Cyclone Kyarr  

(Search results - 18)
 • Fish

  state3, Nov 2019, 9:07 AM IST

  3 ಬಂಗುಡೆಗೆ ನೂರು ರೂ.; ಚಂಡಮಾರುತದ ಎಫೆಕ್ಟ್‌ಗೆ ಮೀನು ದುಬಾರಿ..!

  ಕ್ಯಾರ್ ಚಂಡಮಾರುತ ಹಾಗೂ ಮಹಾ ಚಂಡ ಮಾರುತದ ಪರಿಣಾಮ ಸೀ ಫೂಡ್ ಕಾಸ್ಟ್ಲಿಯಾಗಿದೆ. ಚಂಡ ಮಾರುತದ ಪರಿಣಾಮ ಮೀನು ಪ್ರಿಯರಿಗೆ, ಹೊಟೇಲ್ ಮಾಲೀಕರಿಗೆ ಮೀನು ದುಬಾರಿಯಾಗಿದೆ. ಮೀನುಗಾರಿಕೆ ತೆರಳಲು ಅನುಮತಿ ಇರದ ಕಾರಣ ಮೀನುಗಾರಿಕಾ ವಹಿವಾಟು ವಲಯದಲ್ಲಿ ಭಾರಿ ಹಿನ್ನೆಡೆಯಾಗಿದೆ.

 • తాను బోటును పట్టుకొనేవరకు తన భర్త సుబ్రమణ్యం తనను నీళ్ల నుండి పైకి లేపాడని ఆమె చెప్పారు. తాను బోటు పట్టుకొన్న తర్వాతే ఆయన తనను వదిలేశాడని ఆమె కన్నీంటి పర్యంత మయ్యారు.

  Dakshina Kannada31, Oct 2019, 4:27 PM IST

  ಮಂಗಳೂರು: 'ಮಹಾ' ಅಬ್ಬರಕ್ಕೆ ಸಿಲುಕಿದ ಮೀನುಗಾರಿಕಾ ದೋಣಿ

  ಕರಾವಳಿಯಲ್ಲಿ ಮಹಾ ಸೈಕ್ಲೋನ್ ಪ್ರಭಾವ ಕಾಣಿಸಿಕೊಳ್ಳುತ್ತಿದ್ದು, ಅಲೆಗಳ ಅಬ್ಬರ ಹೆಚ್ಚಾಗಿದೆ. ಕಾಸರಗೋಡು ಕಡಲಿನ ಭಾಗದಲ್ಲಿ ಮೀನುಗಾರಿಕಾ ದೋಣಿಯೊಂದು ಅಲೆಗಳ ದಾಳಿಗೆ ಸಿಲುಕಿದೆ.

 • hikka cyclone

  Dakshina Kannada31, Oct 2019, 12:46 PM IST

  ‘ಕ್ಯಾರ್‌’ ಆಯ್ತು, ಈಗ ‘ಮಹಾ’ ಸೈಕ್ಲೋನ್‌ ಭೀತಿ!

  ‘ಕ್ಯಾರ್‌’ ಚಂಡಮಾರುತದಿಂದ ನಲುಗಿದ ಕರಾವಳಿಯಲ್ಲಿ ಇದೀಗ ಮತ್ತೆ ಇನ್ನೊಂದು ಚಂಡಮಾರುತದ ಪ್ರಭಾವ ಕಾಣಿಸಿಕೊಳ್ಳುವ ಸಾಧ್ಯತೆಗಳು ಕಂಡುಬಂದಿವೆ. ಆದರೆ ಕರಾವಳಿಯಲ್ಲಿ ‘ಕ್ಯಾರ್‌’ನಷ್ಟುದೊಡ್ಡ ಮಟ್ಟದ ಪ್ರಭಾವವನ್ನು ಈ ಚಂಡಮಾರುತ ಬೀರುವ ಸಾಧ್ಯತೆ ಇಲ್ಲದಿದ್ದರೂ ಚಂಡಮಾರುತದ ಚಲನೆ ಮತ್ತು ತೀವ್ರತೆಯ ಮೇಲೆ ಆಧಾರಿತವಾಗಿರುತ್ತದೆ ಎಂದು ಹವಾಮಾನ ಇಲಾಖೆ ಮೂಲಗಳು ತಿಳಿಸಿವೆ.

 • Vayu cyclone

  Dakshina Kannada27, Oct 2019, 11:06 AM IST

  ‘ಕ್ಯಾರ್‌’ ಚಂಡಮಾರುತಕ್ಕೆ 2ನೇ ದಿನವೂ ಕರಾವಳಿ ತತ್ತರ

  ಅರಬ್ಬಿ ಸಮುದ್ರದಲ್ಲಿ ‘ಕ್ಯಾರ್‌’ ಚಂಡಮಾರುತದ ಪ್ರಭಾವದಿಂದ ಕರಾವಳಿ ಪ್ರದೇಶ 2ನೇ ದಿನವಾದ ಶನಿವಾರವೂ ತತ್ತರಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನವಿಡಿ ಮಳೆ- ಚಳಿಗಾಳಿಯ ವಾತಾವರಣವಿತ್ತು. ಇದೀಗ ಚಂಡಮಾರುತ ಒಮನ್‌ ದೇಶದತ್ತ ತೆರಳಿರುವುದರಿಂದ ಕರಾವಳಿಯಲ್ಲಿ ಮುಂದಿನ ದಿನಗಳಲ್ಲಿ ಮಳೆ ಇಳಿಮುಖವಾಗುವ ಸಾಧ್ಯತೆಯಿದೆ.

 • rain

  Udupi27, Oct 2019, 9:59 AM IST

  ಉಡುಪಿ ಜಿಲ್ಲೆಯಲ್ಲಿ ಇಂದೂ ರೆಡ್‌ ಅಲರ್ಟ್‌

  ಅರಬ್ಬಿ ಸಮುದ್ರದಲ್ಲಿ ಎದ್ದಿರುವ ಕ್ಯಾರ್ ಚಂಡಮಾರುತ ಉಡುಪಿ ಜಿಲ್ಲೆಯಲ್ಲಿ ಭಾರಿ ಪ್ರಮಾಣದಲ್ಲಿ ಹಾನಿಗೆ ಕಾರಣವಾಗಿದೆ. ಸುಮಾರು 30ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ, ಸಾಕಷ್ಟುಮರಗಳು ಬುಡಮೇಲಾಗಿವೆ, ವಿದ್ಯುತ್‌ ಕಂಬಗಳೂ ಉರಳಿವೆ. ದೀಪಾವಳಿಯ ಪ್ರಯುಕ್ತ ಕೃಷ್ಣಮಠದ ರಥಬೀದಿಯಲ್ಲಿ ನೂರಾರು ಮಂದಿ ಹೂ- ಹಣ್ಣು ವ್ಯಾಪಾರಿಗಳಿಗೆ, ಮಣ್ಣಿನ ಹಣತೆ ಮಾರುವವರಿಗೆ ಮಳೆಯಿಂದ ತೊಂದರೆಯಾಯಿತು.

 • Kyarr cyclone

  News27, Oct 2019, 8:50 AM IST

  ಒಮಾನ್ ನತ್ತ ತಿರುಗಿದ ಕ್ಯಾರ್; ಮೀನುಗಾರರಿಗೆ ಐಎಂಡಿ ಸೂಚನೆ

  ಕರ್ನಾಟಕ, ಗೋವಾ ಕರಾವಳಿಯಲ್ಲಿ ಭಾರಿ ಮಳೆ ಸುರಿಸುತ್ತಿರುವ ‘ಕ್ಯಾರ್’ ಚಂಡಮಾರುತ ಪಶ್ಚಿಮ ಸಮುದ್ರದಿಂದ ದೂರ ಚಲಿಸುತ್ತಿದ್ದು, ಈ ಭಾಗಗಳಲ್ಲಿ ಮಳೆಯ ಪ್ರಮಾಣ ತಗ್ಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

 • Kaveri

  Kodagu27, Oct 2019, 8:13 AM IST

  ಕುಶಾಲನಗರ ವ್ಯಾಪ್ತಿಯಲ್ಲಿ ಕಾವೇರಿ ನದಿ ನೀರಿನ ಮಟ್ಟಏರಿಕೆ

  ಕಳೆದ ಕೆಲವು ದಿನಗಳಿಂದ ಜಿಲ್ಲೆಯ ವಿವಿಧೆಡೆ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಕುಶಾಲನಗರ ವ್ಯಾಪ್ತಿಯಲ್ಲಿ ಹರಿಯುತ್ತಿರುವ ಕಾವೇರಿ ನದಿ ನೀರಿನ ಹರಿವಿನಲ್ಲಿ ಏರಿಕೆ ಕಂಡುಬಂದಿದೆ. ಗಡಿ ಭಾಗದ ಕೊಪ್ಪ ಅರಣ್ಯ ತಪಾಸಣೆ ಗೇಟ್‌ ಬಳಿ ನದಿಯಲ್ಲಿ 4 ಮೀಟರ್‌ ಎತ್ತರಕ್ಕೆ ನೀರು ಹರಿಯುತ್ತಿರುವ ದೃಶ್ಯ ಗೋಚರಿಸಿದೆ.
   

