Hampi Utsava
(Search results - 17)Karnataka DistrictsNov 14, 2020, 3:01 PM IST
ಮುಂದಿನ ವರ್ಷ ಇತಿಹಾಸ ನೆನಪಿಟ್ಟುಕೊಳ್ಳುವಂತೆ ಹಂಪಿ ಉತ್ಸವ: ಆನಂದ ಸಿಂಗ್
ಕೆ.ಎಂ. ಮಂಜುನಾಥ್
ಹಂಪಿ(ನ.14): ಮುಂದಿನ ವರ್ಷ ಇತಿಹಾಸವೇ ನೆನಪಿಟ್ಟುಕೊಳ್ಳುವಂತೆ ಹಂಪಿ ಉತ್ಸವ ಅತ್ಯಂತ ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಭರವಸೆ ನೀಡಿದ್ದಾರೆ.
Karnataka DistrictsNov 8, 2020, 1:40 PM IST
ಹಂಪಿ ಉತ್ಸವ ಒಂದು ದಿನಕ್ಕೆ ಸೀಮಿತ: ಕಲಾವಿದರ ಆಕ್ರೋಶ
ಹಂಪಿ ಉತ್ಸವವನ್ನು ಒಂದು ದಿನಕ್ಕೆ ಸೀಮಿತಗೊಳಿಸಿರುವ ಸರ್ಕಾರದ ಧೋರಣೆಗೆ ಜಿಲ್ಲೆಯ ಕಲಾವಿದರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
Karnataka DistrictsNov 6, 2020, 2:18 PM IST
ಕೊರೋನಾ ಭೀತಿ: ಹಂಪಿ ಉತ್ಸವ ಒಂದೇ ದಿನಕ್ಕೆ ಸೀಮಿತ..!
ಕೊರೋನಾ ಹಿನ್ನೆಲೆಯಲ್ಲಿ ಈ ಬಾರಿ ಹಂಪಿ ಉತ್ಸವ ಒಂದೇ ದಿನಕ್ಕೆ ಸೀಮಿತಗೊಳಿಸಲಾಗಿದ್ದು, ನವೆಂಬರ್ 13ರಂದು ಉತ್ಸವ ನಡೆಸಲು ಜಿಲ್ಲಾಡಳಿತ ನಿರ್ಧರಿಸಿದೆ. ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರು ಉತ್ಸವದ ದಿನಾಂಕವನ್ನು ಗುರುವಾರ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
Karnataka DistrictsJan 12, 2020, 8:51 AM IST
ಮುಂದಿನ ವರ್ಷ ಅದ್ಧೂರಿಯಾಗಿ ಹಂಪಿ ಉತ್ಸವ: ಸಚಿವ ಸಿ.ಟಿ. ರವಿ
ಹಂಪಿ ಸ್ಮಾರಕಗಳ ನಡುವೆ ಅದ್ಧೂರಿಯಾಗಿ ನಡೆದ ಎರಡು ದಿನಗಳ ಹಂಪಿ ಉತ್ಸವಕ್ಕೆ ಶನಿವಾರ ಸಂಜೆ ಸಂಭ್ರಮದ ತೆರೆ ಬಿತ್ತು. ಹಂಪಿಯ ಬೀದಿ ಬೀದಿಯಲ್ಲಿ ಸಾಗಿ ಬಂದ ಜನಸ್ತೋಮ ಮುಖ್ಯ ವೇದಿಕೆಯಲ್ಲಿ ಜರುಗಿದ ಸಮಾರೋಪಕ್ಕೆ ಸಾಕ್ಷಿಯಾದರಲ್ಲದೆ, ತಡರಾತ್ರಿವರೆಗೆ ನಡೆದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಣ್ತುಂಬಿಕೊಂಡರು.
Karnataka DistrictsJan 12, 2020, 8:36 AM IST
10 ರು.ಗೆ ರುಚಿ ರುಚಿಯಾದ ರೈಸ್ ಬಾತ್: ತಿನ್ನಲು ಮುಗಿಬದ್ದ ಜನ!
