B S Yediyurappa  

(Search results - 31)
 • NEWS14, Sep 2019, 8:52 AM IST

  ತುಂಗಭದ್ರಾದಿಂದ ಜಗಳೂರಿಗೆ ನೀರು: ವರದಿ ಕೇಳಿದ ಬಿಎಸ್‌ವೈ

  ದಾವಣಗೆರೆ ಜಿಲ್ಲೆಯ ಜಗಳೂರಿಗೆ ಪೈಪ್‌ಲೈನ್‌ ಮೂಲಕ ತುಂಗಭದ್ರಾ ಕುಡಿಯುವ ನೀರನ್ನು ಹರಿಸಲು ಸಾಧ್ಯವೇ ಎಂಬುದರ ಕುರಿತು ಶೀಘ್ರವೇ ವರದಿ ನೀಡುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ಆದಷ್ಟುಬೇಗ ಆ ಕೆಲಸವನ್ನು ಮುಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

 • Karnataka Districts13, Sep 2019, 3:30 PM IST

  'ಕಾಂಗ್ರೆಸ್ ಪ್ರತಿಭಟಿಸೋದು ನೆರೆ ಸಂತ್ರಸ್ತರಿಗಾಗಿ ಅಲ್ಲ, ತನ್ನ ಅಸ್ತಿತ್ವಕ್ಕಾಗಿ'

  ಪ್ರವಾಹ ಸಂತ್ರಸ್ತರಿಗೆ ಪರಿಹಾರ ಒದಗಿಸುವಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸಂಪೂರ್ಣವಾಗಿ ವಿಫಲವಾಗಿದೆ ಎಂದು ಕಾಂಗ್ರೆಸ್ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದ್ದು, ಈ ಹಿನ್ನೆಲೆಯಲ್ಲಿ ಸಿಎಂ ಬಿ. ಎಸ್ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ. ಕಾಂಗ್ರೆಸ್ ನೆರೆ ಸಂತ್ರಸ್ತರಿಗಾಗಿ ಅಲ್ಲ, ತನ್ನ ಅಸ್ತಿತ್ವಕ್ಕಾಗಿ ಪ್ರತಿಭಟಿಸ್ತಿದೆ ಎಂದಿದ್ದಾರೆ.

 • Karnataka Districts13, Sep 2019, 2:02 PM IST

  'ಯಡಿಯೂರಪ್ಪ ಅವರಂಥವರನ್ನು ಬಹಳಷ್ಟು ಕಂಡಿದ್ದೇನೆ, ಇದು ಬಹಳ ಕಾಲ ನಡೆಯಲ್ಲ'

  ಯಡಿಯೂರಪ್ಪ ಅವರು ಜೆಡಿಎಸ್‌ ವಿರುದ್ಧ ದ್ವೇಷ ರಾಜಕಾರಣ ಆರಂಭಿಸಿದ್ದು, ಇದು ಬಹಳಷ್ಟುದಿನ ನಡೆಯುವುದಿಲ್ಲ. ಯಡಿಯೂರಪ್ಪ ಅಂತಹವರನ್ನು ಬಹಳಷ್ಟುಮಂದಿಯನ್ನು ಕಂಡಿದ್ದೇನೆ ಎಂದು ಜೆಡಿಎಸ್‌ ಮುಖಂಡರಾದ ಮಾಜಿ ಸಚಿವ ಎಚ್‌.ಡಿ. ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.

 • Karnataka Districts13, Sep 2019, 9:02 AM IST

  ಬಿಎಸ್‌ವೈ ರಾಜೀನಾಮೆ ಕೊಡಲಿ: ತವರಲ್ಲೇ ಸಿಎಂ ವಿರುದ್ಧ ಆಕ್ರೋಶ

  ಸಿಎಂ ಬಿ. ಎಸ್‌. ಯಡಿಯೂರಪ್ಪ ಅವರಿಗೆ ಕೇಂದ್ರದಿಂದ ನೆರೆ ಪರಿಹಾರ ಹಣ ತರುವ ತಾಕತ್ತಿಲ್ಲ ಎಂದು ಸಾಗರ ಬ್ಲಾಕ್ ಕಾಂಗ್ರೆಸ್ ಆರೋಪಿಸಿದೆ. ಬಿಎಸ್‌ವೈ ತಕ್ಷಣ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಬೇಕು. ಕೇಂದ್ರ ಸರ್ಕಾರ ತಕ್ಷಣ ರಾಜ್ಯದ ನೆರೆಹಾನಿಗೆ ಸಂಬಂಧಪಟ್ಟಂತೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

 • Yediyurappa

  Karnataka Districts13, Sep 2019, 8:46 AM IST

  'ಬಿಜೆಪಿ ಸರ್ಕಾರಕ್ಕೆ ದಂಡ ವಸೂಲಿಯಲ್ಲಿರೋ ಆಸಕ್ತಿ ಪರಿಹಾರ ನೀಡೋದ್ರಲಿಲ್ಲ'..!

