Bangalore Tech Summit
(Search results - 9)TechnologyNov 20, 2020, 12:11 PM IST
ಐಟಿ ಅಭಿವೃದ್ಧಿಗಾಗಿ ವಿದೇಶಗಳ ಜತೆ ಕರ್ನಾಟಕ ನೇರ ಒಪ್ಪಂದ
ಮಾಹಿತಿ ತಂತ್ರಜ್ಞಾನ ಕ್ಷೇತ್ರದ ನಿರಂತರ ಅಭಿವೃದ್ಧಿಗಾಗಿ ಕರ್ನಾಟಕ ವಿಶ್ವದ ಶಕ್ತಿಶಾಲಿ ರಾಷ್ಟ್ರಗಳೊಂದಿಗೆ ನೇರಾನೇರ ವ್ಯವಹಾರಿಕ ಸಂಬಂಧ, ವಿನಿಮಯ ಒಪ್ಪಂದಗಳನ್ನು ನಡೆಸಿಕೊಂಡು ಬರುತ್ತಿದೆ. ದೇಶದಲ್ಲೇ ಇಂತಹ ಸಾಧನೆ ಮೆರೆದ ಏಕೈಕ ರಾಜ್ಯ ಕರ್ನಾಟಕವಾಗಿದೆ.
TechnologyNov 20, 2020, 11:22 AM IST
ಶೀಘ್ರದಲ್ಲೇ ದತ್ತಾಂಶ ರಕ್ಷಣೆ ಕಾನೂನು: ಕೇಂದ್ರ ಸಚಿವ ರವಿಶಂಕರ್ ಪ್ರಸಾದ್
ಭಾರತ ಅತ್ಯಂತ ಬೃಹತ್ ದತ್ತಾಂಶ ಆರ್ಥಿಕತೆಯಾಗಿ ಹೊರ ಹೊಮ್ಮಲಿದ್ದು, ಈ ನಿಟ್ಟಿನಲ್ಲಿ ಶೀಘ್ರದಲ್ಲಿ ದತ್ತಾಂಶ ರಕ್ಷಣೆ ಕಾನೂನನ್ನು ಜಾರಿಗೆ ತರಲಾಗುವುದು ಎಂದು ಕೇಂದ್ರ ಐಟಿ, ಸಂವಹನ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
TechnologyNov 20, 2020, 10:10 AM IST
ಶೇ.100ರಷ್ಟು ವಿದ್ಯುತ್ ಚಾಲಿತ ವಾಹನಕ್ಕೆ ಗುರಿ: ಸಚಿವ ಅಶ್ವತ್ಥನಾರಾಯಣ
ಕರ್ನಾಟಕ ಸರ್ಕಾರವು ಕೆಲವು ವಿಭಾಗಗಳ ವಾಹನಗಳನ್ನು ಶೇ 100 ರಷ್ಟುವಿದ್ಯುತ್ ಚಾಲಿತ ಮಾಡುವ ಗುರಿ ಹೊಂದಿದೆ. ಈ ಮೂಲಕ ‘ಸ್ವಚ್ಛ ಪರಿಸರ’ ನಿರ್ಮಾಣ ಸಾಧಿಸಲು ಉದ್ದೇಶಿಸಿದ್ದೇವೆ ಎಂದು ಐಟಿ-ಬಿಟಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದ್ದಾರೆ.
TechnologyNov 20, 2020, 9:55 AM IST
ಬೆಂಗಳೂರು ಟೆಕ್ ಸಮ್ಮಿಟ್-2020: ದೇಶದ ಡಿಜಿಟಲ್ ಕ್ರಾಂತಿಗೆ ಉಪಗ್ರಹಗಳ ನೆರವು
ಜಗತ್ತಿನ ಹಲವು ರಾಷ್ಟ್ರಗಳು ಅಭಿವೃದ್ಧಿ ಪಥದಲ್ಲಿ ಸಾಗಲು ಬಾಹ್ಯಾಕಾಶ ತಂತ್ರಜ್ಞಾನ ಮಹತ್ವದ ಪಾತ್ರವಹಿಸಿದೆ. ಸಂವಹನ ಉಪಗ್ರಹ ಹಾಗೂ ಭೂ ಪರಿವೀಕ್ಷಣಾ ಉಪಗ್ರಹಗಳ ಕೊಡುಗೆ ಅಪಾರ ಎಂದು ಭಾರತೀಯ ತಂತ್ರಜ್ಞಾನ ಸಂಸ್ಥೆ ನಿರ್ದೇಶಕ ಡಾ.ಪ್ರಕಾಶ್ ಚವ್ಹಾಣ್ ಹೇಳಿದ್ದಾರೆ.
TechnologyNov 20, 2020, 9:36 AM IST
ಬೆಂಗ್ಳೂರಲ್ಲಿ ಐಟಿ ಕ್ಷೇತ್ರದ ಹೊಸ ತಿರುವಿಗೆ ವಾಜಪೇಯಿ, ಮೋದಿ ಕೊಡುಗೆ ಅಪಾರ..!
