೆ ಪ್ರವೇಶ ಮಾಡಿ ಅಭಿನಯಿಸುತ್ತಿದ್ದರು. ಕೋವಿಡ್‌ನಿಂದ ನಾವು ಭೇಟಿ ಆಗಲಿಲ್ಲ. ಆದರೆ ಫೋನ್‌ ಕಾಲ್‌ನಲ್ಲಿ ಮಾತನಾಡುತ್ತಿದ್ದೆವು. ಮಡಿವಂತಿಕೆ ಇಲ್ಲದೇ ಯಾವ ಪಾತ್ರ ಕೊಟ್ಟರೂ ಅಭಿನಯಿಸುವ ಶಕ್ತಿ ಹೊಂದಿದ್ದ ಮಹಾನಟಿ ಜಯಂತಿ,' ಎಂದು ಹಿರಿಯ ನಟ ಶ್ರೀನಾಥ್ ಹಿರಿಯ ನಟಿಯ ಸಾವಿಗೆ ಕಂಬನಿ ಮಿಡಿದಿದ್ದಾರೆ.

 • Journalist Sadashiva Shenoy talks about Jayanthi autobiography vcs
  Video Icon

  SandalwoodJul 26, 2021, 12:45 PM IST

  ಜಯಂತಿ ಅವರ ಪ್ರತಿಭೆಗೆ ಸರಿಯಾದ ಗೌರವ, ಸನ್ಮಾನ ಸಿಕ್ಕಿಲ್ಲ: ಪತ್ರಕರ್ತ ಸದಾಶಿವ ಶೆಣ್ಣೈ

  ಹಿರಿಯ ಸಿನಿಮಾ ಪತ್ರಕರ್ತ ಸದಾಶಿವ ಶೆಣ್ಣೈ ಎರಡು ವರ್ಷಗಳಿಂದ ಜಯಂತಿ ಅವರ ಆತ್ಮಚರಿತ್ರೆಯನ್ನು ಪುಸ್ತಕ ರೂಪದಲ್ಲಿ ತರಲು ಓಡಾಡುತ್ತಿದ್ದರು. ಈ ಬಗ್ಗೆ ಪುತ್ರನ ಜೊತೆ ನಿರಂತರ ಮಾತುಕತೆಯಲ್ಲಿದ್ದರು. ಈ ವೇಳೆ ಜಯಂತಿ ಅವರ ಜೀವನದ ಬಗ್ಗೆ ತಿಳಿದುಕೊಂಡ ಸದಾಶಿವ ಶೆಣ್ಣೈ  ಕರ್ನಾಟಕ ಸರಕಾರ ಹಾಗೂ ಚಿತ್ರರಂಗ ಸರಿಯಾದ ಗೌರವ ಹಾಗೂ ಸನ್ಮಾನಗಳನ್ನು ನೀಡಬೇಕಿತ್ತು ಎಂದಿದ್ದಾರೆ.

 • Kannada director Bhargav recalls Jayanthi contribution to film industry vcs
  Video Icon

  SandalwoodJul 26, 2021, 12:41 PM IST

  ಮಾತೃ ಭಾಷೆಗಿಂತ ಹೆಚ್ಚಾಗಿ ಮಾತನಾಡಿದ್ದು, ಅಭಿನಯಿಸಿದ್ದು ಕನ್ನಡದಲ್ಲಿ: ನಿರ್ದೇಶಕ ಭಾರ್ಗವ್

  'ನಿರ್ದೇಶಕರ ಕೈ ಗೊಂಬೆ ಜಯಂತಿ, ಯಾವ ಪಾತ್ರ ಬೇಕಿದ್ದರೂ, ಒಂದೇ ಟೇಕ್‌ನಲ್ಲಿ ಅಭಿನಯಿಸುತ್ತಿದ್ದರು. ಅವರ ಪ್ರತಿಯೊಂದು ಸಿನಿಮಾದಲ್ಲೂ ಅದ್ಭುತ ಸಹ ಕಲಾವಿದರು ಇರುತ್ತಿದ್ದರು. ಅವರಿಗೆ ನಾನು ಸಿನಿಮಾ ನಿರ್ದೇಶನ ಮಾಡಿಲ್ಲ. ಆದರೆ ಒಂದು ಸಿನಿಮಾದಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡಿರುವುದು ನನ್ನ ಭಾಗ್ಯ,' ಎಂದು ಹಿರಿಯ ನಿರ್ದೇಶಕ ಭಾರ್ಗವ್ ಮಾತನಾಡಿದ್ದಾರೆ.

 • Actor Mandya Ramesh says actress Jayanthi is a gem to Kannada film industry vcs
  Video Icon

  SandalwoodJul 26, 2021, 12:32 PM IST

  ಒಂದು ಚಿತ್ರದಲ್ಲಿ ಜಯಂತಿ ಮಾದಕ ನಟಿ, ಮತ್ತೊಂದರಲ್ಲಿ ಆಕ್ರೋಶ ಭರಿತ ಒನಕೆ ಓಬವ್ವ : ಮಂಡ್ಯ ರಮೇಶ್

  ಕನ್ನಡ ಚಿತ್ರರಂಗದ ಅದ್ಭುತ ಕಲಾವಿದೆ ಜಯಂತಿ ಬಗ್ಗೆ ಹಿರಿಯ ನಟ ಮಂಡ್ಯ ರಮೇಶ್ ಮಾತನಾಡಿದ್ದಾರೆ. ಜಯಂತಿ ಎತ್ತರ ಕಡಿಮೆ ಇದ್ದರೂ, ಪ್ರತಿಭೆಯಲ್ಲಿ ಯಾರಿಗೂ ಕಡಿಮೆ ಇಲ್ಲ ಎಂದು ಸಾಬೀತು ಮಾಡಿದವರು. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವ ಉದಾಹರಣೆಗೆ ಜಯಂತಿಯೇ ಸಾಕ್ಷಿ ಎನ್ನುತ್ತಾರೆ ರಮೇಶ್.

 • Veteran Kannada actress Jayanthi no more vcs
  Video Icon

  SandalwoodJul 26, 2021, 12:26 PM IST

  ಬಹುಭಾಷಾ ನಟಿ ಜಯಂತಿ ಇನ್ನು ನೆನಪು ಮಾತ್ರ!

  ಕನ್ನಡ ಚಿತ್ರರಂಗದ ಅಭಿನಯ ಶಾರದೆ ಜಯಂತಿ ಕೆಲವು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಆದರೆ ಇಂದು ಬೆಳಗಿನ ಜಾವ 3 ಗಂಟೆಯಲ್ಲಿ ಬನಶಂಕರಿ ನಿವಾಸದಲ್ಲಿ ಕೊನೆ ಉಸಿರೆಳೆದಿದ್ದಾರೆ. ಭಾರತೀಯ ಚಿತ್ರರಂಗ ಹೊಂದಿದ್ದ ಅಮೂಲ್ಯ ವ್ಯಕ್ತಿಯನ್ನು ಇಂದು ಕಳೆದುಕೊಂಡಿದೆ.