Indw Vs Engw  

(Search results - 17)
  • Danielle Wyatt powers England womens Cricket to eight wicket win England Clinch T20 Series kvn

    CricketJul 15, 2021, 11:52 AM IST

    ಇಂಗ್ಲೆಂಡ್ ಎದುರು ಟಿ20 ಸರಣಿ ಸೋತ ಭಾರತ ಮಹಿಳಾ ಕ್ರಿಕೆಟ್ ತಂಡ..!

    ಭಾರತ ನೀಡಿದ್ದ 154 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡವು ಆರಂಭವದಲ್ಲೇ ಟಾಮಿ ಬಿಯುಮೌಟ್‌(11) ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಎರಡನೇ ವಿಕೆಟ್‌ಗೆ ಜತೆಯಾದ ವ್ಯಾಟ್‌ ಹಾಗೂ ಸೀವರ್ 112 ರನ್‌ಗಳ ಜತೆಯಾಟವಾಡುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

  • Harmanpreet Kaur Led Indian Womens Cricket Team Take on England in Series Decider Encounter at Chelmsford kvn

    CricketJul 14, 2021, 9:20 AM IST

    ಟಿ20 ಸರಣಿ ಮೇಲೆ ಭಾರತ ಮಹಿಳಾ ಕ್ರಿಕೆಟ್ ತಂಡದ ಕಣ್ಣು

    ಮೊದಲ ಪಂದ್ಯದಲ್ಲಿ ಸೋಲನ್ನಭವಿಸಿದ್ದ ಭಾರತ ತಂಡ, 2ನೇ ಪಂದ್ಯದಲ್ಲಿ ಜಯ ಸಾಧಿಸುವ ಮೂಲಕ ಇಂಗ್ಲೆಂಡ್‌ಗೆ ತಿರುಗೇಟು ನೀಡಿತ್ತು. ಈ ಗೆಲುವಿನ ವಿಶ್ವಾಸದಲ್ಲಿ ತೇಲುತ್ತಿರುವ ಹರ್ಮನ್‌ಪ್ರೀತ್‌ ಕೌರ್‌ ನೇತೃತ್ವದ ಪಡೆ ಇಂಗ್ಲೆಡ್‌ಗೆ ಸಡ್ಡು ಹೊಡೆಯುವ ಮೂಲಕ ಏಕದಿನ ಸರಣಿ ಸೋಲಿನ ಸೇಡನ್ನು ತೀರಿಸಿಕೊಳ್ಳುವ ಲೆಕ್ಕಾಚಾರದಲ್ಲಿದೆ.

  • Indian Womens Cricket Team pips England by eight runs to level T20 series kvn

    CricketJul 12, 2021, 9:23 AM IST

    2ನೇ ಮಹಿಳಾ ಟಿ20: ಇಂಗ್ಲೆಂಡ್‌ ವಿರುದ್ಧ ಭಾರತಕ್ಕೆ ರೋಚಕ ಜಯ

    ಶಫಾಲಿ ವರ್ಮಾ ಸ್ಫೋಟಕ ಆಟ (38 ಎಸೆತದಲ್ಲಿ 48 ರನ್‌) ನೆರವಿನಿಂದ ಭಾರತ 20 ಓವರಲ್ಲಿ 4 ವಿಕೆಟ್‌ಗೆ 148 ರನ್‌ ಗಳಿಸಿತು. ಇಂಗ್ಲೆಂಡ್‌, ಟ್ಯಾಮಿ ಬ್ಯುಯೊಮೊಂಟ್‌ರ ಅರ್ಧಶತಕದ ಹೊರತಾಗಿಯೂ ಕುಸಿತ ಕಂಡಿತು. ಕೊನೆ 36 ಎಸೆತಗಳಲ್ಲಿ ಕೇವಲ 43 ರನ್‌ ಬೇಕಿತ್ತು. ಆದರೂ ಇಂಗ್ಲೆಂಡ್‌ 8 ವಿಕೆಟ್‌ಗೆ ಕೇವಲ 140 ರನ್‌ ಗಳಿಸಿತು.

