Anant Nag

(Search results - 27)
• undefined

SandalwoodJul 30, 2021, 12:43 PM IST

ಬಸವರಾಜ ಬೊಮ್ಮಾಯಿ ಸಿಎಂ ಆಗುತ್ತಾರೆ ಎಂದು ಮೊದಲೇ ತಿಳಿಸಿದ್ದ ಅನಂತ್‌ ನಾಗ್‌

ಅನಂತ್‌ ನಾಗ್‌ ಕಲಾವಿದರಷ್ಟೇ ಅಲ್ಲ; ರಾಜ್ಯ, ರಾಷ್ಟ್ರೀಯ, ಅಂತಾರಾಷ್ಟ್ರೀಯ ರಾಜಕಾರಣದ ಕುರಿತು ಮಾಹಿತಿ ಇರುವ ಮುತ್ಸದ್ಧಿ. ಸಿನಿಮಾದಿಂದ ಹಿಡಿದು ಭಗವದ್ಗೀತೆವರೆಗೆ, ಚಿಕ್ಕ ವಯಸ್ಸಿನಲ್ಲಿ ಕಲಿತ ಶ್ಲೋಕದಿಂದ ಹಿಡಿದು ನಿನ್ನೆ ಮೊನ್ನೆ ನೋಡಿದ ವೆಬ್‌ ಸೀರೀಸ್‌ ಕುರಿತು ಕೂಡ ಕಾಡುವ ಹಾಗೆ ಮಾತನಾಡುತ್ತಾರೆ. ಅವರು ಮಾತು ನಿಲ್ಲಿಸಿದಾಗಿನ ಒಂದರೆ ಕ್ಷಣ ಮೌನದಲ್ಲೂ ಅವರು ಹೇಳಲು ಬಾಕಿ ಉಳಿದಿದ್ದನ್ನು ಹೇಳಿರುತ್ತಾರೆ.

• undefined

SandalwoodJul 14, 2021, 12:26 PM IST

16 ತಿಂಗಳ ನಂತರ ನಟನೆಗೆ ಮರಳಿದ ಅನಂತ್ ನಾಗ್; 'ದೃಶ್ಯ 2' ಚಿತ್ರೀಕರಣದಲ್ಲಿ ಭಾಗಿ!

16 ತಿಂಗಳ ನಂತರ ಚಿತ್ರೀಕರಣದಲ್ಲಿ ಭಾಗಿಯಾಗಿರುವ ಅನಂತ್ ನಾಗ್ ಚಿತ್ರರಂಗಕ್ಕೆ ಹೊಸ ದಾರಿಯೊಂದನ್ನು ಸೃಷ್ಟಿ ಮಾಡುವ ಕುರಿತ ಮಾತನ್ನಾಡಿದ್ದಾರೆ. ಹೊಸದೊಂದು ದೀಪ ಚಿತ್ರರಂಗಕ್ಕೆ ದಾರಿ ತೋರಿಸಲಿ ಎಂಬ ಆಶಯ ವ್ಯಕ್ತಪಡಿಸಿದ್ದಾರೆ.

Anantnag

SandalwoodJul 13, 2021, 11:03 PM IST

'ಅದ್ಭುತ ನಟ ಅನಂತ್‌ ನಾಗ್‌ಗೆ ಪದ್ಮ ಪುರಸ್ಕಾರ ದೊರೆಯಲಿ, ಅಭಿಯಾನಕ್ಕೆ ಬೆಂಬಲವಿರಲಿ'

ಹಿರಿಯ ಕಲಾವಿದ, ನಟ ಅನಂತ್ ನಾಗ್ ಅವರಿಗೆ ಪದ್ಮ ಪುರಸ್ಕಾರಕ್ಕಾಗಿ ಅಭಿಯಾನ ಶುರುವಾಗಿದೆ. ಪ್ರಧಾನಿ ಮೋದಿ ಅವರು ನಾಗರಿಕರೆ ಹೆಸರು ಸೂಚಿಸಬಹುದು ಎಂದು ಕೇಳಿಕೊಂಡಿದ್ದರು.

