Big 3  

(Search results - 155)
 • undefined
  Video Icon

  Karnataka Districts19, Mar 2020, 4:41 PM IST

  ಅರ್ಧಗಂಟೆಯಲ್ಲಿ ಕರೆಂಟೂ ಬಂತು, ಗ್ಯಾಸೂ ಬಂತು; ಇದು ಬಿಗ್‌ 3 ಇಂಪ್ಯಾಕ್ಟ್!

  ಮಂಗಳೂರಿನ ಅರಸಿನಮಕ್ಕಿಯಲ್ಲಿರುವ ಎರಡು ಮನೆಗಳಿಗೆ 7 ವರ್ಷಗಳಾದರೂ ವಿದ್ಯುತ್ ಭಾಗ್ಯ ಸಿಕ್ಕಿರಲಿಲ್ಲ. ಕತ್ತಲಲ್ಲೇ ಜೀವನ ನಡೆಸುತ್ತಿದ್ದರು ಎರಡು ಕುಟುಂಬದವರು. ಈ ವರದಿಯನ್ನು ಬಿಗ್‌ 3 ಯಲ್ಲಿ ಪ್ರಸಾರ ಮಾಡುತ್ತಿದ್ದಂತೆ ಕೂಡಲೇ ಅಧಿಕಾರಿಗಳು ಎಚ್ಚೆತ್ತಿದ್ದಾರೆ. ಕೇವಲ ಅರ್ಧಗಂಟೆಯಲ್ಲೇ ಮನೆಗೆ ಬೆಳಕು, ಗ್ಯಾಸೂ ಎರಡೂ ಬಂದಿದೆ. ಇದು ಸುವರ್ಣ ನ್ಯೂಸ್ ಬಿಗ್ 3 ಬಿಗ್ ಇಂಪ್ಯಾಕ್ಟ್! 

 • jaggesh
  Video Icon

  state12, Mar 2020, 1:32 PM IST

  ಬಿಗ್‌ 3 ಬೆಳಕಿಗೆ ತಂದ ಪ್ರತಿಭೆಗಳಿಗೆ ಜಗ್ಗೇಶ್‌ರಿಂದ ಸಿಕ್ತು ಸೂರು ಭಾಗ್ಯ!

  ಸುವರ್ಣ ನ್ಯೂಸ್ ಬೆಳಕಿಗೆ ತಂದ ಪ್ರತಿಭೆಗಳಿಗೆ ಈಗ ಸೂರು ಭಾಗ್ಯ ಸಿಕ್ಕಿದೆ. ಡಿವಿ ಹಳ್ಳಿಯ ಅಂಧ ಪ್ರತಿಭೆಗಳ ಬಗ್ಗೆ ಬಿಗ್ 3 ವರದಿ ಮಾಡಿತ್ತು.  ಆ ವರದಿ ನೋಡಿ ಜಗ್ಗೇಶ್ ಮನೆ ಕಟ್ಟಿಸಿಕೊಡುವ ಭರವಸೆ ನೀಡಿದ್ದರು. ಅದರಂತೆ ಸೂರು ಭಾಗ್ಯ ಸಿಕ್ಕಿದೆ. 

 • undefined
  Video Icon

  Karnataka Districts27, Feb 2020, 4:29 PM IST

  ಬಿಗ್ 3 ಹೊತ್ತು ತಂದಿದೆ ಕರುನಾಡಿನ ತಾಯಿಯೊಬ್ಬಳ ಕರುಣಾಜನಕ ಕಥೆ

  ದಾವಣಗೆರೆಯಲ್ಲೊಂದು ಮನ ಮಿಡಿಯುವ ಕಥೆ. ಇಲ್ಲಿನ ವ್ಯವಸ್ಥೆ ಕಂಡರೆ ಎಂತವರಿಗೆ ಅಯ್ಯೊ ಎನಿಸದೇ ಇರದು. 

  ಬಿಗ್ 3 ಹೊತ್ತು ತಂದಿದೆ ಕರುನಾಡಿನ ತಾಯಿಯೊಬ್ಬಳ ಕರುಣಾಜನಕ ಕಥೆ. ಈ ತಾಯಿ ವಿಚಾರ ತಿಳಿದರೆ ಕಣ್ಣಲ್ಲಿ ನೀರು ಬರುತ್ತೆ.  ಅದೇನದು ಇಲ್ಲಿದೆ ಸಂಪೂರ್ಣ ಡೀಟೇಲ್ಸ್..

