Indo Afghan Test  

(Search results - 27)
 • Afghanistan players open up on their favourite food

  SPORTSJun 16, 2018, 9:16 PM IST

  ಅಫ್ಘಾನಿಸ್ತಾನ ಕ್ರಿಕೆಟಿಗರ ನೆಚ್ಚಿನ ತಿನಿಸು ಯಾವುದು ಗೊತ್ತಾ?

  ಅಫ್ಘಾನಿಸ್ತಾನ ಕ್ರಿಕೆಟಿಗರಿಗೆ ಭಾರತ ನೆಚ್ಚಿನ ತಾಣ. ಇದರ ಜೊತೆಗೆ ಭಾರತದ ತಿನಿಸುಗಳು ಕೂಡ ಅಷ್ಟೇ ಇಷ್ಟ. ಬಹುತೇಕ ಅಫ್ಘಾನ್ ಕ್ರಿಕೆಟಿಗರಿಗೆ ಹೈದರಬಾದ್ ಬಿರಿಯಾನಿ ಇಷ್ಟ. ಅಫ್ಘಾನ್ ಕ್ರಿಕೆಟಿಗರ ಇಷ್ಟದ ತಿನಿಸುಗಳ ವಿವರ ಇಲ್ಲಿದೆ.

 • R Ashwin trolled Asghar Stanikzai like a boss

  SPORTSJun 16, 2018, 2:31 PM IST

  ಆಫ್ಘಾನ್ ನಾಯಕನ ’ಆ ಮಾತು’ ನೆನಪಿದೆಯಾ..?

  ಭಾರತ-ಆಫ್ಘಾನಿಸ್ತಾನ ನಡುವಿನ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತ ಇನ್ನಿಂಗ್ಸ್ ಹಾಗೂ 262 ರನ್’ಗಳ ಭರ್ಜರಿ ಜಯ ದಾಖಲಿಸಿದೆ. ಮೊದಲ ಇನಿಂಗ್ಸ್’ನಲ್ಲಿ ಅಶ್ವಿನ್ 4 ವಿಕೆಟ್ ಕಬಳಿಸಿದರೆ, ಎರಡನೇ ಇನ್ನಿಂಗ್ಸ್’ನಲ್ಲಿ ಜಡೇಜಾ 4 ವಿಕೆಟ್ ಕಬಳಿಸಿ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. 

 • How to Get India Vs Afghanistan Test Refund Tickets

  SPORTSJun 16, 2018, 1:34 PM IST

  ಕೊನೆ 3 ದಿನದ ಟಿಕೆಟ್ ಹಣ ವಾಪಸ್: ಕೆಎಸ್‌'ಸಿಎ

  ಭಾರತ-ಆಫ್ಘಾನಿಸ್ತಾನ ಟೆಸ್ಟ್ ಎರಡೇ ದಿನಕ್ಕೆ ಮುಕ್ತಾಯಗೊಂಡಿದ್ದರಿಂದ ಉಳಿದ 3 ದಿನಗಳ ಟಿಕೆಟ್ ಖರೀದಿಸಿದವರಿಗೆ, ಟಿಕೆಟ್ ಮೊತ್ತವನ್ನು ವಾಪಸ್ ನೀಡಲು ಕೆಎಸ್‌ಸಿಎ ನಿರ್ಧರಿಸಿದೆ.

 • India crush Afghanistan by an innings & 262 runs

  SPORTSJun 15, 2018, 8:16 PM IST

  ಇಂಡೋ-ಅಫ್ಘಾನ್ ಟೆಸ್ಟ್: ಭಾರತಕ್ಕೆ ಗರಿಷ್ಠ ಗೆಲುವಿನ ದಾಖಲೆ

  ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ ಟೆಸ್ಟ್ ಪಂದ್ಯದಲ್ಲಿ ಹಲವು ದಾಖಲೆಗಳ ನಿರ್ಮಾಣವಾಗಿದೆ. ಗೆಲುವಿನ ಅಂತರದಲ್ಲಿ ಭಾರತ ಹೊಸ ರೆಕಾರ್ಡ್ ಮಾಡಿದೆ. ಆದೇನು? ಇಲ್ಲಿದೆ ವಿವರ

 • India v/s Afghanistan Watch Team India's brilliant gesture to Afghan players shows this test was more than a match

  SPORTSJun 15, 2018, 8:02 PM IST

  ಟೆಸ್ಟ್ ಸರಣಿ ಗೆದ್ದರೂ ಆಫ್ಘಾನ್‌ಗೆ ಚಾಂಪಿಯನ್ ಪಟ್ಟ ನೀಡಿದ ಭಾರತ

  ಭಾರತ-ಅಫ್ಘಾನಿಸ್ತಾನ ನಡುವಿನ ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಭಾರತ ಗೆಲುವಿನ ನಗೆ ಬೀರಿದೆ. ಆದರೆ ಗೆಲುವಿನ ಬಳಿಕ ರಹಾನೆ ಟೀಂ ತೋರಿದ ನಡೆಗೆ ಹ್ಯಾಟ್ಸ್ ಆಫ್ ಹೇಳಲೇಬೇಕು. ಹಾಗಾದರೆ ಗೆಲುವಿನ ಬಳಿಕ ಭಾರತ  ತಂಡ  ಮಾಡಿದ್ದೇನು?

