District Incharge  

(Search results - 11)
 • <p>ST Somashekar</p>

  Politics16, May 2020, 5:35 PM

  ಕೊರೋನಾ ಮುಕ್ತ ಮೈಸೂರು: ಅಚ್ಚರಿಗೆ ಕಾರಣವಾಯ್ತು ಜಿಲ್ಲಾ ಉಸ್ತುವಾರಿ ಸಚಿವರ ನಡೆ....

  ಅರಮನೆ ನಗರಿ ಮೈಸೂರು ಜಿಲ್ಲೆ ಕೊರೋನಾ ಮುಕ್ತ ಜಿಲ್ಲೆಯಾಗಿದೆ. ಮೈಸೂರಿನಲ್ಲಿ ಇವತ್ತಿನ ಮಟ್ಟಿಗೆ ಯಾವುದೇ ಕೊರೋನಾ ಪಾಸಿಟಿವ್ ಇಲ್ಲ. ಶರವೇಗದಲ್ಲಿ ಹಬ್ಬಿ ಅಷ್ಟೇ ಬೇಗ ಜಿಲ್ಲೆಯಿಂದ ಮಾಯವಾಗಿದ್ದು, ಎಲ್ಲರಲ್ಲಿ ಸಂತಸ ಮೂಡಿಸಿದೆ. ಉಸ್ತುವಾರಿ ಸಚಿವ ಎಸ್‌ಟಿ ಸೋಮಶೇಖರ್ ಇಂದು (ಶನಿವಾರ) ಬೆಳಗ್ಗೆ ಚಾಮುಂಡಿ ಬೆಟ್ಟಕ್ಕೆ ತೆರಳಿ ಶಕ್ತಿದೇವತೆ ಚಾಮುಂಡಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಿದರು. ಅಷ್ಟೇ ಅಲ್ಲದೇ ವಿವಿಧ ಸಮುದಾಯದ ಮುಖಂಡನ್ನು ಭೇಟಿ ಮಾಡಿರುವುದು ಅಚ್ಚರಿಗೆ ಕಾರಣವಾಗಿದೆ.

 • undefined

  Karnataka Districts12, Apr 2020, 9:07 AM

  ಬಳ್ಳಾರಿ ಜಿಲ್ಲಾ ಉಸ್ತುವಾರಿ ಹೊತ್ತ ಆನಂದ ಸಿಂಗ್‌ಗೆ ದೊಡ್ಡ ಸವಾಲು!

  ಭಾರೀ ವಿರೋಧದ ನಡುವೆ ಗಣಿನಾಡು ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಕೊನೆಗೂ ಹೊಸಪೇಟೆ ಶಾಸಕ ಅರಣ್ಯ ಸಚಿವ ಆನಂದ ಸಿಂಗ್‌ಗೆ ದಕ್ಕಿದ್ದು, ರೆಡ್ಡಿ ಮತ್ತು ಶ್ರೀರಾಮುಲು ಬಣವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೊರೋನಾ ಸಂಕಷ್ಟ ಎದುರಿಸುವುದು ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ.
   

 • S T Somashekar mysore chamundi hills

  Karnataka Districts10, Apr 2020, 3:22 PM

  'ತಾಯಿ ಚಾಮುಂಡೇಶ್ವರಿ ಕೃಪೆಯಿಂದ ಮೈಸೂರು ಶೀಘ್ರ ಕೊರೋನಾ ಮುಕ್ತವಾಗಲಿ'

  ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಿದ್ದಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ  ಧನ್ಯವಾದಗಳು, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಿಸಿರುವುದರಿಂದ ನನ್ನ ಜವಾಬ್ದಾರಿ ಹೆಚ್ಚಾಗಿದೆ. ಅವರ ನಂಬಿಕೆಗೆ ಚ್ಯುತಿ ಬಾರದಂತೆ ಕರ್ತವ್ಯ ನಿರ್ವಹಿಸುತ್ತೇನೆಂಬ ವಿಶ್ವಾಸ ನನಗಿದೆ ಎಂದು ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ. 
   

 • Yediyurappa

  Politics9, Feb 2020, 1:05 PM

  ಖಾತೆ ಕ್ಯಾತೆ ನಂತರ ಸಿಎಂ ಯಡಿಯೂರಪ್ಪಗೆ ಇನ್ನೊಂದು ಅಗ್ನಿ ಪರೀಕ್ಷೆ!

