Bagalkote

(Search results - 38)

Govinakoppa village of Bagalakote

Video Icon

state18, Aug 2020, 1:25 PM

ಗೋವಿನಕೊಪ್ಪ ಗ್ರಾಮಕ್ಕೆ ನುಗ್ಗಿದ ನೀರು; ಸುರಕ್ಷಿತ ಸ್ಥಳಕ್ಕೆ ಗ್ರಾಮಸ್ಥರು

ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿದ್ದು ಮಲಪ್ರಭಾ ನದಿ ಒಳ ಹರಿವು ಹೆಚ್ಚಾಗಿದೆ. ಬೆಳಗಾವಿಯ 20 ಕ್ಕೂ ಹೆಚ್ಚು ಗ್ರಾಮಕ್ಕೆ ನೀರು ನುಗ್ಗಿದೆ. ಗೋವಿನ ಕೊಪ್ಪ ಗ್ರಾಮಕ್ಕೆ ನೀರು ನುಗ್ಗಿದ್ದು ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಗಿದೆ. ಬೆಳ್ಳಂಬೆಳಿಗ್ಗೆ ನೀರು ನುಗ್ಗಿರುವುದನ್ನು ಕಂಡು ಗ್ರಾಮಸ್ಥರು ಆತಂಕಗೊಂಡಿದ್ದರು. ಕೂಡಲೇ ಅವರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಯಿತು.

Siddaramaiah, 5 year old girl

Bagalkot4, Aug 2020, 12:32 PM

ಸಿದ್ದರಾಮಯ್ಯ ಗುಣಮುಖರಾಗಲು 5 ವರ್ಷದ ಬಾಲಕಿಯಿಂದ ವಿಶೇಷ ಪೂಜೆ!

ಸಿಎಂ ಬಿಎಸ್ ಯಡಿಯೂರಪ್ಪ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯಗೆ ಕೊರೋನಾ ವೈರಸ್ ವಕ್ಕರಿಸಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿದ್ದರಾಮಯ್ಯ ಶೀಘ್ರ ಗುಣಮುಖರಾಗಲು ರಾಜ್ಯಾದ್ಯಂತ ಪೂಜೆ, ಪ್ರಾರ್ಥನೆ ನಡೆಯುತ್ತಿದೆ. ಇದೀಗ 5 ವರ್ಷದ ಪುಟ್ಟ ಬಾಲಕಿ ಸಿದ್ದರಾಮಯ್ಯ ಶೀಘ್ರ ಗುಣಮುಖರಾಗಲು ಮನೆಯಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾಳೆ.

Coronavirus

Video Icon

Karnataka Districts26, Jun 2020, 7:34 PM

30 ವರ್ಷದ ಬಾಗಲಕೋಟೆಯ ಸರ್ಕಾರಿ ವೈದ್ಯ ಬೆಂಗಳೂರಿನಲ್ಲಿ ಕೊರೋನಾಕ್ಕೆ ಬಲಿ

ಕೊರೋನಾ ವಾರಿಯರ್‌ ಒಬ್ಬರು ಕೊರೋನಾಕ್ಕೆ ಬಲಿಯಾಗಿದ್ದಾರೆ. ಬಾಗಲಕೋಟೆಯ ವೈದ್ಯರೊಬ್ಬರು ಬೆಂಗಳೂರಿನಲ್ಲಿ ಮೃತಪಟ್ಟಿದ್ದಾರೆ.

