Eng Vs Wi  

(Search results - 10)
  • <p>Stuart Broad</p>

    Cricket27, Jul 2020, 5:14 PM

    ದಾಖಲೆಯ ಸನಿಹದಲ್ಲಿ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್

    ವಿಂಡೀಸ್ ವಿರುದ್ಧದ ಮೂರನೇ ಹಾಗೂ ನಿರ್ಣಾಯಕ ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನ ಬ್ರಾಡ್ 500 ವಿಕೆಟ್ ಪಡೆಯಲು 9 ವಿಕೆಟ್‌ಗಳ ಅವಶ್ಯಕತೆಯಿತ್ತು. ಮೊದಲ ಇನಿಂಗ್ಸ್‌ನಲ್ಲಿ 6 ವಿಕೆಟ್ ಕಬಳಿಸಿದ್ದ ಬ್ರಾಡ್, ಎರಡನೇ ಇನಿಂಗ್ಸ್‌ನಲ್ಲಿ 2 ವಿಕೆಟ್ ಉರುಳಿಸಿದ್ದಾರೆ. ಈ ಮೂಲಕ 500 ವಿಕೆಟ್‌ ಸರದಾರರ ಕ್ಲಬ್ ಸೇರಲು ಬ್ರಾಡ್‌ಗೆ ಇನ್ನೊಂದು ವಿಕೆಟ್‌ನ ಅವಶ್ಯಕತೆಯಿದೆ.

  • <p>England vs West Indies</p>

    Cricket27, Jul 2020, 7:58 AM

    ಸ್ಟುವರ್ಟ್ ಬ್ರಾಡ್ ಅಬ್ಬರ ಸೋಲಿನ ಸುಳಿಯಲ್ಲಿ ವಿಂಡೀಸ್

    ಮೊದಲ ಇನಿಂಗ್ಸ್‌ನಲ್ಲಿ ವೇಗಿ ಸ್ಟುವರ್ಟ್‌ ಬ್ರಾಡ್‌ (6-31) ಮಾರಕ ಬೌಲಿಂಗ್‌ ದಾಳಿಗೆ ತತ್ತರಿಸಿದ ಪ್ರವಾಸಿ ವೆಸ್ಟ್‌ ಇಂಡೀಸ್‌, ಇಂಗ್ಲೆಂಡ್‌ ವಿರುದ್ಧದ 3ನೇ ಹಾಗೂ ನಿರ್ಣಾಯಕ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಹಿನ್ನಡೆ ಅನುಭವಿಸಿದೆ. 3ನೇ ದಿನವಾದ ಭಾನುವಾರ 6 ವಿಕೆಟ್‌ಗೆ 137 ರನ್‌ಗಳಿಂದ ಇನ್ನಿಂಗ್ಸ್‌ ಮುಂದುವರಿಸಿದ ವಿಂಡೀಸ್‌ 197 ರನ್‌ಗಳಿಗೆ ಆಲೌಟ್‌ ಆಯಿತು. ನಾಯಕ ಹೋಲ್ಡರ್‌ (46) ಗರಿಷ್ಠ ಸ್ಕೋರರ್‌ ಎನಿಸಿದರು. 

  • <p>Ollie Pope</p>

    Cricket25, Jul 2020, 9:08 AM

    3ನೇ ಟೆಸ್ಟ್‌: ಇಂಗ್ಲೆಂಡ್‌ಗೆ ಪೋಪ್, ಬಟ್ಲರ್ ಅರ್ಧಶತಕದ ಆಸರೆ

    ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಇಂಗ್ಲೆಂಡ್ ಆರಂಭದಲ್ಲೇ ಆಘಾತ ಅನುಭವಿಸಿತು. ಎರಡನೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿದ್ದ ಡೋಮಿನಿಕ್ ಸಿಬ್ಲಿ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರು. ಕೀಮರ್ ರೋಚ್ ವಿಂಡೀಸ್ ಪಾಳಯಕ್ಕೆ ಮೊದಲ ಯಶಸ್ಸು ದಕ್ಕಿಸಿಕೊಟ್ಟರು

  • Cricket24, Jul 2020, 3:44 PM

    ನಿರ್ಣಾಯಕ ಟೆಸ್ಟ್‌ನಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ಫೀಲ್ಡಿಂಗ್ ಆಯ್ಕೆ

    ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು ವೆಸ್ಟ್ ಇಂಡೀಸ್ ಗೆದ್ದುಕೊಂಡಿತ್ತು. ಈ ಮೂಲಕ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿತ್ತು. ಇದಾದ ಬಳಿಕ ಮ್ಯಾಂಚೆಸ್ಟರ್‌ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ರೋಚಕ ಗೆಲುವು ದಾಖಲಿಸುವ ಮೂಲಕ ಸರಣಿ ಸಮ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

