Cauvery Issue  

(Search results - 205)
 • tipu-sultan

  Karnataka Districts3, Aug 2019, 11:18 AM IST

  'ಟಿಪ್ಪು ಬದುಕಿರುತ್ತಿದ್ರೆ ಕಾವೇರಿ ವಿವಾದ ಉದ್ಭವಿಸುತ್ತಿರಲಿಲ್ಲ'..!

  ಟಿಪ್ಪು ಸುಲ್ತಾನ್‌ ಬದುಕಿದ್ದಿದ್ದರೆ ತಮಿಳುನಾಡು-ಕರ್ನಾಟಕದ ನಡುವೆ ಕಾವೇರಿ ವಿವಾದವೇ ಉದ್ಭವಿಸುತ್ತಿರಲಿಲ್ಲ ಎಂದು ವಿಚಾರವಾದಿ ಪ್ರೊ.ಕೆ.ಎಸ್‌.ಭಗವಾನ್‌  ಹೇಳಿದ್ದಾರೆ. ಟಿಪ್ಪು ಬಲಿಯಾಗಿದ್ದರಿಂದ ಮಂಡ್ಯಕ್ಕೆ ಮಾತ್ರವಲ್ಲ, ಕರ್ನಾಟಕಕ್ಕೆ ಬಹು ದೊಡ್ಡ ನಷ್ಟವಾಗಿದೆ. ಅವನನ್ನು ಉಳಿಸಿಕೊಂಡಿದ್ದರೆ ಕಾವೇರಿ ನೀರೂ ನಮ್ಮದಾಗುತ್ತಿತ್ತು ಎಂದಿದ್ದಾರೆ.

 • Sumalatha

  NEWS2, Jul 2019, 10:45 AM IST

  ಕಾವೇರಿ ಕಾವು: ಸುಮಲತಾ ನಡೆ ಹೇಗಿರಬಹುದು?

  ಅಂಬರೀಶ್‌ ಲೋಕಸಭೆಗೆ ಆಯ್ಕೆಯಾಗಿ ಬಂದರೂ, ಎಂದಿಗೂ ಹಮ್ಮುಬಿಮ್ಮು ಬಿಟ್ಟು ಮನವಿ ಪತ್ರ ತೆಗೆದುಕೊಂಡು ಯಾರ ಬಳಿಯೂ ಹೋದವರಲ್ಲ. ಆದರೆ ಸುಮಲತಾ ಸಂಸತ್‌ ಅಧಿವೇಶನದ ಮೊದಲನೇ ದಿನದಿಂದಲೇ ಫುಲ್ ಆಕ್ಟಿವ್‌ ಆಗಿದ್ದಾರೆ.

 • HD Kumaraswamy
  Video Icon

  NEWS28, Jun 2019, 1:15 PM IST

  ‘ನೀರು ಬಿಡೋದು ನನ್ನ ಕೈಲಿಲ್ಲ, ಬೇಕಾದರೆ ಪ್ರಾಧಿಕಾರದ ಕಚೇರಿಗೆ ಮುತ್ತಿಗೆ ಹಾಕಲಿ’

  ಕಳೆದ 7 ದಿನಗಳಿಂದ ಮಂಡ್ಯ ರೈತರು ನೀರು ಬಿಡುವಂತೆ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಗ್ರಾಮ ವಾಸ್ತವ್ಯದಲ್ಲಿದ್ದ ಕುಮಾರಸ್ವಾಮಿ ಕೆಆರ್ ಎಸ್ ಬದಲು ದೆಹಲಿ ಪ್ರಾಧಿಕಾರದ ಕಚೇರಿಗೆ ಮುತ್ತಿಗೆ ಹಾಕಲಿ ಎಂದು ಹೇಳಿದ್ದಾರೆ.

 • Video Icon

  NEWS25, Jun 2019, 3:55 PM IST

  ‘ಕಾವೇರಿ’ದ ಕರ್ನಾಟಕಕ್ಕೆ ತಂಪೆರೆದ ಪ್ರಾಧಿಕಾರದ ಆದೇಶ!

  ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಾದ ಸಭೆ ನವದೆಹಲಿಯಲ್ಲಿಂದು ನಡೆದಿದ್ದು,  ಕರ್ನಾಟಕಕ್ಕೆ ಕೊಂಚ ರಿಲೀಫ್ ಸಿಕ್ಕಿದೆ. 