• undefined
Video Icon

state20, Jun 2020, 12:06 PM

ಸೂರ್ಯ ಗ್ರಹಣ: ಬಾದಾಮಿ ಬನಶಂಕರಿ ಭಕ್ತಾದಿಗಳೇ ಗಮನಿಸಿ

ಸೂರ್ಯ ಗ್ರಹಣ ನಭೋಮಂಡಲದ ಕೌತುಕ ಮಾತ್ರ ಅಲ್ಲ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜಗತ್ತಿನ ಆಗು ಹೋಗುಗಳ ಬಗ್ಗೆ ತಿಳಿಸುವ ಪಂಚಾಂಗ. ನಾಳೆ ಸಂಭವಿಸಲಿರುವ ಸೂರ್ಯ ಗ್ರಹಣ ಅತೀ ದೊಡ್ಡ ಗ್ರಹಣವಾಗಿದ್ದು, ಕಂಕಣಾಕೃತಿಯಲ್ಲಿ ಕಾಣಿಸಿಕೊಳ್ಳಲಿದೆ. ನಾಡಿನ ಶಕ್ತಿಪೀಠವಾದ ಬಾಗಲಕೋಟೆಯ ಬನಶಂಕರಿ ದೇಗುಲದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗುತ್ತದೆ.

• undefined
Video Icon

state9, Jun 2020, 11:10 AM

ಭಕ್ತರಿಗೆ ದರ್ಶನ ಕೊಟ್ಟ ಬನಶಂಕರಿ; ಬಾದಾಮಿಯಲ್ಲಿ ಹೀಗಿದೆ ವ್ಯವಸ್ಥೆ

ಲಾಕ್‌ಡೌನ್ ಹಿನ್ನಲೆಯಲ್ಲಿ ಕಳೆದ ಎರಡೂವರೆ ತಿಂಗಳಿಂದ ಬಾಗಿಲು ಹಾಕಿದ್ದ ಬಹತೇಕ ಧಾರ್ಮಿಕ ಕೇಂದ್ರಗಳು ಸೋಮವಾರದಿಂದ ತೆರೆದಿವೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಭಕ್ತರು ದರ್ಶನ ಪಡೆಯಲು ಆಗಮಿಸುತ್ತಿಲ್ಲ. ಎಲ್ಲಾ ಧಾರ್ಮಿಕ ಕೇಂದ್ರಗಳಲ್ಲೂ ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯಗೊಳಿಸಲಾಗಿದ್ದು ಬೆರಳೆಣಿಕೆಯಷ್ಟು ಭಕ್ತರು ಕಂಡು ಬಂದ ದೃಶ್ಯ ಸಾಮಾನ್ಯವಾಗಿತ್ತು. ಬಾಗಲಕೋಟೆ ಜಿಲ್ಲೆ ಬಾದಾಮಿ ಬನಶಂಕರಿ ದೇವಾಲಯದಲ್ಲಿ ಹೇಗಿದೆ ವ್ಯವಸ್ಥೆ? ಭಕ್ತರು ಹೇಗೆ ಬರುತ್ತಿದ್ದಾರೆ? ನಮ್ಮ ಪ್ರತಿನಿಧಿ ಸ್ಥಳದಿಂದಲೇ ವರದಿ ಮಾಡಿದ್ದಾರೆ. ಇಲ್ಲಿದೆ ನೋಡಿ..!

• undefined
Video Icon

state19, May 2020, 4:58 PM

ಹಸಿದವರ ಪಾಲಿಗೆ ಅನ್ನದಾತ, ಕಷ್ಟದಲ್ಲಿರುವವರ ಆಪತ್ಬಾಂಧವ ಡಿಸಿಎಂ ಕಾರಜೋಳ.!

ಕೊರೊನಾ ನಿರ್ಮೂಲನಾ ಹೋರಾಟದಲ್ಲಿ ಡಿಸಿಎಂ ಗೋವಿಂದ ಕಾರಜೋಳ ತಮ್ಮ ಕ್ಷೇತ್ರದ ಜನತೆ ಜೊತೆ ನಿಂತಿದ್ದಾರೆ. ಜನಾನುರಾಗಿಯಾಗಿ ಕೆಲಸ ಮಾಡುತ್ತಿದ್ದಾರೆ. ಬಾಗಲಕೋಟೆ ಹಾಗೂ ವಿಜಯಪುರದ ಉಸ್ತುವಾರಿ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಲಾಕ್ಡೌನ್ ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದ ಜನರಿಗೆ ನೆರವಿನ ಹಸ್ತ ಚಾಚಿದ್ದಾರೆ.  ಅಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸುತ್ತಾ ಮಾಹಿತಿ ಪಡೆದು ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ ನೀಡಿದ್ದಾರೆ. ತಮ್ಮ ಉಸ್ತುವಾರಿ ಜಿಲ್ಲೆಯನ್ನು ಸಂಪೂರ್ಣ ಕೊರೊನಾ ಮುಕ್ತ ಮಾಡಲು ಬದ್ಧರಾಗಿದ್ದಾರೆ.

