Bfc  

(Search results - 48)
 • Sports7, Oct 2019, 1:42 PM IST

  ಕಂಠೀರವ ಕ್ರೀಡಾಂಗಣದಲ್ಲೇ ನಡೆಯುತ್ತೆ BFC ಮ್ಯಾಚ್

  ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆ (ಕೆಎಎ) ಹಾಗೂ ಸ್ಥಳೀಯ ಅಥ್ಲೆಟಿಕ್ಸ್ ಕೋಚ್‌ಗಳ ಪ್ರಬಲ ವಿರೋಧದ ನಡುವೆಯೂ ಕಂಠೀರವ ಕ್ರೀಡಾಂಗಣದಲ್ಲಿ ಫುಟ್ಬಾಲ್ ಪಂದ್ಯಗಳನ್ನು ಆಡಿಸಲು ಜೆಎಸ್‌ಡಬ್ಲ್ಯೂ ಸಂಸ್ಥೆ ರಾಜ್ಯ ಕ್ರೀಡಾ ಇಲಾಖೆಯ ಅನುಮತಿ ಪಡೆಯಲಾಗಿದೆ ಎಂದು ಹೆಸರು ಹೇಳಲಿಚ್ಚಿಸದ ಅಧಿಕಾರಿ ಸುವರ್ಣ ನ್ಯೂಸ್.ಕಾಂ ಸೋದರ ಸಂಸ್ಥೆ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

 • Bengaluru FC

  SPORTS19, Sep 2019, 5:36 PM IST

  ಬೆಂಗ​ಳೂ​ರಿ​ನಿಂದ BFC ಎತ್ತಂಗ​ಡಿ?

  ಬೆಂಗ​ಳೂರು ಎಫ್‌ಸಿ ತಂಡ ಎಎಫ್‌ಸಿ ಕಪ್‌ನಲ್ಲೂ ಪಾಲ್ಗೊ​ಳ್ಳುವ ಕಾರಣ, ಸೆಪ್ಟೆಂಬ​ರ್‌ 15ರೊಳಗೆ ತನ್ನ ತವರು ಪಂದ್ಯ​ಗ​ಳನ್ನು ಯಾವ ಕ್ರೀಡಾಂಗಣದಲ್ಲಿ ಆಡ​ಲಿದೆ ಎನ್ನು​ವು​ದನ್ನು ನೋಂದಣಿ ಮಾಡ​ಬೇಕಿತ್ತು. ಪುಣೆಯ ಬಾಲೆ​ವಾಡಿ ಕ್ರೀಡಾಂಗಣ ಹಾಗೂ ಅಹ​ಮ​ದಾ​ಬಾದ್‌ನ ಟ್ರ್ಯಾನ್ಸ್‌ ಸ್ಟೇಡಿಯಾ ಅರೇನಾ ಮಾತ್ರ ಲಭ್ಯ​ವಿದ್ದ ಕಾರಣ, ಎಎಫ್‌ಸಿ ಮಾನ​ದಂಡದಂತೆ ಪುಣೆಯನ್ನು ಆಯ್ಕೆ ಮಾಡಿ​ಕೊಂಡಿದೆ.

 • KAA Protest

  SPORTS7, Sep 2019, 3:49 PM IST

  ಕಂಠೀರವದಲ್ಲಿ ಫುಟ್ಬಾಲ್‌ ವಿರೋಧಿಸಿ ಪ್ರತಿಭಟನೆ

  ಅಂತಾರಾಷ್ಟ್ರೀಯ ಅಥ್ಲೀಟ್‌ಗಳು, ಹಿರಿಯ ಅಥ್ಲೀಟ್‌ಗಳು, ಅಥ್ಲೆಟಿಕ್ಸ್‌ ಸಂಸ್ಥೆ ಪದಾಧಿಕಾರಿಗಳು, ಜಯ ಕರ್ನಾಟಕ ಸಂಘಟನೆಯ ಮುಖಂಡರು ಹಾಗೂ ಕಾರ್ಯಕರ್ತರುಗಳು ಪ್ರತಿಭಟನಾ ಮೆರವಣಿಗೆಯುದ್ದಕ್ಕೂ ಇಲಾಖೆಯ ಭ್ರಷ್ಟಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.