 • India crush Afghanistan by an inning and 262 runs

  SPORTSJun 15, 2018, 5:46 PM IST

  ಇಂಡೋ-ಆಫ್ಘಾನ್ ಟೆಸ್ಟ್: ಎರಡೇ ದಿನಕ್ಕೆ ಆಟ ಮುಗಿಸಿದ ಆಫ್ಘಾನ್..!

  ಟೀಂ ಇಂಡಿಯಾ ಬೌಲರ್’ಗಳ ಮಾರಕ ದಾಳಿಗೆ ತತ್ತರಿಸಿ ಆಫ್ಘಾನಿಸ್ತಾನ ಎರಡನೇ ದಿನವೇ ಸೋಲಿಗೆ ಶರಣಾಗಿದೆ. ಎರಡನೇ ಇನಿಂಗ್ಸ್’ನಲ್ಲಿ ಆಫ್ಘಾನ್ ತಂಡವನ್ನು 103 ರನ್’ಗಳಿಗೆ ಕಟ್ಟಿಹಾಕಿದ ರಹಾನೆ ಪಡೆ ಇನಿಂಗ್ಸ್ ಹಾಗೂ 262 ರನ್’ಗಳ ಭರ್ಜರಿ ಜಯ ದಾಖಲಿಸಿದೆ. ಚೊಚ್ಚಲ ಟೆಸ್ಟ್ ಪಂದ್ಯವಾಡಿದ ಆಫ್ಘಾನಿಸ್ತಾನ ಬಲಿಷ್ಠ ಭಾರತದೆದುರು ಹೀನಾಯ ಸೋಲು ಕಂಡಿದೆ. ಈ ದಾಖಲೆಯ ಜಯದೊಂದಿಗೆ ಏಕೈಕ ಟೆಸ್ಟ್ ಪಂದ್ಯದ ಸರಣಿಯನ್ನು ಭಾರತ ಕೇವಲ ಎರಡೇ ದಿನದಲ್ಲಿ ಕೈವಶ ಮಾಡಿಕೊಂಡಿದೆ.

 • India-Afghanistan test Most wickets in a day's play in Asia

  SPORTSJun 15, 2018, 5:29 PM IST

  ಗರಿಷ್ಠ ವಿಕೆಟ್ ಪತನದಲ್ಲಿ ದಾಖಲೆ ಬರೆದ ಭಾರತ-ಅಫ್ಘಾನ್ ಟೆಸ್ಟ್

  ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ ಏಕೈಕ ಟೆಸ್ಟ್ ಪಂದ್ಯದಲ್ಲಿ ವಿನೂತನ ದಾಖಲೆ ರಚನೆಯಾಗಿದೆ. ಭಾತದ ಬೌಲಿಂಗ್ ದಾಳಿಗೆ ನಲುಗಿದ ಅಫ್ಘಾನಿಸ್ತಾನ ಪೆವಿಲಿಯನ್ ಪರೇಡ್ ನಡೆಸುತ್ತಿದೆ. ಭಾರತದ  ಅದ್ಬುತ ದಾಳಿಗೆ ನಿರ್ಮಾಣವಾದ ದಾಖಲೆ ಏನು?
   

 • India vs Afghanistan Test India Dominate day 2

  Jun 15, 2018, 4:03 PM IST

  ಎರಡೇ ದಿನಕ್ಕೆ ಮುಗಿಯುತ್ತಾ ಭಾರತ-ಆಫ್ಘಾನ್ ಟೆಸ್ಟ್?

  ಭಾರತ ಹಾಗೂ ಆಫ್ಘಾನಿಸ್ತಾನ ನಡುವಿನ ಐತಿಹಾಸಿಕ ಟೆಸ್ಟ್ ಪಂದ್ಯ ಕೇವಲ ಎರಡೇ ದಿನಕ್ಕೆ ಮುಗಿಯುತ್ತಾ? ಇಂತದೊಂದು ಪ್ರಶ್ನೆ ಈಗ ಕ್ರಿಕೆಟ್ ವಲಯದಲ್ಲಿ ಹರಿದಾಡುತ್ತಿದೆ. ಹಾಗಾದರೆ, ಐತಿಹಾಸಿಕ ಪಂದ್ಯ ಎಷ್ಟು ದಿನ ನಡೆಯುತ್ತೆ? ಇಲ್ಲಿದೆ ವರದಿ
   

 • Ishant Sharma Joins Elite List of Kapil Dev

  Jun 15, 2018, 3:57 PM IST

  ಕನ್ನಡಿಗನ ದಾಖಲೆ ಮುರಿದ ಡೆಲ್ಲಿ ವೇಗಿ..!