Coronavirus

Video Icon

Karnataka Districts10, May 2020, 5:49 PM

ಪೊಲೀಸರ ಕಣ್ಣು ತಪ್ಪಿಸಿ ಬೆಳಗಾವಿಗೆ ಎಂಟ್ರಿ ಕೊಟ್ಟವರು ಸಿಕ್ಕಿ ಬಿದ್ದಿದ್ದು ಹೀಗೆ..!

ಅಜ್ಮೀರ್‌ನಿಂದ ಬೆಳಗಾವಿಗೆ ಪೊಲೀಸರ ಕಣ್ತಪ್ಪಿಸಿ ಬಂದವರು ಇದೀಗ ನಿಪ್ಪಾಣಿಯಲ್ಲಿ ಕ್ವಾರಂಟೈನ್ ಆಗಿದ್ದಾರೆ.  ಮೇ 2 ನೇ ತಾರೀಖು ಅಜ್ಮೀರ್‌ನಿಂದ ಬೆಳಗಾವಿಗೆ 38 ಜನ ಪೊಲೀಸರು ಕಣ್ಣು ತಪ್ಪಿಸಿ ಪ್ರವೇಶಿಸುತ್ತಾರೆ. ಆದರೂ ಸಿಕ್ಕಿಬೀಳುತ್ತಾರೆ. ಇವರ ಪೈಕಿ 8 ಜನ ಬಾಗಲಕೋಟೆಯವರು, 30 ಜನ ಬೆಳಗಾವಿಯವರು. 38. ಈ ಬಗ್ಗೆ ಬೆಳಗಾವಿ ಜಿಲ್ಲಾಧಿಕಾರಿಗಳು ಮಾತನಾಡಿದ್ದಾರೆ. ಇಲ್ಲಿದೆ ನೋಡಿ!

Coronavirus

Video Icon

state5, May 2020, 1:57 PM

30 ವರ್ಷದ ಬೆಂಗಳೂರಿನ ಜಯನಗರದ ಗರ್ಭಿಣಿ ಸೇರಿ ಮತ್ತೆ 8 ಕೇಸುಗಳು ದೃಢ

ಬೆಳಗಿನ ಹೆಲ್ತ್ ಬುಲೆಟಿನ್ ರಿಲೀಸ್ ಆಗಿದ್ದು, ಕರ್ನಾಟಕದಲ್ಲಿ ಮತ್ತೆ 8 ಪ್ರಕರಣಗಳು ದೃಢಪಟ್ಟಿವೆ. ಬೆಂಗಳೂರಿನಲ್ಲಿ 3, ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಬಳ್ಳಾರಿಯಲ್ಲಿ ತಲಾ ಒಂದು ಹಾಗೂ ಬಾಗಲಕೋಟೆಯಲ್ಲಿ ಎರಡು ಹೊಸ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಕರ್ನಾಟಕದಲ್ಲಿ 659 ಹಾಗೂ ಬೆಂಗಳೂರಿನಲ್ಲಿ 153 ಪ್ರಕರಣಗಳು ದೃಢವಾಗಿದೆ. ಬೆಂಗಳೂರಲ್ಲಿ ಪತ್ತೆಯಾದ ರೋಗಿಗಳು ಯಾರು? ಅವರ ಟ್ರಾವೆಲ್ ಹಿಸ್ಟರಿ ಗೊತ್ತಾಗಿದ್ಯಾ?

