Competition  

(Search results - 48)
 • Karnataka Districts7, Oct 2019, 10:28 AM IST

  ಮೈಸೂರು: ಐಸ್‌ಕ್ರಿಂ ತಿನ್ನೋ ಸ್ಪರ್ಧೆ, ಮಕ್ಕಳದ್ದೇ ಕಾರುಬಾರು..!

  ಮೈಸೂರು ದಸರಾ ಆಹಾರ ಮೇಳದಲ್ಲಿ ಹಲವು ತರದ ಸ್ಪರ್ಧೆಗಳನ್ನು ನಡೆಸಿದ್ದು, ಮಕ್ಕಳಿಗಾಗಿ ಐಸ್‌ಕ್ರೀಂ ತಿನ್ನುವ ಸ್ಪರ್ಧೆ ನಡೆದಿದೆ. 10 ರಿಂದ 15 ವರ್ಷದ ಮಕ್ಕಳು ಭಾಗವಹಿಸಿದ್ದ ಸ್ಪರ್ಧೆ ನೆರೆದಿದ್ದವರನ್ನು ರಂಜಿಸಿತು.

 • Karnataka Districts6, Oct 2019, 11:11 AM IST

  ಮೈಸೂರು: ಕೇಕ್‌ ಮೆಲ್ಲಲು ಬಾಲಕಿಯರ ಪೈಪೋಟಿ

  ಮೈಸೂರು ದಸರಾ ಪ್ರಯುಕ್ತ ಆಕರ್ಷಕ ಸ್ಪರ್ಧೆಗಳು ನಡೆಯುತ್ತಿದ್ದು, ಆಹಾರ ಮೇಳದಲ್ಲಿ ಕೇಕ್ ತಿನ್ನುವ ಸ್ಪರ್ಧೆ ನಡೆದಿದೆ. ಹೈಸ್ಕೂಲ್ ವಿದ್ಯಾರ್ಥಿನಿಯರೇ ಹೆಚ್ಚಾಗಿ ಭಾಗವಹಿಸಿದ್ದ ಸ್ಪರ್ಧೆಯಲ್ಲಿ ಬಾಲಕಿಯರು ಪೈಪೋಟಿಯಲ್ಲಿ ಕೇಕ್ ತಿಂದರು.

 • Cooking

  Karnataka Districts5, Oct 2019, 8:27 AM IST

  ಮೈಸೂರು: ಬೆಂಕಿ ಇಲ್ಲದೆ ರುಚಿಕರ ಅಡುಗೆ ಮಾಡಿದ ಅತ್ತೆ, ಸೊಸೆ..!

  ಮೈಸೂರು ದಸರಾ ಪ್ರಯುಕ್ತ ಏರ್ಪಡಿಸಾಗಿದ್ದ ಕುಕ್ಕಿಂಗ್ ವಿತೌಟ್ ಫೈರ್ ಸ್ಪರ್ಧೆ ಮೋಜಿನಿಂದ ನಡೆಯಿತು. ಬೆಂಕಿ ಇಲ್ಲದೆ, ಅತ್ಯಂತ ರುಚಿಕರ ಮತ್ತು ಸ್ವಾದಿಷ್ಟ ಅಡುಗೆ ತಯಾರಿಸಬಹುದು ಎಂದು ಅತ್ತೆ, ಸೊಸೆಯಂದಿರು ತೋರಿಸಿಕೊಟ್ಟರು

 • Pani Puri Eating competition At Mysuru
  Video Icon

  Karnataka Districts2, Oct 2019, 7:36 PM IST

  Video: 57 ಸೆಕೆಂಡ್‌ಗಳಲ್ಲಿ ಬರೋಬ್ಬರಿ 2 ಪ್ಲೇಟ್ ಗೋಲ್ಗಪ್ಪಾ ಗುಳುಂ...

