Film Review  

(Search results - 256)
 • Shivarjuna

  Film Review14, Mar 2020, 9:06 AM

  ಚಿತ್ರ ವಿಮರ್ಶೆ: ಶಿವಾರ್ಜುನ

  ಇದು ಪಕ್ಕಾ ಸಿದ್ಧ ಮಾದರಿ ಸಿನಿಮಾ. ನಾಲ್ಕು ಫೈಟು, ನಾಲ್ಕು ಸಾಂಗು, ಒಂದಷ್ಟುಸೆಂಟಿಮೆಂಟ್‌ ಡೈಲಾಗ್ಸು ; ಇವಿಷ್ಟುಇಟ್ಟುಕೊಂಡು ಸಿನಿಮಾ ಮಾಡಿದ್ರೆ ಪ್ರೇಕ್ಷಕರಿಗೆ ಇಷ್ಟುವಾಗುತ್ತೆ ಎನ್ನುವ ಆತ್ಮವಿಶ್ವಾಸದೊಂದಿಗೆ ಮಾಡಿದ ಚಿತ್ರ. ಹಾಗಾದ್ರೆ ಇವತ್ತಿನ ಟ್ರೆಂಡ್‌ಗೆ ಇಷ್ಟೇನಾ ಸಿನಿಮಾ ರಂಜನೆಯ ಸಿದ್ಧ ಸೂತ್ರ ? ಉತ್ತರಕ್ಕೆ ಇಲ್ಲಿ ಯಾವುದೇ ಲಾಜಿಕ್‌ ಇಲ್ಲ, ಮ್ಯಾಜಿಕ್‌ ಕೂಡ ಇಲ್ಲ. ಬದಲಿಗೆ ನಿರ್ದೇಶಕ ಶಿವತೇಜಸ್‌ಗೆ ಈಗ ಬದಲಾಗುವ ಕಾಲವಂತು ಹೌದು.

 • naragunda bandaya

  Film Review14, Mar 2020, 8:59 AM

  ಚಿತ್ರ ವಿಮರ್ಶೆ: ನರಗುಂದ ಬಂಡಾಯ

  ನರಗುಂದ ಎಂಬ ಹೆಸರು ಕೇಳಿದ ತಕ್ಷಣ ಅಲ್ಲಿನ ಬಂಡಾಯದ ದನಿ, ರೈತ ಹೋರಾಟದ ಇತಿಹಾಸ ಕಣ್ಣ ಮುಂದೆ ಬರುತ್ತದೆ. 1980ರಲ್ಲಿ ಧಾರವಾಡದ ನರಗುಂದ, ನವಲಗುಂದ ಸುತ್ತಮುತ್ತಲೂ ನಡೆದ ರೈತರ ಬಂಡಾಯಕ್ಕೆ ಒಂದು ಸರಕಾರವನ್ನೇ ಉರುಳಿಸುವ ಶಕ್ತಿ ಇತ್ತು. ಹಾಗಾಗಿಯೇ ರಾಜ್ಯದ ರೈತ ಹೋರಾಟದ ಇತಿಹಾಸದಲ್ಲಿ ನರಗುಂದ ಬಂಡಾಯಕ್ಕೆ ವಿಶೇಷ ಸ್ಥಾನ. 

 • maduve madri sari hogtane

  Film Review7, Mar 2020, 9:42 AM

  ಚಿತ್ರ ವಿಮರ್ಶೆ: ಮದುವೆ ಮಾಡ್ರಿ ಸರಿಹೋಗ್ತಾನೆ

  ಈ ಚಿತ್ರದ ಹೆಸ​ರಿಗೆ ಮತ್ತು ತೆರೆ ಮೇಲೆ ತೋರಿ​ಸುವ ಕತೆಗೂ ಯಾವುದೇ ಸಂಬಂಧ​ವಿ​ಲ್ಲ. ಪ್ರೀತಿ​ಸುವ ಹುಡು​ಗಿಯ ಮಾತು​ಗ​ಳಿಂದ ಸ್ಫೂರ್ತಿ​ಗೊಂಡು ಸಾಧನೆ ಮಾಡುವ ಪ್ರಿಯ​ಕ​ರನ ಕತೆ​ಯನ್ನು ಒಳ​ಗೊಂಡಿ​ರುವ ಚಿತ್ರ ‘ಮದುವೆ ಮಾಡ್ರಿ ಸರಿ​ಹೋ​ಗ್ತಾ​ನೆ’.