  ಬಿಜೆಪಿ ಸರ್ಕಾರಕ್ಕೆ ದಂಡ ವಸೂಲಿ ಮಾಡೋದ್ರಲ್ಲಿರೋ ಆಸಕ್ತಿ ನೆರೆ ಸಂತ್ರಸ್ತರಿಗೆ ಪರಿಹಾರ ಒದಗಿಸೋದ್ರಲಿಲ್ಲ ಎಂದು ಶಿವಮೊಗ್ಗ ಬ್ಲಾಕ್ ಕಾಂಗ್ರೆಸ್ ಆರೋಪಿಸಿದೆ. ನೆರೆ ಪರಿಹಾರ ವಿತರಣೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿವೆ ಎಂದು ಆರೋಪಿಸಿ ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ ತಹಸೀಲ್ದಾರ್‌ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

 • TCS Koppa

  Karnataka Districts11, Sep 2019, 2:31 PM IST

  ಕೊಪ್ಪ ಸಹಕಾರ ಸಾರಿಗೆ ಸಂಸ್ಥೆ ಸಂಕಷ್ಟಕ್ಕೆ ಸ್ಪಂದಿಸಿದ ಸಿಎಂ

  ಸಿಎಂ ಯಡಿಯೂರಪ್ಪ ಅವರು ಕೊಪ್ಪ ಸಹಕಾರಿ ಸಾರಿಗೆ ಸಂಸ್ಥೆಗೆ ಸರ್ಕಾರಿ ಸಾರಿಗೆ ಸೌಲಭ್ಯ ನೀಡುವ ಭರವಸೆಯನ್ನು ನೀಡಿದ್ದಾರೆ. ನಷ್ಟದಲ್ಲಿ ನಡೆಯುತ್ತಿದ್ದ ಸಂಸ್ಥೆಗೆ ನೆರವಾಗಲು ಸರ್ಕಾರ ನಿರ್ಧರಿಸಿದ್ದು, ಈ ಮೂಲಕ ಸುಮಾರು 300ಕ್ಕೂ ಹೆಚ್ಚು ಕುಟುಂಬಗಳು ಸಮಸ್ಯೆಯಿಂದ ಪಾರಾದಂತಾಗಿದೆ.

 • Karnataka Districts11, Sep 2019, 12:36 PM IST

  ಕೇಂದ್ರದಿಂದ ಶೀಘ್ರ ನೆರೆ ಪರಿಹಾರ ಬಿಡುಗಡೆ: ಬಿಎಸ್‌ವೈ ಭರವಸೆ

  ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಆಗಮಿಸಿ ಪರಿಶೀಲನೆ ನಡೆಸಿ ತೆರಳಿದ್ದಾರೆ. ಕೇಂದ್ರದ ಅಧ್ಯಯನ ತಂಡಗಳು ಸಮೀಕ್ಷೆ ನಡೆಸಿಕೊಂಡು ಹೋಗಿವೆ. ಶೀಘ್ರದಲ್ಲೇ ಹಣ ಬಿಡುಗಡೆಯಾಗಲಿದೆ ಎಂದು ಸಿಎಂ ಬಿ. ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.

 • BY Raghavendra

  Karnataka Districts10, Sep 2019, 11:08 AM IST

  ಪ್ರಾಪರ್ಟಿ ಕಾರ್ಡ್‌ ರದ್ದತಿಗೆ ಮುಂದಾದ ಸರ್ಕಾರ

  ಆಸ್ತಿದಾರರಿಗೆ ತೀವ್ರ ಕಿರಿಕಿರಿಯಾಗಿದ್ದ ಪ್ರಾಪರ್ಟಿ ಕಾರ್ಡ್‌ ಕಡ್ಡಾಯ ವ್ಯವಸ್ಥೆ ರದ್ದುಗೊಳಿಸಲು ಸರ್ಕಾರ ಮುಂದಾಗಿದೆ ಎಂದು ಸಂಸದ ಬಿ. ವೈ. ರಾಘವೇಂದ್ರ ಅವರು ಪತ್ರಿಕಾ ಹೇಳಿಕೆ ನೀಡಿದ್ದಾರೆ. ಪ್ರಾಪರ್ಟಿ ಕಾರ್ಡ್‌ ವ್ಯವಸ್ಥೆಯಿಂದ ನಗರದ ಆಸ್ತಿ ಮಾಲೀಕರಿಗೆ ಉಂಟಾಗುತ್ತಿದ್ದ ಕಿರಿಕಿರಿಯನ್ನು ಮನಗಂಡು ಈ ರೀತಿ ಮಾಡಲಾಗಿದೆ ಎಂದಿದ್ದಾರೆ.

