Ahmedabad Test

(Search results - 46)

Ben Stokes

CricketMar 10, 2021, 9:06 AM IST

ಟೆಸ್ಟ್‌ ಸರಣಿ ಸೋಲಿಗೆ ಕುಂಟು ನೆಪ ಹೇಳಿದ ಬೆನ್ ಸ್ಟೋಕ್ಸ್‌

ಭಾರತ ವಿರುದ್ಧ ಅಂತಿಮ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್‌ ಇನ್ನಿಂಗ್ಸ್‌ ಹಾಗೂ 25 ರನ್‌ಗಳ ಅಂತರದಿಂದ ಸೋಲುಂಡಿತ್ತು. ಇದರೊಂದಿಗೆ ಭಾರತ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ 1-3 ಅಂತರದಿಂದ ಸೋಲುಂಡಿತ್ತು.

Team India

CricketMar 6, 2021, 5:00 PM IST

ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೇರಿದ ಭಾರತ, ಜೈ ಹೋ ಎಂದ ಕ್ರಿಕೆಟ್‌ ಫ್ಯಾನ್ಸ್‌

ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ್ದ ಇಂಗ್ಲೆಂಡ್‌ ಮೊದಲ ಇನಿಂಗ್ಸ್‌ನಲ್ಲಿ 205 ರನ್‌ ಬಾರಿಸಿ ಸರ್ವಪತನ ಕಂಡಿತ್ತು. ಇದಕ್ಕುತ್ತರವಾಗಿ ಭಾರತ ರಿಷಭ್‌ ಪಂತ್‌ ಆಕರ್ಷಕ ಶತಕ ಹಾಗೂ ವಾಷಿಂಗ್ಟನ್ ಸುಂದರ್‌ ಅಜೇಯ 96 ರನ್‌ಗಳ ನೆರವಿನಿಂದ 365 ರನ್‌ ಕಲೆಹಾಕುವ ಮೂಲಕ ಮೊದಲ ಇನಿಂಗ್ಸ್‌ನಲ್ಲಿ 160 ರನ್‌ಗಳ ಮುನ್ನಡೆ ಸಾಧಿಸಿತ್ತು. ಭಾರೀ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್‌ ಆರಂಭಿಸಿದ ಇಂಗ್ಲೆಂಡ್‌ ಅಶ್ವಿನ್ ಹಾಗೂ ಅಕ್ಷರ್ ಪಟೇಲ್‌ ಮಾರಕ ದಾಳಿಗೆ ತತ್ತರಿಸಿ ಕೇವಲ 135 ರನ್‌ಗಳಿಗೆ ಆಲೌಟ್‌ ಆಗುವ ಮೂಲಕ ಇನಿಂಗ್ಸ್‌ ಸೋಲು ಕಂಡಿತು.

10-top10-stories

NewsMar 6, 2021, 4:57 PM IST

ಟೆಸ್ಟ್‌ ಫೈನಲ್‌ಗೆ ಕೊಹ್ಲಿ ಬಾಯ್ಸ್, ತೈಲ ಬೆಲೆ ಇಳಿಕೆಗೆ ಸೌದಿ ಟಿಪ್ಸ್; ಮಾ.6ರ ಟಾಪ್ 10 ಸುದ್ದಿ!

ಇಂಗ್ಲೆಂಡ್ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸಿದ ಟೀಂ ಇಂಡಿಯಾ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಲಗ್ಗೆ ಇಟ್ಟಿದೆ. ಲಸಿಕೆ ಸರ್ಟಿಫಿಕೇಟ್‌ನಲ್ಲಿ ಮೋದಿ ಫೋಟೋ ತೆಗೆಯಲು ಚುನಾವಣಾ ಆಯೋಗ ಸೂಚಿಸಿದೆ. ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಗೆ ಭಾರತಕ್ಕೆ ಸೌದಿ ಆರೇಬಿಯಾ ಸಲಹೆ ನೀಡಿದೆ.  ನಟಿ ಅನುಪಮಾ ವಿವಾಹ, ಐಪಿಎಲ್ ದಿನಾಂಕ ಘೋಷಣೆ ಸೇರಿದಂತೆ ಮಾರ್ಚ್ 6ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