 • Kanteerava stadium

  SPORTS5, Sep 2019, 4:21 PM IST

  ಕಂಠೀರವದಲ್ಲಿ ಫುಟ್ಬಾಲ್: ಉಗ್ರ ಹೋರಾಟಕ್ಕೆ KAA ನಿರ್ಧಾರ

  ಶುಕ್ರ​ವಾರ ಬೆಳಗ್ಗೆ 10 ಗಂಟೆ ಇಲ್ಲಿನ ಟೌನ್‌ ಹಾಲ್‌ನಿಂದ ಕಂಠೀರವ ಕ್ರೀಡಾಂಗಣದ ವರೆಗೂ ಮೆರ​ವ​ಣಿಗೆ ಮೂಲಕ, ಕಂಠೀ​ರವವನ್ನು ಕೇವಲ ಅಥ್ಲೆ​ಟಿಕ್ಸ್‌ಗೆ ಸೀಮಿತವಾಗಿ​ಡು​ವಂತೆ ಆಗ್ರ​ಹಿ​ಸು​ವು​ದಾಗಿ ಕೆಎಎ ಕಾರ್ಯ​ದರ್ಶಿ ಎ.ರಾಜ​ವೇಲು ತಿಳಿ​ಸಿ​ದ್ದಾರೆ.
   

 • Kanteerava stadium

  SPORTS19, Aug 2019, 1:13 PM IST

  ಕಂಠೀರವ ಕ್ರೀಡಾಂಗಣದಲ್ಲಿ ಫುಟ್ಬಾಲ್‌ಗೆ ಗ್ರೀನ್‌ ಸಿಗ್ನಲ್‌?

  ಕಳೆದ ಆವೃತ್ತಿಯ ಐಎಸ್‌ಎಲ್‌ ಸಮಯದಿಂದಲೂ ಕಂಠೀರವದಲ್ಲಿ ಫುಟ್ಬಾಲ್‌ ನಡೆಸಲು ಕರ್ನಾಟಕ ರಾಜ್ಯ ಅಥ್ಲೆಟಿಕ್‌ ಸಂಸ್ಥೆ ಹಾಗೂ ಅಲ್ಲಿನ ಅಥ್ಲೆಟಿಕ್ಸ್‌ ಕೋಚ್‌ಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಗುತ್ತಿಗೆ ಮುಕ್ತಾಯಗೊಂಡ ಬಳಿಕ ಕ್ರೀಡಾಂಗಣವನ್ನು ಫುಟ್ಬಾಲ್‌ ಪಂದ್ಯಗಳಿಗೆ ನೀಡಲು ಕ್ರೀಡಾ ಇಲಾಖೆ ಸಹ ನಿರಾಕರಿಸಿತ್ತು. ಆದರೆ ಜೆಎಸ್‌ಡಬ್ಲ್ಯು ಸಂಸ್ಥೆ ಪ್ರಯತ್ನ ನಿಲ್ಲಿಸಿಲ್ಲ.

 • Kanteerava stadium

  SPORTS5, Aug 2019, 11:29 AM IST

  ಕಂಠೀರವದಲ್ಲಿ ಫುಟ್ಬಾಲ್‌ಗೆ ಇನ್ನಿಲ್ಲದ ಕಸರತ್ತು!

  ಯಾವುದೇ ಕಾರಣಕ್ಕೂ ಫುಟ್ಬಾಲ್‌ ನಡೆಸಲು ಒಪ್ಪುವುದಿಲ್ಲ ಎಂದು ಕೆಎಎ ಸಿಇಒ ಎಲ್ವಿಸ್‌ ಜೋಸೆಫ್‌ ಪುನರುಚ್ಚರಿಸಿದ್ದಾರೆ. ಆದರೂ ಕೆಲ ಕೋಚ್‌ಗಳು ತೆರೆ ಮರೆಯಲ್ಲಿ ಜೆಎಸ್‌ಡಬ್ಲ್ಯು(ಜಿಂದಾಲ್ ಸೌತ್ ವೆಸ್ಟ್)ಗೆ ಕ್ರೀಡಾಂಗಣ ಬಿಟ್ಟುಕೊಡಲು ವ್ಯವಸ್ಥೆ ನಡೆಯುತ್ತಿದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ.

 • Kanteerava stadium

  SPORTS30, Jul 2019, 11:09 AM IST

  BFC ಪ್ರಯತ್ನ ವಿಫಲ; ಕಂಠೀರವದಿಂದ ಫುಟ್ಬಾಲ್‌ ಔಟ್!

  ಕಂಠೀರವ ಕ್ರೀಡಾಂಣಗದಲ್ಲಿ ಅಥ್ಲೆಟಿಕ್ಸ್ ಹಾಗೂ ಫುಟ್ಬಾಲ್ ನಡುವಿನ ಹೋರಾಟದಲ್ಲಿ ಅಥ್ಲೆಟಿಕ್ಸ್ ಮೇಲುಗೈ ಸಾಧಿಸಿದೆ. ISL ಟೂರ್ನಿ ಸೇರಿದಂತೆ ಫುಟ್ಬಾಲ್ ಟೂರ್ನಿಗಳಿಗೆ ಕ್ರೀಡಾಂಗಣ ನೀಡುತ್ತಿದ್ದ ವಿರುದ್ದ ಅಥ್ಲೆಟಿಕ್ಸ್ ಹೋರಾಟಕ್ಕೆ ಮುಂದಾಗಿತ್ತು. ಇದರ ಪರಿಣಾಮವಾಗಿ ಬೆಂಗಳೂರು ಫುಟ್ಬಾಲ್ ಕ್ಲಬ್(BFC) ಕಂಠೀರವ ಬಿಟ್ಟು ಬಿಡಬೇಕಾದ ಪರಿಸ್ಥಿತಿ ಬಂದಿದೆ. 

