Australian Cricket  

(Search results - 49)
 • Australian Cricketer Peter Handscomb tests positive for Coronavirus kvnAustralian Cricketer Peter Handscomb tests positive for Coronavirus kvn

  CricketJul 12, 2021, 5:26 PM IST

  ಆಸ್ಟ್ರೇಲಿಯಾ ಕ್ರಿಕೆಟಿಗ ಪೀಟರ್ ಹ್ಯಾಂಡ್ಸ್‌ಕಂಬ್‌ಗೆ ಕೊರೋನಾ ಪಾಸಿಟಿವ್

  30 ವರ್ಷದ ಹ್ಯಾಂಡ್ಸ್‌ಕಂಬ್ ಈ ಆವೃತ್ತಿಯ ಕೌಂಟಿ ಚಾಂಪಿಯನ್‌ಶಿಪ್‌ ಟೂರ್ನಿಯಲ್ಲಿ ಮಿಡಲ್‌ಸೆಕ್ಸ್‌ ತಂಡದ ನಾಯಕರಾಗಿದ್ದಾರೆ. ಪೀಟರ್‌ ಹ್ಯಾಂಡ್ಸ್‌ಕಂಬ್ ಅವರಿಗೆ ಕೋವಿಡ್ 19 ಸೋಂಕು ದೃಢಪಡುತ್ತಿದ್ದಂತೆಯೇ ಆಸ್ಟ್ರೇಲಿಯಾ ಕ್ರಿಕೆಟಿಗ ಐಸೋಲೇಷನ್‌ಗೆ ಒಳಗಾಗಿದ್ದಾರೆ. 

 • Australian Cricketer Steve Smith Ready To Sacrifice T20 World Cup To Be Fit For Ashes Series kvnAustralian Cricketer Steve Smith Ready To Sacrifice T20 World Cup To Be Fit For Ashes Series kvn

  CricketJul 3, 2021, 1:24 PM IST

  ಆ್ಯಷಸ್ ಸರಣಿಗಾಗಿ ಟಿ20 ವಿಶ್ವಕಪ್‌ ತ್ಯಾಗಕ್ಕೆ ರೆಡಿಯಾದ ಸ್ಮಿತ್..!

  ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ಸ್ಮಿತ್ ಮೊಣಕೈ ಗಾಯದ ಸಮಸ್ಯೆಯಿಂದಾಗಿ ಮುಂಬರುವ ವೆಸ್ಟ್ ಇಂಡೀಸ್ ವಿರುದ್ದದ ಸೀಮಿತ ಓವರ್‌ಗಳ ಸರಣಿಯಿಂದ ಹಿಂದೆ ಸರಿದಿದ್ದಾರೆ. 

 • Australian Cricketer David Warner Marcus Stoinis pull out of The Hundred Tournament kvnAustralian Cricketer David Warner Marcus Stoinis pull out of The Hundred Tournament kvn

  CricketJun 11, 2021, 3:44 PM IST

  'ದಿ ಹಂಡ್ರೆಡ್‌' ಟೂರ್ನಿಯಿಂದ ಹಿಂದೆ ಸರಿದ ವಾರ್ನರ್-ಸ್ಟೋನಿಸ್

  ಭಾರತದಲ್ಲಿ ನಡೆಯುತ್ತಿದ್ದ 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯು ಕೋವಿಡ್ ಕಾರಣದಿಂದ ದಿಢೀರ್ ಸ್ಥಗಿತವಾದ ಬೆನ್ನಲ್ಲೇ ಕಠಿಣ ಕ್ವಾರಂಟೈನ್‌ ಮುಗಿಸಿ ತವರಿಗೆ ವಾಪಾಸಾಗಿದ್ದರು. ಇದೀಗ ವೆಸ್ಟ್‌ ಇಂಡೀಸ್ ಹಾಗೂ ಬಾಂಗ್ಲಾದೇಶ ವಿರುದ್ದದ ಸೀಮಿತ ಓವರ್‌ಗಳ ಸರಣಿಗೆ ಆಸ್ಟ್ರೇಲಿಯಾ ಪ್ರಾಥಮಿಕ ತಂಡದಲ್ಲಿ ಈ ಇಬ್ಬರು ಆಟಗಾರರು ಸ್ಥಾನ ಪಡೆದಿದ್ದಾರೆ.