Coronavirus

Karnataka Districts5, May 2020, 9:02 AM

ಗರ್ಭಿಣಿಗೆ ಕೊರೋನಾ ಸೋಂಕು: ಉಡಿ ತುಂಬಿದವರಿಗೆ ಆತಂಕ

ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಡಾಣಕ ಶಿರೂರು ಗ್ರಾಮದ ಐದು ತಿಂಗಳ ಗರ್ಭಿಣಿಯೊಬ್ಬಳಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಇದೀಗ ಆಕೆಗೆ ಸೀಮಂತ ಕಾರ್ಯಕ್ರಮ ವೇಳೆ ಉಡಿ ತುಂಬಿದ್ದ ಮಹಿಳೆಯರಿಗೆ ಆತಂಕ ಶುರುವಾಗಿದೆ.

• undefined
Video Icon

Karnataka Districts4, May 2020, 5:39 PM

ಎಣ್ಣೆಗಾಗಿ ಎಮ್ಮೆ ಜೊತೆ ಕ್ಯೂ ನಿಂತ ಕುಡುಕ..!

ಇಂದು ಎಣ್ಣೆ ಅಂಗಡಿ ಓಪನ್ ಮಾಡಲು ಅವಕಾಶ ಕೊಟ್ಟಿದ್ದೇ ಕೊಟ್ಟಿದ್ದು ಜನ ಬಾರ್ ಮುಂದೆ ಜಮಾಯಿಸಿದ್ದಾರೆ. ಒಬ್ಬೊಬ್ಬರದು ಒಂದೊಂದು ಅವತಾರಗಳು. ಒಬ್ರು ಅಣ್ಣಾವ್ರ ಹಾಡಿಗೆ ಡ್ಯಾನ್ಸ್ ಮಾಡಿದ್ರೆ ಇನ್ನೊಬ್ರು ಎಮ್ಮೆ ತಗೊಂಡು ಬಂದಿದಾರಂತೆ! ನನಗೊಂದು ಬಾಟಲ್, ಎಮ್ಮೆಗೊಂದು ಬಾಟಲ್ ಎಂದಿರಬೇಕು! ಯಾರೋ ವಿಡಿಯೋ ಮಾಡ್ತಾ ಇದಾರೆ ಅಂತ ಗೊತ್ತಾದ ಕೂಡಲೇ ಹೊರಟು ಹೋಗಿದ್ದಾನೆ.

• Doctor Patient
Video Icon

Karnataka Districts15, Apr 2020, 1:27 PM

ಲಾಕ್‌ಡೌನ್‌: ಬಾಗಲಕೋಟೆಯಲ್ಲಿ ಆಸ್ಪತ್ರೆಗಳು ಬಂದ್‌, ರೋಗಿಗಳ ಪರದಾಟ

ಲಾಕ್‌ಡೌನ್‌ ಇರುವ ಹಿನ್ನೆಲೆಯಲ್ಲಿ ನಗರದಲ್ಲಿರುವ ಹಲವಾರು ಆಸ್ಪತ್ರೆಗಳು ಬಂದ್‌ ಆಗಿವೆ. ಇದರಿಂದ ಸಾಕಷ್ಟು ರೋಗಿಗಳು ಸಂಕಷ್ಟವನ್ನ ಎದುರಿಸುತ್ತಿದ್ದಾರೆ. ಈ ಸಂಬಂಧ ಸುವರ್ಣ ನ್ಯೂಸ್‌ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಆಸ್ಪತ್ರೆಗಳ ಮುಖವಾಡಗಳು ಒಂದೊಂದಾಗಿ ಹೊರಬರುತ್ತಿವೆ.