Anantnag

InterviewsJun 6, 2021, 1:25 PM IST

ಸಾವಿಗೂ ಜನನಕ್ಕೂ ನಿರ್ಲಿಪ್ತರಾಗಿರುವ ಕಾಲ: ಅನಂತ್ ನಾಗ್

ಸಂವೇದನೆ ಕಿತ್ತುಕೊಂಡಿರುವ ಕಾಲ, ಸ್ಕ್ರಿಪ್ಟ್ ಗಳಲ್ಲಿರುವ ಪಾಶ್ಚಾತ್ಯ ಪ್ರಭಾವ, ಹೊಸ ತಲೆಮಾರಿನ ಸಿನಿಮಾ ಬರಹಗಾರರ ದೃಷ್ಟಿಕೋನ, ಉಡುಗಿಹೋಗಿರುವ ಹುಮ್ಮಸ್ಸು, ನಟನಿಗಿರಬೇಕಾದ ತಲ್ಲೀನತೆ ಎಲ್ಲದರ ಕುರಿತು ಅನಂತ್ ನಾಗ್ ಮಾಡಿದ್ದಾರೆ. ಏಕಾಗ್ರತೆಯಿಂದ ಓದಿದರೆ ಅವರು ಇಲ್ಲಿ ಆಡಿರುವ ಮಾತುಗಳಲ್ಲಿ ಮೌನವೂ ಕೇಳಿಸುತ್ತದೆ.

Rajan

SandalwoodOct 13, 2020, 8:39 AM IST

ನನ್ನ ಹಾಡು ನನ್ನದು ನನ್ನ ರಾಗ ನನ್ನದು; ಅನಂತ್ ನಾಗ್,ಜಯಂತ ಕಾಯ್ಕಿಣಿ ಮಾತುಗಳು

ಮೂರು ತಲೆಮಾರಿನ ಚಿತ್ರಪ್ರೇಮಿಗಳ ನಿಟ್ಟುಸಿರಿಗೆ ರಾ ಸಂಯೋಜನೆ ಮಾಡಿದ ರಾಜನ್‌-ನಾಗೇಂದ್ರ ಜೋಡಿಯ ಎರಡನೆಯ ಜೀವವೂ ಕಣ್ಮರೆಯಾಗಿದೆ. ಅವರಿಗೆ ಕನ್ನಡ ಮೂವರು ಪ್ರತಿಭಾವಂತರು ನುಡಿನಮನ ಸಲ್ಲಿಸಿದ್ದಾರೆ.

Anant Nag

stateSep 27, 2020, 7:56 AM IST

'ಚೀನಾ ವಿರುದ್ಧ ಇಡೀ ಜಗತ್ತು ಏನೂ ಮಾಡದೆ ಸುಮ್ಮನಿದೆ'

ಕೊರೋನಾ ಎನ್ನುವ ಮಹಾಮಾರಿಯನ್ನು ವಿಶ್ವಕ್ಕೆ ಹಂಚಿದ ಚೀನಾದ ವಿರುದ್ಧ ನಟ ಅನಂತ್ ನಾಗ್ ಕಿಡಿ ಕಾರಿದ್ದಾರೆ. ಚೀನಾ ವಿರುದ್ಧ ವಿಶ್ವವೇ ಸುಮ್ಮನಾಗಿದೆ ಎಂದು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