 • drona shivarajkumar

  Film Review7, Mar 2020, 9:04 AM

  ಚಿತ್ರ ವಿಮರ್ಶೆ: ದ್ರೋಣ

  ಶಿವರಾಜ್‌ಕುಮಾರ್‌ ಅವರಿಗೆ ಇದು ವಿಶೇಷವಾದ ಸಿನಿಮಾ. ಹಾಗೆ ಹೇಳುವುದಕ್ಕೆ ಇಲ್ಲಿ ಹಲವು ಕಾರಣಗಳಿವೆ. ಆ ಪೈಕಿ ಬಹುಮುಖ್ಯ ಎನಿಸುವುದು ಅವರು ಬಣ್ಣ ಹಚ್ಚಿದ ಪಾತ್ರ. ಇದೇ ಮೊದಲು ಅವರಿಲ್ಲಿ ಒಬ್ಬ ಸರ್ಕಾರಿ ಶಾಲೆ ಶಿಕ್ಷಕನಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿನ ಅವರ ಪಾತ್ರದ ಹೆಸರು ಗುರು

 • love mocktail

  Sandalwood5, Mar 2020, 1:05 PM

  60 ದಿನದಲ್ಲಿ 52 ಸಿನಿಮಾ; ಮೆಚ್ಚುಗೆ ಗಳಿಸಿದ್ದು ಮಾತ್ರ ನಾಲ್ಕು ಚಿತ್ರಗಳು!

  60 ದಿನಗಳಿಗೆ 52 ಸಿನಿಮಾ ಅಂದ್ರೆ ಸರಾಸರಿ ದಿನಕ್ಕೊಂದು ಸಿನಿಮಾ ತೆರೆ ಕಂಡಂತಿದೆ ಈ ಲೆಕ್ಕ. ಜನವರಿ ಒಂದರಲ್ಲಿಯೇ ಬರೋಬ್ಬರಿ 36 ಚಿತ್ರಗಳು ತೆರೆಕಂಡಿವೆ. ಫೆಬ್ರವರಿಯಲ್ಲಿ ಆ ಸಂಖ್ಯೆ ಒಂದಷ್ಟುಕಡಿಮೆ ಆಗಿದ್ದರೂ ಇದುವರೆಗಿನ ಕನ್ನಡದ ಚಿತ್ರರಂಗದ ಇತಿಹಾಸ ಕೆದಕಿದರೆ ಇದು ದಾಖಲೆಯೇ ಹೌದು.

 • Ane bala

  Film Review29, Feb 2020, 9:09 AM

  ಚಿತ್ರ ವಿಮರ್ಶೆ: ಆನೆಬಲ

  ಚಿತ್ರ ಶುರುವಾದ ನಂತರ ಎಲ್ಲಿ ಟೇಕ್‌ ಆಫ್‌ ಆಗುತ್ತದೆ, ಪ್ರೇಕ್ಷಕ ಯಾವುದನ್ನು ತಿರುವು ಎಂದುಕೊಳ್ಳಬೇಕು, ಏನು ಇಲ್ಲಿನ ಕತೆ, ಉದ್ದೇಶ ಏನು? ಎಂಬೆಲ್ಲಾ ಪ್ರಶ್ನೆಗಳನ್ನು ಮನಸ್ಸಿಲ್ಲಿ ಮತ್ತೆ ಮತ್ತೆ ಕೇಳುವಂತೆ ಮಾಡುವ ಚಿತ್ರ ಆನೆಬಲ. 

 • bicchugatti

  Film Review29, Feb 2020, 9:03 AM

  ಚಿತ್ರ ವಿಮರ್ಶೆ: ಬಿಚ್ಚುಗತ್ತಿ

  ರಾಮಾ​ಯ​ಣ​ವನ್ನು ರಾವ​ಣನ ಮೂಲಕ ನೋಡಿ​ದರೆ ಹೇಗಿ​ರು​ತ್ತದೆ, ಗೌತಮ ಬುದ್ಧನ ಅಹಿಂಸೆ​ಯನ್ನು ಅಂಗುಲಿ​ಮಾ​ಲನ ದೃಷ್ಟಿಕೋನ​ದಲ್ಲಿ ನೋಡಿ​ದಾಗ ಏನ​ನಿ​ಸು​ತ್ತದೆ, ಹಾಗೆ ಚರಿ​ತ್ರೆ​ಯಲ್ಲಿ ವಿಲ​ನ್‌​ಗಳು ಅನಿ​ಸಿ​ಕೊಂಡ​ವರ ನೆರ​ಳಿ​ನಲ್ಲಿ ಆ ದಿನ​ಗಳ ಕತೆ​ಗ​ಳನ್ನು ಓದಿ​ದಾಗ ಎಂಥ ರೋಚಕ ಮೂಡು​ತ್ತದೆ ಎಂಬು​ದಕ್ಕೆ ಸಾಹಿತಿ ಬಿ ಎಲ್‌ ವೇಣು ಅವರ ‘ದಳ​ವಾಯಿ ದಂಗೆ’ ಕಾದಂಬರಿ ಉತ್ತಮ ಉದಾ​ಹ​ರಣೆ. 