 • Sumalatha vs DC Thammanna
  Video Icon

  NEWS18, Jun 2019, 7:56 PM IST

  ‘ನಾನು ಉಲ್ಟಾ ಹೊಡೆದಿಲ್ಲ, ಮಾತು ತಪ್ಪುವ ಜಾಯಮಾನ ನಂದಲ್ಲ’

  ಮಂಡ್ಯದ ಸಂಸದೆ ಸುಮಲತಾ ಅಂಬರೀಶ್ ಕಾವೇರಿ ವಿಚಾರದಲ್ಲಿ ಉಲ್ಟಾ ಹೊಡೆದಿದ್ದಾರೆ ಎಂಬ ಮಾತು ಸೋಶಿಯಲ್ ಮೀಡಿಯಾದಲ್ಲಿ ಕೇಳಿ ಬಂದ ತಕ್ಷಣವೇ ಸುಮಲತಾ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ. ನಾನು ಮಾತು ಬದಲಿಸುವ ರಾಜಕಾರಣಿ ಅಲ್ಲ. ನನ್ನವ್ಯಾಪ್ತಿಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.

 • Sumalatha infront of Parliament
  Video Icon

  NEWS18, Jun 2019, 9:26 AM IST

  ಕಾವೇರಿ ವಿವಾದ: JDS ಪಾಲಿಟಿಕ್ಸ್‌ಗೆ ಸುಮಲತಾ ಖಂಡನೆ

  ಕಾವೇರಿ ವಿಚಾರದಲ್ಲಿ ಹಲವು ತಜ್ಞರಿದ್ದಾರೆ. ಅವರ ಅಭಿಪ್ರಾಯ ಕೇಳುವುದ ಬಿಟ್ಟು, ಈ ವಿಚಾರವಾಗಿ ರಾಜಕೀಯ ಮಾಡುತ್ತಿರುವ ದಳಪತಿಗಳ ಹೇಳಿಕೆಯನ್ನು ಖಂಡಿಸುವುದಾಗಿ ಮಂಡ್ಯ ಸಂಸದೆ ಸುಮಲತಾ ಹೇಳಿದ್ದಾರೆ. ದಿಲ್ಲಿಯಲ್ಲಿ ಸಂಸದರಾಗಿ ಕನ್ನಡದಲ್ಲಿಯೇ ಪ್ರಮಾಣ ವಚನ ಸ್ವೀಕರಿಸಿದ ಮಂಡ್ಯ ಸಂಸದೆ ತಮ್ಮ ದರ್ಬಾರ್ ಆರಂಭಿಸಿದ್ದಾರೆ.

 • Video Icon

  NEWS29, May 2019, 2:29 PM IST

  ರಾಜಕೀಯ ಮಾಡೋ, ಹತಾಶೆ ತೋರೋ ಸಮಯವಲ್ಲ: JDSಗೆ ಸುಮಲತಾ ಬುದ್ಧಿಮಾತು!

  ಕಾವೇರಿ ನೀರು ಬಿಡುಗಡೆ ವಿಚಾರವಾಗಿ ಮಂಡ್ಯ ನೂತನ ಸಂಸದೆ ಸುಮಲತಾ ಅಂಬರೀಷ್ ಮಾತನಾಡಿದ್ದಾರೆ. ಜೆಡಿಎಸ್ ನಾಯಕರ ಹೇಳಿಕೆಗಳಿಗೆ ಪರೋಕ್ಷವಾಗಿ ಟೀಕಿಸಿರುವ ಸುಮಲತಾ, ಇದು ರಾಜಕೀಯ ಮಾಡುವ ಅಥವಾ ಚುನಾವಣೆಯಲ್ಲಿ ಸೋಲಿರುವ ಕೋಪ,  ಹತಾಶೆ ತೋರಿಸುವ ಸಮಯವಲ್ಲ ಎಂದು ಬುದ್ದಿವಾದ ಹೇಳಿದ್ದಾರೆ.   
   

 • NEWS1, Dec 2018, 10:54 PM IST

  ಹೊಸ ಆಲೋಚನೆ,  ಹಾಸನದಲ್ಲಿ ಕಾವೇರಿ ಜಲವಿವಾದ ಬಗೆಹರಿಸಿದ ಗಡ್ಕರಿ!

  ಕರ್ನಾಟಕ ತಮಿಳುನಾಡಿನ ಜಲವಿವಾದಕ್ಕೆ ಪರಿಹಾರ ಕೇಂದ್ರ ಸಚಿವ ನಿತಿನ್ ಗಡ್ಕರಿ ಪರಿಹಾರ ಮಾರ್ಗ ಹೇಳಿದ್ದಾರೆ. ಹಾಸನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಗಡ್ಕರಿ ಅನೇಕ ವಿಚಾರಗಳ ಬಗ್ಗೆ ಮಾತನಾಡಿದರು.