  • Indian Women Cricketer Harleen Deol produces one of the best catches ever against England kvn

    CricketJul 10, 2021, 9:52 AM IST

    ಪಂದ್ಯ ಸೋತರೂ ಅಭಿಮಾನಿಗಳ ಹೃದಯ ಗೆದ್ದ ಡಿಯೋಲ್ ಹಿಡಿದ ಅದ್ಭುತ ಕ್ಯಾಚ್‌..!

    ಸ್ಪೋಟಕ ಬ್ಯಾಟಿಂಗ್ ನಡೆಸುತ್ತಿದ್ದ ಆ್ಯಮಿ ಜೋನ್ಸ್‌ ಕೇವಲ 26 ಎಸೆತಗಳಲ್ಲಿ 43 ರನ್‌ ಚಚ್ಚಿದ್ದರು. ಈ ವೇಳೆ ಶಿಖಾ ಪಾಂಡೆ ಬೌಲಿಂಗ್‌ನಲ್ಲಿ ಆ್ಯಮಿ ಎಲೆನ್‌ ಜೋನ್ಸ್‌ ಲಾಂಗ್‌ ಆಫ್‌ನತ್ತ ಸಿಕ್ಸರ್ ಬಾರಿಸಲು ಯತ್ನಿಸಿದರು. ಆದರೆ ವೈಡ್‌ ಲಾಂಗ್‌ ಆಫ್‌ನ ಬೌಂಡರಿ ಗೆರೆಯಲ್ಲಿ ನಿಂತಿದ್ದ ಹರ್ಲಿನ್ ಡಿಯೋಲ್‌ ಸಿಕ್ಸರ್‌ ತಡೆದು ಡೈವ್ ಮಾಡುವ ಮೂಲಕ ಅದ್ಭುತವಾದ ಕ್ಯಾಚ್ ಪಡೆಯುವಲ್ಲಿ ಯಶಸ್ವಿಯಾದರು.

  • IndW vs EngW T20I Harmanpreet Kaur Set to Lead India Challenge against England kvn

    CricketJul 9, 2021, 9:47 AM IST

    ಟಿ20 ಸರಣಿಯಲ್ಲಿ ಇಂಗ್ಲೆಂಡ್‌ಗೆ ಶಾಕ್‌ ಕೊಡಲು ಹರ್ಮನ್‌ಪ್ರೀತ್ ಕೌರ್ ಪಡೆ ರೆಡಿ

    ಮಿಥಾಲಿ ರಾಜ್‌ ಏಕದಿನ ಸರಣಿಯಲ್ಲಿ ಸ್ಥಿರತೆ ಕಾಯ್ದುಕೊಂಡಿದ್ದು, ಉತ್ತಮ ಪ್ರದರ್ಶನ ನೀಡಿದ್ದರು. ಆದರೆ ಟಿ20 ತಂಡದಲ್ಲಿ ಮಿಥಾಲಿ ಸ್ಥಾನ ಪಡೆದಿಲ್ಲ. ಇನ್ನು ಏಕದಿನ ಸರಣಿಯಲ್ಲಿ ಭಾರತದ ತಂಡದ ಆಟಗಾರ್ತಿಯರ ಬ್ಯಾಟ್‌ನಿಂದ ನಿರೀಕ್ಷಿತ ಪ್ರಮಾಣದಲ್ಲಿ ರನ್‌ ಹರಿದುಬಂದಿಲ್ಲ. 

  • Mithali Raj becomes leading run scorer in Across 3 Format in womens international cricket kvn

    CricketJul 5, 2021, 8:30 AM IST

    ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದಾಖಲೆ ಬರೆದ ಮಿಥಾಲಿ ರಾಜ್..!

    317 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ(ಟೆಸ್ಟ್‌, ಏಕದಿನ, ಟಿ20) ಮಿಥಾಲಿ 10,277 ರನ್‌ ಗಳಿಸಿ ಮೊದಲ ಸ್ಥಾನಕ್ಕೇರಿದ್ದಾರೆ. 309 ಪಂದ್ಯಗಳಲ್ಲಿ ಎಡ್ವರ್ಡ್ಸ್ 10,273 ರನ್‌ ಗಳಿಸಿದ್ದರು. ಪುರುಷರ ಕ್ರಿಕೆಟ್‌ನಲ್ಲಿ ಸಚಿನ್‌ ತೆಂಡುಲ್ಕರ್‌, ಮಹಿಳಾ ಕ್ರಿಕೆಟ್‌ನಲ್ಲಿ ಮಿಥಾಲಿ ನಂ.1 ಸ್ಥಾನದಲ್ಲಿರುವುದು ವಿಶೇಷ.
     

