Ayushman Bhava  

(Search results - 11)
 • DWARIKISH

  Sandalwood4, Feb 2020, 1:37 PM IST

  ಹನ್ನೆರಡು ಬಂಗ್ಲೆ ಮಾರಿದ ದ್ವಾರಕೀಶ್‌ ಈ ಸಲ ಮಾರಿಕೊಂಡದ್ದೇನು?

  ಕರ್ನಾಟಕದ ಕುಳ್ಳ ದ್ವಾರಕೀಶ್‌ ಮತ್ತೆ ಬೀದಿಗೆ ಬರುವ ಎಲ್ಲಾ ಸೂಚನೆಗಳೂ ಕಾಣಿಸುತ್ತಿವೆ. ಪದೇ ಪದೇ ತಮ್ಮನ್ನು ಪ್ರಯೋಗಕ್ಕೆ ಒಡ್ಡಿಕೊಂಡವರು ದ್ವಾರಕೀಶ್‌. ನಲವತ್ತೊಂಬತ್ತು ಚಿತ್ರಗಳನ್ನು ನಿರ್ಮಿಸಿದ ನಂತರ, ಐವತ್ತನೇ ಸಿನಿಮಾ ಅಂತ ಸಂಭ್ರಮದಿಂದ ಘೋಷಿಸಿಕೊಂಡು ಬಿಡುಗಡೆ ಮಾಡಿದ ಆಯುಷ್ಮಾನ್‌ ಭವ ಚಿತ್ರಕ್ಕೆ ಚಿತ್ರಮಂದಿರಗಳಲ್ಲಿ ಆಯಸ್ಸೂ ಇರಲಿಲ್ಲ, ನಿರ್ಮಾಪಕರಿಗೆ ಮಾನವೂ ಬರಲಿಲ್ಲ.

 • Karthi with shivarjkumar
  Video Icon

  Sandalwood16, Nov 2019, 3:35 PM IST

  'ಆಯುಷ್ಮಾನ್‌ಭವ' ರಿಲೀಸ್‌; 'ಖೈದಿ'ಗೆ ಕೈ ಜೋಡಿಸುತ್ತಾರಾ ಶಿವಣ್ಣ?

   

  ಡಾ.ಶಿವರಾಜ್‌ಕುಮಾರ್ ಅಭಿನಯದ 'ಆಯುಷ್ಮಾನ್‌ಭವ' ಚಿತ್ರ ಮೊದಲ ದಿನವೇ ಅಭಿಮಾನಿಗಳ ಪ್ರೀತಿ ಗಿಟ್ಟಿಸಿಕೊಂಡಿದೆ. ಫ್ಯಾಮಿಲಿ ಎಂಟರ್ಟೇನ್‌ಮೆಂಟ್‌ ಚಿತ್ರವನ್ನು ನೋಡಿದ ಅಭಿಮಾನಿಗಳು ಪ್ರೀತಿಯಿಂದ ಶಿವಣ್ಣನಿಗೆ ವಿಶ್ ಮಾಡಿದ್ದು ಹೀಗಿದೆ ನೀವೇ ನೋಡಿ....