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಕರ್ನಾಟಕದಲ್ಲಿ ‘ಬೆಂಗಳೂರು ಐಟಿ.ಕಾಂ’ ಸಮ್ಮೇಳನದ ಮೂಲಕ ಶ್ರೀಕಾರ ಹಾಕಿದ ಮಾಹಿತಿ ತಂತ್ರಜ್ಞಾನ ಕ್ಷೇತ್ರವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರು ‘ಬೆಂಗಳೂರು ಟೆಕ್ ಶೃಂಗ-2020’ ಮೂಲಕ ಹೊಸ ತಿರುವು ನೀಡಲು ಮುನ್ನುಡಿ ಬರೆದಿದ್ದಾರೆ.
TechnologyNov 20, 2020, 9:17 AM IST
ಸಿಲಿಕಾನ್ ಸಿಟಿಗೆ ಬರಲಿದೆ ಆ್ಯಪಲ್: ಚೀನಾ ಬದಲು ಬೆಂಗಳೂರಲ್ಲೇ ಐಫೋನ್ ಉತ್ಪಾದನೆ
ಚೀನಾದಿಂದ ಹೊರಬಂದಿರುವ ಆ್ಯಪಲ್ ಕಂಪನಿಯ ಒಂದು ಉತ್ಪಾದನಾ ಘಟಕ ಬೆಂಗಳೂರಿನಲ್ಲಿ ಸ್ಥಾಪನೆಯಾಗಲಿದೆ ಎಂದು ಕೇಂದ್ರ ಐಟಿ ಮತ್ತು ಸಂಪರ್ಕ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.
TechnologyNov 20, 2020, 8:48 AM IST
ಬೆಂಗಳೂರಿನಿಂದ ಹೊರಗೂ ಐಟಿ ವಿಸ್ತರಣೆ: ಸಿಎಂ ಯಡಿಯೂರಪ್ಪ
ರಾಜ್ಯದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರವನ್ನು ಬೆಂಗಳೂರಿನಿಂದ ಹೊರಗೂ ವಿಸ್ತರಿಸಲು ಆದ್ಯತೆ ನೀಡಿ ‘ಮಾಹಿತಿ ತಂತ್ರಜ್ಞಾನ ಕಾರ್ಯನೀತಿ -2020-25’ ಪ್ರಕಟಿಸಿದ್ದು, ಮುಂದಿನ ಐದು ವರ್ಷದಲ್ಲಿ 60 ಲಕ್ಷ ನೇರ ಹಾಗೂ ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಿದ್ದೇವೆ ಎಂದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
TechnologyNov 20, 2020, 8:30 AM IST
ಬೆಂಗಳೂರು ಟೆಕ್ ಶೃಂಗಸಭೆ-2020: '300 ಶತಕೋಟಿ ಡಾಲರ್ ಡಿಜಿಟಲ್ ಆರ್ಥಿಕತೆ ಗುರಿ'
ಕರುನಾಡು ಮುಂದಿನ ಐದು ವರ್ಷಗಳಲ್ಲಿ 300 ಶತಕೋಟಿ ಡಾಲರ್ ಡಿಜಿಟಲ್ ಆರ್ಥಿಕತೆಯಾಗುವ ಗುರಿ ಹೊಂದಿದ್ದು, ಇದನ್ನು ಸಾಧಿಸುವ ದಿಸೆಯಲ್ಲಿ ದೃಢ ಹೆಜ್ಜೆಯಿಟ್ಟಿದ್ದೇವೆ ಎಂದು ಉಪ ಮುಖ್ಯಮಂತ್ರಿ, ಐಟಿ, ಬಿಟಿ ಸಚಿವ ಡಾ. ಸಿ.ಎನ್. ಅಶ್ವಥ್ ನಾರಾಯಣ ಹೇಳಿದ್ದಾರೆ.
TechnologyNov 19, 2020, 3:47 PM IST
ಬೆಂಗಳೂರು ತಂತ್ರಜ್ಞಾನ ಮೇಳ ಉದ್ಘಾಟಿಸಿದ ಮೋದಿ, ವಿದೇಶಗಳಿಗೆ ತಲುಪಿಸಲು ಇದು ಸಕಾಲ
ಇದೇ ಮೊತ್ತಮೊದಲ ಬಾರಿಗೆ ವರ್ಚ್ಯುಯಲ್ ಆಗಿ ನಡೆಯಲಿರುವ ಮೂರು ದಿನಗಳ “ಬೆಂಗಳೂರು ತಂತ್ರಜ್ಞಾನ ಮೇಳ” (ಬಿಟಿಎಸ್-2020)ವನ್ನು ಗುರುವಾರ ವಿಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.