Film Theater  

(Search results - 19)
 • Kannada film producer to meet CM Basavaraj Bommai for theater occupancy vcs

  SandalwoodAug 9, 2021, 3:46 PM IST

  ಶೇ. 100ರಷ್ಟು ಸೀಟು ಭರ್ತಿ ಆಗ್ರಹಿಸಿ ಸಿಎಂ ಭೇಟಿಗೆ ನಿರ್ಮಾಪಕರು ನಿರ್ಧಾರ!

  ಸಿನಿಮಾ ಹಾಲ್ ಹೌಸ್‌ಫುಲ್ ಆಗುವುದು ಯಾವಾಗ?

  ಕನ್ನಡ ಚಿತ್ರರಂಗದ ಮುಂದಿನ ದಾರಿ ಯಾವುದು?

  - ಈ ಪ್ರಶ್ನೆಗಳ ಸುತ್ತ ಸ್ಯಾಂಡಲ್‌ವುಡ್ ನಿರ್ಮಾಪಕರ ಚರ್ಚೆಗಳು ಸಾಗುತ್ತಿವೆ. ಯಾಕೆಂದರೆ ಆಗಸ್‌ಟ್ 1ರಿಂದಲೇ ಶೇ.100ರಷ್ಟು ಸೀಟು ಭರ್ತಿ ಆದೇಶವನ್ನು ರಾಜ್ಯ ಸರ್ಕಾರ ಹೊರಡಿಸಬಹುದು ಎನ್ನುವ ನಿರೀಕ್ಷೆಯಲ್ಲಿತ್ತು ಚಿತ್ರರಂಗ.

 • Karnataka film theater to begin film telecast from July end with 50% occupancy vcs

  SandalwoodJul 21, 2021, 10:06 AM IST

  ಅತಂತ್ರ ಸ್ಥಿತಿಯಲ್ಲಿ ಥಿಯೇಟರ್‌ ಮಾಲೀಕರು, ತಿಂಗಳಾಂತ್ಯಕ್ಕೆ ಮಲ್ಟಿಪ್ಲೆಕ್ಸ್‌ನಲ್ಲಿ ಚಿತ್ರ ಪ್ರದರ್ಶನ ಶುರು!

  ರಾಜ್ಯಾದ್ಯಂತ ಚಿತ್ರಮಂದಿರಗಳು ಬಾಗಿಲು ತೆರೆದಿವೆ. ಆದರೆ, ಪ್ರದರ್ಶನಕ್ಕೆ ಸಿನಿಮಾಗಳಿಲ್ಲ. ಚಿತ್ರಮಂದಿರಗಳ ಮಾಲೀಕರು ಅತಂತ್ರ ಸ್ಥಿತಿಯಲ್ಲಿದ್ದಾರೆ. ಈ ಮಧ್ಯೆ ಜಿಲ್ಲಾ ಕೇಂದ್ರಗಳಲ್ಲಿ ಕೆಲವು ಕಡೆ ಕೆಲವು ಚಿತ್ರಗಳನ್ನು ಮರು ಬಿಡುಗಡೆ ಮಾಡಲಾಗಿದೆ. ಆದರೆ ಪ್ರತಿಕ್ರಿಯೆ ಅಷ್ಟೇನೂ ಉತ್ತಮವಾಗಿಲ್ಲ. ಸ್ಟಾರ್‌ ಸಿನಿಮಾ ಬಂದರೆ ಪರಿಸ್ಥಿತಿ ಸ್ವಲ್ಪ ಸುಧಾರಿಸಬಹುದು ಎಂಬ ಅಭಿಪ್ರಾಯ ಅನೇಕರಲ್ಲಿದೆ. ಆದರೆ ಶೇ.100 ಸೀಟು ಭರ್ತಿ ಆದೇಶ ಬರದಿದ್ದರೆ ತಮ್ಮ ಸಿನಿಮಾ ರಿಲೀಸ್‌ ಮಾಡುವುದಿಲ್ಲ ಎಂದು ಎಲ್ಲಾ ನಿರ್ಮಾಪಕರು ಈಗಾಗಲೇ ತೀರ್ಮಾನಿಸಿದ್ದಾರೆ.

