Gadaga  

(Search results - 28)
 • <p>Gadaga </p>
  Video Icon

  state2, Jun 2020, 7:22 PM

  ಒಂದು ತಿಂಗಳ ಹಸುಗೂಸಿನೊಂದಿಗೆ ಮುಂಬೈನಿಂದ ಆಗಮಿಸಿದ ಬಾಣಂತಿ; ಗದಗದಲ್ಲಿ ಕ್ವಾರಂಟೈನ್

  ಮುಂಬೈ to ಗದಗ ಎಕ್ಸ್‌ಪ್ರೆಸ್‌ನಲ್ಲಿ ಒಂದು ತಿಂಗಳ ಹಸುಗೂಸಿನೊಂದಿಗೆ ಬಾಣಂತಿ ಆಗಮಿಸಿದ್ದಾರೆ. ಮುಂಬೈನಲ್ಲಿ ಹೆರಿಗೆ ಆಗಿದ್ದು ತವರಿಗೆ ಬರಲು ಆಗದೇ ಪರದಾಡಿರುವ ಘಟನೆ ನಡೆದಿದೆ. ದಾವಣಗೆರೆ ಮೂಲದ ಬಾಣಂತಿಯಾಗಿದ್ದು ಕ್ವಾರಂಟೈನ್‌ನಲ್ಲಿಡಲು ನಿರ್ಧಾರ ಮಾಡಲಾಗಿದೆ. ಸ್ವ್ಯಾಬ್ ಟೆಸ್ಟ್, ಕ್ವಾರಂಟೈನ್ ಬಳಿಕ ಊರಿಗೆ ಕಳುಹಿಸಲು ನಿರ್ಧಾರ ಮಾಡಲಾಗಿದೆ. 
   

 • <p>KSRTC</p>
  Video Icon

  Karnataka Districts20, May 2020, 12:56 PM

  ಎಲ್ಲೋ ಬಸ್ ನಿಲ್ಲಸಿದ್ರೆ ಮಕ್ಕಳು, ಮಹಿಳೆಯರು ಏನ್ ಮಾಡ್ಬೇಕು? KSRTC ಅಧಿಕಾರಿಗೆ ಪ್ರಯಾಣಿಕರ ತರಾಟೆ

  ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಏನೋ ಶುರುವಾಗಿದೆ ಆದರೆ ಗೊಂದಲಗಳೇನೂ ಕಮ್ಮಿ ಆಗಲ್ಲ. ಗದಗದಲ್ಲಿ ಪ್ರಯಾಣಿಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಸ್ಸನ್ನು ಎಲ್ಲೊ ದೂರದಲ್ಲಿ ನಿಲ್ಲಿಸಿದರೆ ಮಕ್ಕಳು, ವೃದ್ಧರು ಇದ್ದರೆ ಬಸ್‌ ಹೇಗೆ ಹತ್ತುವುದು? ಎಂಬ ತರಾಟೆಗೆ ತೆಗೆದುಕೊಂಡಿದ್ದಾರೆ. ಬೆಂಗಳೂರಿಗೆ ಪ್ರಯಾಣಿಕರು ಬರುವುದು ಹೇಗೆ? ಎಂಬ ಪ್ರಶ್ನಿಸುತ್ತಿದ್ದಾರೆ. 

 • <p>Gadaga </p>
  Video Icon

  Karnataka Districts18, May 2020, 10:50 AM

  ಸೂಕ್ತ ಬೆಲೆ ಇಲ್ಲ, ಮೆಣಸಿನಕಾಯಿ ಬೆಳೆಯನ್ನು ನಾಶ ಮಾಡಿದ ಗದಗ ರೈತ

   ರೋಗಬಾಧೆ ಹಾಗೂ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದೇ ಕಂಗಾಲಾಗಿರುವ ರೈತ ಮೆಣಸಿನ ಬೆಳೆಯನ್ನು ನಾಶ ಮಾಡಿರುವ ಘಟನೆ ಗದಗ ಜಿಲ್ಲೆಯ ಅಬ್ಬಿಗೇರಿ ಗ್ರಾಮದಲ್ಲಿ ನಡೆದಿದೆ. 
   

 • Donald Trump
  Video Icon

  International16, May 2020, 1:00 PM

  'ಮೋದಿ ನನ್ನ ಬೆಸ್ಟ್ ಫ್ರೆಂಡ್'; ನಮೋ ಕೊಂಡಾಡಿದ ಟ್ರಂಪ್

  ಕೊರೊನಾ ನಿರ್ಮೂಲನೆಗೆ ಭಾರತದ ಜೊತೆ ಸೇರಿ ಔಷಧ ಕಂಡು ಹಿಡಿಯುತ್ತೇವೆ. ಭಾರತದ ಜೊತೆ ನಾವಿದ್ದೇವೆ. ಪ್ರಧಾನಿ ಮೋದಿ ಅವರಿಗೆ ಸಾಥ್ ನೀಡುತ್ತೇವೆ' ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ. 

 • <p>Gadaga </p>
  Video Icon

  Karnataka Districts10, May 2020, 6:14 PM

  ಭಾನುವಾರದ ಬಾಡೂಟಕ್ಕೆ ಮುಗಿ ಬಿದ್ದ ಗದಗ ಜನ

  ಇಂದು ಭಾನುವಾರ. ಬಹುತೇಕರು ವೀಕೆಂಡ್ ಮೂಡ್‌ನಲ್ಲಿದ್ದಾರೆ. ಗದಗದಲ್ಲಿ ಜನ ಚಿಕನ್, ಮಟನ್ ಖರೀದಿಗೆ ಜನ ಮುಗಿಬಿದ್ದಿದ್ದಾರೆ. ಮಾಸ್ಕ್ ಇಲ್ಲ, ಸಾಮಾಜಿಕ ಅಂತರವಿಲ್ಲ. ಕೊರೊನಾ ಭಯವಂತೂ ಮೊದಲೇ ಇಲ್ಲ. ಇದು ಗದಗ ಮಾರ್ಕೆಟ್‌ನ ಚಿತ್ರಣ. 

 • Siddu
  Video Icon

  state28, Jan 2020, 1:30 PM

  ಭರ್ಜರಿ ಬಾಡೂಟ ಮಾಡಿ ದೇಗುಲ ಉದ್ಘಾಟಿಸಿದ ಸಿದ್ದು; ವ್ಯಕ್ತವಾಯ್ತು ಸಾರ್ವಜನಿಕ ಗುದ್ದು!

  ಮಾಂಸ ತಿಂದು ಮತ್ತೆ ವಿವಾದಕ್ಕೆ ಗುರಿಯಾಗಿದ್ದಾರೆ ಸಿದ್ದರಾಮಯ್ಯ.  ನಿನ್ನೆ ಮುಂಡರಗಿಯ ಸಿಂಗಟಾಲೂರಿಗೆ ತೆರಳಿದ್ದರು ಸಿದ್ದರಾಮಯ್ಯ. ಅಲ್ಲಿನ ಸ್ಥಳೀಯ ಮುಖಂಡ ಮಂಜುನಾಥ್ ಅವರ ಮನೆಯಲ್ಲಿ ಭರ್ಜರಿ ಬಾಡೂಟ ಮಾಡಿದ್ದರು. ನಂತರ  ಬೀರಲಿಂಗೇಶ್ವರ ದೇಗುಲವ ಉದ್ಘಾಟನೆ ಮಾಡಿದ್ದಾರೆ. ಈ ನಡೆ ವಿವಾದಕ್ಕೆ ಕಾರಣವಾಗಿದೆ. ಬೀರಲಿಂಗೇಶ್ವರನಿಗೆ ಅಪಚಾರವಾಗಿದೆ ಎಂಬ ಮಾತು ಕೇಳಿ ಬಂದಿದೆ. 

