Chittapur

(Search results - 16)
• Priyank Kharge

Karnataka DistrictsJun 17, 2021, 2:43 PM IST

ದುಡಿಯುವ ಕೈಗಳ ದುರ್ಬಲಕ್ಕೆ ಮುಂದಾದ ಕೇಂದ್ರ: ಪ್ರಿಯಾಂಕ್‌ ಖರ್ಗೆ

ದೇಶದಲ್ಲಿ 70 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್‌ ಸರ್ಕಾರವು ದೇಶದ ಜನರ ಹಿತ ಕಾಪಾಡಿಕೊಂಡು ಬರಲು ಮಾಡಿರುವ ಎಲ್ಲಾ ಪ್ರಯತ್ನಗಳನ್ನು ಈಗಿನ ಕೇಂದ್ರದಲ್ಲಿನ ಬಿಜೆಪಿ ಸರ್ಕಾರವು ಕೇವಲ 7 ವರ್ಷಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಬೆಲೆ ಏರಿಕೆ ಮಾಡಿ ದುಡಿಯುವ ಕೈಗಳಿಗೆ ದುರ್ಬಲ ಮಾಡುವ ಪ್ರಯತ್ನವನ್ನು ಮಾಡುತ್ತಿವೆ ಎಂದು ಶಾಸಕ ಪ್ರಿಯಾಂಕ್‌ ಖರ್ಗೆ ಆರೋಪಿಸಿದ್ದಾರೆ.

• Priyank Kharge

Karnataka DistrictsMay 5, 2021, 3:36 PM IST

ಚಿತ್ತಾಪುರ: ಕೋವಿಡ್‌ ಕೇರ್‌ ಸೆಂಟರ್‌ ತೆರೆಯಲು ಪ್ರಿಯಾಂಕ್‌ ಸಿದ್ಧತೆ

ಜಿಲ್ಲೆಯಲ್ಲಿ ಕೊರೋನಾ ಸೋಂಕಿತ ರೋಗಿಗಳಿಗೆ ಆಕ್ಸಿಜನ್‌ ಮತ್ತು ಬೆಡ್‌ ಕೊರತೆಯುಂಟಾಗಿ ಸಾವು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಚಿತ್ತಾಪುರ ಮತಕ್ಷೇತ್ರದ ಶಾಸಕ ಪ್ರಿಯಾಂಕ್‌ ಖರ್ಗೆ, ಚಿತ್ತಾಪುರ ಪಟ್ಟಣದಲ್ಲಿ 100 ಬೆಡ್‌ಗಳ ವ್ಯವಸ್ಥೆ ಕಲ್ಪಿಸುವ ಜೊತೆಗೆ ವಾಡಿ ನಗರ, ಗುಂಡಗುರ್ತಿ, ಕೋರವಾರ, ನಾಲವಾರ ಗ್ರಾಮಗಳಲ್ಲಿ ಕೋವಿಡ್‌ ಕೇರ್‌ ಸೆಂಟರ್‌ ತೆರೆಯಲು ಚಿಂತನೆ ನೆಡಸಿದ್ದಾರೆ.

BSY

Karnataka DistrictsMar 26, 2021, 2:52 PM IST

'ರೈತ ಸಮುದಾಯ ಮರೆತು ಯಡಿಯೂರಪ್ಪ ರೈತರ ಜತೆ ಚೆಲ್ಲಾಟವಾಡುತ್ತಿದ್ದಾರೆ'

ರೈತರ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ನವರು ರೈತ ಸಮುದಾಯವನ್ನು ಮರೆತು ರೈತರ ಬಾಳಿನೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಎಪಿಎಂಸಿ ಅಧ್ಯಕ್ಷ ಸಿದ್ದುಗೌಡ ಅಫಜಲ್‌ಪುರಕರ್‌ ಆರೋಪಿಸಿದ್ದಾರೆ.

Valmiki Naik

Karnataka DistrictsMar 19, 2021, 1:30 PM IST

ಚಿತ್ತಾಪುರ: ಮಾಜಿ ಶಾಸಕ, ಬಿಜೆಪಿ ಹಿರಿಯ ನಾಯಕ ವಾಲ್ಮೀಕಿ ನಾಯಕ ನಿಧನ

ಜಿಲ್ಲೆಯ ಚಿತ್ತಾಪುರ ಕ್ಷೇತ್ರದ ಮಾಜಿ ಶಾಸಕ ಹಾಗೂ ಬಿಜೆಪಿಯ ಹಿರಿಯ ಮುಖಂಡ ವಾಲ್ಮೀಕಿ ನಾಯಕ(72) ಹೃದಯಾಘಾತದಿಂದ ಇಂದು(ಶುಕ್ರವಾರ) ನಿಧನರಾಗಿದ್ದಾರೆ.