 • Producers busy in booking film theaters for big budget film release vcs
  Video Icon

  SandalwoodJun 26, 2021, 5:07 PM IST

  ಚಿತ್ರಮಂದಿರ ತೆರೆಯುತ್ತಿದ್ದಂತೆ ಮೊದಲು ಬರೋ ಸ್ಟಾರ್ ಯಾರು?

  ಅನ್‌ಲಾಕ್‌ ಆಗುತ್ತಿದ್ದಂತೆ, ನಿರ್ಮಾಪಕರು ಸಿನಿಮಾ ಬಿಡುಗಡೆಗೆ ಬುಕ್ಕಿಂಗ್ ಶುರು ಮಾಡಿಕೊಂಡಿದ್ದಾರೆ. ಒಂದು ಕಡೆ ಶೂಟಿಂಗ್, ಮತ್ತೊಂದು ಕಡೆ ಪ್ರೊಡಕ್ಷನ್ ಕೆಲಸ.  ಆದಷ್ಟು ಬೇಗ ಸಿನಿಮಾ ಸಿದ್ಧತೆಗಳು ಮುಗಿದರೆ ಚಿತ್ರಮಂದಿರಗಳು ತೆರೆಯುತ್ತಿದ್ದಂತೆ, ಸ್ಟಾರ್ ಸಿನಿಮಾಗಳು ರಿಲೀಸ್ ಆಗುತ್ತವೆ. ಈಗ ಯಾರ ಸಿನಿಮಾ ಮೊದಲು ಎಂಬುವುದು ದೊಡ್ಡ ಚಿಂತೆ ಆಗಿದೆ...

 • Kannada film industry faces massive financial lock in Covid19 second-wave lockdown vcs

  SandalwoodJun 4, 2021, 12:16 PM IST

  ಚಿತ್ರರಂಗದಲ್ಲಿ 1000 ಕೋಟಿ ರೂ. ಲಾಕ್; ಕೋಟಿಗಳ ಗಡಿ ದಾಟಿದ ಸಿನಿಮಾ ನಷ್ಟದ ಲೆಕ್ಕಾಚಾರ!

  ಕಳೆದ ಒಂದು ವರ್ಷದಿಂದ ಚಿತ್ರರಂಗದ ಎಕಾನಾಮಿಕ್‌ಸ್ ಪಾತಾಳಕ್ಕೆ ಇಳಿದಿದೆ. ಒಂದೆರಡು ಸಿನಿಮಾಗಳು ತೆರೆಕಂಡು ಇನ್ನೇನು ಚೇತರಿಸಿಕೊಳ್ಳುತ್ತದೆ ಎಂದುಕೊಳ್ಳುವಾಗಲೇ ಮತ್ತೊಮ್ಮೆ ಕೊರೋನಾ ತನ್ನ ಅಟ್ಟಹಾಸ ಮೆರೆಯಿತು. ಈಗ ಮತ್ತಷ್ಟು ಲೆಕ್ಕಾಚಾರ ಉಲ್ಟಾ ಆಗಿದೆ. ಅಲ್ಲದೆ ಸ್ಟಾರ್ ನಟರು ಸುಮ್ಮನೆ ಕೂತಿದ್ದಾರೆ. ಯಾವುದೇ ಹೊಸ ಸಿನಿಮಾ ಒಪ್ಪಿಕೊಳ್ಳುತ್ತಿಲ್ಲ.
   

 • Kannada actor Puneeth Rajkumar appeals to CM to take back 50 percent of seating in Film theatre vcs
  Video Icon

  SandalwoodApr 3, 2021, 4:17 PM IST

  ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಭರ್ತಿ: ನಿರ್ಧಾರ ಹಿಂಪಡೆಯಲು ಸಿಎಂಗೆ ಪುನೀತ್ ರಾಜ್‌ಕುಮಾರ್ ಮನವಿ!