 • Puneeth rajkumar mayabazar

  Film Review29, Feb 2020, 8:49 AM

  ಚಿತ್ರ ವಿಮರ್ಶೆ: ಮಾಯಾಬಜಾರ್‌

  ರಾಜ್‌ ಬಿ ಶೆಟ್ಟಿತಮಾಷೆ, ಅಚ್ಯುತ್‌ ಕುಮಾರ್‌ ವಿಷಾದ, ವಸಿಷ್ಠ ಸಿಂಹ ತರ್ಲೆ, ಪ್ರಕಾಶ್‌ ರೈ ಸಿಟ್ಟು, ಸಾಧು ಕೋಕಿಲ ಅಸಹಾಯಕತೆ ಎಲ್ಲವೂ ಸೇರಿ ಆಗಿರುವ ಕ್ಲೋಸ್‌ಡ್‌ ಎಂಡಿಂಗ್‌ ಫೀಲ್‌ ಗುಡ್‌ ಸಿನಿಮಾ ಇದು.

 • mayuri kyatari mounam

  Film Review22, Feb 2020, 10:02 AM

  ಚಿತ್ರ ವಿಮರ್ಶೆ: ಮೌನಂ

  ಇದೆಲ್ಲ ಸಾಧ್ಯವೇ? ಮಗ ಪ್ರೀತಿಸಿದ ಹುಡುಗಿಯನ್ನೇ ಅಪ್ಪ ಇಷ್ಟಪಡುವುದು ಸಹ್ಯವೇ? ಅರೆಬೆಂದ ಪ್ರೀತಿ, ಪ್ರೇಮದ ಕತೆ ದ್ವೀತಿಯಾರ್ಧದಲ್ಲಿ ಹೀಗೊಂದು ತಿರುವಿಗೆ ಬಂದು  ನಿಂತಾಗ ಪ್ರೇಕ್ಷಕರು ಬೆಚ್ಚಿ ಬೀಳುತ್ತಾರೆ. 

 • Adhya chiranjeevi sarja

  Film Review22, Feb 2020, 9:51 AM

  ಚಿತ್ರ ವಿಮರ್ಶೆ: ಆದ್ಯ

  ಸಿಗದ ಪ್ರೀತಿಯ ನೆನಪಲ್ಲೇ ಬೇಯುತ್ತಾ ನಾಯಕ ಚಿರು ವಿದೇಶಕ್ಕೆ ಹಾರಿ ನೆಲೆಯಾಗಿರುತ್ತಾನೆ. ಮುಂಜಾನೆಯೊಂದರಲ್ಲಿ ವಾಟ್ಸಪ್ ವಾಯ್ಸ್ ಮೆಸೇಜೊಂದು ಬಂದು ಆತ ಬೆಂಗಳೂರಿಗೆ ಹಾರಿ ಬರುತ್ತಾನೆ. ಹಾಗೆ ವಾಯ್ಸ್ ಮೆಸೇಜ್ ಮಾಡಿ ಸಹಾಯ ಕೇಳಿದ್ದು ಹಳೆಯ ಪ್ರೇಯಸಿ ಸಂಗೀತ.

 • popcorn monkey tiger dhananjay

  Film Review22, Feb 2020, 9:20 AM

  ಚಿತ್ರ ವಿಮರ್ಶೆ: ಪಾಪ್‌ಕಾರ್ನ್‌ ಮಂಕಿ ಟೈಗರ್

  ಈಚಿತ್ರದ ಒಂದು ಇಮೇಜ್. ಹರಿಯುವ ನದಿಯಲ್ಲಿ ನಿಂತ ಧನಂಜಯ. ನೀರತ್ತ ಬಾಗಿ ಬೊಗಸೆಯಲ್ಲಿ ನೀರು ಹಿಡಿದಿದ್ದಾರೆ. ನೋಡುತ್ತಿದ್ದಂತೆಯೇ ಬೊಗಸೆ ತೆರೆದರೆ ನೀರ ಮೇಲೆ ರೆಕ್ಕೆ ಬಿಚ್ಚಿದ ಬಣ್ಣದ ಚಿಟ್ಟೆ ಮಲಗಿದೆ. ಬಹುಶಃ ಅದು ಸತ್ತಿದೆ.