   ಪಾನಿ ಪುರಿ ಅರ್ಥತ್ ಗೋಲ್ಗಪ್ಪಾ ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ, ಅದರಲ್ಲೂ ಹುಡಗಿಯರಿಗೆ ಪಾನಿಪುರಿ ಅಂದರೆ ಪಂಚ ಪ್ರಾಣ. ಯಾರಾದ್ರು ಸ್ಲಾಮ್ ಬೂಕ್ ಕೊಟ್ರೆ ಅದರಲ್ಲಿ ನಿಮಗೆ ಇಷ್ಟದ ತಿಂಡಿ ಯಾವುದು ಅಂತಾ ಇದ್ದರೆ ಪಾನಿಪುರಿ ಅಂತ ಬರೆಯೊರೆ ಜಾಸ್ತಿ. ಅಂತದರಲ್ಲಿ ಪಾನಿ ಪುರಿ ತಿನ್ನುವ ಸ್ಪರ್ಧೆ ಇದ್ರೆ ಸುಮ್ನೆ ಬಿಡ್ತಾರಾ.. ವಿಶ್ವ ವಿಖ್ಯಾತ ಮೈಸೂರು ದಸರಾ ಅಂಗವಾಗಿ ಇಂದು [ಬುಧವಾರ]  ಯುವತಿಯರಿಗೆ ಪಾನಿಪುರಿ ತಿನ್ನುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಬಹಳಷ್ಟು ಯುವತಿಯರು ಭಾಗವಹಿಸಿದ್ದರು. ಇದ್ರಲ್ಲಿ ಓರ್ವ ಯುವತಿಯಂತೂ ಕೇವಲ 57 ಸೆಕೆಂಡ್ ಗಳಲ್ಲಿ ಬರೋಬ್ಬರಿ 2 ಪ್ಲೇಟ್ ಗೋಲ್ಗಪ್ಪಾಗಳನ್ನು ಗುಳಂ.. ಗುಳಂ...ಅಂತ ನುಂಗಿ ನಾನೇ ಫಸ್ಟ್ ಅಂತ ಕುರ್ಚಿಯಿಂದ ಮೇಲೆದ್ದುಬಿಟ್ರು. .ಅಬ್ಬಬ್ಬಾ....ಯುವತಿಯರು ಗೋಲ್ಗಪ್ಪಾ ಯಾವೆಲ್ಲ ಅವತಾರದಲ್ಲಿ ತಿಂದ್ರು ಅನ್ನೋದನ್ನು ಅದರ ಒಂದು ಝಲಕ್ ವಿಡಿಯೋನಲ್ಲಿ ನೋಡಿ.

 • cooking on gas

  Karnataka Districts2, Oct 2019, 8:54 AM IST

  ಮೈಸೂರು ದಸರಾದಲ್ಲಿ ದಂಪತಿಗಳಿಂದ ಪಾಕೋತ್ಸವ

  ಮೈಸೂರು ದಸರಾ ಪ್ರಯುಕ್ತ ಆಯೋಜಿಸಲಾದ ದಂಪತಿಗಳ ಅಡುಗೆ ಸ್ಪರ್ಧೆಯಲ್ಲಿ ಬಹಳಷ್ಟು ಜೋಡಿಗಳು ಅಡುಗೆ ಮಾಡಿ ತಮ್ಮ ಪಾಕ ಪ್ರಾವೀಣ್ಯತೆಯನ್ನು ತೋರಿಸಿದ್ರು. ಪತಿ ಹದವಾಗಿ ಹಿಟ್ಟು ಕಲೆಸಿಕೊಟ್ಟರೆ ಪತ್ನಿ ನಯವಾಗಿ ತಟ್ಟಿ, ಗರಿಗರಿಯಾಗಿ ಬೇಯಿಸಿದರು.

 • Sarojamma
  Video Icon

  Karnataka Districts1, Oct 2019, 10:51 PM IST

  ದಸರಾ ಸ್ಪೆಶಲ್: ಒಂದೇ ನಿಮಿಷದಲ್ಲಿ 6 ಇಡ್ಲಿ ತಿಂದು ಗೆದ್ದು ಬೀಗಿದ ಸರೋಜಮ್ಮ!

  ಮೈಸೂರು[ಅ. 01]  ಮೈಸೂರು ದಸರಾ ಅಂಗವಾಗಿ ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌ ಮೈದಾನದಲ್ಲಿ ಮಹಿಳೆಯರಿಗಾಗಿ ಸೋಮವಾರ ಇಡ್ಲಿ ತಿನ್ನುವ ಸ್ಪರ್ಧೆ ಏರ್ಪಡಿಸಲಾಗಿತ್ತು.  ಈ ಸ್ಪರ್ಧೆಯಲ್ಲಿ ಗೆದ್ದಿದ್ದು 60 ವರ್ಷದ ಮಹಿಳೆ.  ಸ್ಪರ್ಧೆಯಲ್ಲಿ  ಅಗ್ರಹಾರದ 60 ವರ್ಷದ ಸರೋಜಮ್ಮ ಗಣೇಶ್‌ ಅವರು ಭಾಗವಹಿಸಿ ಒಂದು ನಿಮಿಷದಲ್ಲಿ 6 ಇಡ್ಲಿ ತಿಂದು ಗೆದ್ದು ಬೀಗಿದರು. ನವರಾತ್ರಿಯಂದು ಆರಂಭವಾಗಿ ವಿಜಯದಶಮಿಯಂದು ಮುಕ್ತಾಯವಾಗುತ್ತೆ.ದಸರಾ ವೇಳೆ ಮೈಸೂರು ನಗರವನ್ನು ಮಧುವಣಗಿತ್ತಿಯಂತೆ ಸಿಂಗರಿಸಲಾಗುತ್ತದೆ.  ವಿಶ್ವವಿಖ್ಯಾತ ಮೈಸೂರು ಅರಮನೆಯನ್ನು 1 ಲಕ್ಷ ದೀಪಗಳಿಂದ ಅಲಂಕರಿಸಲಾಗುತ್ತದೆ.

