Dear Sathya  

(Search results - 3)
 • <p>archana kottige</p>

  Interviews17, Aug 2020, 5:22 PM

  'ಡಿಯರ್ ಸತ್ಯ' ಚಿತ್ರದ ನಟಿ ಅರ್ಚನಾ ಕೊಟ್ಟಿಗೆ ಜೊತೆ ಮಾತುಕತೆ!

  ಬಿಗ್ ಬಾಸ್‌ ಖ್ಯಾತಿಯ ಸಂತೋಷ್‌ 'ಡಿಯರ್ ಸತ್ಯ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಮತ್ತೊಮ್ಮೆ ಕಮ್‌ಬ್ಯಾಕ್‌ ಮಾಡುತ್ತಿದ್ದಾರೆ. ಚಿತ್ರದಲ್ಲಿ ಸಂತೋಷ್‌ಗೆ ಜೋಡಿಯಾಗಿ ಅಭಿನಯಿಸಿರುವ ಅರ್ಚನಾ ಕೊಟ್ಟಿಗೆ ಜೊತೆ ನಡೆದ ಸಣ್ಣ ಮಾತಕತೆ ಇದು...
   

 • <p>Dear Sathya&nbsp;</p>

  Sandalwood4, Aug 2020, 1:01 PM

  ಸ್ವಾತಂತ್ರ್ಯೋತ್ಸವದಂದು ಬಿಗ್ ಬಾಸ್‌ ಸಂತೋಷ್‌ 'ಡಿಯರ್ ಸತ್ಯ' ಟೀಸರ್‌ ರಿಲೀಸ್!

  ಪರ್ಪಲ್ ರಾಕ್ ಎಂಟರ್ಟೈನರ್ಸ್‌ ಹಾಗೂ ಮಿಂಟರ್‌ ಬ್ರಿಡ್ಜ್‌ ಸ್ಟುಡಿಯೋ ನಿರ್ಮಾಣದ 'ಡಿಯರ್ ಸತ್ಯ' ಟೀಸರ್‌ ರಿಲೀಸ್‌ಗೆ ಸಕಲ ಸಿದ್ಧತೆಗಳು ನಡೆಯುತ್ತಿವೆ.

  ಬಿಗ್ ಬಾಸ್‌ ಸೀಸನ್‌-2 ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ ನಟ ಆರ್ಯನ್‌ ಸಂತೋಷನ್‌ ಅಭಿನಯನದ 'ಡಿಯರ್ ಸತ್ಯ' ಚಿತ್ರದ ಟೀಸರ್‌ ಆಗಸ್ಟ್‌ 15ಕ್ಕೆ ಬಿಡುಗಡೆಯಾಗಲಿದೆ.  ನಟ ಸಂತೋಷ್‌ಗೆ ಜೋಡಿಯಾಗಿ ಅರ್ಚನಾ ಕೊಟ್ಟಿಗೆ ಅಭಿನಯಿಸಿದ್ದಾರೆ.

  ಶಿವಗಣೇಶ್‌ ಆ್ಯಕ್ಷನ್ ಕಟ್‌ಗೆ, ವಿನೋದ್ ಭಾರತಿ ಛಾಯಾಗ್ರಹಣ ಮಾಡಿದ್ದಾರೆ. ಚಿತ್ರದ ವಿಶೇಷತೆಯೇ ಶ್ರೀಧರ್‌ ಅವರು ಸಂಗೀತ ಸಂಯೋಜನ ಮಾಡಿರುವುದು. ಸುರೇಶ್ ಆರ್ಮುಗಂ ಸಂಕಲನ ಹಾಗೂ ಕಲೆ ಮತ್ತು ನೃತ್ಯ ಸಂಯೋಜನೆ ಮಾಡಿದ್ದಾರೆ.. 

  ನಟಿ ಅರ್ಚನಾ ಅನೇಕ ಕಾರ್ಪೋರೇಟ್‌ ಜಾಹೀರಾತುಗಳು ಮತ್ತು ಮುದ್ರಣ ಜಾಹೀರಾತುಗಳಲ್ಲಿ ಕಾಣಿಸಿಕೊಂಡವರು. ಅನೇಕ ಕಿರುಚಿತ್ರ ಮತ್ತು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. 'ನೂರು ಜನ್ಮಕೂ' ಚಿತ್ರದ ಮೂಲಕ ನಾಯಕನಾದ ಸಂತೋಷ 'ಡಿಯರ್‌ ಸತ್ಯ' ಚಿತ್ರದ ಮೂಲಕ ಮತ್ತೆ ಕಮ್‌ಬ್ಯಾಕ್‌ ಮಾಡುತ್ತಿದ್ದಾರೆ. 

  ಚಿತ್ರದಲ್ಲಿ ಅರುಣಾ ಬಾಲರಾಜ್‌, ಅಶ್ವಿನ್ ರಾವ್‌ ಪಲ್ಲಕ್ಕಿ, ಅರವಿಂದ್ ರಾವ್, ಅಪ್ಪಣ್ಣ, ಗುರುರಾಜ್‌ ಹೊಸಕೋಟೆ ಹಾಗೂ ಆದರ್ಶ್‌ ಚಂದ್ರಕರ್‌ ಅಭಿನಯಿಸಿದ್ದಾರೆ. ಚಿತ್ರತಂಡ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಆರಂಭಿಸಿದ್ದು, ಸದ್ಯಕ್ಕೆ ಟೀಸರ್‌ ರಿಲೀಸ್‌ ಬಿಡುಗಡೆ ಮಾಡಲಿದೆ.

 • undefined

  Sandalwood2, May 2020, 3:02 PM

  'Dear Sathya'ಚಿತ್ರದಲ್ಲಿ ಮಿಂಚುತ್ತಿರುವ ರಂಗಭೂಮಿ ಕಲಾವಿದೆ ಅರ್ಚನಾ!

  'ಕಿರಿಕ್‌ ಪಾರ್ಟಿ' ಕಾಮಿಡಿ ಶೋ ಹಾಗೂ ಕಲರ್ಸ್‌ ಕನ್ನಡ ಅನುಬಂಧ ರೆಡ್‌ ಕಾರ್ಪೆಟ್‌ನಲ್ಲಿ ನಿರೂಪಕಿಯಾಗಿ 'ಅರಣ್ಯ ಕಂಡ' ಚಿತ್ರದ ಮೂಲಕ ನಾಯಕಿಯಾಗಿ, ಕನ್ನಡ ಚಿತ್ರಂಗಕ್ಕೆ ಕಾಲಿಟ್ಟ ಮಾಡಿರುವ ಅರ್ಚನಾ ಬಗ್ಗೆ ಇಂಟ್ರೆಸ್ಟಿಂಗ್ ವಿಚಾರಗಳು ಇಲ್ಲಿವೆ ನೋಡಿ....