  ಖಾತೆ ಕ್ಯಾತೆ ನಂತರ ಜಿಲ್ಲಾ ಉಸ್ತುವಾರಿ ಸವಾಲು| ನೂತನ ಸಚಿವರಿಗೆ ಖಾತೆ ಹಂಚಿಕೆ ಬಳಿಕ ಸಿಎಂಗೆ ಇನ್ನೊಂದು ಪರೀಕ್ಷೆ| ಜಿಲ್ಲಾ ಉಸ್ತುವಾರಿ ಹೊಣೆ ನೀಡಲು ವಲಸಿಗರ ಪಟ್ಟು

 • 17 disqualified mla s join BJP
  Video Icon

  Politics30, Jan 2020, 12:18 PM

  ಸಂಪುಟ ವಿಸ್ತರಣೆ: ನಿಮ್ಮ ಜಿಲ್ಲೆಯ ಉಸ್ತುವಾರಿ ಯಾರ್ಯಾರಿಗೆ? ಇಲ್ಲಿದೆ ಚಿತ್ರಣ

  ಸಚಿವ ಸಂಪುಟ ವಿಸ್ತರಣೆ ಬಳಿಕ ಬಿ.ಎಸ್. ಯಡಿಯೂರಪ್ಪಗೆ ಮತ್ತೊಂದು ತಲೆನೋವು; ಜಿಲ್ಲಾ ಉಸ್ತುವಾರಿ ಮಂತ್ರಿ ನೇಮಕ ಸುಲಭವಲ್ಲ; ಯಾವ್ಯಾವ ಜಿಲ್ಲೆಯಿಂದ ಯಾರ್ಯಾರು ರೇಸ್‌ನಲ್ಲಿದ್ದಾರೆ?

 • laxman savadi

  Karnataka Districts2, Jan 2020, 7:51 AM

  ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿಯನ್ನ ಹುಡುಕಿಕೊಡಿ!

  ಜಿಲ್ಲೆಯಲ್ಲಿ ಐದು ವರ್ಷಗಳ ಬಳಿಕ ಆನೆಗೊಂದಿ ಉತ್ಸವ ನಡೆಯುತ್ತಿದೆ. ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವಕ್ಕೆ ದಿನಗಣನೆ ಪ್ರಾರಂಭವಾಗಿದೆ. ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರು ಎರಡನೇ ಬೆಳೆಗೆ ನೀರು ಬಿಡುವ ನಿರ್ಧಾರವನ್ನು ಜಾತಕಪಕ್ಷಿಯಂತೆ ಕಾಯುತ್ತಿದ್ದಾರೆ.
   

 • undefined

  Ramanagara9, Oct 2019, 3:31 PM

  ರಾಮ​ನ​ಗರಕ್ಕೆ ಇನ್ನೂ ಭೇಟಿ ನೀಡದ ಜಿಲ್ಲಾ ಉಸ್ತುವಾರಿ ಸಚಿವ

  ರೇಷ್ಮೆ ನಗರಿ ರಾಮ​ನ​ಗರ ಜಿಲ್ಲೆಗೆ ನೂತನ ಜಿಲ್ಲಾ ಉಸ್ತು​ವಾರಿ ಸಚಿ​ವ​ರಾಗಿ ನೇಮ​ಕ​ಗೊಂಡು 23 ದಿನ​ಗಳು ಕಳೆ​ದರೂ ಉಪ​ಮು​ಖ್ಯ​ಮಂತ್ರಿ ಸಿ.ಎನ್‌. ಅ​ಶ್ವತ್ಥ ನಾರಾ​ಯಣ ಅವ​ರಿಗೆ ಜಿಲ್ಲೆಗೆ ಭೇಟಿ ನೀಡಲು ಇನ್ನೂ ಸಮಯ ಸಿಕ್ಕಿಲ್ಲ.
   

 • B_S_Yeddyurappa's_wait_continues

  NEWS2, Sep 2019, 7:40 AM

  ಉಸ್ತುವಾರಿ ನೇಮಕ ಮತ್ತಷ್ಟು ವಿಳಂಬ? ಬೆಂಗಳೂರು, ಬೆಳಗಾವಿ ಯಾರಿಗೆ ?

  ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ತಿಂಗಳು ಕಳೆದ ಬಳಿಕ ಸಚಿವ ನೇಮಕಾತಿ ಮಾಡಲಾಗಿದ್ದು ಇದೀಗ ಉಸ್ತುವಾರಿ ಸಚಿವರ ನೇಮಕ ಮತ್ತಷ್ಟು ವಿಳಂಭವಾಗುವ ಸಾಧ್ಯತೆ ಇದೆ. 

 • ediyurappa ministers deptment allotted
  Video Icon

  Karnataka Districts29, Aug 2019, 5:00 PM

  ಖಾತೆ ಹಂಚಿಕೆ ಆಯ್ತು.. ನಿಮ್ಮ ನಿಮ್ಮ ಜಿಲ್ಲೆಗೆ ಉಸ್ತುವಾರಿ ಸಚಿವರು ಫಿಕ್ಸ್

  ಖಾತೆ ಹಂಚಿಕೆಯಾದ ಮೇಲೆ ಇದೀಗ ಜಿಲ್ಲಾ ಉಸ್ತುವಾರಿ ಹೊಣೆಗಾರಿಕೆ ನೀಡುವ ಸವಾಲು  ಎದುರಾಗಿದೆ. ಕೇವಲ 17 ಜನ ಸಚಿವರು ಇರುವುದರಿಂದ  ಹಿರಿಯ ಸಚಿವರಿಗೆ ಎರಡೆರಡು ಜಿಲ್ಲೆ ಉಸ್ತುವಾರಿ ವಹಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಹಾಗಾದರೆ ಯಾರಿಗೆ ಯಾವ ಜಿಲ್ಲೆ ಉಸ್ತುವಾರಿ ನೀಡಲಾಗುತ್ತದೆ?

 • undefined

  Karnataka Districts23, Aug 2019, 9:49 AM

  ಸಚಿವ ಆರ್‌.ಅಶೋಕ್‌ ಹೆಗಲಿಗೆ ಮಂಡ್ಯ ಜಿಲ್ಲಾ ಉಸ್ತುವಾರಿ ಹೊಣೆ?

  ಒಕ್ಕಲಿಗರ ಕೋಟೆ ಭೇದಿಸಲು ಬಿಜೆಪಿಯಿಂದ ಒಕ್ಕಲಿಗ ಅಸ್ತ್ರ ಪ್ರಯೋಗ ಮಾಡುವುದು ಮೊದಲ ತಂತ್ರ. ಅಲ್ಲದೇ ವಿಧಾನ ಸಭೆಯಲ್ಲಿ ಬಿಜೆಪಿ ಖಾತೆ ತೆರೆಯದ ಮಂಡ್ಯದಲ್ಲಿ ಕಮಲ ಅರಳಿಸುವ ಗೇಮ್ ಪ್ಲಾನ್‌ ಬಿಜೆಪಿ ಬತ್ತಳಕೆಯಲ್ಲಿದೆ ಎಂದು ಹೇಳಲಾಗಿದೆ. ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾಗಿ ಆರ್‌.ಅಶೋಕ್‌ ಅವರನ್ನು ನೇಮಕ ಮಾಡಲು ಬಿಜೆಪಿ ಸಿದ್ಧತೆ ಮಾಡಿಕೊಂಡಿದೆ ಎಂದು ಗೊತ್ತಾಗಿದೆ.

 • HDK- Siddu

  state12, Jan 2019, 5:54 PM

  ಈ ಜಿಲ್ಲಾ ಉಸ್ತುವಾರಿ ಸಚಿವರು ಬದಲಾಗ್ತಾರಾ?

  ತಮ್ಮನ್ನು ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದಿಂದ ಕೈ ಬಿಡಲಾಗುತ್ತದೆ ಎಂಬ ಊಹಾಪೋಹಗಳ ಕುರಿತು ತೋಟಗಾರಿಕಾ ಸಚಿವ ಎಂ.ಸಿ. ಮನಗೂಳಿ ಪ್ರತಿಕ್ರಿಯೆ ನೀಡಿದ್ದಾರೆ. ಉಸ್ತುವಾರಿ ಬದಲಾವಣೆ ವಿಚಾರ ತಮಗೇನೂ ಗೊತ್ತಿಲ್ಲ ಎಂದಿರುವ ಸಚಿವರು, ಸದ್ಯಕ್ಕೆ ತಾವೇ ಉಸ್ತುವಾರಿ ಸಚಿವ ಎಂಬುದನ್ನಷ್ಟೇ ಹೇಳಬಲ್ಲೇ ಎಂದು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ.