Blind  

(Search results - 75)
 • <p>Dharwad</p>
  Video Icon

  state21, Jun 2020, 4:20 PM

  ಧಾರವಾಡ, ಬೀದರ್‌ನಲ್ಲಿ ಗ್ರಹಣ ಕಾಲದಲ್ಲಿಯೇ ಉಪಹಾರ ಸೇವಿಸಿ ನಂಬಿಕೆಗೆ ಸವಾಲ್..!

  ಗ್ರಹಣವನ್ನು ಕೆಲವರು ವೈಜ್ಞಾನಿಕವಾಗಿ ನೋಡಿದರೆ, ಇನ್ನು ಕೆಲವರು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನೋಡುತ್ತಾರೆ. ಗ್ರಹಣ ಕಾಲದಲ್ಲಿ ಏನನ್ನು ತಿನ್ನಬಾರದು ಎಂದು ಹೇಳಲಾಗುತ್ತದೆ. ಇದಕ್ಕೆ ಸಡ್ಡು ಹೊಡೆಯಲು ಎಂಬಂತೆ ಧಾರವಾಡದ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸಿಬ್ಬಂದಿ ಉಪ್ಪಿಟ್ಟು ಸೇವನೆ ಮಾಡಿದ್ದಾರೆ.  ಕೇಂದ್ರದ ನಿರ್ದೇಶಕ ಕೆ.ಬಿ.ಗುಡಸಿ ನೇತೃತ್ವದಲ್ಲಿ ಉಪಹಾರ ಸೇವನೆ ಮಾಡಿ ಗ್ರಹಣ ಕಾಲದಲ್ಲಿ ಆಹಾರ ಸೇವಿಸಬಾರದೆನ್ನುವುದನ್ನು ಸುಳ್ಳೆಂದು ಸಾಬೀತುಪಡಿಸಿದ್ದಾರೆ. 

 • Cine World15, May 2020, 6:30 PM

  45 ವರ್ಷದ ಮಲೈಕಾಗೆ 34 ವರ್ಷದ ಅರ್ಜುನ್‌ ಮೋಸ ಮಾಡಿದ್ರಾ?

  ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ಬಿ ಟೌನ್‌ನಲ್ಲಿ ಸಖತ್‌ ಚರ್ಚೆಯಲ್ಲಿರುವ ಜೋಡಿ. 45 ವರ್ಷದ ಮಲೈಕಾ ಹಾಗೂ 34 ವರ್ಷದ ಅರ್ಜುನ್‌ ಮದುವೆಯಾಗಲಿದ್ದಾರೆ ಎಂಬ ವರದಿಗಳು ಸಹ ಇವೆ. ಆದರೆ, ಕೆಲವು ದಿನಗಳ ಹಿಂದೆ ಅರ್ಜುನ್ ಕಪೂರ್, ಅವರು ಮಾಡಿರುವ ಕೆಲಸದಿಂದ ಎಲ್ಲೋ ಮಲೈಕಾಗೆ ಮೋಸ ಮಾಡುತ್ತಿರುವಂತೆ ತೋರುತ್ತದೆ. ಅರ್ಜುನ್ ಇತ್ತೀಚೆಗೆ ರಿಯಾಲಿಟಿ ಶೋವೊಂದರಲ್ಲಿ ಹುಡುಗಿಯ ಜೊತೆ ಬ್ಲೈಂಡ್‌ ಡೇಟ್‌ಗೆ ಹೋಗಿದ್ದರಂತೆ!

 • Karnataka Districts30, Apr 2020, 12:50 PM

  ಅಂಧರಿಗೆ ಊಟ, 2 ತಿಂಗಳ ಮನೆ ಬಾಡಿಗೆ ನೀಡಿದ ಶಾಸಕ ರೇಣು

  ಶಾಸಕ ಎಂ.ಪಿ.ರೇಣುಕಾಚಾರ್ಯ ಅಂಧರಿಗೆ ಮಧಾಹ್ನದ ಊಟ ಮತ್ತು 2 ತಿಂಗಳ ಮನೆ ಬಾಡಿಗೆ 6000 ರು.ಗಳನ್ನು ಶಾಸಕರು ವೈಯುಕ್ತಿವಾಗಿ ನೀಡಿದ್ದಾರೆ. 