BSY

Karnataka DistrictsFeb 4, 2021, 1:11 PM IST

ಯಡಿಯೂರಪ್ಪಗೆ ನಾನೇನು ದ್ರೋಹ ಮಾಡಿದ್ದೆ: ಬಿಜೆಪಿ ಹಿರಿಯ ಮುಖಂಡ

ಶೂನ್ಯ ಸ್ಥಾನದಲ್ಲಿದ್ದ ಕಮಲ ಪಕ್ಷಕ್ಕೆ 33 ವರ್ಷಗಳ ಕಾಲ ನೀರೆರೆದು ಪೋಷಿಸಿ ಹೆಮ್ಮರವಾಗಿ ಬೆಳೆಸಿದ್ದೇನೆ. ನನ್ನ ಇಡೀ ಕುಟುಂಬ ಪಕ್ಷಕ್ಕೆ ಒತ್ತೆಯಿಟ್ಟು ಈಗ ಕಂಗಾಲಾಗಿದ್ದೇನೆ. ದುಡಿದವರಿಗಿಂತ ದುಡ್ಡಿದ್ದವರಿಗೆ ಹೆಚ್ಚು ಬೆಲೆ ಎಂಬ ವಾತಾವರಣ ಪಕ್ಷದಲ್ಲಿ ಸೃಷ್ಠಿಯಾಗಿದೆ. ನನ್ನ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಸ್ಥಾನಮಾನ ನೀಡಬೇಕಾದ ಹೈಕಮಾಂಡ್‌ ಕಡೆಗಣಿಸಿದೆ ಎಂದು ಚಿತ್ತಾಪುರ ಮಾಜಿ ಶಾಸಕ, ಬಿಜೆಪಿ ಹಿರಿಯ ಮುಖಂಡ ವಾಲ್ಮೀಕಿ ನಾಯಕ ಅತೃಪ್ತಿ ಹೊರಹಾಕಿದ್ದಾರೆ.

Maternity

Karnataka DistrictsNov 13, 2020, 11:26 AM IST

ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರೂ ಇಲ್ಲ, ಕರೆಂಟೂ ಇಲ್ಲ: ಮೊಬೈಲ್‌ ಟಾರ್ಚ್‌ನಲ್ಲೇ ನಡೆಯಿತು ಹೆರಿಗೆ...!

ತುಂಬು ಗರ್ಭಿಣಿ ಹೆರಿಗೆಗೆಂದು ಸರ್ಕಾರಿ ಆಸ್ಪತ್ರೆಗೆ ಬಂದಾಗ ಅಲ್ಲಿ ವೈದ್ಯರು, ಕರೆಂಟೂ ಇಲ್ಲದ ಆಯೋಮಯ ಪರಿಸ್ಥಿತಿ ಎದುರಾದಾಗ ಆಸ್ಪತ್ರೆಯ ನರ್ಸ್‌ ಮೊಬೈಲ್‌ ಟಾರ್ಚ್‌ ಬೆಳಕಲ್ಲೇ ಸುಸೂತ್ರವಾಗಿ ಸಹಜ (ನಾರ್ಮಲ್‌) ಹೆರಿಗೆ ಕಾರ್ಯ ಕೈಗೊಂಡ ಪ್ರಸಂಗ ಚಿತ್ತಾಪುರ ತಾಲೂಕಿನ ಕೊಳ್ಳೂರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ಮಧ್ಯರಾತ್ರಿ ನಡೆದಿದೆ.

Flood

Karnataka DistrictsSep 23, 2020, 3:35 PM IST

ಚಿತ್ತಾಪುರ: ಪ್ರವಾಹಕ್ಕೆ ಸಿಲುಕಿ ಯುವಕ ಸಾವು

ಹೊಲದಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಬರುವಾಗ ಯುವಕನೊಬ್ಬ ಹಳ್ಳದ ಪ್ರವಾಹಕ್ಕೆ ಸಿಲುಕಿ ಮೃತಪಟ್ಟಿದ್ದಾನೆ.