  ಕೊರೋನಾ ವೈರಸ್‌ ಎರಡನೇ ಅಲೆ ಹೆಚ್ಚಾಗುತ್ತಿದ್ದಂತೆ ಸರ್ಕಾರ ಜಾರಿಗೊಳಿಸಿರುವ ಹೊಸ ಮಾರ್ಗ ಸೂಚನೆಯಿಂದ ಚಿತ್ರರಂಗಕ್ಕೆ ಹೆಚ್ಚಿನ ಪೆಟ್ಟು ಬಿದಿದ್ದೆ. ಈಗ ತಾನೇ ವೀಕ್ಷಕರು ಚಿತ್ರಮಂದಿರಗಳಿಗೆ ಆಗಮಿಸುತ್ತಿದ್ದಾರೆ. ಚಿತ್ರಗಳು ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ ಎನ್ನುವಷ್ಟರಲ್ಲಿ ಶೇ.50 ಸೀಟಿಂಗ್ ಮಾಡಬೇಕೆಂದು ತಂದಿರುವ ಹೊಸ ಮಾರ್ಗ ಸೂಚಿ ಬಗ್ಗೆ ನಟ ಪುನೀತ್ ರಾಜ್‌ಕುಮಾರ್ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

 • Darshan watches robert film with fans in film theater vcs
  Video Icon

  SandalwoodMar 16, 2021, 5:35 PM IST

  ಮಾರುವೇಷದಲ್ಲಿ ಜನರ ಜೊತೆ ಸಿನಿಮಾ ವೀಕ್ಷಿಸಿದ ದರ್ಶನ್; ಶಾಕ್ ಆದ ಫ್ಯಾನ್ಸ್‌

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್‌ ಸಿನಿಮಾ ಒಂದೇ ದಿನದಲ್ಲಿ 20 ಕೋಟಿ ರೂ. ಗಳಿಸಿತ್ತು. ಬಾಕ್ಸ್‌ ಆಫೀಸ್‌ನಲ್ಲಿ ಕೊಳ್ಳೆ ಹೊಡೆಯುತ್ತಿರುವ ಸಿನಿಮಾ ಬಗ್ಗೆ ಜನರು ಏನು ಹೇಳುತ್ತಿದ್ದಾರೆ, ಎಂದು ತಿಳಿದುಕೊಳ್ಳಲು ದರ್ಶನ್ ಮಾರುವೇಷ ಧರಿಸಿ ಅಭಿಮಾನಿಗಳ ಜೊತೆ ಸಿನಿಮಾ ವೀಕ್ಷಿಸಿದ್ದಾರೆ.
   

 • fan go crazy for dhruva sarja pogaru karabu song in film theater vcs
  Video Icon

  SandalwoodFeb 19, 2021, 5:03 PM IST

  ನರ್ತಕಿ ಚಿತ್ರಮಂದಿರ ಎದುರು ಕುಣಿದು ಕುಪ್ಪಳಿಸಿದ ಧ್ರುವ ಅಭಿಮಾನಿಗಳು!

  ಸ್ಯಾಂಡಲ್‌ವುಡ್‌ನಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಓನ್‌ ಆಫ್‌ ದಿ ನಟ ಧ್ರುವ ಸರ್ಜಾ. ಮೂರು ವರ್ಷಗಳ ನಂತರ ಸಿನಿಮಾ ರಿಲೀಸ್‌ ಆಗುತ್ತಿದ್ದು ಧ್ರುವನನ್ನು ಮಿಸ್‌ ಮಾಡಿಕೊಂಡ ಅಭಿಮಾನಿಗಳು ಡೈಲಾಗ್‌ ಹೇಳುವ ಮೂಲಕ ಪೊಗರು ಶಿವನನ್ನು ಬರ ಮಾಡಿಕೊಂಡಿದ್ದಾರೆ. ಈ ಕ್ರೇಜ್‌ ಹೇಗಿತ್ತು ಅಂತ ನೋಡಿ ನೀವೇ ಹೇಳಿ....
   

 • Dhruva sarja surprised to see massive crowd in film theaters pogaru first day show vcs
  Video Icon