 • dk shivakumar arrested yeddyurappa

  Karnataka Districts7, Sep 2019, 4:03 PM IST

  ಡಿಕೆಶಿ ಬಂಧನ: ಬಿಎಸ್‌ವೈ ಹುಟ್ಟೂರಲ್ಲೇ ಬಿಜೆಪಿ ವಿರುದ್ಧ ಪ್ರತಿಭಟನೆ

  ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಬಂಧನವನ್ನು ವಿರೋಧಿಸಿ ರಾಜ್ಯದ ಹಲವು ಕಡೆ ಪ್ರತಿಭಟನೆಗಳು ನಡೆಯುತ್ತಲೇ ಇವೆ. ಇದೀಗ ಸಿಎಂ ಬಿ. ಎಸ್. ಯಡಿಯೂರಪ್ಪ ಅವರ ಹುಟ್ಟೂರು ಬೂಕನಕೆರೆಯಲ್ಲೇ ಡಿಕೆಶಿ ಬಂಧನವನ್ನು ವಿರೋಧಿಸಿ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನಾಕಾರರು ಮೋದಿ,  ಅಮಿತ್ ಶಾ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದ್ದಾರೆ.

 • NEWS3, Sep 2019, 8:18 AM IST

  ಮಹಾರಾಷ್ಟ್ರಕ್ಕೆ ಸಿಎಂ: ನೀರಾವರಿ ಯೋಜನೆಗಳ ಬಗ್ಗೆ ಮಹತ್ವದ ಚರ್ಚೆ

  ಮುಖ್ಯಮಂತ್ರಿ ಬಿ. ಎಸ್‌. ಯಡಿಯೂರಪ್ಪ ಅವರು ಮಹಾರಾಷ್ಟ್ರಕ್ಕೆ ಭೇಟಿ ನೀಡಲಿದ್ದಾರೆ. ಈ ಭೇಟಿಯಲ್ಲಿ ಮಾಹಾರಾಷ್ಟ್ರದಲ್ಲಿ ಸಿಎಂ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿಯಾಗಿ ಹಲವು ಮಹತ್ವ ವಿಚಾರಗಳ ಬಗ್ಗೆ ಚರ್ಚೆ ಮಾಡಲಿದ್ದಾರೆ. ಮಹದಾಯಿ ಹಾಗೂ,ಕೃಷ್ಣಾ ಮೇಲ್ದಂಡೆ ಯೋಜನೆಯ ಬಗ್ಗೆ ಚರ್ಚಿಸಲಿದ್ದಾರೆ

 • Yediyurappa

  Karnataka Districts1, Sep 2019, 1:17 PM IST

  ಶಿವಮೊಗ್ಗ: ಮುನ್ಸೂಚನೆ ಕೊಡದೇ ಬಂದ ಸಿಎಂ

  ಉತ್ತರ ಕನ್ನಡಕ್ಕೆ ನೆರೆ ಪೀಡಿತ ಪ್ರದೇಶ ವೀಕ್ಷಿಸಲು ಹೊರಟಿದ್ದ ಸಿಎಂ ಯಡಿಯೂರಪ್ಪ ಅಚಾನಕ್ ಆಗಿ ಶಿವಮೊಗ್ಗದಲ್ಲಿ ಇಳಿದಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯ ಕಾರಣ ಹೆಲಿಕಾಪ್ಟರ್‌ ಹೋಗಲು ಸಾಧ್ಯವಿಲ್ಲ ಎಂಬ ಸಂದೇಶ ಬಂದಿತು. ತಕ್ಷಣವೇ ಶಿವಮೊಗ್ಗದಲ್ಲಿಯೇ ಅಧಿಕಾರಿಗಳ ಸಭೆ ನಡೆಸಲು ಸೂಚಿಸಿ ದಿಢೀರನೆ ಜಿಪಂ ಸಭಾಂಗಣಕ್ಕೆ ಬಂದರು. ಸಭೆ ಮುಗಿಸಿ ಮಧ್ಯಾಹ್ನ. 12.30 ರ ಸುಮಾರಿಗೆ ಹಾವೇರಿಗೆ ಹೆಲಿಕಾಪ್ಟರ್‌ನಲ್ಲಿ ಪ್ರಯಾಣ ಬೆಳೆಸಿದರು.

 • Karnataka Districts1, Sep 2019, 12:49 PM IST

  ಜನರಿಗೆ ಕಿರುಕುಳ ಕೊಟ್ರೆ ಕಲಬುರ್ಗಿಗೆ ಎತ್ತಂಗಡಿ: SP, ಅಧಿಕಾರಿಗಳಿಗೆ ಯಡಿಯೂರಪ್ಪ ಎಚ್ಚರಿಕೆ..!

