Aero Show 2019  

(Search results - 15)
  • bengaluru fire

    INDIA26, Feb 2019, 7:31 AM IST

    ಏರ್ ಶೋ ಅಗ್ನಿ ಅವಘಡ : ಮೊದಲೇ ಸಿಕ್ಕಿತ್ತು ಎಚ್ಚರಿಕೆ

    ಬೆಂಗಳೂರಿನಲ್ಲಿ ನಡೆದ ಏರೋ ಇಂಡಿಯಾ ಶೋಗೆ ಪ್ರಮುಖ ಕಾರಣವಾಗಿದ್ದು, ನಿರ್ಲಕ್ಷ್ಯ ಎನ್ನಲಾಗಿದೆ. ಸುರಕ್ಷತಾ ಕ್ರಮಗಳನ್ನು ಅನುಸರಿಸದ ಬಗ್ಗೆ ಮೊದಲೇ ಎಚ್ಚರಿಕೆ ನೀಡಲಾಗಿತ್ತು. 

  • INDIA25, Feb 2019, 8:12 AM IST

    ಏರ್ ಶೋಗೆ ತೆರಳಿದ 50 ಮಂದಿ ಅಸ್ವಸ್ಥ

    ಬೆಂಗಳೂರಿನಲ್ಲಿ ಐದು ದಿನಗಳ ಕಾಲ ನಡೆದ ಪ್ರಸಿದ್ಧ ಏರ್ ಶೋ ಮುಕ್ತಾಯವಾಗಿದೆ. ಏರ್ ಶೋ ವೇಳೆ ಇದ್ದ ರಣಬಿಸಿಲಿನಿಂದ ಹೆಚ್ಚಿನ ಸಂಖ್ಯೆಯ ಜನರು ಅಸ್ವಸ್ಥರಾಗಿ ಚಿಕಿತ್ಸೆ ಪಡೆದಿದ್ದಾರೆ. 

  • INDIA24, Feb 2019, 9:50 AM IST

    60 ಕಾರು ರಕ್ಷಿಸಿದ ಯುವಕರ ಗುಂಪು : ಯಾರವರು..?

    ಏರೋ ಇಂಡಿಯಾ ಶೊ ವೇಳೆ ಅಗ್ನಿ ಅವಘಡ ಸಂಭವಿಸಿದ್ದು ಈ ವೇಳೆ  ಯುವಪಡೆಯೊಂದು ಪ್ರಾಣದ ಹಂಗು ತೊರೆದು ಬೆಂಕಿ ನಂದಿಸುವುದಕ್ಕೆ ಕೈ ಜೋಡಿಸಿತು. ಇದರ ಫಲವಾಗಿ ಸುಮಾರು 50 ರಿಂದ 60 ಕಾರುಗಳು ಬೆಂಕಿಯಿಂದ ಪಾರಾದವು.

  • Fire

    INDIA24, Feb 2019, 9:21 AM IST

    ಕಾರು ದುರಂತ : ಸಹಾಯವಾಣಿ ಆರಂಭ

    ಯಲಹಂಕದಲ್ಲಿ ನಡೆದ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ ವೇಳೆ ಸಂಭವಿಸಿದ ಅಗ್ನಿ ಅವಘಡದಲ್ಲಿ ವಾಹನಗಳು ಸುಟ್ಟು ಕರಕಲಾಗಿದ್ದು ವಾಹನ ಮಾಲೀಕರು ವಾಹನದ ನೋಂದಣಿ ಹಾಗೂ ಚಾಲನಾ ಪರವಾನಗಿ ಪಡೆಯಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಲು ಸಾರಿಗೆ ಇಲಾಖೆ ಯಲಹಂಕ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಸಹಾಯ ಕೇಂದ್ರ ತೆರೆದಿದೆ.

  • INDIA24, Feb 2019, 8:31 AM IST

    ಏರ್ ಶೋ : 71 ಮಂದಿ ಅಸ್ವಸ್ಥ

    ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ‘ಏರೋ ಇಂಡಿಯಾ’ ವೈಮಾನಿಕ ಪ್ರದರ್ಶನಕ್ಕೆ ಸಾವಿರಾರು ಜನರು ಹರಿದು ಬಂದಿದ್ದು, ಈ ವೇಳೆ ತೀವ್ರ ಬಿಸಿಲು ಹಾಗೂ ದಣಿವಿನಿಂದಾಗಿ 71ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದರು.