 • ayushman bhava kannada

  Film Review16, Nov 2019, 10:03 AM IST

  ಚಿತ್ರ ವಿಮರ್ಶೆ: ಆಯುಷ್ಮಾನ್‌ಭವ

  ಪಿ.ವಾಸು ನಿರ್ದೇಶನದ ಸಿನಿಮಾಗಳನ್ನು ನೋಡಿ ಗೊತ್ತಿದ್ದವರನ್ನು, ‘ಆಯುಷ್ಮಾನ್‌ಭವ’ ಅಚ್ಚರಿಗೊಳಿಸುವುದೂ ಇಲ್ಲ, ನಿರಾಶೆಗೊಳಿಸುವುದೂ ಇಲ್ಲ. ಎಲ್ಲಾ ಪಿ.ವಾಸು ಶೈಲಿಯ ಸಿನಿಮಾಗಳ ಹಾಗೆ ಇದರಲ್ಲೂ ತಿರುವು-ಮುರುವುಗಳಿವೆ. ಸಿನಿಮಾ ಎಲ್ಲಿಯೋ ಶುರುವಾಗಿ, ಎಲ್ಲೆಲ್ಲಿಗೋ ಹೋಗಿ, ಹೊರಟ ಜಾಗಕ್ಕೊಮ್ಮೆ ಭೇಟಿ ಕೊಟ್ಟು , ಒಂದು ಹೊಸ ಕತೆಯನ್ನು ಹೇಳಿ ಕೊನೆಗೊಳ್ಳುತ್ತದೆ. ಸಂತೋಷ ತುಂಬಿದ ಮನೆಯಲ್ಲೊಂದು ವಿಷಾದ ಔಟ್‌ಹೌಸಲ್ಲಿ ಅವಿತು ಕೂತಿರುತ್ತದೆ. ಮನಶ್ಯಾಸ್ತ್ರವೂ ಮನೋರಂಜನೆಯೂ ಒಟ್ಟಾಗಿ ಕೆಲಸ ಮಾಡಿದಾಗ ಆಯಸ್ಸು ಜಾಸ್ತಿಯಾಗುತ್ತದೆ!

 • Rachita Ram

  Interviews15, Nov 2019, 1:24 PM IST

  ಸಿನಿಮಾ ಒಪ್ಪಿಕೊಳ್ಳುತ್ತಿರುವುದು ಸಂಖ್ಯೆಗೋಸ್ಕರ ಅಲ್ಲ: ರಚಿತಾ

  ನಟಿ ರಚಿತಾ ರಾಮ್ ಅಭಿನಯದ ‘ಆಯುಷ್ಮಾನ್ ಭವ’ ಚಿತ್ರ ಇದೇ ಶುಕ್ರವಾರ ತೆರೆಗೆ ಬರುತ್ತಿದೆ. ಈ ನಡುವೆ ತೆಲುಗಿಗೂ ಹೋಗುವ ತಯಾರಿಯಲ್ಲಿದ್ದಾರೆ. ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಚಿತಾ ಅವರೊಂದಿಗಿನ ಮಾತು ಇಲ್ಲಿದೆ. 

 • Ayushmanbhavan

  Sandalwood4, Nov 2019, 10:22 AM IST

  'ಆಯುಷ್ಮಾನ್‌ಭವ' ರಿಲೀಸ್‌ ಡೇಟ್‌ ಬದಲಾಗಿದಕ್ಕೆ ಸ್ಯಾಂಡಲ್‌ವುಡ್‌ನಲ್ಲಿ ಗೊಂದಲ!

  ಸ್ಟಾರ್ ಸಿನಿಮಾಗಳು ಬರುತ್ತವೆ ಎಂದಾಗ ಬೇರೆ ಸಿನಿಮಾ ತಂಡಗಳು ತಮ್ಮ ಚಿತ್ರ ಬಿಡುಗಡೆ ಮಾಡಲು ಹಿಂದೆ ಮುಂದೆ ನೋಡುತ್ತವೆ. ಅಂಥದ್ದರಲ್ಲಿ ಒಮ್ಮೆ ರಿಲೀಸ್ ಡೇಟ್ ಘೋಷಣೆ ಯಾದ ಸಿನಿಮಾ ರಿಲೀಸ್ ಆಗದಿದ್ದರೆ ಅನೇಕ ಸಿನಿಮಾಗಳಿಗೆ ಒಂಚೂರು ತೊಂದರೆ ಆಗುತ್ತವೆ. ಸದ್ಯ ಅಂಥದ್ದೊಂದು ಬೆಳವಣಿಗೆಗೆ ಕಾರಣವಾಗಿದ್ದು ‘ಆಯುಷ್ಮಾನ್‌ಭವ’ ಚಿತ್ರ.

   

 • Ayushman Bhava

  Sandalwood30, Oct 2019, 11:15 AM IST

  'ಆಯುಷ್ಮಾನ್ ಭವ' ಕ್ಕಾಗಿ ಶಿವಣ್ಣ ಅಭಿಮಾನಿಗಳು ಇನ್ನೂ ಎರಡು ವಾರ ಕಾಯಬೇಕು!