  • England Womens Cricket Team Beat India and  Clinch the ODI Series kvn

    CricketJul 1, 2021, 11:43 AM IST

    ಭಾರತ ಮಹಿಳಾ ತಂಡಕ್ಕೆ ಮತ್ತೊಂದು ಸೋಲು; ಸರಣಿ ಇಂಗ್ಲೆಂಡ್ ಪಾಲು

    ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ ಮಹಿಳಾ ಕ್ರಿಕೆಟ್ ತಂಡ 221 ರನ್‌ ಬಾರಿಸಿ ಸರ್ವಪತನ ಕಂಡಿತು. ಶಫಾಲಿ ವರ್ಮಾ 44 ರನ್‌ ಬಾರಿಸಿದರೆ, ನಾಯಕಿ ಮಿಥಾಲಿ ರಾಜ್ ಸತತ ಎರಡನೇ ಅರ್ಧಶತಕ ಬಾರಿಸಿದರು. ಒಟ್ಟು 92 ಎಸೆತಗಳನ್ನು ಎದುರಿಸಿದ ಮಿಥಾಲಿ ರಾಜ್ 6 ಬೌಂಡರಿ ಸಹಿತ 59 ರನ್‌ ಬಾರಿಸಿ ರನೌಟ್‌ ಆದರು. 

  • England Women Cricket Team Won the toss and elected to field first Against India in Taunton kvn

    CricketJun 30, 2021, 6:28 PM IST

    ಮಹಿಳಾ ಏಕದಿನ ಪಂದ್ಯ: ಭಾರತ ಎದುರು ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆಯ್ಕೆ

    ಭಾರತ ಮಹಿಳಾ ತಂಡದಲ್ಲಿ 3 ಬದಲಾವಣೆಗಳನ್ನು ಮಾಡಲಾಗಿದ್ದು, ಜೆಮಿಯಾ ರೋಡ್ರಿಗಸ್‌, ಸ್ನೆಹ್ ರಾಣಾ ಹಾಗೂ ಪೂನಂ ಯಾದವ್ ತಂಡ ಕೂಡಿಕೊಂಡಿದ್ದಾರೆ. ಪೂನಂ ರಾವತ್, ಪೂಜಾ ವಸ್ತ್ರಾಕರ್ ಹಾಗೂ ಏಕ್ತಾ ಬಿಶ್ತ್‌ಗೆ ವಿಶ್ರಾಂತಿ ನೀಡಲಾಗಿದೆ. ಇನ್ನು ಇಂಗ್ಲೆಂಡ್ ತಂಡದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.
     

  • Mithali Raj fifty in vain as England Women Cricket Team beat India Women by 8 wickets in Bristol kvn

    CricketJun 28, 2021, 11:40 AM IST

    ಮಿಥಾಲಿ ರಾಜ್ ಅರ್ಧಶತಕ ವ್ಯರ್ಥ: ಇಂಗ್ಲೆಂಡ್‌ ಎದುರು ಭಾರತಕ್ಕೆ ಹೀನಾಯ ಸೋಲು

    ಮೊದಲು ಬ್ಯಾಟ್‌ ಮಾಡಿದ ಮಿಥಾಲಿ ರಾಜ್ ನೇತೃತ್ವದ ಭಾರತ ಮಹಿಳಾ ಕ್ರಿಕೆಟ್ ತಂಡ ಉತ್ತಮ ಆರಂಭವನ್ನು ಪಡೆಯಲು ವಿಫಲವಾಯಿತು. ಮೊದಲ 10 ಓವರ್‌ಗಳಲ್ಲಿ ತಂಡ 27 ರನ್‌ ಗಳಿಸುವಷ್ಟರಲ್ಲೇ ಆರಂಭಿಕ ಬ್ಯಾಟರ್‌ಗಳಾದ ಶಫಾಲಿ ವರ್ಮಾ ಹಾಗೂ ಸ್ಮೃತಿ ಮಂಧನಾ ಪೆವಿಲಿಯನ್ ಸೇರಿದ್ದರು.