 • undefined
  Video Icon

  state26, Feb 2020, 5:11 PM IST

  ರಾಷ್ಟ್ರಮಟ್ಟದ ENBA ಅವಾರ್ಡ್: ಜೈ ಹೋ ಸುವರ್ಣ ನ್ಯೂಸ್, ಜೈ ಹೋ ಬಿಗ್‌ 3

  ಸುವರ್ಣ ನ್ಯೂಸ್‌ನ ಜನಪ್ರಿಯ ಕಾರ್ಯಕ್ರಮ ಬಿಗ್‌ 3 ಗೆ ಎಕ್ಸ್ಚೇಂಜ್ ಫಾರ್ ಮೀಡಿಯಾ ಕೊಡ ಮಾಡುವ ಕರೆಂಟ್ ಅಫೇರ್ಸ್ ವಿಭಾಗದ ರನ್ನರ್ ಅಪ್ ಪ್ರಶಸ್ತಿ ಲಭಿಸಿದೆ. ಜನರ ಧ್ವನಿಯಾಗಿ, ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವ ಬಿಗ್‌ 3 ಗೆ ಈ ಪ್ರಶಸ್ತಿ ಸಂದಿರುವುದು ಹೆಮ್ಮೆಯ ವಿಚಾರ.  

 • guru
  Video Icon

  Karnataka Districts24, Feb 2020, 12:46 PM IST

  ಹಳೆ ಶಾಲೆಗಳ ರೂಪ ಬದಲಿಸಿ ಹೊಸ ಖದರ್ ಕೊಟ್ಟ ಗುರು ಟೀಂ

  ಹಳೇ ಶಾಲೆಗಳಿಗೆ ಹೊಸ ಲುಕ್ ನೀಡಿ  ವಿದ್ಯಾರ್ಥಿಗಳು ಶಾಲೆಗೆ ಬರುವಂತೆ ಮಾಡುತ್ತಿದೆ ಗುರು ಮತ್ತು ಮತ್ತವರ Makesome Smile team. ಈ ಟೀಂ ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿದೆ. ಈ ತಂಡದಲ್ಲಿ 80 ಕ್ಕೂ ಹೆಚ್ಚು ಯುವಕರಿದ್ದಾರೆ. ಈ ಟೀಂ ಕಳೆದ ಮೂರು ವರ್ಷಗಳಿಂದ ಶಾಲೆಗಳಿಗೆ ಪೇಯಿಂಟ್ ಮಾಡಿಕೊಂಡು ಬರುತ್ತಿದೆ. ಇವರ ಸಾಮಾಜಿಕ ಕೆಲಸಕ್ಕೆ ಶಹಬ್ಬಾಸ್ ಎನ್ನಲೇಬೇಕು..! 

 • Mudabidire
  Video Icon

  Karnataka Districts24, Feb 2020, 10:55 AM IST

  ಕ್ಯಾನ್ಸರ್ ಪೀಡಿತ ಮಗುವಿಗಾಗಿ ದುಡ್ಡು ಹೊಂದಿಸಿದ ಧೀರ ವಿಕ್ಕಿ ಶೆಟ್ಟಿ

  ಬ್ಲಡ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಬಾಲಕಿಯ ಚಿಕಿತ್ಸೆಗಾಗಿ ನೇತಾಜಿ ಬ್ರಿಗೇಡ್ ಯುವಕನೊಬ್ಬ ವೇಷ ತೊಟ್ಟು ಹಣ ಸಂಗ್ರಹಿಸಿದ್ದಾರೆ. 

 • Mohammud Haneef
  Video Icon

  state23, Feb 2020, 11:07 AM IST

  ಆ್ಯಂಬುಲೆನ್ಸ್‌ ಹೀರೋ ಹನೀಫ್; ನಿಮಗೊಂದು ಸೆಲ್ಯೂಟ್!

