Ind Vs Afg  

(Search results - 19)
  • Sachin and Dhoni

    World CupJun 24, 2019, 10:44 AM IST

    ಧೋನಿ ಮೇಲೆ ಕಿಡಿಕಾರಿದ ಸಚಿನ್ ತೆಂಡುಲ್ಕರ್..!

    ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದು ಎನಿಸಿರುವ ಟೀಂ ಇಂಡಿಯಾ ಮೊದಲು ಬ್ಯಾಟ್ ಮಾಡಿ ಕೇವಲ 224 ರನ್ ಬಾರಿಸಿತ್ತು. ಇದಕ್ಕುತ್ತರವಾಗಿ ಆಫ್ಘನ್ ಗೆಲುವಿನ ಸಮೀಪ ಬಂದಿತ್ತಾದರೂ ಶಮಿ ಹ್ಯಾಟ್ರಿಕ್ ಬೌಲಿಂಗ್ ನೆರವಿನಿಂದ 213 ರನ್ ಗಳಿಗೆ ಸರ್ವಪತನ ಕಾಣುವ ಮೂಲಕ ಕೇವಲ 11 ರನ್ ಗಳ ಸೋಲೊಪ್ಪಿಕೊಂಡಿತ್ತು. 

  • Match 28

    World CupJun 22, 2019, 2:36 PM IST

    ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ

    ಈ ಪಂದ್ಯವನ್ನು ಜಯಿಸಿದರೆ, ಭಾರತ ತಂಡವು ವಿಶ್ವಕಪ್ ಟೂರ್ನಿಯಲ್ಲಿ 50ನೇ ಗೆಲುವು ದಾಖಲಿಸಿದ ಮೂರನೇ ತಂಡ ಎನಿಸಿಕೊಳ್ಳಲಿದೆ. ಈ ಮೊದಲು ಆಸ್ಟ್ರೇಲಿಯಾ[67] ಹಾಗೂ ನ್ಯೂಜಿಲೆಂಡ್[52] ತಂಡಗಳು 50+ ಪಂದ್ಯಗಳನ್ನು ಜಯಿಸಿದ ಸಾಧನೆ ಮಾಡಿವೆ. ಇದರ ಜತೆಗೆ ಉತ್ತಮ ರನ್ ರೇಟ್’ನಲ್ಲಿ ಜಯಿಸಿದರೆ ಭಾರತ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಲಿದೆ.

  • Virat Kohli

    World CupJun 22, 2019, 12:21 PM IST

    ಆಫ್ಘನ್ ವಿರುದ್ಧದ ಪಂದ್ಯ: ಟೀಂ ಇಂಡಿಯಾದಲ್ಲಿ 2 ಬದಲಾವಣೆ..?

    ಮೊದಲೆರಡು ಪಂದ್ಯಗಳಲ್ಲಿ ಟೀಂ ಇಂಡಿಯಾದಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ. ಆದರೆ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಶಿಖರ್ ಧವನ್ ಬದಲು ವಿಜಯ್ ಶಂಕರ್ ಗೆ ಅವಕಾಶ ಕಲ್ಪಿಸಲಾಗಿತ್ತು.

  • Match 28

    World CupJun 22, 2019, 10:07 AM IST

    ಆಫ್ಘನ್‌ ಬೇಟೆಯಾಡಲು ಟೀಂ ಇಂಡಿಯಾ ರೆಡಿ!

    ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದೆನಿಸಿರುವ ಭಾರತ ತಂಡಕ್ಕೆ ಈ ಪಂದ್ಯ ಹೆಚ್ಚುವರಿ ನೆಟ್ಸ್‌ ಅಭ್ಯಾಸ ಅವಧಿಯಾಗಲಿದೆ. ಪ್ರಚಂಡ ಲಯದಲ್ಲಿರುವ ಭಾರತ, ಈ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸುವುದರೊಂದಿಗೆ ಸೆಮಿಫೈನಲ್‌ ಹಾದಿ ಸುಗಮಗೊಳಿಸಿಕೊಳ್ಳಲು ಎದುರು ನೋಡುತ್ತಿದೆ.

  • dhoni

    CRICKETSep 27, 2018, 12:48 PM IST

    ಅಂಪೈರ್’ಗಳ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಧೋನಿ..!

    ಆಫ್ಘಾನಿಸ್ತಾನ ವಿರುದ್ಧ ಏಷ್ಯಾಕಪ್ ಪಂದ್ಯದಲ್ಲಿ ಅಂಪೈರ್‌ಗಳ ಕೆಟ್ಟ ನಿರ್ಣಯಗಳನ್ನು ಭಾರತ ತಂಡದ ನಾಯಕತ್ವ ವಹಿಸಿದ್ದ ಎಂ.ಎಸ್.ಧೋನಿ ಪರೋಕ್ಷವಾಗಿ ಟೀಕಿಸಿದ್ದಾರೆ. 