 • BFC

  SPORTS5, Apr 2019, 1:57 PM IST

  ಸೂಪರ್‌ ಕಪ್‌: ಬಿಎಫ್‌ಸಿಗೆ ಸೋಲು

  ಐ-ಲೀಗ್‌ ಚಾಂಪಿಯನ್‌ ಚೆನ್ನೈ ತಂಡ ಸೆಮಿಫೈನಲ್‌ ಪ್ರವೇಶಿಸಿದ್ದು ಈ ಋುತುವಿನಲ್ಲಿ ಮತ್ತೊಂದು ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. ಚೆನ್ನೈ ಪರ ನೆಸ್ಟರ್‌ ಜೆಸಸ್‌ (15ನೇ ನಿ.), ಪೆಡ್ರೊ ಮಾನ್ಜಿ (55ನೇ ನಿ.) ಹಾಗೂ ಬಿಎಫ್‌ಸಿ ಪರ ಸುನಿಲ್‌ ಚೆಟ್ರಿ (52ನೇ ನಿ.) ಗೋಲುಗಳಿಸಿದರು.

 • RCB Team
  Video Icon

  SPORTS20, Mar 2019, 4:11 PM IST

  RCB ತಂಡ ಸೇರಿಕೊಂಡ ಹೊಸ ಮುಖ-ಮೊದಲ ದಿನವೇ ಕ್ಲಾಸ್!

  12ನೇ ಆವೃತ್ತಿ ಐಪಿಎಲ್ ಆರಂಭಕ್ಕೆ ಕೌಂಟ್‌ಡೌನ್ ಆರಂಭವಾಗಿದೆ. ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸುತ್ತಿದೆ. ಇದರ ನಡುವೆ ಹೊಸ ಮುಖವೊಂದು ತಂಡ ಸೇರಿಕೊಂಡಿದೆ. ಸೇರಿಕೊಂಡ ಮೊದಲ ದಿನವೇ ಫಿಟ್ನೆಸ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಹಾಗಾದರೆ ಯಾರು ಆ ಹೊಸ ಮುಖ ಇಲ್ಲಿದೆ ನೋಡಿ.

 • Kanteerava stadium

  SPORTS19, Mar 2019, 12:33 PM IST

  ಬೆಂಗಳೂರು ಚಾಂಪಿಯನ್ಸ್ ತಂಡಗಳಿಗೆ ಕ್ರೀಡಾಂಗಣ ಸಮಸ್ಯೆ

  ಪ್ರೊ ಕಬಡ್ಡಿ ಬೆಂಗಳೂರಿನಿಂದ ಎತ್ತಂಗಡಿಯಾಗಿ ಎರಡು ವರ್ಷವೇ ಕಳೆದಿದೆ. 5ನೇ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್‌ ತನ್ನ ತವರಿನ ಚರಣದ ಪಂದ್ಯಗಳನ್ನು ನಾಗ್ಪುರದಲ್ಲಿ ಆಡಿತ್ತು. 6ನೇ ಆವೃತ್ತಿಯಲ್ಲಿ ಪುಣೆಗೆ ಸ್ಥಳಾಂತರಗೊಂಡಿತ್ತು. ಇದೀಗ ಬೆಂಗಳೂರು ಎಫ್‌ಸಿ ತಂಡವೂ ತನ್ನ ತವರು ಮೈದಾನ ಕಂಠೀರವವನ್ನು ಕಳೆದುಕೊಳ್ಳುವ ಆತಂಕಕ್ಕೀಡಾಗಿದೆ.

 • BFC

  SPORTS17, Mar 2019, 10:25 PM IST

  ಕಪ್ ನಮ್ದೆ: ಗೋವಾ ಮಣಿಸಿ ISL ಪ್ರಶಸ್ತಿ ಗೆದ್ದ ಬೆಂಗಳೂರು FC!

  ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಟೂರ್ನಿಯಲ್ಲಿ ಬೆಂಗಳೂರು FC ಚಾಂಪಿಯನ್ ಆಗಿ ಹೊರಹೊಮ್ಮಿದೆ. ಫೈನಲ್ ಪಂದ್ಯದಲ್ಲಿ ಗೋವಾ ತಂಡವನ್ನು ಮಣಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿದೆ. ರೋಚಕ ಪಂದ್ಯದ ಹೈಲೈಟ್ಸ್ ಇಲ್ಲಿದೆ.
   

 • SPORTS17, Mar 2019, 12:21 PM IST

  ISL ಟ್ರೋಫಿಗೆ ಬಿಎಫ್‌ಸಿ-ಗೋವಾ ಸೆಣಸು

  ಈ ವರ್ಷ ಕಬಡ್ಡಿ ಹಾಗೂ ಬ್ಯಾಡ್ಮಿಂಟನ್‌ ಲೀಗ್‌ಗಳಲ್ಲಿ ಬೆಂಗಳೂರು ತಂಡ ಪ್ರಶಸ್ತಿ ಜಯಿಸಿದೆ. ಪ್ರೊ ಕಬಡ್ಡಿಯಲ್ಲಿ ಬೆಂಗಳೂರು ಬುಲ್ಸ್‌ ಚಾಂಪಿಯನ್‌ ಆದರೆ, ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಲೀಗ್‌ನಲ್ಲಿ ಬೆಂಗಳೂರು ರಾರ‍ಯಪ್ಟರ್ಸ್ ತಂಡ ಪ್ರಶಸ್ತಿ ಜಯಿಸಿತ್ತು. ಇದೀಗ ಬಿಎಫ್‌ಸಿ ಸಹ ಚಾಂಪಿಯನ್‌ ಆಗಿ ಬೆಂಗಳೂರಿಗೆ ಮತ್ತೊಂದು ಪ್ರಶಸ್ತಿ ತಂದುಕೊಡಲಿದೆಯೇ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ.

 • Goa FC

  SPORTS13, Mar 2019, 2:15 PM IST

  ISL ಫೈನಲ್‌: BFCಗೆ ಗೋವಾ ಎಫ್‌ಸಿ ಎದುರಾಳಿ

  ಭಾನುವಾರ (ಮಾ.17) ಮುಂಬೈನ ಫುಟ್ಬಾಲ್‌ ಅರೆನಾದಲ್ಲಿ ಫೈನಲ್‌ ಪಂದ್ಯ ನಡೆಯಲಿದ್ದು, ಉಭಯ ತಂಡಗಳು ಚೊಚ್ಚಲ ಬಾರಿಗೆ ಚಾಂಪಿಯನ್‌ ಆಗಲು ಸೆಣಸಲಿವೆ.

 • SPORTS11, Mar 2019, 11:49 AM IST

  BFC-ನಾರ್ಥ್ ಈಸ್ಟ್ ಸೆಮೀಸ್’ಗೆ ಕ್ಷಣಗಣನೆ ಆರಂಭ

  ಗುವಾಹಟಿಯಲ್ಲಿ ನಡೆದಿದ್ದ ಸೆಮಿಫೈನಲ್‌ನ ಮೊದಲ ಚರಣದ ಪಂದ್ಯದಲ್ಲಿ ಬಿಎಫ್‌ಸಿ, ನಾರ್ಥ್ ಈಸ್ಟ್ ವಿರುದ್ಧ 1-2 ಗೋಲುಗಳಿಂದ ಪರಾಭವಗೊಂಡಿತ್ತು. ಹೀಗಾಗಿ ಈ ಪಂದ್ಯದಲ್ಲಿ ಚೆಟ್ರಿ ಪಡೆ ಕನಿಷ್ಠ 2 ಗೋಲುಗಳ ಅಂತರದಲ್ಲಿ ಜಯಿಸಲೇಬೇಕಿದೆ. 

 • BFC vs NE FC

  SPORTS8, Mar 2019, 8:55 AM IST

  ಬೆಂಗಳೂರು ಎಫ್‌ಸಿಗೆ ‘ಪೆನಾಲ್ಟಿ’ ಶಾಕ್‌!

  20ನೇ ನಿಮಿಷದಲ್ಲಿ ರೀಡಿಮ್‌ ಟ್ಲಾಂಗ್‌ ಬಾರಿಸಿದ ಗೋಲಿನ ನೆರವಿನಿಂದ ನಾರ್ಥ್’ಈಸ್ಟ್‌ ಆರಂಭಿಕ ಮುನ್ನಡೆ ಸಾಧಿಸಿತು. ಆದರೆ 82ನೇ ನಿಮಿಷದಲ್ಲಿ ಕ್ಸಿಸ್ಕೋ ಹರ್ನೆಂಡೆಜ್‌ ಬಿಎಫ್‌ಸಿ ಸಮಬಲ ಸಾಧಿಸಲು ನೆರವಾದರು.