Team India

CricketMar 6, 2021, 3:55 PM IST

ಟೀಂ ಇಂಡಿಯಾ ದಿಗ್ವಿಜಯ; ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೇರಿದ ಭಾರತ

160 ರನ್‌ಗಳ ಬೃಹತ್ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್‌ ಭಾರತೀಯ ಸ್ಪಿನ್ನರ್‌ಗಳ ಮುಂದೆ ರನ್‌ ಗಳಿಸಲು ತಡಬಡಾಯಿಸಿತು. ಇಂಗ್ಲೆಂಡ್‌ ಪರ ಜೋ ರೂಟ್‌(30) ಹಾಗೂ ಡೇನಿಯಲ್ ಲಾರೆನ್ಸ್ ಹೊರತುಪಡಿಸಿ ಉಳಿದ್ಯಾವ ಬ್ಯಾಟ್ಸ್‌ಮನ್‌ಗಳು 20 ರನ್‌ ಗಳಿಸಲು ಸಾಧ್ಯವಾಗಲಿಲ್ಲ. ಟೂರ್ನಿಯುದ್ಧಕ್ಕೂ ಇಂಗ್ಲೆಂಡ್‌ ಬ್ಯಾಟ್ಸ್‌ಮನ್‌ಗಳನ್ನು ಇನ್ನಿಲ್ಲದಂತೆ ಕಾಡಿದ ಅಕ್ಷರ್ ಪಟೇಲ್‌ ನಾಲ್ಕನೇ ಬಾರಿಗೆ ಈ ಸರಣಿಯಲ್ಲಿ 5+ ವಿಕೆಟ್ ಕಬಳಿಸಿದ ಸಾಧನೆ ಮಾಡಿದರು.

R Ashwin

CricketMar 6, 2021, 2:21 PM IST

ಅಹಮದಾಬಾದ್‌ ಟೆಸ್ಟ್: ಇನಿಂಗ್ಸ್‌ ಗೆಲುವಿನ ಹೊಸ್ತಿಲಲ್ಲಿ ಟೀಂ ಇಂಡಿಯಾ

ಭಾರತ ತಂಡವನ್ನು 365 ರನ್‌ಗಳಿಗೆ ಆಲೌಟ್ ಮಾಡುವ ಮೂಲಕ 160 ರನ್‌ಗಳ ಮೊದಲ ಇನಿಂಗ್ಸ್‌ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್‌ ಆರಂಭಿಸಿದ ಇಂಗ್ಲೆಂಡ್‌ಗೆ ಭಾರತೀಯ ಸ್ಪಿನ್ನರ್‌ಗಳು ಮತ್ತೊಮ್ಮೆ ಕಾಟಕೊಟ್ಟಿದ್ದಾರೆ.  ತಂಡದ ಮೊತ್ತ 20 ರನ್‌ ಗಳಾಗುವಷ್ಟರಲ್ಲಿ ಅಗ್ರ ಕ್ರಮಾಂದ ಮೂವರು ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್ ಸೇರಿದರು.

washington sundar axar patel

CricketMar 6, 2021, 11:21 AM IST

ಅಹಮದಾಬಾದ್‌ ಟೆಸ್ಟ್: ಸುಂದರ್ ಚೊಚ್ಚಲ ಶತಕದ ಕನಸು ಭಗ್ನ, ಭಾರತ ಆಲೌಟ್‌ @365

ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಗ್ಲೆಂಡ್‌ ವಿರುದ್ದದ ಕೊನೆಯ ಟೆಸ್ಟ್ ಪಂದ್ಯದಲ್ಲಿ ವಾಷಿಂಗ್ಟನ್ ಬ್ಯಾಟಿಂದ ಸುಂದರ ಶತಕ ಮೂಡಿಬರಬಹುದು ಎಂದು ಎಲ್ಲರೂ ಭಾವಿಸಿದ್ದರು. ಬೌಲಿಂಗ್‌ ಪಿಚ್‌ ಎನ್ನುವ ಟೀಕೆಯ ಹೊರತಾಗಿಯೂ ಪಂತ್ ಎರಡನೇ ದಿನದಾಟದಲ್ಲೇ ಸ್ಫೋಟಕ ಶತಕ ಬಾರಿಸಿದ್ದರು. ಇದೀಗ ಸುಂದರ್ ಕೂಡಾ ಟೆಸ್ಟ್ ಸೆಂಚುರಿ ಬಾರಿಸಲಿದ್ದಾರೆ ಎಂದೇ ಎಲ್ಲರೂ ಲೆಕ್ಕಾಚಾರ ಹಾಕಿದ್ದರು.

Rishabh Pant Sourav Ganguly

CricketMar 6, 2021, 10:01 AM IST

ರಿಷಭ್ ಪಂತ್‌ ಸಾರ್ವಕಾಲಿಕ ಶ್ರೇಷ್ಠ ಆಟಗಾರನಾಗುತ್ತಾರೆ: ಗಂಗೂಲಿ!

ಇಂಗ್ಲೆಂಡ್‌ ವಿರುದ್ಧ ಪಂತ್‌ ಶತಕ ಬಾರಿಸುತ್ತಿದ್ದಂತೆ ಟ್ವೀಟರ್‌ನಲ್ಲಿ ಖುಷಿ ವ್ಯಕ್ತಪಡಿಸಿದ ಗಂಗೂಲಿ, ‘ಒತ್ತಡದ ನಡುವೆ ಪಂತ್‌ ನಂಬಲಸಾಧ್ಯವಾದ ಆಟವಾಡಿದ್ದಾರೆ. ಅಂದಹಾಗೆ ಇದು ಮೊದಲೇನಲ್ಲ, ಕೊನೆ ಬಾರಿಯೂ ಅಲ್ಲ. ಮುಂಬರುವ ವರ್ಷಗಳಲ್ಲಿ ಅವರು ಎಲ್ಲಾ ಮಾದರಿಯಲ್ಲೂ ಸಾರ್ವಕಾಲಿಕ ಶ್ರೇಷ್ಠ ಆಟಗಾರನಾಗಿ ಬೆಳೆಯುತ್ತಾರೆ’ ಎಂದು ಬರೆದಿದ್ದಾರೆ.

Rishabh Pant

CricketMar 5, 2021, 5:23 PM IST

ಅಹಮದಾಬಾದ್‌ ಟೆಸ್ಟ್‌: ಪಂತ್ ಶತಕ, ಭಾರತಕ್ಕೆ 89 ರನ್‌ಗಳ ಮುನ್ನಡೆ

ಒಂದು ವಿಕೆಟ್‌ ಕಳೆದುಕೊಂಡು 24 ರನ್‌ಗಳೊಂದಿಗೆ ಎರಡನೇ ದಿನದಾಟ ಆರಂಭಿಸಿದ ಟೀಂ ಇಂಡಿಯಾ ಪರ ರೋಹಿತ್ ಶರ್ಮಾ(49) ಹೊರತುಪಡಿಸಿ ಉಳಿದೆಲ್ಲಾ ಅಗ್ರಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಬ್ಯಾಟಿಂಗ್ ವೈಫಲ್ಯ ಅನುಭವಿಸಿದೆ. ವಿರಾಟ್ ಕೊಹ್ಲಿ ಶೂನ್ಯ ಸುತ್ತಿದರೆ, ಪೂಜಾರ 17, ರಹಾನೆ 27 ರನ್‌ ಬಾರಿಸಿ ವಿಕೆಟ್‌ ಒಪ್ಪಿಸಿದರು.