 • Cine World12, Apr 2020, 11:18 AM

  ಕಣ್ಣುಗಳು ಮಂಜಾಗುತ್ತಿದೆ, ದೃಷ್ಟಿದೋಷ ಬಂದಿದೆ ; ಆತಂಕ ವ್ಯಕ್ತಪಡಿಸಿದ ಅಮಿತಾಬಚ್ಚನ್

  ಬಾಲಿವುಡ್ ಬಿಗ್‌ ಬಿ ಅಮಿತಾಬಚ್ಚನ್ ವಯೋಸಹಜವಾಗಿ ದೃಷ್ಟಿ ದೋಷ ಸಮಸ್ಯೆ ಕಂಡು ಬಂದಿದೆಯಂತೆ. ನನ್ನ ಕಣ್ಣುಗಳು ಎಲ್ಲಿ ಕುರಿಡಾಗಿ ಬಿಡುತ್ತದೋ ಎಂದು ಭಯವಾಗುತ್ತಿದೆ ಎಂದು ಅಮಿತಾಬಚ್ಚನ್ ಆತಂಕ ವ್ಯಕ್ತಪಡಿಸಿದ್ದಾರೆ. 

 • 2020ರ ಸೆಪ್ಟೆಂಬರ್ ಬಳಿಕ ನ್ಯೂ ಜನರೇಶನ್ ಹೊಂಡಾ ಸಿಟಿ ಭಾರತಕ್ಕೆ ಎಂಟ್ರಿ

  Cars5, Apr 2020, 5:49 PM

  ಕ್ರ್ಯಾಶ್ ಟೆಸ್ಟ್‌ನಲ್ಲಿ ಹೋಂಡಾ ಸಿಟಿಗೆ 5 ಸ್ಟಾರ್, ಸೆಕ್ಯೂರಿಟಿ ಸಿಸ್ಟಂನಲ್ಲಿ ಎಲ್ಲರಿಗಿಂತ ಮುಂದೆ!

  ಅಪಘಾತದಲ್ಲಿ ವರ್ಷಕ್ಕೆ ಸಾವಿರಾರು ಸಾವುಗಳು ಸಂಭವಿಸುತ್ತಲೇ ಇರುತ್ತದೆ. ಇದಕ್ಕಾಗಿ ಸರ್ಕಾರಗಳು ಅನೇಕ ಕ್ರಮಗಳನ್ನು ಕೈಗೊಳ್ಳುತ್ತಲೂ ಇವೆ. ಸಾರ್ವಜನಿಕವಾಗಿ ಜಾಗೃತಿಗಳನ್ನೂ ಮೂಡಿಸುತ್ತಿವೆ. ಜೊತೆಗೆ ವಾಹನಗಳಲ್ಲಿ ಹಲವಾರು ಸುರಕ್ಷತಾ ಸೌಲಭ್ಯವನ್ನು ಅಳವಡಿಸಿಕೊಳ್ಳುವ ಸೂಚನೆಗಳನ್ನೂ ಕೊಟ್ಟಿವೆ. ಅದಕ್ಕೆ ತಕ್ಕಂತೆ ಕಾರು ಉತ್ಪಾದನೆಯಲ್ಲಿ ಅಡ್ವಾನ್ಸ್ಡ್ ಫೀಚರ್‌ಗಳನ್ನು ಅಳವಡಿಸಲಾಗುತ್ತಿದೆ. ಈಗ ಆ ಸಾಲಿನಲ್ಲಿ ಹೋಂಡಾ ಸಿಟಿ ಪ್ರಥಮವಾಗಿ ನಿಂತಿದೆ.

 • Pranjal Patil

  Woman3, Apr 2020, 6:16 PM

  ಮೊದಲ ದೃಷ್ಟಿ ಹೀನ ಮಹಿಳಾ ಐಎಎಸ್ ಅಧಿಕಾರಿಯ ಯಶೋಗಾಥೆ ಇದು...

