H D Kumaraswamy

(Search results - 167)

BSY

Politics7, Aug 2020, 12:18 PM

'ಒಂದ್ಕಡೆ ಕೊರೋನಾ ಮತ್ತೊಂದ್ಕಡೆ ಭಾರೀ ಮಳೆ, ಬಿಎಸ್‌ವೈ ಸರ್ಕಾರಕ್ಕೆ ಅಗ್ನಿಪರೀಕ್ಷೆ'

ರಾಜ್ಯ ಸರ್ಕಾರಕ್ಕೀಗ ಈಗ ಅಗ್ನಿ ಪರೀಕ್ಷೆ ಎದುರಾಗಿದೆ. ಇದನ್ನು ಎದುರಿಸಲು ಸಮರ್ಥವಾಗಿ ಸರ್ಕಾರ ಸಜ್ಜಾಗಬೇಕಿದೆ. ಮುಂಗಾರು ಮಳೆಗೆ ರಾಜ್ಯದ ಜನರು ನಲುಗಿದ್ದಾರೆ. ಜನತೆ ಮತ್ತು ಜಾನುವಾರುಗಳ ರಕ್ಷಣೆಗೆ ಸರ್ಕಾರ ಸಮರೋಪಾದಿಯಲ್ಲಿ ಸ್ಪಂದಿಸಬೇಕು. ಪರಿಹಾರ ಕಾಮಗಾರಿಗಳನ್ನು ಅನುಷ್ಠಾನ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

HDK BSY

Politics31, Jul 2020, 1:16 PM

ಮಕ್ಕಳ ಶಿಕ್ಷಣಕ್ಕಾಗಿ ತಾಳಿ ಅಡವಿಟ್ಟ ತಾಯಿ: ಬಿಎಸ್‌ವೈ ಸರ್ಕಾರದ ವಿರುದ್ಧ ಹೆಚ್‌ಡಿಕೆ ಗರಂ

ಕೊರೋನಾ ಸೋಂಕು ಜನರ ಜೀವ-ಜೀವನದ ಜೊತೆ ಮಾತ್ರ ಚೆಲ್ಲಾಟ ಮಾಡುತ್ತಿಲ್ಲ. ಇಡೀ ಮನುಕುಲದ ರೀತಿ-ರಿವಾಜುಗಳನ್ನು ಬುಡಮೇಲು ಮಾಡುತ್ತಿದೆ. ಗದಗ ಜಿಲ್ಲೆಯ ನರಗುಂದ ತಾಲೂಕಿನ ತಾಯಿ ಒಬ್ಬರು ಮಕ್ಕಳ ಆನ್ಲೈನ್ ಶಿಕ್ಷಣಕ್ಕಾಗಿ ತಾಳಿ ಮಾರಿಕೊಂಡ ಘಟನೆ ನನ್ನ ಹೃದಯ ಹಿಂಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಹೇಳಿದ್ದಾರೆ.

Bengaluru

Politics27, Jul 2020, 2:11 PM

ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ: ಬಿಎಸ್‌ವೈ ಸರ್ಕಾರದ ವಿರುದ್ಧ ಹೆಚ್‌ಡಿಕೆ ಕಿಡಿ

ಬಿಜೆಪಿ ಸರ್ಕಾರಕ್ಕೆ ಒಂದು ವರ್ಷದ ಸಂದ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿಎಂ ಯಡಿಯೂರಪ್ಪ ನಿಗಮ/ಮಂಡಳಿಗಳ ಅಧ್ಯಕ್ಷರ ಸ್ಥಾನಗಳನ್ನ ಹಂಚಿಕೆ ಮಾಡುತ್ತಿದ್ದಂತೆ ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಸರಣಿ ಟ್ವೀಟ್‌ ಮಾಡುವ ಮೂಲಕ ಸಿಎಂ ಯಡಿಯೂರಪ್ಪ ವಿರುದ್ಧ ಕಿಡಿ ಕಾರಿದ್ದಾರೆ.

