Ipl Auction
(Search results - 206)IndiaMar 14, 2021, 4:41 PM IST
IPLಗೆ ಇನ್ನೆರಡು ತಂಡಕ್ಕೆ ಅವಕಾಶ, ರಾಜ್ಯಕ್ಕೆ ಲಾಕ್ಡೌನ್ ಆತಂಕ; ಮಾ.14ರ ಟಾಪ್ 10 ಸುದ್ದಿ!
ಕೊರೋನಾ ವೈರಸ್ ಪ್ರಕರಣ ಹೆಚ್ಚಾಗುತ್ತಿರುವ ಕಾರಣ ಸಿಎಂ ಯಡಿಯೂರಪ್ಪ ತುರ್ತು ಸಭೆ ಕರೆದಿದ್ದಾರೆ. ಇತ್ತ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮೇಲೆ ದಾಳಿಯಾಗಿಲ್ಲ ಎಂದು ಚುನಾವಣಾ ಆಯೋಗ ವರದಿ ನೀಡಿದೆ. ಹೊಸ ಎರಡು ತಂಡಗಳ ಐಪಿಎಲ್ ಸೇರ್ಪಡೆಗೆ ಹರಾಜು ಪ್ರಕ್ರಿಯೆ ತಯಾರಿ ಆರಂಭಗೊಂಡಿದೆ. ಡೂಪ್ಲಿಕೇಟ್ ಸನ್ನಿ ಲಿಯೋನ್, ಶಾಲಾ-ಕಾಲೇಜುಗಳಿಗೆ 15 ದಿನ ರಜೆನಾ? ಸೇರಿದಂತೆ ಮಾರ್ಚ್ 14ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
CricketFeb 22, 2021, 7:38 PM IST
IPL ಹರಾಜಿನಿಂದ ಹೊರಗಿಟ್ಟ ಬೆನ್ನಲ್ಲೇ 5 ವಿಕೆಟ್ ಕಬಳಿಸಿ ಫ್ರಾಂಚೈಸಿ ಗಮನಸೆಳೆದ ಶ್ರೀಶಾಂತ್!
IPL ಹರಾಜಿನಲ್ಲಿ ಆಟಗಾರರನ್ನು ಖರೀದಿಸಿದ ಫ್ರಾಂಚೈಸಿಗಳು ಇದೀಗ ಪ್ಲೇಯಿಂಗ್ ಇಲವೆನ್ ಕುರಿತು ಲೆಕ್ಕಾಚಾರ ಹಾಕುತ್ತಿದೆ. ಆದರೆ ಇದೇ ಹರಾಜಿಗೆ ಹೆಸರು ನೋಂದಾಯಿಸಿಕೊಂಡಿದ್ದ ಕೇರಳ ವೇಗಿ ಶ್ರೀಶಾಂತ್ ನಿರಾಸೆ ಅನುಭವಿಸಿದ್ದರು. ಹರಾಜಿನಿಂದಲೇ ಶ್ರೀ ಹೆಸರನ್ನು ಹೊರಗಿಡಲಾಗಿತ್ತು. ಆದರೆ ಛಲ ಬಿಡದೆ ಶ್ರೀಶಾಂತ್ ಇದೀಗ ಫ್ರಾಂಚೈಸಿಯನ್ನು ತನ್ನತ್ತ ತಿರುಗುವಂತೆ ಮಾಡಿದ್ದಾರೆ.
CricketFeb 21, 2021, 6:50 PM IST
ಸನ್ರೈಸರ್ಸ್ ತಂಡದಲ್ಲಿ ಹೈದರಾಬಾದ್ ಆಟಗಾರರಿಗಿಲ್ಲ ಸ್ಥಾನ; ಐಪಿಎಲ್ ಬಾಯ್ಕಾಟ್ ಬೆದರಿಕೆ ಹಾಕಿದ ಶಾಸಕ
ಹೈದ್ರಾಬಾದ್ನಲ್ಲಿ ಕೇವಲ ಮೊಹಮ್ಮದ್ ಸಿರಾಜ್ ಮಾತ್ರ ಇಲ್ಲ. ಸಾಕಷ್ಟು ರಣಜಿ ಆಟಗಾರರು ಹಾಗೂ ಅಂಡರ್ 19 ಪ್ರತಿಭಾನ್ವಿತ ಕ್ರಿಕೆಟಿಗರಿದ್ದಾರೆ. ಇಂತಹ ಆಟಗಾರರಿಗೆ ಐಪಿಎಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಗುರುತಿಸಿ ಅವಕಾಶ ನೀಡಬೇಕು ಎಂದು ನಾಗೇಂದರ್ ಆಗ್ರಹಿಸಿದ್ದಾರೆ.