CC Camera

CRIMESep 7, 2020, 3:15 PM IST

ಕಲಬುರಗಿ: ದೇವಸ್ಥಾನದ ಹುಂಡಿ ಹೊತ್ತೊಯ್ದ ಖದೀಮರು, ಸಿಸಿಟಿವಿಯಲ್ಲಿ ಸೆರೆ

ರಾತ್ರೋ ರಾತ್ರಿ ದೇವಸ್ಥಾನದಲ್ಲಿಡಲಾಗಿದ್ದಂತಹ ಭಕ್ತರ ದೇಣಿಗೆ ಹಣದಿಂದ ತುಂಬಿದ್ದ ಹುಂಡಿಯನ್ನು ಕದ್ದೊಯ್ದ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ಪುಣ್ಯಕ್ಷೇತ್ರ ದಂಡಗುಂಡ ಬಸವಣ್ಣ ದೇವಸ್ಥಾನದಲ್ಲಿ ನಡೆದಿದ್ದು, ಕಳ್ಳರ ಕೈಚಳ ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದೆ. ಕಲಬುರಗಿ(ಸೆ.07): ರಾತ್ರೋ ರಾತ್ರಿ ದೇವಸ್ಥಾನದಲ್ಲಿಡಲಾಗಿದ್ದಂತಹ ಭಕ್ತರ ದೇಣಿಗೆ ಹಣದಿಂದ ತುಂಬಿದ್ದ ಹುಂಡಿಯನ್ನು ಕದ್ದೊಯ್ದ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ಪುಣ್ಯಕ್ಷೇತ್ರ ದಂಡಗುಂಡ ಬಸವಣ್ಣ ದೇವಸ್ಥಾನದಲ್ಲಿ ನಡೆದಿದ್ದು, ಕಳ್ಳರ ಕೈಚಳ ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದೆ.
ದಂಡಗುಂಡ ಬಸವಣ್ಣ ದೇವಸ್ಥಾನ ಹುಂಡಿ ಕಳವು ಶನಿವಾರ ನಸುಕಿನ ಜಾವ 1-18 ಕ್ಕೆ ದೇವಸ್ಥಾನಕ್ಕೆ ಕನ್ನ ಹಾಕಿದ ಇಬ್ಬರು ಖದೀಮರು ಹುಂಡಿಯನ್ನು ಹೊತ್ತುಕೊಂಡು ಹೋಗಿದ್ದಾರೆ. ಕೋವಿಡ್‌ ಹಿನ್ನೆಲೆಯಲ್ಲಿ ಹುಂಡಿಯನ್ನು ದೇವಸ್ಥಾನದ ಹೊರ ಭಾಗದಲ್ಲಿ ಇಡಲಾಗಿತ್ತು. ಕಳ್ಳರು ಹುಂಡಿಯನ್ನು ದೇವಾಲಯ ಹಿಂಭಾಗದಲ್ಲಿ ತೆಗೆದುಕೊಂಡು ಹೋಗಿ ಒಡೆದು ಅದರಲ್ಲಿ ನಗ-ನಾಣ್ಯ ಕಳವು ಮಾಡಿಕೊಂಡು ಹೋಗಿದ್ದಾರೆ.
ಹುಂಡಿಯಲ್ಲಿ ಸುಮಾರು ನಾಲ್ಕು ಲಕ್ಷ ಹಣ ಇತ್ತು ಎಂದು ಅಂದಾಜಿಸಲಾಗಿದೆ. ಹುಂಡಿ ಕಳುವಾಗಿರುವ ವಿಷಯ ಗ್ರಾಮದಲ್ಲಿ ಹರಡಿದ್ದು, ಆತಂಕ ಸೃಷ್ಟಿಯಾಗಿದೆ. ಶನಿವಾರ ಸಾಯಂಕಾಲ ಏಳು ಗಂಟೆಯಿಂದ ಗರ್ಭ ಗುಡಿಯ ದರ್ಶನ ಬಂದ್‌ ಮಾಡಲಾಗಿದೆ.
ಗೇಟ್‌ ಹೊರಭಾಗದಿಂದಲೇ ಭಕ್ತರು ದರ್ಶನ ಪಡೆಯುವಂತಾಯಿತು. ಸದ್ಯ ದೇವಸ್ಥಾನ ಟ್ರಸ್ಟ್‌ ಕಾರ್ಯದರ್ಶಿ ಬಸವರಾಜ ಚಿತ್ತಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪಿಎಸ್‌ಐ ಶ್ರೀಶೈಲ ಅಂಬಟ್ಟಿ, ಪೊಲೀಸ್‌ ಸಿಬ್ಬಂದಿ, ಶ್ವಾನದಳ ತಂಡ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದ್ದು, ಸಿಸಿಟಿವಿ ದೃಶ್ಯದ ಆಧಾರದ ಮೇಲೆ ಕಳ್ಳರ ಬಂಧನಕ್ಕೆ ಜಾಲ ಬೀಸಿದ್ದಾರೆ.