ಹಂಪಿ ಉತ್ಸವದ ಅಂಗವಾಗಿ ಸ್ಥಳೀಯ ಗ್ರಾಮ ಪಂಚಾಯಿತಿಯ ಮುಂದಿನ ಪಾರ್ಕಿಂಗ್ ಪ್ರದೇಶದಲ್ಲಿ ಹಮ್ಮಿಕೊಂಡಿದ್ದ ಆಹಾರ ಮೇಳದಲ್ಲಿ ಎರಡನೇ ದಿನ ಹತ್ತಾರು ಬಗೆಯ ಭಕ್ಷ್ಯ, ಭೋಜನಗಳ ಮಳಿಗೆಗಳು ನೋಡುಗರ ಬಾಯಲ್ಲಿ ನೀರೂರಿಸುತ್ತಿತ್ತು. ಜೊತೆಗೆ ಜಂಕ್ ಫುಡ್ಗಳ ಸುಮಾರು 60ಕ್ಕೂ ಹೆಚ್ಚು ಮಳಿಗೆಗಳಲ್ಲಿ ತಮಗೆ ಬೇಕಾದ ಆಹಾರವನ್ನು ಸವಿದು ಜನರು ಖುಷಿ ಪಟ್ಟರು.
Karnataka DistrictsJan 11, 2020, 12:09 PM IST
'ಜಾನಪದ ಕಲಾವಿದರಿಗೆ ಬಳ್ಳಾರಿ ಜಿಲ್ಲಾಡಳಿತ ಅವಮಾನ ಮಾಡಿದೆ'
ಜಿಲ್ಲೆಯಲ್ಲಿ ನಡೆಯುತ್ತಿರುವ ಹಂಪಿ ಉತ್ಸವಕ್ಕೆ ಜಾನಪದ ಅಕಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಅವರನ್ನ ಆಹ್ವಾನಿಸದೆ ಜಿಲ್ಲಾಡಳಿತ ಕಡೆಗಣಿಸಿದೆ ಎಂಬ ಆರೋಪ ಕೇಳಿ ಬಂದಿದೆ.
Karnataka DistrictsJan 11, 2020, 8:02 AM IST
ವಿಜಯನಗರ ಜಿಲ್ಲೆಗೆ ಶಾಸಕ ಸಿಂಗ್ ಆಗ್ರಹ: ಸಿಎಂ ಮೌನ, ಹುಸಿಯಾದ ನಿರೀಕ್ಷೆ
ಸಚಿವ ಸಂಪುಟ ವಿಸ್ತರಣೆಯಾಗಬೇಕು. ಹಾಗಂತ ನನಗೆ ಸಚಿವ ಸ್ಥಾನಮಾನ ಮುಖ್ಯವಲ್ಲ. ವಿಜಯನಗರ ಜಿಲ್ಲೆ ಘೋಷಣೆಯಾಗಬೇಕು ಎಂಬುದು ನನ್ನ ಹಕ್ಕೊತ್ತಾಯವಾಗಿದೆ ಎಂದು ವಿಜಯನಗರ ಶಾಸಕ ಆನಂದಸಿಂಗ್ ಹೇಳಿದರು.
Karnataka DistrictsJan 11, 2020, 7:43 AM IST
ಹಂಪಿ ಉತ್ಸವಕ್ಕೆ ವಿದ್ಯುಕ್ತ ಚಾಲನೆ: ಹರಿದು ಬಂದ ಜನಸಾಗರ
ಹಂಪಿ ಉತ್ಸವಕ್ಕೆ ಈ ಬಾರಿ ಜನರ ಕೊರತೆಯಾಗಬಹುದು ಎಂಬ ನಿರೀಕ್ಷೆ ಹುಸಿಯಾಯಿತು. ಬೆಳಗ್ಗೆ ಹಂಪಿ ಪರಿಸರ ಬಣಬಣ ಎನ್ನುತ್ತಿತ್ತು. ಸಂಜೆ ಹೇಗೋ ಎಂಬ ಗುಮಾನಿ ಮರೆಯಾಯಿತು. ಸಂಜೆಯಾಗುತ್ತಿದ್ದಂತೆಯೇ ನಿಲ್ಲಲೂ ಜಾಗವಿಲ್ಲದೆ ಭರ್ತಿಯಾಯಿತು!
