B. Y. Raghavendra  

(Search results - 12)
 • <p>SN BY Raghavendra</p>

  India30, May 2020, 12:03 PM

  ಪ್ರಧಾನಿಯ ಸ್ವಾವಲಂಬಿ ಭಾರತದ ಕನಸೇ ನನ್ನ ಕನಸು: ಸಂಸದ ಬಿ ವೈ ರಾಘವೇಂದ್ರ

  ಬಿ.ವೈ. ಲೋಕಸಭೆಗೆ ಆಯ್ಕೆಯಾದ ಬಳಿಕ ಪ್ರಬಲ, ವರ್ಚಸ್ವಿ ನಾಯಕರಾಗಿ ಬೆಳೆದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸಾಮೀಪ್ಯ ಸಿಕ್ಕಿದೆ. ಅವರ ಆದರ್ಶ ಇವರ ಕಣ್ಣ ಮುಂದಿದೆ. ಈ ಇಬ್ಬರು ಆದರ್ಶ ವ್ಯಕ್ತಿಗಳ ಹಾದಿಯಲ್ಲಿ ಮುನ್ನಡಿಯಿಟ್ಟಿರುವ ಅವರು ಈ ಇಬ್ಬರಂತೆ ಅಭಿವೃದ್ಧಿಯ ಮಂತ್ರವನ್ನು ಮೈಗೂಡಿಸಿಕೊಂಡಿದ್ದಾರೆ. 

 • BY Raghavendra

  Karnataka Districts15, Apr 2020, 3:22 PM

  ಶಿವಮೊಗ್ಗದ ಮೆಗ್ಗಾನ್‌ನಲ್ಲಿ 50 ವೆಂಟಿಲೇಟರ್‌ ಸೌಲಭ್ಯ: ಸಂಸದ B Y ರಾಘವೇಂದ್ರ

  ಕೋವಿಡ್‌ ರೋಗಿಗಳಿಗೆಂದೇ ಜಿಲ್ಲಾ ಮೆಗ್ಗಾನ್‌ ಆಸ್ಪತ್ರೆಯನ್ನು ಮೀಸಲಿಡಲಾಗಿದೆ. ಇಲ್ಲಿ ಈಗಾಗಲೇ 50 ವೆಂಟಿಲೇಟರ್‌ ಸೌಲಭ್ಯ ಕಲ್ಪಿಸಲಾಗಿದೆ. ಕೆಲವೊಂದು ಅಗತ್ಯ ಸಲಕರಣೆ ಬರಬೇಕಿದ್ದು, ಕೋವಿಡ್‌ ಬಾಧಿತರಿಗೆ ಚಿಕಿತ್ಸೆ ನೀಡಲು ಸಿದ್ಧವಾಗಿದರುವಂತೆ ಸೂಚನೆ ನೀಡಲಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ.
   
 • BY Raghavendra

  Udupi20, Oct 2019, 10:19 AM

  ಜನ ಸೇವೆ ಮಾಡೋಕಾಗಲ್ಲಾಂದ್ರೆ ಜಾಗ ಖಾಲಿ ಮಾಡಿ ಎಂದ ಸಂಸದ

  ಜನರ ಸೇವೆ ಮಾಡುವುದಕ್ಕೆ ಇಷ್ಟವಿಲ್ಲದ, ಕಾಲಹರಣ ಮಾಡುವ ಸರ್ಕಾರಿ ಅಧಿಕಾರಿಗಳು ಇಲಾಖೆ ಬಿಟ್ಟು ಹೋಗಿ ಎಂದು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಬೈಂದೂರಿನಲ್ಲಿ ಗಾಂಧಿ ಸಂಕಲ್ಪ ಯಾತ್ರೆ ನಡೆಸಿದ್ದಾರೆ.

 • BSY

  Karnataka Districts2, Oct 2019, 3:00 PM

  'ಯಡಿಯೂರಪ್ಪ ಪುಕ್ಸಟ್ಟೆ ಮುಖ್ಯಮಂತ್ರಿಯಾದವರಲ್ಲ'..!

  ರಾಜ್ಯದಲ್ಲಿ ಯಡಿಯೂರಪ್ಪ ಅವರು 40 ವರ್ಷಗಳ ಕಾಲ ಹೋರಾಟ ಮಾಡಿ ಮುಖ್ಯಮಂತ್ರಿಯಾಗಿದ್ದಾರೆ ಎಂದು ಬಿಎಸ್‌ವೈ ಪುತ್ರ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ. ಬಿ.ಎಸ್‌.ಯಡಿಯೂರಪ್ಪ ಅವರು ಪುಕ್ಸಟ್ಟೆಮುಖ್ಯಮಂತ್ರಿಯಾದವರಲ್ಲ ಎಂದು ಹೇಳಿದ್ದಾರೆ.