Priyank Kharge

Karnataka DistrictsAug 3, 2020, 1:24 PM IST

ಚಿತ್ತಾಪುರ: ಕೊರೋನಾ ತಡೆಗೆ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಿ, ಪ್ರಿಯಾಂಕ್‌ ಖರ್ಗೆ

ಕಲಬುರಗಿ ಜಿಲ್ಲೆಯಲ್ಲಿ ಕೊರೊನಾ ಸೊಂಕು ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನಲೆಯಲ್ಲಿ ಚಿತ್ತಾಪುರ ತಾಲೂಕಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಸೊಂಕು ಹರಡದಂತೆ ತಡೆಯಬೇಕು ಎಂದು ತಾಲೂಕು ಟಾಸ್ಕಪೊರ್ಸ್‌ ಕಮಿಟಿ ಅಧ್ಯಕ್ಷ ಹಾಗೂ ಶಾಸಕ ಪ್ರಿಯಾಂಕ್‌ ಖರ್ಗೆ ಅಧಿಕಾರಿಗಳಿಗೆ ಖಡಕ್‌ ಸೂಚನೆ ನೀಡಿದ್ದಾರೆ.

• undefined

Karnataka DistrictsJun 29, 2020, 10:01 AM IST

ನೆರೆಮನೆಯವರಿಗೆ ಕೊರೋನಾ: ಶಾಸಕ ಪ್ರಿಯಾಂಕ್‌ ಖರ್ಗೆ ಕ್ವಾರಂಟೈನ್‌

ಪಕ್ಕದ ಬಡಾವಣೆಯಲ್ಲಿ ಕೊರೋನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಚಿತ್ತಾಪುರ ಶಾಸಕ ಪ್ರಿಯಾಂಕ್‌ ಖರ್ಗೆ ಬೆಂಗಳೂರಿನ ಸದಾಶಿವ ನಗರದ ತಮ್ಮ ಮನೆಯಲ್ಲಿ ಸ್ವಯಂ ಕ್ವಾರಂಟೈನ್‌ ಆಗಿದ್ದಾರೆ.

• arrest
Video Icon

Karnataka DistrictsApr 18, 2020, 12:51 PM IST

ಕೊರೋನಾ ಮಧ್ಯೆ ಸಿದ್ಧೇಶ್ವರ ಸ್ವಾಮಿ ಜಾತ್ರೆ: 13 ಮಂದಿ ಅರೆಸ್ಟ್‌

ಲಾಕ್‌ಡೌನ್‌ ಮಧ್ಯೆ ಅದ್ಧೂರಿಯಾಗಿ ಸಿದ್ಧೇಶ್ವರ ಸ್ವಾಮಿಯ ರಥೋತ್ಸವ ಮಾಡಿದ ಹಿನ್ನೆಲೆಯಲ್ಲಿ ಪೊಲೀಸುರು 13 ಮಂದಿಯನ್ನ ಬಂಧಿಸಿದ ಘಟನೆ ನಗರದಲ್ಲಿ ನಡೆದಿದೆ. ಲಾಕ್‌ಡೌನ್‌ ಆದೇಶ ಉಲ್ಲಂಘಿಸಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ರಾವೂರ ಗ್ರಾಮದ ಸಿದ್ಧೇಶ್ವರ ಸ್ವಾಮಿಯ ಜಾತ್ರೆ ನಡೆಸಲಾಗಿತ್ತು.

• Villagers in Karnataka break lockdown rules for temple festival
Video Icon

Karnataka DistrictsApr 16, 2020, 6:31 PM IST

ಲಾಕ್‌ಡೌನ್‌ ಉಲ್ಲಂಘಿಸಿ ದೇವಳದ ಜಾತ್ರೆ! ಬೆಚ್ಚಿಬಿದ್ದ ಹಾಟ್‌ಸ್ಪಾಟ್‌ ಜಿಲ್ಲೆ

• ಲಾಕ್‌ಡೌನ್‌ ಉಲ್ಲಂಘಿಸಿ ದೇವಳದ ಜಾತ್ರೆ ಹಮ್ಮಿಕೊಂಡ ಚಿತ್ತಾಪುರ ಜನ
• ಕೊರೋನಾ ಹೆಮ್ಮಾರಿಗೆ ತತ್ತರಿಸಿ ಹೋಗಿರುವ ಕಲಬುರಗಿ ಜಿಲ್ಲೆ
• ಪೊಲೀಸರನ್ನು ಯಾಮಾರಿಸಿ ಜಾತ್ರೆ ಹಮ್ಮಿಕೊಂಡ ದೇವಸ್ಥಾನ ಮಂದಿ, 40 ವಿರುದ್ಧ ಎಫ್‌ಐಆರ್
• contaminated water