  ಮಹಾರಾಷ್ಟ್ರದ ಉಲ್ಹಾಸ್‌ನಗರ ನಿವಾಸಿ ಪ್ರಾಂಜಲ್ ಪಾಟೀಲ್ ಧೈರ್ಯ ಮತ್ತು ಅಚಲ ವಿಶ್ವಾಸಕ್ಕೆ ಜೀವಂತ ಉದಾಹರಣೆ. ಅವರು ದೇಶದ ಮೊದಲ ದೃಷ್ಟಿಹೀನ ಮಹಿಳಾ ಐಎಎಸ್ ಅಧಿಕಾರಿ. ಜನರ ನಿಂದಿಸಿದರೂ, ಹಲವು ಬಾರಿ ತಿರಸ್ಕರಿಸಲ್ಪಟ್ಟರೂ ಛಲ ಬಿಡದೆ ಐಎಎಸ್ ಅಫೀಸರ್‌ ಆದವರು ಪ್ರಂಜಲ್. ಅವರ ಹೋರಾಟ ಮತ್ತು ಯಶಸ್ಸಿನ ಕಥೆ ಎಲ್ಲರಿಗೂ ಮಾದರಿ.

 • Haveri

  Coronavirus Karnataka29, Mar 2020, 7:19 AM

  ದಾರಿ ತಪ್ಪಿಸಿಕೊಂಡು ಅಲೆದಾಡುತ್ತಿದ್ದ ಅಂಧ: ಊರಿಗೆ ಕಳುಹಿಸಿ ಮಾನವೀಯತೆ ಮೆರೆದ ಪತ್ರಕರ್ತರು

  ಲಾಕ್‌ಡೌನ್‌ ಸಂದರ್ಭದಲ್ಲಿ ದಾರಿ ತಪ್ಪಿಸಿಕೊಂಡು ನಗರದಲ್ಲಿ ಅಲೆದಾಡುತ್ತಿದ್ದ ಅಂಧನೋರ್ವನನ್ನು ಊರಿಗೆ ಕಳುಹಿಸುವ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದ ಘಟನೆ ಶನಿವಾರ ನಗರದಲ್ಲಿ ಸಂಭವಿಸಿದೆ.
   

 • Blind

  Karnataka Districts20, Mar 2020, 2:56 PM

  ಒಂದೇ ತಾಯಿ ಹೆತ್ತ ಐವರು ಮಕ್ಕಳಲ್ಲಿಯೂ ಅಂಧತೆ

  ಎಲ್ಲ ಸರಿಯಿದ್ದವ ಕುಟುಂಬಗಳಲ್ಲೇ ಸಮಸ್ಯೆಗಳು ತಾಂಡವವಾಡುತ್ತವೆ. ಆದರೆ ನಾಲ್ಕೈದು ಮಕ್ಕಳೂ ಅಂಧರಾದರೆ ಅವರ ಕುಟುಂಬದಲ್ಲಿನ ಎಲ್ಲ ವಿಷಯಗಳೂ ಸಮಸ್ಯೆಗಳೇ ಎನಿಸುತ್ತವೆ. ಅಂಥ ಕುಟುಂಬವೊಂದು ಚಿಕ್ಕಮಗಳೂರಿನಲ್ಲಿದೆ. 

 • jaggesh
  Video Icon

  state12, Mar 2020, 1:32 PM

  ಬಿಗ್‌ 3 ಬೆಳಕಿಗೆ ತಂದ ಪ್ರತಿಭೆಗಳಿಗೆ ಜಗ್ಗೇಶ್‌ರಿಂದ ಸಿಕ್ತು ಸೂರು ಭಾಗ್ಯ!

  ಸುವರ್ಣ ನ್ಯೂಸ್ ಬೆಳಕಿಗೆ ತಂದ ಪ್ರತಿಭೆಗಳಿಗೆ ಈಗ ಸೂರು ಭಾಗ್ಯ ಸಿಕ್ಕಿದೆ. ಡಿವಿ ಹಳ್ಳಿಯ ಅಂಧ ಪ್ರತಿಭೆಗಳ ಬಗ್ಗೆ ಬಿಗ್ 3 ವರದಿ ಮಾಡಿತ್ತು.  ಆ ವರದಿ ನೋಡಿ ಜಗ್ಗೇಶ್ ಮನೆ ಕಟ್ಟಿಸಿಕೊಡುವ ಭರವಸೆ ನೀಡಿದ್ದರು. ಅದರಂತೆ ಸೂರು ಭಾಗ್ಯ ಸಿಕ್ಕಿದೆ. 

 • Inspector Police Bengaluru

  Bengaluru Rural8, Mar 2020, 8:43 PM

  ಮಹಿಳಾ ದಿನಾಚರಣೆ: ಬೆಂಗಳೂರು ವಿದ್ಯಾರ್ಥಿನಿಗೆ ಒಂದು ದಿನದ ಇನ್ಸ್‌ಸ್ಪೆಕ್ಟರ್ ಗೌರವ!

  ಬೆಂಗಳೂರು(ಮಾ.08): ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ,ಬೆಂಗಳೂರು ನಗರ ಪೊಲೀಸರಿಂದ ವಿನೂತನ ಪ್ರಯತ್ನ ಎಲ್ಲರ ಗಮನಸೆಳೆಯಿತು. ವಿದ್ಯಾಭ್ಯಾಸದಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿನಿಯರಿಗೆ ನಗರದ ಬಹುತೇಕ ಠಾಣೆಗಳಲ್ಲಿ  ಒಂದು ದಿನದ ಠಾಣಾಧಿಕಾರಿಯನ್ನಾಗಿ ಮಾಡಿ ಗೌರವವನ್ನು ಸಲ್ಲಿಸಲಾಯ್ತು. ಬಾಣಸವಾಡಿ ಪೊಲೀಸ್ ಠಾನೆಯಲ್ಲಿ ಮಹಿಳಾ ದಿನಾಚರಣೆಯ ಪ್ರಯುಕ್ತ, ಬಡತನದಲ್ಲಿ ಬೆಳೆದು ಅಂಧರಾದರೂ ವಿದ್ಯಾಭ್ಯಾಸದಲ್ಲಿ ಉತ್ತಮ ಸಧನೆ ಮಾಡಿರುವ ಕುಮಾರಿ ಸಫ್ನ ಟಿ.ಎಂ ರವರನ್ನು ಒಂದು ದಿನದ ಮಟ್ಟಿಗೆ ಬಾಣಸವಾಡಿ ಪೊಲೀಸ್ ಠಾಣೆಯ ಠಾಣಾಧಿಕಾರಿಯಾಗಿ ನೇಮಿಸಿ ಗೌರವ ಸಲ್ಲಿಸಲಾಯಿತು.

 • Jaggesh

  Small Screen11, Feb 2020, 11:09 PM

  ಕಲಾವಿದರು ಕಷ್ಟದಲ್ಲಿರಬಾರದು, ಅಂಧ ಗಾಯಕಿಯರಿಗೆ ಜಗ್ಗೇಶ್ ಸೂರಿನ ವಾಗ್ದಾನ

  ಇಂಥ ಒಂದೆಲ್ಲಾ ಸಂಗತಿಗಳು ನಮ್ಮನ್ನು ಆಗಾಗ ಎಚ್ಚರಿಸುತ್ತ ಇರುತ್ತವೆ. ಕನ್ನಡದ ಸೂಪರ್ ಹಿಟ್ ರಿಯಾಲಿಟಿ ಶೋಗಳಲ್ಲಿ ಒಂದಾದ ಜೀ ಕನ್ನಡ ಸರಿಗಮಪ ವೇದಿಕೆಗೆ ಆಗಮಿಸಿದ ಅಂಧ ಗಾಯಕಿಯರಿಗೆ ಜಗ್ಗೇಶ್ ದೊಡ್ಡ ನೆರವು ನೀಡಿದ್ದಾರೆ.