 • Fishing

  Uttara Kannada26, Oct 2019, 1:32 PM IST

  ಉಕ್ಕೇರುತ್ತಿರುವ ಸಮುದ್ರ : ಮೀನುಗಾರಿಕೆ ಬಂದ್‌

  ಭಾರೀ ಮಳೆ ಸುರಿಯುತ್ತಿದ್ದು ಸಮುದ್ರದಲ್ಲಿ ಸುಳಿಗಾಳಿ ಹಾಗೂ ಅಲೆಗಳ ಅಬ್ಬರ ಹೆಚ್ಚಿರುವ ಹಿನ್ನೆಲೆಯಲ್ಲಿ ಮೀನುಗಾರಿಕೆ ಬಂದ್ ಮಾಡಲಾಗಿದೆ. 

 • Rain

  Dakshina Kannada26, Oct 2019, 1:16 PM IST

  ಸೈಕ್ಲೋನ್ ಎಫೆಕ್ಟ್: ಕೊಡಗಿನ ಮಳೆಗೆ ಕಂಗಾಲಾದ ಕಾಫಿ ಬೆಳೆಗಾರರು

  ಕೊಡಗಿನಲ್ಲಿ ಸೈಕ್ಲೋನ್ ಕ್ಯಾರ್ ಪ್ರಭಾವ ಮುಂದುವರಿದಿದ್ದು, ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಬಿರುಸಿನ ಮಳೆಯಾಗುತ್ತಿದೆ. ಕೊಡಗಿನಲ್ಲಿ ಮುಂಜಾನೆಯಿಂದ ಮಳೆ ಸುರಿಯುತ್ತಿದ್ದು, ಕಾಫಿ ಬೆಳೆಗಾರರು ಕಂಗಾಲಾಗಿದ್ದಾರೆ.

 • Video Icon

  state26, Oct 2019, 1:03 PM IST

  ಅರಬ್ಬೀ ಸಮುದ್ರದಲ್ಲಿ ಕ್ಯಾರ್ ಹಾವಳಿ; ಅಬ್ಬರಕ್ಕೆ ಬೆಚ್ಚಿಬಿತ್ತು ಕರಾವಳಿ

  ರಾಜ್ಯ ಕರಾವಳಿಗೆ ಕ್ಯಾರ್ ಚಂಡಮಾರುತ ಅಪ್ಪಳಿಸಿದೆ. ಕ್ಯಾರ್ ಅಬ್ಬರಕ್ಕೆ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಜನಜೀವನ ಅಸ್ತವ್ಯಸ್ತವಾಗಿದೆ. ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿರುವ ಹಿನ್ನೆಲೆಯಲ್ಲಿ ಕ್ಯಾರ್ ತೀವ್ರತೆಯೂ ಹೆಚ್ಚಾಗಿದೆ.  ಕರಾವಳಿ ಜಿಲ್ಲೆಗಳಲ್ಲಿ ಸಮುದ್ರ ತಟದಲ್ಲಿರುವ ಮನೆಗಳಿಗೆ ಅಲೆಗಳು ಅಪ್ಪಳಿಸುತ್ತಿವೆ, ಸುಂಟರಗಾಳಿ ಜನರಲ್ಲಿ ಆತಂಕ ಸೃಷ್ಟಿಸಿದೆ, ಒಂದು ಕ್ಷಣ ವಿರಾಮವಿಲ್ಲದೆ ಸುರಿಯುತ್ತಿರುವ ಮಳೆಗೆ ಜನ ಹೈರಾಣಾಗಿದ್ದಾರೆ. ಇಲ್ಲಿದೆ ಮತ್ತಷ್ಟು ವಿವರ...  
   

 • rain

  Shivamogga26, Oct 2019, 11:07 AM IST

  ಮಲೆನಾಡಿನಲ್ಲಿ ಮುಂದುವರಿದ ಜಡಿಮಳೆ : ಶಾಲೆಗಳಿಗೆ ರಜೆ

  ಮಲೆನಾಡು ತಾಲೂಕುಗಳಲ್ಲಿ ಮಳೆಯ ಜೊತೆಗೆ ಶುಕ್ರವಾರದಿಂದ ಗಾಳಿಯೂ ಸೇರಿಕೊಂಡಿದೆ. ಅನೇಕ ಕಡೆ ಅಡಕೆ ಮರಗಳು ಉರುಳಿ ಬಿದ್ದಿವೆ.   ನದಿ ಮತ್ತು ಹಳ್ಳಗಳಲ್ಲಿ ಸ್ವಲ್ಪ ಹೆಚ್ಚಾಗಿಯೇ ಹರಿಯುತ್ತಿದೆ.

