Flooded Areas  

(Search results - 11)
 • Bihar Brain Fever

  Karnataka Districts8, Sep 2019, 12:04 PM

  ಮಡಿಕೇರಿ: ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವ್ಯಾಪಕ ಜ್ವರ ಬಾಧೆ

  ಭಾರೀ ಮಳೆಯಿಂದ ಕೊಡಗಿನಲ್ಲಿ ಪ್ರವಾಹ ಬಂದ ಪ್ರದೇಶಗಳಲ್ಲಿ ಇದೀಗ ಜನ ಜ್ವರ ಬಾಧೆಯಿಂದ ಬಳಲುತ್ತಿದ್ದಾರೆ. ಕೊಡಗಿನಲ್ಲಿ ಇನ್ನೂ ಮಳೆಯಾಗುತ್ತಿದ್ದು, ರೋಗ ಗುಣಮುಖವಾಗುವುದು ಕಷ್ಟವಾಗಿದೆ. ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆಯೂ ಹೆಚ್ಚಾಗಿ ಸಕಾಲದಲ್ಲಿ ವೈದ್ಯ ಸೇವೆ ದೊರೆಯದೆ ಜನ ತೊಂದರೆ ಪಡುವಂತಾಗಿದೆ.

 • undefined

  Karnataka Districts28, Aug 2019, 2:48 PM

  ದಾರಿ ಕಾದು ಕುಳಿತ ನಿರಾಶ್ರಿತರ ಭೇಟಿಯಾಗದೇ ಹೋದ ಸಿಎಂ..!

  ನೆರೆಪೀಡಿತ ಪ್ರದೇಶಗಳಿಗೆ ಸಿಎಂ ಯಡಿಯೂರಪ್ಪ ಭೇಟಿ ನೀಡಿದರೂ 10 ನಿಮಿಷಗಳಲ್ಲಿಯೇ ಪರಿಶೀಲನೆ ಮುಗಿಸಿದ್ದಾರೆ. ಬಿದರಹಳ್ಳಿ ಕಾಳಜಿ ಕೇಂದ್ರದಲ್ಲಿ ಮಲೆಮನೆ, ದುರ್ಗದಹಳ್ಳಿ, ಮಧುಗುಂಡಿಯ ನಿರಾಶ್ರಿತರ ಜೊತೆಯಲ್ಲಿ ರೈತ ಸಂಘದ ಪ್ರಮುಖರು ತಮ್ಮ ಅಹವಾಲು ಹೇಳಿಕೊಳ್ಳಲು ಬೆಳಗ್ಗೆಯಿಂದ ಕಾದು ಕುಳಿತರೂ ಪ್ರಯೋಜನವಾಗಲಿಲ್ಲ.

 • undefined

  Karnataka Districts28, Aug 2019, 9:00 AM

  ಬೆಳಗಾವಿ: ಪ್ರವಾಹ ಸಂತ್ರ​ಸ್ತ​ರಿಗೆ ಚರ್ಮ​ರೋಗ ಬಾಧೆ..!

  ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆಗಳನ್ನು ಮನಗಂಡು ಆರೋಗ್ಯ ಕೇಂದ್ರಗಳನ್ನು ಆರಂಭಿಸಿದ್ದು, ಬೆಳಗಾವಿಯಲ್ಲಿ ಚರ್ಮ ಅಲರ್ಜಿ ಕಾಣಿಸಿಕೊಂಡಿದೆ. ಆರೋಗ್ಯ ತಪಾಸಣೆ ಸಂದರ್ಭ ಸ್ಕಿನ್ ಅಲರ್ಜಿ ಪ್ರಕರಣಗಳು ಪತ್ತೆಯಾಗಿವೆ. ಇದು ಗಂಭೀರ ಸ್ವರೂಪ ಪಡೆ​ದು​ಕೊ​ಳ್ಳುವ ಮೊದಲೇ ಆರೋಗ್ಯ ಇಲಾಖೆ ಅಧಿ​ಕಾ​ರಿ​ಗಳು ತಕ್ಷಣ ಕ್ರಮ ಕೈಗೊ​ಳ್ಳ​ಬೇ​ಕಿದೆ.