Karnataka DistrictsJan 9, 2020, 12:10 PM IST
5 ಉತ್ಸವಗಳು ರಾಜ್ಯಮಟ್ಟದ ಉತ್ಸವಗಳಾಗಿ ಆಚರಣೆ: ಸಚಿವ ಸಿ.ಟಿ.ರವಿ
ಸ್ಮಾರಕಗಳ ನಿರ್ವಹಣೆಗೆ ಸಾರ್ವಜನಿಕ-ಖಾಸಗಿ ಸಹಭಾಗಿತ್ವಕ್ಕೆ ನೀಡಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಗ್ಲೋಬಲ್ ಇನ್ವೆಸ್ಟರ್ ಮೀಟ್ ಮಾಡುತ್ತಿದ್ದೇವೆ. ಸ್ಮಾರಕಗಳ ನಿರ್ವಹಣೆಗೆ ದತ್ತು ಸ್ವೀಕಾರ ಯೋಜನೆಯೂ ಸಹ ರೂಪಿಸಲಾಗುತ್ತಿದ್ದು, 15 ರಿಂದ 20 ದಿನಗಳಲ್ಲಿ ಜಾರಿಗೆ ತರಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಚಿವ ಸಿ.ಟಿ.ರವಿ ಹೇಳಿದ್ದಾರೆ.
Karnataka DistrictsJan 9, 2020, 9:47 AM IST
ಹೆಲಿಕಾಪ್ಟರ್ನಿಂದ ಹಂಪಿ ಸೌಂದರ್ಯ ಸವಿಯಲು ಸುವರ್ಣಾವಕಾಶ
ಹಂಪಿ ಉತ್ಸವದ ಅಂಗವಾಗಿ ಬಳ್ಳಾರಿ ಜಿಲ್ಲಾಡಳಿತ ಈ ಬಾರಿಯೂ ಹಂಪಿ ಬೈ ಸ್ಕೈಗೆ ವ್ಯವಸ್ಥೆ ಮಾಡಿದೆ. ಕಮಲಾಪುರದ ಮಯೂರ ಭುವನೇಶ್ವರಿ ಹೋಟೆಲ್ ಆವರಣದಲ್ಲಿ ನಿರ್ಮಿಸಲಾಗಿರುವ ತಾತ್ಕಾಲಿಕ ಹೆಲಿಪ್ಯಾಡ್ನಲ್ಲಿ ಶಾಸಕ ಆನಂದಸಿಂಗ್ ಅವರು ಬುಧವಾರ ಪೂಜೆ ಸಲ್ಲಿಸುವುದರ ಮೂಲಕ ಹಂಪಿ ಬೈ ಸ್ಕೈಗೆ ಚಾಲನೆ ನೀಡಿದರು.
Karnataka DistrictsJan 3, 2020, 10:40 AM IST
‘ಮೈಸೂರು ದಸರಾ ರೀತಿಯಲ್ಲೇ ಹಂಪಿ ಉತ್ಸವ ಆಚರಿಸಿ’
ಮೈಸೂರು ದಸರಾ ಉತ್ಸವದಂತೆ ಹಂಪಿ ಉತ್ಸವಕ್ಕೆ ಒಂದು ದಿನ ನಿಗದಿಪಡಿಸಿ, ಹಂಪಿ ಉತ್ಸವವನ್ನು ನಡೆಸಿದರೆ ಉತ್ತಮ. ಸರ್ಕಾರಗಳು ಅವರ ಇಚ್ಚೆಯಂತೆ ಹಂಪಿ ಉತ್ಸವ ದಿನಾಂಕವನ್ನು ಬದಲಾಯಿಸುವುದು ಸರಿಯಲ್ಲ. ಒಂದು ನಿಖರವಾದ ದಿನದಿಂದ ಹಂಪಿ ಉತ್ಸವ ನಡೆಸಲು ಮುಂದಾಗಬೇಕು ಎಂದು ಹಂಪಿ ಹೇಮಕೂಟ ಗಾಯತ್ರಿ ಪೀಠದ ಪೀಠಾಧಿಪತಿ ಶ್ರೀದಯಾನಂದ ಪುರಿ ಮಹಾಸ್ವಾಮೀಜಿಗಳು ಬೇಸರ ವ್ಯಕ್ತಪಡಿಸಿದರು.