  SandalwoodFeb 19, 2021, 11:56 AM IST

  ಬೆಳ್ಳಂ ಬೆಳಗ್ಗೆ ಅದ್ಧೂರಿಯಾಗಿ 'ಪೊಗರು' ರಿಲೀಸ್; ಧ್ರುವ ಸರ್ಜಾ ಮಾತು

  ನರ್ತಕಿ ಚಿತ್ರಮಂದಿರದಲ್ಲಿ ಫಸ್ಟ್ ಶೋ ಪ್ರತಿಕ್ರಿಯೆಗಾಗಿ ಕಾಯುತ್ತಿರುವ ಧ್ರುವ ಸರ್ಜಾ, ಸಿನಿಮಾ ನೋಡಲು ಆಗಮಿಸಿರುವ ಅಭಿಮಾನಿಗಳನ್ನು ಕಂಡು ಶಾಕ್ ಆಗಿದ್ದಾರೆ. ಮೊದಲ ದಿನದ ಗ್ರ್ಯಾಂಡ್ ಓಪನಿಂಗ್‌ ಮೆಚ್ಚಿಕೊಂಡಿದ್ದಾರೆ. ನಾನೊಬ್ಬ ವಿಲನ್, ಕೆಟ್ಟ ಹುಡುಗ ಎಂದು ಹೇಳುತ್ತಲೇ ಬರೀ ನೆಗೆಟಿವ್ ಶೇಡ್‌ ಬಗ್ಗೆ ಮಾತನಾಡಿರುವ ಧ್ರುವ, ಚಿತ್ರದಲ್ಲಿ ತಾಯಿ ಹಾಗೂ ತಂಗಿ ಜೊತೆಗಿರುವ ಸೆಂಟಿಮೆಂಟ್ ನೋಡಿ ವೀಕ್ಷಕರು ಭಾವುಕರಾಗಿದ್ದಾರೆ.

 • film theater 100 percent occupancy grand celebration to welcome new movies vcs
  Video Icon

  SandalwoodFeb 5, 2021, 4:44 PM IST

  ಕನ್ನಡ ಚಿತ್ರ ಮಂದಿರಗಳು ತುಂಬಿ ತುಳುಕುತ್ತಿವೆ; ಹೌಸ್‌ಫುಲ್‌ ಪ್ರದರ್ಶನ!

  10 ತಿಂಗಳ ಬಳಿಕ ಥಿಯೇಟರ್‌ಗಳು ಹೌಸ್‌‌ಫುಲ್ ಆಗಿರುವುದನ್ನು ಕಂಡು ನಿರ್ದೇಶಕರು, ನಿರ್ಮಾಪಕರು ಮಾತ್ರವಲ್ಲದೇ ಚಿತ್ರ ಮಂದಿರದ ಮಾಲೀಕರೂ ಸಂತಸ ಪಟ್ಟಿದ್ದಾರೆ. ಪ್ರಜ್ವಲ್ ದೇವರಾಜ್‌ ಅಭಿನಯದ ಇನ್ಸ್‌ಪೆಕ್ಟರ್ ವಿಕ್ರಂ, ಚಂದನ್ ಆಚಾರ್ ಅಭಿನಯದ ಮಂಗಳವಾರ ರಜಾದಿನ ಹಾಗೂ ವಿನೋದ್ ಪ್ರಭಾಕರ್ ಶ್ಯಾಡೋ ಸಿನಿಮಾ ಇಂದು ಬಿಡುಗಡೆಯಾಗಿವೆ. ಜಾನಪದ ಕಲೆ‌ ಡೋಲು ಬಡಿದು ಪ್ರೇಕ್ಷಕರನ್ನು ವೆಲ್ ಕಮ್ ಮಾಡಿಕೊಳ್ಳುತ್ತಿರೋ ಡೊಳ್ಳು ಕುಣಿತದ ಕಲಾವಿದರು.....

 • Ragavendra rajkumar rajatantra Kannada movie out in film theaters vcs

  SandalwoodJan 1, 2021, 3:27 PM IST

  ಹೊಸ ವರ್ಷ ರಿಲೀಸ್‌ ಆಗುತ್ತಿರುವ ಮೊದಲ ಸಿನಿಮಾ ರಾಜತಂತ್ರ!

  ಹಿರಿಯ ನಟ ರಾಘವೇಂದ್ರ ರಾಜ್‌ಕುಮಾರ್‌ ಅಭಿನಯದ ಚಿತ್ರದ ಮೂಲಕ 2021ನೇ ವರ್ಷದ ಆಚರಣೆ ಮಾಡಲಿದೆ ಕನ್ನಡ ಚಿತ್ರರಂಗ. 