  • Fire

    state24, Feb 2019, 8:19 AM IST

    ಯಾವುದೇ ಪಾರ್ಕಿಂಗ್ ಸ್ಥಳಗಳಲ್ಲಿ ಇಲ್ಲ ಅಗ್ನಿ ದುರಂತ ತಡೆ ವ್ಯವಸ್ಥೆ!

    ಪಾರ್ಕಿಂಗ್ ಸ್ಥಳಗಳಲ್ಲಿ ಇಲ್ಲ ಅಗ್ನಿ ದುರಂತ ತಡೆ ವ್ಯವಸ್ಥೆ| ನಗರದ ಎಲ್ಲಾದರೂ ಸಂಭವಿಸಬಹುದು ಇಂಥ ದುರಂತ

  • Santro car

    NEWS24, Feb 2019, 8:05 AM IST

    ಬೆಂಕಿ ದುರಂತ: ನೀಲಿ ಸ್ಯಾಂಟ್ರೋ ಕಾರಲ್ಲಿ ಬಂದವರು ಬೆಂಕಿ ಹಚ್ಚಿದರಾ?

    ಯುವಕರು ಎಸೆದ ಸಿಗರೆಟ್‌ ತುಂಡಿನಿಂದ ದುರಂತ?| ನೀಲಿ ಸ್ಯಾಂಟ್ರೋ ಕಾರಲ್ಲಿ ಬಂದಿದ್ದರು ಈ ಯುವಕರು| ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಪರಾರಿ: ಪ್ರತ್ಯಕ್ಷದರ್ಶಿ ಗೃಹಿಣಿ| ಪೊಲೀಸರು ಬೆನ್ನತ್ತಿದರೂ ಯುವಕರು ಮಾತ್ರ ಕೈಗೆ ಸಿಗಲಿಲ್ಲ|

  • Bengaluru-Urban23, Feb 2019, 8:46 PM IST

    ಯಾವುದೇ ಭಯ ಬೇಡ, ಭಾನುವಾರವೂ ಏರ್ ಶೋ ಇದೆ, ಬನ್ನಿ ಕಣ್ತುಂಬಿಕೊಳ್ಳಿ

    ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ಏರ್​ ಶೋ ನಾಳೆಯೂ ಎಂದಿನಂತೆ ನಡೆಯಲಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

  • bengalore fire

    INDIA23, Feb 2019, 3:35 PM IST

    ಏರ್ ಶೋ ವೇಳೆ ಭಾರಿ ಅಗ್ನಿ ಅವಘಡ : ಕಾರಣವೇನು..?

    ಬೆಂಗಳೂರಿನಲ್ಲಿ ನಡೆಯುತ್ತಿರುವ ಏರೋ ಇಂಡಿಯಾ ಶೋ ನಲ್ಲಿ ಭಾರೀ ಅಗ್ನಿ ಅವಘಢ ಸಂಭವಿಸಿದ್ದು, ಈ ಅವಘಡಕ್ಕೆ ಕಾರಣ ಅಲ್ಲಿರುವ ಒಣಗಿದ ಹುಲ್ಲಾಗಿರಬಹುದೆಂದು ಶಂಕಿಸಲಾಗಿದೆ. 