  ಸೆಂಚುರಿ ಸ್ಟಾರ್ ಅಭಿಮಾನಿಗಳಿಗೆ ಕನ್ನಡ ರಾಜ್ಯೋತ್ಸವ ಸಂಭ್ರಮ ಕೊಂಚ ಕಡಿಮೆ ಆಗಬಹುದು. ಯಾಕೆಂದರೆ ತಮ್ಮ ನೆಚ್ಚಿನ ನಾಯಕನ ನಟನ ಸಿನಿಮಾ ಬಿಡುಗಡೆಯ ದಿನಾಂಕ ಮುಂದಕ್ಕೆ ಹೋಗಿದೆ. ಈ ಮೊದಲೇ ನಿರ್ಧರಿಸಿದಂತೆ ನವೆಂಬರ್ 1 ರ ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಿ ಶಿವಣ್ಣ ನಟನೆಯ ‘ಆಯುಷ್ಮಾನ್‌ಭವ’ ಸಿನಿಮಾ ಅದ್ದೂರಿಯಾಗಿ ತೆರೆಗೆ ಬರಬೇಕಿತ್ತು.

 • ರಚಿತಾಗೆ ಸಂಪ್ರದಾಯಕ ಉಡುಗೆಯೂ ತುಂಬಾ ಇಷ್ಟವಂತೆ.

  Sandalwood21, Oct 2019, 9:40 AM IST

  'ಕೆಟ್ಟದ್ದಕ್ಕೂ, ಒಳ್ಳಯದ್ದಕ್ಕೂ ನಾನೇ ಕಾರಣವಂತೆ, ಇದೆಲ್ಲ ಹೇಗೆ ಸಾಧ್ಯ!'

  ದ್ವಾರಕೀಶ್ ಚಿತ್ರ ಸಂಸ್ಥೆಯ ಬಹುನಿರೀಕ್ಷಿತ ಚಿತ್ರ ‘ಆಯುಷ್ಮಾನ್ ಭವ’ ನ.1ಕ್ಕೆ ತೆರೆಗೆ ಬರುತ್ತಿದೆ. ಶಿವರಾಜ್ ಕುಮಾರ್ ಹಾಗೂ ರಚಿತಾ ರಾಮ್ ಜೋಡಿಯ ಚಿತ್ರವಿದು. ಆಪ್ತಮಿತ್ರ ಹಾಗೂ ಶಿವಲಿಂಗ ಚಿತ್ರಗಳ ಖ್ಯಾತಿಯ ನಿರ್ದೇಶಕ ಪಿ.ವಾಸು ಇದರ ನಿರ್ದೇಶಕರು.

 • Shivarajkumar Rachita Ram
  Video Icon

  Sandalwood15, Oct 2019, 4:28 PM IST

  ರಿಲೀಸ್ ಆಯ್ತು ಆಯುಷ್ಮಾನ್ ಭವ ಟೀಸರ್; ಶಿವಣ್ಣ ಅಬ್ಬರ ಹೀಗಿದೆ ನೋಡಿ

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಆಯುಷ್ಮಾನ್ ಭವ ಸಿನಿಮಾದ ಟೀಸರ್ ರಿಲೀಸ್ ಆಗಿದೆ...ಶಿವಲಿಂಗ ಸಿನಿಮಾದ ನಂತ್ರ ಪಿ ವಾಸು ಹಾಗೂ ಶಿವರಾಜ್ ಕುಮಾರ್ ಕಾಂಬಿನೇಷನ್ ಮತ್ತೆ ಒಟ್ಟಾಗಿದ್ದು ಆಯುಷ್ಮಾನ್ ಭವ ಕೂಡ ಶಿವಲಿಂಗ ಚಿತ್ರದ ರೀತಿಯಲ್ಲೆ ಪ್ರೇಕ್ಷಕರ ಮನಸ್ಸು ಗೆಲ್ಲುವ ಸೂಚನೆ ಕೊಡ್ತಿದೆ. ಹೇಗಿದೆ ಟ್ರೇಲರ್? ಏನೆಲ್ಲಾ ವಿಶೇಷತೆಗಳಿರಲಿವೆ? ಇಲ್ಲಿದೆ ನೋಡಿ. 
   