  ಮರಳು ವಿಚಾರವಾಗಿ ಅನಗತ್ಯವಾಗಿ ಜನರಿಗೆ ತೊಂದರೆ ಕೊಟ್ಟರೆ ಅಧಿಕಾರಿಗಳನ್ನು ಎತ್ತಂಗಡಿ ಮಾಡಲಾಗುತ್ತೆ ಅಂತ ಸಿಎಂ ಯಡಿಯೂರಪ್ಪ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಕಿರುಕುಳ ನೀಡುವ ದೂರುಗಳು ಇನ್ನು ಬರಬಾರದು. ಇದೇ ರೀತಿ ದೂರುಗಳು ಬಂದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಅವರು ಖಡಕ್ಕಾಗಿ ಎಚ್ಚರಿಕೆ ನೀಡಿದರು.

 • BSYeddyurappa cm

  Karnataka Districts1, Sep 2019, 12:31 PM IST

  ಕಲ್ಲೊಡ್ಡು ಯೋಜನೆ ಮಾಡಿಯೇ ಸಿದ್ಧ: ಯಡಿಯೂರಪ್ಪ

  ಕಲ್ಲೊಡ್ಡು ಯೋಜನೆಯ ಅನುಷ್ಠಾನಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿರುವ ಸಂದರ್ಭದಲ್ಲಿಯೇ ಯೋಜನೆ ಅನುಷ್ಢಾನ ಮಾಡಿಯೇ ಸಿದ್ಧ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಶಿಕಾರಿಪುರ ತಾಲೂಕಿಗೆ ಕುಡಿಯುವ ನೀರು ಪೂರೈಸುವ ಕಲ್ಲೊಡ್ಡು ಯೋಜನೆಯಿಂದ ಸಾಕಷ್ಟು ಜನರಿಗೆ ಪ್ರಯೋಜನವಾಗಲಿದೆಯಾದರೂ ಪರಿಹಾರ ಸಿಗುವುದಿಲ್ಲ ಎಂಬ ಕಾರಣದಿಂದ ಜನ ವಿರೋಧಿಸುತ್ತಿದ್ದಾರೆ.

 • Karnataka Districts30, Aug 2019, 10:28 AM IST

  ಮಂಗಳೂರು: ಬಂಟ್ವಾಳ ಕ್ಷೇತ್ರಕ್ಕೆ 25 ಕೋಟಿ ರು. ಬಿಡುಗಡೆಗೆ ಆದೇಶ

  ಬಂಟ್ವಾಳ ಶಾಸಕ ರಾಜೇಶ್‌ ನಾಯ್ಕ್‌ ಉಳೆಪಾಡಿ ಸೋಮವಾರ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಬಂಟ್ವಾಳ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ 25 ಕೋಟಿ ರು. ಒದಗಿಸುವಂತೆ ಮನವಿ ಮಾಡಿದರು. ಶಾಸಕರ ಮನವಿಗೆ ತಕ್ಷಣ ಸ್ಪಂದಿಸಿದ ಮುಖ್ಯಮಂತ್ರಿ ಅನುದಾನ ಬಿಡುಗಡೆಗೊಳಿಸಲು ಆದೇಶಿಸಿದ್ದಾರೆ ಎಂದು ಶಾಸಕರ ಕಚೇರಿ ಪ್ರಕಟಣೆ ತಿಳಿಸಿದೆ.

 • yeddyurappa kumaraswamy

  Karnataka Districts30, Aug 2019, 9:12 AM IST

  ಮಂಡ್ಯ: ಮಾಜಿ ಸಿಎಂ ಕುಮಾರಸ್ವಾಮಿಗೆ ಬಿಎಸ್‌ವೈ ಟಾಂಗ್‌

  ಮಂಡ್ಯದಲ್ಲಿ ನಡೆದ ಬಾಗಿನ ಸಮರ್ಪಣೆ ಕಾರ್ಯಕ್ರಮದ ವೇದಿಕೆಯಲ್ಲಿ ಸಿಎಂ ಯಡಿಯೂರಪ್ಪ ಅವರ ಮಾತುಗಳು ಕುಮಾರಸ್ವಾಮಿಗೆ ಟಾಂಗ್‌ ಕೊಟ್ಟರೀತಿಯಲ್ಲಿ ಇದ್ದವು. ಕೆಆರ್‌ಎಸ್‌ ಅಭಿವೃದ್ಧಿ ಮಾಡುತ್ತೇವೆ, ಕೆಆರ್‌ಎಸ್‌ ನಿವಾಸಿಗಳಿಗೆ ಹಕ್ಕು ಪತ್ರ ನೀಡಿ ಕಂದಾಯ ಗ್ರಾಮ ಎಂದು ಘೋಷಣೆ ಮಾಡುತ್ತೇವೆ ಎಂದರು.