 • NEWS25, Nov 2018, 9:54 PM IST

  ಕಾವೇರಿಗಾಗಿ ಮಂತ್ರಿ ಪದವಿ ತ್ಯಜಿಸಿದ್ದ ಅಂಬಿ

  ಚಲನಚಿತ್ರರಂಗ ಮಾತ್ರವಲ್ಲ ರಾಜಕೀಯದಲ್ಲಿ ಸಕ್ರೀಯರಾಗಿದ್ದ ಅಂಬರೀಶ್​ ಮನಮೋಹನ್ ಸಿಂಗ್​​ ನೇತೃತ್ವದ ಯುಪಿಎ ಸರ್ಕಾರದಲ್ಲಿ ಕೇಂದ್ರದ ವಾರ್ತಾ ಮತ್ತು ಪ್ರಸಾರ ಇಲಾಖೆ ಸಚಿವರಾಗಿ ಆಯ್ಕೆಯಾಗಿದ್ದರು. ಆದರೆ ಕಾವೇರಿ ಹೋರಾಟ ತೀವ್ರವಾದಾಗ  ತಮ್ಮ ಹುದ್ದೆಗೆ ರಾಜೀನಾಮೆ ಕೊಟ್ಟು ಜನರ ಜೊತೆ ಹೋರಾಟಕ್ಕೆ ಧುಮುಕಿದರು. 
   

 • Cauvery water

  NEWS19, Aug 2018, 9:01 AM IST

  ನೀರಿಗಾಗಿ ಪದೇಪದೇ ಕ್ಯಾತೆ ತೆಗೆವ ತಮಿಳುನಾಡಿನಿಂದ ಅಮೂಲ್ಯ ನೀರು ವ್ಯರ್ಥ

  ಕಾವೇರಿ ನೀರಿಗಾಗಿ ಪ್ರತಿ ವರ್ಷ ಕರ್ನಾಟಕದ ಜತೆ ಕಾಲು ಕೆರೆದು ಜಗಳಕ್ಕೆ ನಿಲ್ಲುವ ತಮಿಳುನಾಡು, ಈ ಬಾರಿ ಅಪಾರ ಪ್ರಮಾಣದ ನೀರು ಹರಿದುಬರುತ್ತಿದ್ದರೂ ಅದನ್ನು ವ್ಯರ್ಥವಾಗಿ ಸಮುದ್ರಕ್ಕೆ ಬಿಡುತ್ತಿದೆ. ಈವರೆಗೆ ಸರಿಸುಮಾರು 25 ಟಿಎಂಸಿ ನೀರು ಸಮುದ್ರ ಪಾಲಾಗಿದೆ ಎಂದು ಸ್ವತಃ ಆ ರಾಜ್ಯದ ರೈತರೇ ಆಪಾದಿಸಿದ್ದಾರೆ.

 • Video Icon

  NEWS18, Jul 2018, 5:25 PM IST

  ಕಾವೇರಿ ಬಗ್ಗೆ ಪ್ರಶ್ನಿಸಿದ ತಮಿಳು ಪತ್ರಕರ್ತರಿಗೆ ಕನ್ನಡ ನಟ ಯೋಗಿ ಖಡಕ್ ಉತ್ತರ!

  ತಮಿಳು ಚಿತ್ರದಲ್ಲಿ ನಟಿಸುತ್ತಿರುವ ಕನ್ನಡದ ನಟ ಯೋಗಿಗೆ ತಮಿಳು ಪತ್ರಕರ್ತರು ಕಾವೇರಿ ಬಗ್ಗೆ ಪ್ರಶ್ನಿಸಿದ್ದಾರೆ. ಪತ್ರಕರ್ತರ ಪ್ರಶ್ನೆಗೆ ಖಡಕ್ಕಾಗಿ ಉತ್ತರಿಸಿರುವ ಯೋಗಿ ಏನು ಹೇಳಿದ್ದಾರೆ ನೋಡೋಣ.... 