 • IPL 2021 Finally Australian cricketers re unite with family members kvnIPL 2021 Finally Australian cricketers re unite with family members kvn

  CricketMay 31, 2021, 1:55 PM IST

  ಮನೆ ಸೇರಿದ ಆಸೀಸ್‌ ಕ್ರಿಕೆಟಿಗರು; ಆತ್ಮೀಯವಾಗಿ ಕಮಿನ್ಸ್‌ ಬರಮಾಡಿಕೊಂಡ ಪತ್ನಿ

  ಭಾರತದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ಸರ್ಕಾರವು ಭಾರತದಿಂದ ಬರುವ ವಿಮಾನಗಳಿಗೆ ನಿರ್ಬಂಧವನ್ನು ಹೇರಿತ್ತು. ಹೀಗಾಗಿ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್, ಪ್ಯಾಟ್ ಕಮಿನ್ಸ್‌, ರಿಕಿ ಪಾಂಟಿಂಗ್, ಮೈಕಲ್ ಸ್ಲೇಟರ್, ಗ್ಲೆನ್‌ ಮ್ಯಾಕ್ಸ್‌ವೆಲ್ ಸೇರಿದಂತೆ 38 ಮಂದಿ ಮಾಲ್ಡೀವ್ಸ್‌ಗೆ ತೆರಳಿ, ಅಲ್ಲಿ ಮತ್ತೆ 2 ವಾರಗಳ ಕಾಲ ಕ್ವಾರಂಟೈನ್‌ನಲ್ಲಿದ್ದು, ಅಲ್ಲಿಂದ ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಿದ್ದರು.

 • IPL 2021 Australian Cricketer Pat Cummins set to become father in spring kkr congratulate the Pacer kvnIPL 2021 Australian Cricketer Pat Cummins set to become father in spring kkr congratulate the Pacer kvn

  CricketMay 10, 2021, 2:09 PM IST

  IPL 2021: ಮದುವೆಗೂ ಮುನ್ನ ತಂದೆಯಾಗುತ್ತಿದ್ದಾರೆ ಕೆಕೆಆರ್‌ನ ಈ ಸ್ಟಾರ್ ಕ್ರಿಕೆಟಿಗ..!

  ಮೆಲ್ಬರ್ನ್‌: ಆಸ್ಟ್ರೇಲಿಯಾ ಕ್ರಿಕೆಟಿಗ ಹಾಗೂ ಕೋಲ್ಕತ ನೈಟ್‌ ರೈಡರ್ಸ್‌ ತಂಡದ ಮಾರಕ ವೇಗಿ ಪ್ಯಾಪ್ ಕಮಿನ್ಸ್‌ ಸದ್ಯದಲ್ಲಿಯೇ ತಂದೆಯಾಗಲಿದ್ದಾರೆ. ಕಮಿನ್ಸ್‌ ಭಾವಿ ಪತ್ನಿ ಬೆಕೆ ಬೋಸ್ಟನ್‌ ತಮ್ಮ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಭಾನುವಾರವಷ್ಟೇ(ಮೇ.09) ಕಮಿನ್ಸ್ ಹಾಗೂ ಭಾವಿ ಪತ್ನಿ ಬೆಕೆ ಬೋಸ್ಟನ್‌ಗೆ ಕೋಲ್ಕತ ನೈಟ್‌ ರೈಡರ್ಸ್ ಫ್ರಾಂಚೈಸಿ ಟ್ವೀಟ್‌ ಮೂಲಕ ಶುಭಕೋರಿತ್ತು. ಕೆಲವು ದಿನಗಳ ಹಿಂದಷ್ಟೇ ಬೆಕೆ ಬೋಸ್ಟನ್‌ ಕಡಲ ಕಿನಾರೆಯಲ್ಲಿ ತಮ್ಮ ಬೇಬಿ ಬಂಪ್ಸ್‌ನೊಂದಿಗೆ ಫೋಟೋಶೂಟ್‌ ಮಾಡಿಸಿಕೊಂಡಿದ್ದರು. ಕಮಿನ್ಸ್‌ ಹಾಗೂ ಬೆಕೆ ಬೋಸ್ಟನ್‌ ಕುರಿತಾದ ಇಂಟ್ರೆಸ್ಟಿಂಗ್ ಲವ್ ಸ್ಟೋರಿ ಇಲ್ಲಿದೆ ನೋಡಿ.