yeddyurappa

Karnataka Districts23, Jul 2020, 11:50 AM

'ಹೆಚ್‌ಡಿಕೆ, ಡಿಕೆಶಿ ಆಂತರಿಕವಾಗಿ ಬಿಜೆಪಿ ಸರ್ಕಾರದ ಜೊತೆಗಿದ್ದಾರೆ'

ಕಳೆದ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ನನ್ನನ್ನು ಸೋಲಿಸಲೇಬೇಕು ಎಂಬ ಕುತಂತ್ರದಿಂದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಇಬ್ಬರೂ ಒಂದಾಗಿದ್ದರು. ನಾನು ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದರೂ ಇವರ ಕುತಂತ್ರದಿಂದ ನಾನು ಸೋಲಬೇಕಾಯಿತು ಎಂದು ವಿಧಾನಪರಿಷತ್‌ಗೆ ನಾಮನಿರ್ದೇಶನಗೊಂಡ ಸಿಪಿ ಯೋಗೇಶ್ವರ್ ಅವರು ಹೇಳಿದ್ದಾರೆ.

H D Kumaraswamy

Politics22, Jul 2020, 1:47 PM

ಮೈತ್ರಿ ಸರ್ಕಾರ ಬೀಳಿಸಲು ಕಾಂಗ್ರೆಸ್‌ನವರೇ ಪ್ರಯತ್ನ ಪಟ್ಟಿದ್ದರು: ಮಾಜಿ ಸಿಎಂ ಕುಮಾರಸ್ವಾಮಿ

ನನ್ನ ಸರ್ಕಾರ ಪತನವಾಗಿ ಇಂದಿಗೆ ಒಂದು ವರ್ಷ ಆಗಿದೆ. ಹಲವಾರು ಜನರು ಕಳೆದ ಒಂದು ವರ್ಷದ ಅವಧಿಯಲ್ಲಿ ಬಿಜೆಪಿ ಸರ್ಕಾರದ ಆಡಳಿತ ನಡೆಸಿದ ರೀತಿಯ ಬಗ್ಗೆ ಮಾತನಾಡಿದ್ದಾರೆ. ಹಲವಾರು ವಾಮಮಾರ್ಗಗಳಿಂದ ನನ್ನ ಸರ್ಕಾರ ತೆಗೆಯಲಾಯಿತು. ಮೈತ್ರಿ ಸರ್ಕಾರ ಅಸ್ಥಿತ್ವಕ್ಕೆ ಬಂದಾಗಿನಿಂದಲೂ ಕಾಂಗ್ರೆಸ್‌ನ ಒಂದು ವರ್ಗದ ಜನರೇ ಸರ್ಕಾರ ತೆಗೆಯಲು ಪ್ರಯತ್ನ ಪಟ್ಟಿದ್ದರು. ನಾನು ಸಿಎಂ ಆದ ಕೆಲವೇ ದಿನಗಳಲ್ಲಿ ನನ್ನ ಕಾರ್ಯಕರ್ತರಿಂದ ದೂರ ಆಗುತ್ತಿದ್ದೇನೆ ಎಂಬ ಭಾವನೆ ಮೂಡಿತ್ತು ಎಂದು ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಅವರು ಹೇಳಿದ್ದಾರೆ.