 • sangamesh

  Gadag6, Nov 2019, 3:26 PM

  ಮನೆ ಮನೆಗೆ ಕನ್ನಡ ಕೃತಿ ಹೊತ್ತು ಮಾರುವ ಶಿಕ್ಷಕ ಸಂಗಮೇಶ ತಮ್ಮನಗೌಡ

  ಕನ್ನಡ ಸಾರಸ್ವತ ಲೋಕದಲ್ಲಿ ಕಾದಂಬರಿಕಾರ ‘ಗಳಗನಾಥರು’ ಯಾರಿಗೆ ತಾನೇ ಗೊತ್ತಿಲ್ಲ ? ಹಾವೇರಿ ಜಿಲ್ಲೆಯ ಗಳಗನಾಥರು (ವೆಂಕಟೇಶ ತಿರಕೋ ಕುಲಕರ್ಣಿ) ಸಾಹಿತಿ ಎನ್ನುವುದಕ್ಕಿಂತ, ಸಾಹಿತ್ಯ ಕೃತಿಗಳನ್ನು ತಲೆಯ ಮೇಲೆ ಹೊತ್ತು, ಊರೂರು ಸುತ್ತಿ ಓದುಗರಿಗೆ ತಲುಪಿಸಿದ ‘ಕನ್ನಡ ಕೈಂಕರ್ಯ’ ಅವರ ಹೆಸರನ್ನು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಚಿರಸ್ಥಾಯಿಯಾಗಿಸಿದೆ.

 • Rajkumar holley hallur

  Karnataka Districts11, Aug 2019, 12:02 PM

  'ಹೊಳೆ ಆಲೂರಲ್ಲಿ ಊರೇ ಇಲ್ಲ, ಹೊಳೆ ಮಾತ್ರ'!

  ಕುಸಿದ ಮನೆಗಳು, ಜರಿದ ಗುಡ್ಡಗಳು, ಮುಳುಗಿದ ತೋಟಗಳು, ನೆಲವೆಲ್ಲ ಸಪಾಟಾದಂತೆ ಎಲ್ಲೆಲ್ಲೂ ಬರೀ ಕೆಂಪು ಕೆಂಪು ನೀರು. ಮಳೆಯ ವಿರುದ್ಧ ಈಜಲು ಹೊರಟ ನೆಲದ ತೋಳು ಕುಸಿದಿದೆ. ಇಂಥ ಜಲಪ್ರಳಯದ ಹೊತ್ತಲ್ಲೂ ಮತ್ತೊಬ್ಬರಿಗೆ ನೆರವಾಗುತ್ತಾ, ಮಳೆಯನ್ನೂ ಲೆಕ್ಕಿಸದೇ ಜೀವನ್ಮರಣದ ನಡುವೆ ಹೋರಾಡುತ್ತಾ, ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಜಾನುವಾರುಗಳನ್ನು ರಕ್ಷಿಸುತ್ತಾ, ಮಳೆಯಲ್ಲಿ ನಡುಗುವ ಮಕ್ಕಳ ನೆತ್ತಿಯೊರೆಸುತ್ತಾ ಮಾತೃರೂಪಿ ಕೈಯೊಂದು ಎಲ್ಲವನ್ನೂ ಸಲಹುತ್ತಿದೆ.

