Felicitation  

(Search results - 8)
 • Several sportsperson came together to honour Leander Paes

  OTHER SPORTS17, Feb 2020, 2:08 PM IST

  ದಿಗ್ಗಜರಿಂದ ಲಿಯಾಂಡರ್ ಪೇಸ್‌ಗೆ ಸನ್ಮಾನ

  ‘ಒನ್‌ ಲಾಸ್ಟ್‌ ರೋರ್‌, ನಿಜಕ್ಕೂ ಸ್ಮರಣೀಯವಾಗಿಸಿದ್ದೀರಿ. ನಿಮ್ಮೆಲ್ಲರ ಅಭಿಮಾನಕ್ಕೆ ಧನ್ಯವಾದ. ಬೆಂಗಳೂರು ಓಪನ್‌ ಟೆನಿಸ್‌ ಟೂರ್ನಿಯನ್ನು ಅತ್ಯುತ್ತಮವಾಗಿ ಆಯೋಜಿಸಲಾಗಿದೆ. ತವರಲ್ಲಿ ನಾನಾಡಿದ ಕೊನೆ ಟೂರ್ನಿ ವೇಳೆ ಅಭಿಮಾನಿಗಳು ತೋರಿದ ಪ್ರೀತಿಯನ್ನು ನಾನು ಎಂದಿಗೂ ಮರೆಯುವುದಿಲ್ಲ’ ಎಂದು ಪೇಸ್ ಹೇಳಿದ್ದಾರೆ.

 • Padma

  India26, Jan 2020, 4:41 PM IST

  ಈ ಬಾರಿಯೂ ತೆರೆಮರೆ ಸಾಧಕರಿಗೆ ಗೌರವ!

  ಈ ಹಿಂದೆ ಕರ್ನಾಟಕದ ಸಾಲುಮರದ ತಿಮ್ಮಕ್ಕ, ಸುಕ್ರೀ ಗೌಡ, ಸೂಲಗಿತ್ತಿ ನರಸಮ್ಮ ಸೇರಿದಂತೆ ಸಮಾಜದ ಅಭಿವೃದ್ಧಿಗಾಗಿ ಯಾವುದೇ ಗೌರವ, ಸನ್ಮಾದ ಅಪೇಕ್ಷೆ ಇಲ್ಲದೇ ನಿರಂತರ ಸೇವೆ ಸಲ್ಲಿಸುವವರನ್ನು ಗುರುತಿಸಿ ಪದ್ಮ ಪ್ರಶಸ್ತಿ ನೀಡಲಾಗಿತ್ತು. ಈ ಬಾರಿಯೂ ಹೀಗೇ ತೆರೆಮರೆಯಲ್ಲಿದ್ದುಕೊಂಡೇ ಸೇವೆ ಸಲ್ಲಿಸುತ್ತಿದ್ದ ಸಾಧಕರನ್ನು ಗುರುತಿಸಿರುವ ಸರ್ಕಾರ ಅವರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಿಸಿದೆ. ೀ ಸಾಧಕರ ಪಟ್ಟಿ, ಹಾಗೂ ವಿವರ ಇಲ್ಲಿದೆ ನೋಡಿ

 • dinesh gundu rao

  Politics24, Jan 2020, 6:26 PM IST

  ಕೆಪಿಸಿಸಿ ಅಧ್ಯಕ್ಷರಿಗೆ ಬಿಜೆಪಿ ನಾಯಕ BL ಸಂತೋಷ್ ಸನ್ಮಾನ: ಸುತ್ತೂರು ಶ್ರೀ ಸಾಕ್ಷಿ

  ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಇವರಿಬ್ಬರು ಬೇರೆ-ಬೇರೆ ಪಕ್ಷದ ಪ್ರಮುಖ ನಾಯಕರು. ಒಬ್ಬರಿಗೊಬ್ಬರು ಆರೋಪ-ಪ್ರತ್ಯಾರೋಪಗಳನ್ನ ಮಾಡುವರು. ಆದ್ರೆ, ಇದೀಗ ಅದೇ ಸಂತೋಷ್, ದಿನೇಶ್ ಗುಂಡೂರಾವ್ ಅವರಿಗೆ ಸನ್ಮಾನ ಮಾಡಿದ ಪ್ರಸಂಗ ನಡೆದಿದೆ. 

 • Karnataka State film award 2018
  Video Icon

  Sandalwood19, Jan 2020, 1:25 PM IST

  2018 ರ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ- ವಿಡಿಯೋ!

  ಬೆಂಗಳೂರು (ಜ. 19):  2018 ರ ಕರ್ನಾಟಕ ರಾಜ್ಯ ಪ್ರಶಸ್ತಿ ಪಡೆದ ಕಲಾವಿದರಿಗೆ ಫಿಲ್ಮ್ ಚೇಂಬರ್ ಕಡೆಯಿಂದ ಸನ್ಮಾನ ಸಮಾರಂಭ ಕಾರ್ಯಕ್ರಮ ನೆರವೇರಿದೆ.  ಕಾರ್ಯಕ್ರಮದಲ್ಲಿ ಫಿಲ್ಮ್ ಚೇಂಬರ್ ಅಧ್ಯಕ್ಷ ಜೈ ರಾಜ್ ಹಾಗೂ ಪದಾಧಿಕಾರಿಗಳು,  ರಾಜ್ಯ ಪ್ರಶಸ್ತಿ ಪಡೆದ ಕಲಾವಿದರಾದ ಶ್ರೀನಿವಾಸ ಮೂರ್ತಿ, ಮೇಘನಾ ರಾಜ್, ವೀಣಾ ಸುಂದರ್, ರಾಘವೇಂದ್ರ ರಾಜ್ ಕುಮಾರ್, ಹಾಗೂ ಇತರರು ಕಲಾವಿದರಿಗೆ ಸನ್ಮಾನ ಮಾಡಿದ್ದಾರೆ. 

