Gangavati

(Search results - 184)

Anjanadri Hill

Karnataka DistrictsAug 2, 2021, 1:04 PM IST

ಗಂಗಾವತಿ: ಅಂಜನಾದ್ರಿ ಸುತ್ತ ನಿಷೇಧಾಜ್ಞೆ ಬಿಸಿ..!

ಮೂರನೇ ಅಲೆ ರಾಜ್ಯಾದ್ಯಂತ ಹೆಚ್ಚಾಗುತ್ತಿರುವ ಹಿನ್ನೆಲೆ ಕೋವಿಡ್‌ ಕಟ್ಟಿ ಹಾಕಲು ಜಿಲ್ಲೆಯಲ್ಲಿನ ಪ್ರಮುಖ ದೇವಸ್ಥಾನಗಳು ಹಾಗೂ ಪ್ರವಾಸಿ ತಾಣಗಳಲ್ಲಿ ಪ್ರವೇಶ ನಿಷೇಧ ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸುತ್ತಿದೆ. ಈಗಾಗಲೇ ಹುಲಿಗೆಮ್ಮ ದೇವಸ್ಥಾನಕ್ಕೆ ಬೀಗ ಜಡಿದ ಬೆನ್ನಲ್ಲೇ ವಿಶ್ವಪ್ರಸಿದ್ಧ ಅಂಜನಾದ್ರಿ ಬೆಟ್ಟದ ಶ್ರೀ ಆಂಜನೇಯ ದೇವಸ್ಥಾನ ಸುತ್ತಲೂ ನಿಷೇಧಾಜ್ಞೆ ಜಾರಿ ಮಾಡಿ, ಉಪವಿಭಾಗಾಧಿಕಾರಿ ನಾರಾಯಣರಡ್ಡಿ ಅವರು ಆದೇಶ ಹೊರಡಿಸಿದ್ದಾರೆ.

Anegondi

Karnataka DistrictsAug 2, 2021, 9:15 AM IST

ಆನೆಗೊಂದಿಯಲ್ಲಿ ರಾಯರಮಠ, ಉತ್ತರಾದಿ ಮಠದ ಅರ್ಚಕರ ಜಗಳ

ತಾಲೂಕಿನ ಆನೆಗೊಂದಿಯಲ್ಲಿರುವ ನವ ವೃಂದಾವನಗಡ್ಡೆಯಲ್ಲಿ ಜಯತೀರ್ಥರ ಉತ್ತರಾರಾಧನೆ ಸಂದರ್ಭದಲ್ಲಿ ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿಗಳ ಮಠ ಮತ್ತು ಉತ್ತರಾದಿ ಮಠದ ಅರ್ಚಕರ ಮಧ್ಯೆ ವಾಗ್ವಾದ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

• Koppal

Karnataka DistrictsJul 30, 2021, 8:01 AM IST

ಗಂಗಾವತಿ: ರಾಂಪುರ ಬಳಿ ತುಂಗಭದ್ರಾ ಎಡದಂಡೆ ಕಾಲುವೆ ಸೋರಿಕೆ

ತಾಲೂಕಿನ ರಾಂಪುರ ಗ್ರಾಮದ ಬಳಿ ತುಂಗಭದ್ರಾ ಎಡದಂಡೆ ಕಾಲುವೆ ಬಳಿ ನೀರು ಸೋರಿಕೆಯಾಗುತ್ತಿದ್ದು, ಇದರಿಂದಾಗಿ ರೈತರಲ್ಲಿ ಅತಂಕ ಸೃಷ್ಟಿಯಾಗಿದೆ!

• Murder

CRIMEJul 29, 2021, 8:32 AM IST

ಲವ್‌ ಕೇಸ್‌: ಯುವಕನಿಗೆ ನೇಣು ಹಾಕಿ ಕೊಲೆ..!

ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನಿಗೆ ನೇಣು ಹಾಕಿ ಕೊಲೆ ಮಾಡಿದ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸಂಗಾಪುರ ಗ್ರಾಮದಲ್ಲಿ ಜರುಗಿದೆ.