Karnataka DistrictsFeb 22, 2020, 1:18 PM IST

ಕಲುಷಿತ ನೀರು ಸೇವಿಸಿ ವಾಂತಿ ಭೇದಿ: ಗರ್ಭಿಣಿ ಸಾವು, 60 ಜನ ಅಸ್ವಸ್ಥ

ತಾಲೂಕಿನ ಅಲ್ಲೂರ. ಬಿ ಗ್ರಾಮದಲ್ಲಿ ನಾಲ್ಕು ದಿನಗಳಿಂದ 60ಕ್ಕೂ ಅಧಿಕ ಜನರಿಗೆ ವಾಂತಿಭೇದಿ ಹರಡಿದ್ದರಿಂದ ಜನರಲ್ಲಿ ಭೀತಿ ಮೂಡಿಸಿದೆ. ಏತನ್ಮಧ್ಯೆ ಸಕಾಲಕ್ಕೆ ಚಿಕಿತ್ಸೆ ಸಿಗದ ಕಾರಣ ಗರ್ಭಿಣಿಯೊಬ್ಬರು ಮೃತಪಟ್ಟಿದ್ದು ತಡವಾಗಿ ಬೆಳಕಿಗೆ ಬಂದಿದೆ.

• Kalaburagi

Karnataka DistrictsJan 3, 2020, 10:24 AM IST

ಹೂಳಲು ಸ್ಮಶಾನವಿಲ್ಲ, ಕುಟುಂಬಸ್ಥರಿಂದ ವೃದ್ಧೆಯ ದೇಹದಾನ

ಚುನಾವಣೆ ಬಂದಾಗ ಮಾತ್ರ ಗ್ರಾಮಗಳಿಗೆ ಭೇಟಿ ಭರವಸೆ ನೀಡುವ ಮೂಲಕ ಮತ ಪಡೆಯಲು ಮುಂದಾಗುವ ಜನಪ್ರತಿನಿಧಿಗಳು ನಿಜವಾದ ಸಂಕಷ್ಟ ಎದುರಾದಾಗ ಸ್ಪಂದಿಸುವುದಿಲ್ಲ. ಜನಪ್ರತಿನಿಧಿಗಳ ನಿರ್ಲಕ್ಷ್ಯತನದಿಂದ ಈ ಗ್ರಾಮದ ಜನರಿಗೆ ಸತ್ತರೆ  ಹೂಳಲು ಸ್ಮಶಾನ ಕೂಡ ಇಲ್ಲ. ಹೌದು, ಈ ಗ್ರಾಮದಲ್ಲಿ ಶವ ಹೂಳಲು ಸ್ಮಶಾನ ಇಲ್ಲದ ಕಾರಣ ಸುಮಾರು 40ಕ್ಕೂ ಹೆಚ್ಚು ಜನರ ದೇಹದಾನ ಮಾಡಿದ್ದಾರೆ.

• umesh jadhav

KalaburagiOct 29, 2019, 3:25 PM IST

ಚಿತ್ತಾಪುರ ರೈಲ್ವೆ ನಿಲ್ದಾಣಕ್ಕೆ ಸಂಸದ ಡಾ.ಉಮೇಶ ಜಾಧವ ಭೇಟಿ

ಇಲ್ಲಿನ ಸ್ಟೇಶನ್‌ ತಾಂಡಾ ನಿವಾಸಿಗಳ ಬಹುದಿನಗಳ ಬೇಡಿಕೆಯಾಗಿದ್ದ ಸಾರ್ವಜನಿಕ ಮೇಲ್ಸೇತುವೆ ಕಾಮಗಾರಿಗೆ ಕೇಂದ್ರವು 1.09 ಕೊಟಿ ಅನುದಾನ ಒದಗಿಸಿದೆ ಎಂದು ಲೊಕಸಭಾ ಸದಸ್ಯ ಡಾ. ಉಮೇಶ ಜಾಧವ ಹೇಳಿದ್ದಾರೆ.