  • <p>jofra archer</p>

    Cricket24, Jul 2020, 11:20 AM

    ಐತಿಹಾಸಿಕ ಟೆಸ್ಟ್ ಸರಣಿ ಗೆಲುವಿನ ಮೇಲೆ ಕಣ್ಣಿಟ್ಟ ಕೆರಿಬಿಯನ್ನರು

    ಮೊದಲ ಟೆಸ್ಟ್‌ನಲ್ಲಿ ವಿಂಡೀಸ್‌ 4 ವಿಕೆಟ್‌ಗಳ ಗೆಲುವು ಸಾಧಿಸಿದ್ದರೆ, 2ನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ 113 ರನ್‌ಗಳ ಜಯ ಪಡೆದಿತ್ತು. ಹೀಗಾಗಿ 3 ಪಂದ್ಯಗಳ ಸರಣಿ 1-1 ರಿಂದ ಸಮಬಲವಾಗಿದೆ. 

  • Cricket23, Jul 2020, 9:03 AM

    ನಾನು ಜನಾಂಗೀಯ ನಿಂದನೆ ಎದುರಿಸಿದ್ದೇನೆಂದ ಇಂಗ್ಲೆಂಡ್ ಮಾರಕ ವೇಗಿ..!

    ಸಾಮಾಜಿಕ ಜಾಲತಾಣಗಳಲ್ಲಿ ತಮ್ಮನ್ನು ನಿಂದಿಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿಗೆ ದೂರು ನೀಡುವುದಾಗಿ ಆರ್ಚರ್‌ ತಿಳಿಸಿದ್ದಾರೆ.

  • broad

    Cricket30, Jun 2020, 6:35 PM

    ಮನೋ​ವೈ​ದ್ಯರ ಮೊರೆ ಹೋದ ವೇಗಿ ಸ್ಟುವರ್ಟ್ ಬ್ರಾಡ್‌!

    ಮಾರ್ಚ್‌ ಬಳಿಕ ಇದೇ ಮೊದಲ ಬಾರಿಗೆ ಕ್ರಿಕೆಟ್ ಚಟುವಟಿಕೆಗಳು ಗರಿಗೆದರಿವೆ. ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿ ಜುಲೈ 08ರಿಂದ ಆರಂಭವಾಗಲಿದೆ. ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ಬಳಿಕ ನಡೆಯುತ್ತಿರುವ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿ ಇದಾಗಿದ್ದು, ಕ್ರೀಡಾಭಿಮಾನಿಗಳ ಚಿತ್ತ ಈ ಸರಣಿಯತ್ತ ನೆಟ್ಟಿದೆ. ಖಾಲಿ ಮೈದಾನದಲ್ಲಿ ಸರಣಿ ನಡೆಯಲಿದೆ.

  • england team

    World Cup14, Jun 2019, 6:36 PM

    ಪೂರನ್‌ ಏಕಾಂಗಿ ಹೋರಾಟ; ಇಂಗ್ಲೆಂಡ್‌ಗೆ ಸುಲಭ ಗುರಿ

    ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬ್ಯಾಟ್ ಮಾಡಲು ವೆಸ್ಟ್ ಇಂಡೀಸ್ ತಂಡವನ್ನು ಆಹ್ವಾನಿಸಿತು. ಬ್ಯಾಟಿಂಗ್ ಆರಂಭಿಸಿದ ಕೆರಿಬಿಯನ್ ಪಡೆ ಮತ್ತೊಮ್ಮೆ ಉತ್ತಮ ಆರಂಭ ಪಡೆಯಲು ವಿಫಲವಾಯಿತು.

  • ನ್ಯೂಜಿಲೆಂಡ್ Vs ಭಾರತ

    World Cup14, Jun 2019, 11:09 AM

    ವಿಶ್ವಕಪ್ ಟೂರ್ನಿಯಲ್ಲಿಂದು ಗೇಲ್‌ vs ಆರ್ಚರ್‌ ಫೈಟ್‌!

    ಈ ವಿಶ್ವಕಪ್‌ನಲ್ಲಿ ಆರ್ಚರ್‌ ದಾಳಿ ಎದುರಿಸುವುದು ಎದುರಾಳಿಗಳಿಗೆ ಬೆಂಕಿಯುಂಡೆಗಳನ್ನು ಎದುರಿಸಿದಂತಾಗಿದೆ. ಪ್ರಚಂಡ ಲಯದಲ್ಲಿರುವ ಆರ್ಚರ್‌ಗೆ ಮಾರ್ಕ್ ವುಡ್‌ ಹಾಗೂ ಲಿಯಾಮ್‌ ಪ್ಲಂಕೆಟ್‌ರಿಂದ ಉತ್ತಮ ಬೆಂಬಲ ಸಿಗಲಿದೆ. ಗೇಲ್‌ ಕಟ್ಟಿಹಾಕಿದರೆ ಪಂದ್ಯ ಗೆದ್ದಂತೆ ಎಂದು ಇಂಗ್ಲೆಂಡ್‌ ಭಾವಿಸಿದರೆ ಸೋಲು ಖಚಿತ.