Siddaramaiah H D Kumaraswamy

Politics22, Jul 2020, 12:36 PM

'ಕುಮಾರಸ್ವಾಮಿ ಯಾಕೆ ಮೈತ್ರಿ ಸರ್ಕಾರದ ಬಗ್ಗೆ ರಿಕಾಲ್ ಮಾಡಿಕೊಳ್ತಿದ್ದಾರೋ ಗೊತ್ತಿಲ್ಲ'

ಕಾಂಗ್ರೆಸ್‌- ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಬೀಳುವುದಕ್ಕೆ ಸಿದ್ದೌಷಧ ಕಾರಣ ಎಂಬ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆ ಬಗ್ಗೆ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಅದೆಲ್ಲ ಮುಗಿದು ಹೋದ ಕಥೆಯಾಗಿದೆ. ಯಾಕೆ ಈಗ ಅವರು ರಿಕಾಲ್ ಮಾಡಿಕೊಳ್ತಿದ್ದಾರೋ ಗೊತ್ತಿಲ್ಲ. ಸಮ್ಮಿಶ್ರ ಸರ್ಕಾರ ಹೋಯ್ತು, ಈಗ ಬಿಜೆಪಿ ಸರ್ಕಾರ ಇದೆ. ಇವರ ಬಗ್ಗೆ ಮಾತಾಡೋದು ಬಿಟ್ಟು ಕುಮಾರಸ್ವಾಮಿ ಬಗ್ಗೆ ನಾನ್ಯಾಕೆ ಮಾತಾಡಲಿ? ಎಂದು ಪ್ರಶ್ನಿಸಿದ್ದಾರೆ.

• Karnataka Districts3, Jun 2020, 2:35 PM

ಕೊರೋನಾ ವಿರುದ್ಧ ಹೋರಾಟ: ಜೆಡಿಎಸ್ ಪಕ್ಷದ ಬಿಬಿಎಂಪಿ ಸದಸ್ಯರ ಜೊತೆ HDK ವಿಡಿಯೋ ಸಂವಾದ

ಬೆಂಗಳೂರು(ಜೂ.03): ಕೊರೋನಾ ವೈರಸ್‌ ಹಾವಳಿಯಿಂದ ವಿಶ್ವಾದ್ಯಂತ ಜನರ ತತ್ತರಿಸಿ ಹೋಗಿದ್ದಾರೆ. ಹೀಗಾಗಿ ಜನರ ರಕ್ಷಣೆಗೆ ಸರ್ಕಾರಗ ಇನ್ನಿಲ್ಲದ ಕಸರತ್ತನ್ನು ಮಾಡುತ್ತಿವೆ. ಅದರೂ ಕೂಡ ಕೊರೋನಾ ನಿಯಂತ್ರಣಕ್ಕೆ ಬರುತ್ತಿಲ್ಲ. ಕೋವಿಡ್‌ ರಕ್ಷಣೆಗೆ ಸರ್ಕಾರದ ಜೊತೆಗೆ ಪ್ರತಿಪಕ್ಷಗಳೂ ಕೂಡ ಕೈಜೋಡಿಸಬೇಕು.ಈ ನಿಟ್ಟಿನಲ್ಲಿ ಪ್ರತಿಪಕ್ಷ ಜೆಡಿಎಸ್‌ ಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಸಾಥ್‌ ನೀಡಿದ್ದಾರೆ.

• dks hdk

Karnataka Districts21, May 2020, 12:39 PM

'ಡಿ.ಕೆ.​ಶಿ​ವ​ಕು​ಮಾರ್‌ ಸಿಎಂ ಮಾಡಲು ಎಚ್‌ಡಿಕೆ ಕೈಜೋ​ಡಿಸಲಿ'

ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ಅವ​ರನ್ನು ಮುಖ್ಯ​ಮಂತ್ರಿ​ಗ​ಳ​ನ್ನಾಗಿ ಮಾಡಲು ಮಾಜಿ ಸಿಎಂ ಕುಮಾ​ರ​ಸ್ವಾಮಿ ಕೈಜೋ​ಡಿಸಿ ಋುಣ ತೀರಿ​ಸ​ಬೇಕು ಎಂದು ಮಾಜಿ ಶಾಸಕ ಎಚ್‌.ಸಿ.​ಬಾ​ಲ​ಕೃಷ್ಣ ತಿಳಿ​ಸಿದ್ದಾರೆ.