  ಬೆಂಗಳೂರು (ಫೆ. 23): ಮಹಮ್ಮದ್ ಹನೀಫ್ ಎಲ್ಲೆಡೆ ಸದ್ದು ಮಾಡುತ್ತಿರುವ ಆ್ಯಂಬುಲೆನ್ಸ್‌  ಹೀರೋ. 40 ದಿನದ ಹಸುಗೂಸನ್ನು ಮಂಗಳೂರಿನ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆಯಿಂದ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಕೇವಲ 4 ಗಂಟೆ 10 ನಿಮಿಷಕ್ಕೆ ತಲುಪಿಸಿದ ರಿಯಲ್ ಹೀರೋ.  ಪುಟ್ಟ ಮಗುವಿಗಾಗಿ ಹನೀಫ್ ತೋರಿಸಿದ ಸಾಹಸಕ್ಕೆ ಸಾರ್ವಜನಿಕ ಮೆಚ್ಚುಗೆ ವ್ಯಕ್ತವಾಗಿದೆ.

  ಆ್ಯಂಬುಲೆನ್ಸ್‌ ಹೀರೋ ಹನೀಫ್ ಸುವರ್ಣ ನ್ಯೂಸ್‌ನ big 3 ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ್ದಾರೆ. ಹನೀಫ್ ಅವರ ಮಾತುಗಳನ್ನು ಕೇಳಿದರೆ ಶಹಭ್ಭಾಸ್ ಎನ್ನಲೇಬೇಕು! 

 • BIG 3
  Video Icon

  India22, Feb 2020, 10:44 PM IST

  ಸುವರ್ಣ ನ್ಯೂಸ್ ಬಿಗ್‌-3ಗೆ ರಾಷ್ಟ್ರಮಟ್ಟದ ENBA ಪ್ರಶಸ್ತಿ

  ಸುವರ್ಣ ನ್ಯೂಸ್ ಮುಕುಟಕ್ಕೆ ಮತ್ತೊಂದು ಗರಿ ಸಿಕ್ಕಿದೆ. ಎಕ್ಸ್'ಚೇಂಜ್ ಫಾರ್ ಮೀಡಿಯಾ ಕೊಡಮಾಡುವ ಕರೆಂಟ್ ಅಫೇರ್ಸ್ ವಿಭಾಗದ ರನ್ನರ್ ಅಪ್ ಪ್ರಶಸ್ತಿ ಸುವರ್ಣ ನ್ಯೂಸ್ ಗೆ ದೊರೆತಿದೆ ಎಂದು ತಿಳಿಸಲು ಹೆಮ್ಮೆಯಾಗುತ್ತಿದೆ. ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ ಪ್ರಶಸ್ತಿ ಸ್ವೀಕಾರ ಮಾಡಿದರು. ಜೆಪಿ ಖ್ಯಾತಿಯ ಜಯಪ್ರಕಾಶ ಶೆಟ್ಟಿ ನಡೆಸಿಕೊಡುವ ಬಿಗ್-3 ಕಾರ್ಯಕ್ರಮಕ್ಕೆ ಪುರಸ್ಕಾರ ದೊರೆತಿದೆ.

 • After Under CBI trap five IAS officer will face ED inquiry in mining scam
  Video Icon

  Karnataka Districts17, Feb 2020, 2:28 PM IST

  ರಾಜಾರೋಷವಾಗಿ ನಡೆಯುತ್ತಿದೆ ಅಕ್ರಮ ಗಣಿಗಾರಿಕೆ: ಜೀವ ಕೈಯಲ್ಲಿ ಹಿಡಿದು ಕುಳಿತ ಜನತೆ

  ಕಳೆದೊಂದು ದಶಕದಿಂದ ನಡೆಯುತ್ತಿರುವ ಅಕ್ರಮ ಗಣಿಕಾರಿಕೆಯಿಂದ ಧಾರವಾಡ ಜಿಲ್ಲೆಯ ತಾಲೂಕಿನ ಗಬ್ಯಾಪುರ, ಎಮ್ಮೇಟಿ, ಲಿಂಗನಕೊಪ್ಪ ಗ್ರಾಮದ ಜನರು  ಜೀವ ಭಯದಲ್ಲೇ ವಾಸಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ. 
   

 • Big 3
  Video Icon

  Karnataka Districts15, Feb 2020, 3:49 PM IST

  BIG 3 Impact: ಅಂದು ಬೀದಿ ಬದಿ ಹಾಡುತ್ತಿದ್ದ ಅಂಧರು ಇಂದು ಸೆಲೆಬ್ರೆಟಿಗಳು!