Vishnuvardhan

Karnataka DistrictsJul 4, 2021, 11:42 AM IST

ಗಂಗಾವತಿ: ವಿವಾಹ ಆಮಂತ್ರಣ ಪತ್ರಿಕೆಯಲ್ಲಿ ವಿಷ್ಣುವರ್ಧನ ಚಿತ್ರಗಳ ಹೆಸರು..!

ಸಾಮಾನ್ಯವಾಗಿ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಮನೆ ದೇವರು, ಮಠಾಧೀಶರು ವಧು-ವರರ ಹಾಗೂ ಕೆಲವೊಮ್ಮೆ ಕುಟುಂಬದವರ ಭಾವಚಿತ್ರ ಮುದ್ರಿಸುವುದನ್ನು ನೋಡಿದ್ದೇವೆ. ಆದರೆ ಇಲ್ಲೊಂದು ಕುಟುಂಬ, ಕನ್ನಡ ಚಿತ್ರರಂಗದ ಮೇರುನಟ ಸಾಹಸಸಿಂಹ ದಿ. ಡಾ.ವಿಷ್ಣುವರ್ಧನ ಅವರ ಭಾವಚಿತ್ರ ಮುದ್ರಿಸಿ, ಅವರು ಅಭಿನಯಿಸಿದ ಚಿತ್ರಗಳ ಹೆಸರುಗಳ ಮೂಲಕವೇ ಮದುವೆಗೆ ಬನ್ನಿ ಎಂದು ಆಹ್ವಾನ ನೀಡಿರುವದು ವಿಶೇಷವಾಗಿದೆ.

ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧ: ಸಿ.ಪಿ.ಯೋಗೇಶ್ವರ

Karnataka DistrictsJul 1, 2021, 8:49 AM IST

ಅಂಜನಾದ್ರಿಯೇ ಹುನುಮ ಜನ್ಮಸ್ಥಳ ಎಂದು ಸರ್ಕಾರವೇ ಘೋಷಿಸುತ್ತೆ: ಸಚಿವ ಯೋಗೇಶ್ವರ

ಹೊಸಪೇಟೆ(ಜು.01): ಧಾರ್ಮಿಕ ಹಿನ್ನೆಲೆ ಹೊಂದಿರುವ ಗಂಗಾವತಿಯ ಅಂಜನಾದ್ರಿಯೇ ಹನುಮನ ಜನುಮಸ್ಥಳ ಎಂದು ರಾಜ್ಯ ಸರ್ಕಾರದ ವತಿಯಿಂದಲೇ ಘೋಷಣೆ ಮಾಡಲಾಗುವುದು. ಜೊತೆಗೆ ಈ ಕ್ಷೇತ್ರದ ಸಂಪೂರ್ಣ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ ತಿಳಿಸಿದ್ದಾರೆ.

Gangavati

Karnataka DistrictsJun 30, 2021, 10:38 AM IST

ಗಂಗಾವತಿ: ಜನರನ್ನು ಹುಬ್ಬೇರಿಸಿದ 3 ವರ್ಷದ ಬಾಲಕನ ಜ್ಞಾಪಕ ಶಕ್ತಿ..!

ಎಷ್ಟೋ ವಿದ್ಯಾರ್ಥಿಗಳು, ಯುವಕರು ಶಾಲಾ ಕಾಲೇಜುಗಳಲ್ಲಿ ಮತ್ತು ಉದ್ಯೋದಗ ಸಂದರ್ಭದಲ್ಲಿ ಸಂದರ್ಶನ ನೀಡುತ್ತಿರುವಾಗ ಕೇಳುವ ಪ್ರಶ್ನೆಗೆ ಉತ್ತರ ನೀಡದೆ ವಿಫಲರಾದವರ ಸಂಖ್ಯೆ ಹೆಚ್ಚು. ಆದರೆ  ಇಲ್ಲಿಯ ಮೂರು ವರ್ಷದ ಬಾಲಕನೋರ್ವ ತನ್ನ ವಾಕ್‌ ಚಾತುರ್ಯ ಮತ್ತು ಜ್ಞಾಪಕ ಶಕ್ತಿಯಿಂದ ಪಟ ಪಟನೇ ಕೇಳುವ ಪ್ರಶ್ನೆಗೆ ಉತ್ತರ ನೀಡಿ ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದ್ದಾನೆ.