Anant Nag spb

EntertainmentSep 26, 2020, 1:12 PM IST

ದೇವರು ನಮ್ಮೆಲ್ಲರ ಪ್ರಾರ್ಥನೆಗಳನ್ನು ವ್ಯರ್ಥ ಮಾಡಿದ: ಅನಂತ್ ನಾಗ್

ನನ್ನ ಜೀವನದಲ್ಲಿ ಅವರ ಹಾಡುಗಾರಿಕೆ ಎಷ್ಟು ಹಾಸುಹೊಕ್ಕಾಗಿದೆ ಎಂದರೆ ನಾನು ಅವರ ಬಗ್ಗೆ ಮಾತನಾಡದೇ ಇರಲಾರೆ. ನನ್ನ ಮೊದಲ ಮೇನ್ ಸ್ಟ್ರೀಮ್ ಸಿನಿಮಾ ‘ದೇವರ ಕಣ್ಣು’. ಆ ಚಿತ್ರಕ್ಕೆ ನಾನು ಆಯ್ಕೆಯಾಗುವಾಗಲೇ ಆ ಸಿನಿಮಾದ ಹಾಡುಗಳು ರೆಕಾರ್ಡ್ ಆಗಿದ್ದವು. ಅದಕ್ಕೂ ಮೊದಲು ನಾನು ಜಿವಿ ಅಯ್ಯರ್ ಅವರ ಹಂಸಗೀತೆ ಚಿತ್ರದಲ್ಲಿ ನಟಿಸಿದ್ದೆ. ಆ ಸಿನಿಮಾದಲ್ಲಿ ಇದ್ದಿದ್ದೇ ಹಾಡುಗಳು. ಅದೂ ಶಾಸ್ತ್ರೀಯ ಸಂಗೀತ. ಹಾಡಿದವರು ಬಾಲಮುರಳೀಕೃಷ್ಣ. ರಂಗಭೂಮಿ ನಂಟಿನಿಂದ, ಈ ಸಿನಿಮಾದಿಂದ ಗಾಯನ ಕ್ಷೇತ್ರದಲ್ಲಿ ನನಗೂ ಅನುಭವ ಇತ್ತು. ಈ ಸಂದಭರ್ದಲ್ಲಿ ‘ದೇವರ ಕಣ್ಣು’ ಚಿತ್ರದ ಹಾಡು ಕೇಳಿದೆ. ನಿನ್ನ ನೀನು ಮರೆತರೇನು ಎಂಬ ಸೆಮಿ ಕ್ಲಾಸಿಕಲ್ ಹಾಡು. ಅದರಲ್ಲೂ ಒಂದು ಆಲಾಪನೆ ಬರುತ್ತದೆ. ಆ ಹಾಡನ್ನು ಎಷ್ಟು ಸೊಗಸಾಗಿ ಹಾಡಿದ್ದರು ಎಂದರೆ ಇವತ್ತಿಗೂ ರೇಡಿಯೋ ಹಾಕಿದರೆ ಆ ಹಾಡು ದಿನಕ್ಕೊಮ್ಮೆಯಾದರೂ ಪ್ರಸಾರವಾಗುತ್ತದೆ. ಆ ಸಿನಿಮಾ ಗೆದ್ದಿತು. ಅವರು ಹಾಡಿದ್ದ ಆ ಹಾಡು ಅದಕ್ಕಿಂತ ದೊಡ್ಡ ಸಕ್ಸೆಸ್ ಆಯಿತು. ಹಾಗೆ ನನಗೆ ಸಿಕ್ಕವರು ಎಸ್ಪಿ ಬಾಲಸುಬ್ರಹ್ಮಣ್ಯಂ ಎಂದು ಕನ್ನಡದ ಹಿರಿಯ ನಟ ಅನಂತ್‌ ನಾಗ್‌ ಅವರು ಎಸ್‌ಪಿಬಿ ಅವರ ನೆನಪುಗಳನ್ನ ಮೆಲುಕು ಹಾಕಿದ್ದಾರೆ.

ಕನ್ನಡ ಚಿತ್ರರಂಗದ ಪ್ರಮುಖ ನಾಯಕ ನಟರಲ್ಲೊಬ್ಬರಾಗಿ ಮತ್ತು ಬಹುಬೇಡಿಕೆಯ ಪೋಷಕ ನಟರಾಗಿ ಅಂದಿನಿಂದ ಇಂದಿನವರೆಗೂ  ಮಿಂಚುತ್ತಾ  ತಮ್ಮ ಸಹಜ ನಟನೆಯಿಂದ ಇಡೀ ಭಾರತೀಯ ಚಿತ್ರರಂಗಕ್ಕೆ ಪರಿಚಿತರಾಗಿರುವ ಸಹಜ ಸುಂದರ ಅನಂತ್ ನಾಗ್ ಅವರಿಗೆ ಜನ್ಮ ದಿನದ ಶುಭಾಶಯಗಳು .

SandalwoodSep 4, 2020, 5:31 PM IST

ಅನಂತ್ ನಾಗರಕಟ್ಟೆ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು!

ಕನ್ನಡ ಚಿತ್ರರಂಗದ ಪ್ರಮುಖ ನಾಯಕ ನಟರಲ್ಲೊಬ್ಬರಾಗಿ ಮತ್ತು ಬಹುಬೇಡಿಕೆಯ ಪೋಷಕ ನಟರಾಗಿ ಅಂದಿನಿಂದ ಇಂದಿನವರೆಗೂ  ಮಿಂಚುತ್ತಾ  ತಮ್ಮ ಸಹಜ ನಟನೆಯಿಂದ ಇಡೀ ಭಾರತೀಯ ಚಿತ್ರರಂಗಕ್ಕೆ ಪರಿಚಿತರಾಗಿರುವ ಸಹಜ ಸುಂದರ ಅನಂತ್ ನಾಗ್ ಅವರಿಗೆ ಜನ್ಮ ದಿನದ ಶುಭಾಶಯಗಳು .