 • number of kannada movies released on ott and in film theaters vcs

  SandalwoodDec 26, 2020, 9:37 AM IST

  2020:75/365; ಥೇಟರುಗಳೇ ಗಟ್ಟಿ, ಓಟಿಟಿ ಬಿಟ್ಟಿ

  ಸಿನಿಮಾಗಳಿಗೆ ಥೇಟರ್‌ ಕಲೆಕ್ಷನ್ನೇ ಗಟ್ಟಿ, ಓಟಿಟಿಗಳಿಗೆ ಪ್ರದರ್ಶನಕ್ಕೆ ನೀಡಿದರೆ ಕಾಸು ಬರುವುದು ಖಾತ್ರಿಯಿಲ್ಲ ಅನ್ನುವುದನ್ನು ಕನ್ನಡ ಚಿತ್ರಗಳು ಕೋವಿಡ್‌ ಅವಧಿಯಲ್ಲಿ ಅರ್ಥಮಾಡಿಕೊಂಡವು. ರವಿಚಂದ್ರನ್‌ರಿಂದ ಹಿಡಿದು ಹೊಸಬರ ತನಕ ಓಟಿಟಿ ಮಾಡ್ತೀವಿ ಅಂದವರು ವರ್ಷದ ಕೊನೆಗೆ ಸುಮ್ಮನಾದರು. ಓಟಿಟಿಗೋಸ್ಕರ ಸಿನಿಮಾ ಮಾಡ್ತೀವಿ ಅಂದವರು ನಿಧಾನಕ್ಕೆ ಥೇಟರೇ ವಾಸಿ ಅನ್ನುವ ತೀರ್ಮಾನಕ್ಕೆ ಬಂದರು. ಪ್ರೇಕ್ಷಕರೂ ಅಷ್ಟೇ, ಓಟಿಟಿಯಲ್ಲಿ ಕನ್ನಡ ಸಿನಿಮಾ ನೋಡೋದು ಬ್ಯಾಡ ಅಂತ ತೀರ್ಮಾನಿಸಿದಂತೆ ಥೇಟರ್‌ ಯಾವಾಗ ಓಪನ್ನು ಅಂತ ಕೇಳುತ್ತಾ ಶರಟಿನ ತೋಳು ಮಡಿಚಿಕೊಳ್ಳುತ್ತಾ ಸರಬರ ಓಡಾಡಿದರು.

 • New film piracy rule no faulty shooting in film theaters vcs

  SandalwoodNov 24, 2020, 9:22 AM IST

  ಪೈರಸಿ ವಿರುದ್ಧ ಹೊಸ ತಂತ್ರಜ್ಞಾನ;ಇನ್ನು ಮುಂದೆ ಚಿತ್ರಮಂದಿರಗಳಲ್ಲಿ ಕದ್ದು ಚಿತ್ರೀಕರಣ ಮಾಡಲಾಗದು!

  ಪೈರಸಿಗೆ ಹೆದರುವಷ್ಟುಚಿತ್ರರಂಗ ಬೇರೆ ಯಾವುದಕ್ಕೂ ಹೆದರುವುದಿಲ್ಲ. ಯಾರು ಏನು ಮಾಡಿದರೂ ಪೈರಸಿ ತಡೆಯುವುದಕ್ಕೆ ಆಗುತ್ತಲೇ ಇಲ್ಲ. ಇಂಥಾ ಹೊತ್ತಲ್ಲಿ ಚಿತ್ರಮಂದಿರಗಳಲ್ಲಿ ಚಿತ್ರೀಕರಣ ಮಾಡುವುದನ್ನು ತಪ್ಪಿಸಲು ಕಾಂಟ್ರಪೈನ್‌ ಸಂಸ್ಥೆ ಹೊಸತೊಂದು ಸಾಫ್ಟ್‌ವೇರ್‌ ಕಂಡುಹಿಡಿದಿದೆ. ನಂ.26ರಂದು ಬಿಡುಗಡೆಯಾಗುತ್ತಿರುವ ಈ ಸಾಫ್ಟ್‌ವೇರ್‌ ಹೇಗೆ ಕಾರ್ಯ ನಿರ್ವಹಿಸುತ್ತದೆ, ಹೇಗೆ ಪೈರಸಿ ತಡೆಯುತ್ತದೆ ಎಂಬ ಪೂರ್ತಿ ವಿವರ ಇಲ್ಲಿದೆ.