 • Mysore Dasara
  Video Icon

  NEWS30, Sep 2019, 10:57 AM IST

  ಮೈಸೂರಿನಲ್ಲಿ ದಸರಾ ಕಳೆ; ನಾರಿಯರಿಗಾಗಿ ರಂಗೋಲಿ ಸ್ಪರ್ಧೆ

  ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಸಂಭ್ರಮ ಕಳೆ ಕಟ್ಟಿದೆ. ರಂಗೋಲಿ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು ರಾಜ್ಯದ ವಿವಿಧೆಡೆಯಿಂದ 74 ಸ್ಪರ್ಧಿಗಳು ಮಾತ್ರ ಭಾಗವಹಿಸಿದ್ದರು. ಅಂದ- ಚಂದದ ರಂಗೋಲಿಗಳು ನೋಡುಗರ ಗಮನ ಸೆಳೆದವು. ರಂಗೋಲಿ ಸ್ಪರ್ಧೆ ಸಂಭ್ರಮ ಹೀಗಿತ್ತು ನೋಡಿ. 

 • Fartists

  NEWS17, Sep 2019, 11:56 AM IST

  ದೇಶದಲ್ಲೇ ಮೊದಲ ಹೂಸು ಬಿಡುವ ಸ್ಪರ್ಧೆ!: ಎಲ್ಲಿ, ಯಾವಾಗ? ಇಲ್ಲಿದೆ ವಿವರ

  ತಮಾಷೆ ಅಲ್ಲ... ದೇಶದಲ್ಲೇ ಮೊದಲ ಹೂಸು ಬಿಡುವ ಸ್ಪರ್ಧೆ, ಎಲ್ಲಿ, ಯಾವಾಗ? ಇಲ್ಲಿದೆ ವಿವರ

 • Ragi Balls

  Karnataka Districts29, Aug 2019, 8:45 AM IST

  ಮಂಡ್ಯ: 7 ಮುದ್ದೆ ನುಂಗಿ ಮೀಸೆ ತಿರುವಿದ ಮದ್ದೂರಿನ ಸುರೇಶ್‌!

  ಮಂಡ್ಯದಲ್ಲಿ ಯುವಕನೊಬ್ಬ 7 ರಾಗಿ ಮುದ್ದೆ ಸೇವಿಸಿದ್ದಾನೆ. ಮಂಡ್ಯದಲ್ಲಿ ಆಯೋಜಿಸಿದ್ದ ರಾಗಿಮುದ್ದೆ ತಿನ್ನುವ ಸ್ಪರ್ಧೆಯಲ್ಲಿ ಮದ್ದೂರಿನ ಸುರೇಶ್‌ 7 ಮುದ್ದೆ ಸೇವಿಸಿ ಪ್ರಥಮ ಸ್ಥಾನ ಪಡೆದರು. ನಾಡಪ್ರಭು ಕೆಂಪೇಗೌಡರ ಜಯಂತಿ ಪ್ರಯುಕ್ತ ಸ್ಪರ್ಧೆ ಆರೋಜಿಸಲಾಗಿತ್ತು.

 • Virat Kohli
  Video Icon

  SPORTS21, Aug 2019, 4:51 PM IST

  ವಿರಾಟ್ ಕೊಹ್ಲಿಗೆ ಭಯ ಹುಟ್ಟಿಸಿದ ಆ 3 ಇನಿಂಗ್ಸ್..!