 • Prakash Rai

  4, Jun 2018, 2:30 PM IST

  ರಜನೀಕಾಂತ್ 'ಕಾಲ' ಬಿಡುಗಡೆಗಾಗಿ ಬ್ಯಾಟಿಂಗ್ ಮಾಡಿದ ಪ್ರಕಾಶ್ ರೈ

  ಕಾವೇರಿ ನದಿ ನಿರ್ವಹಣೆ ಪ್ರಾಧಿಕಾರ ರಚನೆ ಬಗ್ಗೆ ತಮಿಳು ಸೂಪರ್‌ಸ್ಟಾರ್ ರಜನೀಕಾಂತ್ ನೀಡಿರುವ ಹೇಳಿಕೆಗೆ ಕನ್ನಡಿಗರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ರಜನೀ ನಟನೆಯ 'ಕಾಲ' ಬಿಡುಗಡೆಗೆ ರಾಜ್ಯ ವಿರೋಧಿಸುತ್ತಿದೆ. ಈ ಕ್ರಮವನ್ನು ಬಹು ಭಾಷಾ ನಟ ಪ್ರಕಾಶ್ ವಿರೋಧಿಸಿದ್ದು, 'ಕಾವೇರಿಗೂ, 'ಕಾಲ'ಗೂ ಏನು ಸಂಬಂಧ?' ಎಂದು ಪ್ರಶ್ನಿಸಿದ್ದಾರೆ.

 • Video Icon

  20, May 2018, 7:42 PM IST

  ಕಾವೇರಿ ನೀರು ಕೇಳಿದ ರಜನಿಕಾಂತ್‌ಗೆ ಎಚ್‌ಡಿಕೆ ತಿರುಗೇಟು

  ತಮಿಳುನಾಡಿಗೆ ನೀರು ಬಿಡಬೇಕೆಂದು ಒತ್ತಡ ಹಾಕಿದ ತಮಿಳು ಸೂಪರ್‌ಸ್ಟಾರ್‌ ರಜನಿಕಾಂತ್‌ಗೆ, ನಿಯೋಜಿತ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ನಮ್ಮ ಬಳಿ ನೀರಿದ್ದರೆ ತಾನೇ ತಮಿಳುನಾಡಿಗೆ ನೀರು ಕೊಡೋದು? ಎಂದು ಎಚ್‌ಡಿಕೆ ಪ್ರಶ್ನಿಸಿದ್ದಾರೆ.

 • Video Icon

  20, May 2018, 5:10 PM IST

  ಸಿಎಂ ಆಗುವ ಮೊದಲೇ ಎಚ್’ಡಿಕೆಗೆ ಶುರುವಾಗಿದೆ ಕಾವೇರಿ ತಲೆನೋವು

  ಕುಮಾರಸ್ವಾಮಿ ಸಿಎಂ ಆಗುವ ಮುನ್ನವೇ ಸೂಪರ್ ಸ್ಟಾರ್ ರಜನೀಕಾಂತ್ ಕಾವೇರಿ ಒತ್ತಡ ಹಾಕಿದ್ದಾರೆ.  ತಮಿಳುನಾಡಿಗೆ ಅಗತ್ಯವಿರುವ ಕಾವೇರಿ ನೀರು ಬಿಡಲೇಬೇಕು. ಕರ್ನಾಟಕದಲ್ಲಿ ಮೈತ್ರಿಕೂಟ ಸರ್ಕಾರವೂ ಸುಪ್ರೀಂಕೋರ್ಟ್ ತೀರ್ಪನ್ನು ಪಾಲಿಸಬೇಕು. ಸುಪ್ರೀಂ ತೀರ್ಪಿನಂತೆ ಕಾವೇರಿ ಸಮಸ್ಯೆ ಬಗೆಹರಿಸಬೇಕು ಎಂದಿದ್ದಾರೆ. 

 • 16, May 2018, 1:19 PM IST

  ಕಾವೇರಿ ಸ್ಕೀಂ ಕರಡು ಬದಲಾವಣೆಗೆ ಸುಪ್ರೀಂ ಸೂಚನೆ; ಕರ್ನಾಟಕಕ್ಕೆ ಹಿನ್ನಡೆ?

  ಕಾವೇರಿ ಸ್ಕೀಮ್ ಬಗ್ಗೆ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆದಿದೆ.   ಕೇಂದ್ರದ ಸ್ಕೀಮ್ ಕರಡಿನಲ್ಲಿನ ನಾಲ್ಕು ಅಂಶಗಳ ಬಗ್ಗೆ ಸುಪ್ರೀಂಕೋರ್ಟ್  ಕೇಂದ್ರ ಸರ್ಕಾರದ ಸ್ಪಷ್ಟಿಕರಣ ಕೇಳಿದೆ.