  • dhoni discontent
    Video Icon

    CRICKETSep 26, 2018, 3:58 PM IST

    ಏಷ್ಯಾಕಪ್’ನಲ್ಲಿ ಧೋನಿಗೆ ಸರ್ಪೈಸ್ ಕೊಟ್ಟ ಬಿಸಿಸಿಐ..!

    ಟೀಂ ಇಂಡಿಯಾದ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಏಷ್ಯಾಕಪ್’ನಲ್ಲಿ ಬಿಸಿಸಿಐ ಬಿಗ್ ಸರ್ಪೈಸ್ ನೀಡಿದೆ. ಟೀಂ ಇಂಡಿಯಾಗೆ ಮೂರು ಪ್ರಮುಖ ಐಸಿಸಿ ಟೂರ್ನಿಗಳನ್ನು [ಟಿ20, ಏಕದಿನ ವಿಶ್ವಕಪ್ ಹಾಗೂ ಚಾಂಪಿಯನ್ಸ್ ಟ್ರೋಫಿ] ಗೆದ್ದುಕೊಟ್ಟ ಧೋನಿಗೆ ಬಿಸಿಸಿಐ ಆಫ್ಘಾನ್ ಪಂದ್ಯಕ್ಕೂ ಮುನ್ನ ಅಚ್ಚರಿ ನೀಡಿತು.

  • Mohammad Shahzad
    Video Icon

    CRICKETSep 26, 2018, 3:09 PM IST

    ಕ್ರಿಕೆಟ್ ಅಭಿಮಾನಿಗಳ ಮನಗೆದ್ದ ಆಫ್ಘಾನ್ ಬ್ಯಾಟಿಂಗ್

    ಏಷ್ಯಾಕಪ್’ನಲ್ಲಿ ಈ ಬಾರಿ ಆಫ್ಘಾನ್ ಕ್ರಿಕೆಟ್ ತಂಡ ಅಭಿಮಾನಿಗಳ ಮನಗೆಲ್ಲುವಲ್ಲಿ ಸಫಲವಾಗಿದೆ. ಗ್ರೂಪ್ ಹಂತದಲ್ಲಿ ಶ್ರೀಲಂಕಾ ಹಾಗೂ ಬಾಂಗ್ಲಾದೇಶಕ್ಕೆ ಸೋಲಿನ ರುಚಿ ತೋರಿಸಿದ್ದ ಆಫ್ಘಾನ್, ಸೂಪರ್ 4 ಹಂತದ ಮೂರು ಪಂದ್ಯಗಳಲ್ಲೂ ಕೇವಲ ಕೂದಲೆಳೆ ಅಂತರದಲ್ಲಿ ಸೋಲು ಕಂಡಿದೆ.

  • Afganistan Team
    Video Icon

    CRICKETSep 26, 2018, 2:34 PM IST

    ಇಂಡೋ-ಆಫ್ಘಾನ್ ಪಂದ್ಯ ಹೇಗಿತ್ತು ಗೊತ್ತಾ..?

    ಏಷ್ಯಾಕಪ್’ನ ಸೂಪರ್ 4 ಹಂತದ ಭಾರತ-ಆಫ್ಘಾನ್ ನಡುವಿನ ಪಂದ್ಯ ಮತ್ತೊಂದು ರೋಚಕ ಪಂದ್ಯಕ್ಕೆ ಸಾಕ್ಷಿಯಾಯಿತು. ಸುಮಾರು 2 ವರ್ಷಗಳ ಬಳಿಕ ಟೀಂ ಇಂಡಿಯಾದ ನಾಯಕತ್ವ ವಹಿಸಿದ್ದ ಧೋನಿ 200ನೇ ಬಾರಿಗೆ ಭಾರತ ತಂಡವನ್ನು ಮುನ್ನಡೆಸಿದ ಸಾಧನೆ ಮಾಡಿದರು.

  • Asia Cup 2018

    CRICKETSep 26, 2018, 11:47 AM IST

    ಇಂಡೋ-ಆಫ್ಘಾನ್ ಪಂದ್ಯ ರೋಚಕ ಟೈ: ಸೆಹ್ವಾಗ್-ಕೈಫ್ ಟ್ವೀಟ್ ಅಂತೂ ಅದ್ಭುತ..!