CricketFeb 21, 2021, 4:50 PM IST
ಚಿಗುರುವ ಮುನ್ನವೇ ಚಿವುಟಬೇಡಿ: ಅರ್ಜುನ್ ತೆಂಡುಲ್ಕರ್ ಬೆಂಬಲಕ್ಕೆ ನಿಂತ ಫರ್ಹಾನ್ ಅಖ್ತರ್
ಅಂಬಾನಿ ಒಡೆತನದ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಅರ್ಜುನ್ ತೆಂಡುಲ್ಕರ್ ಅವರನ್ನು ಖರೀದಿಸಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಸಚಿನ್ ತೆಂಡುಲ್ಕರ್ ಪುತ್ರ ಎನ್ನುವ ಕಾರಣಕ್ಕೆ ಅರ್ಜುನ್ ತೆಂಡುಲ್ಕರ್ರನ್ನು ಮುಂಬೈ ಫ್ರಾಂಚೈಸಿ ಖರೀದಿಸಿದೆ. ಇದೊಂದು ರೀತಿಯ ಸ್ವಜನಪಕ್ಷಪಾತ ಎಂಬರ್ಥದಲ್ಲಿ ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಯ ಸುರಿಮಳೆ ಸುರಿಸಿದ್ದರು.
CricketFeb 21, 2021, 11:55 AM IST
‘ಕೇವಲ 2.2 ಕೋಟಿಗೆಲ್ಲಾ ಸ್ಮಿತ್ ಐಪಿಎಲ್ ಆಡೋದು ಡೌಟ್’
ಇತ್ತೀಚೆಗೆ ಚೆನ್ನೈನಲ್ಲಿ ನಡೆದಿದ್ದ ಐಪಿಎಲ್ ಹರಾಜಿನಲ್ಲಿ ಸ್ಮಿತ್ 2.2 ಕೋಟಿ ರು.ಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸೇರ್ಪಡೆಗೊಂಡಿದ್ದರು. 2020ರ ಐಪಿಎಲ್ನಲ್ಲಿ ರಾಜಸ್ಥಾನ ರಾಯಲ್ಸ್ ಸ್ಮಿತ್ಗೆ 12.5 ಕೋಟಿ ರು. ಪಾವತಿಸಿತ್ತು.
CricketFeb 20, 2021, 5:46 PM IST
IPL ಹರಾಜು 2021: RCB ಆಯ್ಕೆಯ ಬಗ್ಗೆ ವಿರಾಟ್ ಕೊಹ್ಲಿ ಮೊದಲ ಪ್ರತಿಕ್ರಿಯೆ...
ಬೆಂಗಳೂರು: ಚೊಚ್ಚಲ ಐಪಿಎಲ್ ಟ್ರೋಫಿಯ ಕನವರಿಕೆಯಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಚೆನ್ನೈನಲ್ಲಿ ಫೆಬ್ರವರಿ 18ರಂದು ನಡೆದ ಆಟಗಾರರ ಹರಾಜಿನಲ್ಲಿ ಸಾಕಷ್ಟು ಅಳೆದು-ತೂಗಿ ತಂಡಕ್ಕೆ ಅಗತ್ಯವಾಗಿ ಬೇಕಿದ್ದ 8 ಆಟಗಾರರನ್ನು ಖರೀದಿಸಿದೆ.