 • IPL 2021 Australian Cricketer David Warner Michael Slater Deny Reports Of Fight In Maldives Bar kvnIPL 2021 Australian Cricketer David Warner Michael Slater Deny Reports Of Fight In Maldives Bar kvn

  CricketMay 10, 2021, 7:49 AM IST

  ಮಾಲ್ಡೀವ್ಸ್‌ ರೆಸಾರ್ಟ್‌ನಲ್ಲಿ ವಾರ್ನರ್‌-ಸ್ಲೇಟರ್‌ ಫೈಟ್‌?

  ಡೇವಿಡ್‌ ವಾರ್ನರ್ ಹಾಗೂ ನಾನು ಉತ್ತಮ ಸ್ನೇಹಿತರು. ನಾವಿಬ್ಬರು ಗಲಾಟೆ ಮಾಡುವ ಪ್ರಶ್ನೆಯೇ ಇಲ್ಲ. ಇದೊಂದು ರೀತಿಯ ಆಧಾರ ರಹಿತ ಗಾಳಿಸುದ್ದಿಯಷ್ಟೇ ಎಂದು ಮಿಲ್ ಬಜ್‌ ಪತ್ರಿಕೆಗೆ ಆಸ್ಟ್ರೇಲಿಯಾ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಸ್ಲೇಟರ್ ಸ್ಪಷ್ಟಪಡಿಸಿದ್ದಾರೆ. 

 • IPL 2021 Former Australian Cricketer Michael Hussey tests positive for COVID 19 kvnIPL 2021 Former Australian Cricketer Michael Hussey tests positive for COVID 19 kvn

  CricketMay 5, 2021, 1:53 PM IST

  ಐಪಿಎಲ್ 2021: ಸಿಎಸ್‌ಕೆ ಬ್ಯಾಟಿಂಗ್ ಕೋಚ್‌ ಮೈಕ್ ಹಸ್ಸಿಗೆ ಕೋವಿಡ್ 19 ದೃಢ..!

  ಮೊದಲ ಕೋವಿಡ್ ಟೆಸ್ಟ್‌ನಲ್ಲಿ ಮೈಕ್ ಹಸ್ಸಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಇದನ್ನು ಖಚಿತಪಡಿಸಿಕೊಳ್ಳಲು ಹಸ್ಸಿ ಮತ್ತೊಮ್ಮೆ ಪರೀಕ್ಷೆ ನಡೆಸಿದಾಗಲೂ ವರದಿ ಪಾಸಿಟಿವ್ ಬಂದಿದೆ. ಹಸ್ಸಿ ನೀಡಿದ ಸ್ಯಾಂಪಲ್‌ನಲ್ಲಿ ಪಾಸಿಟಿವ್ ಬಂದಿದೆ. ಪುನಃ ಪರೀಕ್ಷೆ ನಡೆಸಲು ಸ್ಯಾಂಪಲ್ ಕಳಿಸಿದಾಗಲು ವರದಿ ಪಾಸಿಟಿವ್ ಬಂದಿದೆ ಎಂದು ಐಪಿಎಲ್‌ ಮೂಲಗಳು ಪಿಟಿಐಗೆ ತಿಳಿಸಿವೆ ಎಂದು ವರದಿಯಾಗಿದೆ.

 • Australian players in IPL will have to make own arrangements for return Says Aussie PM Scott Morrison kvnAustralian players in IPL will have to make own arrangements for return Says Aussie PM Scott Morrison kvn

  CricketApr 28, 2021, 9:44 AM IST

  IPL 2021: ನಿಮಗಾಗಿ ವಿಮಾನ ಕಳಿಸಲು ಆಗಲ್ಲ: ಆಟಗಾರರಿಗೆ ಆಸೀಸ್‌ ಪ್ರಧಾನಿ ಶಾಕ್‌

  ‘ಆಟಗಾರರು ಖಾಸಗಿಯಾಗಿ ಐಪಿಎಲ್‌ಗೆ ತೆರಳಿದ್ದಾರೆ. ಇದು ಆಸ್ಪ್ರೇಲಿಯಾ ಪ್ರವಾಸದ ಭಾಗವಲ್ಲ. ತಮ್ಮ ಸ್ವಂತ ಸಂಪನ್ಮೂಲಗಳನ್ನು ಬಳಸಿಕೊಂಡು, ತಾವೇ ವ್ಯವಸ್ಥೆ ಮಾಡಿಕೊಂಡು ಬರಬೇಕು. ಆಸ್ಪ್ರೇಲಿಯಾ ಸರ್ಕಾರ ಯಾವುದೇ ನೆರವು ನೀಡುವುದಿಲ್ಲ’ ಎಂದು ಮೊರ್ರಿಸನ್‌ ಹೇಳಿದ್ದಾರೆ.