SN m s sathyu Anant nag

InterviewsJul 10, 2020, 8:40 AM IST

ನನ್ನ ಗುರು ನನ್ನ ಗೈಡ್‌ ನನ್ನ ಸತ್ಯು: ಅನಂತ್‌ನಾಗ್‌

ನಮ್ಮೊಡನಿದ್ದೂ ನಮ್ಮಂತಾಗದ ಧೀಮಂತ ನಿರ್ದೇಶಕ ಎಂ ಎಸ್ ಸತ್ಯು ಅವರಿಗೆ 90 ತುಂಬಿದ ಸಂದರ್ಭದಲ್ಲಿ ಅವರ ಜೊತೆ ಕಳೆದ ದಿನಗಳ ನೆನಪುಗಳನ್ನು ಅನಂತನಾಗ್ ಹಂಚಿಕೊಂಡಿದ್ದಾರೆ.

• Anant Nag

SandalwoodApr 10, 2020, 9:53 AM IST

ಲಾಕ್‌ಡೌನ್ ಎದುರಿಸೋದು ಹೇಗೆ? ಅನಂತ್ ನಾಗ್ ಸ್ಪೂರ್ತಿ ನೀಡುವ ಸಲಹೆಗಳು!

ಕವಿದಿರುವ ವಿಷಾದ, ಮನೆಯ ಒಳಗೇ ಕೂತವರ ಆತಂಕ, ನಾಳೆಯ ಚಿಂತೆ, ಇಂದಿನ ಭವಭಾರದ ನಡುವೆ ಸಂವೇದನಾಶೀಲ ನಟ ಅನಂತನಾಗ್‌ ತಮ್ಮ ಮನಸ್ಸು ತೆರೆದಿಟ್ಟಿದ್ದಾರೆ. ಶ್ರದ್ಧೆ, ಧೈರ್ಯ, ಹುಮ್ಮಸ್ಸು, ಕ್ರಿಯಾಶೀಲತೆಯ ಸಮ್ಮಿಶ್ರದಂತಿರುವ ಅವರ ಮಾತುಗಳು ಈ ಹೊತ್ತಿಗೆ ಹಚ್ಚಿಟ್ಟಸ್ಪೂರ್ತಿದೀಪ.

• ananth nag 3
Video Icon

SandalwoodMar 5, 2020, 12:41 AM IST

ಹೊನ್ನಾವರದ ಸ್ಕಿಟ್‌ನಿಂದ ಕನ್ನಡದ ಹಿರಿತೆರೆವರೆಗೆ ಅನಂತ ಪಯಣ..ಅವರದ್ದೇ ಬಾಯಲ್ಲಿ!

ಚಂದನವನದ ಚೆಲುವ ಅನಂತ್ ನಾಗ ಯಾರಿಗೆ ತಾನೆ ಗೊತ್ತಿಲ್ಲ. ತಮ್ಮ ಸಿನಿಮಾ ಜರ್ನಿಯ ವಿಚಾರಗಳನ್ನು, ಮುಂಬೈ ಜೀವನದ ಕತೆಯನ್ನು ಸವಿವರವಾಗಿ ಹಂಚಿಕೊಂಡಿದ್ದಾರೆ. ನಾಯಕನಟನಾಗಿ ಮೆರೆದು ಇಂದಿಗೂ ಚಿತ್ರಕ್ಕೆ ಒಂದು ತೂಕ ತಂದುಕೊಡುವ ನಟನ ಜೀವನದ ಒಂದಿಷ್ಟು ಪುಟಗಳು ಇಲ್ಲಿವೆ.

• Shivarajkumar

EntertainmentJan 27, 2020, 9:15 PM IST

ಕಂಗನಾಗೆ ಪದ್ಮಶ್ರೀ, ಶಿವಣ್ಣಗೆ-ಅನಂತ್‌ ನಾಗ್‌ಗೆ ಯಾಕಿಲ್ಲ? ಕೇಳಿದ್ದು ತಪ್ಪೇನಲ್ಲ ಅಲ್ಲವೇ!