 • হাউডি মোদীর মঞ্চ থেকেই পাকিস্তানকে একহাত নিলেন নরেন্দ্র মোদী

  Karnataka Districts27, Sep 2019, 8:52 AM

  'ಜನಸಾಮಾನ್ಯರಿಗೆ ಮೋದಿ ಸರ್ಕಾರದಿಂದ ಕೊಡುಗೆ'

  ಆರ್ಥಿಕ ಹಿಂಜರಿತ ತಡೆಯಲು ಉತ್ಪಾದನಾ ವಲಯಕ್ಕೆ ಹೊಸ ಸುಧಾರಣೆಗಳನ್ನು ಪ್ರಕಟಿಸಿದ ಕೇಂದ್ರ ಸರ್ಕಾರಕ್ಕೆ ಸಂಸದ ಬಿ.ವೈ. ರಾಘವೇಂದ್ರ ಅಭಿನಂದನೆ ಸಲ್ಲಿಸಿದ್ದಾರೆ.
   

 • B Y Raghavendra

  Karnataka Districts11, Sep 2019, 7:52 AM

  ಶಿಕಾರಿಪುರಕ್ಕೆ ನೂತನ ಬಸ್‌ ಡಿಪೋ ಮಂಜೂರು

  ಶಿಕಾರಿಪುರದಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಡಿಪೋ ಆರಂಭಿಸಲು ಸರ್ಕಾರದಿಂದ ಮಂಜೂರಾತಿ ದೊರೆತಿದೆ ಎಂದು ಸಂಸದ ಬಿ.ವೈ ರಾಘವೇಂದ್ರ ತಿಳಿಸಿದ್ದಾರೆ. ಕುಟ್ರಹಳ್ಳಿ ಬಳಿ ಕೃಷಿ ಇಲಾಖೆಗೆ ಸಂಬಂಧಿಸಿದ 5 ಎಕರೆ ಜಾಗ ಗುರುತಿಸಲಾಗಿದೆ. ಮುಖ್ಯಮಂತ್ರಿಗಳ ಕಾಳಜಿಯ ಮೇರೆಗೆ ಕೃಷಿ ಇಲಾಖೆಯಿಂದ ಸಾರಿಗೆ ಇಲಾಖೆಗೆ ಜಾಗ ಹಸ್ತಾಂತರಿಸುವ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದಿದ್ದಾರೆ.

 • BY Raghavendra

  Karnataka Districts10, Sep 2019, 11:08 AM

  ಪ್ರಾಪರ್ಟಿ ಕಾರ್ಡ್‌ ರದ್ದತಿಗೆ ಮುಂದಾದ ಸರ್ಕಾರ

  ಆಸ್ತಿದಾರರಿಗೆ ತೀವ್ರ ಕಿರಿಕಿರಿಯಾಗಿದ್ದ ಪ್ರಾಪರ್ಟಿ ಕಾರ್ಡ್‌ ಕಡ್ಡಾಯ ವ್ಯವಸ್ಥೆ ರದ್ದುಗೊಳಿಸಲು ಸರ್ಕಾರ ಮುಂದಾಗಿದೆ ಎಂದು ಸಂಸದ ಬಿ. ವೈ. ರಾಘವೇಂದ್ರ ಅವರು ಪತ್ರಿಕಾ ಹೇಳಿಕೆ ನೀಡಿದ್ದಾರೆ. ಪ್ರಾಪರ್ಟಿ ಕಾರ್ಡ್‌ ವ್ಯವಸ್ಥೆಯಿಂದ ನಗರದ ಆಸ್ತಿ ಮಾಲೀಕರಿಗೆ ಉಂಟಾಗುತ್ತಿದ್ದ ಕಿರಿಕಿರಿಯನ್ನು ಮನಗಂಡು ಈ ರೀತಿ ಮಾಡಲಾಗಿದೆ ಎಂದಿದ್ದಾರೆ.

 • BY Raghavendra

  Karnataka Districts13, Aug 2019, 12:15 PM

  ಶಿವಮೊಗ್ಗ: ಸಂಸದರ ನೇತೃತ್ವದಲ್ಲಿ ನೆರೆ ಸಂತ್ರಸ್ತರಿಗೆ ನಿಧಿ ಸಂಗ್ರಹ

  ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿಯಿಂದ ಹಾನಿ ಉಂಟಾದ ಹಿನ್ನೆಲೆಯಲ್ಲಿ ಸಂತ್ರಸ್ತರಿಗೆ ನೆರವು ನೀಡುವ ಉದ್ದೇಶದಿಂದ ಸೋಮವಾರ ಸಂಸದ ಬಿ.ವೈ.ರಾಘವೇಂದ್ರ ಮತ್ತಿತರರು ನಿಧಿ ಸಂಗ್ರಹ ಮಾಡಿದರು. ವಿನೋಬನಗರ ಪೊಲೀಸ್‌ ಚೌಕಿ ವೃತ್ತದಲ್ಲಿ ನಿಧಿ ಸಂಗ್ರಹಣೆ ನಡೆಸಲಾಯಿತು.