ಆಟಗಾರರ ಹರಾಜಿಗೂ ಮುನ್ನ 10 ಆಟಗಾರರನ್ನು ರಿಲೀಸ್ ಮಾಡಿದ್ದ ಬೆಂಗಳೂರು ಮೂಲದ ಫ್ರಾಂಚೈಸಿ, 14ನೇ ಆವೃತ್ತಿಯ ಆಟಗಾರರ ಹರಾಜಿನಲ್ಲಿ ಕೈಲ್ ಜಾಮಿಸನ್, ಗ್ಲೆನ್ ಮ್ಯಾಕ್ಸ್ವೆಲ್ ಅವರಂತಹ ತಾರಾ ಆಟಗಾರರ ಜತೆಗೆ ಅಜರುದ್ದೀನ್, ಸಚಿನ್ ಬೇಬಿ ಅವರಂತಹ ದೇಸಿ ಪ್ರತಿಭಾನ್ವಿತ ಆಟಗಾರರಿಗೂ ಮಣೆ ಹಾಕಿದೆ. ಹರಾಜಿನಲ್ಲಿ ಆರ್ಸಿಬಿ ಖರೀದಿಯ ಬಗ್ಗೆ ನಾಯಕ ವಿರಾಟ್ ಕೊಹ್ಲಿ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
CricketFeb 20, 2021, 12:30 PM IST
'ಟಾಮ್ ಅಂಡ್ ಜೆರ್ರಿ ಒಂದೇ ತಂಡದಲ್ಲಿ'; ವಿನೂತನವಾಗಿ ಮ್ಯಾಕ್ಸ್ವೆಲ್ ಸ್ವಾಗತಿಸಿದ ಚಹಲ್
14ನೇ ಆವೃತ್ತಿಯ ಆಟಗಾರರ ಹರಾಜಿಗೂ ಮುನ್ನ ಆರ್ಸಿಬಿ ಫ್ರಾಂಚೈಸಿ ಮೋಯಿನ್ ಅಲಿ ಹಾಗೂ ಕ್ರಿಸ್ ಮೋರಿಸ್ ಅವರಂತಹ ಸ್ಟಾರ್ ಆಟಗಾರರನ್ನು ರಿಲೀಸ್ ಮಾಡಿದ ಬೆನ್ನಲ್ಲೇ ಉತ್ತಮ ಆಲ್ರೌಂಡರ್ನ ಹುಡುಕಾಟದಲ್ಲಿತ್ತು. ಗ್ಲೆನ್ ಮ್ಯಾಕ್ಸ್ವೆಲ್ ಖರೀದಿಸಲು ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತ ನೈಟ್ ರೈಡರ್ಸ್ ಸಾಕಷ್ಟು ಪೈಪೋಟಿ ನಡೆಸಿದವಾದರೂ ಪಟ್ಟು ಬಿಡದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ದುಬಾರಿ ಮೊತ್ತ ನೀಡಿ ಆಸ್ಟ್ರೇಲಿಯಾ ಆಲ್ರೌಂಡರ್ನನ್ನು ತನ್ನ ಕಡೆ ಸೆಳೆಯುವಲ್ಲಿ ಯಶಸ್ವಿಯಾಗಿದೆ.
CricketFeb 19, 2021, 8:03 PM IST
IPL 2021: ಹರಾಜಿನ ಬಳಿಕ ರಾಜಸ್ಥಾನ ರಾಯಲ್ಸ್ ಹೀಗಿದೆ ನೋಡಿ
ಕ್ರಿಸ್ ಮೋರಿಸ್ ಮಾತ್ರವಲ್ಲದೇ ಶಿವಂ ದುಬೆ(4.4 ಕೋಟಿ), ಚೇತನ್ ಸಕಾರಿಯಾ(1.2 ಕೋಟಿ). ಮುಷ್ತಾಫಿಜುರ್ ರೆಹಮಾನ್(1 ಕೋಟಿ), ಲಿಯಮ್ ಲಿವಿಂಗ್ಸ್ಟೋನ್(75 ಲಕ್ಷ), ಅಕಾಶ್ ಸಿಂಗ್(20 ಲಕ್ಷ), ಕೆ.ಸಿ. ಕರಿಯಪ್ಪ(20 ಲಕ್ಷ) ಹಾಗೂ ಕುಲ್ದಿಪ್ ಯಾದವ್ಗೆ 20 ಲಕ್ಷ ರುಪಾಯಿ ನೀಡಿ ತಮ್ಮ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ರಾಜಸ್ಥಾನ ಫ್ರಾಂಚೈಸಿ ಸಫಲವಾಗಿದೆ.
CricketFeb 19, 2021, 7:07 PM IST
IPL 2021: ಹರಾಜಿನ ಬಳಿಕ ಸನ್ರೈಸರ್ಸ್ ಹೈದರಾಬಾದ್ ಹೀಗಿದೆ ನೋಡಿ
ಚೆನ್ನೈನಲ್ಲಿ ನಡೆದ ಆಟಗಾರರಲ್ಲಿ ಹೈದ್ರಾಬಾದ್ ಫ್ರಾಂಚೈಸಿ ಕೇವಲ 3 ಆಟಗಾರರನ್ನು ಖರೀದಿಸಲು ಮಾತ್ರ ಅವಕಾಶವಿತ್ತು. ಹೀಗಾಗಿ ಹೈದ್ರಾಬಾದ್ ಫ್ರಾಂಚೈಸಿ ಕನ್ನಡಿಗ ಜೆ. ಸುಚಿತ್, ಮುಜೀಬ್ ಉರ್ ರೆಹಮಾನ್ ಹಾಗೂ ಕೇದಾರ್ ಜಾಧವ್ರನ್ನು ಸನ್ರೈಸರ್ಸ್ ಫ್ರಾಂಚೈಸಿ ಖರೀದಿಸಿದೆ.
CricketFeb 19, 2021, 6:15 PM IST
IPL 2021: ಹರಾಜಿನ ಬಳಿಕ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹೀಗಿದೆ ನೋಡಿ
ರೋಹಿತ್ ಶರ್ಮಾ ನೇತೃತ್ವದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮೇಲ್ನೋಟಕ್ಕೆ ಈಗಾಗಲೇ ಬಲಿಷ್ಠವಾಗಿದ್ದು, ಬೆಂಚ್ ಸ್ಟ್ರೆಂಥ್ ಮತ್ತಷ್ಟು ಸದೃಢಗೊಳಿಸುವ ಉದ್ದೇಶದಿಂದ ಆಲ್ರೌಂಡರ್ ಜೇಮ್ಸ್ ನೀಶಮ್, ವೇಗಿಗಳಾದ ನೇಥನ್ ಕೌಲ್ಟರ್-ನೈಲ್, ಆಡಂ ಮಿಲ್ನೆ ಹಾಗೂ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್ರನ್ನು ಮುಂಬೈ ಫ್ರಾಂಚೈಸಿ ಖರೀದಿಸಿದೆ.
CricketFeb 19, 2021, 5:20 PM IST
IPL 2021: ಹರಾಜಿನ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ತಂಡ ಹೀಗಿದೆ ನೋಡಿ
ಈಗಾಗಲೇ ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಸಾಕಷ್ಟು ಬಲಿಷ್ಠವಾಗಿ ಗುರುತಿಸಿಕೊಂಡಿರುವ ಡೆಲ್ಲಿಗೆ ಇದೀಗ ಸ್ಮಿತ್ ಹಾಗೂ ಬಿಲ್ಲಿಂಗ್ಸ್ ಸೇರ್ಪಡೆ ತಂಡದ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚುವಂತೆ ಮಾಡಿದೆ. ಕಳೆದೆರಡು ಆವೃತ್ತಿಗಳಲ್ಲಿ ಪ್ಲೇ ಆಫ್ ಪ್ರವೇಶಿಸಿ ಕೊನೆಯ ಕ್ಷಣದಲ್ಲಿ ಮುಗ್ಗರಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಈ ಬಾರಿಯಾದರೂ ಚೊಚ್ಚಲ ಐಪಿಎಲ್ ಟ್ರೋಫಿ ಜಯಿಸುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.
CricketFeb 19, 2021, 3:12 PM IST
IPL 2021: ಹರಾಜಿನ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ತಂಡ ಹೀಗಿದೆ ನೋಡಿ
ಕೆ. ಗೌತಮ್ಗೆ ಬರೋಬ್ಬರಿ 9.25 ಕೋಟಿ ರುಪಾಯಿ ನೀಡಿ ಖರೀದಿಸಿರುವ ಸಿಎಸ್ಕೆ ಫ್ರಾಂಚೈಸಿ, ಮೋಯಿನ್ ಅಲಿಗೆ 7 ಕೋಟಿ ರುಪಾಯಿ ಖರ್ಚು ಮಾಡಿದೆ. ಚೇತೇಶ್ವರ್ ಪೂಜಾರಗೆ 50 ಲಕ್ಷ, ಹರಿಶಂಕರ್ ರೆಡ್ಡಿ, ಕೆ ಭಗತ್ ವರ್ಮಾ ಹಾಗೂ ಹರಿ ನಿಶಾಂತ್ ಅವರನ್ನು 20 ಲಕ್ಷ ಮೂಲ ಬೆಲೆಗೆ ಖರೀದಿಸಿದೆ.
CricketFeb 19, 2021, 2:11 PM IST
IPL 2021: ಹರಾಜಿನ ಬಳಿಕ ಕೋಲ್ಕತ ನೈಟ್ ರೈಡರ್ಸ್ ತಂಡ ಹೀಗಿದೆ ನೋಡಿ
ಬಾಲಿವುಡ್ ಸೂಪರ್ ಸ್ಟಾರ್ ಶಾರುಕ್ ಖಾನ್ ಒಡೆತದ ಕೆಕೆಆರ್ ಫ್ರಾಂಚೈಸಿ 7.75 ಕೋಟಿ ರುಪಾಯಿ ಖರ್ಚು ಮಾಡಿ 8 ಆಟಗಾರರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಕೋಲ್ಕತ ನೈಟ್ ರೈಡರ್ಸ್ ಫ್ರಾಂಚೈಸಿ ಶಕೀಬ್ ಅಲ್ ಹಸನ್ ಮಾತ್ರವಲ್ಲದೇ ಎರಡನೇ ವಿದೇಶಿ ಆಟಗಾರನ ರೂಪದಲ್ಲಿ ಬೆನ್ ಕಟ್ಟಿಂಗ್ಸ್ರನ್ನು ಖರೀದಿಸಿದೆ.
CricketFeb 19, 2021, 1:27 PM IST
IPL 2021: ಹರಾಜಿನ ಬಳಿಕ ಪಂಜಾಬ್ ಕಿಂಗ್ಸ್ ತಂಡ ಹೀಗಿದೆ ನೋಡಿ
ಆಸ್ಟ್ರೇಲಿಯಾದ ವೇಗದ ಬೌಲರ್ ಜೇ ರಿಚರ್ಡ್ಸನ್ರನ್ನು 14 ಕೋಟಿ ರುಪಾಯಿ ನೀಡಿ ಖರೀದಿಸಿರುವ ಪಂಜಾಬ್ ಫ್ರಾಂಚೈಸಿಇ, ಟಿ20 ಸ್ಪೆಷಲಿಸ್ಟ್ ಡೇವಿಡ್ ಮಲಾನ್ಗೆ ಕೇವಲ ಒಂದೂವರೆ ಕೋಟಿ ರುಪಾಯಿ ಮೂಲ ಬೆಲೆಗೆ ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
CricketFeb 19, 2021, 12:50 PM IST
ಕಡು ಬಡತನ, ಟೆಂಪೋ ಡ್ರೈವರ್ ಮಗ ಸಕಾರಿಯಾ ಕಣ್ಣೀರು ಒರೆಸಿದ ಐಪಿಎಲ್ ಹರಾಜು!
ಕಡುಬಡತನ, ತನ್ನ ರೋಲ್ ಮಾಡೆಲ್ ಕ್ರಿಕೆಟಿಗರ ಪಂದ್ಯ ವೀಕ್ಷಿಸಲು ಮನೆಯಲ್ಲಿ ಟಿವಿ ಕೂಡ ಇಲ್ಲ. ಟೆಂಪೋ ಡ್ರೈವರ್ ಮಗ ಇದೀಗ 1.2 ಕೋಟಿ ರೂಪಾಯಿ ಒಡನೆಯನಾಗಿದ್ದಾನೆ. ರಾಜಸ್ಥಾನ ರಾಯಲ್ ಸೇರಿಕೊಂಡ ಚೇತನ್ ಸಕಾರಿಯಾ ಕಣ್ಣೀರ ಕತೆ ಇಲ್ಲಿದೆ.