  ಎರಡನೇ ಇನಿಂಗ್ಸ್’ನಲ್ಲಿ ದಾಳಿಗಿಳಿದಿರುವ ಭಾರತದ ಬೌಲರ್’ಗಳು ಮತ್ತೆ ಮಿಂಚುತ್ತಿದ್ದು, ಡೆಲ್ಲಿ ವೇಗಿ ಇಶಾಂತ್ ಶರ್ಮಾ ಹೊಸ ದಾಖಲೆ ಬರೆದಿದ್ದಾರೆ. ರಹಮತ್ ಅವರನ್ನು ಪೆವಿಲಿಯನ್’ಗೆ ಕಳಿಸುವ ಮೂಲಕ ಶರ್ಮಾ ವಿನೂತನ ಸಾಧನೆ ಮಾಡಿದ್ದಾರೆ. ಜಾವಗಲ್ ಎಕ್ಸ್’ಪ್ರೆಸ್ ಖ್ಯಾತಿಯ ಕನ್ನಡಿಗ ಜಾವಗಲ್ ಶ್ರೀನಾಥ್ ಅವರ 236 ವಿಕೆಟ್ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಈ ಮೂಲಕ ಭಾರತದ ಪರ ಗರಿಷ್ಠ ವಿಕೆಟ್ ಪಡೆದ ವೇಗದ ಬೌಲರ್’ಗಳ ಪಟ್ಟಿಯಲ್ಲಿ ಇಶಾಂತ್ ಶರ್ಮಾ ಮೂರನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. 

 • Afghanistan have batted the fewest overs in an innings of their inaugural Test

  Jun 15, 2018, 3:26 PM IST

  ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಅಫ್ಘಾನ್ ತಂಡಕ್ಕೆ ಕನಿಷ್ಠ ಮೊತ್ತದ ಹಣೆಪಟ್ಟಿ

  ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಅಫ್ಘಾನಿಸ್ತಾನ ಹಲವು ಕುಖ್ಯಾತಿಗೆ ಪಾತ್ರವಾಗಿದೆ. ಅಫ್ಘಾನ್ ತಂಡ ಕಟ್ಟಿಕೊಂಡ ಹಣೆಪಟ್ಟಿ ಯಾವುದು?

 • Afghanistan players celebrate Eid at M.Chinnaswamy Stadium, Bengaluru

  Jun 15, 2018, 2:50 PM IST

  ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈದ್ ಮುಬಾರಕ್

  ಐತಿಹಾಸಿಕ ಭಾರತ -ಅಫ್ಘಾನಿಸ್ತಾನ ಟೆಸ್ಟ್ ಪಂದ್ಯದ ದ್ವಿತೀಯ ದಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಂಜಾನ್ ಹಬ್ಬದ ವಾತಾವರಣ ಕಳೆಗಟ್ಟಿತು. ಅಫ್ಘಾನಿಸ್ತಾನ ಆಟಗಾರರ ರಂಜಾನ್ ಹಬ್ಬದ ಆಚರಣೆ ಹೇಗಿತ್ತು? ಇಲ್ಲಿದೆ ವಿವರ.

 • Indo Afghan Test: Afghan batsmen surrender

  Jun 15, 2018, 2:27 PM IST

  ಇಂಡೋ-ಆಫ್ಘಾನ್ ಟೆಸ್ಟ್: ಪೆವಿಲಿಯನ್ ಪರೇಡ್ ನಡೆಸಿದ ಆಫ್ಘಾನ್ 109 ರನ್’ಗಳಿಗೆ ಆಲೌಟ್

  ಟೀಂ ಇಂಡಿಯಾ ಬೌಲರ್’ಗಳ ಮಾರಕ ದಾಳಿಗೆ ತತ್ತರಿಸಿದ ಆಫ್ಘಾನ್ ಬ್ಯಾಟ್ಸ್’ಮನ್’ಗಳು ಪೆವಿಲಿಯನ್ ಪರೇಡ್ ನಡೆಸಿದ್ದಾರೆ. ಕೇವಲ 109 ರನ್’ಗಳಿಗೆ ಆಲೌಟ್ ಆಗುವ ಮೂಲಕ 365 ರನ್’ಗಳ ಮೊದಲ ಇನಿಂಗ್ಸ್ ಹಿನ್ನಡೆ ಅನುಭವಿಸಿದೆ.
  ಇಲ್ಲಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲ ಇನಿಂಗ್ಸ್’ನಲ್ಲಿ 474 ರನ್ ಕಲೆಹಾಕಿತ್ತು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆರಂಭಿಸಿದ ಆಫ್ಘಾನ್, ಟೀಂ ಇಂಡಿಯಾ ಮಾರಕ ದಾಳಿಗೆ ತತ್ತರಿಸಿ ಹೋಗಿದೆ.