Anegondi

Karnataka DistrictsJun 28, 2021, 3:26 PM IST

ಗಂಗಾವತಿ: ನವವೃಂದಾವನ ಗಡ್ಡೆಯಲ್ಲಿ ಶ್ರೀರಘುವರ್ಯತೀರ್ಥರ ಆರಾಧನೆ

ಶ್ರೀಮದ್‌ ಉತ್ತರಾಧಿ ಮಠಾಧೀಶ ಸತ್ಯಾತ್ಮತೀರ್ಥರ ಆದೇಶದಂತೆ ತಾಲೂಕಿನ ಆನೆಗೊಂದಿಯ ನವ ವೃಂದಾವನ ಗಡ್ಡೆಯಲ್ಲಿರುವ ಶ್ರೀ ರಘುವರ್ಯತೀರ್ಥ ಶ್ರೀಪಾದಂಗಳವರ ಮಧ್ಯಾರಾಧನೆ ಜರುಗಿದೆ.

• undefined

Karnataka DistrictsJun 28, 2021, 11:29 AM IST

ಗಂಗಾವತಿ: ಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದಲೇ ಸ್ಪರ್ಧೆ, ಅನ್ಸಾರಿ

ಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧೆ ಮಾಡುವುದಾಗಿ ಮಾಜಿ ಸಚಿವ ಹಾಗೂ ಕಾಂಗ್ರೆಸ್‌ ಮುಖಂಡ ಇಕ್ಬಾಲ್‌ ಅನ್ಸಾರಿ ಹೇಳಿದ್ದಾರೆ. ಅವರು ಜಾಲಾತಾಣದಲ್ಲಿ ಹೇಳಿಕೆ ನೀಡಿದ್ದು, ಆರೋಗ್ಯದ ದೃಷ್ಠಿಯಿಂದ ಅಲ್ಪಮಟ್ಟಿಗೆ ಕಾರ್ಯಕರ್ತರ ಜತೆ ಇದ್ದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ ಎಂದು ತಿಳಿಸಿದ್ದಾರೆ.

• undefined

CRIMEJun 28, 2021, 9:22 AM IST

ಗಂಗಾವತಿ: ವಿವಾಹಿತ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ

ವಿವಾಹಿತ ಮಹಿಳೆ ಮೇಲೆ ಯುವಕನೋರ್ವ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಶ್ರೀರಾಮನಗರದಲ್ಲಿ ನಡೆದಿದೆ.

Anandaiah

Karnataka DistrictsJun 28, 2021, 8:45 AM IST

ಆಂಧ್ರದಲ್ಲಿ ಫೇಮಸ್‌ ಆದ ಆನಂದಯ್ಯ ಕೋವಿಡ್‌ ಔಷಧ ರಾಜ್ಯದಲ್ಲೂ ಉಚಿತ ವಿತರಣೆ..!

ತಾಲೂಕಿನ ಆನೆಗೊಂದಿಯಲ್ಲಿ ಕೊರೋನಾ ಔಷಧ ಎಂದು ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಕೃಷ್ಣಪಟ್ಟಣಂನಲ್ಲಿ ಸಂಚಲನ ಸೃಷ್ಟಿಸಿದ ಆನಂದಯ್ಯ ಅವರ ಆಯುರ್ವೇದ ಔಷಧವನ್ನು ಹಂಪಿಯ ಗೋವಿಂದಾನಂದ ಸರಸ್ವತಿ ಸ್ವಾಮೀಜಿ ಉಚಿತವಾಗಿ ವಿತರಣೆ ಮಾಡಿದ್ದಾರೆ.