 • Shivamogga

  Karnataka Districts7, Feb 2020, 1:46 PM

  ಸಂಪೂರ್ಣ ಅಂಧತ್ವ ಹೊಂದಿದ ಯುವತಿ ಕೈ ಹಿಡಿದು ಆದರ್ಶ ಮೆರೆದ ಲೆಕ್ಕ ಪರಿಶೋಧಕ

  ಸಂಪೂರ್ಣ ಅಂಧತ್ವ ಹೊಂದಿದ ಯುವತಿಯ ಕೈ ಹಿಡಿಯುವ ಮೂಲಕ ಶಿವಮೊಗ್ಗದಲ್ಲಿ ಅಕೌಂಟಂಟ್ ಓರ್ವರು ಆದರ್ಶ ಮೆರೆದಿದ್ದಾರೆ. 

 • Karnataka Districts31, Jan 2020, 7:36 AM

  30 ವರ್ಷಗಳಿಂದ ಅಲೆಯುತ್ತಿದ್ದ ಅಂಧ ದಂಪತಿಗೆ ಕೊನೆಗೂ ಸಿಕ್ತು ಸೂರು!

  ಪಾವಗಡ ಪಟ್ಟಣದ 8ನೇ ವಾರ್ಡ್‌ ಕೋಟೆಗೆ ಅಂಟಿಕೊಂಡ ಪುರಸಭೆಯ ಶಿಥಿಲಗೊಂಡಿದ್ದ ಹಳೇ ಕಟ್ಟಡವೊಂದರಲ್ಲಿ ಸುರೇಶ್‌ ಹಾಗೂ ಇವರ ಪತ್ನಿ ಗಿರಿಜಮ್ಮ ಹಲವಾರು ವರ್ಷಗಳಿಂದ ವಿಷಪೂರಿತ ಜುಂತುಗಳ ಒಡಾಟದ ಮಧ್ಯೆ ವಾಸವಾಗಿದ್ದರು. ಇದೀಗ ಕೊನೆಗೂ ಅವರಿಗೆ ಸೂರು ಸಿಕ್ಕಿದೆ.

 • Old couple

  Karnataka Districts25, Jan 2020, 11:58 AM

  ಪಾಳು ಬಿದ್ದ ಕಟ್ಟಡದಲ್ಲಿ ವೃದ್ಧ ಅಂಧ ದಂಪತಿಯ ಜೀವನ

  ಪಾಳು ಬಿದ್ದಿರುವ ಕಟ್ಟಡವೊಂದರಲ್ಲಿ ಅಂಧ ದಂಪತಿ ವಾಸಿಸುತ್ತಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ಅಂಧ ವೃದ್ಧ ದಂಪತಿ ಹಲವಾರು ಬಾರಿ ವಸತಿ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿದರೂ ಅಧಿಕಾರಿಗಳು ಮಾತ್ರ ನಿರ್ಲಕ್ಷ್ಯ ವಹಿಸುತ್ತಲೇ ಬಂದಿದ್ದಾರೆ.

 • ramesh 1

  LIFESTYLE14, Jan 2020, 3:38 PM

  ಕ್ರಿಕೆಟಿನಿಂದಲೇ ಕಣ್ಣು ಕಳೆದುಕೊಂಡವನು ಅಂಧರ ಕ್ರಿಕೆಟ್ ತಂಡದ ಕ್ಯಾಪ್ಟನ್!

  ಕಳೆದ ಡಿಸೆಂಬರ್‌ನಲ್ಲಿ ಒಂದು ವಿಶಿಷ್ಟ ಪಂದ್ಯಕೂಟ ನಡೆಯಿತು. ಅದು ಅಂಧರ ಕ್ರಿಕೆಟ್ ಭಾರತ- ನೇಪಾಳ ತಂಡಗಳ ಒನ್ ಡೇ ಸೀರೀಸ್. ಈ ಪಂದ್ಯಗಳಲ್ಲಿ ಮೂರು ಆಟಗಳನ್ನೂ ಭಾರತದ ಕ್ರಿಕೆಟ್ ತಂಡ ಗೆದ್ದುಕೊಂಡಿತು. ಈ ತಂಡದ ಕ್ಯಾಪ್ಟನ್ ಆಗಿದ್ದವರು ಕನ್ನಡಿಗ ಸುನೀಲ್ ರಮೇಶ್ ಕುಮಾರ್. ಅವರ ಕತೆ ತುಂಬ ಸ್ಫೂರ್ತಿದಾಯಕವಾಗಿದೆ.