     ಭಾರತ-ಆಫ್ಘಾನಿಸ್ತಾನ ನಡುವಿನ ಏಷ್ಯಾಕಪ್ ಟೂರ್ನಿಯ ಸೂಪರ್ 4 ಹಂತದ ಪಂದ್ಯ ರೋಚಕ ಟೈನಲ್ಲಿ ಅಂತ್ಯವಾಗಿದೆ. ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಟೀಂ ಇಂಡಿಯಾ ಕೊನೆಯಾ ಕ್ಷಣದಲ್ಲಿ ಎಡವಿದರೆ, ಆಫ್ಘಾನ್ ಕೂಡಾ ಮತ್ತೊಮ್ಮೆ ಕೊನೆಯ ಓವರ್’ನಲ್ಲಿ ಗೆಲ್ಲುವ ಅವಕಾಶ ಕೈಚೆಲ್ಲಿತು. 

  • team india
    Video Icon

    CRICKETSep 25, 2018, 12:59 PM IST

    ಇಂದಾದರೂ ಈ ನಾಲ್ವರಿಗೆ ಸಿಗುತ್ತಾ ಚಾನ್ಸ್..?

    ಏಷ್ಯಾಕಪ್’ನಲ್ಲಿ ಸತತ ಗೆಲುವುಗಳ ಮೂಲಕ ಫೈನಲ್ ಪ್ರವೇಶಿಸಿರುವ ಭಾರತ ಇಂದು ಆಫ್ಘಾನಿಸ್ತಾನದ ವಿರುದ್ಧ ಔಪಚಾರಿಕ ಪಂದ್ಯವನ್ನಾಡಲಿದೆ. ಗ್ರೂಪ್ ಹಂತದಲ್ಲಿ ಲಂಕಾ, ಬಾಂಗ್ಲಾ ತಂಡಗಳನ್ನು ಮಣಿಸಿ ಸೂಪರ್ 4 ಹಂತಕ್ಕೇರಿದ್ದ ಆಫ್ಘಾನ್ ತಂಡ ಕೊನೆ ಕ್ಷಣದಲ್ಲಿ ಗೆಲುವಿನ ಅವಕಾಶ ಕೈಚೆಲ್ಲಿ ನಿರಾಸೆ ಅನುಭವಿಸಿದೆ. 

  • india win vs afghan test

    SPORTSJun 16, 2018, 1:34 PM IST

    ಕೊನೆ 3 ದಿನದ ಟಿಕೆಟ್ ಹಣ ವಾಪಸ್: ಕೆಎಸ್‌'ಸಿಎ

    ಭಾರತ-ಆಫ್ಘಾನಿಸ್ತಾನ ಟೆಸ್ಟ್ ಎರಡೇ ದಿನಕ್ಕೆ ಮುಕ್ತಾಯಗೊಂಡಿದ್ದರಿಂದ ಉಳಿದ 3 ದಿನಗಳ ಟಿಕೆಟ್ ಖರೀದಿಸಿದವರಿಗೆ, ಟಿಕೆಟ್ ಮೊತ್ತವನ್ನು ವಾಪಸ್ ನೀಡಲು ಕೆಎಸ್‌ಸಿಎ ನಿರ್ಧರಿಸಿದೆ.

  • Ind Vs Afg New

    SPORTSJun 15, 2018, 5:46 PM IST

    ಇಂಡೋ-ಆಫ್ಘಾನ್ ಟೆಸ್ಟ್: ಎರಡೇ ದಿನಕ್ಕೆ ಆಟ ಮುಗಿಸಿದ ಆಫ್ಘಾನ್..!

    ಟೀಂ ಇಂಡಿಯಾ ಬೌಲರ್’ಗಳ ಮಾರಕ ದಾಳಿಗೆ ತತ್ತರಿಸಿ ಆಫ್ಘಾನಿಸ್ತಾನ ಎರಡನೇ ದಿನವೇ ಸೋಲಿಗೆ ಶರಣಾಗಿದೆ. ಎರಡನೇ ಇನಿಂಗ್ಸ್’ನಲ್ಲಿ ಆಫ್ಘಾನ್ ತಂಡವನ್ನು 103 ರನ್’ಗಳಿಗೆ ಕಟ್ಟಿಹಾಕಿದ ರಹಾನೆ ಪಡೆ ಇನಿಂಗ್ಸ್ ಹಾಗೂ 262 ರನ್’ಗಳ ಭರ್ಜರಿ ಜಯ ದಾಖಲಿಸಿದೆ. ಚೊಚ್ಚಲ ಟೆಸ್ಟ್ ಪಂದ್ಯವಾಡಿದ ಆಫ್ಘಾನಿಸ್ತಾನ ಬಲಿಷ್ಠ ಭಾರತದೆದುರು ಹೀನಾಯ ಸೋಲು ಕಂಡಿದೆ. ಈ ದಾಖಲೆಯ ಜಯದೊಂದಿಗೆ ಏಕೈಕ ಟೆಸ್ಟ್ ಪಂದ್ಯದ ಸರಣಿಯನ್ನು ಭಾರತ ಕೇವಲ ಎರಡೇ ದಿನದಲ್ಲಿ ಕೈವಶ ಮಾಡಿಕೊಂಡಿದೆ.