• undefined

CricketMar 5, 2021, 4:32 PM IST

ಅಹಮದಾಬಾದ್‌ ಟೆಸ್ಟ್: ಆಕರ್ಷಕ ಶತಕ ಚಚ್ಚಿ ಅಬ್ಬರಿಸಿದ ರಿಷಭ್‌ ಪಂತ್‌

ರಿಷಭ್‌ ಪಂತ್‌ ಕಳೆದ ನಾಲ್ಕೈದು ಪಂದ್ಯಗಳಲ್ಲಿ ಶತಕ ಸಮೀಪ ಬಂದು ವಿಕೆಟ್‌ ಕೈಚೆಲ್ಲಿ ನಿರಾಸೆ ಅನುಭವಿಸಿದ್ದರು. ಸಿಡ್ನಿಯಲ್ಲಿ 97ರನ್‌ ಬಾರಿಸಿ ಪಂದ್ಯ ಡ್ರಾ ಸಾಧಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಪಂತ್, ಗಾಬಾದಲ್ಲಿ ಅಜೇಯ 89 ರನ್‌ ಬಾರಿಸಿ ತಂಡ ರೋಚಕ ಗೆಲುವು ಸಾಧಿಸಲು ಕಾರಣೀಕರ್ತರಾಗಿದ್ದರು. ಇನ್ನು ಚೆನ್ನೈನಲ್ಲಿ ಪಂತ್‌ ಕೆಚ್ಚೆದೆಯ 91 ರನ್‌ ಚಚ್ಚಿದ್ದರು. ಇದೀಗ ಕೊನೆಗೂ ಶತಕ ಪೂರೈಸುವಲ್ಲಿ ಸಫಲರಾಗಿದ್ದಾರೆ. ಈ ಮೂಲಕ ಪಂತ್‌ ವೃತ್ತಿಜೀವನದ ಮೂರನೇ ಶತಕ ಬಾರಿಸಿದ ಸಾಧನೆ ಮಾಡಿದ್ದಾರೆ.

Virat Kohli

CricketMar 5, 2021, 3:46 PM IST

ಶೂನ್ಯ ಸಂಪಾದನೆಯಲ್ಲಿ ಧೋನಿ ದಾಖಲೆ ಸರಿಗಟ್ಟಿದ ಕ್ಯಾಪ್ಟನ್‌ ಕೊಹ್ಲಿ..!

ಅಹಮದಾಬಾದ್‌: ಟೀಂ ಇಂಡಿಯಾ ನಾಯಕ ರನ್‌ ಗಳಿಕೆ ವಿಚಾರದಲ್ಲಿ ಹಲವಾರು ಅಪರೂಪದ ದಾಖಲೆಗಳನ್ನು ಬ್ರೇಕ್‌ ಮಾಡಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ಕಿಂಗ್ ಕೊಹ್ಲಿ ಶೂನ್ಯ ಸುತ್ತುವ ವಿಚಾರದಲ್ಲಿ ಬೇಡದ ದಾಖಲೆಗೆ ಭಾಜನರಾಗಿದ್ದಾರೆ.
ಹೌದು, ಇಂಗ್ಲೆಂಡ್‌ ವಿರುದ್ದ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ 4ನೇ ಟೆಸ್ಟ್ ಪಂದ್ಯದಲ್ಲಿ ಶೂನ್ಯ ಸಂಪಾದನೆ ಮಾಡುವ ವಿಚಾರದಲ್ಲಿ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ದಾಖಲೆಯನ್ನು ಸರಿಗಟ್ಟಿದ್ದಾರೆ. ಈ ಕುರಿತಾದ ಇಂಟ್ರೆಸ್ಟಿಂಗ್ ಅಂಕಿ-ಅಂಶಗಳು ಇಲ್ಲಿವೆ ನೋಡಿ.

james Anderson

CricketMar 5, 2021, 2:16 PM IST

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮತ್ತೊಂದು ಅಪರೂಪದ ದಾಖಲೆ ಬರೆದ ಜೇಮ್ಸ್‌ ಆ್ಯಂಡರ್‌ಸನ್‌..!