 • Shivarajkumar Rachita Ram

  Entertainment4, Oct 2019, 1:29 PM IST

  ಶಿವಣ್ಣ ಅಂದ್ರೆ ಫೆಂಟಾಸ್ಟಿಕ್‌, ವೆರಿ ಹಂಬಲ್‌, ವೆರಿ ಸಿನ್ಸಿಯರ್‌:ದ್ವಾರಕೀಶ್‌

  ಶಿವಣ್ಣ ಅಂದ್ರೆ ಫೆಂಟಾಸ್ಟಿಕ್‌, ಶಿವಣ್ಣ ಅಂದ್ರೆ ವೆರಿ ಹಂಬಲ್‌, ಶಿವಣ್ಣ ಅಂದ್ರೆ ವೆರಿ ಸಿನ್ಸಿಯರ್‌...

  - ಶಿವರಾಜ್‌ಕುಮಾರ್‌ ಅವರನ್ನು ಹೀಗೆಲ್ಲ ತಮ್ಮದೇ ಮಾತುಗಳಲ್ಲಿ ಬಣ್ಣಿಸುತ್ತಾ ಹೋದರು ಹಿರಿಯ ನಟ ದ್ವಾರಕೀಶ್‌. 

 • Guru kiran

  Entertainment1, Oct 2019, 11:16 AM IST

  ನೂರು ಸಿನಿಮಾ ಸಂಭ್ರಮದಲ್ಲಿ ಗುರುಕಿರಣ್‌!

  ಎಲ್ಲವೂ ಅದಾಗಿಯೇ ಆಗಿದ್ದು. ನಾನು ಇಷ್ಟುದೂರ ಬರುತ್ತೇನೆಂದು ಕನಸಲ್ಲೂ ಅಂದುಕೊಂಡಿರಲಿಲ್ಲ...!

  ಸಂಗೀತ ನಿರ್ದೇಶಕ ಗುರುಕಿರಣ್‌ ಹೀಗೆ ಹೇಳಿ ನಕ್ಕರು. ಅವರ ಆ ನಗುವಿನಲ್ಲಿ ಖುಷಿಯಿತ್ತು. ಸಂಭ್ರಮವೂ ಇತ್ತು. ಹಾಗೆಯೇ ಇಷ್ಟುದೂರ ಸಾಗಿ ಬಂದಿದ್ದರ ಏಳು ಬೀಳಿನ ಪಯಣದ ಸಾಹಸಮಯ ಕತೆ ಇತ್ತು. ಇದಕ್ಕೆ ಕಾರಣವಾಗಿದ್ದು ಅವರ ಸಂಗೀತ ನಿರ್ದೇಶನದ ಜರ್ನಿ

 • Rachita Ram
  Video Icon

  ENTERTAINMENT29, Sep 2019, 4:10 PM IST

  ತೆರೆಗೆ ಬರಲು ಸಿದ್ಧವಾಯ್ತು ‘ಆಯುಷ್ಮಾನ್ ಭವ’

  ಹ್ಯಾಟ್ರಿಕ್ ಹೀರೋ ಶಿವಣ್ಣ, ರಚಿತಾ ರಾಮ್ ಕಾಂಬಿನೇಶನ್ ನಲ್ಲಿ ‘ ಆಯುಷ್ಮಾನ್ ಭವ’ ತೆರೆಗೆ ಬರಲು ಸಿದ್ಧವಾಗಿದೆ. ದ್ವಾರಕೀಶ್ ಬ್ಯಾನರ್ ನಲ್ಲಿ ಚಿತ್ರ ನಿರ್ಮಾಣ ಆಗಿದೆ. ಹಾರರ್, ಥ್ರಿಲ್ಲರ್ ಸಬ್ಜೆಕ್ಟ್ ಇರುವ ಸಿನಿಮಾ ಇದಾಗಿದೆ. ಈ ಚಿತ್ರದ ವಿಶೇಷತೆಗಳೇನು? ಇಲ್ಲಿದೆ ನೋಡಿ.