  ಜಿಲ್ಲೆಯ ಮಧುಗಿರಿ ತಾಲೂಕಿನ ಗ್ರಾಮದವೊಂದರಲ್ಲಿ ಒಂದೇ ಕುಟುಂಬದ ಮೂವರು ಅಂಧರಿಗೆ ಏಳು ತಿಂಗಳಿಂದ ಪೆನ್ಷನ್ ಬಂದಿರಲಿಲ್ಲ ಅಂತ 20-06-2018 ರಂದು ಸುವರ್ಣ ನ್ಯೂಸ್ ಬಿಗ್ 3 ಕಾರ್ಯಕ್ರಮದಲ್ಲಿ ವರದಿ ಪ್ರಸಾರ ಮಾಡಿತ್ತು. ವರದಿ ಮಾಡಿದ ಕೇವಲ ಒಂದೇ ದಿನದಲ್ಲಿ ಇವರಿಗೆ ಸರ್ಕಾರದಿಂದ ಪೆನ್ಷನ್ ಸಿಕ್ಕಿತ್ತು. ಅಂದು ಈ ಅಂಧರು ಹಾಡಿದ ಹಾಡಿಗೆ ಇಡೀ ಕರುನಾಡು ಫಿದಾ ಆಗಿತ್ತು. 

 • Belagavi
  Video Icon

  Karnataka Districts7, Feb 2020, 1:21 PM IST

  ಪ್ರವಾಹದಲ್ಲಿ ಕಿತ್ತು ಹೋದ ಶಾಲೆಯ ಛಾವಣಿ: ಸ್ಕೂಲ್‌ನತ್ತ ತಿರುಗಿನೋಡದ ಜನಪ್ರತಿನಿಧಿಗಳು

  ಕಳೆದ ವರ್ಷ ಭೀಕರ ಪ್ರವಾಹದಿಂದ ಬೆಳಗಾವಿ ಜಿಲ್ಲೆಯ ಅನೇಕ ಸರ್ಕಾರಿ ಶಾಲೆಗಳು ಹಾನಿಗೊಳಗಾಗಿದ್ದವು. ಈ ಪ್ರವಾಹದಲ್ಲಿ ತಾಲೂಕಿನ ಕಮಕಾರಟ್ಟಿ ಶಾಲೆಯ ಛಾವಣಿ ಕಿತ್ತು ಹೋಗಿದೆ. ಆದರೆ, ಇಂದಿಗೂ ಈ ಶಾಲೆಯ ಛಾವಣೆ ಮಾತ್ರ ದುರಸ್ತಿಯಾಗಿಲ್ಲ. ಪ್ರವಾಹ  ಬಂದು ಹೋಗಿ ಹಲವು ತಿಂಗಳು ಗತಿಸಿದರೂ ಇಲ್ಲಿನ ಜನಪ್ರತಿನಿಧಿಗಳು ಮಾತ್ರ ಇದಕ್ಕೂ ತಮಗೂ ಸಂಬಂಧವಿಲ್ಲವೇನೋ ಎಂಬಂತೆ ತಮ್ಮ ಪಾಡಿಗೆ ತಾವಿದ್ದಾರೆ.

 • BIG-3
  Video Icon

  sports5, Feb 2020, 7:07 PM IST

  ಕೋಟಿ ಕೋಟಿ ಖರ್ಚು ಮಾಡಿದ ಕ್ರೀಡಾಂಗಣಕ್ಕೆ ಬೀಗ; ಬಿಸಿ ಮುಟ್ಟಿಸಿದ BIG 3

  ಕೋಟಿ ಕೋಟಿ ಖರ್ಚು ಮಾಡಿದ ವಾಲಿಬಾಲ್ ಒಳಾಂಗಣ ಕ್ರೀಡಾಂಗಣ ಇದೀಗ ಪಾಳು ಬಿದ್ದಿದೆ. ರಾಷ್ಟ್ರ, ಅಂತಾರಾಷ್ಟ್ರ ಮಟ್ಟದಲ್ಲಿ ಮಿಂಚಬೇಕಾದ ಕರ್ನಾಟಕ ಪ್ರತಿಭೆಗಳು ಕ್ರೀಡಾಂಗಣ ಇಲ್ಲದೆ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಸುವರ್ಣನ್ಯೂಸ್ ಬಿಗ್ ತ್ರಿ ತಂಡ, ಕಾರ್ಪೋರೇಟ್ ಸೇರಿದಂತೆ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದೆ.