• HDK 2

Karnataka Districts24, Apr 2020, 9:38 AM

ಪಾದರಾಯನಪುರದ ಕೈದಿಗಳನ್ನ ಶಿಫ್ಟ್‌ ಮಾಡದಿದ್ರೆ ಉಗ್ರ ಪ್ರತಿಭಟನೆ: ಕುಮಾರಸ್ವಾಮಿ

ರಾಮನಗರದ ಕಾರಾಗೃಹಕ್ಕೆ ಕಳುಹಿಸಲಾಗಿದ್ದ ಪಾದರಾಯನಪುರದ ಗಲಭೆಕೋರರನ್ನು ಸಕಲ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ತಕ್ಷಣ ಸ್ಥಳಾಂತರಿಸದಿದ್ದರೆ ಇಂದು(ಶುಕ್ರವಾರ) ಉಗ್ರ ಪತ್ರಿಭಟನೆ ಮಾಡುವುದಾಗಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಎಚ್ಚರಿಸಿದ್ದಾರೆ.

• HDK 2

Coronavirus Karnataka2, Apr 2020, 12:20 PM

ಲಾಕ್‌ಡೌನ್‌: ನೊಂದ ಕುಟುಂಬಗಳ ಹಸಿವು ನೀಗಿಸುವ ಕಾರ್ಯಕ್ಕೆ ಮುಂದಾದ HDK

ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ತಾಲೂಕಿನ ಸಾವಿರಾರು ವಲಸೆ ಕೂಲಿ ಕಾರ್ಮಿಕರ ನೆರವಿಗೆ ಕ್ಷೇತ್ರದ ಶಾಸಕರೂ ಆಗಿರುವ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಸಹಾಯ ಹಸ್ತ ಚಾಚಿದ್ದು, ಎಚ್‌ಡಿಕೆ ಜನತಾ ದಾಸೋಹದ ಮೂಲಕ ನೊಂದ ಕುಟುಂಬಗಳ ಹಸಿವು ನೀಗಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.

• Karnataka Districts8, Mar 2020, 8:39 PM

ಸಚಿವ ಬಿ ಸಿ ಪಾಟೀಲ್ ವಿರುದ್ಧ ಕುಮಾರಸ್ವಾಮಿ ಕೆಂಡಾಮಂಡಲ

ಬಿಜೆಪಿ ಸರ್ಕಾರ ಶಾದಿ ಭಾಗ್ಯ ಒಂದೇ ಅಲ್ಲ ರಾಜ್ಯದ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನ ಸ್ಥಗಿತ ಮಾಡಿದೆ.‌ಬೆಳಗಾವಿಯಲ್ಲಿ ಬಿಜೆಪಿ ಶಾಸಕರೇ ನನ್ನ ಕ್ಷೇತ್ರಕ್ಕೆ ಅನುದಾನ ಬಂದಿಲ್ಲ ಅಂತ ಗಲಾಟೆ ಮಾಡಿದ್ದಾರೆ. ಅದು ಸಹ ಮಂತ್ರಿಯನ್ನು ಕೂರಿಸಿಕೊಂಡು ಅನುದಾನ ಕೊಡಿ ಅಂತ ಕೇಳಿದ್ದಾರೆ. ಸಿಎಂ ನೆರೆ ಹಾವಳಿಯ ಜನರಿಗೆ ಹಣ ಬಿಡುಗಡೆ ಮಾಡಿ ಅಂತ ಹೇಳಿದ್ದಾರೆ. ಆದರೂ ಅಧಿಕಾರಿಗಳು ಬಿಡುಗಡೆ ಮಾಡಿಲ್ಲ ಅಂತ ಬಿಜೆಪಿ ಶಾಸಕರೇ ಆರೋಪಿಸಿದ್ದಾರೆ. ಇದು ಸದ್ಯದ ಬಿಜೆಪಿ ಸರ್ಕಾರದ ಸ್ಥಿತಿ ಎಂದು ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಹೇಳಿದ್ದಾರೆ.