Murder

CRIMEJun 25, 2021, 12:57 PM IST

ಗಂಗಾವತಿ: ವರದಕ್ಷಿಣೆ ಕಿರುಕುಳ, ನೇಣು ಬಿಗಿದು ಗರ್ಭಿಣಿ ಕೊಲೆ

ಪ್ರೀತಿಸಿ ಮದುವೆಯಾಗಿದ್ದ ಪತ್ನಿಗೆ ವರದಕ್ಷಿಣೆಗಾಗಿ ಪತಿ, ಮಾವ ಅತ್ತೆ ಕಿರುಕುಳ ನೀಡಿ ನೇಣು ಬಿಗಿದು ಕೊಲೆ ಮಾಡಿದ ಘಟನೆ ತಾಲೂಕಿನ ಸಣ್ಣಾಪುರ ಗ್ರಾಮದಲ್ಲಿ ನಡೆದಿದೆ.

• undefined

Karnataka DistrictsJun 24, 2021, 11:49 AM IST

ಅಂತಾರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆ: ಗಂಗಾವತಿ ಯುವಕನ ಫೋಟೋಗೆ ಚಿನ್ನ

ಗಂಗಾವತಿ(ಜೂ.24): ಭಾರತ, ಗಲ್ಫ್‌ ಸಮೂಹ ಬಹರೈನ್‌, ಯುಎಇ, ಸೌದಿ ಅರೇಬಿಯಾ, ಕುವೈತ್‌ ದೇಶಗಳ ಫೋಟೋಗ್ರಾಫಿಕ್‌ ಸೊಸೈಟಿಯವರು ಆಯೋಜಿಸಿದ್ದ ಪ್ರತಿಷ್ಠಿತ ಗಲ್ಫ್‌ ಅಂತಾರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ ಗಂಗಾವತಿಯ ಶ್ರೀನಿವಾಸ ಎಣ್ಣಿ ಅವರಿಗೆ ಚಿನ್ನದ ಪದಕ ಲಭಿಸಿದೆ.

congress flag

Karnataka DistrictsJun 12, 2021, 12:03 PM IST

'ಕಾಂಗ್ರೆಸ್‌ನಿಂದ ಬ್ರಾಹ್ಮಣರಿಗೆ ಅವಹೇಳನ'

ಕಾರಟಗಿ ಬ್ಲಾಕ್‌ ಕಾಂಗ್ರೆಸ್‌ ಪದಾಧಿಕಾರಿಯೊಬ್ಬರು ಫೇಸ್‌ಬುಕ್‌ನಲ್ಲಿ ಬ್ರಾಹ್ಮಣರಿಗೆ ಅವಹೇಳನ ಮಾಡಿರುವುದನ್ನು ಖಂಡಿಸಿ ಇಲ್ಲಿನ ಬ್ರಾಹ್ಮಣ ಸಮಾಜದವರು ನಗರ ಪೊಲೀಸ್‌ ಠಾಣೆಯಲ್ಲಿ ದೂರು ಸಲ್ಲಿಸಿ ಕ್ರಮಕ್ಕೆ ಒತ್ತಾಯಿಸಿದರು.

ರೈತರ ಹೊಲದಲ್ಲಿ ಬಿತ್ತನೆ ಮಾಡಿದ ಶಾಸಕ ಮುನವಳ್ಳಿ

Karnataka DistrictsJun 10, 2021, 11:42 AM IST

ಗಂಗಾವತಿ: ರೈತರ ಹೊಲದಲ್ಲಿ ಬಿತ್ತನೆ ಮಾಡಿದ ಶಾಸಕ ಮುನವಳ್ಳಿ

ಗಂಗಾವತಿ(ಜೂ.10): ಕೊಪ್ಪಳ ಜಿಲ್ಲೆಯ ಗಂಗಾವತಿ ವಿಧಾನಸಭಾ ಕ್ಷೇತ್ರದ ಕುಕನಪಳ್ಳಿ ಗ್ರಾಮದಲ್ಲಿ ನಿಂಗಪ್ಪ ಅವರ ಹೊಲದಲ್ಲಿ ಶಾಸಕ ಪರಣ್ಣ ಮುನವಳ್ಳಿ ಅವರು ತಾವೇ ಸ್ವತಃ ಉಳುಮೆ ಮಾಡಿ ಬಿತ್ತನೆ ಬೀಜ ಬಿತ್ತಿ ಗಮನ ಸೆಳೆದಿದ್ದಾರೆ.