  ಆಧುನಿಕ ಕ್ರಿಕೆಟ್’ನ ಸೂಪರ್ ಸ್ಟಾರ್ ಬ್ಯಾಟ್ಸ್’ಮನ್ ಎನಿಸಿಕೊಂಡಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಆಸ್ಟ್ರೇಲಿಯಾದ ಅನುಭವಿ ಬ್ಯಾಟ್ಸ್’ಮನ್ ಸ್ಟೀವ್ ಸ್ಮಿತ್ ನಡುವೆ ರ‍್ಯಾಂಕಿಂಗ್ ಯುದ್ಧ ಆರಂಭವಾಗಿದೆ. ಒಂದು ವರ್ಷ ನಿಷೇಧದ ಬಳಿಕ ಕಮ್ ಬ್ಯಾಕ್ ಮಾಡಿರುವ ಸ್ಮಿತ್, ಇದೀಗ ಟೆಸ್ಟ್ ಕ್ರಿಕೆಟ್’ನಲ್ಲು ನಂ.1 ಶ್ರೇಯಾಂಕಕ್ಕೇರಲು ತುದಿಗಾಲಿನಲ್ಲಿ ನಿಂತಿದ್ದಾರೆ. ಅದರಲ್ಲೂ ಆ್ಯಷಸ್ ಸರಣಿಯ ಮೊದಲ ಮೂರು ಇನಿಂಗ್ಸ್’ಗಳಲ್ಲಿ 2 ಶತಕ ಹಾಗೂ ಒಮ್ಮೆ 92 ರನ್ ಬಾರಿಸಿರುವ ಸ್ಮಿತ್ ಕೊಹ್ಲಿ ಹಿಂದಿಕ್ಕುವ ವಿಶ್ವಾಸದಲ್ಲಿದ್ದಾರೆ. ಇಬ್ಬರ ನಡುವೆ 10 ರೇಟಿಂಗ್ ಅಂಕಗಳ ಅಂತರವಿದೆ. ಇಬ್ಬರಿಗೂ ಎರಡು ಪಂದ್ಯಗಳಿವೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

 • Video Icon

  SPORTS21, Aug 2019, 4:41 PM IST

  ಕರ್ನಾಟಕ ಕ್ರಿಕೆಟ್ ತಂಡದಲ್ಲಿ ಅವಕಾಶ ಸಿಗೋದು ಅಷ್ಟು ಕಷ್ಟನಾ..?

  ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಬೇಕು ಎನ್ನುವುದು ಎಲ್ಲಾ ಕ್ರಿಕೆಟಿಗರ ಕನಸಾಗಿರುತ್ತದೆ. ಸಾಕಷ್ಟು ಬೆವರು ಹರಿಸಿದರೂ ಒಂದು ರಾಜ್ಯದಿಂದ ಒಬ್ಬರೋ-ಇಬ್ಬರೋ ಸ್ಥಾನ ಪಡೆಯಲು ಹರಸಾಹಸ ಪಡಬೇಕಾಗುತ್ತದೆ. ಆದರೆ ಕರ್ನಾಟಕ ತಂಡದಲ್ಲಿ ಸ್ಥಾನ ಪಡೆಯುವುದು ಈಗ ಸುಲಭದ ಮಾತಾಗಿ ಉಳಿದಿಲ್ಲ. ಹೀಗಾಗಿ ರಾಜ್ಯದ ಮೂವರು ಕ್ರಿಕೆಟಿಗರು ಇದೀಗ ಗುಳೆ ಹೊರಟಿದ್ದಾರೆ. ಇದರಲ್ಲಿ ದಾವಣಗೆರೆ ಎಕ್ಸ್’ಪ್ರೆಸ್ ಖ್ಯಾತಿಯ ವಿನಯ್ ಕುಮಾರ್ ಕೂಡಾ ಇದ್ದಾರೆ ಎನ್ನುವುದು ಮಾತ್ರ ವಿಪರ್ಯಾಸ...

 • Karnataka Districts18, Aug 2019, 11:30 AM IST

  ಉಡುಪಿ: ರಾಜ್ಯಮಟ್ಟದ ಹುಲಿವೇಷ ಕುಣಿತ ಸ್ಪರ್ಧೆ

  ಉಡುಪಿಯ ಅಶೋಕ್‌ ರಾಜ್‌ ಮತ್ತು ಬಳಗವು ತನ್ನ ಬೆಳ್ಳಿಹಬ್ಬದ ಆಚರಣೆಯ ಪ್ರಯುಕ್ತ ರಾಜ್ಯ ಮಟ್ಟದ ಹುಲಿವೇಷ ಸ್ಪರ್ಧೆಯನ್ನು ಆಯೋಜಿಸಿದೆ. ಪ್ರತಿಯೊಂದು ತಂಡದಲ್ಲಿ ಕನಿಷ್ಠ 15 ಮಂದಿ ವೇಷಧಾರಿಗಳು ಇರಬೇಕು. ಸಾಂಪ್ರದಾಯಿಕ ಹುಲಿವೇಷಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಸೃಜನಶೀಲ ವೇಷಗಳಿದ್ದರೂ ಅದನ್ನು ಪ್ರದರ್ಶಿಸಬಹುದಾಗಿದೆ.