  • Indian Women Batter Shafali Verma will be very important for us in all formats Says Mithali Raj kvn

    CricketJun 21, 2021, 3:46 PM IST

    ಮೂರೂ ಮಾದರಿಯಲ್ಲೂ ಶಫಾಲಿಗೆ ಉತ್ತಮ ಭವಿಷ್ಯವಿದೆ: ಮಿಥಾಲಿ ರಾಜ್

    ‘ಶಫಾಲಿ ಎಲ್ಲಾ ಮೂರು ಮಾದರಿಯಲ್ಲಿ ಭಾರತೀಯ ಬ್ಯಾಟಿಂಗ್‌ ಪಡೆಯ ಬಹಳ, ಬಹಳ ಪ್ರಮುಖ ಆಟಗಾರ್ತಿ ಆಗಲಿದ್ದಾರೆ. ಸಂದರ್ಭಕ್ಕೆ ತಕ್ಕಂತೆ ತಮ್ಮ ಆಟದ ಶೈಲಿಯನ್ನು ಬದಲಿಸಿಕೊಳ್ಳುವ ಕೌಶಲ್ಯ ಅವರಲ್ಲಿದೆ’ ಎಂದು ಮಿಥಾಲಿ ಹೇಳಿದ್ದಾರೆ.

  • Womens Test Cricket Sneh Rana Cool Batting helps Team India take 78 runs lead at Tea in Bristol kvn

    CricketJun 19, 2021, 9:05 PM IST

    ರೋಚಕ ಘಟ್ಟದತ್ತ ಭಾರತ-ಇಂಗ್ಲೆಂಡ್ ಮಹಿಳಾ ಟೆಸ್ಟ್‌ ಮ್ಯಾಚ್‌

    ಒಂದು ಹಂತದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡವು 199 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡು ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಗೆ ಸಿಲುಕಿತ್ತು. ಈ ವೇಳೆ 8ನೇ ವಿಕೆಟ್‌ಗೆ ಜತೆಯಾದ ಶಿಖಾ ಪಾಂಡೆ ಹಾಗೂ ಸ್ನೆಹ್ ರಾಣಾ ಜೋಡಿ 41 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು.

  • Womens Test Cricket Deepti Sharma hits maiden Test fifty on debut, India takes slender lead kvn

    CricketJun 19, 2021, 6:39 PM IST

    ದೀಪ್ತಿ ಶರ್ಮಾ ಚೊಚ್ಚಲ ಅರ್ಧಶತಕ; ಭಾರತಕ್ಕೆ ಕೊಂಚ ಮುನ್ನಡೆ

    ಮೊದಲ ಇನಿಂಗ್ಸ್‌ನಲ್ಲಿ ದಿಢೀರ್ ಕುಸಿತ ಕಂಡು ಫಾಲೋ ಆನ್‌ಗೆ ಒಳಗಾಗಿದ್ದ ಭಾರತ ತಂಡಕ್ಕೆ ಎರಡನೇ ಇನಿಂಗ್ಸ್‌ನಲ್ಲಿ ಮೊದಲಿಗೆ ಶಫಾಲಿ ವರ್ಮಾ ಅರ್ಧಶತಕ ಬಾರಿಸಿ ಆಸರೆಯಾಗಿದ್ದರು. ಶಫಾಲಿಗೆ ಮತ್ತೊಂದು ತುದಿಯಲ್ಲಿ ಉತ್ತಮ ಸಾಥ್ ನೀಡಿದ ಎಡಗೈ ಬ್ಯಾಟರ್ ಶಫಾಲಿ ವರ್ಮಾ 157 ಎಸೆತಗಳನ್ನು ಎದುರಿಸಿ ಚೊಚ್ಚಲ ಟೆಸ್ಟ್ ಅರ್ಧಶತಕ ಪೂರೈಸಿದರು. 