  ಡಾ.ರಾಜ್‌ಕುಮಾರ್ ಪ್ರಶಸ್ತಿಯನ್ನು ಜೆ.ಕೆ.ಶ್ರೀನಿವಾಸ ಮೂರ್ತಿ ಪಡೆದುಕೊಂಡಿದ್ದಾರೆ. ಪುಟ್ಟಣ್ಣ ಕಣಗಾಲ್ ಪ್ರಶಸ್ತಿಯನ್ನು ಪಿ.ಶೇಷಾದ್ರಿ ಪಡೆದುಕೊಂಡಿದ್ದಾರೆ. 'ಅಮ್ಮನ  ಮನೆ' ಚಿತ್ರಕ್ಕೆ  ರಾಘವೇಂದ್ರ ರಾಜ್‌ಕುಮಾರ್‌ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡಿದ್ದಾರೆ ಹಾಗೂ 'ಇರುವುದೆಲ್ಲವ ಬಿಟ್ಟು' ಚಿತ್ರಕ್ಕೆ ಮೇಘನಾ ರಾಜ್‌ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.  ಇನ್ನು ಅತ್ಯುತ್ತಮ ಪೋಷಕ ನಟನಾಗಿ ಬಾಲಾಜಿ ಮನೋಹರ್  ಹಾಗೂ ಅತ್ಯುತ್ತಮ ಪೋಷಕ ನಟಿಯಾಗಿ ವೀಣಾ ಸುಂದರ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.

 • Bhaskar

  CRIME17, Oct 2019, 10:36 AM IST

  ರೌಡಿಶೀಟರ್‌ ದಂಪತಿಯಿಂದ ಸನ್ಮಾನ ಸ್ವೀಕರಿಸಿದ ಪೊಲೀಸ್‌ ಆಯುಕ್ತರು!

  ರೌಡಿಶೀಟರ್‌ ದಂಪತಿಯಿಂದ ಸನ್ಮಾನ ಸ್ವೀಕರಿಸಿದ ಪೊಲೀಸ್‌ ಆಯುಕ್ತರು!| ರೌಡಿಶೀಟರ್‌ಗಳಾದ ಯಶಸ್ವಿನಿ, ಮಹೇಶ್‌ನಿಂದ ಸನ್ಮಾನ| ಫೋಟೋ ಬಹಿರಂಗ

 • PV Sindhu Asianet News

  Sports9, Oct 2019, 5:14 PM IST

  ಕೇರಳ ದೇವಸ್ಥಾನಕ್ಕೆ ಭೇಟಿ: ಸಾಂಪ್ರದಾಯಿಕ ಲುಕ್ ನಲ್ಲಿ ಕಂಗೊಳಿಸಿದ ಸಿಂಧು

  ಇತ್ತೀಚೆಗಷ್ಟೇ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ ಭಾರತದ ತಾರಾ ಬ್ಯಾಡ್ಮಿಂಟನ್ ಪಟು ಪಿ.ವಿ. ಸಿಂಧು ಅವರನ್ನು ಕೇರಳ ಸರ್ಕಾರ ನಗದು ಬಹುಮಾನ ನೀಡುವ ಮೂಲಕ ಗೌರವಿಸಿದೆ. ದೇವಸ್ಥಾನಕ್ಕೆ ಭೇಟಿ ನೀಡುವಾಗ ಸಿಂಧು ಕೇರಳ ಸಾಂಪ್ರದಾಯಿಕ ಉಡುಗೆ ಸೆಟ್ ಮುಂಡು ತೊಟ್ಟು ಮಿಂಚಿದರು. ರಾಜ್ಯ ಸರ್ಕಾರ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸಿಂಧು ಪಾಲ್ಗೊಂಡಿದ್ದರು. ಈ ವೇಳೆ ಕೇರಳ ಒಲಿಂಪಿಕ್ಸ್ ಅಸೋಸಿಯೇಷನ್ ಅಧ್ಯಕ್ಷ ವಿ. ಸುನಿಲ್ 10 ಲಕ್ಷ ರುಪಾಯಿ ಮೊತ್ತದ ಚೆಕ್ ವಿತರಿಸಿದರು.

 • kohli sehwag new

  SPORTS12, Mar 2019, 9:53 AM IST

  ಕೊಹ್ಲಿ-ಸೆಹ್ವಾಗ್ ಸನ್ಮಾನ ರದ್ದು: ಹುತಾತ್ಮರಿಗೆ ಹಣ

  ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ, ವೀರೇಂದ್ರ ಸೆಹ್ವಾಗ್ ಹಾಗೂ ಗೌತಮ್ ಗಂಭೀರ್‌ಗೆ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮವನ್ನು ರದ್ದುಗೊಳಿಸಿದ ಡೆಲ್ಲಿ ಕ್ರಿಕೆಟ್ ಸಂಸ್ಥೆ, ₹10 ಲಕ್ಷವನ್ನು ದೆಹಲಿಯ ಹುತಾತ್ಮ ಯೋಧರಿಗೆ ನೀಡಲು ನಿರ್ಧರಿಸಿದೆ.

 • BSY

  Bengaluru-Urban1, Feb 2019, 8:19 PM IST

  ಮೋದಿ ಬಜೆಟ್ ಖುಷಿಗೆ ರಾಜ್ಯ ಬಿಜೆಪಿಯಿಂದ ಅಭಿನಂದನಾ ಕಾರ್ಯಕ್ರಮ

   ರಾಜ್ಯ [ಕರ್ನಾಟಕ] ಬಿಜೆಪಿ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.