 • Australian Cricketer David Warner Highly Doubtful Of Being Fully Fit For 3rd Test against India kvnAustralian Cricketer David Warner Highly Doubtful Of Being Fully Fit For 3rd Test against India kvn

  CricketJan 3, 2021, 8:22 AM IST

  ನಾನಿನ್ನೂ ಸಂಪೂರ್ಣ ಫಿಟ್‌ ಆಗಿಲ್ಲ: ಡೇವಿಡ್ ವಾರ್ನರ್‌ ಅಚ್ಚರಿಯ ಹೇಳಿಕೆ

  ಡೇವಿಡ್‌ ವಾರ್ನರ್ ಭಾರತ ವಿರುದ್ದದ ಎರಡನೇ ಏಕದಿನ ಪಂದ್ಯದ ವೇಳೆ ಗಾಯಕ್ಕೆ ತುತ್ತಾಗಿದ್ದರು. ಇದಾದ ಬಳಿಕ ಆಸೀಸ್‌ ಎಡಗೈ ಆರಂಭಿಕ ಬ್ಯಾಟ್ಸ್‌ಮನ್‌ ಟಿ20 ಸರಣಿ ಹಾಗೂ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಿಂದ ಹೊರಗುಳಿದಿದ್ದರು.

 • Former Australian Cricketer Brad Hogg picks his Test XI of the Decade kvnFormer Australian Cricketer Brad Hogg picks his Test XI of the Decade kvn

  CricketJan 2, 2021, 5:07 PM IST

  ದಶಕದ ಟೆಸ್ಟ್‌ ತಂಡ ಪ್ರಕಟಿಸಿದ ಬ್ರಾಡ್ ಹಾಗ್; ಏಕೈಕ ಭಾರತೀಯನಿಗೆ ಸ್ಥಾನ..!

  ಮೆಲ್ಬರ್ನ್‌: ಕೆಲದಿನಗಳ ಹಿಂದಷ್ಟೇ ಐಸಿಸಿ ದಶಕದ ತಂಡ ಪ್ರಕಟಿಸಿದ ಬೆನ್ನಲ್ಲೇ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಬ್ರಾಡ್‌ ಹಾಗ್ ತಮ್ಮ ನೆಚ್ಚಿನ ದಶಕದ ಟೆಸ್ಟ್‌ ತಂಡವನ್ನು ಪ್ರಕಟಿಸಿದ್ದಾರೆ. 2011ರಿಂದ 2020ರ ಅವಧಿಯಲ್ಲಿನ ತಂಡ ಇದಾಗಿದ್ದು, ಅಚ್ಚರಿಯೆಂಬಂತೆ ಕೇವಲ ಒಬ್ಬ ಭಾರತೀಯ ಬ್ಯಾಟ್ಸ್‌ಮನ್ ಮಾತ್ರ ಬ್ರಾಡ್‌ ದಶಕದ ಟೆಸ್ಟ್‌ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
  ಬ್ರಾಡ್ ದಶಕದ ತಂಡಕ್ಕೆ ನ್ಯೂಜಿಲೆಂಡ್‌ ನಾಯಕ ಕೇನ್‌ ವಿಲಿಯಮ್ಸನ್‌ಗೆ ನಾಯಕತ್ವ ಪಟ್ಟ ಕಟ್ಟಿದ್ದಾರೆ. ಬ್ರಾಡ್ ತಂಡದಲ್ಲಿ 3 ದಕ್ಷಿಣ ಆಫ್ರಿಕಾ, 3 ಆಸ್ಟ್ರೇಲಿಯಾ, ಇಬ್ಬರು ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್, ಪಾಕಿಸ್ತಾನ ಹಾಗೂ ಭಾರತ ತಂಡದ ಆಟಗಾರರಿಗೆ ಸ್ಥಾನ ನೀಡಿದ್ದಾರೆ. ಬ್ರಾಡ್ ತಂಡದಲ್ಲಿ ಯಾರೆಲ್ಲಾ ಸ್ಥಾನ ಪಡೆದಿದ್ದಾರೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ.
   