ಶಿವರಾಜ್ ಕುಮಾರ್ ಅಭಿಮಾನಿಗಳು ಕೇಂದ್ರ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಪದ್ಮಶ್ರೀ ಪ್ರಶಸ್ತಿ ಅವರ ಅಸಮಾಧಾನಕ್ಕೆ ಮೂಲ ಕಾರಣ

• ಕನ್ನಡ ಚಿತ್ರರಂಗಕ್ಕೆ ಬಂದಿದ್ದು 1973 ರಲ್ಲಿ ನಟರಾಜ್ ಅರಸ್ ಅವರ ಸಂಕಲ್ಪ ಚಿತ್ರದಿಂದ. ಅಲ್ಲಿಂದ ಮುಂದೆ ಅವರನ್ನು ಅವರನ್ನು ಕನ್ನಡ ಚಿತ್ರರಂಗ ಬರಸೆಳೆದು ಅಪ್ಪಿಕೊಂಡಿತು.

ENTERTAINMENTSep 11, 2019, 9:47 AM IST

ರಿಷಬ್‌ ಶೆಟ್ಟಿ ಚಿತ್ರಕ್ಕೆ ಅನಂತ್‌ನಾಗ್‌ ಹೀರೋ, ನಟಿ ಬೇಕಂತೆ!

ಇತ್ತೀಚೆಗೆ 71 ವರ್ಷಗಳನ್ನು ಪೂರೈಸಿದ ಸ್ಯಾಂಡಲ್‌ವುಡ್‌ನ ಪ್ರತಿಭಾನ್ವಿತ ನಟ ಅನಂತ್ ನಾಗ್ ಅವರು ಚಿತ್ರವೊಂದರಲ್ಲಿ ನಾಯಕ ನಟನಾಗಿ ನಟಿಸಲಿದ್ದಾರೆ. ವಯಸ್ಸು 70 ಆದರೇನು? ಮಾಘಿದ ಕಲಾವಿದನಿಗೆ ನಟನೆಯೇ ಉಸಿರು. ಈ ಚಿತ್ರದ ವಿಶೇಷತೆ ಏನು? ಕಥೆ ಹೇಗಿರಲಿದೆ?

• Anant Nag
Video Icon

BUSINESSSep 5, 2019, 9:29 PM IST

ಆಹಾರ ಸಂಸ್ಥೆಗೆ ಅನಂತ್ ನಾಗ್ ರಾಯಭಾರಿಯಾದ ಕತೆ!

ದೇಶಿ ತಿನಿಸುಗಳಿಂದ ಜನಪ್ರಿಯವಾಗಿರುವ ‘ಓಗರ’ ಸಂಸ್ಥೆಗೆ ಹಿರಿಯ ನಟ, ಅನಂತ್ ನಾಗ್ ರಾಯಭಾರಿ. ಸಂಸ್ಥೆ ಎರಡು ವರ್ಷ ಪೂರೈಸಿದ ವೇಳೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅನಂತ್ ನಾಗ್ ಅನುಭವ ಹಂಚಿಕೊಂಡರು. ಸದ್ಯದಲ್ಲೇ ಕೆಂಗೇರಿ ಬಳಿ ಸಂಸ್ಥೆಯ ರೆಸ್ಟೊರೆಂಟ್ ಸಹ ತಲೆ ಎತ್ತಲಿದೆ.

• Anant Nag
Video Icon

NewsSep 5, 2019, 8:53 PM IST

ಅನಂತ್ ನಾಗ್ ದನಿಯಲ್ಲಿ.. ಇದು ಎಂಥಾ ಲೋಕವಯ್ಯಾ....!

ದೇಸಿಯ ತಿನಿಸುಗಳಿಂದ ಜನಪ್ರಿಯವಾಗಿರುವ ‘ಓಗರ’ ಸಂಸ್ಥೆ ಇದೀಗ ಹೊಸ ಹೊಸ ಸಾಧನೆಯ ಹೆಜ್ಜೆಗಳನ್ನು ಇಡುತ್ತಿದೆ. ಹಿರಿಯ ನಟ ಅನಂತ್ ನಾಗ್ ಈ ಸಂಸ್ಥೆಯ ರಾಯಭಾರಿಯಾಗಿದ್ದಾರೆ. ಸಂಸ್ಥೆ ಎರಡು ವರ್ಷ ಪೂರೈಸಿದ ಸಂದರ್ಭದಲ್ಲಿ ಹಾಜರಿದ್ದ ಅನಂತ್ ನಾಗ್  ತಮ್ಮದೇ ದನಿಯಲ್ಲಿ ‘ಇದು ಎಂಥಾ ಲೋಕವಯ್ಯಾ’ ಗೀತೆಯನ್ನು ಹಾಡಿ  ರಂಜಿಸಿದರು.