 • heavy rain

  Karnataka Districts11, Aug 2019, 12:40 PM

  ಮಳೆ ಸಂಕಷ್ಟ: ಸಂಸದರಿಂದ 1 ಕೋಟಿ ನೆರವು

  ಜಿಲ್ಲೆಯಲ್ಲಿ ಮಳೆಯಿಂದಾಗಿ ಸಂಕಷ್ಟಕ್ಕೀಡಾದ ಜನರ ನೆರವಿಗಾಗಿ ಪ್ರೇರಣಾ ಎಜುಕೇಷನ್‌ ಟ್ರಸ್ಟ್‌ ವತಿಯಿಂದ 50 ಲಕ್ಷ ರು. ಹಾಗೂ ತಮ್ಮ ಸಂಸದರ ನಿಧಿಯಿಂದ 50 ಲಕ್ಷ ರು.ಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಜಿಲ್ಲಾಧಿಕಾರಿಗಳ ಮೂಲಕ ಸಂಸದ ಬಿ. ವೈ. ರಾಘವೇಂದ್ರ ಶನಿವಾರ ನೀಡಿದರು.

 • B Y Raghavendra

  NEWS23, Jun 2019, 8:15 AM

  ಶರಾವತಿ ನೀರು ಬೆಂಗಳೂರಿಗೆ; ಜು. 10 ಕ್ಕೆ ಶಿವಮೊಗ್ಗ ಬಂದ್

  ಶರಾವತಿ ಹಿನ್ನೀರಿನಿಂದ ಬೆಂಗಳೂರಿಗೆ ಕುಡಿಯಲು ನೀರು ತೆಗೆದುಕೊಂಡು ಹೋಗುವ ಯೋಜನೆಗೆ ದಿನಕಳೆದಂತೆ ಮಲೆನಾಡು ಭಾಗದಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ ಕೂಡ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

 • Shivamogga

  Lok Sabha Election News25, Mar 2019, 12:59 PM

  ಟ್ರಬಲ್ ಶೂಟರ್ ಎಂಟ್ರಿಯಿಂದ ಕುತೂಹಲ ಕೆರಳಿಸಿದೆ ಶಿವಮೊಗ್ಗ ಕ್ಷೇತ್ರ!

  ರಾಜ್ಯದಲ್ಲಿ ಎರಡು ಹಂತಗಳಲ್ಲಿ ನಡೆಯಲಿರುವ ಹಾಗೂ ತೀವ್ರ ಕುತೂಹಲ ಕೆರಳಿಸಿರುವ ಲೋಕಸಭೆ ಮಹಾಸಮರಕ್ಕೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ಮೂರೂ ರಾಜಕೀಯ ಪಕ್ಷಗಳು ಬಹುತೇಕ ಮುಕ್ತಾಯಗೊಳಿಸುವ ಹಂತಕ್ಕೆ ತಲುಪಿವೆ. ಹೀಗಿರುವಾಗ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಕಣ ಹೇಗಿದೆ? ಪ್ರಮುಖ ಅಭ್ಯರ್ಥಿಗಳು ಯಾರು? ಇಲ್ಲಿದೆ ವಿವರ

 • Ticket Fight

  POLITICS6, Feb 2019, 4:01 PM

  ಟಿಕೆಟ್ ಫೈಟ್: ಶಿವಮೊಗ್ಗದಿಂದ ಮಧು ಸ್ಪರ್ಧಿಸ್ತಾರಾ? ಗೀತಾ ಕಣಕ್ಕಿಳೀತಾರಾ?

  ‘ಮಲೆನಾಡ ಹೆಬ್ಬಾಗಿಲು’ ಶಿವಮೊಗ್ಗ ಜಿಲ್ಲೆ ರಾಜ್ಯ ರಾಜಕಾರಣದಲ್ಲಿ ಮೊದಲಿನಿಂದಲೂ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. 3 ತಿಂಗಳ ಹಿಂದಷ್ಟೇ ಸಂಸದರನ್ನು ಆರಿಸಿದ್ದ ಇಲ್ಲಿನ ಮತದಾರರು ನೂತನ
  ಸಂಸದನನ್ನು ಇನ್ನೆರಡು ತಿಂಗಳಲ್ಲಿ ಆಯ್ಕೆ ಮಾಡಬೇಕಾಗಿದೆ. ಹಾಲಿ ಸಂಸದ ಬಿ.ವೈ. ರಾಘವೇಂದ್ರ ಅವರು ಮತ್ತೊಮ್ಮೆ ಬಿಜೆಪಿ ಅಭ್ಯರ್ಥಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಜೆಡಿಎಸ್- 
  ಕಾಂಗ್ರೆಸ್ ಮೈತ್ರಿ ಏರ್ಪಟ್ಟರೆ ರಾಘವೇಂದ್ರ ವಿರುದ್ಧ ಉಪಚುನಾವಣೆಯಲ್ಲಿ ಪರಾಜಿತರಾಗಿದ್ದ ಮಧು ಬಂಗಾರಪ್ಪ ಹುರಿಯಾಳಾಗುತ್ತಾರೆ. ಈ ನಡುವೆ ಗೀತಾ ಶಿವರಾಜಕುಮಾರ್ ಹೆಸರೂ ಚಾಲ್ತಿಯಲ್ಲಿದೆ.