 • Australian Cricketer David Warner Sean Abbott ruled out of Boxing Day MCG Test against India kvnAustralian Cricketer David Warner Sean Abbott ruled out of Boxing Day MCG Test against India kvn

  CricketDec 23, 2020, 1:10 PM IST

  ಆಸ್ಟ್ರೇಲಿಯಾಗೆ ಮತ್ತೆ ಶಾಕ್; ಬಾಕ್ಸಿಂಗ್ ಡೇ ಟೆಸ್ಟ್‌ ಪಂದ್ಯದಿಂದಲೂ ವಾರ್ನರ್ ಔಟ್..!

  ಅಡಿಲೇಡ್‌ನಲ್ಲಿ ನಡೆದ ಪಿಂಕ್‌ ಬಾಲ್ ಟೆಸ್ಟ್‌ ಪಂದ್ಯದಿಂದಲೂ ಈ ಇಬ್ಬರು ಆಟಗಾರರು ಹೊರಗುಳಿದಿದ್ದರು. ಇದೀಗ ಮೆಲ್ಬರ್ನ್ ಕ್ರಿಕೆಟ್‌ ಮೈದಾನದಲ್ಲಿ ನಡೆಯಲಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲೂ ವಾರ್ನರ್ ಮತ್ತು ಅಬೋಟ್ ಪಾಲ್ಗೊಳ್ಳುತ್ತಿಲ್ಲ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಖಚಿತಪಡಿಸಿದೆ.

 • Australian Cricketer David Warner ruled out of the first Test against India kvnAustralian Cricketer David Warner ruled out of the first Test against India kvn

  CricketDec 9, 2020, 11:36 AM IST

  ಇಂಡೋ-ಆಸೀಸ್‌ ಡೇ ಅಂಡ್ ನೈಟ್‌ ಟೆಸ್ಟ್‌ ಪಂದ್ಯದಿಂದ ಸ್ಟಾರ್ ಬ್ಯಾಟ್ಸ್‌ಮನ್‌ ಔಟ್..!

  ಎರಡನೇ ಏಕದಿನ ಪಂದ್ಯದ ವೇಳೆ ಕ್ಷೇತ್ರರಕ್ಷಣೆ ಮಾಡುವಾಗ ವಾರ್ನರ್ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ಡೇವಿಡ್ ವಾರ್ನರ್ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯಾ ತಂಡ ಕೊನೆಯ ಏಕದಿನ ಪಂದ್ಯ ಹಾಗೂ 2 ಪಂದ್ಯಗಳಲ್ಲಿ ಸೋಲಿನ ಕಹಿಯುಂಡಿತ್ತು. ಆಸ್ಟ್ರೇಲಿಯಾ ಏಕದಿನ ಸರಣಿ ಗೆಲುವಿನಲ್ಲಿ ಡೇವಿಡ್ ವಾರ್ನರ್ ಮಹತ್ವದ ಪಾತ್ರ ನಿಭಾಯಿಸಿದ್ದರು.
   

 • Australian Cricketer Cameron Green Frustrates India A With Century kvnAustralian Cricketer Cameron Green Frustrates India A With Century kvn

  CricketDec 8, 2020, 7:41 AM IST

  ಅಭ್ಯಾಸ ಪಂದ್ಯ: ಭಾರತವನ್ನು ಕಾಡಿದ ಗ್ರೀನ್‌!

  9 ವಿಕೆಟ್‌ ನಷ್ಟಕ್ಕೆ 247 ರನ್‌ ಗಳಿಸಿ ಭಾರತ ‘ಎ’ ಮೊದಲ ಇನ್ನಿಂಗ್ಸ್ ಡಿಕ್ಲೇರ್‌ ಮಾಡಿಕೊಂಡಿತು. ನಾಯಕ ಅಜಿಂಕ್ಯ ರಹಾನೆ ಅಜೇಯ 117 ರನ್‌ ಗಳಿಸಿದರು. ಆಸ್ಪ್ರೇಲಿಯಾ ‘ಎ’ 98 ರನ್‌ಗೆ 5 ವಿಕೆಟ್‌ ಕಳೆದುಕೊಂಡಿತ್ತು.