  • Indian Women Cricketer Shafali Verma Becomes Youngest Woman To Hit 2 Half Centuries In Debut Test kvn

    CricketJun 19, 2021, 9:19 AM IST

    ಚೊಚ್ಚಲ ಟೆಸ್ಟ್‌ನ 2 ಇನಿಂಗ್ಸಲ್ಲಿ ಅರ್ಧಶತಕ: ಶಫಾಲಿ ವರ್ಮಾ ದಾಖಲೆ

    ಇಂಗ್ಲೆಂಡ್ ವಿರುದ್ದ ಇಲ್ಲಿ ನಡೆಯುತ್ತಿರುವ ಏಕೈಕ ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 96 ರನ್‌ ಗಳಿಸಿದ್ದ ಶಫಾಲಿ , ಎರಡನೇ ಇನಿಂಗ್ಸ್‌ನಲ್ಲಿ 55 ರನ್‌ ಗಳಿಸಿ ಅಜೇಯರಾಗುಳಿದಿದ್ದು, ಕೊನೆಯ ದಿನದಾಟಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಇದಷ್ಟೇ ಅಲ್ಲದೇ ಎರಡೂ ಇನಿಂಗ್ಸ್‌ನಲ್ಲಿ ಅರ್ಧಶತಕ ಬಾರಿಸಿದ ಎರಡನೇ ಅತಿ ಕಿರಿಯ ಕ್ರಿಕೆಟರ್ ಎನ್ನುವ ದಾಖಲೆಯೂ ಶಫಾಲಿ ಪಾಲಾಗಿದೆ.

  • IndW vs EngW Womens Test India 231 all out England enforces follow on kvn

    CricketJun 18, 2021, 5:31 PM IST

    ಮಹಿಳಾ ಟೆಸ್ಟ್ ಕ್ರಿಕೆಟ್‌: ಭಾರತದ ಮೇಲೆ ಫಾಲೋ ಆನ್ ಹೇರಿದ ಇಂಗ್ಲೆಂಡ್

    ಎರಡನೇ ದಿನದಾಟದಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 187 ರನ್ ಬಾರಿಸಿದ್ದ ಭಾರತ ತಂಡವು ಮೂರನೇ ದಿನದಾಟದ ಆರಂಭದಲ್ಲೇ ಹರ್ಮನ್‌ಪ್ರೀತ್ ಕೌರ್ ವಿಕೆಟ್ ಕಳೆದುಕೊಂಡಿತು. ಅಂತಿಮವಾಗಿ ತನ್ನ ಖಾತೆಗೆ 44 ರನ್‌ ಸೇರಿಸುವಷ್ಟರಲ್ಲಿ ಎಲ್ಲಾ 5 ವಿಕೆಟ್ ಕಳೆದುಕೊಂಡು ಆಲೌಟ್ ಆಯಿತು. 

  • IndW vs EngW Womens Test Cricket Shafali misses century late batting collapse hurts India kvn

    CricketJun 18, 2021, 9:38 AM IST

    ಮಹಿಳಾ ಟೆಸ್ಟ್ ಕ್ರಿಕೆಟ್‌; ಶೆಫಾಲಿ-ಮಂಧನಾ ಅಬ್ಬರದ ಹೊರತಾಗಿಯೂ ದಿಢೀರ್ ಕುಸಿದ ಭಾರತ

    ಇಂಗ್ಲೆಂಡ್ ಮಹಿಳಾ ತಂಡವು 9 ವಿಕೆಟ್ ಕಳೆದುಕೊಂಡು 396 ರನ್‌ ಬಾರಿಸಿ ಮೊದಲ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಭಾರತ ಪರ ಸ್ನೆಹ್ ರಾಣಾ 4 ವಿಕೆಟ್ ಪಡೆದರೆ, ದೀಪ್ತಿ ಶರ್ಮಾ 3 ಹಾಗೂ ಪೂಜಾ ವಸ್ತ್ರಾಕರ್ ಮತ್ತು ಜೂಲನ್ ಗೋಸ್ವಾಮಿ ತಲಾ ಒಂದೊಂದು ವಿಕೆಟ್ ಪಡೆದರು.