• kumaraswamy h vishwanath

Karnataka Districts8, Mar 2020, 8:17 PM

'ಕುಮಾರಸ್ವಾಮಿ ಮಂಡ್ಯ ಲೋಕಸಭೆ ಚುನಾವಣೆ ಹೇಗೆ ಮಾಡಿದ್ದಾರೆ ಅಂತ ಎಲ್ಲರಿಗೂ ಗೊತ್ತು'

ರಾಜ್ಯ ಬಜೆಟ್ ಜನಪ್ರಿಯವಾಗಿದೆ, ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಉತ್ತಮ ಬಜೆಟ್ ನೀಡಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಟೀಕೆ ಮಾಡೋದ್ರಲ್ಲಿ ಯಾವುದೇ ಅರ್ಥವಿಲ್ಲ. ನಾನು‌ ಚುನಾವಣೆ ಹೇಗೆ ಮಾಡಿದ್ದೀನಿ ನೋಡಿದಿನಿ ಅಂತ ಹೇಳುತ್ತಾರೆ. ಮಂಡ್ಯದಲ್ಲಿ ಲೋಕಸಭೆ ಚುನಾವಣೆ ಹೇಗೆ ಮಾಡಿದ್ದಾರೆ ಎಲ್ಲರಿಗೂ ಗೊತ್ತಿದೆ ಎಂದು ಮಾಜಿ ಸಚಿವ ಹೆಚ್. ವಿಶ್ವನಾಥ್ ಹೇಳಿದ್ದಾರೆ.

• JDS
Video Icon

Politics1, Mar 2020, 7:34 PM

ಅದೊಂದು ಮಾತುಕತೆ, ತಂಡದೊಂದಿಗೆ ಬಿಜೆಪಿಗೆ ಜೆಡಿಎಸ್ ಮಾಸ್ ಲೀಡರ್?

ಸಿಎಂ ಬಿ.ಎಸ್.ಯಡಿಯೂರಪ್ಪ ಜನ್ಮದಿನ ಮುಕ್ತಾಯವಾಗಿದ್ದರೆ ಇತ್ತ ಜೆಡಿಎಸ್ ಗೆ ಶಾಕಿಂಗ್ ಸುದ್ದಿಯೊಂದು ಎದುರಾಗಿದೆ. ಹಳೆ ಮೈಸೂರು ಭಾಗದಲ್ಲಿ ದೊಡ್ಡದೊಂದು ಹೊಡೆತ ಬೀಳುವ ಸಾಧ್ಯತೆ ಎದುರಾಗಿದೆ.

• Yatnal

Karnataka Districts26, Feb 2020, 8:48 AM

'ಯತ್ನಾಳ್‌ ಆಗಸಕ್ಕೆ ಉಗಿದು ತಮ್ಮ ಮುಖಕ್ಕೆ ತಾವೇ ಸಿಡಿಸಿಕೊಂಡಿದ್ದಾರೆ'

ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ಕುರಿತು ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ನೀಡಿರುವ ಹೇಳಿಕೆಯನ್ನು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತೀವ್ರವಾಗಿ ಖಂಡಿಸಿದ್ದಾರೆ.

• Nalin Kumar Kateel

Karnataka Districts26, Feb 2020, 7:40 AM

ಸಿದ್ದು, ಎಚ್‌ಡಿಕೆ ಹಾಕಿಸಿದ ಕಣ್ಣೀರನ್ನು BSY ಒರೆಸ್ತಿದ್ದಾರೆ: ಕಟೀಲ್‌

ಹಿಂದಿನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಎಚ್‌.ಡಿ.ಕುಮಾರಸ್ವಾಮಿ ಆಡಳಿತಾವಧಿಯಲ್ಲಿ ಜನರು ಸುರಿಸಿದ ಕಣ್ಣೀರನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಒರೆಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ತಿಳಿಸಿದ್ದಾರೆ.