ಅಹಮದಾಬಾದ್‌: ಸ್ವಿಂಗ್ ಕಿಂಗ್ ಎಂದೇ ಪ್ರಸಿದ್ದಿಯಾಗಿರುವ ಜೇಮ್ಸ್‌ ಆ್ಯಂಡರ್‌ಸನ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮತ್ತೊಂದು ಮೈಲಿಗಲ್ಲನ್ನು ಸ್ಥಾಪಿಸಿದ್ದಾರೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ವಿರುದ್ದದ 4ನೇ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್‌ ಅನುಭವಿ ವೇಗಿ ಜೇಮ್ಸ್ ಆ್ಯಂಡರ್‌ಸನ್‌ 900 ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ.

ಇದರೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 900 ವಿಕೆಟ್‌ ಕಬಳಿಸಿದ ಮೂರನೇ ವೇಗಿ ಹಾಗೂ ಒಟ್ಟಾರೆ ಅರನೇ ಬೌಲರ್‌ ಎನ್ನುವ ಪ್ರತಿಷ್ಠಿತ ಗೌರವಕ್ಕೆ ಜೇಮ್ಸ್‌ ಆ್ಯಂಡರ್‌ಸನ್‌ ಪಾತ್ರರಾಗಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಸಾಧಕರ ಕಂಪ್ಲೀಟ್‌ ಡೀಟೈಲ್ಸ್ ಇಲ್ಲಿದೆ ನೋಡಿ

Rohit Sharma

CricketMar 5, 2021, 11:44 AM IST

ಅಹಮದಾಬಾದ್‌ ಟೆಸ್ಟ್: ಟೀಂ ಇಂಡಿಯಾಗೆ ರೋಹಿತ್ ಆಸರೆ

ಮೊದಲ ದಿನದಾಟದಂತ್ಯಕ್ಕೆ ಒಂದು ವಿಕೆಟ್ ಕಳೆದುಕೊಂಡು 24 ರನ್‌ ಗಳಿಸಿದ್ದ ಟೀಂ ಇಂಡಿಯಾ ಎರಡನೇ ದಿನದಾಟವನ್ನು ಸಾಕಷ್ಟು ಎಚ್ಚರಿಕೆಯಿಂದಲೇ ಆರಂಭಿಸಿತು. ಎರಡನೇ ವಿಕೆಟ್‌ಗೆ ಪೂಜಾರ ಹಾಗೂ ರೋಹಿತ್ ಜೋಡಿ 40 ರನ್‌ಗಳ ಜತೆಯಾಟವಾಡಿತು. ಆಟಕ್ಕೆ ಕುದುರಿಕೊಳ್ಳುವ ಮುನ್ಸೂಚನೆ ನೀಡಿದ್ದ ಪೂಜಾರ ಮತ್ತೊಮ್ಮೆ ಜಾಕ್‌ ಲೀಚ್‌ಗೆ ವಿಕೆಟ್‌ ಒಪ್ಪಿಸಿ ನಿರಾಸೆ ಅನುಭವಿಸಿದರು.