  • Fire

    INDIA23, Feb 2019, 1:10 PM IST

    ಏರ್ ಶೋ ನಲ್ಲಿ ಮತ್ತೊಂದು ಆಘಾತ : ಭಾರಿ ಬೆಂಕಿ ಅವಘಡ

    • ಯಲಹಂಕದಲ್ಲಿ ನಡೆಯುತ್ತಿರುವ ಏರ್ ಶೊ
    • ಭಾರೀ ಅಗ್ನಿ ಅವಘಡದಲ್ಲಿ ಕಾರುಗಳು ಭಸ್ಮ
    • ಫೆ.19ರಂದು ತಾಲೀಮಿನ ವೇಳೆಯೂ ಯುದ್ಧ ವಿಮಾನ ಡಿಕ್ಕಿಯಾಗಿ ಪೈಲಟ್ ಸಾವು
  • ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿರುವ ರೆಫೇಲ್-7 ಜಿಎಸ್ ಯುದ್ಧ ವಿಮಾನ ಯಲಹಂಕ ವಾಯುನೆಲೆಗೆ ಬಂದಿಳಿದಿದ್ದು ನಾಲ್ಕು ರಫೇಲ್ ವಿಮಾನಗಳು ಫ್ರಾನ್ಸ್‌ನಿಂದ ಯಲಹಂಕ ವಾಯು ನಲೆಗೆ ಆಗಮಿಸಿವೆ. ಮೂರು ವಿಮಾನಗಳು ತಾಲೀಮು ಪ್ರದರ್ಶನ ನಡೆಸಿದವು. ಒಂದು ವಿಮಾನ ಸಾರ್ವಜನಿಕರ ವೀಕ್ಷಣೆಗೆ ಅನುವು ಮಾಡಿಕೊಡಲಾಗಿತ್ತು.

    INDIA23, Feb 2019, 9:13 AM IST

    ಏರ್ ಶೋಗೆ ತೆರಳುತ್ತಿದ್ದೀರಾ ಹಾಗಾದ್ರೆ ಇಲ್ಲೊಮ್ಮೆ ಗಮನಿಸಿ

    ಲೋಹದ ಹಕ್ಕಿಗಳ ಚಮತ್ಕಾರ, ವಸ್ತು ಪ್ರದರ್ಶನಗಳ ವೀಕ್ಷಣೆಗೆ ಸಾರ್ವಜನಿಕರಿಗೆ ಫೆ23 ಪ್ರವೇಶಾವಕಾಶ ಲಭ್ಯವಾಗಲಿದೆ. ನೀವಿಲ್ಲಿಗೆ ತೆರಳುವುದಾದರೆ ಇಲ್ಲಿದೆ ಹೆಚ್ಚಿನ ಮಾಹಿತಿ. 

  • ವೈಮಾನಿಕ ಪ್ರದರ್ಶನದಲ್ಲಿ ಅತ್ಯಂತ ಹೆಚ್ಚು ಆಕರ್ಷಕವಾದ ಸೂರ್ಯ ಕಿರಣ ತಂಡದ ಸುಮಾರು ಒಂಬತ್ತು ವಿಮಾನಗಳು ವಜ್ರಾಕಾರದಲ್ಲಿ ಹಾರಾಡುತ್ತ, ಬಣ್ಣ ಬಣ್ಣದ ಹೊಗೆಯನ್ನು ಹೊರಸೂಸುವ ಮೂಲಕ ಆಕಾಶದಲ್ಲಿ ರಂಗೋಲಿ ಬಿಡಿಸಿದವು. ಅಲ್ಲದೆ, ಅರ್ಧ ಗಂಟೆವರೆಗೆ ತಾಲೀಮು ನಡೆಸಿದ ಪೈಲಟ್‌ಗಳು, ವಾಯು ನೆಲೆ ಸುತ್ತಮುತ್ತಲ ಜನರಿಗೆ ಮನರಂಜನೆ ನೀಡಿದರು.

    INDIA23, Feb 2019, 8:52 AM IST

    ಏರ್ ಶೋ ನಲ್ಲಿ ಇವುಗಳನ್ನು ಮಿಸ್ ಮಾಡಿಕೊಳ್ಳಬೇಡಿ

    ‘ಏರೋ ಇಂಡಿಯಾ’ ಪ್ರದರ್ಶನದಲ್ಲಿ ಲೋಹದ ಹಕ್ಕಿಗಳ ಚಮತ್ಕಾರ, ವಸ್ತು ಪ್ರದರ್ಶನಗಳ ವೀಕ್ಷಣೆಗೆ ಸಾರ್ವಜನಿಕರಿಗೆ ಫೆ.23 ರಿಂದ ಪ್ರವೇಶಾವಕಾಶ ಲಭ್ಯವಾಗಲಿದೆ. ಏರ್ ಶೋ ಗೆ ತೆರಳಿದ ಮೇಲೆ ಇಲ್ಲಿನ ಅವಕಾಶಗಳನ್ನು ಮಿಸ್ ಮಾಡಿಕೊಳ್ಳದಿರಿ. 