 • Young Shreyas Iyer has got the potential to lead India one day Says Australian Cricketer Alex Carey kvnYoung Shreyas Iyer has got the potential to lead India one day Says Australian Cricketer Alex Carey kvn

  CricketNov 17, 2020, 6:04 PM IST

  ಈತ ಮುಂದೊಂದು ದಿನ ಟೀಂ ಇಂಡಿಯಾ ನಾಯಕನಾಗಬಲ್ಲ: ಅಲೆಕ್ಸ್‌ ಕ್ಯಾರಿ

  ಸಿಡ್ನಿ: ವಿರಾಟ್ ಕೊಹ್ಲಿ ನೇತೃತ್ವದ ಭಾರತ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ವಿರುದ್ಧ ಸುದೀರ್ಘ ಸರಣಿಯಾಡಲು ಕಾಂಗರೂ ನಾಡಿಗೆ ಬಂದಿಳಿದಿದ್ದು, ಸದ್ಯ ಕ್ವಾರಂಟೈನ್‌ನಲ್ಲಿದೆ. ಪ್ರತಿಭಾನ್ವಿತ ಆಟಗಾರರಿಂದ ತುಂಬಿ ತುಳುಕುತ್ತಿರುವ ಟೀಂ ಇಂಡಿಯಾ ಮತ್ತೊಮ್ಮೆ ಆಸೀಸ್ ನೆಲದಲ್ಲಿ ಭರ್ಜರಿ ಗೆಲುವು ಸಾಧಿಸುವ ಕನಸು ಕಾಣುತ್ತಿದೆ.
  ಹೀಗಿರುವಾಗಲೇ ಆಸ್ಟ್ರೇಲಿಯಾ ತಂಡದ ವಿಕೆಟ್‌ ಕೀಪರ್ ಬ್ಯಾಟ್ಸ್‌ಮನ್ ಅಲೆಕ್ಸ್ ಕ್ಯಾರಿ ಟೀಂ ಇಂಡಿಯಾ ಯುವ ಆಟಗಾರನೊಬ್ಬನ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದು, ಮುಂದೊಂದು ದಿನ ಈತ ಭಾರತ ಕ್ರಿಕೆಟ್ ತಂಡವನ್ನು ಮುನ್ನಡೆಸುವ ಕ್ಷಮತೆ ಹೊಂದಿದ್ದಾರೆ ಎಂದು ಕ್ಯಾರಿ ಅಭಿಪ್ರಾಯಪಟ್ಟಿದ್ದಾರೆ. ಅಷ್ಟಕ್ಕೂ ಯಾರು ಆ ಆಟಗಾರ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ
   

 • Former Australian Cricketer Brad Hogg Predicts these 3 Team can win IPL 2020 TrophyFormer Australian Cricketer Brad Hogg Predicts these 3 Team can win IPL 2020 Trophy

  IPLSep 2, 2020, 6:22 PM IST

  IPL 2020 ಈ ಮೂರು ತಂಡಗಳು ಸಲ ಕಪ್ ಕಪ್‌ ಗೆಲ್ಲಬಹುದು ಎಂದ ಬ್ರಾಡ್‌ ಹಾಗ್..!

  ಮಿಲಿಯನ್ ಡಾಲರ್ ಟೂರ್ನಿ ಎನಿಸಿಕೊಂಡಿರುವ ಐಪಿಎಲ್ ಟೂರ್ನಿಗೆ ಈ ಬಾರಿ ಯುನೈಟೆಡ್ ಅರಬ್ ಎಮಿರೇಟ್ಸ್‌ ಆತಿಥ್ಯ ವಹಿಸಿದ್ದು, ಸೆಪ್ಟೆಂಬರ್ 19ರಿಂದ ಆರಂಭವಾಗಿ ನವೆಂಬರ್ 10ರ ವರೆಗೆ ನಡೆಯಲಿದೆ. ಭಾರತದಲ್ಲಿ ನಡೆಯಬೇಕಿದ್ದ 2020ನೇ ಸಾಲಿನ ಐಪಿಎಲ್‌ ಟೂರ್ನಿ ಕೊರೋನಾ ಭೀತಿಯಿಂದಾಗಿ ಯುಎಇಗೆ ಸ್ಥಳಾಂತರವಾಗಿದೆ. ಈಗಾಗಲೇ 8 ತಂಡಗಳು ದುಬೈಗೆ ಬಂದಿಳಿದಿವೆ.