Team India

CricketMar 4, 2021, 5:10 PM IST

ಅಹಮದಾಬಾದ್‌ ಟೆಸ್ಟ್: ಭಾರತಕ್ಕೆ ಮೊದಲ ದಿನದ ಗೌರವ

ಟೀಂ ಇಂಡಿಯಾ ಸ್ಪಿನ್ನರ್‌ಗಳ ಕೈ ಚಳಕದ ಮುಂದೆ ಜೋ ರೂಟ್ ನೇತೃತ್ವದ ಇಂಗ್ಲೆಂಡ್‌ ತಂಡ ಮತ್ತೊಮ್ಮೆ ಮಂಡಿಯೂರಿದೆ. ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಇಂಗ್ಲೆಂಡ್‌ ತಂಡಕ್ಕೆ ಲೋಕಲ್‌ ಹೀರೋ ಅಕ್ಷರ್‌ ಪಟೇಲ್ ಶಾಕ್‌ ನೀಡಿದರು. ಇಂಗ್ಲೆಂಡ್ 30 ರನ್‌ ಗಳಿಸುವಷ್ಟರಲ್ಲಿ ಅಗ್ರ ಕ್ರಮಾಂಕದ ಮೂವರು ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್‌ ಸೇರಿದ್ದರು.

Team India

CricketMar 4, 2021, 3:59 PM IST

ಅಕ್ಷರ್ ಪಟೇಲ್‌ ಮ್ಯಾಜಿಕ್‌; ಇಂಗ್ಲೆಂಡ್ ಆಲೌಟ್‌ @205

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದ ಇಂಗ್ಲೆಂಡ್ ತಂಡಕ್ಕೆ ಅಕ್ಷರ್ ಪಟೇಲ್‌ ಆರಂಭದಲ್ಲೇ ಆಘಾತ ನೀಡಿದರು. ತಂಡದ ಮೊತ್ತ 30 ರನ್‌ಗಳಾಗುವಷ್ಟರಲ್ಲೇ ಅಗ್ರಕ್ರಮಾಂಕದ ಮೂವರು ಬ್ಯಾಟ್ಸ್‌ಮನ್‌ ಪೆವಿಲಿಯನ್ ಸೇರಿದ್ದರು. ಇದಾದ ಬಳಿಕ ಜಾನಿ ಬೇರ್‌ಸ್ಟೋವ್ ಹಾಗೂ ಬೆನ್ ಸ್ಟೋಕ್ಸ್‌ 48 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಬೇರ್‌ಸ್ಟೋವ್‌ 28 ರನ್‌ ಬಾರಿಸಿ ಸಿರಾಜ್‌ಗೆ ವಿಕೆಟ್‌ ಒಪ್ಪಿಸಿದರು.

অক্ষর প্যাটেল-

চেন্নাইতে দ্বিতীয় ও নিজের অভিষেক টেস্ট নিয়ছিলেন ৭ উইকেট,মোতেরাতে পিঙ্ক বল টেস্টে নিয়েছেনন ১১ উইকেট। শেষ টেস্টে অক্ষরের জায়গা একশো শতাংশ নিশ্চিৎ।

CricketMar 4, 2021, 11:47 AM IST

ಅಹಮದಾಬಾದ್ ಟೆಸ್ಟ್; ಮತ್ತೆ ಮಿಂಚಿದ ಅಕ್ಷರ್ ಪಟೇಲ್‌

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ ತಂಡಕ್ಕೆ ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್‌ ಮತ್ತೊಮ್ಮೆ ಶಾಕ್‌ ನೀಡಿದ್ದಾರೆ. ಇಂಗ್ಲೆಂಡ್ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಡೋಮಿನಿಕ್‌ ಸಿಬ್ಲಿ(2) ಹಾಗೂ ಜಾಕ್‌ ಕ್ರಾಲಿ(9) ಬಲಿ ಪಡೆಯುವಲ್ಲಿ ಅಕ್ಷರ್ ಪಟೇಲ್‌ ಯಶಸ್ವಿಯಾಗಿದ್ದಾರೆ. ಇನ್ನು ಇಂಗ್ಲೆಂಡ್‌ ನಾಯಕ ಜೋ ರೂಟ್‌ರನ್ನು ಬುಮ್ರಾ ಬದಲು ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದ ಮೊಹಮ್ಮದ್‌ ಸಿರಾಜ್‌ ಪೆವಿಲಿಯನ್ನಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.