 • Gadaga
  Video Icon

  NEWS30, Jun 2019, 12:27 PM

  ಗದಗ ಜಿಲ್ಲಾಸ್ಪತ್ರೆಯಲ್ಲಿ ಕಟ್ಟಿರುವೆ ಕಾಟ; ಕೇಳೋರಿಲ್ಲ ಬಾಣಂತಿಯರ ಗೋಳು

  ಗದಗ ಜಿಲ್ಲೆಯ ಆಸ್ಪತ್ರೆಗಳ ಸ್ಥಿತಿ ದೇವರಿಗೆ ಪ್ರೀತಿ. ಚಿಕಿತ್ಸೆಗೆಂದು ಬಂದ ರೋಗಿಗಳಿಗೆ ನರಕ ತೋರಿಸುತ್ತೆ ಗದಗ ಜಿಲ್ಲಾಸ್ಪತ್ರೆ. ಬಾಣಂತಿ ಮತ್ತು ಹಸುಗೂಸುಗಳ ಮೇಲೆ ಕಟ್ಟಿರುವೆಗಳು ದಾಳಿ ಮಾಡುತ್ತಿವೆ. ಇರುವೆಗಳ ಕಾಟ ತಪ್ಪಿಸುವಂತೆ ಅಧಿಕಾರಿಗಳಿಗೆ ಹೇಳಿದ್ರೂ ಡೋಂಟ್ ಕೇರ್. 

 • Gadaga- Pakistan Jindabad

  NEWS4, Mar 2019, 3:53 PM

  ಪಾಕಿಸ್ತಾನ್ ಜಿಂದಾಬಾದ್ ಎಂದ ಯುವಕ; ಸಾರ್ವಜನಿಕರಿಂದ ಥಳಿತ

  ಸರ್ಜಿಕಲ್ ಸ್ಟ್ರೈಕ್ ನಂತರ ಪಾಕ್ ಪರ ಘೋಷಣೆ ಕೂಗುವ ಪ್ರಕರಣಗಳು ಹೆಚ್ಚಾಗುತ್ತಿದೆ. ಇದೀಗ  ಲಕ್ಷ್ಮೇಶ್ವರ ತಾಲೂಕಿನ ಬಟ್ಟೂರ ಗ್ರಾಮದ ಮುಸ್ಲೀಂ ಯುವಕನೊಬ್ಬ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ದಾನೆ.  

 • Anganavadi

  NEWS22, Feb 2019, 10:13 AM

  ಮಕ್ಕಳ ಮೇಲೇ ಕುಸಿಯಿತು ಅಂಗನವಾಡಿ ಚಾವಣಿ

  ಕಳಪೆ ಕಾಮಗಾರಿಯಿಂದಾಗಿ ಅಂಗನವಾಡಿ ಚಾವಣಿಯ ಕೆಳ ಪದರ (ಪ್ಲಾಸ್ಟರಿಂಗ್‌) ಕುಸಿದು ಐವರು ಪುಟಾಣಿ ಮಕ್ಕಳು ಗಾಯಗೊಂಡಿರುವ ದುರ್ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಬಾಲೆಹೊಸೂರು ಗ್ರಾಮದಲ್ಲಿ ನಡೆದಿದೆ. ಅದರಲ್ಲಿ ಒಬ್ಬ ಪುಟಾಣಿಗೆ ಕಾಲು ಮುರಿದಿದ್ದರೆ, ಮತ್ತೊಬ್ಬಳು ಪುಟಾಣಿಗೆ ತಲೆಗೆ ಗಂಭೀರ ಗಾಯವಾಗಿದೆ.

 • Gadag11, Feb 2019, 3:43 PM

  ’ಹಿಂದುತ್ವವಾದಿ ಬಿಜೆಪಿಯಿಂದಲೇ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಹಿನ್ನಡೆ’

  ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟಕ್ಕೆ ಸಹಕರಿಸದ ಬಿಜೆಪಿ ವಿರುದ್ಧ ತೋಂಟದಾರ್ಯ ಮಠದ ಡಾ.ಸಿದ್ಧರಾಮ ಶ್ರೀಗಳು ಆಕ್ರೋಶ ವ್ಯಕ್ತಪಡಿಸಿದರು. 'ಬಿಜೆಪಿ ಹಿಂದುತ್ವ ರಕ್ಷಕ ಪಕ್ಷ. ಹಿಂದುತ್ವವಾದಿ ಬಿಜೆಪಿಯಿಂದಲೇ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಹಿನ್ನಡೆಯಾಯಿತು ಎಂದು ಡಾ. ಸಿದ್ಧರಾಮ ಶ್ರೀಗಳು ಆಕ್ರೋಶ ವ್ಯಕ್ತಪಡಿಸಿದರು. 