 • Kyarr cyclone

  Dakshina Kannada26, Oct 2019, 7:52 AM IST

  ಕ್ಯಾರ್‌ ಚಂಡಮಾರುತಕ್ಕೆ ಕರಾವಳಿ ತತ್ತರ : ಬಿರುಗಾಳಿ ಸಹಿತ ಭಾರಿ ಮಳೆ

  ರಾಜ್ಯದ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳು ಅಕ್ಷರಶಃ ತತ್ತರಿಸಿವೆ. 40 ರಿಂದ 50 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದ್ದು, ಹತ್ತಾರು ಮನೆಗಳು, ನೂರಾರು ಮರಗಳು ಧರೆಗೆ ಉರುಳಿವೆ.

 • Kyarr cyclone

  Dakshina Kannada25, Oct 2019, 9:32 PM IST

  ಕೆರಳಿದ ಕ್ಯಾರ್: ಕರಾವಳಿ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

  ಮಹಾರಾಷ್ಟ್ರದ ಕೊಂಕಣ ಮತ್ತು ಗೋವಾ ತೀರ ಪ್ರದೇಶಗಳಿಗೆ ಕ್ಯಾರ್ ಚಂಡಮಾರುತ ಅಪ್ಪಳಿಸಿದ್ದು, ಅದು ಕರ್ನಾಟಕದ ಕರಾವಳಿ ಭಾಗಕ್ಕೂ ಪರಿಣಾಮ ಬೀರಿದೆ. ಈ ಹಿನ್ನೆಲೆಯಲ್ಲಿ ಕರಾವಳಿಯ ಕೆಲ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

 • Madikeri

  Kodagu25, Oct 2019, 3:16 PM IST

  ಸೈಕ್ಲೋನ್ ಕ್ಯಾರ್ ಎಫೆಕ್ಟ್: ಎಡೆಬಿಡದ ಮಳೆಗೆ ತತ್ತರಿಸಿದ ಕೊಡಗು

  ಸೈಕ್ಲೋನ್ ಕ್ಯಾರ್ ಪರಿಣಾಮ ಕೊಡಗಿನಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದೆ. ಮುಂಜಾನೆಯಿಂದ ಗಾಳಿ ಮಳೆಯಾಗುತ್ತಿದ್ದು, ಸೈಕ್ಲೋನ್ ಕ್ಯಾರ್‌ಗೆ ಜನ ತತ್ತರಿಸಿದ್ದಾರೆ. ಉಡುಪಿ, ಮಂಗಳೂರು ಸೇರಿ ಕರಾವಳಿ ಭಾಗದಲ್ಲಿಯೂ ಸೈಕ್ಲೋನ್ ಎಫೆಕ್ಟ್ ಕಂಡುಬಂದಿದೆ.

 • Uttara Kannada

  Uttara Kannada25, Oct 2019, 2:51 PM IST

  ಬಿಡದೇ ಕಾಡುತ್ತಿರೋ ವರುಣ: ರಸ್ತೆ ಮೇಲೆ ಬಿದ್ದ ಮರ ತೆರವುಗೊಳಿಸಿದ ಶಾಸಕ

  ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯುತ್ತಿದೆ. ಕ್ಯಾರ್ ಚಂಡ ಮಾರುತದ ಅಬ್ಬರ ಹೆಚ್ಚಾಗಿದ್ದು, ಬಿರುಗಾಳಿ ಸಹಿತ ಭಾರಿ ಮಳೆಯಿಂದ ಜನಜೀವನ ತತ್ತರಿಸಿದೆ. ಉತ್ತರ ಕನ್ನಡ ಕಾರವಾರ, ಅಂಕೋಲ ಸೇರಿದಂತೆ ಹಲವೆಡೆ ಬಿಟ್ಟೂ ಬಿಡದೇ ಸುರಿಯುತ್ತಿರುವ ಮಳೆಯಿಂದ ಅವಘಡಗಳಾಗುತ್ತಿದೆ. ಬೃಹತ್ ಗಾತ್ರದ ಮರಗಳು ರಸ್ತೆಗೆ ಉರುಳಿವೆ. ವಿದ್ಯುತ್ ವ್ಯತ್ಯಯವಾಗಿದೆ.