  • Dakota

    INDIA20, Feb 2019, 10:06 AM IST

    ಏರ್ ಶೋನಲ್ಲಿ ಹಾರಲಿದೆ 70 ವರ್ಷ ಹಳೆಯ ಡಕೋಟಾ ಯುದ್ಧ ವಿಮಾನ!

    ಸ್ವತಂತ್ರ ಭಾರತದ ಮೊದಲ ಯುದ್ಧ ಗೆಲ್ಲಿಸಿದ ಹಾಗೂ ಜಮ್ಮು-ಕಾಶ್ಮೀರದ ಪ್ರಮುಖ ಭಾಗ ಭಾರತದ ಭೂಪಟದಲ್ಲೇ ಉಳಿಯುವಂತೆ ಮಾಡಿದ ಮತ್ತು ಮೊದಲ ಗೆಲುವಿನಿಂದ ಇಡೀ ದೇಶಕ್ಕೆ ರೋಮಾಂಚನ ಉಂಟುಮಾಡಿದ್ದ ಗತಕಾಲದ ಹೀರೋ ‘ಡಕೋಟಾ ಡಿ.ಸಿ.3’ ವಿಮಾನ ಏರ್‌ಶೋದ ಮೊದಲ ದಿನವೇ ಹಾರಾಟ ನಡೆಸಲಿದೆ. 

  • Air Show

    INDIA20, Feb 2019, 7:32 AM IST

    ಏರ್‌ ಶೋ : ಲೋಹದ ಹಕ್ಕಿಗಳ ಸಾಹಸಕ್ಕೆ ಬೆಂಗಳೂರು ಸಜ್ಜು

    ಯಲಹಂಕ ವಾಯುನೆಲೆಯ ಬಾನಂಗಳದಲ್ಲಿ ಫೆ.20 ಬುಧವಾರದಿಂದ ಲೋಹದ ಹಕ್ಕಿಗಳ ಕಲರವ ಶುರುವಾಗಲಿದೆ. ಆಗಸದಲ್ಲಿ ವರ್ಣರಂಜಿತ ಚಿತ್ತಾರ ಮೆರೆಯುವ ಹಾಗೂ ಸೈನಿಕರ ಸಾಹಸ ಹಾಗೂ ದೇಶದ ರಕ್ಷಣಾ ಸಾಮರ್ಥ್ಯವನ್ನು ಜಗತ್ತಿನೆದುರು ಅನಾವರಣಗೊಳ್ಳಲಿದೆ. 

  • air crash

    INDIA20, Feb 2019, 7:22 AM IST

    ಏರ್ ಶೋ : ನೆಲಕ್ಕೆ ಬಿದ್ದ ಪೈಲಟ್ ನೆರವಿಗೆ ಧಾವಿಸಿದ ವಿದ್ಯಾರ್ಥಿಗಳು

    ಸೂರ್ಯ ಕಿರಣ್‌ ವಿಮಾನ ದುರಂತಕ್ಕೆ ಸಿಲುಕಿ ಪ್ಯಾರಾ​ಚೂ​ಟ್‌​ನಿಂದ ವಿಮಾ​ನ​ದಿಂದ ಹೊರ ಚಿಮ್ಮಿ ಯಲ​ಹಂಕದ ಇಸ್ರೋ ಲೇಔ​ಟ್‌ನ ಹೊಲ​ವೊಂದ​ರಲ್ಲಿ ಗಾಯ​ಗೊಂಡು ಬಿದ್ದಿದ್ದ ವಿಂಗ್‌ ಕಮಾಂಡರ್‌ ವಿ.ಟಿ.ಶೆಲ್ಕೆ ಅವರನ್ನು ಕನ್ನ​ಡದ ಐವರು ಹುಡು​ಗರು ಸಂತೈ​ಸಿದ ರೀತಿ ಕನ್ನ​ಡಿ​ಗರ ನಿಜ ಮನೋ​ಗುಣ​ವನ್ನು ಜಗ​ತ್ತಿನ ಮುಂದೆ ತೆರೆ​ದಿ​ಟ್ಟಿದೆ.