 • shivaji surathkal

  Film Review21, Feb 2020, 2:26 PM

  ಚಿತ್ರ ವಿಮರ್ಶೆ: ಶಿವಾಜಿ ಸುರತ್ಕಲ್

  ಸ್ಯಾಂಡಲ್‌ವುಡ್ ಎವರ್‌ಗ್ರೀನ್ ಹ್ಯಾಂಡ್ಸಮ್ ನಟ ರಮೇಶ್ ಅರವಿಂದ್ 101 ನೇ ಸಿನಿಮಾ 'ಶಿವಾಜಿ ಸೂರತ್ಕಲ್' ರಿಲೀಸ್ ಆಗಿದೆ. ಈ ಚಿತ್ರದ ವಿಶೇಷತೆಗಳೇನು? ಚಿತ್ರ ನೋಡಿದ ಪ್ರೇಕ್ಷಕ ಹೇಳುವುದೇನು? ಇಲ್ಲಿದೆ ನೋಡಿ ವಿಮರ್ಶೆ. 

 • Giftbox

  Film Review17, Feb 2020, 8:56 AM

  ಚಿತ್ರ ವಿಮರ್ಶೆ: ಗಿಫ್ಟ್‌ಬಾಕ್ಸ್‌

  ಒಂದು ಸಿನಿಮಾ ಅಂದ್ಮೇಲೆ ಫೈಟು, ಡ್ಯುಯೆಟ್‌, ರೊಮ್ಯಾನ್ಸ್‌ , ಸಂದೇಶ ಇತ್ಯಾದಿ ಇರಲೇಬೇಕು ಅನ್ನೋ ಸವಕಲು ಥಿಯರಿಯನ್ನು ಮುರಿದು ಹೊಸ ಅಲೆಯ ಸಿನಿಮಾಗಳು ಬರುತ್ತಿವೆ. ಆ ಪೈಕಿ ಗಟ್ಟಿಕತೆ ಇಟ್ಟುಕೊಂಡು ಬಂದಿರೋ ಆಫ್‌ಬೀಟ್‌ ಸಿನಿಮಾ ‘ಗಿಫ್ಟ್‌ ಬಾಕ್ಸ್‌’. ಈ ಒಂದು ಸಿನಿಮಾ ನಾಲ್ಕೈದು ಕತೆ ಹೇಳುತ್ತೆ. ಅಂದರೆ ಮೂಲ ಕತೆಗೆ ಸಂವಾದಿಯಾಗಿ ಅನೇಕ ಲೇಯರ್‌ಗಳು ಇದರಲ್ಲಿವೆ.

 • kannada movie navarathna

  Film Review15, Feb 2020, 11:09 AM

  ಚಿತ್ರ ವಿಮರ್ಶೆ: ನವರತ್ನ

  ಸಿನಿಮಾ ತೆರೆ ಮೂಡಿದ ಆರಂಭದಲ್ಲೇ ಇಂಥದ್ದೇ ಕತೆ, ಮುಂದೆ ಹೀಗೆ ಸಾಗುತ್ತದೆ ಎನ್ನುವ ಊಹೆಗೆ ದಕ್ಕುವ ಚಿತ್ರಗಳೇ ಬಹು ಪಾಲು. ಆದರೆ, ಮುಂದೆ ಏನಾಗುತ್ತದೆ ಎನ್ನುವ ಗುಟ್ಟು ಬಿಟ್ಟುಕೊಡದೆ ಹಲವು ತಿರುವುಗಳಲ್ಲಿ ಸಾಗಿ ಕೊನೆಯಲ್ಲಿ ಮತ್ತೆಲ್ಲೋ ಹೋಗಿ ಮುಕ್ತಾಯವಾಗುವುದು ‘ನವರತ್ನ’ ಚಿತ್ರದ ತಿರುಳು. 

 • thund haikla sahavasa

  Film Review15, Feb 2020, 11:00 AM

  ಚಿತ್ರ ವಿಮರ್ಶೆ: ತುಂಡ್‌ ಹೈಕ್ಳ ಸಾವಾಸ

  ತಂತ್ರಜ್ಞಾನ ಬದಲಾಗಿದೆ. ಜಗತ್ತು ಬದಲಾಗಿದೆ. ಇಂಥಾ ಸಂದರ್ಭದಲ್ಲಿ ಜಟ್ಟ ಗಿರಿರಾಜ್ ಬಹು ವರ್ಷಗಳ ಹಿಂದೆ ಶುರು ಮಾಡಿದ ಸಿನಿಮಾವೊಂದು ಈಗ ತೆರೆಗೆ ಬಂದಿದೆ.