  • Ind vs Afg Test

    Jun 15, 2018, 2:27 PM IST

    ಇಂಡೋ-ಆಫ್ಘಾನ್ ಟೆಸ್ಟ್: ಪೆವಿಲಿಯನ್ ಪರೇಡ್ ನಡೆಸಿದ ಆಫ್ಘಾನ್ 109 ರನ್’ಗಳಿಗೆ ಆಲೌಟ್

    ಟೀಂ ಇಂಡಿಯಾ ಬೌಲರ್’ಗಳ ಮಾರಕ ದಾಳಿಗೆ ತತ್ತರಿಸಿದ ಆಫ್ಘಾನ್ ಬ್ಯಾಟ್ಸ್’ಮನ್’ಗಳು ಪೆವಿಲಿಯನ್ ಪರೇಡ್ ನಡೆಸಿದ್ದಾರೆ. ಕೇವಲ 109 ರನ್’ಗಳಿಗೆ ಆಲೌಟ್ ಆಗುವ ಮೂಲಕ 365 ರನ್’ಗಳ ಮೊದಲ ಇನಿಂಗ್ಸ್ ಹಿನ್ನಡೆ ಅನುಭವಿಸಿದೆ.
    ಇಲ್ಲಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲ ಇನಿಂಗ್ಸ್’ನಲ್ಲಿ 474 ರನ್ ಕಲೆಹಾಕಿತ್ತು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆರಂಭಿಸಿದ ಆಫ್ಘಾನ್, ಟೀಂ ಇಂಡಿಯಾ ಮಾರಕ ದಾಳಿಗೆ ತತ್ತರಿಸಿ ಹೋಗಿದೆ.

  • Rashid Khan

    Jun 15, 2018, 11:41 AM IST

    ಇಂಡೋ-ಆಫ್ಘಾನ್ ಟೆಸ್ಟ್: ಟೀಂ ಇಂಡಿಯಾ 474 ರನ್’ಗಳಿಗೆ ಆಲೌಟ್

    ಶಿಖರ್ ಧವನ್, ಮುರುಳಿ ವಿಜಯ್ ಆಕರ್ಷಕ ಶತಕ ಹಾಗೂ ಕೆ.ಎಲ್ ರಾಹುಲ್ ಹಾಗೂ ಹಾರ್ದಿಕ್ ಪಾಂಡ್ಯ ಸಮಯೋಚಿತ ಅರ್ಧಶತಕಗಳ ನೆರವಿನಿಂದ ಭಾರತ ಮೊದಲ ಇನಿಂಗ್ಸ್’ನಲ್ಲಿ 474 ರನ್ ಬಾರಿಸಿ ಆಲೌಟ್ ಆಗಿದೆ.

  • afghanistan team

    Jun 14, 2018, 6:08 PM IST

    ಹೊಸ ಇತಿಹಾಸ ನಿರ್ಮಿಸಿದ ಆಫ್ಘಾನ್ ಬೌಲರ್..! ಇವರು ರಶೀದ್ ಖಾನ್..!

    ಆಫ್ಘಾನಿಸ್ತಾನ ತಂಡವು ಭಾರತದ ವಿರುದ್ಧ ಚೊಚ್ಚಲ ಟೆಸ್ಟ್  ಪಂದ್ಯವನ್ನಾಡುವ ಮೂಲಕ ಟೆಸ್ಟ್ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದೆ. ಈ ಮೂಲಕ ಟೆಸ್ಟ್ ಮಾನ್ಯತೆ ಪಡೆದ 12ನೇ ರಾಷ್ಟ್ರ ಬಲಿಷ್ಠ ಭಾರತದೆದುರು ಬೆಂಗಳೂರಿನಲ್ಲಿ ಸೆಣಸುತ್ತಿದೆ.
    ಈ ಪಂದ್ಯ ಹಲವು ದಾಖಲೆಗಳಿಗೂ ಸಾಕ್ಷಿಯಾಗಿದೆ.