Karnataka DistrictsJan 1, 2020, 12:12 PM IST
ಹೊಸಪೇಟೆ: ವಿಶ್ವವಿಖ್ಯಾತ ಹಂಪಿ ಉತ್ಸವ ಲಾಂಛನ ಬಿಡುಗಡೆ
ಇದೇ ಜನವರಿ 10 ಮತ್ತು 11 ರಂದು ನಡೆಯುವ ಹಂಪಿ ಉತ್ಸವದಲ್ಲಿ ಶೇ. 75 ರಷ್ಟು ಸ್ಥಳೀಯ ಕಲಾವಿದರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ತಿಳಿಸಿದ್ದಾರೆ.
Karnataka DistrictsDec 29, 2019, 9:29 AM IST
ಹೊಸಪೇಟೆ: ವಿಶ್ವವಿಖ್ಯಾತ ಹಂಪಿ ಉತ್ಸವಕ್ಕೆ ಭರ್ಜರಿ ಸಿದ್ಧತೆ
ಜ. 10 ಮತ್ತು 11 ರಂದು ಎರಡು ದಿನ ನಡೆಯುವ ಹಂಪಿ ಉತ್ಸವಕ್ಕೆ ಸಿದ್ಧತೆ ಪ್ರಾರಂಭಗೊಂಡಿದ್ದು, ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಜಿಲ್ಲಾಡಳಿತ ಸನ್ನದ್ಧವಾಗಿದೆ. ಹಂಪಿಯಲ್ಲಿ ಸಾಕಷ್ಟು ಪ್ರದೇಶಗಳಲ್ಲಿ ಸ್ವಚ್ಛತೆ ಮರೀಚಿಕೆಯಾಗಿತ್ತು. ಅಲ್ಲದೇ ಮೂಲ ಸೌಲಭ್ಯ ಇಲ್ಲದೆ ಪ್ರವಾಸಿಗರು ನಿತ್ಯವೂ ಪರದಾಡುವಂತಹ ಸ್ಥಿತಿ ಹಂಪಿಯಲ್ಲಿ ನಿರ್ಮಾಣವಾಗಿತ್ತು. ಹಂಪಿ ಉತ್ಸವದ ನೆಪದಲ್ಲಿಯಾದರೂ ಜಿಲ್ಲಾಡಳಿತ ಸ್ವಚ್ಛತಾ ಕಾರ್ಯ ಸೇರಿದಂತೆ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಂಡಿದ್ದಾರೆ.
Karnataka DistrictsDec 18, 2019, 10:48 AM IST
ಕೊರೆವ ಚಳಿಯಲ್ಲೇ ಹಂಪಿ ಉತ್ಸವಕ್ಕೆ ಮುಹೂರ್ತ: ಪ್ರೇಕ್ಷಕರು ಬರೋದೆ ಡೌಟ್?
ಹಂಪಿ ಉತ್ಸವ ಜನವರಿ 10 ಮತ್ತು 11 ರಂದು ನಡೆಯಲಿದ್ದು, ಇದಕ್ಕೆ ಜಿಲ್ಲಾಡಳಿತ ಸಜ್ಜಾಗುತ್ತಿದೆ. ಉತ್ಸಮಕ್ಕೆ ಸರ್ಕಾರ ಕೋಟ್ಯಂತರ ಹಣ ವ್ಯಯಿಸುತ್ತಿದೆ. ಆದರೆ, ಕೊರೆವ ಚಳಿಯಲ್ಲಿ ನಡೆಯುವ ಉತ್ಸವಕ್ಕೆ ಪ್ರೇಕ್ಷಕರು ನಿರೀಕ್ಷೆಯಷ್ಟು ಆಗಮಿಸುತ್ತಾರಾ ಎಂಬ ಪ್ರಶ್ನೆಯೂ ಉದ್ಭವಿಸಿದೆ.
Karnataka DistrictsDec 18, 2019, 10:29 AM IST
ಬಳ್ಳಾರಿ: ವಿಶ್ವವಿಖ್ಯಾತ ಹಂಪಿ ಉತ್ಸವದ ಭಿತ್ತಿಚಿತ್ರಗಳ ಬಿಡುಗಡೆ
ಮುಂಬರುವ ಜನವರಿ 10 ಮತ್ತು 11 ರಂದು ನಡೆಯಲಿರುವ ಹಂಪಿ ಉತ್ಸವ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ರೀತಿಯಲ್ಲಿ ಆಯೋಜಿಸಬೇಕು ಎಂದು ಉಪಮುಖ್ಯಮಂತ್ರಿ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.