 • avala hejje

  Karnataka Districts12, Aug 2019, 4:12 PM IST

  ಮತ್ತೆ 'ಅವಳ ಹೆಜ್ಜೆ' ವತಿಯಿಂದ ಕನ್ನಡತಿ ಉತ್ಸವ: ಬನ್ನಿ ಹೆಜ್ಜೆ ಹಾಕಿ

  ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಕೊಡುಗೆಯನ್ನು ಮರೆಯದೇ ಸ್ಮರಿಸುವ ಮತ್ತು ಮಹಿಳೆಯರ ಸ್ಪೂರ್ತಿದಾಯಕ ಕಥೆ, ಕಲೆ ಮತ್ತು ಸಾಂಸ್ಕೃತಿಕಯನ್ನು ವೇದಿಕೆಯ ಮೂಲಕ ಸಮಾಜಕ್ಕೆ ತಲುಪಿಸುವ ಆಶಯದಿಂದ "ಅವಳ ಹೆಜ್ಜೆ" ಹೆಜ್ಜೆ ಇಡುತ್ತಿದೆ. ಇದಕ್ಕಾಗಿ “ಕನ್ನಡತಿ ಉತ್ಸವ” ಮತ್ತೆ ಬಂದಿದ್ದು, ಬನ್ನಿ ಭಾಗವಹಿಸಿ.

 • KRISHNA river COMPITATION
  Video Icon

  Karnataka Districts6, Aug 2019, 1:51 PM IST

  ಉಕ್ಕಿಹರಿಯುವ ಕೃಷ್ಣಾದಲ್ಲಿ ಯುವಕರಿಂದ ಈಜು ಸ್ಪರ್ಧೆ!

  ಉಕ್ಕಿಹರಿಯುತ್ತಿರುವ ಮಲಪ್ರಭಾ ನದಿಯಲ್ಲಿ 76 ವರ್ಷ ಪ್ರಾಯದ ವೃದ್ಧರೊಬ್ಬರು ಈಜುವ ಸ್ಟೋರಿ ನಿನ್ನೆ ನೋಡಿದ್ವಿ. ಅತ್ತ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಮೈದುಂಬಿ ಹರಿಯುತ್ತಿರುವ ಕೃಷ್ಣೆಗೆ ಹಾರುವ ಯುವಕರ ದುಸ್ಸಾಹಸವನ್ನೂ ನೋಡಿದ್ವಿ. ಇತ್ತ ರಾಯಚೂರಿನಲ್ಲಿ ಯುವಕರು ಕೃಷ್ಣಾನದಿಯಲ್ಲೇ ಈಜುವ ಸ್ಪರ್ಧೆಯನ್ನು ನಡೆಸಿದ್ದಾರೆ. ಮೈಜುಮ್ಮೆನಿಸುವ ಈ ವಿಡಿಯೋ ನೋಡಿ. 
   

 • Karate video

  Karnataka Districts30, Jul 2019, 8:42 AM IST

  ಶ್ರೀಲಂಕಾದಲ್ಲಿ ಫೈಟ್ ಮಾಡಲಿದ್ದಾರೆ ದಾವಣಗೆರೆಯ ಪಟುಗಳು..!

  ದಾವಣಗೆರೆಯ ಕಾರಾಟೆಪಟುಗಳು ಶ್ರೀಲಂಕಾದಲ್ಲಿ ನಡೆಯುವ ಅಂತಾರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಈ ಸ್ಪರ್ಧೆಗೆ ಕರ್ನಾಟಕದಿಂದ ತರಬೇತುದಾರ 6ನೇ ಡಿಗ್ರಿ ಬ್ಲಾಕ್‌ ಬೆಲ್ಟ್‌ ರೆನ್ಸಿ ಎಚ್‌.ಮಲ್ಲಿಕಾರ್ಜುನ ನೇತೃತ್ವದಲ್ಲಿ ಸ್ಪರ್ಧಿಗಳು ತೆರಳಲಿದ್ದಾರೆ.