 • undefined
  Video Icon

  Karnataka Districts5, Feb 2020, 3:46 PM IST

  Big 3 Imapact: ಸಿಡಿಲು ಬಡಿದು ಮನೆ ಕಳೆದುಕೊಂಡ ರೈತ, ಸಂತ್ರಸ್ತನ ನೆರವಿಗೆ ಧಾವಿಸಿದ ತಾಲೂಕಾಡಳಿತ

  ದಾವಣಗೆರೆ ಜಿಲ್ಲೆಯ ಚನ್ನಗಿರಿಯ ಶಿವಪ್ಪ ಮನೆಗೆ ಸಿಡಿಲು ಬಡಿದು ಮೆನ ಕಳೆದುಕೊಂಡ ರೈತನ ಬಗ್ಗೆ ವರದಿಯನ್ನ ಸುವರ್ಣ ನ್ಯೂಸ್‌ ಪ್ರಸಾರ ಮಾಡಿತ್ತು. ಈ ಸುದ್ದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತ ಚನ್ನಗಿರಿ ತಾಲೂಕಾಡಳಿತ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 2 ಲಕ್ಷ ರು. ಪರಿಹಾರವನ್ನ ಬಿಡುಗಡೆ ಮಾಡಿದೆ. 
   

 • Ballari
  Video Icon

  Karnataka Districts31, Jan 2020, 2:52 PM IST

  Big 3 ವರದಿ: ಯಾವಾಗ ಆಗುತ್ತೆ ಬಳ್ಳಾರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ?

  2009ರಲ್ಲಿ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಬಳ್ಳಾರಿಗೆ ಒಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಅಂತ ಅಂದಿನ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಮೇಲೆ ಒತ್ತಡ ಹಾಕಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಂಟಿಯಾಗಿ 120 ಕೋಟಿ ವೆಚ್ಚದಲ್ಲಿ ಆಸ್ಪತ್ರೆ ನಿರ್ಮಾಣ ಕಾರ್ಯ ಆರಂಭವಾಗಿತ್ತು. ಆದರೆ, ಆಸ್ಪತ್ರೆ ಕಾಮಗಾರಿ ಆರಂಭವಾಗಿ 10 ವರ್ಷ ಕಳೆದರೂ ಇಲ್ಲಿಯವರೆಗೆ ಕಾಮಗಾರಿ ಪೂರ್ಣವಾಗಿಲ್ಲ. 

 • undefined
  Video Icon

  Karnataka Districts31, Jan 2020, 2:25 PM IST

  Big 3 Impact: ವರದಿ ಪ್ರಸಾರವಾದ 6 ಗಂಟೆಯಲ್ಲೇ ಶಾಲೆಗೆ ಬಂತು ಪೈಪ್ ಲೈನ್

  ಜಿಲ್ಲೆಯ ದೇವದುರ್ಗ ತಾಲೂಕಿನ ಸರ್ಕಾರಿ ಶಾಲೆಯಲ್ಲಿ ಮಕ್ಕಳು ಶೌಚಕ್ಕೆ ಹೋಗಲು ಪರದಾಡುವಂತ ಸುದ್ದಿಯನ್ನ ಸುವರ್ಣ ನ್ಯೂಸ್ ಪ್ರಸಾರ ಮಾಡಿತ್ತು. ಬಿಗ್ 3 ವರದಿ ಪ್ರಸಾರವಾದ ಒಂದೇ ದಿನದಲ್ಲೇ ಸಮಸ್ಯೆ ಪರಿಹಾರವಾಗಿದೆ. ನಾಲ್ಕು ವರ್ಷದಿಂದ  ಇದ್ದ ಸಮಸ್ಯೆಯನ್ನ ಅಧಿಕಾರಿಗಳು ಒಂದೇ ದಿನದಲ್ಲಿ ಪರಿಹಾರ ಮಾಡಿದ್ದಾರೆ.