 • NEWS11, Nov 2018, 1:47 PM

  ಈಶ್ವರಪ್ಪ ಒಬ್ಬ ಪೆದ್ದ, ಅವನ ತಲೆಯಲ್ಲಿ ಮೆದುಳಿಲ್ಲ: ಸಿದ್ದರಾಮಯ್ಯ

  ಉಪ ಚುನಾವಣೆಯಲ್ಲಿ ಜನತೆ ಬಿಜೆಪಿಯನ್ನು ತಿರಸ್ಕರಿಸಿದ್ದಾರೆ. ಎಲ್ಲಾ ಕಡೆಗಳಲ್ಲಿಯೂ ಭಾರೀ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಜನಾರ್ದನ ರೆಡ್ಡಿ ಪ್ರಕರಣದ ಬಗ್ಗೆ ಯಡಿಯೂರಪ್ಪನವರೇ ಹೇಳಿದ್ದಾರೆ. ಅವರು ಬಿಜೆಪಿಯಲ್ಲಿ ಇಲ್ಲ ಅಂತ. ಆ ಬಗ್ಗೆ ನಾನೇನು ಹೇಳುವುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. 

 • Gadaga- Karave

  Gadag3, Oct 2018, 12:09 PM

  ಕರವೇ ಅಧ್ಯಕ್ಷರಾದ ಮಾತ್ರಕ್ಕೆ ಟಿಕೆಟ್ ಇಲ್ಲದೆಯೂ ಪ್ರಯಾಣಿಸಬಹುದಾ?

  ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಕುಡಿದ ಅಮಲಿನಲ್ಲಿ ಕರವೇ ಜಿಲ್ಲಾಧ್ಯಕ್ಷನೋರ್ವ ಬಸ್ ನಿರ್ವಾಹಕನ ಮೇಲೆ ಮನಬಂದಂತೆ ಹಲ್ಲೆ ಮಾಡಿ ದರ್ಪ ತೋರಿರುವ ಘಟನೆ ಗದಗ ತಾಲೂಕಿನ ಹೊಂಬಳ ಬಳಿ ನಡೆದಿದೆ.  ಕರವೇ ಸ್ವಾಭಿಮಾನಿ ಬಣದ ಗದಗ ಜಿಲ್ಲಾ ಅಧ್ಯಕ್ಷ ಮುತ್ತಣ್ಣ ಚೌಡಣ್ಣವರ್ ಎಂಬುವರು ಬಸ್ ನಿರ್ವಾಹಕ ಪ್ರಕಾಶ ಎಂಬುವರ ಮೇಲೆ ಹಲ್ಲೆ ಮಾಡಿ ಅವರಲ್ಲಿದ್ದ ಹಣ ದೋಚಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

 • Sirenomelia Baby

  Gadag14, Aug 2018, 1:28 PM

  ವೈದ್ಯಲೋಕಕ್ಕೆ ಸವಾಲು; ಅಪರೂಪದ ಮಗು ಜನನ

  ಗದಗ ಜಿಲ್ಲೆಯ ರೋಣ ತಾಲೂಕಿನ ಬೆಳವಣಿಕಿ ಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿ ಅಪರೂಪದ ಶಿಶುವಿನ ಜನನವಾಗಿದೆ.  ಮಜಿನಾ ಹಾಗೂ ಇಸ್ಮಾಯಿಲ್ ಮುಲ್ಲಾ ಎಂಬುವವರಿಗೆ ಜನಿಸಿದ ಮಗು ಇದಾಗಿದೆ.  ಜನಿಸಿದ ಎರೆಡು ಗಂಟೆಯೊಳಗೆ ಮಗು ಮರಣವನ್ನಪ್ಪಿದೆ.