 • India vs Afghanista Test Ashwin goes past Zaheer Khan

  Jun 15, 2018, 2:19 PM IST

  ಟೆಸ್ಟ್ ಕ್ರಿಕೆಟ್‌ನಲ್ಲಿ ಆರ್ ಅಶ್ವಿನ್ ಹೊಸ ದಾಖಲೆ

  ಭಾರತ  ಹಾಗೂ ಅಫ್ಘಾನಿಸ್ತಾನ ನಡುವಿನ ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಹಲವು ದಾಖಲೆಗಳು ನಿರ್ಮಾಣವಾಗಿದೆ. ಟೀಮ್ಇಂಡಿಯಾ ಸ್ಪಿನ್ನರ್ ಆರ್ ಅಶ್ವಿನ್ ನಿರ್ಮಿಸಿದ ರೆಕಾರ್ಡ್ ಏನು? ಇಲ್ಲಿಗದೆ ವಿವರ.

 • Rashid Khan Not a memorable debut

  Jun 15, 2018, 1:36 PM IST

  ಚೊಚ್ಚಲ ಪಂದ್ಯದಲ್ಲೇ ಕುಖ್ಯಾತಿಗೆ ಒಳಗಾದ ರಶೀದ್ ಖಾನ್..!

  ಸೀಮಿತ ಓವರ್’ಗಳ ಕ್ರಿಕೆಟ್’ನಲ್ಲಿ ಸಾಕಷ್ಟು ಸಂಚಲನ ಮೂಡಿಸಿರುವ ರಶೀದ್ ಟೆಸ್ಟ್ ಕ್ರಿಕೆಟ್’ನಲ್ಲಿ ಡ್ರೀಮ್ ಸ್ಪೆಲ್ ಹಾಕಲು ವಿಫಲರಾದರು. ರಶೀದ್ ಭಾರತ ವಿರುದ್ಧದ ಮೊದಲ ಇನಿಂಗ್ಸ್’ನಲ್ಲಿ 2 ವಿಕೆಟ್ ಪಡೆದರಾದರೂ 147 ರನ್’ಗಳನ್ನು ಬಿಟ್ಟುಕೊಡುವ ಮೂಲಕ ದುಬಾರಿಯಾದರು. ಹೌದು, ಚೊಚ್ಚಲ ಟೆಸ್ಟ್ ಪಂದ್ಯದ ಇನಿಂಗ್ಸ್’ವೊಂದರಲ್ಲಿ ಗರಿಷ್ಠ ರನ್ ನೀಡಿದ ಬೌಲರ್ ಎನ್ನುವ ಕುಖ್ಯಾತಿಗೆ ರಶೀದ್ ಖಾನ್ ಭಾಜನರಾಗಿದ್ದಾರೆ. ಈ ಮೊದಲು 1952ರಲ್ಲಿ ಭಾರತ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನದ ಬೌಲರ್ ಅಮಿರ್ ಎಲೈ 134 ರನ್ ನೀಡಿದ್ದರು.

 • Indo-Afghan Test India all out for 474 in first session

  Jun 15, 2018, 11:41 AM IST

  ಇಂಡೋ-ಆಫ್ಘಾನ್ ಟೆಸ್ಟ್: ಟೀಂ ಇಂಡಿಯಾ 474 ರನ್’ಗಳಿಗೆ ಆಲೌಟ್

  ಶಿಖರ್ ಧವನ್, ಮುರುಳಿ ವಿಜಯ್ ಆಕರ್ಷಕ ಶತಕ ಹಾಗೂ ಕೆ.ಎಲ್ ರಾಹುಲ್ ಹಾಗೂ ಹಾರ್ದಿಕ್ ಪಾಂಡ್ಯ ಸಮಯೋಚಿತ ಅರ್ಧಶತಕಗಳ ನೆರವಿನಿಂದ ಭಾರತ ಮೊದಲ ಇನಿಂಗ್ಸ್’ನಲ್ಲಿ 474 ರನ್ ಬಾರಿಸಿ ಆಲೌಟ್ ಆಗಿದೆ.