 • actor director talks about development in kannada industry post lockdown vcs

  SandalwoodNov 6, 2020, 10:12 AM IST

  ಶುಭವಾಗುತೈತಮ್ಮೋ; ಸನಿಹದಲ್ಲೇ ಇವೆ ಒಳ್ಳೆಯ ದಿನಗಳು

  ಸಿನಿಮಾ ರಂಗ ಚೇತರಿಸಿಕೊಳ್ಳುತ್ತಿದೆ. ಮತ್ತೆ ಚಿತ್ರಮಂದಿರದಲ್ಲಿ ಹೊಸ ಸಿನಿಮಾ ಬರುವ ಕ್ಷಣಗಳಿಗಾಗಿ, ಚಿತ್ರಮಂದಿರ ತುಂಬುವ ದಿನಗಳಿಗಾಗಿ ಕಾಯುತ್ತಿದೆ. ಇಂಥಾ ಹೊತ್ತಲ್ಲಿ ಚಿತ್ರರಂಗದ ಭಾವನೆಗಳೇನು..

 • new Kannada movies likely to hit film theaters on next year January 2021 vcs

  SandalwoodNov 3, 2020, 9:38 AM IST

  ಮರುಬಿಡುಗಡೆ ನಿಧಾನ ಹೊಸಬಿಡುಗಡೆ ಶೂನ್ಯ;ಜನವರಿ ತನಕ ಚಿತ್ರರಂಗಕ್ಕೆ ಅಘೋಷಿತ ರಜೆ!

  ಚಿತ್ರಮಂದಿರಗಳ ಪಾಲಿಗೆ ಯಾಕೋ ಅಘೋಷಿತ ಲಾಕ್‌ಡೌನ್‌ ಮಾತ್ರ ಮುಂದುವರಿಯುತ್ತಿದೆ ಎನಿಸುತ್ತಿದೆ. ಚಿತ್ರಮಂದಿರಗಳ ಬಾಗಿಲು ತೆರೆಯಲು ಅನುಮತಿ ಕೊಟ್ಟಮೇಲೂ ಥಿಯೇಟರ್‌ಗಳು ಅದರಲ್ಲೂ ಸಿಂಗಲ್‌ ಸ್ಕ್ರೀನ್‌ ಪರದೆಗಳ ಮಟ್ಟಿಗೆ ಲಾಕ್‌ಡೌನ್‌ ಮೋಡಗಳು ತಿಳಿಯಾಗಿಲ್ಲ.

 • most awaited 10 movies of sandalwood vcs

  SandalwoodOct 2, 2020, 10:02 AM IST

  ನೀವು ರೆಡೀನಾ? ನಾವ್ ರೆಡಿ; ಕಾಯುತ್ತಿದೆ 10 ಪ್ರಮುಖ ಚಿತ್ರಗಳು!

  ಕೆಲವು ಚಿತ್ರೀಕರಣ, ಪೋಸ್ಟ್‌ ಪ್ರೊಡಕ್ಷನ್ ಮುಗಿಸಿ ಕಾಯುತ್ತಿವೆ. ಕೆಲವು ಚಿತ್ರೀಕರಣದ ಕೊನೆ ಹಂತದಲ್ಲಿವೆ. ಥೇಟರ್‌ ಶುರುವಾಗುತ್ತಿದ್ದಂತೆ ರೆಡಿ ಮಾಡೋಣ ಅಂತ ಕೆಲವರು ಕಾಯುತ್ತಿದ್ದಾರೆ. ಅಂತೂ ಸಿನಿಮಾಗಳು ಬಿಡುಗಡೆಯ ದಾರಿ ಕಾಯುತ್ತಿವೆ. ಚಿತ್ರಮಂದಿರ ತೆರೆಯುತ್ತಿದ್ದಂತೆ ನೀವು ಗಮನಿಸಬಹುದಾದ ಚಿತ್ರಗಳು ಪಟ್ಟಿ ಇಲ್ಲಿದೆ. ಇದೇ ಅನುಕ್ರಮಣಿಕೆಯಲ್ಲಿ ಬಿಡುಗಡೆ ಆಗುತ್ತದೆ ಅಂತೇನಿಲ್ಲ.