 • 22 Killed Due To Heavy Rain In Himachal Pradesh

  Karnataka Districts25, Aug 2019, 3:10 PM

  ಹಾಸನ: ಅತಿವೃಷ್ಟಿಯಿಂದ ಹಾನಿಗೀಡಾದ ಮನೆಗಳಿಗೆ ಮೂರು ವಿವಿಧದಲ್ಲಿ ಪರಿಹಾರ

  ಸರ್ಕಾರದ ನಿಯಮಾವಳಿಯಂತೆ ಅತಿವೃಷ್ಟಿಯಿಂದ ಮನೆಗಳಿಗೆ ಆಗಿರುವ ಹಾನಿಯನ್ನು ಮೂರು ರೀತಿಯಲ್ಲಿ ವಿಭಾಗಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ತಿಳಿಸಿದ್ದಾರೆ. ಅತಿವೃಷ್ಠಿಯಿಂದ ಹಾನಿಗೆ ಒಳಗಾದವರು ಸೂಕ್ತ ಪರಿಹಾರ ಪಡೆಯಲು ಸರಿಯಾದ ದಾಖಲೆಗಳನ್ನು ಒದಗಿಸುವುದು ಅಗತ್ಯ ಎಂದರು.

 • undefined

  Karnataka Districts24, Aug 2019, 1:27 PM

  ಬೆಳಗಾವಿ: ಸಂತ್ರ​ಸ್ತರ ಸಂಕಷ್ಟಆಲಿ​ಸಿದ ಉಮಾ​ಶ್ರೀ

  ಮಾಜಿ ಸಚಿವೆ ಉಮಾಶ್ರೀ ಬೆಳಗಾವಿಯಲ್ಲಿ ನೇಕಾರ ಪ್ರದೇಶಗಳಿಗೆ ಭೇಟಿ ನೀಡಿ ನೆರೆ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿದರು. ಅತಿವೃಷ್ಟಿಯಿಂದ ಸಂಕಷ್ಟಕ್ಕೆ ಸಿಲುಕಿರುವ ನೇಕಾರರಿಗೆ ಪರಿಹಾರ ನೀಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದು ಉಮಾಶ್ರೀ ನೇಕಾರರಿಗೆ ಭರವಸೆ ನೀಡಿದರು.

 • BSY

  NEWS18, Aug 2019, 11:44 AM

  ವಾಸ್ತವಾಂಶ ತಿಳಿಯಲು ನೆರೆ ಪ್ರದೇಶಗಳಿಗೆ ಮತ್ತೆ ಹೋಗ್ತೀನಿ: ಬಿಎಸ್‌ವೈ

  ನೆರೆ ಪ್ರದೇಶಗಳಿಗೆ ಮತ್ತೆ ಹೋಗ್ತೀನಿ: ಬಿಎಸ್‌ವೈ| ವಾಸ್ತವಾಂಶ ತಿಳಿಯಲು ಮತ್ತೊಮ್ಮೆ ಭೇಟಿ| ಪರಿಹಾರ ನೀಡಲು ಕೇಂದ್ರದಿಂದ ಉನ್ನತ ಸಭೆ

 • Grass

  Karnataka Districts18, Aug 2019, 9:10 AM

  ಮಂಡ್ಯ: ದ.ಕ, ಮಡಿಕೇರಿಗೆ 1 ಲೋಡ್‌ ಮೇವು ರವಾನೆ

  ಮಹಾಮಳೆಯಿಂದ ತತ್ತರಿಸಿರುವ ಮಡಿಕೇರಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಗೋವುಗಳ ಮೇವಿನ ಕೊರತೆ ನೀಗಿಸಲು ಮಂಡ್ಯ ಜಿಲ್ಲಾ ಭಾರತೀಯ ಗೋ ಪರಿವಾರದ ವತಿಯಿಂದ ಶುಕ್ರವಾರ ರಾತ್ರಿ 1 ಲೋಡ್‌ ಒಣ ಹುಲ್ಲನ್ನು ಕಳಿಸಿಕೊಡಲಾಯಿತು. ಮೇವು ಕೊಡುವವರು ಕರೆ ಮಾಡಿದರೆ ಆಯಾ ಗ್ರಾಮಕ್ಕೆ ಲಾರಿ ಅಥವಾ ಇತರೆ ವಾಹನ ಕಳಿಸಲು ವ್ಯವಸ್ಥೆ ಮಾಡಲಾಗಿದೆ.

 • Prajwal Revanna

  Karnataka Districts17, Aug 2019, 8:40 AM

  ಹಾಸನ: ನೆರೆ ಪ್ರದೇಶಕ್ಕೆ ಪ್ರಜ್ವಲ್‌ ಭೇಟಿ

  ಸಂಸದ ಪ್ರಜ್ವಲ್‌ ರೇವಣ್ಣ ಹಾಗೂ ಶಾಸಕ ಎಚ್‌.ಕೆ. ಕುಮಾರಸ್ವಾಮಿ ಹಾನುಬಾಳು ಹೋಬಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಲವು ಕೆಡಗಳಲ್ಲಿ ಭೂ ಕುಸಿತ ಉಂಟಾಗಿದೆ. ಆದ್ದರಿಂದ ಸರ್ಕಾರದಿಂದ ತುರ್ತು ಅನುದಾನದಲ್ಲಿ ಕೆಲ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

 • Yediyurappa

  Karnataka Districts13, Aug 2019, 11:21 AM

  ಶಿವಮೊಗ್ಗ: ನೆರೆ ಪ್ರದೇಶಕ್ಕೆ ಸಿಎಂ ಭೇಟಿ, ಕುಸಿದು ಬಿದ್ದ ರೈತ

  ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ನೆರೆ ಸಂತ್ರಸ್ತ ಪ್ರದೇಶಗಳಿಗ ಭೇಟಿ ನೀಡುತ್ತಿದ್ದಾರೆ. ಶಿವಮೊಗ್ಗದ ಹೆಗಲತ್ತಿ ಗ್ರಾಮಕ್ಕೆ ಸಿಎಂ ಭೇಟಿ ಸಂದರ್ಭ ರೈತರೊಬ್ಬರು ಕುಸಿದು ಬಿದ್ದಿರುವ ಘಟನೆ ನಡೆದಿದೆ. ಪ್ರವಾಹದಿಂದ ಹಾನಿಗೀಡಾದ ಅರಣ್ಯ ಭೂಮಿ, ಕೃಷಿ ಭೂಮಿ, ಆಸ್ತಿ ಪಾಸ್ತಿಗಳ ಸಮಗ್ರ ಸಮೀಕ್ಷೆಗೆ ಸೂಚನೆ ನೀಡಿದ್ದಾರೆ.

 • D Vedavyas Kamath

  Karnataka Districts11, Aug 2019, 2:22 PM

  ದಿನವಿಡೀ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಶಾಸಕ

  ಕರಾವಳಿಯಲ್ಲಿ ಕಳೆದೊಂದು ವಾರದಿಂದ ಸುರಿದ ಭಾರೀ ಮಳೆಯಿಂದಾಗಿ ಅನೇಕ ಪ್ರದೇಶಗಳು ಜಲಾವೃತವಾಗಿದೆ. ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್‌ ಅವರು ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ವೀಕ್ಷಿಸಿದರು. ಶಾಸಕ ಕಾಮತ್‌ ಆಲಿಸಿ ಸ್ಥಳದಲ್ಲಿಯೇ ಸೂಕ್ತ ಪರಿಹಾರಕ್ಕೆ ಅಧಿಕಾರಿಗಳಿಗೆ ಸೂಚಿಸಿದರು.

 • Kagodu Thimmappa

  Karnataka Districts10, Aug 2019, 1:02 PM

  ನೆರೆ ಪೀಡಿತ ಪ್ರದೇಶಕ್ಕೆ ಕಾಗೋಡು ತಿಮ್ಮಪ್ಪ ಭೇಟಿ

  ಮಾಜಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ಶಿವಮೊಗ್ಗದಲ್ಲಿ ನೆರೆ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಆನಂದಪುರ ಸುತ್ತಮುತ್ತ ಸುರಿದ ಮಳೆಯಿಂದ ಗೀಳಾಲಗುಂಡಿ, ತಂಗಳವಾಡಿ, ಹೊಸಕೊಪ್ಪ, ಕಣ್ಣೂರು, ಹೀರೆಹರಕ, ಗೌತಮಪುರ, ಭೈರಾಪುರ ಹಾಗೂ ಇತರೆ ಸ್ಥಳಗಳಿಗೆ ಭೇಟಿ ನೀಡಿ ತಕ್ಷಣವೇ ಪರಿಹಾರ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.