• bagalkote

Bagalkot10, Apr 2020, 10:23 AM

ಪೆಟ್ರೋಲ್ ಬಂಕ್ ಬಂದ್ ವದಂತಿ; ರಾತ್ರೋರಾತ್ರಿ ಮುಗಿಬಿದ್ದ ಸವಾರರು

ಲಾಕ್‌ಡೌನ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವದಂತಿಗಳು ಹರಡುತ್ತಿರುತ್ತದೆ. ಹಾಗಂತೆ, ಹೀಗಂತೆ ಅಂತ ಏನೇನೋ ಸುಳ್ಳು ಸುದ್ದಿಗಳನ್ನು ಕಿಡಿಗೇಡಿಗಳು ಹಬ್ಬಿಸುತ್ತಿರುತ್ತಾರೆ.ಸತ್ಯಾಸತ್ಯತೆಯನ್ನು ವಿಮರ್ಶಿಸದೇ ಜನ ಅದನ್ನು ನಂಬುತ್ತಾರೆ.

• Tribal
Video Icon

Coronavirus Karnataka31, Mar 2020, 4:08 PM

ಲಾಕ್‌ಡೌನ್‌ನಿಂದಾಗಿ ಅತಂತ್ರವಾಗಿ ಕುಳಿತಿವೆ ಅಲೆಮಾರಿ ಕುಟುಂಬಗಳು

ಲಾಕ್‌ಡೌನ್‌ನಿಂದಾಗಿ ಜನರೇನೋ ಮನೆಯೊಳಗೆ ಬೆಚ್ಚಗೆ ಕುಳಿತಿದ್ದಾರೆ. ಅಲೆಮಾರಿ ಕುಟುಂಬಗಳು ಅತಂತ್ರವಾಗಿ ಕುಳಿತಿವೆ. ಪುಟ್ಟ ಕಂದಮ್ಮಗಳ ಸ್ಥಿತಿ ದಯನೀಯವಾಗಿದೆ. ಈ ಕುಟುಂಬಗಳು ತುತ್ತು ಅನ್ನಕ್ಕೂ ಪರದಾಡುತ್ತಿವೆ. ಬಾಗಲಕೋಟೆಯ ಅಲೆಮಾರಿ ಜನಾಂಗಗಳ ದಯನೀಯ ಸ್ಥಿತಿಯಿದು!

• Holi

Karnataka Districts12, Mar 2020, 3:55 PM

ಬಾಗಲಕೋಟೆ ಹೋಳಿ ಸಂಭ್ರಮದಲ್ಲಿ ಭಾಗಿಯಾದ್ರು ಬಾಹುಬಲಿ, ಕಟ್ಟಪ್ಪ..!

ಐತಿಹಾಸಿಕ ಬಾಗಲಕೋಟೆ ಹೋಳಿಯಲ್ಲಿ ಬಾಹುಬಲಿ, ಕಟ್ಟಪ್ಪನೂ ಇದ್ದರು. ಕಲ್ಕತ್ತಾ ಬಿಟ್ಟರೆ ದೇಶದಲ್ಲಿಯೇ ಬಹಳ ಅಬ್ಬರದಿಂದ ಹೋಳಿ  ಆಡುವ ಬಾಗಲಕೋಟೆಯಲ್ಲಿ ಈ ಬಾರಿ ಬಾಹುಬಲಿ, ಕಟ್ಟಪ್ಪ ಇದ್ದಿದ್ದು ವಿಶೇಷ. ಇಲ್ಲಿವೆ ಫೋಟೋಸ್

• Baba

CRIME10, Feb 2020, 10:48 PM

ದಶಕದಿಂದ ಮರೆಯಾಗಿದ್ದ ಬ್ಲೇಡ್ ಬಾಬಾ ದಿಢೀರ್ ಪ್ರತ್ಯಕ್ಷ!

ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಅಚ್ಚರಿಯೊಂದು ನಡೆದಿದೆ. ಒಂದು ಕಾಲದಲ್ಲಿ ಬ್ಲೇಡ್ ಬಾಬಾ ಎಂದೇ ಕುಖ್ಯಾತಿ ಪಡೆದಿದ್ದ ಅಸ್ಲಂ ಬಾಬಾ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾನೆ.